ಈ 13 ಸಲಹೆಗಳ್ನ ಗಂಭೀರವಾಗಿ ತೊಗೊಂಡ್ರೆ ಎಂಥಾ ಕಷ್ಟದಿಂದ ಬೇಕಾದರೂ ಪಾರಾಗ್ತೀರಿ

ಎಲ್ಲರಿಗೂ ಅನ್ವಯಿಸುವ ಸಲಹೆಗಳಿವು

ಬೇಜಾರು

ಮೂಲ

ಕಷ್ಟ ಅನ್ನೋದು ನಮ್ಮೆಲ್ಲರಿಗೂ ಬಂದಿದೆ, ಎಲ್ಲರೂ ಅದರಿಂದ ಹೊರಕ್ಕೂ ಬಂದಿದೀವಿ. ಆದರೆ ಕಷ್ಟದಿಂದ ಹೊರಬರೋದು ಎಲ್ಲರಿಗೂ ಸುಲಭ ಏನಲ್ಲ. ಕೆಲವರು ಬಹಳ ಬೇಗ ಹೊರಕ್ಕೆ ಬರ್ತಾರಲ್ಲ, ಅದು ಹೇಗೆ? ನಿಜವಾಗಲೂ ನೋಡಿದರೆ ಅದಕ್ಕೆ ಕಾರಣ ಅವರ ದೃಷ್ಟಿಕೋನ. ಈ 13 ಸಲಹೆಗಳ್ನ ನೀವು ನೆನಪಲ್ಲಿ ಇಟ್ಕೊಂಡ್ರೆ ಕಷ್ಟ ಬಂದಾಗ ನಿಮ್ಮ ಸಹಾಯಕ್ಕೆ ಬರ್ತವೆ:

1. ಇರೋದನ್ನ ಇದೆ ಅಂತ ಒಪ್ಕೊಳಿ

ಬುದ್ಧ ಹೇಳುವ ಪ್ರಕಾರ ಇರೋದನ್ನ ಇದೆ ಅಂತ ಒಪ್ಕೊಳ್ದೆ ಇರೋದರಿಂದಲೇ ಮನುಷ್ಯ ದುಃಖ ಅನುಭವಿಸೋದು. ಸ್ವಲ್ಪ ಯೋಚಿಸಿ ನೋಡಿ, ನಿಮಗೇ ಅರ್ಥವಾಗುತ್ತೆ. ಮನುಷ್ಯರು, ವ್ಯವಸ್ಥೆಗಳು... ಇವೆಲ್ಲ ಹೇಗೆದೆಯೋ ಅದನ್ನ ಹಾಗೇ ಒಪ್ಪಿಕೊಳ್ಳದೆ ಇರೋದ್ರಿಂದಾನೇ ನಮಗೆ ದುಃಖ ಆಗೋದು... ಹೌದು ತಾನೇ? ನಿಮಗೆ ಅದನ್ನ ಬದಲಾಯಿಸಕ್ಕೆ ಆದ್ರೆ ಬದಲಾಯಿಸಿ. ಆಗದೆ ಹೋದರೆ ನಿಮ್ಮ ಮುಂದೆ ಎರಡು ದಾರಿ ಇದೆ: (1) ಇರೋದನ್ನ ಇರೋಹಾಗೆ ಒಪ್ಕೊಂಡು ಮುಂದುವರೆಯೋದು, (2) ಒಪ್ಪಿಕೊಳ್ಳದೆ ದುಃಖ ಅನುಭವಿಸೋದು. ಆಯ್ಕೆ ನಿಮ್ಮದು.

2. ಇದೆ ಅನ್ಕೊಂಡ್ರೆ ಮಾತ್ರ ತೊಂದರೆ

ಎಷ್ಟೋ ಸಲ ನಾವೇ ನಮ್ಮ ವೈರಿಗಳಾಗಿಬಿಡ್ತೀವಿ... ಯಾಕಂದ್ರೆ ತೊಂದರೆ ಇದೆ ಇದೆ ಇದೆ ಅಂತ ಅನ್ಕೋತಿರೋದ್ರಿಂದಲೇ ತೊಂದರೆ ಹುಟ್ಟಿಕೊಂಡು ಕೆಟ್ಟ ಯೋಚನೆಗಳು ಶುರು ಆಗ್ತವೆ. ಇದರ ಬದಲು ‘ಇದು ನನಗೆ ಪಾಠ ಕಲಿಸಕ್ಕೆ ಬಂದಿರೋ ಪರಿಸ್ಥಿತಿ’ ಅಂತಲೋ ಇನ್ಯಾವುದೋ ರೀತಿಯಲ್ಲೋ ಯೋಚನೆ ಮಾಡಿದರೆ ತೊಂದರೆ ಮಾಯ ಆಗಿಹೋಗುವ ಸಾಧ್ಯತೇನೂ ಇರುತ್ತೆ.

3. ಬದಲಾವಣೆ ಆಗಬೇಕು ಅನ್ನೋದಾದರೆ ಅದನ್ನ ನಿಮ್ಮಿಂದಾನೇ ಶುರು ಮಾಡಿ

ಎಷ್ಟೋ ಸಲ ಪ್ರಪಂಚದಲ್ಲಿ ಅದು ಸರೀಗಿಲ್ಲ ಇದು ಸರೀಗಿಲ್ಲ ಅಂತ ನೊಂದುಕೊಂಡು ಕೂತಿರ್ತೀವಿ. ಅದು ಬದಲಾಗಲ್ಲ, ನಮ್ಮ ನೋವು ಹೋಗಲ್ಲ. ಈ ಕಷ್ಟದಿಂದ ಪಾರಾಗಕ್ಕೆ ಮೊದಲು ನಾವು ನಮ್ಮಲ್ಲೇ ಬದಲಾವಣೆ ತಂದುಕೋಬೇಕು. ಅದರಿಂದ ಪ್ರಪಂಚ ಬದಲಾಗುವ ಸಾಧ್ಯತೆ ಇರುತ್ತೆ... ಬದಲಾಗದೆ ಹೋದರೂ ನಮಗೆ ಬೇಕಾದ ಪ್ರಪಂಚ ಕಟ್ಟೋದರಲ್ಲಿ ನಮ್ಮ ಕೆಲಸ ನಾವು ಮಾಡಿದೀವಿ ಅನ್ನೋ ತೃಪ್ತಿ ನಮಗಿರುತ್ತೆ.

4. ಸೋಲು ಅನ್ನೋದೇನೂ ಇಲ್ಲ. ಇರೋದು ಕಲಿಯುವುದಕ್ಕೆ ಅವಕಾಶಗಳು ಮಾತ್ರ.

‘ಸೋಲು’ ಅನ್ನೋ ಪದವನ್ನೇ ನಿಮ್ಮ ತಲೆಯಿಂದ ತೆಗೆದು ಹಾಕಿಬಿಡಿ. ಜೀವನದಲ್ಲಿ ಉದ್ಧಾರ ಆಗಿರೋರೆಲ್ಲ ಸೋತೇ ಗೆದ್ದಿರೋದು. ಒಂದಲ್ಲ ಎರಡಲ್ಲ, ಹಲವಾರು ಸಲ ಸೋತೇ ಜನ ಗೆಲ್ಲೋದು. ಈ ‘ಸೋಲು’ಗಳಿಂದ ಏನು ಕಲೀಬೇಕೋ ಅದನ್ನ ಕಲಿತು ಮುನ್ನುಗ್ಗೋದು ಕಲ್ತುಕೊಳ್ಳಿ.

5. ನಿಮಗೆ ಬೇಕಾಗಿದ್ದು ಸಿಗದೆ ಹೋದರೆ ಇನ್ನೂ ಚೆನ್ನಾಗಿರೋದು ಏನೋ ಬರ್ತಿದೆ ಅಂತ ಅರ್ಥ

ಇದನ್ನ ನಂಬೋದು ಕಷ್ಟ ಅನ್ನಿಸಬಹುದು, ಆದರೆ ನಿಜ. ನಿಮ್ಮ ಜೀವನದಲ್ಲಿ ಹಿಂದೆ ನಡೆದಿರೋದರ ಬಗ್ಗೆ ಯೋಚಿಸಿ ನೋಡಿ, ಆಗ ನಿಮಗೇ ಗೊತ್ತಾಗುತ್ತೆ... ಹಿಂದೆ ನಿಮಗೆ ಸಿಗದೆ ಹೋಗಿರೋದು ನಿಮಗೆ ಒಳ್ಳೇದೇ ಆಗಿದೆ ಅಂತ. ನೀವು ಇಷ್ಟ ಪಡ್ತಿದ್ದ ಕೆಲಸ ಸಿಕ್ಕಲಿಲ್ಲ ಅನ್ಕೊಳ್ಳಿ... ಅದರಲ್ಲಿ ನಿಮಗೆ ಬೇಕಾದಷ್ಟು ಫ್ರೀ ಟೈಮ್ ಸಿಗ್ತಿತ್ತು ಅಂತ ಏನ್ ಗ್ಯಾರಂಟಿ? ಅದರ ಬದಲಾಗಿ ಇವತ್ತು ನಿಮಗೆ ಸಿಕ್ಕಿರೋ ಕೆಲಸದಲ್ಲಿ ಸಾಕಷ್ಟು ಫ್ರೀ ಟೈಮ್ ಸಿಗ್ತಿದ್ದರೆ ಅದೇ ವಾಸಿ ಅಲ್ವಾ? ಆಗೋದೆಲ್ಲ ಒಳ್ಳೇದಕ್ಕೇ ಆಗುತ್ತೆ ಅಂತ ನಂಬಿ, ಒಳ್ಳೇದು.

ಮೂಲ

6. ಈಗಿನ ಕ್ಷಣದಲ್ಲಿ ಮೈಮರೆಯೋದನ್ನ ಕಲೀರಿ

ಈ ಕ್ಷಣ ಇನ್ನೆಂದಿಗೂ ಬರಲ್ಲ. ಪ್ರತಿಯೊಂದು ಕ್ಷಣದಲ್ಲೂ ಎಷ್ಟು ಆನಂದ ಇದೆ ಅನ್ನೋದನ್ನ ನೀವು ಅನುಭವಿಸೇ ಕಲೀಬೇಕು. ಈಗಿನ ಕ್ಷಣವನ್ನ ನೀವು ಬಿಟ್ಟುಬಿಟ್ಟರೆ ನಿಮಗೆ ಆನಂದ ಹೇಗೆ ಸಿಕ್ಕೀತು? ಆದ್ದರಿಂದ ಈಗಿನ ಕ್ಷಣದಲ್ಲೇ ಮೈಮರೆತು ಆನಂದದಲ್ಲಿ ಮುಳುಗೋದನ್ನ ಕಲೀರಿ. ಆನಂದ ಅನ್ನೋದು ಯಾವತ್ತೂ ಭವಿಷ್ಯದಲ್ಲೇ ಸಿಗುತ್ತೆ ಅನ್ನೋಹಾಗೆ ಜೀವನ ಮಾಡಿದರೆ ಆ ಭವಿಷ್ಯ ಎಂದಿಗೂ ಬರೋದೇ ಇಲ್ಲ!

7. ಬಯಕೆಗಳಿಗೆ ಅಂಟುಕೊಳ್ಳೋದು ಬಿಟ್ಟುಬಿಡಿ

ಈ ಅಂಟುಕೊಳ್ಳೋದೇ ಒಂದು ದೊಡ್ಡ ಸಮಸ್ಯೆ. ಸಾಮಾನ್ಯವಾಗಿ ಜನರಿಗೆ ಏನಾದರೂ ಬಯಕೆ ಇದ್ದರೆ ಅದನ್ನ ತುಂಬಾ ಹಚ್ಚಿಕೊಂಡಿರ್ತಾರೆ. ಆ ಬಯಕೆ ಈಡೇರದೆ ಹೋದರೆ ಅವರ ತಲೆಮೆಲೆ ಆಕಾಶವೇ ಬಿದ್ದಹಾಗೆ ಆಗುತ್ತೆ. ಈ ಅಂಟಿಕೊಳ್ಳೋದು, ಹಚ್ಚಿಕೊಳ್ಳೋದನ್ನೆಲ್ಲ ಬಿಟ್ಟು ದೂರ ನಿಲ್ಲುವುದನ್ನ ಕಲೀರಿ. ಅಂದರೆ ನೀವು ಬಯಕೇನೇ ಇಟ್ಟುಕೊಳ್ಳಬೇಡಿ ಅಂತ ಅರ್ಥ ಅಲ್ಲ, ಬಯಸಿದ್ದು ಸಿಗದೆ ಹೋದರೆ ತೀರಾ ದುಃಖ ಪಡೋದು, ಸಿಕ್ಕರೆ ತೀರಾ ಸಂತೋಷ ಪಡೋದು... ಇದನ್ನ ಬಿಟ್ಟುಬಿಡಿ.

8. ನಿಮ್ಮ ಹೆದರಿಕೆಗಳ್ನ ಅರ್ಥ ಮಾಡಿಕೊಳ್ಳಿ, ಅದರಿಂದ ಇನ್ನಷ್ಟು ಬೆಳೀರಿ

ಯಾವುದರ ಬಗ್ಗೆ ನಿಮಗೆ ಹೆದರಿಕೆ ಇದೆಯೋ ಅದನ್ನ ಮೊದಲು ಒಪ್ಪಿಕೊಳ್ಳಿ, ಆಮೇಲೆ ನಿಮಗೆ ಯಾಕೆ ಹೆದರಿಕೆ ಇದೆ ಅಂತ ಯೋಚಿಸ್ತಾ ಹೋಗಿ. ಆಗ ನಿಧಾನವಾಗಿ ನಿಮಗೇ ಆ ಹೆದರಿಕೆ ಹೊರಟುಹೋಗುತ್ತೆ. ಹೋದ ಮೇಲೆ ನಿಮಗೇ ನಗು ಬಂದರೂ ಬರಬಹುದು... ಇಷ್ಟಕ್ಕೆ ನಾನು ಹೆದರಿಕೊಳ್ತಾ ಇದ್ದೆನಲ್ಲ ಅಂತ!

9. ಸಂತೋಷ ಪಡಕ್ಕೆ ಹಿಂಜರೀಬೇಡಿ

ಇದನ್ನ ನಂಬಕ್ಕೆ ನಿಮಗೆ ಕಷ್ಟ ಅನ್ನಿಸಬಹುದು, ಆದರೆ ಎಷ್ಟೋ ಜನ ಸಂತೋಷ ಪಡಕ್ಕೆ ಹಿಂಜರೀತಾರೆ. ಅಷ್ಟೇ ಅಲ್ಲ, ಅವರಿಗೆ ಸಂತೋಷವಾಗಿ ಇರೋದು ಹೇಗೆ ಅಂತಾನೂ ಗೊತ್ತಿಲ್ಲ. ಕೆಲವರಿಗೆ ತಮ್ಮ ತೊಂದರೆಗಳು, ಗಲಾಟೆ-ಗದ್ದಲಗಳೆಲ್ಲ ಎಷ್ಟು ಒಗ್ಗಿ ಹೋಗಿರ್ತವೆ ಅಂದ್ರೆ ಅವರಿಗೆ ಅವುಗಳಿಲ್ಲದೆ ಹೋದರೆ ಜೀವನಾನೇ ಮುಂದೆ ಸಾಗಲ್ಲ! ಆದ್ದರಿಂದ ನೀವು ಸಂತೋಷ ಪಡಕ್ಕೆ ಹಿಂಜರೀಬೇಡಿ. ಆ ಸಂತೋಷ ಒಂದೆರಡು ಕ್ಷಣದ್ದೇ ಆಗಿದ್ದರೂ ಅದನ್ನ ಕಡೆಗಣಿಸಿ ಕಷ್ಟಗಳ ಮೇಲೆ ಗಮನ ಹರಿಸಬೇಡಿ.

10. ಇನ್ನೊಬ್ಬರಿಗೆ ಹೋಲಿಸಿಕೊಳ್ಳಬೇಡಿ

ಹೋಲಿಸಿಕೊಳ್ಳಲೇ ಬೇಕು ಅನ್ನೋದಾದರೆ ನಿಮಗಿಂತ ಕಷ್ಟದಲ್ಲಿ ಇರೋರ ಜೊತೆ ಹೋಲಿಸಿಕೊಳ್ಳಿ. ಕೆಲಸ ಇಲ್ಲವಾ? ನಿಮ್ಮ ಅಪ್ಪ ಅಮ್ಮ ನಿಮ್ನ ನೋಡ್ಕೋತಿದಾರೆ ಅಂತ ಖುಷಿ ಪಡಿ... ಯಾಕಂದ್ರೆ ಎಷ್ಟೋ ತಂದೆತಾಯಂದಿರಿಗೆ ಅದನ್ನೂ ಮಾಡಕ್ಕಾಗಲ್ಲ. ನೀವು ನೋಡಕ್ಕೆ ಐಶ್ವರ್ಯ ರೈ ತರಹ ಇಲ್ಲವಾ? ಪರವಾಗಿಲ್ಲ, ಆದರೆ ಎಷ್ಟೋ ಹುಡುಗೀರ್ಗಿಂತ ನೀವು ಚೆನ್ನಾಗಿದೀರಿ ಅನ್ನೋದನ್ನ ಮರೀಬೇಡಿ.

11. ಜನ ನಿಮಗೆ ಕೆಟ್ಟದು ಮಾಡಕ್ಕೆ ಕಾಯ್ತಿದಾರೆ ಅನ್ಕೊಳೋದು ಬಿಟ್ಟುಬಿಡಿ

ಜನ ನಿಮಗೆ ಏನನ್ನೂ ಮಾಡಕ್ಕಾಗಲ್ಲ. ನೀವು ಮಾಡಿಸಿಕೊಂಡರೆ ಮಾತ್ರ ನಿಮಗೆ ಬೇಡದೆ ಇರೋದು ಆಗುತ್ತೆ ಅಷ್ಟೆ. ಆದ್ದರಿಂದ ನಿಮ್ಮ ಜೀವನದಲ್ಲಿ ಏನಾಗುತ್ತೋ ಅದನ್ನೆಲ್ಲ ಪೂರ್ತಿಯಾಗಿ ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಿ. ನಿಮ್ಮ ದಾರಿ ನೀವೇ ನೋಡ್ಕೊಳಿ. ಆಗ ನಿಮಗೆ ಯಾರು ಕೆಟ್ಟದು ಮಾಡಕ್ಕೆ ಸಾಧ್ಯ?

12. ಬದಲಾವಣೆ ಜಗತ್ತಿನ ನಿಯಮ ಅನ್ನೋದನ್ನ ಮರೀಬೇಡಿ

ನಮಗೆ ಬಂದಿರೋ ಕಷ್ಟ ಎಂದೆಂದಿಗೂ ಹೀಗೇ ಇರುತ್ತೆ ಅನ್ಕೊಳಕ್ಕೆ ಯಾವ ಕಾರಣಾನೂ ಇಲ್ಲ. ಈ ಪ್ರಪಂಚದಲ್ಲಿ ಬದಲಾಗದೆ ಇರೋದು ಏನೂ ಇಲ್ಲ. ಆದರೆ ಇದನ್ನು ಕೂಡ ನೆನಪಿಡಿ: ಬದಲಾವಣೆ ತಾನಾಗೇ ಆದರೆ ಅದು ನಿಮಗೆ ಬೇಕಾದ ರೀತಿಯಲ್ಲೇ ಆಗುತ್ತೆ ಅಂತ ಹೇಳಕ್ಕಾಗಲ್ಲ. ಆದ್ದರಿಂದ ಆ ಬದಲಾವಣೇನ ತರೋದರಲ್ಲಿ ನಿಮ್ಮ ಕೈನೂ ಸೇರಿಸಿ.

13. ಜೀವನದಲ್ಲಿ ಅದ್ಭುತಗಳು ನಡೀತವೆ ಅನ್ನೋ ನಂಬಿಕೆ ಇರಲಿ

ನಿಮ್ಮ ಸುತ್ತಮುತ್ತಲಲ್ಲೇ ಅದ್ಭುತಗಳು ನಡೀತಾ ಇರುತ್ತವೆ... ನೀವು ಕಣ್ಬಿಟ್ಟು ನೋಡಬೇಕಷ್ಟೆ. ಸಾವಿನ ಬಾಯಿಗೆ ಹೋದೋರು ವಾಪಸ್ ಬರ್ತಾರೆ, ಕಡು ಬಡತನದಲ್ಲಿದ್ದೋರು ಒಳ್ಳೇ ಜೀವನ ಮಾಡೋಹಂಗೆ ಆಗ್ತಾರೆ, ರೋಗದಿಂದ ನರಳ್ತಾ ಇರೋರಿಗೆ ಗುಣವಾಗುತ್ತೆ... ಇವೆಲ್ಲ ನಡೀತಾನೇ ಇರುತ್ತೆ. ಇವುಗಳು ನಡೀತವೆ ಅನ್ನೋ ನಂಬಿಕೆ ಒಂದಿರಲಿ, ಸಾಕು. ಹೌದು, ಅಷ್ಟೇ ಸಾಕು...

ಮೂಲ

ಈ ಮೇಲಿನ ಮಾತುಗಳ್ನ ನೆನಪಿಟ್ಟುಕೊಳ್ಳಿ, ಆಗ ಯಾವ ಕಷ್ಟವೂ ಕಷ್ಟವಾಗಿ ಉಳಿಯಲ್ಲ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: