ಮುಂದಿನ ಜೀವನ ಸರಾಗವಾಗಿ ಕಳೀಬೇಕಾದ್ರೆ 24 ವರ್ಷ ಆದ್ಮೇಲೆ ಈ 9 ಅಭ್ಯಾಸಗಳ್ನ ಬಿಟ್ಟುಬಿಡಿ

ಅವೆಲ್ಲ ಚಿಕ್ಕ ವಯಸ್ಸಿನೋರ್ಗೆ ಸರಿ

ನಿಮಗೆ 24 ವರ್ಷ ವಯಸ್ಸು ಆಗಿದೆ ಅಂದ್ರೆ ಕಾಲೇಜ್ ಜೀವನ ಮುಗಿಸಿರ್ತೀರಿ. ಗೆಳೆಯರೊಡನೆ ಸಾಕಷ್ಟು ಕಾಲ ಮಜವಾಗಿ ಕಳ್ದಿರ್ತೀರಿ. ಹಾಗೆ ನಿಮ್ಮ ತಿಳುವಳಿಕೆ ಮಟ್ಟವೂ ಎರಿರತ್ತೆ. ನಿಮ್ಮ ಜೀವನದ ಮುಂದಿನ ದಾರಿ ಆಯ್ಕೆ ಮಾಡ್ಕೊಳ್ಳೊದ್ರಲ್ಲಿ ಸಮರ್ಪಕವಾಗಿ ತೊಡಗಿಸಿಕೊಂಡಿರ್ತೀರಿ. ಇಂಥಾ ಒಂದು ವಯಸ್ಸಿನಲ್ಲಿ ಈ ಅಭ್ಯಾಸಗಳನ್ನ ಕೈಬಿಟ್ಟರೆ ನಿಮ್ಮ ವ್ಯಕ್ತಿತ್ವದ ಮಟ್ಟ ಇನ್ನೂ ಹೆಚ್ಚುತ್ತೆ.

1. ಸಿಕ್ಕಾಪಟ್ಟೆ ಬಟ್ಟೆ ಕೊಂಡ್ಕೊಳ್ಳೊದನ್ನ ಬಿಡಿ

ಟೀನೇಜ್ನಲ್ಲಿ ಬಟ್ಟೆ ಮೇಲೆ ಅಪಾರ ಪ್ರೀತಿ, ಕಣ್ಣಿಗೆ ಕಂಡಿದ್ದು ತೊಗೊಬೇಕು, ಹಾಕೊಬೇಕು, ಫ್ರೆಂಡ್ಸ್ ಜೊತೆ ಮಿಂಚ್ಬೇಕು ಅನ್ನೋ ಆಸೆ. ಹಾಗಾಗಿ ಸಿಕ್ಕಾಪಟ್ಟೆ ದುಡ್ಡು ಕೊಟ್ಟು ಒಂದು ಬಟ್ಟೆ ತೊಗೊಳ್ಳೊ ಕಡೆ ಎರಡೊ ಮೂರೋ ತೊಗೊಂಡಿರ್ತೀರಿ. ಇದು ಒಂಥರ ಫಾಸ್ಟ್ ಫುಡ್ ಚಟ ಇದ್ದ ಹಾಗೆ!

ಎಲ್ಲಾ ಸಂದರ್ಭಕ್ಕೂ ಸರಿಹೊಂದುವಂಥ ಡ್ರೆಸ್ ಖರೀದಿ ಮಾಡಿ. ನಿಮ್ಮ ಆತ್ಮ ವಿಶ್ವಾಸ ಹೆಚ್ಚಿಸುವಂಥದ್ದನ್ನು ಆಯ್ಕೆ ಮಾಡಿಕೊಳ್ಳಿ.

ಮೂಲ

2. ಬೇರೆಯವರು ನಿಮ್ಮ ಬಗ್ಗೆ ಏನ್ ಅನ್ಕೊತಾರೆ ಅಂತ ಸದಾ ಯೋಚ್ನೆ ಮಾಡೋದನ್ನ ಬಿಡಿ

ಯಾವುದೇ ಒಂದು ಹೊಸ ಕೆಲ್ಸ ಮಾಡಕ್ಕೆ ಹೊರ್ಟಾಗ ಬೇರೆಯವರು ಏನ್ ಅನ್ಕೊಬೋದು ಅಂತ ತೆಲೆ ಕೆಡಿಸಿಕೊಳ್ಳೊದು ನಮ್ಮ ಸಹಜ ಗುಣ. ಹಂಗಂಥ ಅದೇ ಒಂದಾಗಿ ಯೋಚ್ನೆ ಮಾಡ್ತಾ ಕೂತ್ರೆ ನಿಮ್ಮ ಗುರಿ ಮುಟ್ಟಕ್ಕೆ ಆಗೋದೆಯಿಲ್ಲ.

ಬೇರೆಯವರ ಅಭಿಪ್ರಾಯದ ಬಗ್ಗೆ ಎಷ್ಟು ಬೇಕೋ ಅಷ್ಟು ಮಾತ್ರ ಗಮನ ಕೊಡಿ. 

ಮೂಲ

3. ತಂದೆ-ತಾಯಿ ಮೇಲೆ ಆಕ್ಷೇಪಣೆ ಮಾಡೋದನ್ನ ಬಿಡಿ

ಯಾವ ತಂದೆ ತಾಯಿನೂ ನೂರಕ್ಕೆ ನೂರು ಪರ್ಫೆಕ್ಟ್ ಆಗಿರಲ್ಲ. ಮನುಷ್ಯ ಸಹಜವಾದ ತಪ್ಪುಗಳು ನಡೆದಿರತ್ತೆ. ಸಂದರ್ಭಕ್ಕೆ ಕಟ್ಟು ಬಿದ್ದು ಮಾಡಿದ ಎಷ್ಟೊ ವಿಷಯಗಳಿರತ್ತೆ. ಅದ್ರಿಂದ ನಿಮ್ಗೇನಾದ್ರು ತೊಂದ್ರೆ ಆಗಿದ್ದಲ್ಲಿ ಅದನ್ನೇ ದೊಡ್ಡದಾಗಿ ಮಾಡ್ಕೊಂದು ತಂದೆ-ತಾಯಿನ ದೂಷಿಸೋದನ್ನ ನಿಲ್ಲಿಸಿ.

ನಿಮ್ಮ ಸ್ವಂತ ಮನೋಬಲದಿಂದ ಸಾಧಿಸಬೇಕಾದ್ದನ್ನು ಸಾಧಿಸಿ ಗೆಲ್ಲಿರಿ.

ಮೂಲ

4. ನನಸಾಗದೇ ಇರೋ ಕನಸುಗಳ್ನ ಕೈಬಿಡಿ

ನನಸಾಗಲ್ಲ ಅಂತ ಗೊತ್ತಿದ್ದೂ ಕೂಡ ನಿಮ್ಮ ಮನ್ನಸ್ಸಿನಲ್ಲಿ ಯಾವೂದೋ ಹಳೆ ಕನಸು ಉಳ್ಕೊಂಡಿದ್ರೆ, ಅದನ್ನು ಕೈ ಬಿಡೋ ಕಾಲ ಬಂದಿದೆ.

ಅದರ ಬದಲು ಹೊಸದಾಗಿ ಈಗಿನ ಕಾಲಕ್ಕೆ ತಕ್ಕಂತೆ ಸಮರ್ಪಕವಾಗಿ ನನಸು ಮಾಡುವಂಥ ಕನಸನ್ನು ಕಟ್ಟಿಕೊಳ್ಳಿ.

ಮೂಲ

5. ದುಡ್ಡು ಹೇಗೋ ಹೊಂದುತ್ತೆ ಅನ್ನೋ ಉಡಾಫೆ ಬಿಟ್ಟುಬಿಡಿ

ಇಷ್ಟು ವರ್ಷ ತಂದೆ-ತಾಯಿ, ಗೆಳೆಯರು ಅಥವಾ ನೆಂಟರಿಷ್ಟರು ಹಣದ ಸಹಾಯ ಮಾಡ್ತಿದ್ರು. ಆದ್ರೆ 24 ವಯಸ್ಸು ದಾಟಿದ ಮೇಲೆ ನಿಮ್ಮ ಮುಂದಿನ ಜೀವನ ಹಣಕಾಸಿನ ತೊಂದರೆ ಇಲ್ಲದೆ ನಡಿಬೇಕು ಅಂತಿದ್ರೆ ನಿಮ್ಮದೇ ಆದ ಪ್ಲ್ಯಾನ್ ಮಾಡ್ಕೊಳ್ಳಿ.

ಇನ್ಶುರೆನ್ಸ್, ಪೆನ್ಶನ್ ಪ್ಯಾನ್ ಅಂಥ ಹಲವು ಪ್ರಕಾರಗಳನ್ನ ತಿಳ್ಕೊಳ್ಳಿ.

ನಿಮಗೆ ಬೇಕಾದವರಿಗೆ ಸಹಾಯ ನೀವೇ ಮಾಡಿ.

ಮೂಲ

6. ತುಂಬಾ ಒಳ್ಳೆಯವರಾಗೋ ಪ್ರಯತ್ನ ಬಿಡಿ

ನಿಮ್ಮ ಸುತ್ತ ಮುತ್ತ ಇರೋರನ್ನ ಸದಾ ಖುಷಿಯಾಗಿ ಇಡ್ಬೇಕು ಅಂತ ನೀವು ನಿಮ್ಗೇ ಗೊತ್ತಿಲ್ದಂಗೆ ಮಾಡೊ ವ್ಯಕ್ತಿಗಳಾಗಿದ್ರೆ ಈ ಕೂಡ್ಲೆ ಆ ಕೆಲ್ಸ ಮಾಡೋದನ್ನ ನಿಲ್ಲಿಸಿಬಿಡಿ. ಈ ವಯಸ್ಸಿಗೆ ನಿಮ್ಮ ವಯಕ್ತಿಕ ಬುದ್ದಿವಂತನ ಎಷ್ಟು, ನೀವು ಏನೇನು ಮಾಡಬಲ್ಲಿರಿ, ನಿಮ್ಮ ಕೈಲಾಗೋದು ಎಷ್ಟು ಅನ್ನೋದರ ಬಗ್ಗೆ ಸರ್ಯಾದ ತಿಳಿವಳಿಕೆ ಇಟ್ಟುಕೊಳ್ಳಿ.

"ಇಲ್ಲ" "ಆಗಲ್ಲ" ಅಂತ ಯಾವ ಸಂದರ್ಭದಲ್ಲಿ ಹೇಗೆ ಹೇಳಬೇಕು ಅಂತ ಕಲಿತುಕೊಳ್ಳಿ.

ಮೂಲ

7. ಇಂಟರ್ನೆಟ್ನಲ್ಲಿ ಹುಚ್ಚಾಪಟ್ಟೆ ಕಾಲ ಕಳ್ಯೋದನ್ನ ಬಿಡಿ

ಇದು ಬಹಳ ಕಷ್ಟ ಅಂತೀರಾ! ಈಗಿನ ಟ್ರೆಂಡ್ ಹೆಂಗಿದೆ ಅಂದ್ರೆ ಎಲ್ಲಾರೂ ಒಂದಲ್ಲ ಒಂದ್ ರೀತಿ ಇಂಟರ್ನೆಟ್ಗೆ ಅಂಟಿಕೊಂಡಿರ್ತಾರೆ. ಸಕತ್ ಟೈಮ್ ಪಾಸ್ ಮಾಡ್ತಾರೆ.

ಮಾಹಿತಿ ನೋಡೋದು, ಫ್ರೆಂಡ್ಸ್ ಜೊತೆ ಟಚ್ ಇಟ್ಕೊಳ್ಳೊದು ಅದೆಲ್ಲಾ ಸರಿ. ಒಂದು ಟೈಮ್ ಲಿಮಿಟ್ ಹಾಕೊಳ್ಳಿ. ಅದಕ್ಕಿಂತ ಹೆಚ್ಚು ಕಾಲ ಇಂಟರ್ನೆಟ್ನಲ್ಲಿ ಕಳೀಬೇಡಿ. ಹಾಗೆ ವಾರಕ್ಕೆ ಒಂದು ದಿನ ಇಂಟರ್ನೆಟ್ಗೆ ಹೋಗ್ಲೇಬೇಡಿ, ಕನಕ್ಟ್ ಆಗ್ಲೇಬೇಡಿ.

ಆಗ ನೋಡಿ ನಿಮ್ಮ ಮನಸ್ಸು ಬೇರೆ ಕಡೆ ನಿಗಾ ಕೊಡತ್ತೆ. ಪೆಂಡಿಂಗ್ ಕೆಲ್ಸಗಳೆಲ್ಲಾ ಮುಗಿಸಿಕೊಳ್ಳುತ್ತೀರಿ!

ಮೂಲ

8. ಏನ್ ಮಾಡಿದರೂ ಅರೋಗ್ಯ ಹಾಳಾಗಲ್ಲ ಅನ್ನೋ ಅನಿಸಿಕೆ ಕೈಬಿಡಿ

ಕಾಲೇಜ್ನಲ್ಲಿ ಟಿನೇಜ್ನಲ್ಲಿ ಸರಿ ರಾತ್ರಿ ಎದ್ದಿರೋದು, ಜಂಕ್ ಅಹಾರ ತಿನ್ನೋದು, ಫ್ರೆಂಡ್ಸ್ ಜೊತೆ ಪಾರ್ಟಿ, ಬಾರು, ಆಲ್ಕೊಹಾಲ್ ಎಲ್ಲಾನು ನಿಮ್ಮ ದೇಹ ಯಾವುದೇ ಅಡ್ದಪರಿಣಾಮಗಳನ್ನ ತೋರಿಸ್ದೆ ತಡ್ಕೊಂಡಿರತ್ತೆ. ಆದ್ರೆ 24-25 ಮುಂದೆ 30ರ ಹರಯಕ್ಕೆ ಹೋದಂತೆ ನಿಮ್ಮ ದೇಹಕ್ಕೆ ಇದನೆಲ್ಲಾ ತಡೆಯೋ ಶಕ್ತಿ ಕಡಿಮೆಯಾಗಿರತ್ತೆ.

ಸರ್ಯಾದ ಅಹಾರ, ವ್ಯಾಯಾಮ ಮತ್ತು ವಿಶ್ರಾಂತಿಯ ಕ್ರಮ ಪಾಲಿಸೋದನ್ನ ರೂಢಿ ಮಾಡ್ಕೊಳ್ಳಿ.

ಮೂಲ

9. ಸಾಮಾನು ಎಲ್ಲಂದ್ರಲ್ಲಿ ಹೆಂಗದ್ರೆ ಹಂಗೆ ಬಿಸಾಕೋದನ್ನ ಬಿಡಿ

ಕಾರ್ ಕಿ, ಬೈಕ್ ಕಿ, ಮೊಬೈಲ್, ಪರ್ಸ್, ಸಾಕ್ಸ್, ಟೈ ಎಲ್ಲಂದ್ರಲ್ಲಿ ಬಿಟ್ಬಿಟ್ಟು ಬೇಕಾದಾಗ ಮನೆಯವರೆಲ್ಲ ಸೇರಿ ಹುಡುಕೊ ಹಾಗೆ ಮಾಡ್ಕೊಳ್ಳೊ ಬದ್ಲು ನಿಮ್ಮ ಸಾಮಾನು ನೀವು ಸರ್ಯಾದ ಜಾಗದಲಿಟ್ಟು ಬೇಕಾದಾಗ ತಕ್ಷಣ ಸಿಗೋ ಹಾಗೆ ಮಾಡ್ಕೊಳ್ಳಿ. 

ನಿಮ್ಗೇ ಖುಷಿ ಆಗತ್ತೆ. ಏನಂತೀರಾ?

ಮೂಲ

ಪ್ರತಿ ಹೆಜ್ಜೆಗೂ ನಿರ್ದಿಷ್ಟ ಗುರಿ ಇಟ್ಟುಕೊಳ್ಳಿ. ಆಗ 24 ಆಗ್ಲಿ 34 ಆಗ್ಲಿ 44 ಆಗ್ಲಿ ನಿಮ್ಮ ಜೀವನ ಸರಾಗವಾಗಿಯೇ ಇರತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: