ಇಡೀ ಪ್ರಪಂಚದಲ್ಲಿ ರವಿಚಂದ್ರನ್-ಹಂಸಲೇಖ ಸೇರಿದರೆ ಮಾತ್ರ ಹುಟ್ಟುವ 6 ‘ಬೇರೆ ತರಹದ’ ಹಾಡುಗಳು

ಲವ್ವೂ ಅಲ್ಲ ಲವ್ ಫೇಲ್ಯೂರೂ ಅಲ್ಲ ಯಾವುದೂ ಅಲ್ಲ

ರವಿ, ಹಂಸ

ಸಿನ್ಮಾಗಳಲ್ಲಿ ಹಾಡುಗಳು ಬರೋದು ಕನ್ನಡದಲ್ಲೇನು ಹೊಸದಲ್ಲ. 2 ಗಂಟೆ 10 ನಿಮ್‍ಷ ಸಿನ್ಮಾ ಇದ್ರೆ ಅದ್ರಲ್ಲಿ ಅರ್ಧ ಗಂಟೆ ಹಾಡೇ ಇರುತ್ತೆ. ಆದ್ರೆ ಹಾಡು ಸಿನ್ಮಾದಲ್ಲಿ ಯಾವಾಗ್ ಬರ್ಬೇಕೋ ಆಗ್ ಬಂದ್ರೇ ಚನ್ನ. ಅಷ್ಟೇ ಅಲ್ಲ... ಎಷ್ಟೋ ಸಲ ಸಿನ್ಮಾದ ಕತೇಲಿ ಒಂದ್ ಭಾಗಾನ ವಿಶೇಷವಾಗಿ ಹಾಡಲ್ಲೇ ತೋರ್ಸೋ ಕಲೆ ಇದ್ಯಲ್ಲ ಅದು ಎಲ್ಲಾರ್ಗೂ ಬರಲ್ಲ. ನನ್ ಪ್ರಕಾರ ಅದನ್ನ ಸಕ್ಕತ್ತಾಗಿ ಮಾಡ್ ಗೆದ್ದಿರೋರಲ್ಲಿ ನಮ್ ರವಿಚಂದ್ರನ್-ಹಂಸಲೇಖ ಜೋಡೀನ ಮೀರ್ಸೋರೇ ಇಲ್ಲ...

ರವಿಚಂದ್ರನ್ ಸಿನ್ಮಾಗಳಲ್ಲಿ ಈ 6 ಹಾಡುಗಳು ನಂಗೆ ವಿಶೇಷ ಅನ್ನುಸ್ತು... ಯಾಕಂದ್ರೆ ಇವು ಬೇರೆ ಸಿನ್ಮಾಗಳಲ್ಲಿ ಬರೋ ಥರ ಹಾಡ್ಗಳಲ್ಲ. ಯಾವ್ದೋ ಒಂದು ನಿಮ್‍ಶದ ಸನ್ನಿವೇಶಾನ ರಸವತ್ತಾಗಿ ಹೇಳೋ ಪ್ರಯತ್ನ ಈ ಹಾಡ್ಗಳಲ್ಲಿವೆ. ಹಾಂ.... ಹಾಡ್ಗಳು ಇರೋದೇ ಅದಕ್ಕೆ ಅಂತ ಗೊತ್ತು. ಆದ್ರೆ ಇದೇ ಥರ ಬೇರೆ ಯಾರೂ ಕನ್ನಡದಲ್ಲಿ ಮಾಡಿಲ್ಲ. ಈ ಹಾಡ್ಗಳು ಬರೀ ಲವ್ ಸಾಂಗ್ ಅಲ್ಲ, ಹೀರೋ ಇಂಟ್ರೊಡಕ್‍ಶನ್ನಲ್ಲಿ ಹೀರೋನ ಹೊಗ್ಳೋ ಹಾಡುಗಳಲ್ಲ, ಹುಡ್ಗಿ ಕೈಕೊಟ್ಟಾಗ ನೋವಲ್ಲಿ ಹೇಳೋ ಹಾಡ್ಗಳಲ್ಲ... ಅವೆಲ್ಲಾ ತುಂಬಾ ಕಾಮನ್... ಈ ಜೋಡೀನೂ ಸೇರಿ ಎಲ್ಲಾರೂ ಅಂತಾ ಹಾಡುಗಳನ್ನ ಮಾಡಿದ್ದಾರೆ. ನಂಗೆ ಈ ಹಾಡ್ಗಳು ಸ್ಪೆಶಲ್ ಯಾಕನ್ಸತ್ತೆ ಅಂತ ಓದಿ..

1. ಒಬ್ಳು ಹುಡ್ಗಿ ಕಾಲೇಜಿಗೆ ಸೇರೋದ್ರ ಬಗ್ಗೆ ಒಂದ್ ಹಾಡೂ ಮಾಡ್ಬೋದಾ!

ಇಲ್ ಹೇಳ್ಬೇಕು ಅಂತಿರೋದ್ ಇಷ್ಟೇ... ಸಕ್ಕತ್ತಾಗಿರೋ ಒಬ್ಳು ಹುಡ್ಗಿ ಕಾಲೇಜಿಗೆ ಸೇರ್ತಾಳೆ. ಹುಡುಗ್ರೆಲ್ಲಾ ಔಳ್ಗೆ ಬೋಲ್ಡ್ ಆಗ್ತಾರೆ. ನಮ್ ಹೀರೋ ಇರೋ ಕ್ಲಾಸಿಗೇ ಔಳ್ ಬಂದ್ ಸೇರ್ತಾಳೆ. ಅಲ್ಲೇ ಮೊದಲ್ನೇ ಸಲ ಭೇಟಿ ಆಗ್ತಾರೆ. ಇದನ್ನ ಪ್ರಪಂಚದಲ್ಲಿ ಈ ಹಾಡಿಗಿಂತ ರಸವತ್ತಾಗಿ ಯಾವನ್ಗಾರೂ ಹೇಳಕ್ಕಾಗತ್ತಾ? ಇಲ್ಲಾ ಅನ್ಸುತ್ತೆ. ಈ ಸಿನ್ಮಾದ ಕತೆ ಬೇರೆ ಸಿನ್ಮಾದಿಂದ ತಗೊಂಡಿರ್ಬೋದು, ಆದ್ರೆ ಪರದೆ ಮೇಲೆ ತಂದಿರೋ ರೀತಿ ಇದ್ಯಲ್ಲ, ಅದ್ರಲ್ಲಿ ರವಿಚಂದ್ರನ್-ಹಂಸಲೇಖ ಬೆಸ್ಟ್!

2. ಈ ಸನ್ನಿವೇಶದಲ್ಲಿ ಬೇರೆ ಯಾವನೇ ಆಗಿದ್ರೂ ಅಲ್ಲಿ ಹೊಡೆದಾಟದ್ ಸೀನ್ ಇರ್ತಿತ್ತು

ನಮ್ ಜನಗಳಿಗೆ ಹೀರೋ ಅಂದ್ರೆ ಪೋಲಿ ಪುಂಡ್ರಗೆ ಹೊಡೀಬೇಕು ಅನ್ನೋ ಇಮೇಜ್ ಇರುತ್ತೆ. ಅದಕ್ಕೇ... ಹುಡ್ಗೀನ ಚುಡಾಯ್ಸೋ ಸೀನಲ್ಲಿ ಹೀರೋಗೆ ಇಂಟ್ರೊಡಕ್‍ಶನ್ ಸೀನ್ ಕೊಟ್ಟು ಫೈಟ್ ಮಾಡ್ಸಿ ಹೀರೋ ಅನ್ನಿಸ್ತಾರೆ. ಈಗೀಗಂತೂ ಮಚ್ಚು ಲಾಂಗುಗಳ ಹುಚ್ಚು ಸಿನ್ಮಾ ಮಾಡೋರಿಗೆ ಎಷ್ಟಿದೆ ಅನ್ನೋದು ಕನ್ನಡ ಸಿನ್ಮಾ ನೋಡೋರಿಗೆಲ್ಲಾ ಗೊತ್ತಿರುತ್ತೆ. ಆದ್ರೆ ಈ ಪ್ರೇಮಲೋಕದ ಪಾರಿಜಾತಾನ ನೋಡ್ರಿ... ಹುಡ್ಗಿ ಮಧ್ಯರಾತ್ರೀಲಿ ಬಂದು ಬಸ್ ಇಳೀತಾಳೆ, ಪೋಲಿಗಳು ರೇಗಿಸ್ತಾರೆ, ಹೀರೋ ಪೋಲೀಸ್ ಬಂದು ಔಳ್ನ ಜೋಪಾನ್ವಾಗಿ ಕರ್ಕೊಂಡೋಗ್ತಾನೆ. ಇಷ್ಟೇ ತಾನೆ ಸೀನು? ಅಲ್ಲಿ ಫೈಟ್ ಬದ್ಲು ಈ ಥರ ಸೊಗಸಾದ ಹಾಡು ಹಾಕ್ಬೋದು ಅನ್ನೋ ಯೋಚ್ನೆ ಬಂದಿದ್ರೆ ಅದು ನಮ್ ರವಿಗೆ ಮಾತ್ರ... ಎಂತಾ ಕ್ರಿಯೇಟಿವಿಟಿ ನೋಡಿ....! ಅಂತಾ ವಿಶೇಷಾನ ನಮ್ ಹಂಸಲೇಖ ಭರ್ಜರಿಯಾಗಿ ಮ್ಯೂಸಿಕ್ ಕೊಟ್ಟು ನಿಭಾಯ್ಸಿದಾರೆ.

3. ಇದು ಕಾಮಿಡಿ ಫಿಲಮ್ಮಲ್ಲ... ಆದ್ರೂ ಹೀರೋ ಹೀರೋಯಿನ್ನನ್ನ ಕಿಡ್ನಾಪ್ ಮಾಡೋ ಸೀನು ಎಷ್ಟು ಕಾಮಿಡಿಯಾಗಿದೆ ನೋಡಿ!

ಹೀರೋ ಹೀರೋಯಿನ್ನನ್ನ ಕಿಡ್ನಾಪ್ ಮಾಡಕ್ಕೆ ಬರ್ತಾನೆ, ಅಲ್ಲಿ ಡಾಕೂಗಳ ವೇಶದಲ್ಲಿ ಹೀರೋ ಕಡೆಯೋರೇ ಹೋಗಿ ಗಲಾಟೆ ಮಾಡ್ತಾರೆ. ಆಗ ಪೊಲೀಸ್ ವೇಶದಲ್ಲಿ ಬಂದು ಹೀರೋ ಹೀರೋಯಿನ್ನನ್ನ ಕಾಪಾಡೋ ನೆಪದಲ್ಲಿ ಕಿಡ್ನಾಪ್ ಮಾಡ್ತಾನೆ. ಇದನ್ನ ಹಾಡಲ್ಲಿ ಹಾಕಿ, "ರಾಧೆ, ನೀ ಕೈಯ್ಯ ಪಿಡಿದು ಕರೆದೊಯ್ಯೆನಲು..." ಅನ್ನೋ ಸಾಲಿಗೆ ಸಿಂಕ್ ಮಾಡಿರೋ ಕಲಾತ್ಮಕತೆಗೆ ಇನ್ನೊಂದು ಹೆಸರೇ ರವಿಚಂದ್ರನ್! ಈ ಸಿನ್ಮಾದ ಮೂಲ ಹಿಂದೀಯ "ಹೀರೋ" ಚಿತ್ರ. ಆದ್ರೆ ಕನ್ನಡದಲ್ಲಿ ರವಿಚಂದ್ರನ್ ಆ ಚಿತ್ರನ ತಮ್ ಸ್ಟೈಲಲ್ಲೇ ಮಾಡಿದಾರೆ.

4. ಊರಿಗೆ ಬರೋ ಹೊಸಬ ನೀರಿಗೆ ಪರದಾಡುವಾಗ ಎಂತಾ ಹಾಡ್ ಹೇಳ್ಬೋದು ಅಂತ ನಮ್ ಹಂಸಲೇಖರಿಗೆ ಎಷ್ಟು ಚನ್ನಾಗ್ ಗೊತ್ತು ನೋಡಿ!

ಈ ಹಾಡಲ್ಲಿ ನಡ್ಯೋ ಸನ್ನಿವೇಶ ತೋರ್ಸಕ್ಕೆ ಒಂದೇ ನಿಮ್‍ಷ ಸಾಕು. ಆದ್ರೆ ಇವ್ರಿಗೆ ಅಲ್ಲಿ ಒಂದ್ ಸೊಗಸಾದ ಹಾಡಲ್ಲಿ ಏನೇನೋ ಹೇಳ್ಬೋದು ಅನ್ನೋದು ತೋಚಿದೆ ನೋಡಿ.

5. ಕರೆಯೋಲೆ ಕೊಡೋದಕ್ಕೂ ಒಂದ್ ಹಾಡು! ಅದೇನು ವೆರೈಟಿನಪ್ಪ ಇವ್ರ ಹಾಡುಗಳು!

ಮದುವೆ ಮುಂಜಿಗಳಿಗೆ ಮನೆಮನೆಗ್ ಹೋಗಿ ಕರೆಯೋ ರೀತೀನೇ ಒಂದ್ ಹಾಡು ಮಾಡೋದು ಅಪರೂಪದಲ್ಲಿ ಅಪರೂಪ. ಕರೆಯುವಾಗ ಎಲ್ರೂ ಬಳ್ಸೋ ಯಾವುದೇ ವಿಶ್ಯಾನೂ ಬಿಡದೇ ಕೊನೆಗೆ "ಸಂಜೆ ಏಳಕ್ಕೆ ಮರೀಬೇಡಿ ಅಕ್ಕ, ಗಂಡು ಹೆಣ್ಣು ಕೂರಿತೀವಿ ಅಕ್ಕಪಕ್ಕ" ಅಂತ ರಿಸೆಪ್‍ಷನ್ನಿಗೂ ಬನ್ನಿ ಅಂತ ಹೇಳೋ ಸೆಂಟಿಮೆಂಟನ್ನ ಹೆಂಗ್ ಪದಗಳಲ್ಲಿ ಹಿಡಿದಿಟ್ಟಿದಾರ್ ನೋಡ್ರಿ... 

6. ಒಂದ್ ಕೋಳೀನ ಅಟ್ಟುಸ್ಕೊಂಡ್ ಹೋಗಕ್ಕೂ ಒಂದ್ ಹಾಡು ಜಗತ್ತಲ್ಲೇ ಎಲ್ಲೂ ಇಲ್ವೇನೋ!

ಹೀರೋಯಿನ್ ಮುಖಕ್ಕೆ ಒಂದ್ ಕೋಳಿ ಬಂದು ಪರಚ್ಬಿಡುತ್ತೆ. ಅದಕ್ಕೇ ಹೀರೋ ಆ ಕೋಳಿ ಮೇಲೆ ಕೋಪ ಮಾಡ್ಕೊಂಡು ಆ ಕೋಳೀನ ಇಲ್ಲ ಅನ್ನಿಸ್ಬಿಡ್ತೀನ ಅಂತ ಅಟ್ಟುಸ್ಕೊಂಡ್ ಹೋಗೋವಾಗ ಈ ಹಾಡ್ ಹೇಳ್ತಾನೆ! ನಂಬಕ್ಕೇ ಆಗಲ್ಲ ಈ ಥರ ಎಲ್ಲಾ ಸನ್ನಿವೇಶಕ್ಕೂ ಹಾಡು ಬಂದಿರೋದು.

ನಿಜ ಹೇಳ್ಬೇಕು ಅಂದ್ರೆ ಇನ್ನೂ ಎಷ್ಟೋ ಹಾಡ್ಗಳಿವೆ... ಇಲ್ಲಿ 6 ಹೇಳಿದಿನಿ ಅಷ್ಟೇ. ರವಿಚಂದ್ರನ್-ಹಂಸಲೇಖ ಜೋಡಿ ಬೇರೆ ಆಗಿದ್ರಿಂದ ನಮ್ಮಂತಾ ಸಿನ್ಮಾ ಪ್ರಿಯರಿಗೆ ಎಷ್ಟು ದೊಡ್ ನಷ್ಟ ಆಗಿದೆ ಅಂತ ಯಾರಿಗ್ ಹೇಳೋಣ? ಔರಿಬ್ರೂ ಮತ್ತೆ ಒಂದಾಗಿ ಇನ್ನೊಂದಿಷ್ಟು ಹೊಸತನ ತರಬೇಕು. ಈಗಿನ ಪೀಳೀಗೇಗೂ ಸ್ಪೂರ್ತಿ ಆಗ್ಬೇಕು.. ಅದೇ ನನ್ನಾಸೆ.

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಬರೀ 20,000 ರೂಪಾಯಿಗೆ ಸಿಗೋ ಈ ಹೊಸ ಸೋಲಾರ್ ಹಾಕಿಸಿದರೆ ನಿಮ್ಮ ಕರೆಂಟ್ ಬಿಲ್ ಅರ್ಧ

IIT ಮದ್ರಾಸ್ ಕರಾಮತ್ತು

ದಿನ ಬೆಳಗಾದ್ರೆ, ಈ ನ್ಯೂಸ್ ಪೇಪರ್ಗಳಲ್ಲಿ  ಕೊಲೆ, ಸುಲಿಗೆ, ದರೋಡೆ ಜೊತೆಗೆ ತಪ್ಪದೇ ಬರೋ ಇನ್ನೊಂದು ಸುದ್ದಿ ಅಂದ್ರೆ, ಲೋಡ್ ಶೆಡ್ಡಿಂಗ್ದು. ಇದನ್ನ ಓದಿ ನಾವು ಬೇಜಾರ್ ಮಾಡ್ಕೊಳೋದೂ ಸರ್ವೇಸಾಮಾನ್ಯ ಆಗೋಗ್ಬಿಟ್ಟಿದೆ. ಇದಕ್ಕೆಲ್ಲ ಇತಿಶ್ರೀ ಹಾಡೋ ಅಂತ ಸಮಯ ಬಂದಿದೆ. ಇದು IIT ಮದ್ರಾಸ್ ಸಿಬ್ಬಂದಿ ಕೃಪೆ! ನಾವೇನ್ ಹೇಳ್ತಾ ಇದ್ದೀವಿ ಅಂತ ತಲೆಕೆಡ್ತಾ ಇದ್ಯಾ? ಮುಂದೋದಿ...ನಿಮಗೇ ಗೊತ್ತಾಗತ್ತೆ.

ಎಕನಾಮಿಕ್ ಟೈಮ್ಸ್ ವರದಿ ಮಾಡಿರೋ ಪ್ರಕಾರ IIT ಮದ್ರಾಸಲ್ಲಿ ಒಂದಿಷ್ಟು ಜನ ಪುಣ್ಯಾತ್ಮರು ಸೇರ್ಕೊಂಡು ನಮ್ಮನೆ ಟೀಪಾಯ್ ಅಷ್ಟಗಲದ್ದು ಸೋಲಾರ್ ಪ್ಲಾಂಟ್ ತಯಾರು ಮಾಡಿದ್ದಾರೆ. ಈ ಸೋಲಾರ್ ಪ್ಲಾಂಟನ್ನ ನಮ್ಮನೆ ತಾರ್ಸಿ ಮೇಲೆ ಅಳವಡಿಸೋದ್ರಿಂದ ಕರೆಂಟ್ ಹೋಗೋ ಸಮಸ್ಯೆ ಇಂದ ಮುಕ್ತಿ ಸಿಗತ್ತೆ. ಇದರ ಜೊತೆಗೆ, ಕರೆಂಟ್ ಬಿಲ್ಲೂ ಅರ್ಧಕ್ಕರ್ಧ ಕಡಿಮೆ ಆಗುತ್ತಂತೆ. ಇದನ್ನ ಹಾಕ್ಸಕ್ಕೆ 20,000ದಷ್ಟು ದುಡ್ಡಿದ್ರೆ ಸಾಕು. ಇದರಲ್ಲಿ 125W ಪ್ಯಾನೆಲ್ ಜೊತೆಗೆ 0.5kWh ಬ್ಯಾಟರಿ ಇರುತ್ತೆ.

ಮೂಲ

ಏನು... ಇದನ್ನ ಕೇಳಿ ನಿಮಗೂ ಖುಷಿ ಆಯ್ತೋ ಇಲ್ವೋ? ಯಾಕಂದ್ರೆ, ಈಗಿರೋ ಮಾರ್ಕೆಟ್ ರೇಟ್ ಪ್ರಕಾರ, ಇದೇ ರೀತಿ ಪ್ಯಾನಲ್ ಹಾಕ್ಸಕ್ಕೆ ಬರೋಬ್ಬರಿ 1,20,000 ರುಪಾಯಿ ಬೇಕು ಅಂತ ಸೋಲಾರ್ ಎನರ್ಜಿ ಕಾರ್ಪೊರೇಶನ್ ಆಫ್ ಇಂಡಿಯಾದೋರು ಹೇಳ್ತಾರೆ. ಆದ್ರೆ, ಈ ಪ್ಲಾಂಟ್ ಅದಕ್ಕಿಂತ ಎಷ್ಟು ಪಟ್ಟು ಕಡಿಮೆ ನೋಡಿದ್ರಾ?

ಈ ಸೋಲಾರ್ ಪ್ಯಾನಲ್ ಇಂದ ಒಂದೆರ್ಡು ಟ್ಯೂಬ್ಲೈಟು, ಫ್ಯಾನು, ಚಾರ್ಜಿಂಗ್ ಪಾಯಿಂಟು, ಟೀವಿ ಎಲ್ಲಾನೂ ಓಡಿಸ್ಬೋದಂತೆ. ಇದಕ್ಕಿಂತ ಸ್ವಲ್ಪ ದೊಡ್ದ ಮಾಡೆಲ್ ತಗೊಂಡ್ರೆ, AC ಮತ್ತು ವಾಶಿಂಗ್ ಮಷಿನ್ ಬಿಟ್ಟು ಇನ್ನೆಲ್ಲಾ ಸಲಕರಣೆಗಳನ್ನೂ ಓಡಿಸ್ಬೋದಂತೆ ಕಣ್ರೀ!

ಪ್ರೊಫೆಸರ್ ಅಶೋಕ್ ಝುಂಝುಂನ್ವಾಲಾ ಹೇಳೋ ಪ್ರಕಾರ, ಈ ಸೋಲಾರ್ ಪ್ಲಾಂಟು ಪೂರ್ತಿ DC ವೈರಿಂಗ್ ಜೊತೆ ಬರೋದ್ರಿಂದ, ಬೇರೆ ಸೋಲಾರ್ ಪ್ಯಾನಲ್ಗಳ ಥರ DCನ ACಗೆ ಪರಿವರ್ತಿಸಲ್ಲ. ಇದ್ರಿಂದ ತುಂಬ ಎನರ್ಜಿ ಉಳಿತಾಯ ಆಗಿ ಕರೆಂಟ್ ಬಿಲ್ಲು ಕಮ್ಮಿ ಆಗುತ್ತೆ. ಗಮನಿಸಿ: ಸಾಮಾನ್ಯವಾಗಿ ನಮ್ಮ ಮನೆಗಳಲ್ಲೆಲ್ಲ AC ವೈರಿಂಗ್ ಮತ್ತು ಎಲೆಕ್ಟ್ರಿಕ್ ಸಾಮನುಗಳು ಇರೋದ್ರಿಂದ ಅದನ್ನೆಲ್ಲ ನೇರವಾಗಿ ಇದಕ್ಕೆ ಅಳವಡಿಸಕ್ಕೆ ಆಗಲ್ಲ.

ತಮಿಳುನಾಡು ಸರ್ಕಾರ, ದೊಡ್ಡ ದೊಡ್ದ MNCಗಳ ಜೊತೆ ಸೇರಿ  ಆಗ್ಲೇ 15,000 ಹಳ್ಳಿ ಮನೆಗಳಿಗೆ ಇದನ್ನ ಅಳವಡಿಸಿದ್ದಾರಂತೆ. ಮದ್ರಾಸಲ್ಲಿ 2015ರಲ್ಲಿ ಪ್ರವಾಹ ಬಂದಾಗ, ಇದರ ಸಹಾಯದಿಂದ 3 ದಿನ ಕರೆಂಟ್ ತೊಂದರೆ ಆಗ್ಲಿಲ್ವಂತೆ. ಇದರ ಜೊತೆ ರಾಜಸ್ಥಾನ್, ಅಸ್ಸಾಮಲ್ಲೂ ಹಾಕಿದ್ದಾರೆ. ಇನ್ಮುಂದೆ, ಕರ್ನಾಟಕ, ಆಂಧ್ರ ತೆಲಂಗಾಣ ಮತ್ತು ಒರಿಸ್ಸಾಲೂ ಇವುಗಳನ್ನ ಅಳವಡಿಸ್ತಾರಂತೆ.

IIT ಅವರ ಈ ಕೆಲಸ ಇಷ್ಟ ಆಗಿ, ನ್ಯೂಯಾರ್ಕಲ್ಲಿರೋ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಎಂಜಿನಿಯರ್ಸ್ (IEEE) ಇವರು ಈ ಯೋಜನೆಗೆ '2017ರ ಅತ್ಯುತ್ತಮ ಜನಸೇವಾ ತಂತ್ರಜ್ಞಾನ' ಅನ್ನೋ ಪ್ರಶಸ್ತಿ ಕೊಟ್ಟಿದ್ದಾರೆ.

ನಂಗಂತೂ ಇದನ್ನ ಕೇಳಿ ತುಂಬಾನೇ ಖುಷಿಯಾಯ್ತಪ್ಪ. ನಿಮಗೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: