ಸ್ಲಮ್ಮಲ್ಲಿ ಬೆಳೆದ ಕೆ.ಪಿ.ನಂಜುಂಡಿ ಕೋಟ್ಯಾಧಿಪತಿಯಾದ ಈ ಕಥೆಯಿಂದ ಪ್ರತಿಯೊಬ್ಬರೂ ಕಲಿಯೋದಿದೆ

ಸ್ಲಂನೋನು ಅಂತ ಹುಡುಗ್ರು ದೂರ ಇಡ್ತಿದ್ರಂತೆ

ಈ ಹೊತ್ತು ಕೆ.ಪಿ. ನಂಜುಂಡಿ ಹೆಸ್ರು ಕೇಳ್ದೋರು ಇಲ್ಲ. ಅವ್ರ ಕಥೆ ಕೇಳ್ತಾ ಹೋದ್ರೆ ಇನ್ನೂ ಇಂಟರೆಸ್ಟಿಂಗ್ ಆಗಿದೆ. ಇದೆಲ್ಲಾ ಹೆಂಗ್ ಸಾಧ್ಯ ಆಯ್ತು ಅನ್ನಿಸುತ್ತೆ. ನಾನೂ ಅವರ ತರಹ ಆಗ್ಬೇಕು ಅಂದಕೊಳ್ತೀವಿ. ಸಾಕಷ್ಟು ತಿರುವುಗಳಿಂದ ಕೂಡಿರೋ ಅವ್ರ ಜೀವನ ಯಾವುದೇ ಸಿನಿಮಾಗೂ ಕಮ್ಮಿ ಇಲ್ಲ. ಗೋಲ್ಡ್ ಬ್ಯುಸಿನೆಸ್ ಮಾಡೋ ಇವ್ರು ಕೋಟಿಗಟ್ಟಲೆ ಆಸ್ತಿಪಾಸ್ತಿ ಮಾಡಿ ಒಳ್ಳೆ ಹೆಸರು ಮಾಡಿದ್ದಾರೆ. ಇವ್ರ ಬ್ಯುಸಿನೆಸ್ ಟರ್ನ್ ಓವರ್ 1000 ಕೋಟಿ ರೂಪಾಯಿ ಅಂದ್ರೆ ಅರ್ಥ ಮಾಡ್ಕೊಳ್ಳಿ. ಒಂದರ್ಥದಲ್ಲಿ 24 ಕ್ಯಾರೆಟ್ ''ಬಂಗಾರದ ಮನುಷ್ಯ''. ಆದ್ರೆ 37 ವರ್ಷಗಳ ಹಿಂದೆ ಇವ್ರ ಬದುಕು ಹೀಗಿರಲಿಲ್ಲ ಅಂದ್ರೆ ನೀವು ನಂಬೋದಿಲ್ಲ. ಇವರ ಈ ಕಥೆ ಕೇಳಿ ನಿಮ್ಮ ಭವಿಷ್ಯದಲ್ಲಿ ನಿಮಗೆ ಇನ್ನಷ್ಟು ಭರವಸೆ ಹುಟ್ಟುತ್ತೆ... ಇನ್ನಷ್ಟು ಸಾಧಿಸುವ ಛಲ ಬರುತ್ತೆ...

ಮನೆಯಲ್ಲಿ ಕಿತ್ತು ತಿನ್ನೋ ಬಡತನ ಇತ್ತು, ವಾಸ ಇದ್ದದ್ದು ಬೆಂಗಳೂರಿನ ಸ್ಲಂಗಳಲ್ಲಿ

ಫ್ಲ್ಯಾಶ್ ಬ್ಯಾಕ್ ಗೆ ಹೋದ್ರೆ, 14 ವರ್ಷದ ಒಬ್ಬ ಹುಡುಗ, ಕಪ್ಪು ಬಣ್ಣ, ಸಾಧಾರಣ ಮೈಕಟ್ಟು, ಬೆಂಗಳೂರಿನ ಸ್ಲಂಗಳಲ್ಲಿ ವಾಸ. ಮನೆಯಲ್ಲಿ ಕಡುಬಡತನ. ಹೊಟ್ಟೆಗೆ ಹಿಟ್ಟಿಲ್ಲದ ದಿನಗಳು. ಆಗ ಚಿಕ್ಕ ಹುಡುಗ ನಂಜುಂಡಿ ಏನ್ ಮಾಡ್ತಾನೆ ಗೊತ್ತಾ, ಎರಡು ದಿನ ಸ್ಕೂಲಲ್ಲಿ ಮಧ್ಯಾಹ್ನದ ಊಟ ಮಾಡಲ್ಲ. ದಿನಕ್ಕೆ ನಾಲ್ಕು ರೊಟ್ಟಿಗಳಂತೆ ಉಳಿಸಿ ಮೂರನೇ ದಿನ 12 ರೊಟ್ಟಿಗಳನ್ನು ಮನೆಗೆ ತಂದು ಎಲ್ರಿಗೂ ಹಂಚ್ತಾನೆ.

ಚಿಕ್ಕಂದಿನಲ್ಲೇ ತಂದೆ ತೀರ್ಕೊಂಡ್ ಬಿಟ್ರು; ತಾಯಿ, ಅಣ್ಣ ಕುಡಿತದ ಚಟಕ್ಕೆ ಬಿದ್ರು

ಇವ್ರ ತಂದೆ, ಅಕ್ಕಸಾಲಿಗ, ತುಂಬಾ ಕಷ್ಟದ ದುಡಿಮೆ ಇವರ್ದು. ಆದ್ರೆ ಎಂಟು ಜನ ಮಕ್ಕಳನ್ನು ಪೋಷಿಸೋದಕ್ಕೆ ಬಹಳ ಕಷ್ಟಪಡ್ತಿದ್ರು. ನಾಲ್ಕನೇ ಮಗ ನಂಜುಂಡಿ, 12 ತರಗತಿ ಓದ್ತಿರಬೇಕಾದ್ರೆ ತಂದೆ ಲಿವರ್ ಕ್ಯಾನ್ಸರ್ ನಿಂದ ತೀರಿಕೊಂಡ್ ಬಿಟ್ರು. ಇಂತಹ ಪರಿಸ್ಥಿತೀಲಿ ತಾಯಿ ಮತ್ತು ಅಣ್ಣ ಕುಡಿತದ ಚಟಕ್ಕೆ ಬಿದ್ದು ಸಂಸಾರದ ನೊಗ ಇನ್ನೂ ಎಳೆಯ ತರುಣನಾದ ನಂಜುಂಡಿ ಹೆಗಲ ಮೇಲೆ ಬಿತ್ತು.

ಸ್ಲಂ ಹುಡುಗ ಅಂತೇಳಿ ಕ್ಲಾಸ್ಮೇಟ್ಗಳು ಹತ್ತಿರ ಸೇರಿಸ್ತಿರ್ಲಿಲ್ಲ

"ಮೋರಿ ಪಕ್ಕ ನಾವು ವಾಸವಾಗಿದ್ವಿ, ಮೇನ್ ರೋಡ್ (ಎಚ್ ಸಿದ್ದಯ್ಯ ರೋಡೇ) ನಮಗೆ ಟಾಯ್ಲೆಟ್. ನಾನು ಸ್ಲಂನೋನು ಅಂತ ನನ್ನ ಕ್ಲಾಸ್ ಮೇಟ್ ಗಳಿಗೆ ಗೊತ್ತಾಗಿ ನನ್ ಜೊತೆ ಸೇರ್ತಿರಲಿಲ್ಲ. ಇವತ್ತು ಬೆಂಗಳೂರಿನ ಶ್ರೀಮಂತರಲ್ಲಿ ನಾನೊಬ್ಬ ಅಂತ ಗುರಿತಿಸಿಕೊಂಡಿದ್ದರೂ ಆಗಾಗ ನಾನಿದ್ದ ಸ್ಲಂಗಳಿಗೆ ಹೋಗ್ತಿರ್ತಿನಿ" ಅಂತಾರೆ ನಂಜುಂಡಿ.

ಬೆಳಗ್ಗೆ ಕೆಲಸ, ಸಂಜೆ ಕಾಲೇಜು, ರಾತ್ರಿ ಆಟೋ ರಿಕ್ಷಾ ಓಡಿಸಕ್ಕೆ ಶುರು ಮಾಡಿದ್ರು

ನಂಜುಂಡಿ ಅವರಿಗೆ 18 ವರ್ಷ ಇದ್ದಾಗ ಅವ್ರ ಕುಟುಂಬದಲ್ಲೇ ಬಡತನ, ಹಸಿವು, ಅಪಮಾನ, ಸಾವುನೋವು ಎಲ್ಲವನ್ನೂ ನೋಡಿದವ್ರು. ಚಿಕ್ಕ ವಯಸ್ಸಿಗೆ ಇಷ್ಟೆಲ್ಲಾ ಜವಾಬ್ದಾರಿಗಳು ಬೆನ್ನತ್ತಿದ್ರೂ ಕುಡಿತ, ಬೀಡಿ ಸಿಗರೇಟಿನಂತಹ ಕೆಟ್ಟ ಸಹವಾಸಕ್ಕೆ ಬೀಳಲಿಲ್ಲ. ತಂದೆಯ ವೃತ್ತಿಯನ್ನು (ಅಕ್ಕಸಾಲಿಗ) ಮುಂದುವರೆಸಿದರು. ಬೆಳಗ್ಗೆ ಕೆಲಸ, ಸಂಜೆ ಕಾಲೇಜು, ರಾತ್ರಿ ಆಟೋ ರಿಕ್ಷಾ ಓಡಿಸೋದು. ಈ 24 ಗಂಟೆಗಳ ಓಟದಲ್ಲಿ ಅವರಿಗೆ ನಿದ್ದೆ ಮಾಡಲು ಟೈಮ್ ಸಿಗ್ತಿದಿದ್ದು ಆಟೋದಲ್ಲೇ.

ನಂಜುಂಡಿ ಜೀವನಕ್ಕೆ ಹೊಸ ತಿರುವು ಸಿಕ್ಕಿದ್ದೇ ತಂಗಿ ಬಿಚ್ಚಿಕೊಟ್ಟ 15 ಗ್ರಾಂ ತಾಳಿಯಿಂದ

ಇಷ್ಟೆಲ್ಲಾ ಕಷ್ಟಪಡ್ತಿದ್ರೂ ಸಾಕಾಗ್ತಿರಲಿಲ್ಲ. ಒಂದ್ಸಲ ತನ್ನ ತಂಗಿಯ 15 ಗ್ರಾಂ ತಾಳಿಯನ್ನು ಕೇಳಿದ್ರು. ಅವ್ರ ತಂಗಿ ಇಲ್ಲ ಅನ್ನದೆ ಸಂತೋಷದಿಂದ ತಾಳಿ ಬಿಚ್ಚಿಕೊಟ್ಟಿದ್ರು. ಇದ್ರಿಂದ ಸಣ್ಣಸಣ್ಣ ಚಿನ್ನದ ಆಭರಣಗಳನ್ನು ತಯಾರಿಸಿದ್ರು ನಂಜುಂಡಿ. ಆ ದಿನಗಳಲ್ಲಿ ಇಂತಹವ್ರು ಚಿನ್ನವನ್ನು ಮಾರೋದು ಅಷ್ಟು ಸುಲಭ ಇರಲಿಲ್ಲ.

ಕದ್ದು ತಯಾರಿಸಿದ್ ಇರ್ಬೇಕು ಅಂತ ಇವ್ರ ಆಭರಣ ತಗೋಳ್ಳೋಕೆ ಅನುಮಾನ ಪಡ್ತಿದ್ರು

''ತಗೊಳ್ಳಿ ತಗೊಳ್ಳಿ ಅಂತ ಚಿನ್ನದ ವ್ಯಾಪಾರಿಗಳ ಕಾಲಿಗೆ ಬೀಳ್ತಿದ್ದೆ. ಕದ್ದು ತಯಾರಿಸಿರೋ ಆಭರಣಗಳಿರಬೇಕಿವು ಅಂತ ಕೆಲವ್ರು ಅನುಮಾನಿಸ್ತಿದ್ರು. ನನ್ನ ತಂದೆಯವರ ಬಗ್ಗೆ ಗೊತ್ತಿದ್ದ ಕಾರಣ, ನಿಧಾನಕ್ಕೆ ಕೊಂಡುಕೊಳ್ಳೋಕೆ ಶುರು ಮಾಡಿದ್ರು''

ವ್ಯಾಪಾರಿಗಳು ನಂಬಕ್ಕೆ ಶುರು ಮಾಡಿದ ಮೇಲೆ ತಮ್ಮ ಗೆಟಪ್ ಕೂಡ ಚೇಂಜ್ ಮಾಡ್ಕೊಂಡ್ರು

ತಮಾಷೆ ಸಂಗತಿ ಅಂದ್ರೆ, ಚಿನ್ನದ ವ್ಯಾಪಾರಿಗಳು ಇವ್ರನ್ನ ನಂಬೋಕ್ಕೆ ಶುರು ಮಾಡಿದ ಮೇಲೆ ನಂಜುಂಡಿ ತಮ್ಮ ವೇಷಭೂಷಣಗಳನ್ನ ಬದಲಾಯಿಸಿಕೊಂಡ್ರು. "ಸ್ಲಂನಲ್ಲಿ ಬೆಳೆದಿದ್ನಲ್ಲ, ರೆಟ್ಟೆಯಲ್ಲಿ ಬಲನೂ ಇತ್ತು, ಆದ್ರೆ ನೋಡೋರಿಗೆ ಚೆನ್ನಾಗಿ ಕಾಣ್ತಿರಲಿಲ್ಲ. ಒರಟೊರಟಾಗಿ ಇದ್ದ ಕಾರಣ ರೌಡಿ ತರಹ ಕಾಣ್ತಿದ್ದೆ. ಜೀರೋ ಪವರ್ ಗ್ಲಾಸ್ ಹಾಕ್ಕೊಳ್ಳೋಕೆ ಶುರು ಮಾಡಿದ ಮೇಲೆ ನನ್ನ ಚಹರೆ ಬದಲಾಯ್ತು" ಅಂತಾರೆ ನಂಜುಂಡಿ.

ಬ್ಯುಸಿನೆಸಲ್ಲಿ ಹಣ ಬರೋಕೆ ಶುರುವಾಯ್ತು, ಅಲ್ಲೇ ಇದ್ದ ಮನೆಯೊಂದನ್ನು ಭೋಗ್ಯಕ್ಕೆ ಹಾಕ್ಕೊಂಡ್ರು

ಕೆಲವು ತಿಂಗಳು ಹೀಗೇ ಹೆಣಗಾಡಿದ ಮೇಲೆ, ಸಂಪಾದನೆ ಒಂದು ಹಂತಕ್ಕೆ ಬಂತು. ಕೈಗೆ ಹಣ ಬರ್ತಿದ್ದಂಗೆ ಐದು ಆಟೋ ರಿಕ್ಷಾಗಳು ಹಾಗೂ ಒಂದು ಕಾರ್ಗೋ ವ್ಯಾನ್ ತಗೊಂಡ್ರು. ಅಲ್ಲೇ ಹತ್ತಿರದಲ್ಲಿದ್ದ ಮನೇನ ಭೋಗ್ಯಕ್ಕೆ ಹಾಕ್ಕೊಂಡ್ರು.

ಫಸ್ಟ್ ಟೈಂ ಮನೆಯಲ್ಲಿ ಕರೆಂಟ್ ನೋಡ್ದಾಗ ಇವ್ರ ವಯಸ್ಸು 18 ವರ್ಷ!

''ನಮ್ಮ ಪಾಲಿಗದು ಅರಮನೆ ಇದ್ದಂತೆ, ಅಡುಗೆಮನೆ, ಹಾಲು, ಟಾಯ್ ಲೆಟ್, ಪವರ್ ಸಪ್ಲೈ ಎಲ್ಲವೂ ಇತ್ತು. ಫಸ್ಟ್ ಟೈಮ್ ಮನೆಯಲ್ಲಿ ಕರೆಂಟ್ ಬಳಸಿದಾಗ ನನ್ನ ವಯಸ್ಸು 18 ವರ್ಷಗಳು'' ಅಂತ ಹಳೆಯ ದಿನಗಳನ್ನ ನೆನೆಸ್ಕೋತಾರೆ ನಂಜುಂಡಿ.

ಕನ್ನಡ ಸಿನಿಮಾಗಳಿಗೆ ಫೈನಾನ್ಸ್ ಮಾಡಕ್ಕೆ ಶುರು ಮಾಡಿದ್ರು, ಗೋಲ್ಡ್ ಬ್ಯುಸಿನೆಸ್ ಗೂ ಕೈಹಾಕಿದ್ರು

ದಿನ ಕಳೆದಂತೆ ಇವ್ರ ಹಣಕಾಸು ಸ್ಥಿತಿ ಸುಧಾರಿಸ್ತಾ ಹೋಯ್ತು. ಇದೇ ಟೈಮಲ್ಲಿ ನಂಜುಂಡಿ ಅವ್ರಿಗೆ ಸಿನಿಮಾಗಳ ಬಗ್ಗೆ ಆಸಕ್ತಿ ಬೆಳೀತು. ಕನ್ನಡ ಸಿನಿಮಾಗಳಿಗೆ ಫೈನಾನ್ಸ್ ಮಾಡ್ತಿದ್ರು. ಆಗ ಚಿತ್ರೋದ್ಯಮದಲ್ಲಿ ಇವ್ರ ಹೆಸರು ಬಹಳ ಚಾಲ್ತಿಯಲ್ಲಿತ್ತು. ಸಿನಿಮಾಗಳಿಗೆ ಫಂಡಿಂಗ್ ಮಾಡೋದು, ಡಿಸ್ಟ್ರಿಬ್ಯೂಷನ್ ಗೆ ಕೈಹಾಕಿದ ಮೇಲೆ ಒಳ್ಳೆ ಆದಾಯ ಬರಕ್ಕೆ ಶುರುವಾಯ್ತು. ಚಿನ್ನದ ಬಳಕೆ ಆಗ ಜೂಮ್ ನಲ್ಲಿತ್ತು ಆ ಟೈಮಲ್ಲೇ ಗೋಲ್ಡ್ ಬ್ಯುಸಿನೆಸ್ ಗೆ ಕೈಹಾಕಿದರು.

ಇವತ್ತು ದಕ್ಷಿಣ ಭಾರತದಲ್ಲೇ ಹೆಸರಾಂತ ಲಕ್ಷ್ಮಿ ಗೋಲ್ಡ್ಸ್ ಪ್ಯಾಲೇಸ್ ಮತ್ತು ವಿಶ್ವವಾಣಿ ಮಾಲೀಕ

ಅವತ್ತು ಸ್ಲಂನಲ್ಲಿದ್ದ ಹುಡುಗ ಇವತ್ತು ದಕ್ಷಿಣ ಭಾರತದಲ್ಲಿ ಹಲವು ಮಳಿಗೆಗಳಿರೋ ಲಕ್ಷ್ಮಿ ಗೋಲ್ಡ್ಸ್ ಪ್ಯಾಲೇಸ್ ಮಾಲೀಕ ಅಂದ್ರೆ ನಂಬೋದು ಕಷ್ಟ. ಇದರ ಜೊತೆಗೆ ಐದು ರೇಶ್ಮೆ ಶೋರೂಂಗಳೂ ಇವೆ (ನಾಲ್ಕು ಫ್ಲೋರ್ ಗಳ ಶೋರೂಂಗಳಲ್ಲಿ ಗೋಲ್ಡ್ ಮತ್ತು ಸಿಲ್ಕ್ ಗಾಗಿ ತಲಾ ಎರಡೆರಡು ಮಹಡಿಗಳಿರುತ್ತವೆ). ಮುಂದಿನ ಮೂರು ವರ್ಷಗಳಲ್ಲಿ ದಾವಣಗೆರೆಯಲ್ಲಿ ಚಿತ್ರಮಂದಿರ, ಮೈಸೂರಿನಲ್ಲಿ ಸ್ಟಾರ್ ಹೋಟೆಲ್ ಕಟ್ಟಲು ಸುಮಾರು 300 ಕೋಟಿ ರೂಪಾಯಿ ತೊಡಗಿಸ್ತಿದ್ದಾರೆ. ಅಷ್ಟೇ ಅಲ್ಲ, ಇವರು ವಿಶ್ವೇಶ್ವರಭಟ್ಟರ ಜೊತೆ ಸೇರಿ ವಿಶ್ವವಾಣಿ ಅನ್ನೋ ಪತ್ರಿಕೇನೂ ನಡೆಸ್ತಾ ಇದಾರೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಇನ್ನೊಂದ್ಸಲ ಸ್ವಿಮ್ಮಿಂಗ್ಗ್ ಹೋಗಬೇಕಾದರೆ ಈ 15 ಫೋಟೋಗಳು ನಿಮ್ನ ಕಾಡುತ್ವೆ

ಕಾಪಾಡಿ! ಕಾಪಾಡಿ!

ಈಜು ಬರತ್ತೆ ಅಂತೇಳಿ ಎಲ್ಲೆಲ್ಲೋ ಈಜಕ್ಕೆ ಹೋದ್ರೆ ಅಪಾಯ ತಪ್ಪಿದ್ದಲ್ಲ. ನೀರಿನ ಒಳಗೆ ಏನಿದೆ ಅಂತ ನಮಗೆ ಗೊತ್ತಿರಲ್ಲ. ಗೊತ್ತಾಗೋ ಹೊತ್ತಿಗೆ ಬಜಾವಾಗೋದು ಕಷ್ಟ. ನೀರಿಗೆ ಇಳಿಯೋ ಮುಂಚೆ ತುಂಬಾ ಹುಷಾರಾಗಿರ್ಬೇಕು. ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ. ಇಲ್ಲಿರೋ 15 ಫೋಟೋ ನೋಡಿ. ಇನ್ಮೇಲೆ ಸ್ವಿಮ್ಮಿಂಗ್‌ಗೆ ಹೋಗ್ಬೇಕಾದ್ರೆ ಖಂಡಿತ ನಿಮ್ಮನ್ನ ಕಾಡುತ್ವೆ. 

1. ಅತ್ತ ಧರಿ ಇತ್ತ ಪುಲಿ ಅಂದ್ರೆ ಇದೇ ಏನೋಪ್ಪಾ
2. ನೀರಿನಲ್ಲಿ ಗುಹೇನೂ ಇರ್ಬೋದು
3. ಇಂತದ್ದೇನದ್ರೂ ಕಾಣಿಸಿದ್ರೆ ಅರಚಕ್ಕೂ ಆಗಲ್ಲಪ್ಪೋ
4. ಅನಕೊಂಡ ಹಾವು ಇದ್ರೂ ಇರ್ಬೋದು
5. ಮೈ ಝುಮ್ ಅನ್ಸತ್ತೆ ಅಲ್ವಾ?
6. ಗ್ರಾಫಿಕ್ಸ್ ಅಂದ್ಕೊಂಡ್ರಾ.. ಸಿಕ್ಕಿದ್ರೆ ಅಷ್ಟೆ ಸೀರುಂಡೇನೆ!
7. ನೀರಿನಲ್ಲಿ ಅಲೆಯ ಉಂಗುರ ಅಲ್ಲ..ಹಾವಿನುಂಗುರ!
8. ಈ ತರಹ ಮಾಡಕ್ಕೂ ಗುಂಡಿಗೆ ಇರ್ಬೇಕು ಕಣ್ರಿ
9. ಡೈವ್ ಹೊಡೆದ್ರೆ ಹಂಗೇ ಗುಂಳುಂ ಅನ್ನಿಸ್ಬಿಡತ್ತೆ
10. ನನ್ ತಂಟೇಗ್ ಬಂದ್ರೆ ಸುಮ್ಕಿರಲ್ಲ ಅಂತಿದ್ಯಾ ಆಕ್ಟೋಪಸ್!
11. ದಾರಿ ಕಾಣದಾಗಿದೆ ರಾಘವೇಂದ್ರನೇ...
12. ಸಾವು ಕಣ್ಮುಂದೆ ಇದೆ ಅಂತಾರಲ್ಲ...ಇದೇನಾ?
13. ಇದೇನೋ ಪ್ರಾಣಿ ಅಂದ್ಕೊಂಡ್ರಾ...ಛೀ! ಪಾಚಿ ಅಷ್ಟೇ
14. ಎಲ್ಲಿಗೆ ಪಯಣ ಯಾವುದೋ ದಾರಿ...
15. ಬ್ಲೂ ವೇಲ್ ಒಂದ್ಸಲ ಮೇಲೆ ಬಂದಿದೆ ಅಂದ್ರೆ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: