ಈ 11 ರೀತಿಯ ಅಪ್ಪುಗೆಗಳಲ್ಲಿ ಯಾವುದಕ್ಕೆ ಏನ್ ಅರ್ಥ ಅಂತ ತಿಳ್ಕೊಂಡಿರಿ ಬೇಕಾಗುತ್ತೆ

ಒಂದೊಂದ್ ಒಂದೊಂಥರ

ಆಪ್ಪುಗೆ

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ರೀತಿಯಲ್ಲಿ ತಬ್ಬಿಕೊಳ್ಳೋ ಸಂದರ್ಭ ಬಂದೇ ಬರುತ್ತೆ. ಸುಖ ದುಃಖ, ನೋವು ನಲಿವು, ಸೋಲು ಗೆಲುವನ್ನು ತಬ್ಬಿಕೊಳ್ಳೋ ಮೂಲಕ ವ್ಯಕ್ತಪಡಿಸ್ತೀವಿ. ತಬ್ಬಿಕೊಳ್ಳೋದ್ರಲ್ಲೂ ನಾನಾ ಬಗೆಗಳಿವೆ ಅಂತ ಸಂಶೋಧಕರು ಕಂಡುಹಿಡಿದಿದ್ದಾರೆ. ಅಷ್ಟೇ ಅಲ್ಲ ಅವುಗಳ ಗುಟ್ಟನ್ನೂ ಬಿಡಿಸಿದ್ದಾರೆ. 

1. ಸೊಂಟ ಬಳಸಿ ಅಪ್ಕೊಳೋದು - ಭರವಸೆ


ನಾನಿದ್ದೀನಿ ಭಯಬೇಡ ಅನ್ನೋ ಭರವಸೆ ನೀಡೋ ಅಪ್ಪುಗೆ ಇದು. ಹೆಣ್ಣಿನ ಬೆನ್ನಿಗೆ ಆಸರೆಯಾಗಿ ನಿಂತಿರುವುದು, ತಬ್ಬಿ ಹಿಡಿದಿರುವ ರೀತಿ ಹೆಣ್ಣಿಗೆ ರಕ್ಷಣೆ ಕೊಡೋ ಭರವಸೆ ನೀಡುತ್ತೆ. ಪ್ರೇಮಿಗಳ ನಡುವಿನ ಅನ್ಯೋನ್ಯತೆಯ ಸಂಕೇತ ಇದು. 

2.  ಒಬ್ಬರನ್ನೊಬ್ಬರು ಬಳಸಿ ಅಪ್ಪಿಕೊಳ್ಳೋದು - ನಂಬಿಕೆ


ಈ ರೀತಿಯ ಅಪ್ಪುಗೆ ನಂಬಿಕೆಯ ಸಂಕೇತ. ಬಿಗಿಯಾಗಿ ಅಪ್ಪಿಕೊಂಡ ಬಳಿಕ ಒಬ್ಬರ ಬೆನ್ನನ್ನು ಮತ್ತೊಬ್ಬರು ನಯವಾಗಿ ತಟ್ಟೋದು, ಉಜ್ಜೋದು ಒಬ್ಬರ ಮೇಲೊಬ್ಬರಿಗೆ ತುಂಬಾ ಭರವಸೆ ಇದೆ ಎಂಬುದನ್ನು ತೋರಿಸುತ್ತದೆ.  ಬೆನ್ನಿ ಹಿಂದಿನಿಂದ ಏನ್ ಬೇಕಾದ್ರೂ ಮಾಡಬಹುದು. ಆದ್ರೆ ಆ ರೀತಿ ನಾನಲ್ಲ ಎಂಬುದನ್ನು ಈ ರೀತಿಯ ಅಪ್ಪುಗೆ ಸೂಚಿಸುತ್ತೆ.

3. ಅಪ್ಪಿಕೊಂಡು ಬೆನ್ನುತಟ್ಟೋದು - ಗೆಳೆತನ


ಇದು ಗೆಳೆತನದ, ಪರಸ್ಪರ ಸಲಿಗೆ, ವಿಶ್ವಾಸ, ನಂಬಿಕೆ, ಗಾಡಸ್ನೇಹದ ಸಂಕೇತ. ಈ ಅಪ್ಪುಗೆಯಲ್ಲಿ ಎಲ್ಲೂ ರೊಮ್ಯಾಂಟಿಕ್ ಭಾವನೆ ಬರಲ್ಲ. ಇದೊಂದು ಅಪ್ಪಟ ಸ್ನೇಹದ ಅಪ್ಪುಗೆ. 

4. ಕೊರಳನ್ನು ಸುತ್ತಿಬಳಸುವ ಅಪ್ಪುಗೆ - ಪ್ರೇಮ


ಇದು ಪ್ರೇಮಿಗಳಿಗೆ ಮೀಸಲಾದ ಅಪ್ಪುಗೆ. ಇಲ್ಲಿ ಗಂಡು-ಹೆಣ್ಣಿನ ನಡುವೆಯ ಪ್ರೀತಿಯನ್ನು ಬಿಟ್ಟು ಬೇರೆ ಯಾವ ಅರ್ಥವೂ ಇಲ್ಲ. ಒಬ್ಬರು ಕೊರಳನ್ನು ಸುತ್ತಿ ಬಳಸಿದರೆ ಇನ್ನೊಬ್ಬರು ಸೊಂಟ ಸುತ್ತಿ ಬಳಸಿ ಅಪ್ಪಿಕೊಳ್ಳೋದು. ಇನ್ನೂ ಈಗಷ್ಟೇ ಪ್ರೀತಿಸುತ್ತಿರೋರ ಅಪ್ಪುಗೆ ಇದು. 

5. ಭುಜ ಬಳಸಿ ಅಪ್ಪುಕೊಳ್ಳೋದು - ಹತ್ತಿರದ ಗೆಳೆತನ


ಇಬ್ಬರು ಏನೋ ಕರಾಮತ್ತು ಮಾಡಿರುವವರ ಅಪ್ಪುಗೆ ಇದು! ಒಮ್ಮೊಮ್ಮೆ ಹತ್ತಿರದ ಫ್ರೆಂಡ್ಸ್ ಕೂಡ ಈ ರೀತಿ ಅಪ್ಪಿಕೊಳ್ತಾರೆ. ಈ ರೀತಿ ಯಾರೇ ಅಪ್ಪಿಕೊಂಡ್ರು ಅದ್ರ ಅರ್ಥ ಎಷ್ಟು ಬಿಗಿಯಾಗಿ ಅಪ್ಪಿಕೊಳ್ತಾರೋ ಅಷ್ಟು ಗಾಢವಾಗಿದೆ ಅವರ ಸಂಬಂಧ ಅಂತ.

6. ಉಸಿರಾಡಕ್ಕೆ ಆಗದಂತೆ ಬಿಗಿದಪ್ಪುವುದು - "ಬಿಟ್ಟಿರಲಾರೆವು"


ಇಬ್ಬರಿಗೂ ಬಿಡಿಸಿಕೊಂಡರೆ ಸಾಕು ಅನ್ನಿಸುತ್ತೆ. ಎಷ್ಟು ಸಾಧ್ಯವೋ ಅಷ್ಟು ಬಿಗಿಯಾಗಿ ಅಪ್ಪಿಕೊಳ್ತಾರೆ. ನಾವಿಬ್ಬರೂ ಬಿಟ್ಟಿರಲಾರೆವು ಎಂಬುದರ ಸಂಕೇತ ಈ ಅಪ್ಪುಗೆ.  

7.  ಎತ್ತಿ ಮುದ್ದಾಡೋ ಅಪ್ಪುಗೆ - ಪ್ರೇಮ


ಇದು ಪ್ರೇಮಿಗಳಿಗೆ ಮಾತ್ರ ಸಂಬಂಧಪಟ್ಟ ಅಪ್ಪುಗೆ. ಒಬ್ಬರನ್ನು ಎತ್ತಿಕೊಂಡೋ ಅಥ್ವಾ ಕೂತ ಭಂಗಿಯಲ್ಲಿ ಅಪ್ಪಿಕೊಳ್ಳೋದು. ಹೆಚ್ಚಿಗೇನು ಹೇಳೋದು ಬೇಡ ಪ್ರೇಮಿಗಳನ್ನು ಪ್ರೇಮಲೋಕದಲ್ಲಿ ತೇಲಾಡಿಸೋ ಅಪ್ಪುಗೆ ಇದು.   

8. ಹಿಂಜರಿಕೆಯ ಅಪ್ಪುಗೆ - ಇನ್ನೂ ಗಟ್ಟಿಯಲ್ಲದ ಪ್ರೇಮ


ಅಪ್ಪಿಕೊಳ್ಳಲೋ ಬೇಡವೋ ಅನ್ನೋ ರೀತಿ ಇರುತ್ತೆ. ಇಬ್ಬರೂ ಸಾಕಷ್ಟು ದೂರ ನಿಂತೇ ಅಪ್ಪಿಕೊಳ್ತಾರೆ. ಇಬ್ಬರ ನಡುವಿನ ಸಂಬಂಧಗಳು ಗಾಢವಾಗಿಲ್ಲ ಎಂಬುದನ್ನು ತೋರಿಸುತ್ತೆ. ಇಬ್ಬರ ನಡುವಿನ ಅಂತರವನ್ನ ಈ ಅಪ್ಪುಗೆ ತೋರಿಸುತ್ತೆ. 

9. ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಅಪ್ಪಿಕೊಳ್ಳೋದು - ಬಿಡಿಸಲಾರದ ಬಾಂಧವ್ಯ


ಇದು ಎರಡು ಮನಸುಗಳನ್ನ ಬೆಸೆಯೋ ಅಪ್ಪುಗೆ. ಇಬ್ಬರೂ ಹೇಗೆ ಅಪ್ಪಿಕೊಂಡರೂ ಪರ್ವಾಗಿಲ್ಲ ಇಲ್ಲಿ ಕಣ್ಣುಕಣ್ಣು ಕಲೆತಾಗ ಮನವು ಉಯ್ಯಾಲೆಯಂತೆ ತೂಗುವುದು ಮುಖ್ಯ. ಇದು ಗಾಢಪ್ರೇಮದ, ಬಿಡಿಸಲಾರದ ಬಾಂಧವ್ಯದ ಸಂಕೇತ ತೋರಿಸುತ್ತೆ.

10. ಒಬ್ಬರು ಮಾತ್ರ ಗಟ್ಟಿಯಾಗಿ ಅಪ್ಪಿಕೊಳ್ಳೋದು - ಒಬ್ಬರು ಮಾತ್ರ ಪ್ರೀತಿಸುತ್ತಿರುವ ಸಂಕೇತ


ಒಬ್ರು ಸುಮ್ನೆ ಇರ್ತಾರೆ ಆದ್ರೆ ಇನ್ನೊಬ್ರು ಬಿಗಿಯಾಗಿ ಅವರನ್ನು ಅಪ್ಪಿಕೊಳ್ತಾರೆ. ಇದು ಇಬ್ಬರ ನಡುವೆ ಸಂಬಂಧಗಳು ತಾಳತಪ್ಪಿವೆ ಎಂಬುದನ್ನು ತೋರಿಸುತ್ತೆ.  ಇಬ್ಬರ ನಡುವೆ ನಿಜವಾದ ಸ್ನೇಹ ಸಂಬಂಧ ಇಲ್ಲ ಎಂಬುದಕ್ಕೆ ನಿದರ್ಶನ ಇದು. 

11. ಒಬ್ಬರ ಜೇಬಲ್ಲಿ ಇನ್ನೊಬ್ರು ಕೈಯಿಟ್ಟು ಅಪ್ಪಿಕೊಳ್ಳೋದು - ಅತಿ ಹೆಚ್ಚು ಸಲುಗೆ


ಇಬ್ಬರ ನಡುವೆ ತುಂಬಾ ಸಲುಗೆ ಇದೆ ಎಂಬುದನ್ನು ಇದು ತೋರಿಸುತ್ತೆ.  ಇಬ್ಬರದ್ದೂ ಒಳ್ಳೆ ಜೋಡಿ ಎಂಬುದನ್ನು ಈ ರೀತಿಯ ಅಪ್ಪುಗೆ ತೋರಿಸುತ್ತೆ. ಸಂಬಂಧ ಇನ್ನಷ್ಟು ಗಟ್ಟಿಯಾಗಲು ಹೆಚ್ಚಿನ ಕಷ್ಟ ಪಡಬೇಕಾಗಿಲ್ಲ ಈ ರೀತಿ ಅಪ್ಪಿಕೊಳ್ಳೋರು. 

ಚಿತ್ರಗಳುಃ ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಉಪವಾಸ ಮಾಡೊದ್ರಿಂದ ಇಷ್ಟೆಲ್ಲಾ ಲಾಭ ಇದೆ ಅಂತ ಗೊತ್ತಾದ್ರೆ ಇನ್ಮೇಲೆ ನೀವೂ ಮಾಡ್ತೀರಿ

ಉಪವಾಸ ಬೇರೆ ಊಟ ಬಿಡೋದ್ ಬೇರೆ

ನಮ್ಮಲ್ಲಿ ಉಪವಾಸ ಮತ್ತೆ ಊಟ ಸ್ಕಿಪ್ ಮಾಡದು ಎರಡೂ ಒಂದೇ ಅನ್ನೊ ಭಾವನೆ ಇದೆ. ಆದರೆ ಅದು ತಪ್ಪು. ಹಾಗೆನೆ ಫಲಾಹಾರ ತಿನ್ಕೊಂಡು ಅದನ್ನ ಉಪವಾಸ ಅನ್ನೋರೂ ಇದಾರೆ. ಅದೂ ತಪ್ಪು ಕಲ್ಪನೆ. ಉಪವಾಸ ಅಂದ್ರೆ ತಿನ್ನಕ್ಕೆ ಸಮಯಯಿಲ್ದೆ ಊಟ ತಿಂಡಿ ಬಿಡೋದೂ ಅಲ್ಲ, ಹಾಲು ಹಣ್ಣು ಇಟ್ಕೊಂಡು ಅರ್ಧ ಹೊಟ್ಟೆ ತಿನ್ನೋದೂ ಅಲ್ಲ. ಬದಲಾಗಿ, ನಮ್ಮ ದೇಹದ ಅಂಗಾಂಗಗಳ್ಗೆ ಆಗಾಗ ರೆಸ್ಟ್ ಕೊಡ್ತ, ಅವುಗಳೂ ಚೂರು ಚೇತರುಸ್ಕೊಂಡು ಇನ್ನೂ ಚೆನ್ನಾಗ್ ಕೆಲ್ಸ ಮಾಡೋಹಾಗೆ, ಅವುಗಳಲ್ಲಿರೋ ವಿಷಕಾರಿ ಅಂಶ ಹೊರಗೋಗೋ ಹಾಗೆ ನೋಡ್ಕೊಳೋದು. ಇನ್ನು ಈ ಉಪವಾಸದಿಂದ ಏನೇನೆಲ್ಲ ಲಾಭ ಇದೆ ಅಂತ ಗೊತ್ತಾದ್ರೆ, ಖಂಡಿತ ತಿಂಗಳಿಗ್ ಒಂದೋ ಎರಡೋ ದಿನ ಉಪವಾಸ ಮಾಡೋ ಮನಸ್ಸು ಮಾಡ್ತಿರ.

ಉಪವಾಸ ಮಾಡೋದ್ರಿಂದ ಏನೇನಾಗತ್ತೆ ನಿಮ್ಗೋಸ್ಕರ ಕೊಟ್ಟೀದಿವಿ ಓದ್ನೋಡಿ...

1.  ಎಲ್ಲಕ್ಕಿಂತ ಮೊದ್ಲು ದೇಹದ ತೂಕ ಕಮ್ಮಿಯಾಗತ್ತೆ

ತೂಕ ಕಮ್ಮಿ ಮಾಡ್ಕೊಳಕ್ಕೆ, ಉಪವಾಸ ಮಾಡೋದು ತುಂಬ ಸುರಕ್ಷಿತವಾದ ವಿಧಾನ. ಎಷ್ಟೊಂದು ರಿಸರ್ಚ್ ಪ್ರಕಾರ, ನಿಮಗೆ ಸಾಧ್ಯವಾದಷ್ಟು ಕಾಲ ಆಗಾಗ ಉಪವಾಸ ಮಾಡಿದ್ರೆ, ದೇಹದಲ್ಲಿರೊ ಕೊಬ್ಬಿನ ಕೋಶಗಳು ಬರ್ನ್ ಆಗಿ, ಮಾಮೂಲಿ ಪಥ್ಯ ಮಾಡಕ್ಕಿಂತಾನೂ ಒಂದ್ ಕೈ ಹೆಚ್ಚಾಗೇ ತೂಕ ಕಮ್ಮಿಯಾಗತ್ತೆ.

ಹೇಗೆ ಅಂದ್ರೆ... ದೇಹದ ಕೊಬ್ಬು ನಮ್ಗೆ ದಿನನಿತ್ಯ ಕೆಲ್ಸ ಮಾಡಕ್ಕೆ ಬೇಕಾಗಿರೋಷ್ಟು ಶಕ್ತಿ ಕೊಡತ್ತೆ. ಜೊತೆಗೆ ದೇಹದಲ್ಲಿರೊ ಸಕ್ಕರೆ ಅಂಶಾನ ಇದಕ್ಕೋಸ್ಕರ ಬಳ್ಸಲ್ಲ. ಈ ವಿಷ್ಯ ಗೊತ್ತಾದ್ದಾಗಿಂದ ಎಷ್ಟೊಂದ್ ಜನ ಕ್ರೀಡಾಪಟುಗಳು ಕಾಂಪಿಟಿಷನ್ಗೋಸ್ಕರ ಆಗಾಗ ಉಪವಾಸ ಮಾಡಿ ತಮ್ಮ ದೇಹದ ತೂಕನ ಒಂದು ಲೆವೆಲ್ಗೆ ಕಮ್ಮಿ ಮಾಡ್ಕೊಳ್ಳೊ ಅಭ್ಯಾಸ ಇಟ್ಕೊಂಡಿದಾರಂತೆ. 

ಮೂಲ

2. ಇನ್ಸುಲಿನ್ ಪರಿಣಮಕಾರಿಯಾಗಿ ಕೆಲ್ಸ ಮಾಡತ್ತೆ

ಇನ್ಸುಲಿನ್ ನಮ್ ದೇಹಕ್ಕೆ ಎಷ್ಟ್ ಮುಖ್ಯ ಅಂತ ಗೊತ್ತೇ ಇದೆ. ಒಂದ್ಸಲ ಜಾಸ್ತಿ ಪ್ರಮಾಣ್ದಲ್ಲಿ ಬೇಕಾಗಿದ್ರೆ, ಇನ್ನೊಂದ್ಸಲ ಕಮ್ಮಿ ಬೇಕಾಗತ್ತೆ. ಇದನ್ನ ಸರಿಯಾಗಿ ನಿಭಾಯ್ಸೋದಕ್ಕೆ, ಇನ್ಸುಲಿನ್ ಅಗತ್ಯಕ್ಕೆ ತಕ್ಕಹಾಗೆ ಕೆಲ್ಸ ಮಾಡಕ್ಕೆ, ಉಪವಾಸ ಸಹಾಯ ಮಾಡತ್ತೆ.

ಇನ್ನೂ ಹೇಳ್ಬೇಕು ಅಂದ್ರೆ...ಸಕ್ಕರೆ ಮಟ್ಟವನ್ನ ಕಂಟ್ರೋಲ್ ಆಗತ್ತೆ. ಆಗಾಗ ಉಪ್ವಾಸ ಮಾಡೋದ್ರಿಂದ, ರಕ್ತಕ್ಕೆ ಗ್ಲೂಕೋಸ್ ಸರ್ಯಾದ ಪ್ರಮಾಣದಲ್ಲಿ ಪೂರೈಕೆ ಆಗತ್ತೆ.

ಮೂಲ

3. ಜೀರ್ಣಶಕ್ತಿ ಜಾಸ್ತಿ ಆಗತ್ತೆ

ಉಪವಾಸ ಮಾಡಿದಾಗ ಜೀರ್ಣಾಂಗಕ್ಕೆ ಒಳ್ಳೆ ರೆಸ್ಟ್ ಸಿಗತ್ತೆ. ಜೀರ್ಣಶಕ್ತಿ ಚೆನ್ನಾಗಿಲ್ಲ ಅಂದ್ರೆ, ಪಚನಕ್ರಿಯೆ ಸರಿಯಾಗ್ ಆಗಲ್ಲ. ಇದ್ರಿಂದ ಕೊಬ್ಬಿನಂಶ ಬರ್ನ್ ಆಗಲ್ಲ. ಕರುಳು ಸರ್ಯಾಗಿ ಕ್ಲೀನ್ ಆಗತ್ತೆ.

ಮೂಲ

4. ಆಯಸ್ಸು ಹೆಚ್ಚತ್ತೆ

ನಂಬ್ತಿರೋ ಇಲ್ವೋ ನಿಮಗ್ಬಿಟ್ಟಿದ್ದು ಆದ್ರೆ, ಕಮ್ಮಿ ತಿಂದಷ್ಟೂ ಜಾಸ್ತಿ ವರ್ಷ ಬದಕ್ತಿರ. ಕೆಲವು ಜನಾಂಗದ್ ಜನ ಈ ವಿಷ್ಯದಲ್ಲಿ ಕಟ್ಟುನಿಟ್ಟಾಗಿ ಪಥ್ಯ ಮಾಡ್ತಿರೋದ್ರಿಂದ ಅವ್ರ ಜೀವಿತಾವಧಿ ಜಾಸ್ತಿಯಾಗಿದೆ ಅಂತ ಎಷ್ಟೊಂದ್ ಸ್ಟಡಿಗಳೂ ಹೇಳತ್ವೆ.

ಇದರ ಹಿಂದೆ ಇರೋ ಲಾಜಿಕ್ ಏನಪ್ಪ ಅಂತೀರ? ಜೀರ್ಣಕ್ರಿಯೆ ನಿಧಾನ್ವಾಗ್ ಆಗೋದೂ, ಬೇಗ ವಯಸ್ಸಾಗಕ್ಕೆ ಒಂದ್ ದೊಡ್ಡ ಕಾರಣವಂತೆ. ಯಂಗಾಗಿ ಇರ್ಬೇಕು ಅಂದ್ರೆ ಆಗಾಗ ಉಪ್ವಾಸ ಮಾಡ್ಕೊಂಡು ಜೀರ್ಣಾಂಗಕ್ಕೆ ಒತ್ತಡ ಕಮ್ಮಿ ಮಾಡ್ಕೊಬೇಕು.

ಅದಕ್ಕೇ ತಾನೇ ಸಿರಿಧಾನ್ಯಗಳು ಈಗೀಗ ಮತ್ತೆ ಪ್ರಚಾರಕ್ಕೆ ಬರ್ತಿದೆ.

ಮೂಲ

5. ದಿನನಿತ್ಯ ಚೆನ್ನಾಗಿ ಹಸಿವಾಗತ್ತೆ

ದಿನಕ್ಕೆ 4 ಹೊತ್ತೂ ಹೊಟ್ಟೆ ತುಂಬಾ ತಿನ್ತಿದ್ರೆ ನಿಜವಾದ ಹಸಿವು ಏನು ಅಂತ ಹೇಗ್ ಗೊತ್ತಾಗತ್ತೆ ಹೇಳಿ? ಇದು ಗೊತ್ತಾಗ್ಬೇಕು ಅಂದ್ರೆ ಕನಿಷ್ಟ 12 ರಿಂದ 24 ಗಂಟೆ ಉಪವಾಸ ಇರ್ಬೇಕು.

ಉಪವಾಸ, ದೇಹದಲ್ಲಿರೊ ಹಾರ್ಮೋನ್ಗಳ್ನ ಆಕ್ಟಿವ್ ಮಾಡಿ ನಿಜವಾದ್ ಹಸಿವು ಏನಂತ ತೋರ್ಸತ್ತೆ. ಇನ್ನು ಬೊಜ್ಜಿರೋರ್ಗಂತೂ ಯಾವಾಗ್ ಹಸ್ವಾಗತ್ತೆ ಅಂತ ಗೊತ್ತಾಗದೇ ಇಲ್ಲ. ಹಸಿವಿರ್ಲಿ ಇಲ್ದೇ ಇರ್ಲಿ ಆಗಾಗ ಬ್ಯಾಟಿಂಗ್ ಮಾಡ್ತನೇ ಇರ್ತಾರೆ. ಅಂಥವ್ರಿಗೆ ಆಗಾಗ ಒಳ್ಗಡೆಯಿಂದ ಸಿಗ್ನಲ್ ಕೊಡಕ್ಕೆ ಈ ಉಪವಾಸ ಸಹಾಯ ಮಾಡತ್ತೆ.

ಉಪವಾಸ ರಿಸೆಟ್ ಬಟನ್ ಇದ್ದಹಾಗೆ: ಹೆಚ್ಚು ಹೊತ್ತು ಉಪವಾಸ ಮಾಡಿದಷ್ಟೂ ಸರಿಯಾಗಿರೋ ಹಾರ್ಮೋನ್ ಬಿಡುಗಡೆ ಮಾಡಕ್ಕೆ ದೇಹ ತನ್ನನ್ನ ತಾನು ರೆಡಿ ಮಾಡ್ಕೊಳತ್ತೆ. ಆಗ ನಿಜವಾದ ಹಸಿವಿನ ಮಹತ್ವ ಗೊತ್ತಾಗತ್ತೆ. ಇಲ್ಲಿ ಇನ್ನೊಂದ್ ವಿಷ್ಯ ಅಂದ್ರೆ ಹಾರ್ಮೋನ್ಗಳು ಸರಿಯಾಗ್ ಕೆಲ್ಸ ಮಾಡಿದ್ರೆ, ಬೇಗ ಹೊಟ್ಟೆ ತುಂಬತ್ತೆ. ಕುತ್ತಿಗೆಗ್ ಬರೋವರ್ಗೂ ತಿಂದು ತೊಂದ್ರೆ ಅನುಭವಿಸೋದು ತಪ್ಪತ್ತೆ.

ಮೂಲ

6. ತಿನ್ನೋ ಪದ್ಧತಿ ಸುಧಾರಿಸತ್ತೆ

ಹೊತ್ತೊತ್ತಿಗೆ ಸರಿಯಾಗ್ ತಿನ್ನೋ ಅಭ್ಯಾಸ ಇಲ್ದೋರಿಗೆ, ಕೆಲಸದ ಮಧ್ಯ ಊಟ ತಿಂಡಿಗೆ ಸಮಯ ಮಾಡ್ಕೊಳಕ್ ಆಗ್ದೇ ಇರೋರ್ಗೆ ಈ ಉಪವಾಸ ಒಂದು ವರ ಅಂತ ಹೇಳ್ಬೋದು.

ಆಗಾಗ ಉಪವಾಸ ಮಾಡ್ತಿದ್ರೆ, ಯಾವತ್ತಾದ್ರು ಮಧ್ಯಾಹ್ನದ್ ಊಟ ಸ್ಕಿಪ್ ಮಾಡ್ಬೇಕಾಗ್ ಬಂದಾಗ ಯಾವ್ ತೊಂದ್ರೆನೂ ಆಗಲ್ಲ. ನಿಮ್ ಲೈಫ್ ಸ್ಟೈಲ್ಗೆ ಹೊಂದ್ಕೊಂಡೋಗತ್ತೆ. ಜೊತೆಗೆ, ಯಾರು ಈ ಥರ ಟೈಮ್ ಟೈಮ್ ಗೆ ಸರಿಯಾಕ್ ತಿನ್ನಕ್ ಆಗಲ್ವೋ ಅಂಥೋರ್ಗೆ, ಆ ದಿನಕ್ಕೆ ಬೇಕಾಗಿರೋಷ್ಟು ಕ್ಯಾಲೋರಿನ ಒಂದೇ ಸಲ ತಿಂದು, ಮತ್ತೆ ಮುಂದಿನ್ ದಿನದ್ ವರ್ಗೂ ಊಟ ತಿಂಡಿ ಬಗ್ಗೆ ಯೋಚ್ನೆ ಮಾಡ್ದೇ ಇರೋ ಹಾಗೆ ಮಾಡತ್ತೆ.

ಮೂಲ

7. ಮೆದುಳು ಚುರುಕಾಗತ್ತೆ

ಮೆದುಳಲ್ಲಿ ಬ್ರೈನ್- ಡಿರೈವ್ಡ್ ನ್ಯೂರೋಟ್ರೋಫಿಕ್ ಫ್ಯಾಕ್ಟರ್ (ಬಿ ಡಿ ಎನ್ ಎಫ್) ಅನ್ನೋ ಪ್ರೋಟೀನ್ ಇರತ್ತೆ. ಉಪವಾಸ ಮಾಡೋದ್ರಿಂದ ಈ ಪ್ರೋಟೀನ್ ಹೆಚ್ಚು ಉತ್ಪತ್ತಿಯಾಗಿ ಮೆದುಳು ಚುರುಕಾಗಿ ಕೆಲ್ಸ ಮಾಡತ್ತೆ.

"ಬಿ ಡಿ ಎನ್ ಎಫ್" ಪ್ರೋಟೀನ್ ಮೆದುಳಿನ ಕೋಶಗಳ್ನ ಆಕ್ಟೀವ್ ಮಾಡಿ, ಹೊಸ ಹೊಸ ನರಕೋಶಗಳಾಗಿ ಬದಲಾಯಿಸತ್ತೆ. ಹಾಗೇನೆ ನರಗಳು ಆರೋಗ್ಯವಾಗಿರಕ್ಕೆ ಬೇಕಿರೋ ಬೇರೆ ಸಾಕಷ್ಟು ರಾಸಾಯನಿಕಗಳ್ನ ಟ್ರಿಗರ್ ಮಾಡತ್ತೆ.

ಇನ್ನೊಂದು ಮುಖ್ಯವಾದ ವಿಷ್ಯ ಅಂದ್ರೆ...ಆಲ್ಜೈಮರ್ ಮತ್ತೆ ಪಾರ್ಕಿನ್ಸನ್ ರೋಗದ ಮುಂದಿನ ಹಂತಗಳು ಬೇಗ ಬೇಗ ಬರ್ದೇಇರೋಹಾಗ್ ಈ ಪ್ರೋಟೀನ್, ಮೆದುಳಿನ ಕೊಶಗಳ್ನ ಕಾಪಾಡತ್ತೆ.

ಮೂಲ

8. ರೋಗನಿರೋಧಕ ಶಕ್ತಿ ಜಾಸ್ತಿಯಾಗೋದು ಖಂಡಿತ

ಆಗಾಗ ಉಪವಾಸ ಮಾಡೋದ್ರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗತ್ತೆ ಯಾಕಂದ್ರೆ ಟೋಟಲ್ಲಾಗಿ ದೇಹಕ್ಕಾಗೋ ಹಾನಿ, ದೇಹದಲ್ಲಿ ಉರಿ, ಊತ ಇದನ್ನೆಲ್ಲಾ ಕಮ್ಮಿ ಮಾಡಿ ಕ್ಯಾನ್ಸರ್ ಬರ್ಸೋ ಜೀವಕೋಶಗಳಿಗೇ ಉಪವಾಸ ಹಾಕತ್ತೆ:-)

ನಮ್ ಸುತ್ತ ಮುತ್ತ ಇರೊ ಪ್ರಕೃತಿನಲ್ಲೂ ಇದನ್ನ ನೋಡ್ಬೋದು. ಪ್ರಾಣಿಗಳು ಹುಷಾರ್ ತಪ್ದಾಗ ಆಹಾರ ತೊಗೊಳೋದನ್ನ ಬಿಟ್ಟು ಉಪವಾಸ ಮಾಡಿ, ವಿಶ್ರಾಂತಿ ತೊಗೊಳತ್ವೆ. ಇದು ದೇಹದ ಒಳಗಿರೊ ಅಂಗಾಂಗಕ್ಕೆಲ್ಲ ಕೆಲ್ಸ ಕಮ್ಮಿ ಮಾಡಿ, ಇನ್ಫೆಕ್ಷನ್ ವಿರುದ್ಧ ದಾಳಿಮಾಡೋ ಶಕ್ತಿ ಕೊಡತ್ತೆ. ನಾವು ಮನುಷ್ಯ್ರು ಮಾತ್ರ ಬೇಕಿರ್ಲಿ, ಬೇಡ್ದೆಯಿರ್ಲಿ, ಚೆನ್ನಾಗಿರ್ಲಿ, ಹುಷಾರ್ ತಪ್ಪಿರ್ಲಿ, ತಿನ್ನಕ್ ಏನು ಅಂತ ತಲೆಕೆಡುಸ್ಕೊಳೋದು!!!! ತಿನ್ನೋದು ಆಮೇಲೆ ಗ್ಯಾಸ್ ಅಂತ ಮಾತ್ರೆ ತೊಗೊಳ್ಳೊದು ಈಗಿನ ಟ್ರೆಂಡ್ :-(

ಮೂಲ

9. ಉಪವಾಸದಿಂದ ಆತ್ಮ ಶುದ್ಧಿ, ಜ್ಞಾನೊದಯ ಆಗತ್ತೆ

ಉಪವಾಸ ಎಷ್ಟೊಂದ್ ಜನಕ್ಕೆ ಓದು, ಧ್ಯಾನ, ಯೋಗ, ಸಮರಕಲೆ ಇನ್ನು ಹಲಾವಾರು ಥರ ಅಭ್ಯಾಸಗಳ್ನ ತಮ್ಮ ಜೀವನ್ದಲ್ಲಿ ಜೊತೆ ಅಳವಡಿಸ್ಕೊಳಕ್ಕೆ ಸಹಾಯ ಮಾಡಿದೆ. ಹೊಟ್ಟೆ ಖಾಲಿ ಇದ್ರೆ, ಅಲ್ಲಿ ಜಾಸ್ತಿ ಶಕ್ತಿ ಶೇಖರಿಸತ್ತೆ. ಯಾಕಂದ್ರೆ ನಮ್ ದೇಹದಲ್ಲಿ, ತುಂಬ ಶಕ್ತಿ ಹೀರ್ಕೊಂಡು ಕೆಲ್ಸ ಮಾಡೋದು ಜೀರ್ಣಾಂಗ.

ಆತ್ಮ ಶುದ್ಧಿ, ಜ್ಞಾನೋದಯಕ್ಕೂ ಉಪವಾಸಕ್ಕೂ ನಂಟಿದೆ. ಇದು ಮಾನಸಿಕವಾಗಿ, ದೈಹಿಕವಾಗಿ ನೆಮ್ಮದಿಯಾಗಿರಕ್ಕೆ ಸಹಾಯ ಮಾಡತ್ತೆ. ಹಗುರವಾಗಿರೋ ದೇಹ ಮತ್ತೆ ನಮಗೆ ಏನ್ ಬೇಕು ಅಂತ ಸ್ಪಷ್ಟವಾಗಿರೊ ಮನಸ್ಸು ಇದ್ರೆ ಸುತ್ತ ಮುತ್ತ ನಡಿತಿರೋದ್ರ ಬಗ್ಗೆ ಹೆಚ್ಚು ಜಾಗ್ರತೆಯಿಂದ ಇರ್ತಿವೆ. ಜೊತೆಗೆ ಎಲ್ಲದರ ಬೆಲೆನೂ, ಪ್ರಾಮುಖ್ಯತೆನೂ ಗೊತ್ತಾಗತ್ತೆ.

ಮೂಲ

10. ಮೊಡವೆ ತೊಂದ್ರೆ ದೂರವಾಗತ್ತೆ ಹಾಗೆನೆ ಚರ್ಮ ಕೂಡ ಕ್ಲೀನ್ ಆಗತ್ತೆ

ಚರ್ಮಕ್ಕೆ ಸಂಬಂಧ ಪಟ್ಟಿರೋ ತೊಂದ್ರೆಯಿಂದ ಬೇಸತ್ತೋಗಿರೋರ್ಗೆ ಒಳ್ಳೆ ಉಪಾಯ ಅನ್ಬೋದು. ಯಾವಾಗ ಜೀರ್ಣಾಂಗಕ್ಕೆ ಹೆಚ್ಚು ಕೆಲ್ಸ ಇಲ್ದೆ ಸ್ವಲ್ಪ ಬಿಡುವಾಗಿರತ್ತೋ, ಆಗ ದೇಹ, ತನ್ನನ್ನ ತಾನು ರಿಪೇರಿ ಮಾಡ್ಕೊಳಕ್ಕೆ ಬೇರೆ ಬೇರೆ ಅಂಗಾಂಗದ ಬಗ್ಗೆ ಗಮನ ಹರಿಸ್ಬೋದು.

ಒಂದೇ ಒಂದಿನ ಉಪವಾಸ ಮಾಡೋದ್ರಿಂದ, ದೇಹದಲ್ಲಿರೋ ವಿಷಕಾರಿ ಅಂಶಯೆಲ್ಲಾ ಹೊರಗೆ ಹೋಗಿ, ಬೇರೆ ಎಲ್ಲಾ ಅಂಗಗಳೂ ಅಂದ್ರೆ ಯಕೃತ್ತ, ಮೂತ್ರಪಿಂಡ ಎಲ್ಲಾ ಕ್ಲೀನಾಗಿ ಕೆಲ್ಸ ಮಾಡ್ಕೊಂಡ್ ಹೋಗತ್ತಂತೆ.

ಮೂಲ

ತಿಂಗಳಲ್ಲಿ ಒಂದು ಅಥ್ವಾ ಎರಡು ದಿನ ಉಪವಾಸ ಮಾಡಿದ್ರೆ ಇಷ್ಟೆಲ್ಲಾ ಲಾಭ ಇದೆ. ನೀವೇ ಯೋಚ್ನೆ ಮಾಡಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: