ಮಹಾಭಾರತದ ಕೊನೇಲಿ ಕೃಷ್ಣ ಮತ್ತೆ ಪಾಂಡವರಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಅಬ್ಬಾ ಎಂಥ ಯುದ್ಧ

ಮಹಾಭಾರತ ನಾವು ಯಾವ ರೀತಿ ಜೀವನ ನಡೆಸಬೇಕು ಅನ್ನೋದಕ್ಕೆ ಉತ್ತಮ ಉದಾಹರಣೆ. ಆದ್ರೆ ಕುರುಕ್ಷೇತ್ರ ಯುದ್ಧ ಮತ್ತು ಅದಕ್ಕಿಂತ ಮುಂಚಿನ ಕಥೆ ಗೊತ್ತಿರುವಷ್ಟು ಹೆಚ್ಚಾಗಿ ಅದಾದ್ಮೇಲಿನ ಕಥೆ ಸಾಮಾನ್ಯವಾಗಿ ನಮಗೆ ಗೊತ್ತಿರಲ್ಲ. ಹಾಗಂದ ಮಾತ್ರಕ್ಕೆ ಅದೇನು ಮಹಾಭಾರತದ ಭಾಗ ಅಲ್ಲದೆ ಏನಲ್ಲ. ಆದ್ದರಿಂದ ಬನ್ನಿ, ಅದರ ಬಗ್ಗೆ ಇನ್ನಷ್ಟು ತಿಳ್ಕೊಳೋಣ.

1) ಕೃಷ್ಣನಿಗೆ ಸಾವು ಬರಲಿ ಅಂತ ಗಾಂಧಾರಿ ಶಾಪ ಕೊಡ್ತಾಳೆ

ತನ್ನ ಮಕ್ಕಳನ್ನೆಲ್ಲ ಕಳೆದುಕೊಂಡು ದುಃಖ ಪಡ್ತಿದ್ದ ಗಾಂಧಾರಿ, ಇದಕ್ಕೆ ಕೃಷ್ಣಾನೇ ಕಾರಣ ಅಂತ ಹೀಗ್ ಮಾಡ್ತಾಳೆ. ಕುರುಕ್ಷೇತ್ರದಲ್ಲಿ ದಿಗ್ವಿಜಯ ಸಾಧಿಸಿದ ಪಾಂಡವರನ್ನ ಹಸ್ತಿನಾಪುರದ ರಾಜರು ಅಂತ ಘೋಷಿಸಲಾಗುತ್ತೆ. ಅವರಲ್ಲಿ ಹಿರಿಯ ಧರ್ಮರಾಯನಿಗೆ ಪಟ್ಟಾಭಿಷೇಕ ಆಗುತ್ತೆ.

2) ಹೆಚ್ಚು-ಕಡಿಮೆ ಇಡೀ ಯಾದವಕುಲವೇ ಸರ್ವನಾಶವಾಗಿ ಹೋಗುತ್ತೆ

36 ವರ್ಷಗಳ ಕಾಲ ಪಾಂಡವರು ಹಸ್ತಿನಾಪುರವನ್ನ ಆಳ್ತಾರೆ. ಪಾಂಡವರು ರಾಜ್ಯಭಾರದಲ್ಲಿ ತೊಡಗಿದಂತೆಯೇ, ಗಾಂಧಾರಿಯ ಶಾಪದ ಪರಿಣಾಮವಾಗಿ ಯಾದವೀಕಲಹ ಆರಂಭ ಆಗಿ ಕೃಷ್ಣನ ಯಾದವಕುಲ ಹಾಳಾಗುತ್ತೆ.

3) ಕೃಷ್ಣನಿಗೆ ಒಬ್ಬ ಬೇಟೆಗಾರನ ಬಾಣ ಬಿದ್ದು ಸತ್ತೋಗ್ತಾನೆ

ಯಾದವೀ ಕಲಹದಲ್ಲಿ ಒಬ್ಬ ಬೇಟೆಗಾರನ ಬಾಣ ಕೃಷ್ಣನಿಗೆ ಬಿದ್ದು, ಸತ್ತು, ವಿಷ್ಣುವಿನ ವಿಗ್ರಹದಲ್ಲಿ ಲೀನ ಆಗಿಹೋಗ್ತಾನೆ. ಇದಾದ ಮೇಲೆ ನಿನ್ನ ಹಾಗೂ ನಿನ್ನ ಸಹೋದರರ ಜೀವನದ ಉದ್ದೇಶ ಮುಗೀತು ಅಂತ ವೇದವ್ಯಾಸ ಅರ್ಜುನನಂಗ್ ಹೇಳ್ತಾನೆ.

4) ಪರೀಕ್ಷಿತನಿಗೆ ಪಟ್ಟಾಭಿಷೇಕ ಮಾಡಿ, ಪಾಂಡವರು ಮತ್ತು ದ್ರೌಪದಿ ಹಿಮಾಲಯಕ್ಕೆ ಹೋಗ್ತಾರೆ, ಯಮ ನಾಯಿ ಆಗಿ ಅವರ ಹಿಂದೆ ಬರ್ತಾನೆ

ದ್ವಾಪರ ಯುಗ ಮುಗಿದು, ಕಲಿಯುಗ ಶುರು ಆದಾಗ ಪಾಂಡವರು ದ್ರೌಪದಿ ಜೊತೆಗೆ ಹಿಮಾಲಯಕ್ಕೆ ಹೊರಡ್ತಾರೆ. ಯಮಧರ್ಮ ಒಂದು ನಾಯಿಯ ರೂಪದಲ್ಲಿ ಅವರ ಹಿಂದೆ ಬರ್ತಾನೆ

5) ಹಿಮಾಲಯ ಹತ್ತುತ್ತಾ ಇರೋ ಹಾಗೆ ಧರ್ಮರಾಯನ್ ಬಿಟ್ಟು ಬೇರೆಯೋರೆಲ್ಲ ಸತ್ತೋಗ್ತಾರೆ

ಮೊದಲಿಗೆ ದ್ರೌಪದಿ, ಆಮೇಲೆ ಭೀಮ, ನಕುಲ-ಸಹದೇವ, ಅರ್ಜುನ ಎಲ್ಲರೂ ಅವರ ಆಸೆಗಳು, ಅಹಂಕಾರಗಳಿಂದಾಗಿ ಸತ್ತು ಹೋಗ್ತಾರೆ. ಯಾವುದೇ ಅಹಂಕಾರ, ಆಸೆಗಳಿಲ್ಲದೇ ಇದ್ದ ಧರ್ಮರಾಯ, ನಾಯಿ ಜೊತೆಗೆ ಹಿಮಾಲಯದ ತುತ್ತತುದಿಯಲ್ಲಿದ್ದ ಸ್ವರ್ಗದ ಬಾಗಿಲಿಗೆ ಹೋಗ್ತಾನೆ.

6) ಧರ್ಮರಾಯನ್ನ ಮೊದಲು ನರಕಕ್ಕೆ ಕರ್ಕೊಂಡು ಹೋಗ್ತಾನೆ ಯಮ

ಸ್ವರ್ಗದ ಬಾಗಿಲಲ್ಲಿ ಯಮ (ನಾಯಿ) ತನ್ನ ನಿಜರೂಪ ತೋರಿಸಿ ಮೊದಲಿಗೆ ಧರ್ಮರಾಯನ್ನ ನರಕಕ್ಕೆ ಕರೆದುಕೊಂಡ್ ಹೋಗ್ತಾನೆ. ಆದ್ರೆ, ಸ್ವರ್ಗದ ರಾಜ ಇಂದ್ರದೇವ ಯುಧಿಷ್ಠಿರನನ್ನ ಸ್ವರ್ಗಕ್ಕೆ ವಾಪಸ್ ಕರ್ಕೊಂಡ್ ಹೋಗಿ ಅವನ ಹೆಂಡತಿ ಮತ್ತು ತಮ್ಮಂದಿರು ಅಲ್ಲಿದ್ದಾರೆ ಅಂತ ತೋರುಸ್ತಾನೆ. ಅಲ್ಲಿ ಎಲ್ಲರೂ ಒಂದಾಗ್ತಾರೆ.

ಗೊತ್ತಿತ್ತಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಉಗುರಿಗೆ ಟೂತ್‍ಪೇಸ್ಟ್ ಹಚ್ಚಿಕೊಳೋದ್ರಿಂದ ಏನ್ ಲಾಭ ಸಿಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯಾವನಿಗ್ ಗೊತ್ತಿತ್ತು?

ಬೆರಳು

ನಿಮ್ಮ ಕೈ ಉಗುರು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿದ್ಯಾ?

ಮೂಲ

ಡಾರ್ಕ್ ಬಣ್ಣದ ನೇಲ್ ಪಾಲಿಶ್ ಹೆಚ್ಚಿಕೊಂಡು ತೆಗೆದರೆ ಹೀಗಾಗಬಹುದು. ಇಲ್ಲಾ ಸಿಗರೇಟ್ ಹಿಡ್ಕೊಳೋದ್ರಿಂದಾನೂ ಹೀಗಾಗಬಹುದು...

ಕಾರಣ ಏನೇ ಇರಲಿ, ಇದಕ್ಕೆ ಒಂದು ಸುಲಭವಾದ ಉಪಾಯ ಇದೆ...

ಮಾಮೂಲಿ ಟೂತ್‍ಪೇಸ್ಟ್ ತೊಗೊಂಡು...

ಮೂಲ

ಉಗುರಿಗೆ ಹಚ್ಚಿ 10 ನಿಮಿಷ ಹಾಗೇ ಬಿಟ್ಟುಬಿಡಿ. ಆಮೇಲೆ ತೊಳ್ಕೊಳಿ.

ಮೂಲ

ಹೀಗೆ ದಿನ ಬಿಟ್ಟು ದಿನ ಮಾಡಿ. 1 ವಾರದಲ್ಲಿ ಹಳದಿ ಬಣ್ಣ ಮಾಯ!

ಕೆಲವರಿಗೆ ಇನ್ನೂ ಹೆಚ್ಚು ದಿನ ತೊಗೋಬೋದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: