ವಾಟ್ಸಪ್ ಮೆನುನಲ್ಲಿ ಅಡಗಿರೋ ಈ 15 ರಹಸ್ಯಗಳು ಜಾಸ್ತಿ ಜನರಿಗೆ ಗೊತ್ತಿಲ್ಲ

ಇಷ್ಟೇ ಡೇಟಾ ಬಳಸು ಅಂತ ಹೇಳ್ಬೋದು

ವಾಟ್ಸಾಪು ನಮ್ಮೆಲ್ಲರ ಜೀವನದಲ್ಲಿ ಎಷ್ಟರ ಮಟ್ಟಿಗೆ ಹಾಸುಹೊಕ್ಕೋಗಿದೆ ಅನ್ನೋದು ನಮಗೆಲ್ಲಾ ಗೊತ್ತಿದೆ.

ಗೊತ್ತಿಲ್ದೇ ಹೋದ್ರೆ ಈ ಆಂಟಿ ಸೀರೆ ನೋಡಿ ಗೊತ್ತಾಗುತ್ತೆ:

ಆದ್ರೆ ಈ ವಾಟ್ಸಾಪಲ್ಲಿರೋ ಎಷ್ಟೊಂದು ವಿಷಯಗಳು, ತಂತ್ರಗಳು ನಮ್ಮಲ್ಲಿ ತುಂಬಾ ಜನಕ್ಕೆ ಗೊತ್ತಿಲ್ಲ.

ಸುಮ್ನೆ ಹರಟೆ ಹೊಡೀತಿರ‍್ತೀವಿ, ಆದ್ರೆ ಇದೆಲ್ಲಾ ಗಮನಿಸಿರೋದೇ ಇಲ್ಲ...ಬನ್ನಿ ಇವತ್ತು ಅಂತಾ ಒಂದಿಷ್ಟು ವಾಟ್ಸಾಪ್ ತಂತ್ರಗಳನ್ನ ನೋಡಣ...

1. ಒಂದೇ ಮೆಸೇಜನ್ನ ಹತ್ತಾರು ಜನಕ್ಕೆ ಒಂದೇ ಸಲಕ್ಕೆ ಕಳಿಸ್ಬೋದು, ಒಬ್ರಿಗೆ ಕಳ್ಸಿರದು ಇನ್ನೊಬ್ರಿಗೆ ಗೊತ್ತಾಗಲ್ಲ

"Chats" ಅನ್ನೋ ಸ್ಕ್ರೀನಲ್ಲಿ ಮೇಲ್ಗಡೆ "Broadcast Lists" ಅಂತ ಒಂದಿರುತ್ತೆ. ಇದು ಈಮೇಲಲ್ಲಿ Bcc ಇರುತ್ತಲ್ಲ ಆಥರ. ಒಂದೇ ಸಲಕ್ಕೆ ತುಂಬಾ ಜನಕ್ಕೆ ಮೆಸೇಜು ಕಳಿಸ್ಬೋದು, ಆದ್ರೆ ನೀವು ಯಾರ್-ಯಾರಿಗೆ ಕಳ್ಸಿದೀರಿ ಅನ್ನೋದು ಯಾರ್ಗೂ ಗೊತ್ತಾಗಲ್ಲ. ಈ ಥರ ತುಂಬಾ ಜನಕ್ಕೆ ಒಂದೇ ಸಲಕ್ಕೆ ಸಂದೇಶ ಕಳ್ಸಕ್ಕೆ ಔರೆಲ್ಲಾ ಒಂದೇ ಗುಂಪಲ್ಲಿ ಇರ್ಬೇಕಾಗಿಲ್ಲ. "Broadcast Lists" ಮೂಲಕ ಮೆಸೇಜ್ ಕಳಿಸ್ಬೋದು.

ಹೀಗ್ಮಾಡಿ:

ನಿಮ್ಮ chatಗಳ ಪಟ್ಟಿಗೆ ಹೋಗಿ -> Broadcast Lists ಒತ್ತಿ -> New List ಒತ್ತಿ -> ಯಾರ‍್ಯಾರಿಗೆ ಮೆಸೇಜ್ ಕಳಿಸ್ಬೇಕೋ ಔರ ಹೆಸರೆಲ್ಲಾ ಸೇರ್ಸಿ, ಆಮೇಲೆ ಸಂದೇಶ ಟೈಪ್ ಮಾಡಿ -> send ಒತ್ತಿ.

2. ಪದಗಳಿಗೆ ಅಲಂಕಾರ ಮಾಡಿ ಎದ್ದು ಕಾಣೋ ಹಾಗೆ ಮಾಡ್ಬೋದು

ನಿಮ್ಮ ಸಂದೇಶದಲ್ಲಿ ಅಕ್ಷರಗಳು ದಪ್ಪಗೆ ಕಾಣ್ಬೇಕು ಅಂದ್ರೆ ಸಂದೇಶದ ಮೊದಲಲ್ಲಿ ಮತ್ತು ಕೊನೇಲಿ " * " ಗುರುತನ್ನ ಸೇರಿಸಿ. ನಿಮ್ ಸಂದೇಶ "ಹಾಯ್ ಚಿನ್ನು" ಅಂತ ಇದ್ರೆ ಅದನ್ನ *ಹಾಯ್ ಚಿನ್ನು* ಅಂತ ಟೈಪ್ ಮಾಡಿ ಕಳ್ಸಿ...ಆಗ ಅದು ಓದೋರಿಗೆ ಹಾಯ್ ಚಿನ್ನು ಅಂತ ಕಾಣುತ್ತೆ.

ನಿಮ್ಮ ಪದಗಳು ಬಲಕ್ಕೆ ವಾಲ್ಕೊಂಡು ಇರೋಹಾಗೆ ಇರಬೇಕಂದ್ರೆ ಸಂದೇಶದ ಮೊದಲಲ್ಲಿ ಮತ್ತು ಕೊನೇಲಿ ಅಂಡರ್‍ ಸ್ಕೋರ್ ( _ ) ಹಾಕಿ. _ಹಾಯ್ ಚಿನ್ನು_ ಅಂತ ಬರೀಬೇಕು. ಆಗ ಅದು ಓದೋರಿಗೆ ಹಾಯ್ ಚಿನ್ನು ಅಂತ ಕಾಣುತ್ತೆ.

ನಿಮ್ಮ ಬರಹದ ಮೇಲೆ ಒಂದು ಅಡ್ಡಗೆರೆ ಹೊಡೆದಾಕಿದಂಗೆ ಬರಬೇಕಂದ್ರೆ ಸಂದೇಶದ ಮೊದಲಲ್ಲಿ ಮತ್ತು ಕೊನೇಲಿ "~" ಗುರುತನ್ನ ಹಾಕಿ. ಟೈಪ್ ಮಾಡುವಾಗ ~ಹಾಯ್ ಚಿನ್ನು~ ಅಂತ ಟೈಪ್ ಮಾಡಿ. ಆಗ ಅದು ಓದೋರಿಗೆ ಹಾಯ್ ಚಿನ್ನು ಅಂತ ಕಾಣುತ್ತೆ.

ಮೇಲೆ ಹೇಳಿರೋ ಅಲಂಕಾರಗಳನ್ನ ಬೆರೆಸಿ ಕೂಡಾ ಕಳಿಸ್ಬೋದು *_ಹಾಯ್ ಚಿನ್ನು_* ಅದು ನೋಡೋರಿಗೆ ಈ ಥರ ಕಾಣುತ್ತೆ : ಹಾಯ್ ಚಿನ್ನು

3. ನೀವು ಯಾರ್ ಜೊತೆ ವಾಟ್ಸಾಪಲ್ಲಿ ತುಂಬಾ ಹೊತ್ತು ಹರಟೆ ಹೊಡೀತೀರಿ ಅಂತ ತಿಳ್ಕೊಬೋದು

Settings -> Account -> Storage Usage - ಇಲ್ಲಿಗೆ ಹೋದ್ರೆ ನಿಮಗೆ ನೀವು ಯಾರ‍್ಯಾರ ಜೊತೆ ಎಷ್ಟೆಷ್ಟು ಹರಟೆ ಹೊಡ್ದಿದೀರಿ ಅಂತ ಗೊತ್ತಾಗುತ್ತೆ. ಯಾವ ಗುಂಪಲ್ಲಿ ಎಷ್ಟು ತೊಡಗಿದ್ದೀರಿ ಅನ್ನೋದೂ ತೋರ್ಸ್ತುತ್ತೆ.

ಅಲ್ಲಿ "Size" ಅಂತ ಇರುತ್ತೆ, ಬಲಗಡೆ ಕೆಳಗಡೆ,  ಇಲ್ಲಿ ನೀವು ಯಾರ್ ಜೊತೆ ಅತಿ ಹೆಚ್ಚು ವಾಟ್ಸಾಪ್ ಡಾಟಾ ಖರ್ಚು ಮಾಡ್ತೀರಿ ಅಂತ ಗೊತ್ತಾಗುತ್ತೆ.

4. ಇಷ್ಟೇ ಡೇಟಾ ಬಳಸು ಅಂತ ನೀವು ವಾಟ್ಸಾಪಿಗೆ ಹೇಳ್ಬೋದು

ವಾಟ್ಸಾಪಿಂದ ಒಟ್ಟಾರೆ ಡೇಟಾ ಎಷ್ಟು ಖರ್ಚಾಗ್ತಾ ಇದೆ ಅಂತ ತಿಳ್ಕೊಳಕ್ಕೆ ಇಲ್ಲಿ ನೋಡಿ: Settings -> Data Usage -> Network Usage

ಅಲ್ಲೇ Data Usage ಅನ್ನೋ ಮೆನುನಲ್ಲಿ ನಿಮಗೊಂದು ಆಯ್ಕೆ ಇರುತ್ತೆ; ಇಲ್ಲಿ ನೀವು ವೈಫೈಗೆ ಕನೆಕ್ಟ್ ಆಗಿದ್ರೆ ಮಾತ್ರ ವಾಟ್ಸಾಪ್ ವೀಡಿಯೋಗಳು, ಫೋಟೋಗಳು ಡೌನ್ಲೋಡ್ ಆಗ್ಲಿ ಅಂತ ನಿಯಮ ಮಾಡ್ಬೋದು. "Low Data Usage mode" ಅನ್ನ ಆನ್ ಮಾಡಿಟ್ರೆ ವಾಟ್ಸಾಪ್ ಕರೆಗಳಿಗೆ ಅದೇ ಕಡಿವಾಣ ಹಾಕುತ್ತೆ.  

5. ಹಗಲು ರಾತ್ರಿ ನೋಡ್ದೇ ಮೆಸೇಜು ಕಳ್ಸಿ ಕಳ್ಸಿ ಕಿರಿಕಿರಿ ಮಾಡೋ ಗುಂಪುಗಳನ್ನ ಸುಮ್ಮನಾಗಿಸಬೋದು

ಕೆಲವು ಗುಂಪುಗಳಲ್ಲಿ ಬೇಕೋ ಬೇಡ್ವೋ ಏನಾದ್ರೂ ಒಂದು ಮೆಸೇಜು ಬರ್ತಾನೇ ಇರುತ್ತೆ. ಸುಮ್ನೆ ಕಿರಿಕಿರಿ. ಇಂತಾ ಪರಿಸ್ಥಿತೀಲಿ ನೀವು ವಾಟ್ಸಾಪನ್ನ ಸುಮ್ಮನಾಗಿಸೋಕ್ಕೆ ಮೂರು ಆಯ್ಕೆ ಇರುತ್ತೆ -  8 ಗಂಟೆ ಕಾಲ ಸುಮ್ಮನಿರಿಸೋದು - ಒಂದುವಾರ ಸುಮನಿರ್ಸೋದು ಅಥವಾ ಒಂದ್ ವರ್ಷ ಸುಮ್ಮನಿರಿಸೋದು. ಹೇಗೆ ಅಂದ್ರ...

ನೀವು ಯಾವ ಗುಂಪಿನ ಬಗ್ಗೆ ತಲೆ ಕೆಡಿಸ್ಕೊಳಲ್ವೋ ಆ ಗುಂಪಿಗೆ ಹೋಗಿ.. ಅಲ್ಲಿ ಗುಂಪಿನ ಹೆಸರಿನ ಮೇಲೆ ಒತ್ತಿ. ಅಲ್ಲಿ Mute ಅನ್ನೋ ಆಯ್ಕೆ ಇರುತ್ತೆ. ಅದನ್ನ ಒತ್ತಿದ್ರೆ ಆಗ ನಿಮ್ಗೆ ಎಷ್ಟು ಹೊತ್ತು ಸೈಲೆಂಟಾಗಿರಬೇಕು ಅನ್ನೋದಕ್ಕೆ 3 ಆಯ್ಕೆ ಬರುತ್ತೆ. ಒಂದನ್ನ ತಗೊಳ್ಳಿ.

6. ನಿಮ್ಮ ಪ್ರೊಫೈಲು, ಡಿಪಿ (ಫೋಟೋ) ಎಲ್ಲಾರ್ಗೂ ಕಾಣಿಸ್ದೇ ಇರೋ ಹಾಗೆ ನೋಡ್ಕೋಬೋದು

ಯಾರ‍್ಯಾರೋ ತೆಲೆ ಕೆಟ್ಟೋರು ಸುಮ್ನೆ ಮೆಸೇಜು ಕಳ್ಸಿ ತಲೆ ತಿಂತಾರೆ, ಯಾವ್ದೋ ಗುಂಪಿಗೆ ಸೇರಿಸ್ತಾರೆ. ಆ ಗುಂಪಲ್ಲಿರೋರಿಗೆ ನಮ್ ಬಗ್ಗೆ ಏನೇನು ಮಾಹಿತಿ ಗೊತ್ತಾಗುತ್ತೋ ಅನ್ನೋ ಚಿಂತೆ ಮಾಡಬೇಕಾಗಿಲ್ಲ. ವಾಟ್ಸಪ್ Settingsಗೆ ಹೋಗಿ ಅಲ್ಲಿ Account ಮೇಲೆ ಒತ್ತಿ. ಆಮೇಲೆ Privacy ಒತ್ತಿ.  "Last Seen, Profile Photo and Status" ಅನ್ನೊ ಆಯ್ಕೆಗೆ "My Contacts" ಅಂತ ಸೆಲೆಕ್ಟ್ ಮಾಡಿ. ಹೀಗೆ ಮಾಡೋದ್ರಿಂದ ನಿಮ್ಮ ಫೋನಲ್ಲಿ ಯಾರ‍್ಯಾರ ಮೊಬೈಲ್ ನಂಬರ್ ಇದ್ಯೋ ಔರಿಗೆ ಮಾತ್ರ ನಿಮ್ ಬಗ್ಗೆ ತಿಳ್ಕೊಳಕ್ಕೆ ಆಗೋದು.

7. ಫೈಲುಗಳನ್ನ ಹಂಚ್ಕೋಬೋದು

ನೀವು ಫೋಟೋಗಳನ್ನ ಕಳಿಸೋ ಕಡೇನೇ ಕಡತಗಳನ್ನ ಕಳಿಸೋ ಆಯ್ಕೆ ಇರುತ್ತೆ. ಅದನ್ನ ಒತ್ತಿದ್ರೆ ಅಲ್ಲಿ ನಿಮಗೆ ಕಡತ ಎಲ್ಲಿಂದ ತಗೋಬೇಕು ಅನ್ನೋ ಆಯ್ಕೆ ಇರುತ್ತೆ.

8. ನೀವು ಔರ ಮೆಸೇಜ್ ಓದಿದಿರಿ ಅನ್ನೋದು ಕಳಿಸಿದೋರ್ಗೆ ಗೊತ್ತಾಗದೇ ಇರೋ ಥರ ಮೆಸೇಜ್ ಓದಬೋದು

ವಾಟ್ಸಪ್ಪಲ್ಲಿ ಇರೋ ನೀಲಿ ಟಿಕ್ ಮಾರ್ಕಿನಿಂದ ಕಳ್ಸಿರೋ ಮೆಸೇಜನ್ನ ಓದಿದರಾ ಇಲ್ವಾ ಅನ್ನೋದು ಗೊತ್ತಾಗೋಗುತ್ತೆ.  ಆಥರ ಗೊತ್ತಾಗಬಾರ್ದು ಅಂದ್ರೆ ಹೀಗ್ಮಾಡಿ...

- ಮೆಸೇಜ್ ಬಂದ ತಕ್ಷಣ ತೆಗೆದು ಓದ್ಬೇಡಿ
- ನಿಮ್ಮ ಮೊಬೈಲನ್ನ ಯೇರೋಪ್ಲೇನ್ ಮೋಡಿಗೆ ಹಾಕಿ
- ಈಗ ವಾಟ್ಸಪ್ಗೆ ಹೊಗಿ ಮೆಸೇಜ್ ಓದಿ, ಆಮೇಲೆ ವಾಟ್ಸಪ್ ಮುಚ್ಚಿಬಿಡಿ
- ಮತ್ತೆ ಯೇರೋಪ್ಲೇನ್ ಮೋಡ್ ಆಫ್ ಮಾಡಿ
ಈ ಥರ ಮಾಡೋದ್ರಿಂದ ನೀವು ಮೆಸೇಜು ಓದಿದ್ರೂ ನೀಲಿ ಟಿಕ್ ಮಾರ್ಕ್ ಬರೋದಿಲ್ಲ... ನೀವು ಯಾವ್ದೇ ಮೆಸೇಜಾದ್ರೂ, ಓದಿದ್ದೀರಿ ಅನ್ನೋದು ಬೇರೆಯೋರಿಗೆ ಗೊತ್ತಾಗಲೇ ಬಾರ್ದು ಅನ್ನೋದಾದ್ರೆ Settingsಗೆ ಹೋಗಿ -> Account ಮೇಲೆ ಒತ್ತಿ -> Privacy ಮೇಲೆ ಒತ್ತಿ "toggle Read Receipts off" ಒತ್ತಿ.

9. ಫೋಟೋಗಳು ವೀಡಿಯೋಗಳು ಮೊಬೈಲಿಗೆ ಡೌನ್ಲೋಡ್ ಆಗದೇ ಇರೋ ಥರ ಮಾಡ್ಬೋದು

Settingsಗೆ ಹೋಗಿ -> Chats ಒತ್ತಿ -> ಅಲ್ಲಿ turn off Save Incoming Media ಅನ್ನೋ ಆಯ್ಕೆನ ತಗೊಳಿ

10. ನಿಮ್ಮ ಮೊಬೈಲಿನ ಹೋಮ್ ಸ್ಕ್ರೀನಿಂದ ನೇರವಾಗಿ ನಿಮ್ಮ ಮೆಚ್ಚಿನ ಹರಟೆಗೆ ಹೋಗಬೋದು

ನಿಮ್ಮ ಮೊಬೈಲ್ ಹೋಮ್ ಸ್ಕ್ರೀನಿಂದ ಚಕ್ ಅಂತ ಹೋಗ್ಬೇಕಂದ್ರೆ ಆ ಹರಟೆಅ(chat) ಮೇಲೆ ಒತ್ತಿ ಹಾಗೇ ಹಿಡ್ಕೊಳಿ - "Add Conversation Shortcut" ಅನ್ನೋ ಆಯ್ಕೆ ಬರುತ್ತೆ. ಅದನ್ನ ಒತ್ತಿ. ಆಗ ನಿಮ್ಮ ಮೊಬೈಲ್ ಹೋಮ್ ಸ್ಕ್ರೀನಲ್ಲಿ ಒಂದು ಐಕಾನ್ ಬರುತ್ತೆ. ಅದ್ರಲ್ಲಿ ನೀವು ಆಯ್ಕೆ ಮಾಡಿದ ವ್ಯಕ್ತಿ ಅಥವಾ ಗುಂಪಿನ ಫೋಟೋ ಇರುತ್ತೆ. ಇಲ್ಲಿ ಯಾಂಡ್ರಾಯ್ಡಲ್ಲಿ ಮಾಡೋ ರೀತಿ ಹೇಳಿದಿವಿ. ವಿಂಡೋಸ್ ಫೋನಲ್ಲಿ ಬೇರೆ ಥರ ಇರುತ್ತೆ. 

11. ಫೋನನ್ನ ಅನ್ಲಾಕ್ ಮಾಡದೇ, ವಾಟ್ಸಪಿಗೆ ಹೋಗದೇ ಮೆಸೇಜುಗಳಿಗೆ ಉತ್ತರ ಕೊಡಬೋದು (ಯಾಂಡ್ರಾಯ್ಡಲ್ಲಿ ಮಾತ್ರ)

Settingsಗೆ ಹೋಗಿ -> Notifications ಅನ್ನೋಕಡೆ  ->  "Always show popup" ಅನ್ನೋದನ್ನ ಆಯ್ಕೆ ಮಾಡ್ಕೊಳಿ. ಆಗ ನಿಮ್ಮ ಮೊಬೈಲ್ ಲಾಕ್ ಸ್ಕ್ರೀನಿನ ಮೇಲೇ ಮೆಸೇಜ್ ಬರುತ್ತೆ. ಹಾಗೇ ಅಲ್ಲೇನೇ ಉತ್ತರ ಟೈಪ್ ಮಾಡಕ್ಕೂ ಅವಕಾಶ ಇರುತ್ತೆ. ಫೋನನ್ನ ಅನ್ಲಾಕ್ ಮಾಡೋದೂ ಬೇಡ, ವಾಟ್ಸಪ್ಗೆ ಹೋಗೋದೂ ಬೇಡ.

12. ಮೊಬೈಲೇ ಆಗಬೇಕು ಅಂತಿಲ್ಲ, ಲ್ಯಾಪ್‍ಟಾಪಲ್ಲೂ ವಾಟ್ಸಪ್ ಬಳಸ್ಬೋದು

ನೀವು ಕಂಪ್ಯೂಟರ್/ಲ್ಯಾಪ್‍ಟಾಪ್ ಇದ್ರೂ ವಾಟ್ಸಪ್ ಬಳಸ್ಬೋದು, ಮೊಬೈಲೇ ಆಗಬೇಕು ಅಂತಿಲ್ಲ.

ಅದಕ್ಕೆ ನೀವು web.whatsapp.comಗೆ ಹೋಗಿ, ಅಲ್ಲಿ Settingsನಲ್ಲಿ -> WhatsApp Web on your phone ಆಯ್ಕೆ ಮಾಡಿ. ಅಲ್ಲಿ ಒಂದು QR code ತೋರಿಸುತ್ತೆ. ಆ QR ಕೋಡನ್ನ ನಿಮ್ಮ ಮೊಬೈಲಿಂದ ಸ್ಕ್ಯಾನ್ ಮಾಡಿ.  ಈ ಈಡು ಜೋಡು ಸರಿಹೋಗಬೇಕು ಅಂದ್ರೆ ನಿಮ್ಮ ಮೊಬೈಲು ಆನ್ ಆಗೇ ಇರಬೇಕು, ಕಂಪ್ಯೂಟರ್ ಮತ್ತೆ ಮೊಬೈಲು ಒಂದೇ ವೈಫೈಗೆ ಕನೆಕ್ಟ್ ಆಗಿರ್ಬೇಕು, ಅಲ್ದೇ ಮೊಬೈಲು ಕಂಪ್ಯೂಟರ್ ಹತ್ರಾನೇ ಇರ್ಬೇಕು.

ನಿಮ್ಗೆ ಯಾವಾಗ್ಲೂ ಲ್ಯಾಪ್ಟಾಪಲ್ಲಿ ವಾಟ್ಸಪ್ ಬೇಕೇಬೇಕು ಅಂದ್ರೆ ವಾಟ್ಸಪ್ ಡೆಸ್ಕ್ಟಾಪ್ ಯಾಪ್ ಇರುತ್ತ, ಅದನ್ನ ಲ್ಯಾಪ್‍ಟಾಪಲ್ಲಿ ಹಾಕ್ಕೊಳಿ. ಮತ್ತೆ QR ಕೋಡ್ ಸ್ಕ್ಯಾನ್ ಮಾಡಿ, ಫೋನನ್ನ ಹತ್ರಾನೇ ಇಟ್ಕೊಳಿ, ಆಗ ಲ್ಯಾಪ್‍ಟಾಪಲ್ಲೂ ವಾಟ್ಸಪ್ ಕೆಲ್ಸ ಮಾಡುತ್ತೆ.

13. ಫೋನಿಂದ ಕಂಪ್ಯೂಟರಿಗೆ, ಕಂಪ್ಯೂಟರಿಂದ ಫೋನಿಗೆ ಫೈಲುಗಳನ್ನ ಕಳಿಸ್ಬೋದು

ಈ ಕೆಲ್ಸ ಮಾಡಕ್ಕೆ ಸೊಲ್ಪ ಶಕುನಿ ತಲೆ ಬೇಕು... ಏನ್ಮಾಡಿ ಗೊತ್ತಾ...
    - ಯಾರಾದ್ರೂ ಒಬ್ಬ ಸ್ನೇಹಿತನ್ನ ಸೇರ್ಸಿ ಒಂದು ಗುಂಪನ್ನ ಹುಟ್ಟಾಕಿ, ಆಮೇಲೆ ಆ ಸ್ನೇಹಿತನ್ನೂ ಗುಂಪಿಂದ ತೆಗೆದುಬಿಡಿ
    - ಮೇಲೆ ಹೇಳ್ದಂಗೆ QR ಕೋಡಿಂದ ಕಂಪ್ಯೂಟರು ಮತ್ತೆ ಮೊಬೈಲನ್ನ ಜೋಡಿಸ್ಕೊಳಿ
    - ಈಗ ನಿಮ್ಮ ಮೊಬೈಲಿಂದ ಯಾವ ಫೈಲು ಕಳಿಸ್ಬೇಕೋ ಆ ಫೈಲನ್ನ ಆ ಗುಂಪಿಗೆ ಕಳ್ಸಿ
    - ಕಂಪ್ಯೂಟರಲ್ಲಿ ಇರೋ ವಾಟ್ಸಪ್ಪಲ್ಲಿ ಅದೇ ಫೈಲನ್ನ ಕಂಪ್ಯೂಟರಿಗೆ ಇಳಿಸ್ಕೊಳಿ

14. ಹೋಮ್ ಸ್ಕ್ರೀನಲ್ಲಿ ಬೇಡ ಅಂದ್ರೂ ಮೆಸೇಜಿನ ಮೊದಲ್ನೇ ಕೆಲವು ಪದಗಳು ಬಂದುಬಿಡುತ್ವೆ... ಅದನ್ನೂ ತಡೀಬೋದು

Settingsಗೆ ಹೋಗಿ -> Notifications ಒತ್ತಿ -> disable Show Preview ಆಯ್ಕೆ ಮಾಡ್ಕೊಳಿ

15. ಹೃದಯದ ಆಕಾರದ ಬೊಂಬೇನ ಡವ ಡವ ಅಂತ ಬಡಿಯೋ ಹಾಗೆ ವಾಟ್ಸಪ್ಪಲ್ಲೇ ಕಳಿಸ್ಬೋದು

ಕೆಂಪಗಿರೋ ಹೃದಯದ ಬೊಂಬೇನ ಕಳ್ಸಿ ಸಾಕು... ಅದೇ ಡವ ಡವ ಅಂತಾ ಹೋಗುತ್ತೆ... ಅಲ್ದೇ ದೊಡ್ಡದಾಗೂ ಕಾಣುತ್ತೆ..

ವಿಷಯ ಗೊತ್ತಾಯ್ತಾ? ಈಗ ವಾಟ್ಸಪ್ನ ಇನ್ನೂ ಚೆನ್ನಾಗಿ ಬಳಸಬಹುದು ಅನ್ನಿಸ್ತಾ?

ಚಿತ್ರಗಳು: ಮೂಲ ಹೊರಚಿತ್ರ: ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಉಗುರಿಗೆ ಟೂತ್‍ಪೇಸ್ಟ್ ಹಚ್ಚಿಕೊಳೋದ್ರಿಂದ ಏನ್ ಲಾಭ ಸಿಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯಾವನಿಗ್ ಗೊತ್ತಿತ್ತು?

ಬೆರಳು

ನಿಮ್ಮ ಕೈ ಉಗುರು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿದ್ಯಾ?

ಮೂಲ

ಡಾರ್ಕ್ ಬಣ್ಣದ ನೇಲ್ ಪಾಲಿಶ್ ಹೆಚ್ಚಿಕೊಂಡು ತೆಗೆದರೆ ಹೀಗಾಗಬಹುದು. ಇಲ್ಲಾ ಸಿಗರೇಟ್ ಹಿಡ್ಕೊಳೋದ್ರಿಂದಾನೂ ಹೀಗಾಗಬಹುದು...

ಕಾರಣ ಏನೇ ಇರಲಿ, ಇದಕ್ಕೆ ಒಂದು ಸುಲಭವಾದ ಉಪಾಯ ಇದೆ...

ಮಾಮೂಲಿ ಟೂತ್‍ಪೇಸ್ಟ್ ತೊಗೊಂಡು...

ಮೂಲ

ಉಗುರಿಗೆ ಹಚ್ಚಿ 10 ನಿಮಿಷ ಹಾಗೇ ಬಿಟ್ಟುಬಿಡಿ. ಆಮೇಲೆ ತೊಳ್ಕೊಳಿ.

ಮೂಲ

ಹೀಗೆ ದಿನ ಬಿಟ್ಟು ದಿನ ಮಾಡಿ. 1 ವಾರದಲ್ಲಿ ಹಳದಿ ಬಣ್ಣ ಮಾಯ!

ಕೆಲವರಿಗೆ ಇನ್ನೂ ಹೆಚ್ಚು ದಿನ ತೊಗೋಬೋದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: