ಇಡೀ ಪ್ರಪಂಚದಲ್ಲಿ ಕನ್ನಡಿಗರು ಮಾತ್ರ ಕೈ ಹಾಕಬಹುದಾದ 23 ವಿಶೇಷವಾದ ಜಾಗಗಳು

ಬೇರೆಯೋರು ಮಾಡಿದರೆ ತಪ್ಪಾಗಬಹುದು

ಕೈ

ಕನ್ನಡ ಒಂದು ವಿಶೇಷವಾದ ಭಾಷೆ. ಅಲ್ಲ, ನಮ್ಮದು ಅಂತ ಮಾತ್ರ ಹೇಳ್ತಾ ಇಲ್ಲ, ಅದರ ಸೊಗಡೇ ಬೇರೆ. ಉದಾಹರಣೆಗೆ ನಾವು ‘ಕೈ’ ಅನ್ನೋ ಪದವನ್ನ ಹೇಗೆಲ್ಲ ಬಳಸ್ತೀವಿ ನೋಡಿ... ಈ ಜಾಗದಲ್ಲೆಲ್ಲ ಇಂಗ್ಲಿಷಲ್ಲಿ ‘hand' ಅನ್ನೋ ಪದವನ್ನಾಗಲಿ ಬೇರೆ ಭಾಷೆಯಲ್ಲಿ ಕೈ ಅನ್ನೋ ಪದವನ್ನಾಗಲಿ ಬಳಸಕ್ಕೆ ಬರಲ್ಲ. ಅದು ಆಯಾ ಭಾಷೆಯಲ್ಲಿ ತಪ್ಪಾಗುತ್ತೆ. ಆದರೆ ನಮ್ಮ ಭಾಷೆಯ ಸೊಗಡು ನೋಡಿ:

1) ಅನ್ನ ಬಡಿಸಕ್ಕೆ ಕೈ ಜೊತೆಗೆ ನಮಗೆ ಅನ್ನದ ‘ಕೈ’ ಬೇಕು

ಮೂಲ

2) ರೈಲುಗಳಿಗೆ ಸಿಗ್ನಲ್ ಕೊಡೋ ಈ ಗುರುತು ನಮಗೆ ‘ಕೈ’ಮರ

ಮೂಲ

3) ದೋಸೆ ಗೀಸೆ ಮಾಡಕ್ಕೆ ನಾವು ಉಪಯೋಗಿಸೋದು ಮೊಗಚೋ ‘ಕೈ’

ಮೂಲ

4) ಬೀಗ ತೆಗೆಯಕ್ಕೆ ಬೀಗದ ‘ಕೈ’ ಇಲ್ಲದೆ ಹೋದರೆ ಹೇಗೆ?

ಮೂಲ

5) ಯಾವುದಾದರೂ ಕೆಲಸ ನಮಗೆ ಆಗತ್ತೆ ಅಥವಾ ಆಗಲ್ಲ ಅಂದ್ರೆ ಸಾಲದು, ಅದು ನಮ್ಮ ‘ಕೈ’ಯಲ್ಲಿ ಆಗಬೇಕು ಅಥವಾ ಆಗದೆ ಇರಬೇಕು

ಮೂಲ

6) ಒಂದು ಸರ್ಕಲ್ ಬರೆಯಕ್ಕೆ ನಮಗೆ ‘ಕೈ’ವಾರ ಬೇಕು

ಮೂಲ

7) ಪರ್ಸನಲ್ ಲೋನ್ ಅನ್ನೋದು ನಮ್ಮ ಸಂಸ್ಕೃತಿಯಲ್ಲಿ ‘ಕೈ’ಸಾಲ

ಮೂಲ

8) ಎಷ್ಟೋ ಸಲ ನಮ್ಮಲ್ಲಿ ಹೊಡಿಯಲ್ಲ, ‘ಕೈ’ಮಾಡ್ತಾರೆ

ಮೂಲ

9) ಇನ್ನು ಬರ್ತೀನಿ ಅಂತ, ಮದುವೆ ಮಾಡ್ಕೋತೀನಿ ಅಂತ... ಹೀಗೆ ಒಂದಲ್ಲ ಒಂದು ಮಾತು ಕೊಟ್ಟು ‘ಕೈ’ ಕೊಡೋದಂತೂ ಸರ್ವೇ ಸಾಮಾನ್ಯ

ಮೂಲ

10) ನಾವು ಆಗೊಲ್ಲ ಅಂತ ಹಾಗೇ ಬಿಡಲ್ಲ, ‘ಕೈ’ ಬಿಡ್ತೀವಿ

ಮೂಲ

11) ಪೋಲಿ ಹುಡುಗ್ರು ಹುಡುಗೀರ್ಗೆ ‘ಕೈ’ ಬಿಡೋದು ಕೇಳಿರ್ತೀರಿ

ಮೂಲ

12) ನಮ್ಮಲ್ಲಿ ತಲುಪಬೇಕಾಗಿದ್ದು ಸುಮ್ಮನೆ ತಲುಪಲ್ಲ, ‘ಕೈ’ ಸೇರುತ್ತೆ

ಮೂಲ

13) ನಾವು ದೇವರು ದೊಡ್ಡೋರು ಯಾರಾದರೂ ಸಿಕ್ಕಾಗ ‘ಕೈ’ ಮುಗೀತೀವಿ

ಮೂಲ

14) ನಮ್ಮಲ್ಲಿ ‘ಕೈ’ ಹಿಡಿದರೆ ಮುಗೀತು ಕತೆ -- ಮದುವೆ ಅಂತಾನೇ ಅರ್ಥ

ಮೂಲ

15) ನಾವು ಕೆಲಸದಲ್ಲಿ ಒಂದೊಂದ್ಸಲ ಸುಮ್ಮನೆ ತೊಡಗಿಕೊಳಲ್ಲ, ಅದಕ್ಕೆ ‘ಕೈ’ ಹಾಕ್ತೀವಿ

ಮೂಲ

16) ಬರೀ ಬಾಯಲ್ಲಿ ಹೇಳಿದ್ದು ಸಾಕಾಗದೆ ಇದ್ದಾಗ ‘ಕೈ’ಸನ್ನೆ ಮಾಡ್ತೀವಿ

ಮೂಲ

17) ನಾವು ಒಂದೊಂದ್ಸಲ ಕೊಡಿ ಅಂತ ಬೇಡ್ಕೊಳಲ್ಲ, ‘ಕೈ’ ಚಾಚ್ತೀವಿ ಅಥವಾ ‘ಕೈ’ ಒಡ್ಡುತೀವಿ

ಮೂಲ

18) ನಾವು ಎಷ್ಟೇ ಪ್ರಯತ್ನ ಪಟ್ಟರೂ ಒಂದೊಂದ್ಸಲ ಪರಿಸ್ಥಿತಿ ‘ಕೈ’ಮೀರಿ ಹೋಗುತ್ತೆ

ಮೂಲ

19) ಹಾಗೇ ಒಂದೊಂದ್ಸಲ ಪರಿಸ್ಥಿತಿಯಿಂದ ‘ಕೈಕೈ’ ಹಿಸುಕಿಕೊಳೋ ಹಾಗಾಗುತ್ತೆ

ಮೂಲ

20) ಕೆಲಸಕ್ಕೆ ಯಾವ ಅಂಗಾಂಗ ಬೇಕಾದರೂ ಸರಿ, ಬೇರೆಯೋರ್ ಜೊತೆ ಕೆಲಸದಲ್ಲಿ ‘ಕೈ’ ಜೋಡಿಸದೆ ಬೇರೆ ದಾರಿ ಇಲ್ಲ

ಮೂಲ

21) ನಮಗೇನಾದರೂ ಸಕ್ಕತ್ ಸಿಟ್ಟು ಬಂದ್ರೆ ಒಂದ್ ‘ಕೈ’ ನೋಡ್ಕೋತೀವಿ

ಮೂಲ

22) ಒಂದೊಂದ್ಸಲ ಬೇರೆಯೋರ್ ಕೈಯಲ್ಲಿ ಮಾಡ್ಸಕ್ಕಾಗಲ್ಲ ಅಂತ ನಾವೇ ‘ಕೈ’ಯಾರೆ ಮಾಡಿಬಿಡ್ತೀವಿ

ಮೂಲ

23) ಮನೇಲೇ ತರ್ಕಾರಿ ಗಿರ್ಕಾರಿ ಬೆಳೆಯೋ ಜಾಗಕ್ಕೆ ನಾವು ‘ಕೈ’ತೋಟ ಅಂತೀವಿ

ಮೂಲ

ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ!

ಹೊರಚಿತ್ರದ ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: