ಮೈಸೂರಲ್ಲಿ ತಯಾರಾಗಿ ಇಡೀ ಪ್ರಪಂಚದಲ್ಲಿ ಮಾರಾಟ ಆಗ್ತಿದ್ದ Yezdi ಬಗ್ಗೆ 11 ಕಂಡು-ಕೇಳಿರದ ವಿಷಯಗಳು

ಬೈಕು ಅಂದ್ರೆ ಇದು ರೀ

ನಾವು ಜೀವನದಲ್ಲಿ ಬೇರೆ ಯಾವುದೇ ಬೈಕು ತಗೋಬೋದು, ಎಷ್ಟೇ ದೊಡ್ಡ ಬೈಕ್ ತಗೋಬೋದು, ಆದ್ರೆ ನಮ್ಮ ಜನಕ್ಕೆ ಆ ಜಾವಾ ಗುಂಗು ಹಿಡಿದಂಗೆ ಬೇರೆ ಯಾವುದೇ ಗುಂಗೂ ಹಿಡಿದಿರಲಾರದು. ಸುಮಾರು 40 ವರ್ಷ 11,25,958 ಬೈಕುಗಳನ್ನ ಮಾರುಕಟ್ಟೆಗೆ ತಂದ ಜಾವಾ, ತನ್ನ ಬೈಕುಗಳನ್ನ ಮೈಸೂರಲ್ಲೇ ತಯಾರು ಮಾಡ್ತಾ ಇದ್ದಿದ್ದು. ಬನ್ನಿ ಅದರ ಬಗ್ಗೆ ಇನ್ನೊಂದಿಷ್ಟು ವಿಷ್ಯ ಹೇಳ್ತೀವಿ...

1. "ಐಡಿಯಲ್ ಜಾವಾ" ಕಂಪನಿಯೋರು 1960ರಲ್ಲಿ Yezdi ಬೈಕುಗಳನ್ನ ಮಾರ್ಕೆಟ್ಟಿಗೆ ಬಿಟ್ರು

ಆಗಿನ್ನೂ ಹೀರೋಹೋಂಡಾ, ಯಮಹ ಬೈಕುಗಳು ಹುಟ್ಟೇ ಇರ್ಲಿಲ್ಲ

2. ಎಂದೆಂದಿಗೂ ಬೆಲೆ ಬಾಳೋ ಬೈಕು (Forever bike forever value) ಅನ್ನೋದು ಇವರ ಘೋಷಣೆ ಆಗಿತ್ತು

ಅದು ಎಷ್ಟು ನಿಜ ಅಂತ ಈಗ ಗೊತ್ತಾಗ್ತಿದೆ

3. ಜಾವಾ ಕಾರ್ಖಾನೆ ಇದ್ದಿದ್ದು ಮೈಸೂರಲ್ಲಿ

1961ರಲ್ಲಿ ಆಗ ಮೈಸೂರಿನ ಗವರ್ನರ್ ಆಗಿದ್ದ ಜಯಚಾಮರಾಜೇಂದ್ರ ಒಡೆಯರ್ ಔರು ಉಧ್ಘಾಟನೆ ಮಾಡಿದ್ರು

4. 1996ರಲ್ಲೇ ಹೊಸ ಜಾವಾ ಬೈಕುಗಳ ತಯಾರಿ ನಿಂತೋಯ್ತು, ಆದ್ರೆ ಈಗ್ಲೂ ಜನ ಆ ಬೈಕಿನ ಹುಚ್ಚು ಬಿಟ್ಟಿಲ್ಲ

Jawa 353/04 'A' Type, Yezdi 250 'B' Type, Jawa 350 type 634 Twin ಮತ್ತೆ Yezdi 250 Monarch ಅನ್ನೋ ಮಾಡಲ್ಲುಗಳು ಈಗ್ಲೂ ದೇಶದಲ್ಲೆಲ್ಲಾ ಓಡಾಡ್ತಿವೆ.

5. ಬೈಕು ಕ್ಲಬ್ಬುಗಳಲ್ಲಿ ಬರೀ ಜಾವಾ ಬೈಕುಗಳದ್ದೇ ವಿಶೇಷ ರ‍್ಯಾಲಿಗಳು ಈಗ್ಲೂ ನಡೆಯುತ್ತೆ
6. ಈ ಕಂಪನಿ ಬಿಟ್ಟಿದ್ದ ಒಳ್ಳೊಳ್ಳೆ ಮಾಡಲ್ಲುಗಳು ಯಾವ್ದು ನೋಡಿ
Jawa 250 Type 353/04 Kyvacka
Yezdi 250 Oilking
Jawa / Yezdi 350 Twin
7. ಇಲ್ಲಿಂದ ಜಾವಾ ಯೆಜ಼್ಡಿ ಬೈಕುಗಳು 61 ದೇಶಗಳಿಗೆ ಎಕ್ಸ್ ಪೋರ್ಟ್ ಆಗ್ತಿತ್ತು

ಟರ್ಕಿ, ಶ್ರೀಲಂಕಾ, ಈಜಿಪ್ಟು ಅಲ್ಲಿಗೆಲ್ಲಾ ಕಳಿಸ್ತಿದ್ರಂತೆ. ಅಷ್ಟೇ ಅಲ್ಲ, ಗಟಮಾಲಾದಲ್ಲಿ ಪೊಲೀಸರಿಗೆ ಅಂತಾನೇ ವಿಶೇಷ ಬೈಕ್ ಮಾಡಿಕೊಟ್ಟಿದ್ರಂತೆ. ವೆನೆಜುವೆಲಾ ದೇಶಕ್ಕೆ Yezdi 250 MT (Mountain Terrain) ಅನ್ನೋ ವಿಶೇಷ ಬೈಕು ರಫ್ತಾಗ್ತಾ ಇತ್ತಂತೆ.

8. ಹೋಂಡಾ, ಯಮಹಾ ಕಂಪನಿಗಳ 4 ಸ್ಟೋಕ್ ಬೈಕುಗಳು ಬಂದಾಗ ಜಾವಾ ಸೋತೋಯ್ತು

ಜಾವಾದೋರು 2 ಸ್ಟೋಕ್ ಬೈಕುಗಳನ್ನೇ ಮಾಡ್ತಿದ್ದಿದ್ದು, ಅದ್ರಲ್ಲಿ ವಾಯುಮಲಿನ್ಯ ಜಾಸ್ತಿ, ಮೈಲೇಜು ಕಮ್ಮಿ. ವಾಯುಮಾಲಿನ್ಯದ ತಡೆಗೆ ಒತ್ತು ಕೊಡೋ ಕಾನೂನುಗಳು ಒಂದು ಕಡೆ ಆದ್ರೆ, ಕಾರ್ಮಿಕರ ಸಮಸ್ಯೆ ಇನ್ನೊಂದು ಕಡೆ. ಎಲ್ಲಾ ಸೇರಿ ಜಾವಾ ಕಂಪನಿ ಮುಚೋ ಗತಿ ಬಂತು.

9. ದೀಪಕ್ ಕಾಮತ್ ಮತ್ತೆ ಬಸವಾರಾಜ್ ಅನ್ನೋರಿಬ್ರು ಇಡೀ ಜಗತ್ತನ್ನೇ ರೋಡ್‍ಕಿಂಗಲ್ಲಿ ಸುತ್ತಿ ಬಂದಿದ್ರು

GPS ಇಲ್ದೇ ಇರೋ ಕಾಲದಲ್ಲಿ 250cc ಬೈಕಲ್ಲಿ ಹೋಗಿದ್ರು ನೋಡಿ ಇವ್ರು!

10. Yezdi ಮೋಡಿಯಿಂದ ಕನ್ನಡಿಗರು ಇಂದಿಗೂ ಹೊರಬಂದಿಲ್ಲ

Yezdi ಮೈಲೇಜು ಕಮ್ಮಿ ಕೊಡ್ತಿತ್ತು ನಿಜ. ಆದ್ರೆ ಲೈಟಾಗಿತ್ತು, ಬೇರೆ 2 ಸ್ಟ್ರೋಕ್ ಬೈಕುಗಳಿಗಿಂತ ಓಡ್ಸಕ್ಕೆ ಮಜವಾಗಿತ್ತು, ಗಟ್ಟುಮುಟ್ಟಾಗಿತ್ತು, ಎರಡು ಸೈಲೆನ್ಸರ್ ಇತ್ತು (ಆ ಲುಕ್ಕು ಬುಲೆಟ್ಟಿಗೂ ಇರಲಿಕ್ಕಿಲ್ಲ)... ಜೊತೆಗೆ ಗಾಡಿಯಿಂದ ಬರ್ತಿದ್ದ ಆ ಡ್ಬ್ರ್ರ್ರ್..... ಸೌಂಡು....ಈಗ ಅದರ ಬಗೆ ಏನೇ ಹೇಳಿದ್ರು ಹಾಳು ಹಂಪೆ ಬಗ್ಗೆ ಮಾತಾಡ್ದಂಗೆ, ಗತವೈಭವ ಅಷ್ಟೇ...

11. ಜುಲೈ ತಿಂಗಳ ಎರಡ್ನೇ ಭಾನುವಾರಾನ "Yezdi Day" ಅಂತ ಆಚರಿಸ್ತಾರೆ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಬರೀ 20,000 ರೂಪಾಯಿಗೆ ಸಿಗೋ ಈ ಹೊಸ ಸೋಲಾರ್ ಹಾಕಿಸಿದರೆ ನಿಮ್ಮ ಕರೆಂಟ್ ಬಿಲ್ ಅರ್ಧ

IIT ಮದ್ರಾಸ್ ಕರಾಮತ್ತು

ದಿನ ಬೆಳಗಾದ್ರೆ, ಈ ನ್ಯೂಸ್ ಪೇಪರ್ಗಳಲ್ಲಿ  ಕೊಲೆ, ಸುಲಿಗೆ, ದರೋಡೆ ಜೊತೆಗೆ ತಪ್ಪದೇ ಬರೋ ಇನ್ನೊಂದು ಸುದ್ದಿ ಅಂದ್ರೆ, ಲೋಡ್ ಶೆಡ್ಡಿಂಗ್ದು. ಇದನ್ನ ಓದಿ ನಾವು ಬೇಜಾರ್ ಮಾಡ್ಕೊಳೋದೂ ಸರ್ವೇಸಾಮಾನ್ಯ ಆಗೋಗ್ಬಿಟ್ಟಿದೆ. ಇದಕ್ಕೆಲ್ಲ ಇತಿಶ್ರೀ ಹಾಡೋ ಅಂತ ಸಮಯ ಬಂದಿದೆ. ಇದು IIT ಮದ್ರಾಸ್ ಸಿಬ್ಬಂದಿ ಕೃಪೆ! ನಾವೇನ್ ಹೇಳ್ತಾ ಇದ್ದೀವಿ ಅಂತ ತಲೆಕೆಡ್ತಾ ಇದ್ಯಾ? ಮುಂದೋದಿ...ನಿಮಗೇ ಗೊತ್ತಾಗತ್ತೆ.

ಎಕನಾಮಿಕ್ ಟೈಮ್ಸ್ ವರದಿ ಮಾಡಿರೋ ಪ್ರಕಾರ IIT ಮದ್ರಾಸಲ್ಲಿ ಒಂದಿಷ್ಟು ಜನ ಪುಣ್ಯಾತ್ಮರು ಸೇರ್ಕೊಂಡು ನಮ್ಮನೆ ಟೀಪಾಯ್ ಅಷ್ಟಗಲದ್ದು ಸೋಲಾರ್ ಪ್ಲಾಂಟ್ ತಯಾರು ಮಾಡಿದ್ದಾರೆ. ಈ ಸೋಲಾರ್ ಪ್ಲಾಂಟನ್ನ ನಮ್ಮನೆ ತಾರ್ಸಿ ಮೇಲೆ ಅಳವಡಿಸೋದ್ರಿಂದ ಕರೆಂಟ್ ಹೋಗೋ ಸಮಸ್ಯೆ ಇಂದ ಮುಕ್ತಿ ಸಿಗತ್ತೆ. ಇದರ ಜೊತೆಗೆ, ಕರೆಂಟ್ ಬಿಲ್ಲೂ ಅರ್ಧಕ್ಕರ್ಧ ಕಡಿಮೆ ಆಗುತ್ತಂತೆ. ಇದನ್ನ ಹಾಕ್ಸಕ್ಕೆ 20,000ದಷ್ಟು ದುಡ್ಡಿದ್ರೆ ಸಾಕು. ಇದರಲ್ಲಿ 125W ಪ್ಯಾನೆಲ್ ಜೊತೆಗೆ 0.5kWh ಬ್ಯಾಟರಿ ಇರುತ್ತೆ.

ಮೂಲ

ಏನು... ಇದನ್ನ ಕೇಳಿ ನಿಮಗೂ ಖುಷಿ ಆಯ್ತೋ ಇಲ್ವೋ? ಯಾಕಂದ್ರೆ, ಈಗಿರೋ ಮಾರ್ಕೆಟ್ ರೇಟ್ ಪ್ರಕಾರ, ಇದೇ ರೀತಿ ಪ್ಯಾನಲ್ ಹಾಕ್ಸಕ್ಕೆ ಬರೋಬ್ಬರಿ 1,20,000 ರುಪಾಯಿ ಬೇಕು ಅಂತ ಸೋಲಾರ್ ಎನರ್ಜಿ ಕಾರ್ಪೊರೇಶನ್ ಆಫ್ ಇಂಡಿಯಾದೋರು ಹೇಳ್ತಾರೆ. ಆದ್ರೆ, ಈ ಪ್ಲಾಂಟ್ ಅದಕ್ಕಿಂತ ಎಷ್ಟು ಪಟ್ಟು ಕಡಿಮೆ ನೋಡಿದ್ರಾ?

ಈ ಸೋಲಾರ್ ಪ್ಯಾನಲ್ ಇಂದ ಒಂದೆರ್ಡು ಟ್ಯೂಬ್ಲೈಟು, ಫ್ಯಾನು, ಚಾರ್ಜಿಂಗ್ ಪಾಯಿಂಟು, ಟೀವಿ ಎಲ್ಲಾನೂ ಓಡಿಸ್ಬೋದಂತೆ. ಇದಕ್ಕಿಂತ ಸ್ವಲ್ಪ ದೊಡ್ದ ಮಾಡೆಲ್ ತಗೊಂಡ್ರೆ, AC ಮತ್ತು ವಾಶಿಂಗ್ ಮಷಿನ್ ಬಿಟ್ಟು ಇನ್ನೆಲ್ಲಾ ಸಲಕರಣೆಗಳನ್ನೂ ಓಡಿಸ್ಬೋದಂತೆ ಕಣ್ರೀ!

ಪ್ರೊಫೆಸರ್ ಅಶೋಕ್ ಝುಂಝುಂನ್ವಾಲಾ ಹೇಳೋ ಪ್ರಕಾರ, ಈ ಸೋಲಾರ್ ಪ್ಲಾಂಟು ಪೂರ್ತಿ DC ವೈರಿಂಗ್ ಜೊತೆ ಬರೋದ್ರಿಂದ, ಬೇರೆ ಸೋಲಾರ್ ಪ್ಯಾನಲ್ಗಳ ಥರ DCನ ACಗೆ ಪರಿವರ್ತಿಸಲ್ಲ. ಇದ್ರಿಂದ ತುಂಬ ಎನರ್ಜಿ ಉಳಿತಾಯ ಆಗಿ ಕರೆಂಟ್ ಬಿಲ್ಲು ಕಮ್ಮಿ ಆಗುತ್ತೆ. ಗಮನಿಸಿ: ಸಾಮಾನ್ಯವಾಗಿ ನಮ್ಮ ಮನೆಗಳಲ್ಲೆಲ್ಲ AC ವೈರಿಂಗ್ ಮತ್ತು ಎಲೆಕ್ಟ್ರಿಕ್ ಸಾಮನುಗಳು ಇರೋದ್ರಿಂದ ಅದನ್ನೆಲ್ಲ ನೇರವಾಗಿ ಇದಕ್ಕೆ ಅಳವಡಿಸಕ್ಕೆ ಆಗಲ್ಲ.

ತಮಿಳುನಾಡು ಸರ್ಕಾರ, ದೊಡ್ಡ ದೊಡ್ದ MNCಗಳ ಜೊತೆ ಸೇರಿ  ಆಗ್ಲೇ 15,000 ಹಳ್ಳಿ ಮನೆಗಳಿಗೆ ಇದನ್ನ ಅಳವಡಿಸಿದ್ದಾರಂತೆ. ಮದ್ರಾಸಲ್ಲಿ 2015ರಲ್ಲಿ ಪ್ರವಾಹ ಬಂದಾಗ, ಇದರ ಸಹಾಯದಿಂದ 3 ದಿನ ಕರೆಂಟ್ ತೊಂದರೆ ಆಗ್ಲಿಲ್ವಂತೆ. ಇದರ ಜೊತೆ ರಾಜಸ್ಥಾನ್, ಅಸ್ಸಾಮಲ್ಲೂ ಹಾಕಿದ್ದಾರೆ. ಇನ್ಮುಂದೆ, ಕರ್ನಾಟಕ, ಆಂಧ್ರ ತೆಲಂಗಾಣ ಮತ್ತು ಒರಿಸ್ಸಾಲೂ ಇವುಗಳನ್ನ ಅಳವಡಿಸ್ತಾರಂತೆ.

IIT ಅವರ ಈ ಕೆಲಸ ಇಷ್ಟ ಆಗಿ, ನ್ಯೂಯಾರ್ಕಲ್ಲಿರೋ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಎಂಜಿನಿಯರ್ಸ್ (IEEE) ಇವರು ಈ ಯೋಜನೆಗೆ '2017ರ ಅತ್ಯುತ್ತಮ ಜನಸೇವಾ ತಂತ್ರಜ್ಞಾನ' ಅನ್ನೋ ಪ್ರಶಸ್ತಿ ಕೊಟ್ಟಿದ್ದಾರೆ.

ನಂಗಂತೂ ಇದನ್ನ ಕೇಳಿ ತುಂಬಾನೇ ಖುಷಿಯಾಯ್ತಪ್ಪ. ನಿಮಗೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: