ತಾಳಿ ಕಟ್ಟೋರು, ಕಟ್ಟಿಸಿಕೊಳೋರು, ಕಟ್ಟಿಸೋರು, ಎಲ್ಲರಿಗೂ ಗೊತ್ತಿರಬೇಕಾದ್ದು

ಆದರೆ ಸಾಮಾನ್ಯವಾಗಿ ಗೊತ್ತಿಲ್ಲದೆ ಇರೋದು

ತಾಳಿ

ಹಿಂದೂ ಮದುವೆಗಳಲ್ಲಿ ತಾಳಿ ಕಟ್ಟುವಾಗ ಒಂದು ಶ್ಲೋಕ ಕೇಳಿ ಬರೋದು ಸರ್ವೇ ಸಾಮಾನ್ಯ:

ಮಾಂಗಲ್ಯಂ ತಂತುನಾಽನೇನ ಮಮ ಜೀವನ ಹೇತುನಾ |

ಕಂಠೇ ಬಧ್ನಾಮಿ ಸುಭಗೇ ಸಂಜೀವ ಶರದಃ ಶತಮ್ ||

(ಕೆಲವರು ‘ಸಂಜೀವ’ ಬದಲು ‘ತ್ವಂ ಜೀವ’ ಅಂತಾರೆ)

ಆದರೆ ಸಾಮಾನ್ಯವಾಗಿ ಇದರ ಅರ್ಥ ಯಾರಿಗೂ ಗೊತ್ತಿರಲ್ಲ. ಪುರೋಹಿತರು ಇದನ್ನ ಹೇಳಿಬಿಟ್ರೆ ಸಾಕು ಅನ್ನೋರೇ ಹೆಚ್ಚು.

ತಾಳಿ ಕಟ್ಟೋರು, ಕಟ್ಟಿಸಿಕೊಳೋರು, ಕಟ್ಟಿಸೋರು ಎಲ್ಲರೂ ಈ ಮುಖ್ಯವಾದ ಶ್ಲೋಕಾನ ಅರ್ಥ ಮಾಡ್ಕೊಂಡ್ರೆ ಒಳ್ಳೇದು...

ಮೂಲ

ಸಂಸ್ಕೃತದಲ್ಲಿ ಈ ಶ್ಲೋಕದ ಅನ್ವಯ ಹೀಗೆ ಮಾಡಬಹುದು:

(ಹೇ) ಸುಭಗೇ ಓ ಪ್ರೀತಿಪಾತ್ರಳೇ ಮಮ ನನ್ನ ಜೀವನ ಹೇತುನಾ ಜೀವನಹೇತುವಾಗಿರುವ, ಬದುಕಿಗೊಂದು ಮುಖ್ಯವಾದ ಕಾರಣವಾಗಿರುವ ಅನೇನ ತಂತುನಾ ನೂಲಿನಿಂದ ಕಂಠೇ ಕುತ್ತಿಗೆಗೆ ಮಾಂಗಲ್ಯಂ ಮಾಂಗಲ್ಯವನ್ನು ಬಧ್ನಾಮಿ ಕಟ್ಟುವೆ ಶತಂ ನೂರು ಶರದಃ ಶರದೃತುಗಳು, ವರ್ಷಗಳು ಸಂಜೀವ ಚೆನ್ನಾಗಿ ಬಾಳು (ತ್ವಂ ಜೀವ ಎನ್ನುವುದಾದರೆ ನೀನು ಬಾಳು ಎಂದಷ್ಟೇ ಆಗುತ್ತದೆ).

ಅಂದ್ರೆ ಒಟ್ನಲ್ಲಿ ಅರ್ಥ ಹೀಗಾಯಿತು:

ಓ ಪ್ರೀತಿಪಾತ್ರಳೇ, ನನ್ನ ಜೀವನಹೇತುವಾಗಿರುವ, ಬದುಕಿಗೊಂದು ಮುಖ್ಯವಾದ ಕಾರಣವಾಗಿರುವ, ಈ ನೂಲಿನಿಂದ ಕುತ್ತಿಗೆಗೆ ಮಾಂಗಲ್ಯವನ್ನು ಕಟ್ಟುವೆ; ನೂರು ವರ್ಷ ಚೆನ್ನಾಗಿ (ನನ್ನೊಡನೆ) ಬಾಳು!

ಇದನ್ನ ಮದುವೆ ಗಂಡು (ಮಾತ್ರ) ಹೆಣ್ಣಿಗೆ (ಮಾತ್ರ) ಹೇಳಬೇಕು :-)

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಉಗುರಿಗೆ ಟೂತ್‍ಪೇಸ್ಟ್ ಹಚ್ಚಿಕೊಳೋದ್ರಿಂದ ಏನ್ ಲಾಭ ಸಿಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯಾವನಿಗ್ ಗೊತ್ತಿತ್ತು?

ಬೆರಳು

ನಿಮ್ಮ ಕೈ ಉಗುರು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿದ್ಯಾ?

ಮೂಲ

ಡಾರ್ಕ್ ಬಣ್ಣದ ನೇಲ್ ಪಾಲಿಶ್ ಹೆಚ್ಚಿಕೊಂಡು ತೆಗೆದರೆ ಹೀಗಾಗಬಹುದು. ಇಲ್ಲಾ ಸಿಗರೇಟ್ ಹಿಡ್ಕೊಳೋದ್ರಿಂದಾನೂ ಹೀಗಾಗಬಹುದು...

ಕಾರಣ ಏನೇ ಇರಲಿ, ಇದಕ್ಕೆ ಒಂದು ಸುಲಭವಾದ ಉಪಾಯ ಇದೆ...

ಮಾಮೂಲಿ ಟೂತ್‍ಪೇಸ್ಟ್ ತೊಗೊಂಡು...

ಮೂಲ

ಉಗುರಿಗೆ ಹಚ್ಚಿ 10 ನಿಮಿಷ ಹಾಗೇ ಬಿಟ್ಟುಬಿಡಿ. ಆಮೇಲೆ ತೊಳ್ಕೊಳಿ.

ಮೂಲ

ಹೀಗೆ ದಿನ ಬಿಟ್ಟು ದಿನ ಮಾಡಿ. 1 ವಾರದಲ್ಲಿ ಹಳದಿ ಬಣ್ಣ ಮಾಯ!

ಕೆಲವರಿಗೆ ಇನ್ನೂ ಹೆಚ್ಚು ದಿನ ತೊಗೋಬೋದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: