ಜಪಾನಲ್ಲಿರೋ ಈ ವಿಚಿತ್ರವಾದ ಮೇಲ್ಸೇತುವೇನ ಸ್ವಲ್ಪ ಹತ್ತಿರದಿಂದ ನೋಡೋಣ ಬನ್ನಿ

ಏನ್ ಹುಡುಗಾಟ ನಾ?

ಜಪಾನ್ ಫ್ಲೈ ಓವರ್

ನಿಮ್ಮ ಕಾರಲ್ಲೋ ಬೈಕಲ್ಲೋ ಕೂತ್ಕೊಂಡು ಒಳ್ಳೇ ರೋಲರ್ ಕೋಸ್ಟರಲ್ಲಿ ಕೂತ್ಕೊಂಡ ಅನುಭವ ಪಡ್ಕೋಬೇಕಾ? ಹಾಗಾದರೆ ಜಪಾನಲ್ಲಿರೋ ಎಶೀಮಾ ಒಹಾಶಿ ಬ್ರಿಡ್ಜ್ ಕಡೆ ಹೋಗಿ ಬನ್ನಿ! ಈ ಮೇಲ್ಸೇತುವೇನ ನೋಡಿದರೇ ಗಾಡಿ ಓಡ್ಸೋರಿಗೆ ಹೆದರಿಕೆ ಆಗೋಹಂಗಿದೆ. ಅಂತಕಂತೆ ತಂಡದಿಂದ ನಿಮಗೋಸ್ಕರ ಇದರ ಕೆಲವು ಹತ್ತಿರದ ಫೋಟೋಗಳ್ನ ತಂದಿದೀವಿ, ನೋಡಿ ಮೈ ಜುಂ ಅನ್ನಿಸಿಕೊಳಕ್ಕೆ ರೆಡಿ ಆಗಿ!

ಈ ಎಶೀಮಾ ಒಹಾಶಿ ಸೇತುವೆ ಮಾತ್ಸೂಯೆ ಮತ್ತು ಸಕಾಯಿಮಿನಾತೋ ಅನ್ನೋ ಎರಡು ಊರುಗಳ ನಡುವೆ ಇದೆ. ಇದು 11.3 ಮೀಟರ್ ಅಗಲ, 1.7 ಕಿ.ಮಿ. ಉದ್ದ ಇದೆ.

metro

ಇದು ಪ್ರಪಂಚದಲ್ಲಿ ಮೂರನೇ ಅತಿ ದೊಡ್ಡ ಗಟ್ಟಿ ಚೌಕಟ್ಟಿನ ಸೇತುವೆ...

holidaythai

ದೂರದಿಂದ ನೋಡಿದರೆ ಈ ಸೇತುವೇನ ಹತ್ತಕ್ಕೆ ಅಸಾಧ್ಯ ಅನ್ನಿಸುತ್ತೆ...

f70b6b286a88ae8b91dda13296c5e6f7.gifyoutube

ಮೇಲೆ ಹತ್ತಕ್ಕೆ ಪ್ರಯತ್ನ ಪಟ್ಟರೆ ಕಾರು-ಗೀರೆಲ್ಲ ವಾಪಸ್ ಹಿಂದಕ್ಕೆ ಜಾರಿಕೊಂಡು ಬಂದುಬಿಡಬಹುದು ಅನ್ನಿಸುತ್ತೆ! ಇದು ಎಷ್ಟು ಎತ್ತರ ಇದೆ ಅಂದ್ರೆ ಇದರ ಕೆಳಗೆ ದೊಡ್ಡ ದೊಡ್ಡ ಹಡಗುಗಳು ಹಾದು ಹೋಗುತ್ತವೆ...

panoramio

ನೋಡಿದರೆ ಹೆದರಿಕೆ ಆಗೋಹಾಗಿದ್ದರೂ ಈ ಎಶೀಮಾ ಒಹಾಶಿ ಸೇತುವೆ ಸಾಕಷ್ಟು ಸುರಕ್ಷಿತವಾಗೇ ಇದೆ. ಮೇಲಿನ ಚಿತ್ರಗಳಲ್ಲಿ ಅಸಾಧ್ಯ ಅನ್ನಿಸುವಷ್ಟು ಓಟ ಕಂಡರೂ ಬೇರೆ ದಿಕ್ಕಿನಿಂದ ನೋಡಿದರೆ ಅಷ್ಟು ಹೆದರಿಕೆ ಬರಲ್ಲ. ಆದರೂ ಅಲ್ಲಿಗೆ ಕರ್ಕೊಂಡ್ ಹೋದ್ರೆ ನೀವು ಇದರ ಮೇಲೆ ಗಾಡಿ ಓಡಿಸುವ ಸಾಹಸ ಮಾಡ್ತೀರಾ?

holidaythai

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ನಾನು ಜೀವನದಲ್ಲಿ ಹಿಂದೆ ಬೀಳ್ತಾ ಇದೀನಿ ಅನ್ನೋ ಮುಳ್ಳು ಚುಚ್ತಾ ಇದ್ರೆ ಈ 30 ಮಾತು ನೆನಪಿಸಿಕೊಳ್ಳಿ

ವೇದಾಂತ ಗೀದಾಂತ ಅಲ್ಲ, ಸಿಂಪಲ್ ವಿಷಯಗಳು

ನಮ್ಮ ಪ್ರಕಾರ ನಾವು ಜೀವನದಲ್ಲಿ ಎಷ್ಟೇ ಗೆಲುವು ಸಾಧಿಸಿದ್ದರೂ… ನಮ್ಮ ಪ್ರಕಾರ ನಮಗೆ ಬೇಕಾದ್ದೆಲ್ಲ ಇದ್ದರೂ… ಬೇಕಾದೋರೆಲ್ಲ ಇದ್ದರೂ… ಜೀವನ ಒಂದೊಂದ್ಸಲ ನಮಗೆ "ನೀನು ಹಿಂದೆ ಬಿದ್ದಿದೀಯ" ಅನ್ನೋ ಸಂದೇಶ ಕೊಡುತ್ತೆ. ಈ ಸ್ಪರ್ಧಾತ್ಮಕ ಜಗತ್ತಿನ ವಿಚಿತ್ರ ಇದು. ಇಂಥ ಪ್ರಪಂಚದಲ್ಲಿ ಅನವಶ್ಯಕವಾಗಿ ಕೀಳರಿಮೆ ಮೂಡಬಾರದು ಅನ್ನೋದಾದರೆ ಈ 30 ಮಾತು ನೆನಪಿಸಿಕೊಳ್ಳಿ. ಇವೆಲ್ಲ ಏನು ದೊಡ್ಡ ವೇದಾಂತ ಅಲ್ಲ, ಆದರೂ ನಿಮಗೆ ತುಂಬ ಉಪಯೋಗಕ್ಕೆ ಬರುತ್ತವೆ:

  1. ನೀವು ನಿಮ್ಮ ಕೈಯಲ್ಲಿ ಆಗೋದೆಲ್ಲ ಮಾಡ್ತಿದೀರಿ.
  2. ನಿಮ್ಮ ಕೈಯಲ್ಲಿ ಆಗೋದೆಲ್ಲ ಮಾಡ್ತಿಲ್ಲ ಅನ್ನಿಸಿದರೆ ಇನ್ನೇನ್ ಮಾಡ್ಬೋದು ಅಂತ ಯೋಚನೆ ಮಾಡಿ, ಕೆಲಸದಲ್ಲಿ ತೊಡಗಿಕೊಳ್ಳಿ.
  3. ತುಂಬಾ ಅನುಭವ ಇರೋರು ಅಥವಾ ನಿಮಗಿಂತ ತುಂಬಾ ಹಿಂದೆ ಶುರು ಮಾಡ್ಕೊಂಡೋರ್ನ ನೋಡಿ ನಾನು ಹಿಂದೆ ಇದೀನಿ ಅನ್ಕೋಬೇಡಿ. ಅವರ ಜೊತೆ ಪೈಪೋಟಿಗೆ ಇಳಿಯೋದು ಪೆದ್ದತನ.
  4. ಎಲ್ಲರಿಗೂ ಅವರದೇ ಆದ ವೇಗ ಅಂತ ಇರುತ್ತೆ.
  5. ನಿಮಗೆ ತುಂಬ ಇಷ್ಟವಿದ್ದ ಕೆಲಸ ಸಿಗದೆ ಹೋದರೆ ನೀವು ವೇಸ್ಟು ಅಂತೆನಲ್ಲ. ಜಾತಕ ಹೊಂದಲಿಲ್ಲ ಅಂತ ಅರ್ಥ!
  6. ಈಗಲೂ ನೀವು ತುಂಬಾ ಜನರಿಗಿಂತ ಮುಂದಿದೀರಿ. ನೀವು ಹಿಂದೆ ಆಗಿದ್ದ ವ್ಯಕ್ತೀನೂ ಆ ಪಟ್ಟಿಯಲ್ಲಿ ಇದಾನೆ/ಳೆ.
  7. ನಿಮಗೆ ಯಾವ ತರಹದ ಭವಿಷ್ಯ ಬೇಕಾದರೂ ರೂಪಿಸಿಕೊಳಕ್ಕೆ ಅನುಮತಿ ಇದೆ.
  8. ಜೀವನ ಅಂದ್ರೆ ಹೀಗೇ ಇರಬೇಕು ಅಂತೆನಿಲ್ಲ, ನೀವು ನಡೆಸಿದ್ದೇ ಜೀವನ.
  9. ಮೂವತ್ತನೇ ವಯಸ್ಸಿಗಿಂತ ಮುಂಚೆ ಮದುವೆ ಆಗದೆ ಹೋದರೆ ಮುಗೀತು ಕಥೆ ಅನ್ಕೋಬೇಡಿ.
  10. ಏನಾದರೂ ಆಗಿಬಿಡೋಷ್ಟು ಶ್ರಮ ಪಟ್ಟು ಕೆಲಸ ಮಾಡಿ ಉಪಯೋಗ ಇಲ್ಲ. ಅದರಿಂದ ಸಿಗೋದು ಗೆಲುವಲ್ಲ, ನಿಃಶಕ್ತಿ.
  11. ಮನಸ್ಥಿತಿ ಸರಿಯಾಗಿಲ್ಲದೆ ಇದ್ದರೆ ನಿಮಗೆ ನೀವೇ ಎಷ್ಟು ಹೇಳಿಕೊಂಡರೂ ಸ್ಫೂರ್ತಿ ಬರಲ್ಲ.
  12. ನಿಮ್ಮ ವಯಸ್ಸು ಇಪ್ಪತ್ತು-ಚಿಲ್ಲರೆ ಆದರೆ ನಿಮ್ಮ ಮುಂದೆ ಇನ್ನೂ ಇಡೀ ಜೀವನವೇ ಇದೆ, ಅದರಲ್ಲಿ ಎಂಥ ಅದ್ಭುತಗಳಾಗುತ್ತವೆ ಅಂತ ಈಗಲೇ ಹೇಳಕ್ಕಾಗಲ್ಲ.
  13. ನಿಮಗೆ ಬೇಕಾದ ಸ್ಫೂರ್ತಿ ಸಿಕ್ಕಿಲ್ಲದೆ ಇರಕ್ಕೆ ಕಾರಣ ಸರಿಯಾದ ವ್ಯಕ್ತಿ ಇನ್ನೂ‌ ಸಿಕ್ಕಿಲ್ಲದೆ ಇರೋದು ಅನ್ನಿಸುತ್ತೆ.
  14. ಯಾವಾಗಲೂ ಹೀಗೇ ತುಸುಕ್ ಅಂತ ಕೂತಿರಲ್ಲ  ನೀವು.
  15. ನಿಮ್ಮ ಭಾವನೆಗಳು ಇನ್ನಷ್ಟು ಕೆಲಸ ಮಾಡೋದಕ್ಕೆ ಪ್ರೇರಣೆ ಆಗಬೇಕು, ಕಡಿಮೆ ಕೆಲಸ ಮಾಡಕ್ಕಲ್ಲ.
  16. ಸರಿಯಾದ ಜೀವನ, ತಪ್ಪು ಜೀವನ ಅಂತ ಏನೂ ಇರಲ್ಲ.
  17. ಸಮಯ ನಿಮ್ಮ ಹತೋಟಿಗೆ ಮೀರಿದ್ದು.
  18. ಮುಂದಿನ 24 ಗಂಟೆ ಬಗ್ಗೆ ಯೋಚನೆ ಮಾಡಿ. ಅದರಲ್ಲಿ ಸಾಧಿಸಕ್ಕೆ ಆಗೋದನ್ನೆಲ್ಲ ಸಾಧಿಸಿ.
  19. ಸಾಮಾಜಿಕ ತಾಣಗಳಲ್ಲಿ ಜನ ಬರೀ ಒಳ್ಳೇ ಸುದ್ದಿಗಳು, ಒಳ್ಳೇ ಫೋಟೋಗಳ್ನೇ ಹಂಚಿಕೊಳ್ಳೋದು. ಒಳಗೆ ಏನಿರುತ್ತೋ ಯಾರಿಗ್ ಗೊತ್ತು?
  20. ಇಲ್ಲೀವರೆಗೆ ನೀವು ಏನೇನು ಸಾಧಿಸಿದ್ದೀರಿ ಅಂತ ಮೆಲಕು ಹಾಕಿ.
  21. ಸದ್ಯಕ್ಕೆ ಒಂದು ದಿನಕ್ಕಿಂತ ಹೆಚ್ಚು ಪ್ಲಾನ್ ಮಾಡಬೇಡಿ.
  22. ಇನ್ನೂ ಮಾಡಕ್ಕೆ ತುಂಬಾ ಇದೆ ಅಂತ ಯೋಚನೆ ಮಾಡ್ಕೊಂಡ್ ಕೂತ್ಕೋಬೇಡಿ. ಅದರಿಂದ ಕೆಲಸ ಬೇಗೇನು ಆಗಲ್ಲ.
  23. ಬೇಕಾದಾಗ ಸಲಹೆ, ಸಹಾಯ ಕೇಳೋದ್ರಿಂದ ನೀವು ಇನ್ನಷ್ಟು ಬುದ್ಧಿವಂತರಾಗ್ತೀರಿ, ಇನ್ನಷ್ಟು ಗಟ್ಟಿ ಆಗ್ತೀರಿ.
  24. ನಿಮಗೆ ಸಹಾಯ ಮಾಡ್ದೋರ್ನ ನೆನಪಿಸಿಕೊಳ್ಳಿ. ಆಗ ಗೊತ್ತಾಗುತ್ತೆ, ನೀವು ಒಂಟಿ ಅಲ್ಲ ಅಂತ.
  25. ಕೆಲಸ ಮುಂದಕ್ಕೆ ಹೋಗ್ತಿಲ್ಲ ಅಂದಾಗ ನಿಮ್ಮ ಪ್ರಕಾರ ಅದ್ಭುತವಾಗಿ ಕೆಲಸ ಮಾಡೋರು ಯಾರನ್ನಾದರೂ ನೆನಪಿಸಿಕೊಳ್ಳಿ. ಆಗ ಮುಂದಕ್ಕೆ ಹೋಗುತ್ತೆ.
  26. ಕಾಲೇಜ್ ಮುಗಿಸಿದ ತಕ್ಷಣ ಕೆಲಸ ಸಿಕ್ಕಿಲ್ಲದೆ ಹೋದರೆ ನೀವು ವೇಸ್ಟು ಅಂತಲ್ಲ. ನಿಮಗೆ ಸರಿ ಹೋಗೋ‌ ಕೆಲಸಗಳು ಇನ್ನೂ‌ ನಿಮ್ಮ ಕಣ್ಣಿಗೆ ಬಿದ್ದಿಲ್ಲ ಅಂತ ಅರ್ಥ.
  27. ಚೆನ್ನಾಗಿ ಜೀವನ ಮಾಡೋದು ಅಂದ್ರೆ ಯಾವುದೇ ಚಿಂತೆ ಇಲ್ಲದೆ ಜೀವನ ಮಾಡೋದು.
  28. ನಿಮ್ಮ ತಂದೆ-ತಾಯಿ ಹೇಳಿದ್ದನ್ನೇ ನೀವು ಮಾಡಬೇಕು ಅಂತಿಲ್ಲ. ನಿಮ್ಮ ದಾರಿ ನೀವು ಕಂಡ್ಕೊಳಿ.
  29. ಎಷ್ಟು ಸಲ ಬೇಕಾದರೂ, ಯಾವಾಗ ಬೇಕಾದರೂ ನಿಮ್ಮ ಮನಸ್ಸು ಬದಲಾಯಿಸಿ. ಬೇಡ ಅನ್ನೋನ್ ಯಾವನು?
  30. ಎಲ್ಲಾ ಬೇಗ್-ಬೇಗ ಮಾಡೋದೇ ಪ್ರಗತಿ ಅನ್ನೋದು ಮೂರ್ಖತನ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: