ಈ ಹುಡುಗಿ ಪ್ರಕಾರ ಈ ಆಟೋ ಡ್ರೈವರ್ರು ಅವಳ ಬಟ್ಟೆ ನೋಡಿ ‘ಸೂಳೆ’ ಅಂದನಂತೆ, ಆದರೆ ನಿಜ ಏನಿರಬಹುದು?

ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ

ಆಟೋ ಕೇಸು

ಬೆಂಗಳೂರು, ಏಪ್ರಿಲ್ 24: ಐಶ್ವರ್ಯ ಸುಬ್ರಮಣ್ಯನ್ ಅನ್ನೋ ಈ ಹುಡುಗಿ ಮಂಡಿ ವರೆಗೂ ಇರೋ ಒಂದು ಬಿಳೀ ಡ್ರಸ್ ಹಾಕ್ಕೊಂಡಿದ್ಳಂತಪ್ಪ.

ಹೆಸರು ಕೇಳಿದರೆ ತಮಿಳ್ ಹುಡುಗಿ ಅನ್ನಿಸುತ್ತೆ. ಅದೇನೇ ಇರಲಿ ಮುಂದೆ ಓದಿ.

ಇವನ ಹೆಸರು ಶ್ರೀಕಾಂತ್. ಇವನ ಆಟೋನಲ್ಲಿ ಅದೆಲ್ಲಿಗೆ ಹೋದ್ಲೋ ಸರಿಯಾಗಿ ಗೊತ್ತಿಲ್ಲ...

ಆಟೋ ನಂಬರ್ ನೋಡ್ಕೊಂಬುಡಿ ಬೇಕಾದ್ರೆ:

ಸರಿ, ಈ ಹುಡುಗಿ ಆಟೋ ಹತ್ತಿ ತನ್ನ ಜಾಗಕ್ಕೆ ಬಂದಾಗ ಡ್ರೈವರ್ ಕೈಗೆ 50 ರೂ ಕೊಟ್ಟಳಂತೆ. ಮೀಟ್ರು ಬರೀ 40 ಆಗಿತ್ತಂತೆ, ಛೆ ಪಾಪ ಶೆಕೆಯಲ್ವಾ 10 ರೂ ಜಾಸ್ತಿ ಕೊಟ್ರೂ ಪರವಾಗಿಲ್ಲ ಅಂತ ಇವಳ ಐಡಿಯಾ. ಸರಿ, ಇಸ್ಕೊಂಡು ಶ್ರೀಕಾಂತ್ ಹೇಳಿದನಂತೆ -

"ದಯವಿಟ್ಟು ಬೇಜಾರ್ ಮಾಡ್ಕೋಬೇಡಿ, ಆದರೆ ನೀವು ಹಾಕ್ಕೊಂಡಿರೋ ಬಟ್ಟೆ ಅಷ್ಟು ಸರಿಯಲ್ಲ"

ಅದಕ್ಕೆ ತಬ್ಬಿಬ್ಬಾದ ಐಶ್ವರ್ಯ ಹೇಳಿದಳಂತೆ -

"ನಿಮಗೆ ದುಡ್ಡು ಕೊಡ್ತಿದೀನೋ ಇಲ್ಲವೋ? ನಾನು ಯಾವ ಬಟ್ಟೆ ಹಾಕೋಬೇಕು ಯಾವ ಬಟ್ಟೆ ಹಾಕ್ಕೋಬಾರ್ದು ಅಂತ ಹೇಳೋ ಹಕ್ಕು ನಿಮಗಿಲ್ಲ..."

ಆಮೇಲೆ ಶ್ರೀಕಾಂತ್ ಕೆಳಗಿಳಿದು ಒಬ್ಬ ’slut' ತರಹ ಯಾಕೆ ಅವಳು ಬಟ್ಟೆ ಹಾಕ್ಕೋಬಾರದು ಅಂತ ಹೇಳಿದ ಅಂತಾಳೆ ಐಶ್ವರ್ಯ.

slut ಅಂದ್ರೆ ಸೂಳೆ ಅಂತಾನೇ ಅರ್ಥ. ಶ್ರೀಕಾಂತ್ ಇಂಗ್ಲಿಷಲ್ಲಿ ಇವಳನ್ನ ಬೈದಿರೋ ಸಾಧ್ಯತೆ ಬಹಳ ಕಡಿಮೆ... ಒಪ್ತೀರಾ?

ಹಾಗಾದ್ರೆ ಕನ್ನಡದಲ್ಲಿ ‘ಸೂಳೆ’ ಅಂತ ಕರೆದಿದ್ದಾನೆ ಅಂತೀರಾ? ಸಾಧ್ಯತೆ ಇದೆಯಾ? ಕೆಳಗೆ ನಿಮ್ಮ ಅನಿಸಿಕೆ ತಿಳಿಸಿ...

ಯಾಕಂದ್ರೆ ಇವಳು ಶ್ರೀಕಾಂತ್ ಮೇಲೆ ಈ ಆರೋಪವನ್ನ ಹೊರೆಸಿ ಫೇಸ್ಬುಕ್ಕಲ್ಲೆಲ್ಲ ಸಕ್ಕತ್ ಧೂಳೆಬ್ಬಿಸ್ತಾ ಇದಾಳೆ. ಅದನ್ನ ಓದಿ ಮರು ಉತ್ತರ ಕೊಡೋಕ್ಕೆ ಶ್ರೀಕಾಂತ್ ಫೇಸ್ಬುಕ್-ಗೀಸ್ಬುಕ್ಕಿಗೆ ಬರ್ತಾನೋ ಇಲ್ಲವೋ ಗೊತ್ತಿಲ್ಲ. ಇಂಗ್ಲಿಷ್ ಸುದ್ದಿ ಮಾಧ್ಯಮಗಳಂತೂ ಸಿಕ್ಕಿದ್ದೇ ಚಾನ್ಸು ಅಂತ ಇವಳಿಗೆ ‘slut-shaming’ ಆಗಿದೆ, ಅದಾಗಿದೆ ಇದಾಗಿದೆ ಅಂತ ತಮ್ಮದೇ ಪುಂಗಿ ಊದ್ತಾ ಇದರೆ. ಆದರೆ ನಮ್ಮ ಪ್ರಶ್ನೆ ಇಷ್ಟೇ: ಶ್ರೀಕಾಂತ್ ಇಂಗ್ಲಿಷಲ್ಲಿ slut ಅಂತ ಕರೆದಿರೋ ಸಾಧ್ಯತೆ ಇಲ್ಲ. ಹಾಗಾದರೆ ಕನ್ನಡದಲ್ಲಿ ‘ಸೂಳೆ’ ಅಂತ ಕರೆದಿರೋ ಸಾಧ್ಯತೆ ಇದೆಯಾ?

ಈ ಹುಡುಗಿ ಹೇಳಿರೋ ಹಾಗೆ, ಎಲ್ಲಾ ಇಂಗ್ಲಿಷ್ ಮಾಧ್ಯಮಗಳು ಹೇಳೋ ಹಾಗೆ ಇವಳಿಗೆ ‘slut-shaming’ ನಡೆದಿದ್ಯಾ? ಸುಮ್ಮನೆ ಇರಬೇಡಿ, ನಿಮ್ಮ ವೋಟ್ ಹಾಕಿ:

ಚಿತ್ರಗಳು: facebook

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: