ಹೆಚ್ಚು ಪ್ರಚಾರ ಸಿಗದಿರೋ ಈ 10 ವಿಷಯಗಳಿಂದ ರಕ್ಷಿತ್ ಶೆಟ್ಟಿ ಹೆಂಗೆ ಅಂತ ಸ್ವಲ್ಪ ಗೊತ್ತಾಗುತ್ತೆ

ಫಿಲಮ್ಮಿಗೆ ಬಂದಿದ್ದು Orkut ಇಂದ

ರಕ್ಷಿತ್

1. ಒಳ್ಳೇ ಸ್ಕ್ರಿಪ್ಟ್ ಇರಲೇಬೇಕು ಅಂತ ರಕ್ಷಿತ್ ಶೆಟ್ಟಿ ಕಳೆದ ಮೂರು ವರ್ಷದಲ್ಲಿ ಬರೀ 5 ಫಿಲಮ್ಮಲ್ಲಿ ಮಾಡಿದಾರೆ

"ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಫಿಲಂ ಮಾಡಿದ್ ಮೇಲಂತೂ ಅನಂತ್ ನಾಗ್ ತರ ಆಕ್ಟ್ ಮಾಡಕ್ಕೆ ರಕ್ಷಿತ್ತೇ ಸರಿ ಅನ್ನಬಹುದು!

ಮೂಲ

2. ರಕ್ಷಿತ್ ಫಿಲಮ್ಮಿಗೆ ಬಂದಿದ್ದು ಈಗ ಗೊಟಕ್ ಅಂದಿರೋ Orkut.com ಅನ್ನೋ ಸಾಮಾಜಿಕ ತಾಣದಿಂದ

ಅದರಲ್ಲಿ ಅರವಿಂದ್ ಕೌಶಿಕ್ ಜೊತೆ ಮಾತಾಡಿದ್ದೇ ರಕ್ಷಿತ್ಗೆ ಸಿಕ್ಕ ಬ್ರೇಕು. ರಕ್ಷಿತ್ ಹುಟ್ಟಿದ್ದು ಉಡುಪಿಯಲ್ಲಿ, ಗಣಿತದಲ್ಲಿ ಜೀನಿಯಸ್. ನಿಟ್ಟೆ ಎಂಜಿನಿಯರಿಂಗ್ ಕಾಲೇಜ್ನಲ್ಲಿ ಓದಿ ಸಿಮ್ಯಾಂಟಿಕ್ ಕಂಪನಿಯಲ್ಲಿ ಸಾಫ್ಟ್ವೇರ್ ಉದ್ಯೋಗಿ ಆಗಿದ್ದರು.

 

#2yearsoldme :-)

A photo posted by Rakshit Shetty (@rakshitshetty) on Jan 28, 2015 at 12:18am PST

3. ಮನೇಲಿ ಸುಳ್ಳು ಹೇಳಿ ಸಿನೆಮಾದಲ್ಲಿ ನಟನೆ ಮಾಡಕ್ಕೆ ಶುರು ಮಾಡಿದ್ರು ರಕ್ಷಿತ್ತು

ನಾಟಕಗಳಲ್ಲಿ ಅಭಿನಯ ಮಾಡಿದ್ದಾರೆ. ತಮ್ಮ ಗೆಳೆಯ ರಿಶಬ್ (ರಿಕ್ಕಿ ನಿರ್ದೇಶಕ) ಜೊತೆ ಕಿರುಚಿತ್ರಗಳನ್ನ ಕೂಡ ನಿರ್ದೇಶನ ಮಾಡಿದ್ದಾರೆ. 

ಮೂಲ

4. ರಕ್ಷಿತ್ ಫೇವರೇಟ್ ಡೈಲಾಗ್ ಇದು. ನೋಟ್ ಮಾಡ್ಕೊಳಿ:

"ಪ್ರೀತಿ ಪ್ರೇಮ ಪುಸ್ತಕದ್ ಬದನೆಕಾಯಿ ಅಂದವರು ಲವ್ ಮ್ಯಾರೇಜ್ ಆದ್ರು… ಪ್ರೇಮಲೋಕ ಸೃಷ್ಟಿಸಿದ ದೇವರೇ ಅರೆಂಜ್ ಮ್ಯಾರೇಜ್ ಆದ್ರು…. ಲವ್ವೂ, ಲೈಫು ಹಿಂಗೇ ಅಂತ ಹೇಳೋಕ್ಕೆ ಆಗಲ್ಲ… ನಿಮ್ ಆಲೋಚನೆಗೊಂದು ಉ ಟರ್ನ್ ಕೊಡಿ..."

ಮೂಲ

5. ಬೇರೆ ರಾಜ್ಯದ ಗೆಳೆಯರನ್ನ ರೂಮ್ನಲ್ಲಿ ಕೂಡಿ ಹಾಕಿ ಉಪ್ಪಿ ಮಾಡಿರೋ "A" ಫಿಲಂ ತೋರ್ಸಿದಾರೆ ರಕ್ಷಿತ್ತು!

ಶಂಕರ್ನಾಗ್ ಮತ್ತು ಉಪೇಂದ್ರ ಇವ್ರ ನೆಚ್ಚಿನ ನಟರು.

ಮೂಲ

6. ಇವರ ಮೊದಲ ಫಿಲಂ "ನಮ್ ಏರಿಯಾದಲ್ಲೊಂದಿನ". ಮೊದಲು ಹೀರೋ ಆಗಿದ್ದು "ತುಗ್ಲಕ್"ಕಲ್ಲಿ.

ಮೂಲ

7. "ಸಿಂಪಲಾಗ್ ಒಂದ್ ಲವ್ ಸ್ಟೋರಿ" ಅಂತ ಹೆಸರು ಕೊಟ್ಟಿದ್ದು ರಕ್ಷಿತ್ತೇ.

ಮೂಲ

8. "ಉಳಿದವರು ಕಂಡಂತೆ" ಫಿಲಮ್ಮು ರಕ್ಷಿತ್ ಚಿಕ್ಕ ಹುಡುಗನಾಗಿದ್ದಾಗ ಆದ ಕೆಲವು ಅನುಭವಗಳ ಆಧಾರದ ಮೇಲೆ ಮಾಡಿದ್ದು

ಇದಕ್ಕೆ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಕೂಡ ಬಂತು.

ಮೂಲ

9. ಸ್ಕ್ರಿಪ್ಟ್ ಆಯ್ಕೆ ಮಾಡೋದ್ರಲ್ಲಿ ಬಹಳ ಸ್ಟ್ರಿಕ್ಟು ಈ ಪಾಲ್ಟಿ!

ಮೂಲ

10. ಸುದೀಪ್ ಜೊತೆ ಸೇರಿ "ಥಗ್ಸ್ ಆಫ್ ಮಾಲ್ಗುಡಿ" ಅಂತ ಒಂದು ಫಿಲಂ ಮಾಡ್ತಿದಾರೆ

ಮೂಲ

ಮಾಹಿತಿ: ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಗ್ಯಾಸ್ ಸಿಲಿಂಡರ್ ಬಗ್ಗೆ ಈ ಒಂದು ಮುಖ್ಯವಾದ ವಿಷಯ ಎಲ್ಲರಿಗೂ ತುರ್ತಾಗಿ ಗೊತ್ತಾಗಬೇಕು

ಇಷ್ಟು ದಿನ ಯಾರೂ ಹೇಳೇ ಇಲ್ಲವಲ್ಲ, ಹೆಂಗೆ?

LPG ಸಿಲಿಂಡರ್ ಇಲ್ಲದೆ ಮನೇಲಿ ಅಡುಗೇನೇ ಇಲ್ಲ ಅನ್ನೋ ಪರಿಸ್ಥಿತಿ ಇದೆ.

ಆದರೆ ಈ‌ ಸಿಲಿಂಡರ್ಗಳು ಸ್ವಲ್ಪ ಡೇಂಜರ್ರೇ. ಏನಾದರೂ ತೊಂದರೆ ಆದರೆ ಸಿಲಿಂಡರ್ಗೆ ಬೆಂಕಿ ಹತ್ತಿ, ಅದು ಸಿಡಿದು ಅನಾಹುತ ಆಗೋ ಸಾಧ್ಯತೆ ಇರುತ್ತೆ.

ಆದರೆ ಈ ಸಿಲಿಂಡರ್ಗಳಿಗೂ ಒಂದು expiry date ಇರುತ್ತೆ ಅಂತ ನಿಮಗೆ ಗೊತ್ತಾ?

ಸಿಲಿಂಡರ್ ಒಳಗಿರೋ ಗ್ಯಾಸ್ ಬಗ್ಗೆ ಮಾತಾಡ್ತಿಲ್ಲ, ಬರೀ ಖಾಲಿ ಸಿಲಿಂಡರ್ ಬಗ್ಗೆ ಮಾತಾಡ್ತಿರೋದು. ಅದಕ್ಕೆ expiry date ಇರುತ್ತೆ ಅಂತ ನಿಮಗೆ ಗೊತ್ತಾ? Expiry date ಆಗೋಗಿರೋ ಸಿಲಿಂದರ್ ಉಪಯೋಗಿಸಿದರೆ ಏನಾದರೂ‌ ಅನಾಹುತ ಆಗೋ ಸಾಧ್ಯತೆ ಜಾಸ್ತಿ.

ಈ ಸಿಲಿಂಡರ್ಗಳು ಮಾರುಕಟ್ಟೇಲಿ ಸುಲಭವಾಗಿ ಸಿಗುತ್ತವೆ. ಖಾಲಿ ಆದರೆ ಅದನ್ನ ತುಂಬಿಸೋದು ವಾಡಿಕೆ. ಆದರೆ expiry date ಆಗಿದ್ದರೆ ಅದನ್ನ ತುಂಬಿಸಬಾರದು. ಆಗ ಅದರಿಂದ ಗ್ಯಾಸ್ ಸೋರಿಕೆ ಆಗಿ ಸಿಡಿಯೋ ಸಾಧ್ಯತೆ ಇರುತ್ತೆ. ಆದ್ದರಿಂದ ಡೇಟ್ ಆಗೋಗಿರೋ ಸಿಲಿಂಡರ್ಗಳ್ನ ಉಪಯೋಗಿಸಬಾರದು.

ಗ್ಯಾಸ್ ಅಂಗಡಿಯೋರು ಒಂದರ ಮೇಲೊಂದು ಸಿಲಿಂಡರ್ ಪೇರಿಸೋದು, ಅದನ್ನ ಎಸೆದಾಡೋದು, ಎಲ್ಲಾ ಮಾಡ್ತಾರೆ ನೋಡಿದೀರಿ ತಾನೇ?

ಮೂಲ

ಇದರಿಂದ ಸಿಲಿಂಡರ್ಗೆ ಏಟು ಬೀಳೋ ಸಾಧ್ಯತೆ ಇರುತ್ತೆ. ತುಂಬಾ ಉಜ್ಜಾಡಿ ಉಜ್ಜಾಡಿ ಮಾಡಿದಾಗ ಅದರಿಂದ ಗ್ಯಾಸ್ ಸೋರಿಕೆ ಆಗೋ‌ಸಾಧ್ಯತೆ ಇರುತ್ತೆ.

ಆದರೆ ಡೇಟ್ ಆಗಿದ್ಯೋ ಇಲ್ವೋ ಅಂತ ಕಂಡ್ ಹಿಡಿಯೋದು ಹೇಗೆ ಅಂತ ಸಾಮಾನ್ಯವಾಗಿ ಜನರಿಗೆ ಗೊತ್ತಿರಲ್ಲ. ಹೇಳ್ತೀವಿ ಕೇಳಿ.

ಸಿಲಿಂಡರ್ ಹಿಡಿ ಕೆಳಗೆ ಮೂರು ಸೈಡ್ ಪಟ್ಟಿ ಇರುತ್ತೆ. ಅದರಲ್ಲಿ ಒಳಕ್ಕೆ expiry dateನ ಒಂದು ಕೋಡ್ ಮಾಡಿ ಬರೆದಿರ್ತಾರೆ. ಆ ಕೋಡು A, B, C, ಅಥವಾ D ಇಂದ ಶುರು ಆಗಿ ಅದಾದಮೇಲೆ ಎರಡಂಕಿ ಸಂಖ್ಯೆ ಇರುತ್ತೆ. ಉದಾಹರಣೆಗೆ B13.

ಮೂಲ

ಇದರಿಂದ ಡೇಟ್ ಕಂಡ್ ಹಿಡಿಯೋದು ಸುಲಭ.

A, B, C, ಮತ್ತೆ D ಅನ್ನೋ ಇಂಗ್ಲಿಷ್ ಅಕ್ಷರಗಳು ತಿಂಗಳನ್ನ ಸೂಚಿಸುತ್ತವೆ. ಸಂಖ್ಯೆ ವರ್ಷ ಸೂಚಿಸುತ್ತೆ.

ಯಾವ ಅಕ್ಷರಕ್ಕೆ ಯಾವ ತಿಂಗಳು ಅಂತ ತಿಳಿದಿರಲಿ:

A - ಮಾರ್ಚ್

B - ಜೂನ್

C - ಸೆಪ್ಟೆಂಬರ್

D - ಡಿಸೆಂಬರ್

ಈಗ, ಉದಾಹರಣೆಗೆ ನಿಮ್ಮ ಸಿಲಿಂಡರ್ ಮೇಲೆ B-13 ಅಂತ ಬರೆದಿದ್ದರೆ ಅದರ expiry date ಜೂನ್ 2013. ಮೂರು ತಿಂಗಳ ಅಂದಾಜು ಸಾಕು ಅಂತ ಎಲ್ಲಾ ತಿಂಗಳಿಗೂ ಒಂದೊಂದು ಅಕ್ಷರ ಕೊಟ್ಟಿರಲ್ಲ.

ಕೆಲವರು ಈ expiry date ಕೋಡನ್ನ ಅಳಿಸಿ ತಮಗೆ ಬೇಕಾದ್ದು ಬರೆದುಕೊಳ್ತಾರೆ ಅಂತಾನೂ ವರದಿಗಳು ಬಂದಿವೆ. ಆದ್ದರಿಂದ ಮುಂದಿನ ಸಲ ಸಿಲಿಂಡರ್ ಬಂದಾಗ ಅದರ ಕೋಡ್ ಏನು ಅಂತ ನೋಡಿ.

ಮೂಲ

ಕೋಡ್ ಇರಬೇಕಾದ ಜಾಗದಲ್ಲಿ ಏನಾದರೂ ಗೀಚಿರೋದು, ಪೇಂಟ್ ಹಚ್ಚಿರೋದು, ತಿದ್ದಿರೋದು ಎಲ್ಲಾ ಆಗಿದ್ದರೆ ಮುಲಾಜಿಲ್ಲದೆ ವಾಪಸ್ ಕೊಟ್ಟುಬಿಡಿ. ಕಷ್ಟಕ್ಕೆ ಸಿಕಾಕೋಬೇಡಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: