ನೀವು ಇಷ್ಟ ಪಟ್ಟೋರು ಬೇರೆಯೋರ್ನ ಮದುವೆ ಆದರೆ ಆ ನೋವು ಹೋಗಿಸಿಕೊಳಕ್ಕೆ 10 ವಿಧಾನಗಳು

ಇರುಳಾದ್ಮೇಲೆ ಹಗಲು ಬರ್ಲೇಬೇಕು ಅನ್ನೋದು ನೆನಪಿಡಿ

ಬೇರೆಯೋಳು

ನಮ್ಮ ಮನ್ಸಲ್ಲಿ ಮನೆ ಮಾಡ್ಕೊಳ್ಳೋ ಅವನು/ಅವಳನ್ನ ನಮ್ಮ ಬಾಳ ಸಂಗಾತಿ ಮಾಡ್ಕೊಳಕ್ಕಾಗಲ್ಲ, ಮದ್ವೆ ಮಾಡ್ಕೊಂಡು ಜೊತೇಲಿ ಜೀವನ ಮಾಡ್ಬೇಕು ಅನ್ಕೊಂಡಿದ್ದು ನಡೆಯಲ್ಲ, ಅವನು/ಳು ಬೇರೆಯೋರನ್ನ ಮದ್ವೆ ಆಗ್ತಿದಾರೆ ಅಂತ ಗೊತ್ತಾದಾಗ ಆಗೋ ನೋವು ಹೇಳತೀರದ್ದು. ದುಃಖ, ಅಳು, ಒಂಟಿತನ, ಎಲ್ಲಾ ಆವರಿಸಿಕೊಂಡುಬಿಡುತ್ತೆ. ಆ ನೋವು ಇಷ್ಟೇ ದಿನದಲ್ ವಾಸಿ ಆಗುತ್ತೆ ಅಂತ ಹೇಳಕ್ಕಾಗಲ್ಲ. ಕೆಲವ್ರಿಗೆ ಕೆಲವೇ ದಿನ್ದಲ್ಲಿ ಓಕೆ ಅನ್ನಿಸ್ಬೋದು. ಇನ್ ಕೆಲವರ್ಗೆ ವರ್ಷಗಟ್ಲೆ ಹಿಡೀಬೋದು.

ಮೂಲ

ನಿಮಗೇನಾದ್ರೂ ನೀವು ನಿಮ್ಮ ಲವ್ವರ್ರಿಂದ ದೂರ ಆದ್ಮೇಲೆ ಸಮಾಧಾನ ಮಾಡ್ಕೊಳಕ್ಕೆ ತುಂಬಾ ಟೈಮ್ ತಗೋತಿದೀರಿ ಅನ್ಸುದ್ರೆ ಒಂದ್ ಮಾತ್ ನೆನಪಿಟ್ಕೊಳಿ... ನೀವೊಬ್ರೆ ಅಲ್ಲ ಹೀಗಿರೋದು. ಜಗತ್ತಲ್ಲಿ ನಿಮ್ಮಂತೋರು ಕೋಟ್ಯಾಂತರ ಜನ ಇದ್ದಾರೆ. ಆ ಟೈಮಲ್ಲಿ ನಿಮಗೇನಾದ್ರೂ ಬೇಜಾರಾಗಿ ಅಳು ಬಂದ್ರೆ, ಅಥವಾ ಜೀವನದಲ್ಲಿ ಆಸಕ್ತಿ ಕಳಕೊಂಡಿದ್ರೆ ಅದ್ರಲ್ಲಿ ವಿಶೇಷಾನೂ ಇಲ್ಲ, ಕೆಟ್ಟದೂ ಇಲ್ಲ. ಇದು ತುಂಬಾ ಜನಕ್ಕೆ ಕಾಮನ್.  ಒಳಗಿನ ಗಾಯ ವಾಸಿ ಆಗ್ಬೇಕಾದ್ರೆ ಇವೆಲ್ಲಾ ಹಂತಗಳು. ಆದ್ರೆ ನೀವು ನಿಮ್ಮ ನೋವುಗಳಿಂದ ಬೇಗ ಚೇತರಿಸ್ಕೋಬೇಕು ಅಂದ್ರೆ ನೀವು ಈ ವಿಷಯಾನ ನೋಡೋ ರೀತಿ ಬದಲಾಯಿಸ್ಕೋಬೇಕು. ಹೇಗೆ ಅಂದ್ರಾ? ಮುಂದೆ ಓದಿ:

1. ಹಳೇ ಲವ್ವರ್ ಮರೆಯೋಕ್ಕೆ ಇಷ್ಟೇ ಟೈಮ್ ಅಂತ ಟಾರ್ಗೆಟ್ ಇಟ್ಕೋಬೇಡಿ

ಆಗ್ಲೇ ಹೇಳ್ದಂಗೆ, ಕೆಲವರು ಆಗಿದ್ದನ್ನ ಬೇಗ ಮರೀತಾರೆ. ಇನ್ ಕೆಲುವ್ರು ತುಂಬಾ ವರ್ಷಾನೇ ತಗೋತಾರೆ. ಇಟ್ಸೋಕೆ! "ಅಯ್ಯೋ!  ಇಷ್ಟು ದಿನ ಆದ್ರೂ ನಾನಿನ್ನೂ ಅದೆಲ್ಲಾ ಮರ್ತಿಲ್ವಲ್ಲ.." ಅಂತೆಲ್ಲಾ ಅನ್ಕೋಬೇಡಿ. ಕಾಲವೇ ಎಲ್ಲಾ ಗಾಯಾನೂ ವಾಸಿ ಮಾಡುತ್ತೆ. ಕಾಲಾಯ ತಸ್ಮೈ ನಮಃ. ಇಷ್ಟು ದಿನ ಆದ್ರೂ ಅವನ(ಳ)ನ್ನ ಮರೆಯಕ್ಕಾಗ್ತಿಲ್ಲ ಅನ್ನೋ ಒತ್ತಡ ನಿಮ್ಮ ಮನಸ್ಸಿನ ಮೇಲೆ ಹೇರಬೇಡಿ. ಅದರಿಂದ ಇನ್ನಷ್ಟು ಉರ್ಕೋತೀರಿ, ಅಷ್ಟೇ, ಇನ್ನೇನು ಆಗಲ್ಲ.

ಮೂಲ

2. ನಿಮ್ಮಲ್ಲಿ ಹುಟ್ಟೋ ಭಾವನೆಗಳನ್ನ ಅನುಭವಿಸಿ - ಭಾವನೆಗಳಿಂದ ದೂರ ಇರಬೇಡಿ

ಪ್ರೀತಿಸಿದೋರಿಂದ ದೂರ ಆದಾಗ ದುಃಖ ನೋವು ಎಲ್ಲಾ ಸಹಜ. ಇಂತಹ ಭಾವನೆಗಳು ಬಂದಾಗ "ಅದೆಲ್ಲಾ ಕೆಟ್ಟದು. ನೆಗೆಟಿವ್, ನನ್ನ ಮನಸ್ಸಿಗೆ ಬರಬಾರದು" ಅಂತ ದೂರ ತಳ್ಳಕ್ ಹೋಗ್ಬೇಡಿ. ಎಲ್ಲಾ ಭಾವನೆಗಳೂ ಸತ್ಯವಾದವೇ. ಅವನ್ನು ಅನುಭವಿಸೋದ್ರಿಂದಾನೇ ನಮ್ ಮನಸ್ಸು ಬೇಗ ವಾಸಿ ಆಗೋದು.  ಈ ನೋವಿಗೆ ಕೊನೇನೇ ಇಲ್ವೇನೋ ಅಂತೆಲ್ಲಾ ಅನ್ನಿಸ್ಬೋದು. ತಲೆ ಕೆಡಿಸ್ಕೋಬೇಡಿ. ಮುಂದೆ ಹೋಗ್ತಾ ಇರಿ.

3. ನಿಮ್ಮ ಹಳೇ ಲವ್ವರ್ನ ನಿಮ್ಮ ಫೋನಿಂದ, ಫೇಸ್ಬುಕ್ಕಿಂದ ಕಿತ್ತಾಕಿ

ಫೇಸ್ಬುಕ್ಕಲ್ಲಿ ಆಗಾಗ ನಿಮ್ ಹಳೇ ಲವರ್ ಏನ್ ಮಾಡ್ತಿದ್ದಾನೆ/ಳೆ ಅಂತ ನೋಡ್ತಾ ಇದ್ರೆ ಅದು ಆಗಿರೋ ಗಾಯಾನ ಕೆರ್ಕೊಂಡಂಗೆ - ಬೇಗ ವಾಸಿ ಆಗಕ್ ಬಿಡೋದೇ ಇಲ್ಲ. ಮುಲಾಜಿಲ್ದೇ ಕಿತ್ತಾಕಿ ಅವ್ರನ್ನ. ಮೊದ್ಮೊದ್ಲು ಬೇಜಾರ್ ಆಗ್ಬೋದು. ಸೊಲ್ಪ ದಿನ ಆಗ್ತಿದ್ದಂಗೆ ಏನೋ ಒಂಥರಾ ಬಿಡುಗಡೆ ಆದ ಭಾವನೆ ಬರುತ್ತೆ... ಒಂಥರಾ ಹೊಸ ಹುರುಪು ಬರುತ್ತೆ. ಅದ್ನೇ ಇಟ್ಕೊಂಡ್ ಮುನ್ನುಗ್ಗಿ.

ಮೂಲ

4. ನಿಮ್ಮನ್ನ ನೀವು ಪ್ರೀತಿಸೋದ್ ಮರೀಬೇಡಿ

ನಿಮ್ಮನ್ನ ಯಾರಾದ್ರೂ ದೂರ ಮಾಡ್ ಹೋದ್ರೆ "ಅಯ್ಯೋ, ನಾನ್ ಅವ್ರಿಗೆ ಯೋಗ್ಯವಲ್ಲವೇನೋ" ಅನ್ನೋ ಭಾವನೆ ತುಂಬಾ ಜನರಲ್ಲಿ ಬೇಗ ಬಂದ್ಬಿಡುತ್ತೆ. ಆದ್ರೆ ಒಂದ್ ವಿಷ್ಯ ನೆನಪಿಟ್ಕೊಳಿ... ನಿಮ್ಮ ಯೋಗ್ಯತೇನ ಅಳೆಯೋಕ್ಕೆ ಅವರ ಜೊತೆಗಿನ ಸಂಬಂಧ ಬೇಕಾಗಿಲ್ಲ. ನಿಮ್ಮನ್ನ ನೀವು ಗೌರವಿಸೋದು, ಪ್ರೀತಿಸೋದು ತುಂಬಾ ಮುಖ್ಯ. 

5. ನಿಮ್ಮ ಅನಿಸಿಕೆಗಳನ್ನ ಒಂದ್ ಕಡೆ ಬರ್ಕೊಳ್ಳಿ

ಇದೊಂದು ಅದ್ಬುತವಾದ ದಾರಿ. ನಮ್ಮ ಭಾವನೆಗಳನ್ನ ಹಾಳೆ ಮೇಲೆ ಬರೆದು, ಆಗಾಗ ಓದಿದ್ರೆ, ನಮ್ ಮನಸಲ್ಲಿರೋದನ್ನ ನಾವೇ ಬೇರೊಂದು ದೃಷ್ಟಿಕೋನದಿಂದ ನೋಡಕ್ ಸಾಧ್ಯವಾಗತ್ತೆ. ಇದ್ರಿಂದ ಎಷ್ಟೋ ಸಮಾಧಾನ ಆಗುತ್ತೆ. ಬರೀ ಭಾವನೆಗಳನ್ನ ಮಾತ್ರ ಅಲ್ಲ. ನಿಮ್ಮ ಲವರ್ ಜೊತೆ ಇದ್ದಾಗ ನಿಮಗೆ ಯಾವ್ ಯಾವ್ ವಿಷ್ಯ ಇಷ್ಟ ಆಗ್ತಿರ್ಲಿಲ್ವೋ ಅಂತಾ ವಿಷಯಗಳನ್ನೂ ಬರ್ಕೊಳ್ಳಿ. ಆಗ ನಿಮಗೇ ಗೊತ್ತಾಗತ್ತೆ ಅವರಿಂದ ದೂರ ಆಗ್ರಿದ್ರಿಂದ ಏನ್ ಒಳ್ಳೇದಾಯ್ತು ಅಂತ. ಕತೆ-ಕವನ ಏನಾದ್ರೂ ಬರೀತೀರಿ ಅಂದ್ರೆ ಇನ್ನೂ ಸೂಪರ್. ಎಷ್ಟೋ ಕವಿಗಳಿಗೆ ಮೊದಲು ಕವಿತೆ ಬರೆಯೋಕ್ಕೆ ಸ್ಪೂರ್ತಿ ಕೊಟ್ಟಿರೋದೇ ನೋವು-ವಿರಹ. ನಿಮ್ ಕೇಸೂ ಅದೇ ಆಗಿರ್ಬೋದು.

ಮೂಲ

6. ನಿಮ್ಮಲ್ಲಿ ಹುಟ್ಟೋ ಭಾವನೆಗಳನ್ನ ಪಾಸಿಟಿವ್ ಎನರ್ಜಿಯಾಗಿ ಮಾರ್ಪಡಿಸಿಕೊಳ್ಳಿ

ಚೀನಾ ದೇಶದಲ್ಲಿ ಒಂದ್ ಗಾದೆ ಇದೆ: "ನಿನಗೆ ಸಿಟ್ಟು ಬಂದಾಗ ಮರಗಳನ್ನುಕಡಿ" ಅಂತ. ಹಾಗಂತ ಮರ ಕಡೀಬೇಡ್ರಿ - ಅರಣ್ಯ ಇಲಾಖೆಯೋರ್ ಬಂದ್ ಹಿಡ್ಕೋತಾರೆ. ಆ ಗಾದೆ ಅರ್ಥ ಏನು ಅಂದ್ರೆ, ನಿಮ್ಮಲ್ಲಿ ಆಳವಾದ ಭಾವನೆಗಳು ಹುಟ್ಕೊಂಡಾಗ ಮೈ ಬಗ್ಸಿ ಕೆಲ್ಸ ಮಾಡಿ ಅಂತ. ನಿಮ್ಮ ಭಾವನೆಗಳಿಂದ ಹುಟ್ಟಿದ ಎನರ್ಜಿ ನಿಮ್ಮ ಕಸರತ್ತಲ್ಲಿ ಉಪಯೋಗ ಆಗುತ್ತೆ. ಉದಾಹರಣೆಗೆ, ಜಿಮ್‍ಗೆ ಹೋಗಿ, ಸೈಕಲ್ ಹೊಡೀರಿ. ಮೈ ಬಗ್ಸಿ ಕೆಲ್ಸ ಮಾಡೋದ್ರಿಂದ ನಿಮ್ ಮನಸ್ಸು ಶಾಂತವಾಗುತ್ತೆ. ನಿಮ್ ಸುತ್ತಾ ಹೆಚ್ಚು ಜನ ಇರೋಹಾಗೆ ನೋಡ್ಕೊಳ್ಳಿ. ಆಗ, ಪ್ರೀತಿ ಅಂದ್ರೆ ಕೇವಲ ಪ್ರೇಯಸಿ-ಪ್ರಿಯಕರನ ಮಧ್ಯೆ ಇರೋ ರೊಮ್ಯಾನ್ಸ್ ಮಾತ್ರ ಅಲ್ಲ ಅನ್ನೋದು ಅರ್ಥವಾಗತ್ತೆ.

ಮೂಲ

7. ತುಂಬಾ ದಿನ ಸಿಟ್ಟು ಇಟ್ಕೊಂಡು ದೂರ್ಕೊಂಡ್ ಕೂರ್ಬೇಡಿ

ಯಾರನ್ನೂ ದೂರಿ ಏನೂ ಪ್ರಯೋಜನ ಇಲ್ಲ. ದಿಟವಾಗ್ ಹೇಳ್ಬೇಕೂಂದ್ರೆ, ನೀವು ದೂರ್ ಹೇಳ್ಕೊಂಡ್ ಕೂತ್ಕೊಂಡಷ್ಟೂ ನಿಮ್ಮ ಮನಸ್ಸಿಗೆ ಸಮಾಧಾನ ಆಗೋದೇ ಇಲ್ಲ. ಇದ್ರಿಂದ ನಿಮ್ಗೇ ಲಾಸ್. ಆಗಿದ್ ಆಗೋಯ್ತು, ಮುಂದೇನು ಅಂತ ನೋಡಿ.

ಮೂಲ

8. ನಿಮ್ಮನ್ ನೀವೇ ಹಿಂಸೆ ಮಾಡ್ಕೋಬೇಡಿ

ನಿಮ್ಮ ಸಂಬಂಧ ಮುರಿದ್‍ಬೀಳಕ್ಕೆ ಕಾರಣಗಳನ್ನ ಹುಡುಕ್ಕೊಂಡು, ಅಯ್ಯೋ ನಾನ್ ಹಾಗ್ ಮಾಡ್ಬೋದಿತ್ತೇನೋ, ಹೀಗ್ ಮಾಡ್ಬೋದಿತ್ತೇನೋ ಅಂತೆಲ್ಲಾ ಅನಲೈಸ್ ಮಾಡ್ತಾ ಕೂತ್ಕೋಬೇಡಿ. ಅದ್ರಿಂದ ಏನೂ ಉಪಯೋಗ ಇಲ್ಲ. ಯೋಗ-ಧ್ಯಾನ ಮಾಡೋದ್ರಿಂದ ನೆಮ್ಮದಿ ಸಿಗುತ್ತೆ - ಮಾಡಿ. ಅಥವಾ ನಿಮಗಿಷ್ಟವಾದ ಬೇರೆ ಯಾವ್ದಾದ್ರೂ ಚಾಲೆಂಜಿಂಗ್ ಕೆಲಸದಲ್ಲಿ ಆಳವಾಗಿ ಮುಳುಗಿ. 

ಮೂಲ

9. ನಿಮ್ಗೆ ಅಂತ ಇದ್ದದ್ದು ಅದೊಂದೇ ಜೀವ ಅನ್ನೋದು ಸುಳ್ಳು

ಭೂಮಿ ಮೇಲೆ ಕೋಟ್ಯಾಂತರ ಜನ ಇದ್ದಾರೆ. ಪ್ರತಿಯೊಬ್ರೂ ಒಂದೊಂದ್ ಥರ ಇರ್ತಾರೆ. ನಿಮ್ಮ ಮನಸ್ಸಿಗೆ ಹತ್ರ ಆಗೋರು ಬೇರೆ ಯಾರಾದ್ರೂ ಸಿಕ್ಕೇ ಸಿಗ್ತಾರೆ. ನಿಮ್ಮ ಲವ್ವರ್ರಿಂದ ನೀವು ದೂರ ಆಗಿರೋದು ಬೇಸರದ ವಿಷಯಾನೇ ಇರಬೋದು. ಆದ್ರೆ ಆ ಸಂಬಂಧ ಉಳೀಲಿಲ್ಲ ಅಂದ್ರೆ, ನೀವು ಮದುವೆಯಾಗಿ ಜೊತೆಯಾಗಿರೋದು ಯಾವ್ದೋ ಕಾರಣಕ್ಕೆ ತಪ್ಪಿದೆ... ಇರ್ಲಿ ಬಿಡಿ. ಇಂಥಾ ಸನ್ನಿವೇಶಗಳನ್ನ ಎದ್ರುಸ್ತಾ ಹೋದಷ್ಟೂ ನೀವ್ ಗಟ್ಟಿ ಆಗ್ತೀರಿ, ಹೆಚ್ಚು ಮೆಚೂರಿಟಿ ಬೇಳೆಸ್ಕೋತೀರಿ. ಆ ಗಟ್ಟಿತನ ನಿಮ್ಮ ವ್ಯಕ್ತಿತ್ವವನ್ನ ಹೋಳೆಯೋಹಾಗ್ ಮಾಡುತ್ತೆ. ಅದರ ಹೊಳಪಿಂದ ಮತ್ತಷ್ಟು ಜನರನ್ನ ಸೆಳೀತೀರಿ. ನಿಮಗೆ ಯಾವುದು ಒಳ್ಳೇದೋ ಅದು ಸಿಕ್ಕೇ ಸಿಗುತ್ತೆ. ನಂಬಿಕೆ ಇರ್ಲಿ...

10. ಇರುಳಾದ್ಮೇಲೆ ಹಗಲು ಬರ್ಲೇಬೇಕು ಅನ್ನೋದು ನೆನಪಿಡಿ

ಇವತ್ತು ನಿಮ್ಮ ಪ್ರೇಯಸಿ/ಪ್ರಿಯಕರ ದೂರ ಆದಾಗ ಪ್ರಪಂಚಾನೇ ಕತ್ಲು ಅನ್ನಿಸ್ಬೋದು. ಆದ್ರೆ ಅದು ಸೊಲ್ಪ ದಿನ ಮಾತ್ರ. ಆಮೇಲೆ ಬೆಳಕು ಬಂದೇ ಬರುತ್ತೆ. ಆಗ ಜೀವನ ಎಷ್ಟು ಸುಂದರ ಅನ್ಸುತ್ತೆ. ಆಗಿದ್ದೆಲ್ಲಾ ಮರ್ತು ನಗ್‍ನಗ್ತಾ ಇರ್ತೀರಿ. ಹೊಸ ಮನುಷ್ಯರಾಗಿರ್ತೀರಿ, ಇನ್ನಷ್ಟು ಗಟ್ಟಿ ಆಗಿರ್ತೀರಿ. 

ಮೂಲ

ಜಗತ್ತಲ್ಲಿ ಕೋಟ್ಯಂತರ ಜನ ತಮ್ಮ ಪ್ರೇಯಸಿ-ಪ್ರಿಯಕರನ್ನ ಕಳಕೊಂಡಿರ್ತಾರೆ. ಪ್ರತಿಯೋಬ್ರೂ ತಮ್ ತಮ್ ರೀತೀಲೇ ಅದ್ರಿಂದ ಹೊರಗ್ ಬರ್ತಾರೆ. ಎಲ್ಲರಿಗೂ ಮುಂದೊಂದ್ ದಿನ ಒಳ್ಳೇದಾಗತ್ತೆ. ಕತ್ತಲು ಕಳದ್ ಮೇಲೆ ಬೆಳಕು ಬಂದೇ ಬರತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಫೇಸ್ಬುಕ್ ಚರ್ಚೆ:

ರಾಮಾಯಣ ಅರಿದು ಕುಡಿದಿದ್ದರೆ ಮಾತ್ರ ನಿಮಗೆ ಈ 10 ವಿಚಿತ್ರ ಸತ್ಯಗಳು ಗೊತ್ತಿರಕ್ಕೆ ಸಾಧ್ಯ

ಇಲ್ಲದಿದ್ದರೆ ಬಹಳ ಆಶ್ಚರ್ಯ ಆಗುತ್ತೆ

ಕೆಲವ್ರು ರಾಮಾಯಣ ಮತ್ತೆ ಮಹಾಭಾರತ ಅರಿದು ಕುಡಿದು ಬಿಟ್ಟಿದ್ದೀವಿ ಅಂತಿರ್ತಾರೆ. ಆದ್ರೂ ಕೆಲವೊಂದು ವಿಷಯಗಳು ಎಷ್ಟೋ ಮಂದಿಗೆ ಗೊತ್ತಿರಲ್ಲ. ವಾಲ್ಮೀಕಿ ಬರೆದಿರೋಂತ ರಾಮಾಯಣದ ರಾಮ, ಲಕ್ಷ್ಮಣ, ಸೀತೆ ಇಂದಿನವ್ರಿಗೂ ಆದರ್ಶ. ಈವತ್ತಿಗೂ ರಾಮಾಯಣ, ಅದ್ರ ಪಾತ್ರಗಳು ನಮಗೆಲ್ಲಾ ದಾರಿ ತೋರಿಸೋ ತರಹ ಇವೆ. ಆದ್ರೂ ರಾಮಾಯಣದ  ಬಗ್ಗೆ ಎಷ್ಟೋ ಸತ್ಯಗಳು ಜನಕ್ಕೆ ಗೊತ್ತಿರಲ್ಲ. ಮಹಾನ್ ಪಂಡಿತರಿಗೆ ಮಾತ್ರ ಗೊತ್ತಿರುವಂಥ 10 ವಿಚಿತ್ರ ಸತ್ಯಗಳನ್ನು ನಾವಿಲ್ಲಿ ಕೊಡ್ತಿದ್ದೇವೆ.

1. ರಾಮನಿಗೆ ಶಾಂತಾ ಅಂತ ಒಬ್ಬಳು ಅಕ್ಕ ಇರ್ತಾಳೆ

ದಶರಥನಿಗೆ ಕೌಸಲ್ಯೆಯಿಂದ ಹುಟ್ಟಿದ ಮಗಳು ಇವಳು. ಅಂಗದೇಶದ ರಾಜ ರೋಮಪಾದ ಅವಳನ್ನ ದತ್ತು ತೊಗೊಂಡಿರ್ತಾನೆ.

2. ರಾವಣನಿಗೆ 10 ತಲೆಗಳು ಬಂದದ್ದು ಈಶ್ವರನಿಂದ

ಈಶ್ವರನ ಪರಮ ಭಕ್ತನಾಗಿದ್ದ ರಾವಣ. ಘೋರ ತಪಸ್ಸು ಮಾಡಿ ತಲೆಯನ್ನೇ ಈಶ್ವರನಿಗೆ ಅರ್ಪಿಸಿದ್ದ. ಆದರೂ ತಲೆ ಮತ್ತೆ ಬೆಳೀತಿತ್ತಂತೆ. ಹತ್ತು ಸಲ ತಲೆ ಈಶ್ವರನಿಗೆ ಅರ್ಪಿಸಿದರೂ ಅದು ಮತ್ತೆಮತ್ತೆ ಬೆಳೀತಾನೇ ಇತ್ತಂತೆ. ಕೊನೆಗೆ ಶಿವನು ಪ್ರತ್ಯಕ್ಷನಾಗಿ ಎಲ್ಲಾ ಹತ್ತು ತಲೆಗಳನ್ನು ವಾಪಸ್ಸು ಕೊಟ್ನಂತೆ. ಹಾಗಾಗಿ ರಾವಣನಿಗೆ 10 ತಲೆಗಳು ಬಂದವು ಅಂತ ಪುರಾಣ ಹೇಳುತ್ತೆ.

3. ರಾವಣನಿಗಿಂತ ಮೊದಲು ಲಂಕೇನ ಕುಬೇರ ಆಳ್ತಿರ್ತಾನೆ

ಲಂಕೆಯನ್ನ ಕಟ್ಟಿ ಆಳ್ತಾ ಇದ್ದದ್ದು ಕುಬೇರ. ಅವನ ಮಲಣ್ಣ ರಾವಣ ಯುದ್ದ ಮಾಡಿ ಕುಬೇರನಿಂದ ಲಂಕೆಯನ್ನ ಕಿತ್ತುಕೊಂಡ ಅಂತ ಪುರಾಣ ಹೇಳುತ್ತೆ.

 

4. ಲಕ್ಷ್ಮಣ ಶೇಷನಾಗನ (ಆದಿಶೇಷನ) ಅವತಾರ

ವಿಷ್ಣುವಿನ ಅವತಾರ ರಾಮ ಅನ್ನೋದು ಎಲ್ರಿಗೂ ಗೊತ್ತು. ಆದರೆ ಶೇಷನಾಗನ ಅವತಾರ ಲಕ್ಷ್ಮಣ ಅನ್ನೋದು ಬಹಳಷ್ಟು ಮಂದಿಗೆ ಗೊತ್ತಿಲ್ಲ.   

5. ಹದಿನಾಲ್ಕು ವರ್ಷಗಳ ವನವಾಸದಲ್ಲಿ ಲಕ್ಷ್ಮಣ ನಿದ್ದೇನೇ ಮಾಡಲ್ಲ

ಯಾಕಂದ್ರೆ ವನವಾಸದಲ್ಲಿದ್ದ ರಾಮ ಮತ್ತೆ ಸೀತೆಯನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೋಬೇಕಾಗಿತ್ತು. ಅದಕ್ಕಾಗಿ ತನಗೆ ನಿದ್ದೆ ಬರದೆ ಇರೋಹಂಗೆ ನಿದ್ರಾದೇವಿಯ ವರ ಪಡ್ಕೊಂಡಿರ್ತಾನೆ ಲಕ್ಷ್ಮಣ.

6. ಶ್ರೀಕೃಷ್ಣನನ್ನ ಬೇಟೆಗಾರನಾಗಿ ಬಂದು ಕೊಂದದ್ದು ವಾಲಿ

ಮರದ ಕೆಳಗೆ ಮಲಗಿ ನಿದ್ದೆ ಮಾಡ್ತಿದ್ದಾಗ ಶ್ರೀಕೃಷ್ಣನನ್ನ ಜರಾ ಅನ್ನೋ ಬೇಟೆಗಾರ ಬಾಣಬಿಟ್ಟು ಕೊಂದ. ಈ ಬೇಟೆಗಾರ ಬೇರೆ ಯಾರು ಅಲ್ಲ, ವಾಲಿ ಅವತಾರ. 

7. ಲಕ್ಷ್ಮಣ ಸಾಯೋದು ರಾಮನ ಒಂದು ಮಾತಿಂದ

ಒಮ್ಮೆ ಯಮಧರ್ಮನನ್ನು ರಾಮ ಭೇಟಿಯಾಗಿ ನಮ್ಮಿಬ್ಬರ ಮಾತುಕತೆಗೆ ಯಾರೇ ಬಂದು ಅಡ್ಡಿಪಡಿಸಿದ್ರೂ ಅವರನ್ನ ಸಾಯಿಸಿಬಿಡು ಅಂತ ಕೇಳ್ಕೊಂಡಿದ್ದ. ಅದೇ ಟೈಮಿಗೆ ಪಾಪ ಲಕ್ಷ್ಮಣ ಬರ್ತಾನೆ. ರಾಮನನ್ನ ಮಾತಾಡ್ಬೇಕು ಅಂತಾನೆ. ಆಗ ರಾಮ ಹೇಳಿದಂಗೆ ಲಕ್ಷ್ಮಣನ್ನ ಯಮ ಸಾಯಿಸ್ತಾನೆ.

8. ಹನುಮಂತನಿಗೆ ಒಂದು ಹೂವಿನಿಂದ ಭಜರಂಗಬಲಿ ಅಂತ ಹೆಸರು ಬಂತು

ಸಿಂಧೂರ ಹೂವು ತಲೆ ಮೇಲೆ ಇದ್ದಷ್ಟು ಹೊತ್ತು ರಾಮ ಆರೋಗ್ಯವಾಗಿರ್ತಾನೆ ಅಂತ ಹನುಮಂತನಿಗೆ ಒಮ್ಮೆ ಸೀತೆ ಹೇಳಿದ್ಲು. ಅದನ್ನ ಕೇಳಿ ಹನುಮ ದೇಹವನ್ನೇ ಸಿಂಧೂರವಾಗಿ ಬದಲಾಯಿಸಿಕೊಂಡಿದ್ದ. ಭಜರಂಗ್ ಅಂದ್ರೆ ಸಿಂಧೂರ ಅಂತ ಅರ್ಥ. ತನ್ನನ್ನು ತಾನು ಸಿಂಧೂರವಾಗಿಸಿಕೊಂಡ ಕಾರಣ ಭಜರಂಗಬಲಿ ಅಂತ ಹೆಸರು ಬಂತು.

9. ಅಳಿಲು ಬೆನ್ನ ಮೇಲೆ ಮೂರು ಗೆರೆ ಇರೋದಕ್ಕೆ ರಾಮ ಕಾರಣ

ಲಂಕೆಗೆ ಹೋಗ್ಬೇಕಾದ್ರೆ ಕಪಿಸೈನ ರಾಮಸೇತು ಕಟ್ಟಿತು. ಅದನ್ನ ಕಟ್ಟಬೇಕಾದ್ರೆ ಅಳಿಲುಗಳು ಮಣ್ಣನ್ನ ತಂದುಕೊಡ್ತಿದ್ವು. ಇದನ್ನ ಕಂಡ ಕಪಿಸೈನ್ಯ ನಗಾಡ್ತಿತ್ತು. ಆದರೆ ರಾಮನು ಅವುಗಳ ಅಳಿಲು ಸೇವೆಯನ್ನ ತುಂಬಾ ಇಷ್ಟಪಟ್ಟಿದ್ದ. ಅಳಿಲನ್ನ ಎತ್ಕೊಂಡು ಬೆನ್ನು ಸವರಿದಾಗ ಈ ಮೂರು ಗೆರೆಗಳು ಮೂಡಿದ್ವಂತೆ. 

 

10. ಶೂರ್ಪಣಖೀಗೆ ಅಣ್ಣ ರಾವಣನ್ನ ಸಾಯಿಸಬೇಕು ಅನ್ನೋ ಬಯಕೆ ಇರುತ್ತೆ

ಇದು ನಿಜವಾಗ್ಲೂ ಅಚ್ಚರಿ ಪಡೋಂತ ಸಂಗತಿ. ಶೂರ್ಪಣಕಿಯ ಗಂಡ ದುಷ್ಟಬುದ್ಧಿ ಅನ್ನೋನ್ನ ರಾವಣ ಸಾಯಿಸಿರ್ತಾನೆ. ಕೆಲವು ರಾಮಾಯಣಗಳಲ್ಲಿ ರಾವಣನ ಮೇಲೆ ಸೇಡು ತೀರಿಸಿಕೊಳಕ್ಕೆ ಶೂರ್ಪಣಕಿ ದೊಡ್ಡ ನಾಟಕ ಮಾಡಿ, ಯುದ್ಧ ಆಗೋಹಾಗೆ ನೋಡ್ಕೊಂಡು ರಾವಣನ ಸಾವಿಗೆ ಕಾರಣ ಆಗ್ತಾಳೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: