ನಾರ್ತ್ ಇಂಡಿಯಾ ಸುತ್ಕೊಂಡ್ ಬನ್ನಿ, ಬೇಡ ಅನ್ನಲ್ಲ, ಆದರೆ ಈ 9 ವಿಷಯ ಗೊತ್ತಿಲ್ಲದೆ ಹೋದ್ರೆ ಕೆಟ್ರಿ

ಪ್ಯಾಕೇಜ್ ಟೂರುಗಳ ಒಳಗಿನ ಕಥೆ

ತಾಜ್ಮಹಲ್

ಇತ್ತೀಚೆಗೆ ನಾರ್ತ್ ಇಂಡಿಯಾಗೆ ಪ್ಯಾಕೇಜ್ ಟೂರಲ್ಲಿ ಹೋಗೋದು ಜಾಸ್ತಿ ಆಗ್ತಿದೆ. ನೀವು ಹೋಗೋದಿದ್ರೆ ನಿಮಗೆ ಕೆಲವು ಕಷ್ಟಗಳು ಎದುರಾಗ್ಬೋದು ಅನ್ನೋದನ್ನ ತಿಳ್ಕೊಂಡು ಮೆಂಟಲಿ ತಯಾರಾಗಿರಿ. ಯಾವ್ದಕ್ಕೂ ಒಂದ್ಸಲ ನಿಮ್ಮ ಪ್ಯಾಕೇಜ್ ಟೂರ್ನೋರನ್ನ ಔರ್ ಕೊಡೋ ಸೌಲಬ್ಯಗಳ ಬಗ್ಗೆ ಕೂಲಂಕುಶವಾಗಿ ಕೇಳ್ಕೊಳಿ. ಈ 9 ವಿಷಯಗಳಲ್ಲಿ ಹುಷಾರಾಗಿರಿ:

1. ಯಾವಾಗ್ಲೂ ಊಟ-ತಿಂಡಿ ನಿಮಗಿಷ್ಟವಾದ್ದೇ ಮಾಡಿರಲ್ಲ

ಹತ್ತಾರ್ ಜನದ್ ಜೊತೆ ಹೋದಾಗ ಒಬ್ಬೊಬ್ರಿಗೂ ಏನೇನ್ ಇಷ್ಟ ಅಂತ ಕೇಳಿ ತಿಂಡಿ-ಅಡುಗೆ ಮಾಡಕ್ಕಾಗಲ್ಲ. ಎಲ್ರಿಗೂ ಒಂದೇ ಸಮ ಉಪ್ಪಿಟ್ಟು, ಇಡ್ಲಿ, ಪೂರಿ, ಚಪಾತಿ, ಅನ್ನ, ಸಾರು, ಹುಳಿ ಹೀಗೆ ಏನೋ ಒಂದ್ ಮಾಡಿರ್ತಾರೆ. ಅದು ಇಷ್ಟ ಆಗ್ಲಿ ಬಿಡ್ಲಿ ತಿನ್ಲೇಬೇಕು. ನೀವೊಬ್ರೇ ಹೊರಗೆ ಹೋಗಿ ತಿನ್ನಕ್ಕಾಗಲ್ಲ. ಫ್ಲೆಕ್ಸಿಬಲ್ಲಾಗಿರಿ. ನಾನ್ ವೆಜ್ ಮಾಡೋದು ಕಡಿಮೆ. ಏನೇನ್ ತಿಂಡಿ ಅಡುಗೆ ಮಾಡ್ತಾರೆ ಅಂತ ತಿಳ್ಕೊಂಡೋಗಿ.

ಮೂಲ

2. ರೈಲಲ್ಲಿ ಪ್ರಯಾಣ ಮಾಡೋದಿದ್ರೆ ಊಟ ಸರಿಹೋಗದೇ ಇರ್ಬೋದು

ನಾರ್ತ್ ಇಂಡಿಯನ್ ಟೂರ್ ಶುರು ಮಾಡೋದು ಬಹುತೇಕ ಡೆಲ್ಲಿಯಿಂದ. ಅಂದ್ರೆ, ನೀವ್ ಡೆಲ್ಲೀಗ್ ಹೋಗೋವರ್ಗೂ ಔರ್ ಜವಬ್ದಾರಿ ಅಲ್ಲ. ಬೆಂಗಳೂರಿಂದ ಅತ್ವಾ ನಿಮ್ಮೂರಿಂದ ಡೆಲ್ಲೀಗೆ ರೈಲಲ್ಲಿ ಹೋಗೋದಿದ್ರೆ ಆ ಪ್ರಯಾಣದ 2-3 ದಿನಗಳ ಊಟದ್ ವ್ಯವಸ್ಥೆ ತುಂಬಾ ಕಡೆ ಪ್ಯಾಕೇಜ್ ಟೂರಿನೋರು ಮಾಡಲ್ಲ. ನಮ್ ಖರ್ಚಲ್ಲಿ ನಾವೇ ತಿನ್ಬೇಕು. ಅಲ್ದೇ ರೈಲ್ವೇ ಊಟದ ಕ್ವಾಲಿಟಿ ಕೆಟ್ಟದಾಗಿರುತ್ತೆ. ನಿಮ್ಮನೆಯಿಂದ ಹೊರ್ಡುವಾಗ ಎರಡ್ಮೂರ್ ದಿನಕ್ಕಾಗುವಷ್ಟು ಚಪಾತಿ ಮಾಡ್ಕೊಂಡ್ ಹೋಗಿರಿ. ಇಲ್ದೇ ಹೋದ್ರೆ ಡೆಲ್ಲಿ ಸೇರೋ ಹೊತ್ಗೆ ಪೂರ್ತಿ ಸುಸ್ತಾಗೋಗ್ತೀರಿ. ಡೆಲ್ಲಿಯಿಂದ ವಾಪಸ್ ಬರುವಾಗ ಸೇಮ್ ಪ್ರಾಬ್ಲಮ್ಮು. 

ಮೂಲ

3. ದಿನವೆಲ್ಲಾ ಸುತ್ತಾಟ - ಒಂದಿಷ್ಟೂ ಸುಧಾರಿಸ್ಕೊಳಕ್ಕಾಗಲ್ಲ

ಪ್ಯಾಕೇಜ್ ಟೂರಿನೋರಿಗೆ ಬಂದೋರಿಗೆ ಎಷ್ಟು ಜಾಗ ತೋರಿಸ್ತೀವಿ ಅನ್ನೋದು ಮುಖ್ಯ. ನಿಮ್ಗೆ ಕೈಲಾಗುತ್ತೋ ಇಲ್ವೋ ಅಂತ ಯಾರೂ ಕೇರ್ ಮಾಡಲ್ಲ. ಒಂದೇ ದಿನದಲ್ಲಿ ಎರಡ್ಮೂರು ಕಡೆ ಸುತ್ತಾಡಿಸ್ಬೋದು. ಎಲ್ಲಾರ್ ಜೊತೆಗೆ ನೀವೂ ಹೋಗ್ತಿರ್ಬೇಕು.

ಮೂಲ

4. ಎಲ್ಲಾ ಕಡೆ ಲಗೇಜು ಹೊರೋದು ನಿಮ್ ಹೊಣೆ

ಒಂದೊಂದ್ ಊರಿಗ್ ಹೋದಾಗ್ಲೂ ರೈಲ್ವೇ ಸ್ಟೇಶನ್ನಿಂದ, ಬಸ್ ಸ್ಟಾಂಡಿನಿಂದ ರೂಮಿಗೆ ಮತ್ತೆ ವಾಪಸ್ ಬಸ್/ಟ್ರೈನ್ ಹತ್ತುವಾಗ ಸುಮಾರು ಅರ್ಧ ಅಥವಾ ಒಂದು ಕಿಲೋಮೀಟರ್ ದೂರ ಲಗೇಜ್ ಹೊತ್ಕೊಂಡೇ ನಡೀಬೇಕಾಗ್ಬೋದು. ಕೂಲಿಗಳು ದುಬಾರಿ (200-500 ರೂ). ಪ್ಯಾಕೇಜ್ ಟೂರಿನೋರೇ ಲಗೇಜ್ ತರ್ಸೋ ಹೊಣೆ ಹೊರೋದಿದ್ರೆ ಜಾಸ್ತಿ ದುಡ್ ಕೊಟ್ರೂ ಪರವಾಗಿಲ್ಲ ಆ ಏಜನ್ಸಿ ಜೊತೇಲೇ ಹೋಗಿ.

ಮೂಲ

5. ಬೇಸಿಗೇಲಿ ಹೋದ್ರೆ ಬೆಂದೋಗ್ತೀರಿ; ರೂಮಲ್ಲಿ, ಬಸ್ಸಲ್ಲಿ ಏಸಿ ಇರುತ್ತಾ ಅಂತ ವಿಚಾರಿಸ್ಕೊಳಿ

ನಾರ್ತ್ ಇಂಡಿಯಾದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳು ಪೂರ್ತಿ ಕಡುಬಿಸಿಲು. ಬೇಸಿಗೇಲಿ ನೀವೇನಾದ್ರೂ ಟೂರ್ ಹೋಗೋದಿದ್ರೆ ನೀವ್ ಹೋಗೋಕಡೆಯೆಲ್ಲಾ ಏಸಿ ಬಸ್, ಏಸಿ ರೂಂ ಇರುತ್ತಾ ಅಂತ ಕೇಳ್ಕೊಳಿ. ಏಸಿ ಇಲ್ದೇ ಹೋದ್ರೆ ಸರಿಯಾಗ್ ನಿದ್ದೇನೂ ಮಾಡಕ್ಕಾಗ್ದೇ ಇನ್ನಷ್ಟು ಸುಸ್ತಾಗ್ಬೋದು.

ಮೂಲ

6. ಪ್ರೇಕ್ಷಣೀಯ ಸ್ಥಳಗಳಲ್ಲಿ ಎಂಟ್ರಿ ಟಿಕೇಟ್ ಖರ್ಚು ನಿಮ್ಮದೇ ಆಗಿರುತ್ತೆ

ನೀವು ಟ್ರಾವಲ್ ಏಜನ್ಸಿಗೆ ಪ್ಯಾಕೇಜ್ ಟೂರಿಗೆ ಅಂತ ಕೊಡೋ ದುಡ್ಡಲ್ಲಿ ಏನೇನ್ ಸೇರಿರುತ್ತೆ ಅನ್ನೋದು ತುಂಬಾ ಮುಖ್ಯ. ಸರಿಯಾಗ್ ಕೇಳ್ಕೊಳಿ. ಯಾಕೇಂದ್ರೆ ಔರ್ ಕರ್ಕೊಂಡ್ ಹೋಗೋ ಎಷ್ಟೋ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವೇಶದ ಟಿಕೆಟ್ ಇರುತ್ತೆ. ಆದ್ರೆ ಆ ಖರ್ಚು ನೀವೇ ತಗೋಬೇಕು ಅಂತಾರೆ ಏಜನ್ಸಿಯೋರು. ಸಾಕಷ್ಟ್ ದುಡ್ಡಿಟ್ಕೊಂಡ್ ಹೋಗಿರಿ.

ಮೂಲ

7. ಭಾಷೆಯ ಸಮಸ್ಯೆ ಬಿಸಿಲಿಗಿಂತಾ ಜಾಸ್ತಿ ಸುಡುತ್ತೆ

ನಾರ್ತ್ ಇಂಡಿಯಾದಲ್ಲಿ ಜನ ನಮ್ ಸೌತ್ ಥರ ನಯವಾಗಿ ನಡ್ಕೊಳಲ್ಲ. ಔರು ನಮ್ಮೂರಿಗೆ ಬಂದ್ರೆ ಹಿಂದಿ ಬರ್ದೇ ಹೋದ್ರೆ ಅಟ್ಲೀಸ್ಟ್ ಇಂಗ್ಲಿಶಲ್ಲಿ ಮಾತಾಡಿಸ್ತೀವಿ. ಅಲ್ಲಿ ನಾವೇನಾದ್ರೂ ಹಿಂದಿ ಬರ್ದೇ ಇರೋರು ಇಂಗ್ಲೀಶಲ್ಲಿ ಮಾತಾಡಿದ್ರೆ "ನಮ್ಮೂರಿಗ್ ಬಂದಿದಿಯಾ ಹಿಂದಿ ಮಾತಾಡು" ಅಂತ ಮೈಮೇಲೆ ಬೀಳೋ ಸಾಧ್ಯತೆ ಹೆಚ್ಚು. ಇದು ಅನುಭವಸ್ತರ ಮಾತು. ಅಲ್ಲಿ ಸಿಗೋ ಗೈಡುಗಳಿಗೆ ಕನ್ನಡಾನೂ ಬರೋದಿಲ್ಲ, ಇಂಗ್ಲೀಶೂ ಸರಿಯಾಗ್ ಬರೋದಿಲ್ಲ. ಕನ್ನಡ ಬರೋ ಗೈಡನ್ನ ಟ್ರಾವಲ್ಸಿನೋರೇ ಗೊತ್ತು ಮಾಡಿ ಕೊಡ್ತಾರಾ ಅಂತ ಕೇಳ್ಕೊಳಿ.

ಮೂಲ

8. ಅಕಸ್ಮಾತ್ ಕೆಮ್ಮು, ನೆಗಡಿ, ವಾಂತಿ, ಬೇದಿ ಏನಾದ್ರೂ ಆದ್ರೆ ಔಷದಿ ನೀವೇ ತಗೊಂಡ್ ಹೋಗಿರ್ಬೇಕು

ಪ್ಯಾಕೇಜ್ ಟೂರ್ ಅಂತ 15-20 ದಿನ ಹೋಗುವಾಗ ಕೆಮ್ಮು, ನೆಗಡಿ, ಜ್ವರ ಏನಾದ್ರೂ ಬಂದ್ರೂ ಬರಬೋದು. ಅಲ್ಲಿಲ್ಲಿ ತಿಂದು-ಕುಡ್ದು ಮಾಡೋದ್ರಿಂದ ವಾಂತಿ ಬೇದಿನೂ ಬರ್ಬೋದು. ಅದಕ್ಕೇಂತ ಬೇಕಾದ ಸಣ್ಣಪುಟ್ಟ ಔಷದಿ ನೀವೇ ಇಟ್ಕೊಂಡೋಗಿರಿ. ಎಲ್ಲಾ ಪ್ಯಾಕೇಜ್ ಟೂರಿನೋರೂ ಔಷಧಿಯೆಲ್ಲಾ ಇಟ್ಕೊಂಡಿರಲ್ಲ. 

ಮೂಲ

9. ಕುಡಿಯೋ ನೀರಿಗೇ ನಿಮ್ಗೆ ಸಾವಿರಾರು ರುಪಾಯ್ ಖರ್ಚಾಗ್ಬೋದು!

ಊಟ ತಿಂಡಿ ಆದ್ಮೇಲೆ ನಿಮಗೆ ಟ್ರಾವಲ್ ಏಜೆನ್ಸಿಯೋರೇ ನೀರ್ ಕೊಡ್ತಾರೆ. ಆದ್ರೆ ಉಳಿದಂಗೆ ದಿನವೆಲ್ಲಾ ನೀವೇ ದುಡ್ ತೆತ್ತು ನೀರ್ ತಗೋ ಬೇಕು. ಒಂದ್ ಅಂದಾಜಲ್ಲಿ 15 ದಿನ ಟೂರ್ ಹೋದ್ರೆ ಒಬ್ರಿಗೆ ಸುಮಾರ್ 1000 ರುಪಾಯ್ ಬರೀ ಕುಡ್ಯೋ ನೀರಿಗೆ ಖರ್ಚಾಗುತ್ತೆ!

ಮೂಲ

ಒಟ್ನಲ್ಲಿ ಸರಿಯಾಗ್ ವಿಚಾರಿಸ್ಕೊಂಡು ಆರಾಮಾಗ್ ಹೋಗ್ಬನ್ನಿ.

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಫೇಸ್ಬುಕ್ ಚರ್ಚೆ:

ರಾಮಾಯಣ ಅರಿದು ಕುಡಿದಿದ್ದರೆ ಮಾತ್ರ ನಿಮಗೆ ಈ 10 ವಿಚಿತ್ರ ಸತ್ಯಗಳು ಗೊತ್ತಿರಕ್ಕೆ ಸಾಧ್ಯ

ಇಲ್ಲದಿದ್ದರೆ ಬಹಳ ಆಶ್ಚರ್ಯ ಆಗುತ್ತೆ

ಕೆಲವ್ರು ರಾಮಾಯಣ ಮತ್ತೆ ಮಹಾಭಾರತ ಅರಿದು ಕುಡಿದು ಬಿಟ್ಟಿದ್ದೀವಿ ಅಂತಿರ್ತಾರೆ. ಆದ್ರೂ ಕೆಲವೊಂದು ವಿಷಯಗಳು ಎಷ್ಟೋ ಮಂದಿಗೆ ಗೊತ್ತಿರಲ್ಲ. ವಾಲ್ಮೀಕಿ ಬರೆದಿರೋಂತ ರಾಮಾಯಣದ ರಾಮ, ಲಕ್ಷ್ಮಣ, ಸೀತೆ ಇಂದಿನವ್ರಿಗೂ ಆದರ್ಶ. ಈವತ್ತಿಗೂ ರಾಮಾಯಣ, ಅದ್ರ ಪಾತ್ರಗಳು ನಮಗೆಲ್ಲಾ ದಾರಿ ತೋರಿಸೋ ತರಹ ಇವೆ. ಆದ್ರೂ ರಾಮಾಯಣದ  ಬಗ್ಗೆ ಎಷ್ಟೋ ಸತ್ಯಗಳು ಜನಕ್ಕೆ ಗೊತ್ತಿರಲ್ಲ. ಮಹಾನ್ ಪಂಡಿತರಿಗೆ ಮಾತ್ರ ಗೊತ್ತಿರುವಂಥ 10 ವಿಚಿತ್ರ ಸತ್ಯಗಳನ್ನು ನಾವಿಲ್ಲಿ ಕೊಡ್ತಿದ್ದೇವೆ.

1. ರಾಮನಿಗೆ ಶಾಂತಾ ಅಂತ ಒಬ್ಬಳು ಅಕ್ಕ ಇರ್ತಾಳೆ

ದಶರಥನಿಗೆ ಕೌಸಲ್ಯೆಯಿಂದ ಹುಟ್ಟಿದ ಮಗಳು ಇವಳು. ಅಂಗದೇಶದ ರಾಜ ರೋಮಪಾದ ಅವಳನ್ನ ದತ್ತು ತೊಗೊಂಡಿರ್ತಾನೆ.

2. ರಾವಣನಿಗೆ 10 ತಲೆಗಳು ಬಂದದ್ದು ಈಶ್ವರನಿಂದ

ಈಶ್ವರನ ಪರಮ ಭಕ್ತನಾಗಿದ್ದ ರಾವಣ. ಘೋರ ತಪಸ್ಸು ಮಾಡಿ ತಲೆಯನ್ನೇ ಈಶ್ವರನಿಗೆ ಅರ್ಪಿಸಿದ್ದ. ಆದರೂ ತಲೆ ಮತ್ತೆ ಬೆಳೀತಿತ್ತಂತೆ. ಹತ್ತು ಸಲ ತಲೆ ಈಶ್ವರನಿಗೆ ಅರ್ಪಿಸಿದರೂ ಅದು ಮತ್ತೆಮತ್ತೆ ಬೆಳೀತಾನೇ ಇತ್ತಂತೆ. ಕೊನೆಗೆ ಶಿವನು ಪ್ರತ್ಯಕ್ಷನಾಗಿ ಎಲ್ಲಾ ಹತ್ತು ತಲೆಗಳನ್ನು ವಾಪಸ್ಸು ಕೊಟ್ನಂತೆ. ಹಾಗಾಗಿ ರಾವಣನಿಗೆ 10 ತಲೆಗಳು ಬಂದವು ಅಂತ ಪುರಾಣ ಹೇಳುತ್ತೆ.

3. ರಾವಣನಿಗಿಂತ ಮೊದಲು ಲಂಕೇನ ಕುಬೇರ ಆಳ್ತಿರ್ತಾನೆ

ಲಂಕೆಯನ್ನ ಕಟ್ಟಿ ಆಳ್ತಾ ಇದ್ದದ್ದು ಕುಬೇರ. ಅವನ ಮಲಣ್ಣ ರಾವಣ ಯುದ್ದ ಮಾಡಿ ಕುಬೇರನಿಂದ ಲಂಕೆಯನ್ನ ಕಿತ್ತುಕೊಂಡ ಅಂತ ಪುರಾಣ ಹೇಳುತ್ತೆ.

 

4. ಲಕ್ಷ್ಮಣ ಶೇಷನಾಗನ (ಆದಿಶೇಷನ) ಅವತಾರ

ವಿಷ್ಣುವಿನ ಅವತಾರ ರಾಮ ಅನ್ನೋದು ಎಲ್ರಿಗೂ ಗೊತ್ತು. ಆದರೆ ಶೇಷನಾಗನ ಅವತಾರ ಲಕ್ಷ್ಮಣ ಅನ್ನೋದು ಬಹಳಷ್ಟು ಮಂದಿಗೆ ಗೊತ್ತಿಲ್ಲ.   

5. ಹದಿನಾಲ್ಕು ವರ್ಷಗಳ ವನವಾಸದಲ್ಲಿ ಲಕ್ಷ್ಮಣ ನಿದ್ದೇನೇ ಮಾಡಲ್ಲ

ಯಾಕಂದ್ರೆ ವನವಾಸದಲ್ಲಿದ್ದ ರಾಮ ಮತ್ತೆ ಸೀತೆಯನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೋಬೇಕಾಗಿತ್ತು. ಅದಕ್ಕಾಗಿ ತನಗೆ ನಿದ್ದೆ ಬರದೆ ಇರೋಹಂಗೆ ನಿದ್ರಾದೇವಿಯ ವರ ಪಡ್ಕೊಂಡಿರ್ತಾನೆ ಲಕ್ಷ್ಮಣ.

6. ಶ್ರೀಕೃಷ್ಣನನ್ನ ಬೇಟೆಗಾರನಾಗಿ ಬಂದು ಕೊಂದದ್ದು ವಾಲಿ

ಮರದ ಕೆಳಗೆ ಮಲಗಿ ನಿದ್ದೆ ಮಾಡ್ತಿದ್ದಾಗ ಶ್ರೀಕೃಷ್ಣನನ್ನ ಜರಾ ಅನ್ನೋ ಬೇಟೆಗಾರ ಬಾಣಬಿಟ್ಟು ಕೊಂದ. ಈ ಬೇಟೆಗಾರ ಬೇರೆ ಯಾರು ಅಲ್ಲ, ವಾಲಿ ಅವತಾರ. 

7. ಲಕ್ಷ್ಮಣ ಸಾಯೋದು ರಾಮನ ಒಂದು ಮಾತಿಂದ

ಒಮ್ಮೆ ಯಮಧರ್ಮನನ್ನು ರಾಮ ಭೇಟಿಯಾಗಿ ನಮ್ಮಿಬ್ಬರ ಮಾತುಕತೆಗೆ ಯಾರೇ ಬಂದು ಅಡ್ಡಿಪಡಿಸಿದ್ರೂ ಅವರನ್ನ ಸಾಯಿಸಿಬಿಡು ಅಂತ ಕೇಳ್ಕೊಂಡಿದ್ದ. ಅದೇ ಟೈಮಿಗೆ ಪಾಪ ಲಕ್ಷ್ಮಣ ಬರ್ತಾನೆ. ರಾಮನನ್ನ ಮಾತಾಡ್ಬೇಕು ಅಂತಾನೆ. ಆಗ ರಾಮ ಹೇಳಿದಂಗೆ ಲಕ್ಷ್ಮಣನ್ನ ಯಮ ಸಾಯಿಸ್ತಾನೆ.

8. ಹನುಮಂತನಿಗೆ ಒಂದು ಹೂವಿನಿಂದ ಭಜರಂಗಬಲಿ ಅಂತ ಹೆಸರು ಬಂತು

ಸಿಂಧೂರ ಹೂವು ತಲೆ ಮೇಲೆ ಇದ್ದಷ್ಟು ಹೊತ್ತು ರಾಮ ಆರೋಗ್ಯವಾಗಿರ್ತಾನೆ ಅಂತ ಹನುಮಂತನಿಗೆ ಒಮ್ಮೆ ಸೀತೆ ಹೇಳಿದ್ಲು. ಅದನ್ನ ಕೇಳಿ ಹನುಮ ದೇಹವನ್ನೇ ಸಿಂಧೂರವಾಗಿ ಬದಲಾಯಿಸಿಕೊಂಡಿದ್ದ. ಭಜರಂಗ್ ಅಂದ್ರೆ ಸಿಂಧೂರ ಅಂತ ಅರ್ಥ. ತನ್ನನ್ನು ತಾನು ಸಿಂಧೂರವಾಗಿಸಿಕೊಂಡ ಕಾರಣ ಭಜರಂಗಬಲಿ ಅಂತ ಹೆಸರು ಬಂತು.

9. ಅಳಿಲು ಬೆನ್ನ ಮೇಲೆ ಮೂರು ಗೆರೆ ಇರೋದಕ್ಕೆ ರಾಮ ಕಾರಣ

ಲಂಕೆಗೆ ಹೋಗ್ಬೇಕಾದ್ರೆ ಕಪಿಸೈನ ರಾಮಸೇತು ಕಟ್ಟಿತು. ಅದನ್ನ ಕಟ್ಟಬೇಕಾದ್ರೆ ಅಳಿಲುಗಳು ಮಣ್ಣನ್ನ ತಂದುಕೊಡ್ತಿದ್ವು. ಇದನ್ನ ಕಂಡ ಕಪಿಸೈನ್ಯ ನಗಾಡ್ತಿತ್ತು. ಆದರೆ ರಾಮನು ಅವುಗಳ ಅಳಿಲು ಸೇವೆಯನ್ನ ತುಂಬಾ ಇಷ್ಟಪಟ್ಟಿದ್ದ. ಅಳಿಲನ್ನ ಎತ್ಕೊಂಡು ಬೆನ್ನು ಸವರಿದಾಗ ಈ ಮೂರು ಗೆರೆಗಳು ಮೂಡಿದ್ವಂತೆ. 

 

10. ಶೂರ್ಪಣಖೀಗೆ ಅಣ್ಣ ರಾವಣನ್ನ ಸಾಯಿಸಬೇಕು ಅನ್ನೋ ಬಯಕೆ ಇರುತ್ತೆ

ಇದು ನಿಜವಾಗ್ಲೂ ಅಚ್ಚರಿ ಪಡೋಂತ ಸಂಗತಿ. ಶೂರ್ಪಣಕಿಯ ಗಂಡ ದುಷ್ಟಬುದ್ಧಿ ಅನ್ನೋನ್ನ ರಾವಣ ಸಾಯಿಸಿರ್ತಾನೆ. ಕೆಲವು ರಾಮಾಯಣಗಳಲ್ಲಿ ರಾವಣನ ಮೇಲೆ ಸೇಡು ತೀರಿಸಿಕೊಳಕ್ಕೆ ಶೂರ್ಪಣಕಿ ದೊಡ್ಡ ನಾಟಕ ಮಾಡಿ, ಯುದ್ಧ ಆಗೋಹಾಗೆ ನೋಡ್ಕೊಂಡು ರಾವಣನ ಸಾವಿಗೆ ಕಾರಣ ಆಗ್ತಾಳೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: