ಈ 20 ವಿಷಯಗಳು ಗೊತ್ತಾದಾಗ ನಿಮಗೆ ಹುಲಿ ತುಂಬಾನೇ ಹತ್ತಿರ ಆಗುತ್ತೆ (ಹೆದುರ್ಕೋಬೇಡಿ, ಕಚ್ಚಲ್ಲ)

ಹಬ್ಬಿದಾ ಮಲೆ ಮಧ್ಯದೊಳಗಿನ ಅರ್ಬುದ ಇವನೇನೆ

ವಿಶ್ವದ ಹುಲಿಗಳ ಪೈಕಿ ಶೇ 70 ರಷ್ಟು ನಮ್ಮ ದೇಶದಲ್ಲಿ ಇದೆ. ವಿಶೇಷ ಏನಂದ್ರೆ ಅತಿ ಹೆಚ್ಚು ಹುಲಿಗಳಿರೋ ರಾಜ್ಯ ಕರ್ನಾಟಕ. 2016 ಸೆನ್ಸಸ್ ಪ್ರಕಾರ ಪ್ರಪಂಚದಲ್ಲಿ 3890 ಹುಲಿ ಇದೆ. ಮತ್ತೆ ನಮ್ ದೇಶದಲ್ಲೇ 2000 ಹುಲಿ ಇದೆ. ಅದ್ರಲ್ಲೂ ಕರ್ನಾಟಕ, ತಮಿಳುನಾಡಿ, ಕೇರಳ ಗೋವಾದಲ್ಲಿ ಸಿಕ್ಕಾಪಟ್ಟೆ ಹುಲಿ ಇದೆ. ನಮ್ ಪೋಸ್ಟ್ ಡಿಪಾರ್ಟೆಮೆಂಟು 1963ಲೇ ಹುಲಿ ಇರೋ ಸ್ಟ್ಯಾಂಪ್ ಬಿಟ್ಟಿತ್ತಂತೆ. ನಮ್ಮ ರಾಷ್ಟೀಯ ಪ್ರಾಣಿ ಹುಲಿ ಬಗ್ಗೆ ಕೆಳಗೆ ಕೊಟ್ಟಿರೋದನ್ನ ಓದಿದ್ರೆ ನಿಮ್ಮ ಕೂತೂಹಲ ಮತ್ತಷ್ಟು ಹೆಚ್ಚೋದ್ರಲ್ಲಿ ಸಂಶಯಾನೇ ಇಲ್ಲ ಬಿಡಿ.

1. ಹುಲಿಗೆ ರಾತ್ರಿ ಹೊತ್ತು ಮನುಷ್ಯಂಗಿಂತ 6 ಪಟ್ಟು ಹೆಚ್ಚು ಕಣ್ಣಿನ ಶಕ್ತಿ ಇರತ್ತೆ

ಬಂಗಾಲ ಹುಲಿ ಕಣ್ಣು ಹಳದೀ ಇದೆ. ಬಿಳೀ ಹುಲಿ ಕಣ್ಣು ನೀಲಿ ಬಣ್ಣ ಇರತ್ತೆ.

2. ಮರ ಕೆರೆದು, ಸುತ್ತ ಉಚ್ಚೆ ಹೊಯ್ದು ಏರಿಯಾ ಮಾರ್ಕ್ ಮಾಡಿಕೊಳತ್ತೆ. ಇದರ ಉಚ್ಚೆ ಸ್ಟ್ರಾಂಗ್ ಪಾಪ್ ಕಾರ್ನ್ ವಾಸನೆ ಇರೋದ್ರಿಂದ ಅದರ ಜಾಗದ ಹತ್ರ ಬೇರೆ ಪ್ರಾಣಿ ಸುಳಿಯಲ್ಲ
3.ಸುಮ್ ಸುಮ್ನೆ ಬೇರೆ ಪ್ರಾಣಿ ಮೇಲೆ ಘರ್ಜನೆ ಮಾಡಲ್ಲ. ಬೇರೆ ಹುಲೀನ ಮಾತಾಡ್ಸಕ್ಕೆ ಮಾತ್ರ ಘರ್ಜನೆ ಮಾಡತ್ತೆ
4. ಹಣೆ ಮೇಲಿನ ಪಟ್ಟೆ ಚೈನಾ ರಾಜರು ಇಟ್ಕೊತ್ತಿದ್ದ ಕಿರೀಟ ಚಿನ್ಹೆ ತರಾನೇ ಇದೆ

ಮನುಷ್ಯನ ಹೆಬ್ಬೆಟ್ಟಿನ ಗುರುತು ಇದ್ದಂಗೆ ಒಂದೊಂದ್ ಹುಲಿಗೆ ಒಂದೊಂದ್ ತರ ಪಟ್ಟೆ ಇರತ್ತೆ.

5. ಹುಲಿಗಳ ಮೈಮೇಲೆ ಇರೋ ಪಟ್ಟೆ ಅದರ ಚರ್ಮ ಶೇವ್ ಮಾಡಿದ ಮೇಲೂ ಇರತ್ತೆ
6. ಹುಲಿ ಸಕತ್ತಾಗಿ ಈಜತ್ತೆ

ಹುಲಿ ಮರಿಗಂತೂ ನೀರು ಅಂದ್ರೆ ಪ್ರಾಣ. ದೊಡ್ಡ ಹುಲಿಗಳೂ ಬೇಟೆ ಆಡಕ್ಕೆ ಸಿಕ್ಕಾಪಟ್ಟೆ ದೂರ ಈಜತ್ವೆ. ಒಂದಂತೂ 30 ಕಿ.ಮೀ ಈಜಿತ್ತಂತೆ.

7. ಭಾರತದಲ್ಲಿ ಬಂಗಾಲದ ಗಂಡು ಹುಲಿ 110-120 ಇಂಚು, ಹೆಣ್ಣು ಹುಲಿ 94 - 104 ಇಂಚು ಉದ್ದ ಇರತ್ತೆ

ಪ್ರಪಂಚದ ದೊಡ್ದ ಹುಲಿ ಸೈಬೀರಿಯಾ ಹುಲಿ. 3.5 ಮೀಟರ್ ಉದ್ದ ಇದ್ದು 300 ಕೆ.ಜಿ ಇರತ್ತೆ. ಪ್ರಪಂಚದ ಚಿಕ್ಕ ಹುಲಿ ಸುಮಾತ್ರಾಹುಲಿ. 2 ಮೀಟರ್ ಉದ್ದ ಮತ್ತೆ 100 ಕೆ.ಜಿ ಇರತ್ತೆ.

8. ವರ್ಷದಲ್ಲಿ ನಾಕೋ ಐದೋ ದಿನ ಮಾತ್ರ ಹೆಣ್ಣು ಹುಲಿ ಬಸುರಿ ಆಗೋದು

ಬರೀ 3-4 ತಿಂಗಳು ಬೇಕು ಹೆರಕ್ಕೆ. ಒಂದ್ಸಲಕ್ಕೆ ಎರಡೂ, ಮೂರು ಮರಿಗಳನ್ನ ಹಾಕತ್ವೆ.

9. ಹುಲಿಮರಿ ಹುಟ್ಟಿದ್ ತಕ್ಷಣ ಒಂದು ವಾರದ ತನಕ ಕಣ್ಣು ಕಾಣ್ಸಲ್ಲ.
10. ಹುಲಿ ರಾತ್ರಿ ಹೊತ್ತೇ ಜಾಸ್ತಿ ಬೇಟೆ ಆಡೋದು. ಯಾಕಂದ್ರೆ ಮನುಷ್ಯರಿಗೆ ಅಷ್ಟೊತ್ತಲ್ಲಿ ಚೆನ್ನಾಗಿ ಕಾಣಲ್ಲ.

ನಮ್ಮಲ್ಲಿ ಕಾಡ್ ಕಡೆ ಹೋಗೋವಾಗ ಜನ ತಲೆ ಹಿಂದೆ ಏನಾದ್ರೂ ಮಾಸ್ಕ್ ಹಾಕೊಂಡು ಹೋಗ್ತಾರೆ. ಹುಲಿ ಹಾರಿದ್ರೆ, ಅದನ್ನ ಹಿಡ್ಕೊಳ್ಲಿ ಅಂತ. ಹುಲಿ ಗುಟ್ಟಾಗಿ ಮೈಮೇಲೆ ಬಿದ್ದು ಅಟ್ಯಾಕ್ ಮಾಡತ್ತೆ.

11. ಖುಷಿ ಆದಾಗ ಹುಲಿಗೆ ಬೆಕ್ಕಿನ ತರ ಗುರುಗುಟ್ಟಕ್ಕೆ ಬರಲ್ಲ ಕಣ್ಣು ಚಿಕ್ಕದು ದೊಡ್ದದು ಮಾಡತ್ತೆ
12. ಎಷ್ಟೇ ಹತ್ರ ಹಾರ್ಬೇಕು ಅಂದ್ರೂ ಗಂಟೆಗೆ 60 ಕಿ.ಮಿ ಸ್ಪೀಡ್ನಲ್ಲಿ ಹಾರತ್ತೆ

ಹುಲಿ 6 m ದೂರ 5 m ಎತ್ತರದಲ್ಲಿ ಹಾರತ್ತೆ. ಅವುಗಳ ಕಾಲು ಎಷ್ಟು ಗಟ್ಟಿ ಇವೆ ಅಂದ್ರೆ, ಸತ್ರೂ ಬೀಳದೆ ನಿಂತಿರತ್ವೆ.

13. ಹುಲಿ ಸಿಂಹದ ಜೊತೆ ಕೂಡಿ ಹುಟ್ಟೋ ಮರಿಗೆ ಲೈಗರ್ ಅಂತ ಹೆಸರು

ಗಂಡು ಸಿಂಹ ಹೆಣ್ಣು ಹುಲಿ ಸೇರಿದ್ರೆ ದೊಡ್ಡ ಗಾತ್ರದ ಮರಿಗಳು ಹುಟ್ಟತ್ತೆ. ಆದ್ರೆ ಹೆಣ್ಣು ಸಿಂಹ ಗಂಡು ಹುಲಿ ಜೊತೆ ಸೇರಿದ್ರೆ ಮರಿಗಳು ಸಣ್ಣದಾಗಿರತ್ವೆ. ಇದಕ್ಕೆ ಸಿಂಹಗಳ ಜೀನ್ಸ್ ಕಾರಣ. ಲೈಗರ್ 4 ಮೀಟರ್ ಉದ್ದ ಇರತ್ತೆ. ಇವು ಬೆಕ್ಕಿನ ವಂಶದ ಅತೀ ದೊಡ್ಡ ಪ್ರಾಣಿಗಳು.

14. ತುಂಬಾ ದಿನ ಉಪ್ವಾಸ ಮಾಡಕ್ಕಾದ್ರೂ, ಬೇರೆ ಪ್ರಾಣಿಗಿಂತ ತುಂಬಾ ದೊಡ್ಡದಾಗಿರೋದ್ರಿಂದ ಹುಲಿ ಬೇಗ ಸುಸ್ತಾಗತ್ತೆ..

ಹುಲಿ ದೊಡ್ಡ ಪ್ರಾಣೀನ ಬೇಟೆ ಆಡಿ ಒಂದು 30 ಕೆ.ಜಿ ಮಾಂಸ ತಿಂದಿತ್ತು ಅಂದ್ರೆ ಅದು ಅರಗೋ ತನಕ ಉಪವಾಸ ಇರತ್ತೆ. ಆದ್ರೆ ನಂತರ 2-3 ವಾರದ ಒಳಗೆ ಏನಾದ್ರೂ ತಿನ್ನಕ್ಕೆ ಸಿಗಲಿಲ್ಲ ಅಂದ್ರೆ ಸತ್ತು ಹೋಗತ್ತೆ.ಇದಕ್ಕೆ ಹೋಲಿಸಿದ್ರೆ ಮನುಷ್ಯರು ಉಪವಾಸ ಮಾಡಿದ್ರೆ 30 – 40 ದಿನ ಬದುಕ್ತಾರೆ.

15. ಕರಡಿ, ಹುಲಿ ಸಾಮಾನ್ಯವಾಗಿ ಒಂದೇ ಕಾಡಲ್ಲಿ ಇರೋದ್ರಿಂದ, ಕರಡಿ ಹುಲಿಗೆ ತುಂಬಾ ಇಷ್ಟ

ಒಂದೊಂದ್ಸಲ ಕರಡಿ ಅಟಾಕ್ ಮಾಡೋ ಪ್ರಾಣಿಗಳ ಸದ್ದು ಮಾಡಿ ಕರಡಿ ಹತ್ತಿರ ಬರೋ ಹಾಗೆ ಮಾಡಾತ್ತೆ. ಸಾಮಾನ್ಯವಾಗಿ 10 cm ಕೋರೆಹಲ್ಲಿಂದ ಬಗೆದು ತಿನ್ನೋ ಹುಲಿಗಳು, ಒಂದೊಂದ್ಸಲ ಮುಂಗೈ ಬಳಸಿ ಹೊಡೆಯತ್ತೆ. ಒಂದೇ ಹೊಡೆತಕ್ಕೆ ಕರಡಿ ಬುರುಡೇನೆ ಒಡೆದು ಹೋಗತ್ತೆ.

16. ಹುಲಿಗೆ ತನ್ನ ಎಂಜಲ್ನಲ್ಲೇ ಆಂಟಿಸೆಪ್ಟಿಕ್ ಔಷಧಿ ಇರತ್ತೆ. ಗಾಯ ಆದ್ರೆ ನೆಕ್ಕೊಂಡು ವಾಸಿ ಮಾಡ್ಕೊಳತ್ತೆ
17. ಹುಲಿ ನಾಲಗೆ ಮೇಲೆ ಗಟ್ಟಿ ಬ್ರಶ್ ತರ ಸಾಕಷ್ಟು ಗಟ್ಟಿ ಕೂದಲು ಇದೆ. ಅದ್ರಿಂದ ಮೈಯೆಲ್ಲಾ ನೆಕ್ಕೊಂಡು ಬಾಚ್ಕೊಳತ್ತೆ
18. ಹುಲಿ ನಾಲಿಗೆ ಹಿಂಭಾಗದಿಂದ ನೀರು ಕುಡ್ಯತ್ತೆ. ನಮ್ ತರ ನಾಲಿಗೆ ಮುಂದೆ ಮಾಡ್ಕೊಂಡಲ್ಲ

ಯಾಕಂದ್ರೆ ಅದರ ನಾಲಿಗೆ ಮೇಲೆಲ್ಲಾ ಗಟ್ಟಿ ಕೂದ್ಲು ತರ ಇರೋದ್ರಿಂದ ನೀರನ್ನ ತುಂಬಿಟ್ಕೊಳ್ಳಕ್ಕೆ ಆಗಲ್ಲ. ಹಿಂಭಾಗದಿಂದ ನೀರಿನ ಹನಿಗಳನ್ನ ಹಾರಿಸಿಕೊಂದು ಬಾಯಿಗೆ ಹಾಕಿಕೊಳ್ಲತ್ತೆ.

19. ಹಿಮಕರಡಿ ಬಿಟ್ಟ್ರೆ ಹುಲಿ ಮಿದುಳು ಮಾಂಸಾಹಾರಿ ಪ್ರಾಣಿಗಳ ಪೈಕಿ ದೊಡ್ಡದು - 300 ಗ್ರಾಮ್ ಇರತ್ತೆ.

ಚಿಂಪಾಂಜಿ ಮಿದುಳಷ್ಟೇ ದೊಡ್ಡದಂತೆ. 

20. ಬೋನಲ್ಲಿ ಇಟ್ಟಿದ್ರೂ, ಕಾಡಲ್ಲೇ ಇದ್ರೂ, ಹುಲಿ ಆಯುಷ್ಯ 25 ವರ್ಷ ಅಷ್ಟೇ

ದಿನಾ ದಿನಾ ಒಂದೊಂದೇ ಹುಲಿ ಭೂಮಿಯಿಂದ ಮಾಯ ಆಗ್ತಾ ಇದೆ. ಇದನ್ನ ಉಳಿಸೋದು, ಬೆಳೆಸೋದು ನಮ್ಮದೇ ಜವಾಬ್ದಾರಿ!!! ಅಲ್ವಾ?? ಏನಂತೀರಾ?!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಫೇಸ್ಬುಕ್ ಚರ್ಚೆ:

ಜನರ ನಡವಳಿಕೆ ಬಗ್ಗೆ ಈ 13 ಸತ್ಯಗಳು ಗೊತ್ತಾದಾಗ ನಿಮಗೆ ಪ್ರಪಂಚ ಇನ್ನಷ್ಟು ಚೆನ್ನಾಗಿ ಅರ್ಥ ಆಗುತ್ತೆ

ದುಡ್ಡಿರೋರ್ನ ಜನ ಬುದ್ಧಿವಂತ್ರು ಅನ್ಕೋತಾರೆ

ಮನುಷ್ಯನ ದೇಹ ಒಂದು ಅದ್ಭುತವಾದ ಸೃಷ್ಟಿ. ಒಂದು ಕಡೆಗೆ ಬೇರೆ ಬೇರೆ ಕೆಲಸಗಳ್ನ ಮಾಡ್ಕೊಂಡ್ ಹೋಗೋ ಅಂಗಾಂಗಗಳಾದರೆ ಇನ್ನೊಂದು ಕಡೆ ಇಡೀ ಬ್ರಹ್ಮಾಂಡವನ್ನೇ ಅರ್ಥ ಮಾಡಿಕೊಳ್ಳುವಂಥ ಮನಸ್ಸು! ದೇಹ ಮತ್ತು ಮನಸ್ಸು ಎರಡೂ ಒಗ್ಗೂಡೇನೇ‌ ಮನುಷ್ಯ ತನ್ನದೇ ಆದ ರೀತಿಯಲ್ಲಿ ನಡ್ಕೊಳೋಡು. ಒಬ್ಬೊಬ್ಬ ಮನುಷ್ಯಾನೂ ಬೇರೆಬೇರೇನೇ, ಆದರೆ ಎಲ್ಲರಿಗೂ ಅನ್ವಯಿಸುವಂಥ ಕೆಲವು ಆಶ್ಚರ್ಯಕರವಾದ ಸತ್ಯಗಳಿವೆ. ಕೆಳಗೆ ಅಂಥವು ಕೆಲವು ಕೊಟ್ಟಿದೀವಿ, ಓದ್ತಾ ಹೋಗಿ…

1. ಆತ್ಮಗೌರವ ಕಡಿಮೆ ಇರೋರು ಬೇರೆಯೋರ್ನ ಕಡೆಗಣಿಸಿ ಮಾತಾಡೋದು, ಕೀಳಾಗಿ ಬಿಂಬಿಸೋದು, ಎಲ್ಲಾ ಜಾಸ್ತಿ.

ಯಾಕಂದ್ರೆ ಅವರಿಗೆ ತಮ್ಮೊಳಗೆ ತಾವೇ 'ಮೇಲೆ' ಕಾಣಿಸಲ್ಲ. ಬೇರೆಯೋರ್ನ ಕೆಳಗೆ ಮಾಡಿಕೊಂಡಾಗಲೇ ಕಾಣಿಸೋದು.

2. ಯಾರಾದರೂ ನೋಡ್ತಾ ಇದಾರೆ ಅಂದಾಗ ಜನರ ನಡತೆ ಇನ್ನಷ್ಟು ಚೆನ್ನಾಗಿರುತ್ತೆ.

ಯಾರೂ ಇಲ್ಲದಿರುವಾಗ ನಡ್ಕೊಳೋ ರೀತೀನೇ ಬೇರೆ. ನನಗೆ ಬೇಕಾದ್ದು ಮಾಡ್ತೀನಿ ಅನ್ನೋ‌ ಮನೋಭಾವ ಇರುತ್ತೆ. ಇದು ಕೆಟ್ಟದೆನಲ್ಲ, ಆದರೆ ಒಳಗೊಂದು ಹೊರಗೊಂದು ಅನ್ನೋದು ಮಿತಿಮೀರಿ ಬೆಳೆದರೆ ತೊಂದರೆ, ಅಷ್ಟೆ.

3. ನೋಡಕ್ಕೆ ಚೆನ್ನಾಗಿರೋರ್ನ ಮತ್ತೆ ತುಂಬಾ ಸಾಧು ಮನುಷ್ಯನ ತರಹ ಕಾಣಿಸೋರ್ನ ಜನ ಬೇಗ ನಂಬಿ ಬಿಡ್ತಾರೆ.

'ಗೋಮುಖವ್ಯಾಘ್ರ' ಅಂತ ಹೇಳ್ತಾರಲ್ಲ, ಹಂಗೆ ಇದು. ಸೌಂದರ್ಯ ಮತ್ತೆ ವಿನಯ ಹೊರಗೆ ಕಂಡರೆ ಸಾಕು, ಜನ ಹತ್ತಿರ ಬರ್ತಾರೆ. ಕೆಲವರು ಇದನ್ನ ಇನ್ನೊಂದು ರೀತಿಲಿ ಬಳಸಿಕೊಳ್ತಾರೆ, ಅಷ್ಟೇ.

4. ಜನ ತುಂಬ ಕ್ಲಿಷ್ಟವಾದ ತೀರ್ಮಾನಗಳ್ನ ತೊಗೊಳಕ್ಕೆ ಹೋಗಲ್ಲ; ಅದರ ಬದಲು ಇರೋದು ಇದ್ದಂಗೇ ಇರಲಿ ಅಂತ ಸುಮ್ಮನೆ ಇದ್ದುಬಿಡ್ತಾರೆ.

ಏನ್ ತೀರ್ಮಾನ ತೊಗೋತಿದೀನಿ ಅನ್ನೋದು ತುಂಬ ಸುಲಭವಾಗಿ ಅರ್ಥ ಆಗಬೇಕು. ಇಲ್ಲಾಂದ್ರೆ ತಲೆ ಕೆಡುಸ್ಕೊಳಲ್ಲ ಜನ. ಇದು ರಾಜಕಾರಣಿಗಳಿಗೆ ತುಂಬ ಚೆನ್ನಾಗಿ ಗೊತ್ತಿರೋ ವಿಷಯ!

5. ಯಾರಾದರೂ ತುಂಬ ಕೋಪ ಮಾಡ್ಕೋತಿದ್ರೆ ಅವರ ತರಹ ನಾವೂ ಆಗಬೇಕು, ಅವರ ಸ್ಥಾನಕ್ಕೆ ನಾವೂ ಏರಬೇಕು ಅನ್ಕೋತಾರೆ ಜನ

ಅದೇನೋ ಕೋಪಕ್ಕೆ ಈ ಸ್ಥಾನಮಾನ ಇದೆಯಪ್ಪ. ತುಂಬಾ ಬುದ್ಧಿವಂತರು ಮತ್ತೆ ತುಂಬಾ ಒಳ್ಳೇ ಮನಸ್ಸಿರೋರೆ ಕೋಪ ಮಾಡ್ಕೊಳೋದು ಅಂತ ಜನ ಅನ್ಕೋತಾರೆ. ಮೇಲ್ಮೇಲಕ್ಕೆ ಇದನ್ನ ತೋರಿಸಿಕೊಳ್ಳದೆ ಇರಬಹುದು, ಆದರೆ ಒಳಗೊಳಗೇ ನಾನು ಅವರ ಸ್ಥಾನಕ್ಕೆ ಎರಬೇಕು ಅನ್ಕೋತಾರೆ.

6. ಏನಾದರೂ ಸಿಕ್ಕಾಗ ಆಗೋ ಸಂತೋಷದ ತೂಕ ಒಂದಾದರೆ ಅದನ್ನ ಕಳ್ಕೊಂಡಾಗ ಆಗೋ ದುಃಖದ ತೂಕ ಎರಡು.

ಮೊಬೈಲ್ ಕೊಂಡುಕೊಂಡಾಗ ಆಗುವ ಸುಖ ಹೆಚ್ಚೋ ಅದು ಕಳೆದು ಹೋದಾಗ ಆಗುವ ದುಃಖ ಹೆಚ್ಚೋ?!

7. ಬೊಜ್ಜು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತೆ. ನಿಮ್ಮ ಸುತ್ತ ಮುತ್ತ ಬೊಜ್ಜು ಜಾಸ್ತಿ ಇರೋರೇ ಇದ್ದರೆ ನಿಮಗೂ ಬರೋ ಸಾಧ್ಯತೆ ಇದೆ.

ಇದಕ್ಕೆ ಕಾರಣ ಅಷ್ಟು ಬೊಜ್ಜಿರೋದೇ ನಾರ್ಮಲ್ ಅನ್ಕೊಳೋದು. ಅಲ್ಲದೆ ಅವರು ತಿಂದಿದ್ದೆಲ್ಲ ತಿನ್ನೋದು!

8. ಯಶಸ್ಸು ಮತ್ತೆ ದುಡ್ಡು ಯಾರಿಗಿದೆಯೋ ಅವರನ್ನ ಜನ ಬುದ್ಧಿವಂತರು ಅಂತಾನೂ ಅನ್ಕೋತಾರೆ.

ಇದೊಂದು ದೊಡ್ಡ ವಿಪರ್ಯಾಸ. ನಿಜಕ್ಕೂ ನೋಡಿದರೆ ಸಾಮಾನ್ಯವಾಗಿ ದುಡ್ಡು ಯಶಸ್ಸು ಎಲ್ಲಾ ಇರೋ ಕಡೆ ಬುದ್ಧಿವಂತಿಕೆ ಕಡಿಮೇನೇ ಇರುತ್ತೆ. ದುಡ್ಡು ಮತ್ತೆ ಯಶಸ್ಸಿಗೆ ಬೇಕಾದ ಬುದ್ಧಿವಂತಿಕೆಗೂ ನಿಜವಾದ ಬುದ್ಧಿವಂತಿಕೆಗೂ ವ್ಯತ್ಯಾಸ ಜನರಿಗೆ ಗೊತ್ತಾಗಲ್ಲ.

9. ಸಂತೋಷವಾಗಿರಕ್ಕೆ ತುಂಬಾ ದುಡ್ದಿರಬೇಕಗಿಲ್ಲ. ಅಕ್ಕಪಕ್ಕದ ಮನೆಯೋರ್ಗಿಂತ ಜಾಸ್ತಿ ಇದ್ದರೆ ಸಾಕು.

ಯಾಕಂದ್ರೆ ನಾವು ಯಾವಾಗಲೂ ಬೇರೆಯೋರಿಗೆ ಹೋಲಿಸಿಕೊಳ್ತಾ ಇರ್ತೀವಿ, ಅದಕ್ಕೇ. ಅಂದಹಾಗೆ ಈಗೀಗ ಪಕ್ಕದ ಮನೆಯೋರ ಫೇಸ್ಬುಕ್ಕಲ್ಲಿ ಫ್ರೆಂಡ್ ಆಗಿರೋರೂ ಸೇರಿಕೊಳ್ತಾರೆ!

10. ಸುಳ್ಳು ಹೇಳಕ್ಕೆ ತುಂಬ ಜಾಸ್ತಿ ತಲೆ ಉಪಯೋಗಿಸಬೇಕು. ನಿಜ ಹೇಳಕ್ಕೆ ಅಷ್ಟು ಬೇಕಾಗಿಲ್ಲ.

ಸುಳ್ಳು ಹೇಳುವಾಗ ಮುಂದೆ ಆಗೋ ತೊಂದರೆಗಳಿಗೆಲ್ಲ ಪ್ಲಾನ್ ಮಾಡಿಕೊಂಡು ಹೇಳಬೇಕು. ನಿಜ ಹೇಳೋರಿಗೆ ಈ ತೊಂದರೆಗಳೆಲ್ಲ ಇರಲ್ಲ. ಹೇಳೋದು ಹೇಳಿ ಆಮೇಲೆ ಏನಾಗುತ್ತೋ ನೋಡ್ಕೋತೀನಿ ಅನ್ನೋ ಮನೋಭಾವ ಇರೋದ್ರಿಂದ ಜಾಸ್ತಿ ತಲೆ ಉಪಯೋಗಿಸಬೇಕಾಗಿಲ್ಲ.

11. ನಿಮಗೆ ಇಷ್ಟ ಇರೋರ್ಗೆ SMS / WhatsApp ಸಂದೇಶ ಬರೀಬೇಕಾದ್ರೆ ಕೈ ಬೇಗ ಓಡುತ್ತೆ.

ಯಾಕಂದ್ರೆ ಮನಸ್ಸು ಕೈಗೆ ಹಾಗೆ ಆದೇಶ ಕೊಡುತ್ತೆ! ಆದರೆ ನೆನಪಿರಲಿ, ಇದರಿಂದ ಏನೇನೋ ಟೈಪ್ ಮಾಡಿ ಸಂದೇಶ ಕಳಿಸಿ ಕಷ್ಟಕ್ಕೆ ಸಿಕಾಕೊಳೋ ಸಾಧ್ಯತೆ ಹೆಚ್ಚು!

12. ಆಗಾಗ ಬೇಜಾರು ಅನ್ನೋರು ಸಾಮಾನ್ಯವಾಗಿ ಏನಾದರೂ ಒಳ್ಳೆ ಕೆಲಸ ಮಾಡಕ್ಕೆ ಇಷ್ಟ ಪಡ್ತಾರೆ. ಅವರಿಗೆ ನಿಜಕ್ಕೂ ಮನರಂಜನೆ ಬೇಕಾಗಿರಲ್ಲ.

ಅವರಿಗೆ ಬೇಜಾರು ಆಗೋದೇ ಮನರಂಜನೆ ಅವರಿಗೆ ಬೇಡದೆ ಇರೋದ್ರಿಂದ. ಮನರಂಜನೆಯಿಂದ ಅವರ ಜೀವನ ಇನ್ನಷ್ಟು ಚೆನ್ನಾಗಾಗುತ್ತೆ ಅನ್ನೋ ಅನಿಸಿಕೆ ಅವರಿಗೆ ಇರಲ್ಲ. ಅದರ ಬದಲಾಗಿ ಏನಾದರೂ ಒಳ್ಳೇ ಕೆಲಸ ಮಾಡಿದರೆ ಒಂದಿಷ್ಟು ಸಂತೋಷ ಸಿಗುತ್ತೆ.

13. ತುಂಬ ಬುದ್ಧಿ ಇರೋ ಹುಡುಗೀರ್ಗೆ ಗಂಡು ಸಿಗೋದು ಕಷ್ಟ. ಅವರಿಗೂ ಮದುವೆ ಅಂದ್ರೆ ತುಂಬಾ ಇಷ್ಟ ಇರಲ್ಲ.

ಮದುವೆ ಅನ್ನೋದರ ಬಗ್ಗೆ ತೀರಾ ಜಾಸ್ತಿ ಯೋಚನೆ ಮಾಡೋದು ಏನೂ ಇರಲ್ಲ. ಸ್ವಲ್ಪ ಇರುತ್ತೆ, ಇಲ್ಲವೇ ಇಲ್ಲ ಅಂತಲ್ಲ. ಆದರೆ ಮದುವೆ ಆದ್ಮೇಲೆ ನಿಭಾಯಿಸಿಕೊಂಡು ಹೋಗೋದೇ ಮುಖ್ಯ. ಆದರೆ ತುಂಬ ಬುದ್ಧಿ ಇದ್ದರೆ ಬೇಕಾದ್ದು ಬೇಕಾಗಿಲ್ಲದಿರೋದು ಎಲ್ಲಾ ಯೋಚನೆ ಮಾಡಿಕೊಂಡು ತಲೆ ಕೆಡಿಸಿಕೊಂಡು ಕೂತಿರ್ತಾರೆ. ಬೇಕಾಗಿಲ್ಲದಿರೋದರ ಬಗ್ಗೇನೇ ಜಾಸ್ತಿ ಯೋಚನೆ ಮಾಡ್ತಾರೆ ಅಂದ್ರೂ ತಪ್ಪಲ್ಲ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: