ವಿರಾಟ್ ಕೋಹ್ಲಿ 18ನೇ ನಂಬರ್ ಯಾಕ್ ಬಿಟ್ಟಿರಲಾರ ಅಂತ ಕೇಳಿ ಭಾವನೆಗಳ ಸೆಳೆತದ ಅಂದಾಜು ಸಿಗುತ್ತೆ

ಎಷ್ಟೇ ಆದರೂ ಮನುಷ್ಯ

ವಿರಾಟ್

ಒಂಡೇ ಆಗಲಿ, T20 ಆಗಲಿ, IPL ಆಗಲಿ... ಯಾವುದೇ ಮ್ಯಾಚ್ ಆಗಲಿ ವಿರಾಟ್ ಕೋಹ್ಲಿ ಹಾಕೊಳೋ ಜರ್ಸಿ ಸಂಖ್ಯೆ ಹದಿನೆಂಟೇ...

ibtimes

ಅಷ್ಟೇ ಯಾಕೆ, ಚೆಲ್ಸಿ ಫುಟ್ಬಾಲ್ ಟೀಮ್ನೋರಿಂದ ಒಂದು ಜರ್ಸಿ ಇಸ್ಕೊಂಡಾಗಲೂ ಅದೂ 18ನೇ ನಂಬರ್ರೇ...

ndtv

ಕಾರಣ ವಿರಾಟ್ಗೂ ಈ ಸಂಖ್ಯೆಗೂ ಒಂದು ಅಳಿಸಕ್ಕಾಗದ ಭಾವನಾತ್ಮಕ ಸಂಬಂಧ ಇದೆ... ಅವರ ತಂದೆ ಪ್ರೇಮ್ ಕೋಹ್ಲಿ ಸತ್ತಿದ್ದು 18ನೇ ತಾರೀಕು... ಡಿಸೆಂಬರ್ 2006ರಲ್ಲಿ...

quora

ಅಷ್ಟೇ ಅಲ್ಲ, ಅವರು ಸತ್ತಾಗ ವಿರಾಟ್ಗೂ ಸರಿಯಾಗಿ 18 ವರ್ಷ. ಆ ವಯಸ್ಸಲ್ಲಿ ತಂದೆ ತೀರ್ಕೊಂಡ್ರೆ ಮನಸ್ಸಿಗೆ ಏನೇನೋ ಬರುತ್ತೆ... ಭಾವನೆಗಳು ಅಲೆಅಲೆಯಾಗಿ ಬಂದಾಗ ಅದನ್ನ ಮನಸ್ಸು ತಡ್ಕೊಳಕ್ಕಾಗಲ್ಲ...

kheltrishna

ಅವರಪ್ಪಂಗೆ ಮಗ ಇಂಡಿಯಾ ಟೀಮ್ಗೆ ಸೇರಬೇಕು ಅನ್ನೋ ಕನಸಿತ್ತಂತೆ... ಆದರೆ ಅದು ನನಸಾಗೋದನ್ನ ನೋಡೋ ಭಾಗ್ಯ ಅವರಿಗೆ ಇರಲಿಲ್ಲ... ಆದ್ದರಿಂದ ಅವರ ನೆನಪಿನಲ್ಲಿ ವಿರಾಟ್ 18ನೇ ನಂಬರ್ನ ಎಲ್ಲಿಗೆ ಹೋದ್ರೂ ಬಿಡಲ್ಲ...

ಈ ಪದ್ದತಿನ ವಿರಾಟ್ ತನ್ನ ಅಂಡರ್-19 ದಿನಗಳಿಂದ ಮಾಡ್ಕೊಂಡ್ ಬಂದಿದಾನಂತೆ... ಕ್ರಿಕೆಟ್ ಮೈದಾನದಲ್ಲಿ ನಿಂತಾಗ ಗೊತ್ತಾಗದೆ ಹೋದರೂ ವಿರಾಟ್ದು ಎಂಥಾ ಹೂವಿನ ಮನಸ್ಸು! ಭಾವನೆಗಳ ಸೆಳೆತ ಎಂತೆಂಥೋರ್ನೂ ಬಿಡಲ್ಲ!

ಈಗ ನಿಮ್ಮ ಭಾವನೆಗಳ ಪ್ರಪಂಚಕ್ಕೆ ನೀವು ಹೋಗಿ ಕಾಮೆಂಟ್ ಮಾಡಿ: ವಿರಾಟ್ಗೆ 18ಆದರೆ ನಿಮಗೆ ಯಾವ ಸಂಖ್ಯೆ ಮರೆಯಕ್ಕಾಗಲ್ಲ? ಯಾಕೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಬರೀ 20,000 ರೂಪಾಯಿಗೆ ಸಿಗೋ ಈ ಹೊಸ ಸೋಲಾರ್ ಹಾಕಿಸಿದರೆ ನಿಮ್ಮ ಕರೆಂಟ್ ಬಿಲ್ ಅರ್ಧ

IIT ಮದ್ರಾಸ್ ಕರಾಮತ್ತು

ದಿನ ಬೆಳಗಾದ್ರೆ, ಈ ನ್ಯೂಸ್ ಪೇಪರ್ಗಳಲ್ಲಿ  ಕೊಲೆ, ಸುಲಿಗೆ, ದರೋಡೆ ಜೊತೆಗೆ ತಪ್ಪದೇ ಬರೋ ಇನ್ನೊಂದು ಸುದ್ದಿ ಅಂದ್ರೆ, ಲೋಡ್ ಶೆಡ್ಡಿಂಗ್ದು. ಇದನ್ನ ಓದಿ ನಾವು ಬೇಜಾರ್ ಮಾಡ್ಕೊಳೋದೂ ಸರ್ವೇಸಾಮಾನ್ಯ ಆಗೋಗ್ಬಿಟ್ಟಿದೆ. ಇದಕ್ಕೆಲ್ಲ ಇತಿಶ್ರೀ ಹಾಡೋ ಅಂತ ಸಮಯ ಬಂದಿದೆ. ಇದು IIT ಮದ್ರಾಸ್ ಸಿಬ್ಬಂದಿ ಕೃಪೆ! ನಾವೇನ್ ಹೇಳ್ತಾ ಇದ್ದೀವಿ ಅಂತ ತಲೆಕೆಡ್ತಾ ಇದ್ಯಾ? ಮುಂದೋದಿ...ನಿಮಗೇ ಗೊತ್ತಾಗತ್ತೆ.

ಎಕನಾಮಿಕ್ ಟೈಮ್ಸ್ ವರದಿ ಮಾಡಿರೋ ಪ್ರಕಾರ IIT ಮದ್ರಾಸಲ್ಲಿ ಒಂದಿಷ್ಟು ಜನ ಪುಣ್ಯಾತ್ಮರು ಸೇರ್ಕೊಂಡು ನಮ್ಮನೆ ಟೀಪಾಯ್ ಅಷ್ಟಗಲದ್ದು ಸೋಲಾರ್ ಪ್ಲಾಂಟ್ ತಯಾರು ಮಾಡಿದ್ದಾರೆ. ಈ ಸೋಲಾರ್ ಪ್ಲಾಂಟನ್ನ ನಮ್ಮನೆ ತಾರ್ಸಿ ಮೇಲೆ ಅಳವಡಿಸೋದ್ರಿಂದ ಕರೆಂಟ್ ಹೋಗೋ ಸಮಸ್ಯೆ ಇಂದ ಮುಕ್ತಿ ಸಿಗತ್ತೆ. ಇದರ ಜೊತೆಗೆ, ಕರೆಂಟ್ ಬಿಲ್ಲೂ ಅರ್ಧಕ್ಕರ್ಧ ಕಡಿಮೆ ಆಗುತ್ತಂತೆ. ಇದನ್ನ ಹಾಕ್ಸಕ್ಕೆ 20,000ದಷ್ಟು ದುಡ್ಡಿದ್ರೆ ಸಾಕು. ಇದರಲ್ಲಿ 125W ಪ್ಯಾನೆಲ್ ಜೊತೆಗೆ 0.5kWh ಬ್ಯಾಟರಿ ಇರುತ್ತೆ.

ಮೂಲ

ಏನು... ಇದನ್ನ ಕೇಳಿ ನಿಮಗೂ ಖುಷಿ ಆಯ್ತೋ ಇಲ್ವೋ? ಯಾಕಂದ್ರೆ, ಈಗಿರೋ ಮಾರ್ಕೆಟ್ ರೇಟ್ ಪ್ರಕಾರ, ಇದೇ ರೀತಿ ಪ್ಯಾನಲ್ ಹಾಕ್ಸಕ್ಕೆ ಬರೋಬ್ಬರಿ 1,20,000 ರುಪಾಯಿ ಬೇಕು ಅಂತ ಸೋಲಾರ್ ಎನರ್ಜಿ ಕಾರ್ಪೊರೇಶನ್ ಆಫ್ ಇಂಡಿಯಾದೋರು ಹೇಳ್ತಾರೆ. ಆದ್ರೆ, ಈ ಪ್ಲಾಂಟ್ ಅದಕ್ಕಿಂತ ಎಷ್ಟು ಪಟ್ಟು ಕಡಿಮೆ ನೋಡಿದ್ರಾ?

ಈ ಸೋಲಾರ್ ಪ್ಯಾನಲ್ ಇಂದ ಒಂದೆರ್ಡು ಟ್ಯೂಬ್ಲೈಟು, ಫ್ಯಾನು, ಚಾರ್ಜಿಂಗ್ ಪಾಯಿಂಟು, ಟೀವಿ ಎಲ್ಲಾನೂ ಓಡಿಸ್ಬೋದಂತೆ. ಇದಕ್ಕಿಂತ ಸ್ವಲ್ಪ ದೊಡ್ದ ಮಾಡೆಲ್ ತಗೊಂಡ್ರೆ, AC ಮತ್ತು ವಾಶಿಂಗ್ ಮಷಿನ್ ಬಿಟ್ಟು ಇನ್ನೆಲ್ಲಾ ಸಲಕರಣೆಗಳನ್ನೂ ಓಡಿಸ್ಬೋದಂತೆ ಕಣ್ರೀ!

ಪ್ರೊಫೆಸರ್ ಅಶೋಕ್ ಝುಂಝುಂನ್ವಾಲಾ ಹೇಳೋ ಪ್ರಕಾರ, ಈ ಸೋಲಾರ್ ಪ್ಲಾಂಟು ಪೂರ್ತಿ DC ವೈರಿಂಗ್ ಜೊತೆ ಬರೋದ್ರಿಂದ, ಬೇರೆ ಸೋಲಾರ್ ಪ್ಯಾನಲ್ಗಳ ಥರ DCನ ACಗೆ ಪರಿವರ್ತಿಸಲ್ಲ. ಇದ್ರಿಂದ ತುಂಬ ಎನರ್ಜಿ ಉಳಿತಾಯ ಆಗಿ ಕರೆಂಟ್ ಬಿಲ್ಲು ಕಮ್ಮಿ ಆಗುತ್ತೆ. ಗಮನಿಸಿ: ಸಾಮಾನ್ಯವಾಗಿ ನಮ್ಮ ಮನೆಗಳಲ್ಲೆಲ್ಲ AC ವೈರಿಂಗ್ ಮತ್ತು ಎಲೆಕ್ಟ್ರಿಕ್ ಸಾಮನುಗಳು ಇರೋದ್ರಿಂದ ಅದನ್ನೆಲ್ಲ ನೇರವಾಗಿ ಇದಕ್ಕೆ ಅಳವಡಿಸಕ್ಕೆ ಆಗಲ್ಲ.

ತಮಿಳುನಾಡು ಸರ್ಕಾರ, ದೊಡ್ಡ ದೊಡ್ದ MNCಗಳ ಜೊತೆ ಸೇರಿ  ಆಗ್ಲೇ 15,000 ಹಳ್ಳಿ ಮನೆಗಳಿಗೆ ಇದನ್ನ ಅಳವಡಿಸಿದ್ದಾರಂತೆ. ಮದ್ರಾಸಲ್ಲಿ 2015ರಲ್ಲಿ ಪ್ರವಾಹ ಬಂದಾಗ, ಇದರ ಸಹಾಯದಿಂದ 3 ದಿನ ಕರೆಂಟ್ ತೊಂದರೆ ಆಗ್ಲಿಲ್ವಂತೆ. ಇದರ ಜೊತೆ ರಾಜಸ್ಥಾನ್, ಅಸ್ಸಾಮಲ್ಲೂ ಹಾಕಿದ್ದಾರೆ. ಇನ್ಮುಂದೆ, ಕರ್ನಾಟಕ, ಆಂಧ್ರ ತೆಲಂಗಾಣ ಮತ್ತು ಒರಿಸ್ಸಾಲೂ ಇವುಗಳನ್ನ ಅಳವಡಿಸ್ತಾರಂತೆ.

IIT ಅವರ ಈ ಕೆಲಸ ಇಷ್ಟ ಆಗಿ, ನ್ಯೂಯಾರ್ಕಲ್ಲಿರೋ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಎಂಜಿನಿಯರ್ಸ್ (IEEE) ಇವರು ಈ ಯೋಜನೆಗೆ '2017ರ ಅತ್ಯುತ್ತಮ ಜನಸೇವಾ ತಂತ್ರಜ್ಞಾನ' ಅನ್ನೋ ಪ್ರಶಸ್ತಿ ಕೊಟ್ಟಿದ್ದಾರೆ.

ನಂಗಂತೂ ಇದನ್ನ ಕೇಳಿ ತುಂಬಾನೇ ಖುಷಿಯಾಯ್ತಪ್ಪ. ನಿಮಗೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: