SSLC ಪರೀಕ್ಷೇಲಿ ಇವನು ಬರ್ದಿರೋದಕ್ಕೆ ಸೊನ್ನೇನೇ ಸಿಗೋದು, ಆದರೆ ಅದರಲ್ಲೊಂದು ದೊಡ್ಡ ಪ್ರಶ್ನೆ ಇದೆ

ಧಾರವಾಡದಲ್ಲಿ ಸಿಕ್ಕ ಉತ್ತರಪತ್ರಿಕೆಯೊಂದರಲ್ಲಿ ಉತ್ತರವಲ್ಲದ ಉತ್ತರ

ಉತ್ತರಪತ್ರಿಕೆ

ಕನ್ನಡ ಮೀಡಿಯಂ ಸರೀನೋ ಇಂಗ್ಲಿಷ್ ಮೀಡಿಯಂ ಸರೀನೋ ಅನ್ನೋದರ ಬಗ್ಗೆ ನಿಮ್ಮ ನಿಲುವು ಏನೇ ಇರಲಿ, ಮೊದಲು ಧಾರವಾಡದಲ್ಲಿ ಸಿಕ್ಕ ಈ ಉತ್ತರ ಪತ್ರಿಕೆ ನೋಡಿ:

ಪ್ರಜಾವಾಣಿ ಪ್ರಕಾರ ಇದು ಧಾರವಾಡದ ಮೌಲ್ಯಮಾಪನ ಕೇಂದ್ರ ಒಂದರಲ್ಲಿ ಸಿಕ್ಕ Mathematics (English Medium) ಆನ್ಸರ್ ಶೀಟು. ಇದರಲ್ಲಿ ಪಾಪ ಒಬ್ಬ ಹುಡುಗ ತನ್ನ ತೊಂದರೆ ಹೇಳ್ಕೊಂಡಿದಾನೆ:

‘ಗುರುಗಳೇ, ದಯವಿಟ್ಟು ನಾವು ಸರ್ಕಾರಿ ಹಿರಿಯ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಗಣಿತ ಶಿಕ್ಷಕರು ಇರಲಿಲ್ಲ. ಆದ ಕಾರಣ ನಾನು ಇಂಗ್ಲಿಷ್‌ ಮಾಧ್ಯಮಕ್ಕೆ ಬಂದು ಸೇರಿಕೊಂಡೆ. ಇಂಗ್ಲಿಷ್‌ ಬಾರದ ಕಾರಣ ಏನೂ ಅರ್ಥ ಆಗಲಿಲ್ಲ. ಕನ್ನಡದಲ್ಲಿ ಹೇಳಿಕೊಡ್ರಿ ಎಂದರೂ ಇದು ಇಂಗ್ಲಿಷ್‌ ಶಾಲೆ ಎಂದು ಶಿಕ್ಷಕರು ಕನ್ನಡದಲ್ಲಿ ಹೇಳಲಿಲ್ಲ.  ನನಗೆ ಅಪ್ಪ ಇಲ್ಲ. ದಯವಿಟ್ಟು ನನ್ನನ್ನು ಪಾಸ್‌ ಮಾಡಿ. ನಾನೂ ಇನ್ನೂ ಚೆನ್ನಾಗಿ ಓದಿ ನಮ್ಮ ಸಂಸಾರವನ್ನು ಚೆನ್ನಾಗಿ ನೋಡಿಕೊಳ್ಳಬೇಕು’

ಇವನು ಎಷ್ಟೇ ತನ್ನ ದುಃಖ ಹೇಳಿಕೊಂಡರೂ ಕೇಳೋರು ಯಾರೂ ಇಲ್ಲ ಅನ್ನೋ ಪರಿಸ್ಥಿತಿ ಇದೆ.

ಉತ್ತರ ಬರೀದೆ ಹೀಗೆಲ್ಲ ಬರೆದರೆ ಯಾರು ಕೇರ್ ಮಾಡ್ತಾರೆ? ಸೊನ್ನೆ ಸುತ್ತಿ ಮುಂದಕ್ಕೆ ಹೋಗ್ತಾರೆ. ಹೌದು ತಾನೇ?

ಆದರೆ ಇವನು ಹೇಳ್ತಿರೋದನ್ನ ಸ್ವಲ್ಪ ಅರ್ಥ ಮಾಡ್ಕೋಬೇಕು ನಾವು...

  1. ಇವನು ನಿಜವಾಗಲೂ ಹೋಗಕ್ಕೆ ಇಷ್ಟ ಪಡೋದು ಕನ್ನಡ ಮಾಧ್ಯಮದ ಶಾಲೆಗೆ.
  2. ಇವನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಕೊಂಡಿರೋದು ತನ್ನ ಇಷ್ಟದಿಂದಲ್ಲ, ಕನ್ನಡದ ಶಾಲೇಲಿ ಗಣಿತದ ಶಿಕ್ಷಕರು ಇಲ್ಲ ಅಂತ.
  3. ಇಂಗ್ಲಿಷ್ ಮಾಧ್ಯಮದ ಶಾಲೆಗೆ ಸೇರಿಕೊಂಡರೂ ಇವನಿಗೆ ಸುಖವಿಲ್ಲ, ಯಾಕಂದರೆ ಅಲ್ಲಿ ಇಂಗ್ಲಿಷ್ ಅವನಿಗೆ ಅರ್ಥ ಆಗ್ತಿಲ್ಲ.
  4. ಇಂಗ್ಲಿಷ್ ಶಾಲೆಯಲ್ಲೂ ಕನ್ನಡದಲ್ಲಿ ಹೇಳ್ಕೊಡಿ ಅಂತ ಹೋಗಿ ಕೇಳಿದಾನೆ, ಆದರೆ ಅವರು ಇಲ್ಲ ಅಂದಿದಾರೆ...
  5. ಇವನಿಗೆ ತನ್ನ ಮನೆಯೋರ್ನೆಲ್ಲ ಚೆನ್ನಾಗಿ ನೋಡ್ಕೋಬೇಕು ಅನ್ನೋ ಒಳ್ಳೇ ಬುದ್ಧಿ ಇದೆ.

ನಿಜಕ್ಕೂ ಕನ್ನಡ ಮಾಧ್ಯಮದಲ್ಲಿ ಇವನಿಗೆ ಒಳ್ಳೇ ಗಣಿತದ ಶಿಕ್ಷಣ ಸಿಕ್ಕಿದ್ದರೆ ಇವನು ಹೀಗೆ ಬೇಡೋ ಸ್ಥಿತಿಗೆ ಬರ್ತಾ ಇರಲಿಲ್ಲ. ಹೌದು ತಾನೇ? ಇವನು ಪ್ರತಿಯೊಬ್ಬ ಸಾಮಾನ್ಯ ಕನ್ನಡಿಗನ ಮಾತನ್ನೇ ಆಡಿದಾನೆ.

ಎಲ್ಲದಕ್ಕೂ ಇಂಗ್ಲಿಷ್ ಮಾಧ್ಯಮವೇ ಉತ್ತರ ಅನ್ನೋದು ಎಷ್ಟು ನಿಜ? ಅದು ಸರಿಯಾದ ಉತ್ತರವೇ ಆದರೂ ಇಂಥ ಎಷ್ಟು ಹುಡುಗರು ಹಾಳಾಗಬೇಕು? ಎಷ್ಟು ವಿದ್ಯಾರ್ಥಿಗಳು ನೇಣು ಹಾಕಿಕೊಂಡು ಸಾಯಬೇಕು? ದೊಡ್ಡ ಪ್ರಶ್ನೆ.

ಚಿತ್ರ: ಪ್ರಜಾವಾಣಿ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಗ್ಯಾಸ್ ಸಿಲಿಂಡರ್ ಬಗ್ಗೆ ಈ ಒಂದು ಮುಖ್ಯವಾದ ವಿಷಯ ಎಲ್ಲರಿಗೂ ತುರ್ತಾಗಿ ಗೊತ್ತಾಗಬೇಕು

ಇಷ್ಟು ದಿನ ಯಾರೂ ಹೇಳೇ ಇಲ್ಲವಲ್ಲ, ಹೆಂಗೆ?

LPG ಸಿಲಿಂಡರ್ ಇಲ್ಲದೆ ಮನೇಲಿ ಅಡುಗೇನೇ ಇಲ್ಲ ಅನ್ನೋ ಪರಿಸ್ಥಿತಿ ಇದೆ.

ಆದರೆ ಈ‌ ಸಿಲಿಂಡರ್ಗಳು ಸ್ವಲ್ಪ ಡೇಂಜರ್ರೇ. ಏನಾದರೂ ತೊಂದರೆ ಆದರೆ ಸಿಲಿಂಡರ್ಗೆ ಬೆಂಕಿ ಹತ್ತಿ, ಅದು ಸಿಡಿದು ಅನಾಹುತ ಆಗೋ ಸಾಧ್ಯತೆ ಇರುತ್ತೆ.

ಆದರೆ ಈ ಸಿಲಿಂಡರ್ಗಳಿಗೂ ಒಂದು expiry date ಇರುತ್ತೆ ಅಂತ ನಿಮಗೆ ಗೊತ್ತಾ?

ಸಿಲಿಂಡರ್ ಒಳಗಿರೋ ಗ್ಯಾಸ್ ಬಗ್ಗೆ ಮಾತಾಡ್ತಿಲ್ಲ, ಬರೀ ಖಾಲಿ ಸಿಲಿಂಡರ್ ಬಗ್ಗೆ ಮಾತಾಡ್ತಿರೋದು. ಅದಕ್ಕೆ expiry date ಇರುತ್ತೆ ಅಂತ ನಿಮಗೆ ಗೊತ್ತಾ? Expiry date ಆಗೋಗಿರೋ ಸಿಲಿಂದರ್ ಉಪಯೋಗಿಸಿದರೆ ಏನಾದರೂ‌ ಅನಾಹುತ ಆಗೋ ಸಾಧ್ಯತೆ ಜಾಸ್ತಿ.

ಈ ಸಿಲಿಂಡರ್ಗಳು ಮಾರುಕಟ್ಟೇಲಿ ಸುಲಭವಾಗಿ ಸಿಗುತ್ತವೆ. ಖಾಲಿ ಆದರೆ ಅದನ್ನ ತುಂಬಿಸೋದು ವಾಡಿಕೆ. ಆದರೆ expiry date ಆಗಿದ್ದರೆ ಅದನ್ನ ತುಂಬಿಸಬಾರದು. ಆಗ ಅದರಿಂದ ಗ್ಯಾಸ್ ಸೋರಿಕೆ ಆಗಿ ಸಿಡಿಯೋ ಸಾಧ್ಯತೆ ಇರುತ್ತೆ. ಆದ್ದರಿಂದ ಡೇಟ್ ಆಗೋಗಿರೋ ಸಿಲಿಂಡರ್ಗಳ್ನ ಉಪಯೋಗಿಸಬಾರದು.

ಗ್ಯಾಸ್ ಅಂಗಡಿಯೋರು ಒಂದರ ಮೇಲೊಂದು ಸಿಲಿಂಡರ್ ಪೇರಿಸೋದು, ಅದನ್ನ ಎಸೆದಾಡೋದು, ಎಲ್ಲಾ ಮಾಡ್ತಾರೆ ನೋಡಿದೀರಿ ತಾನೇ?

ಮೂಲ

ಇದರಿಂದ ಸಿಲಿಂಡರ್ಗೆ ಏಟು ಬೀಳೋ ಸಾಧ್ಯತೆ ಇರುತ್ತೆ. ತುಂಬಾ ಉಜ್ಜಾಡಿ ಉಜ್ಜಾಡಿ ಮಾಡಿದಾಗ ಅದರಿಂದ ಗ್ಯಾಸ್ ಸೋರಿಕೆ ಆಗೋ‌ಸಾಧ್ಯತೆ ಇರುತ್ತೆ.

ಆದರೆ ಡೇಟ್ ಆಗಿದ್ಯೋ ಇಲ್ವೋ ಅಂತ ಕಂಡ್ ಹಿಡಿಯೋದು ಹೇಗೆ ಅಂತ ಸಾಮಾನ್ಯವಾಗಿ ಜನರಿಗೆ ಗೊತ್ತಿರಲ್ಲ. ಹೇಳ್ತೀವಿ ಕೇಳಿ.

ಸಿಲಿಂಡರ್ ಹಿಡಿ ಕೆಳಗೆ ಮೂರು ಸೈಡ್ ಪಟ್ಟಿ ಇರುತ್ತೆ. ಅದರಲ್ಲಿ ಒಳಕ್ಕೆ expiry dateನ ಒಂದು ಕೋಡ್ ಮಾಡಿ ಬರೆದಿರ್ತಾರೆ. ಆ ಕೋಡು A, B, C, ಅಥವಾ D ಇಂದ ಶುರು ಆಗಿ ಅದಾದಮೇಲೆ ಎರಡಂಕಿ ಸಂಖ್ಯೆ ಇರುತ್ತೆ. ಉದಾಹರಣೆಗೆ B13.

ಮೂಲ

ಇದರಿಂದ ಡೇಟ್ ಕಂಡ್ ಹಿಡಿಯೋದು ಸುಲಭ.

A, B, C, ಮತ್ತೆ D ಅನ್ನೋ ಇಂಗ್ಲಿಷ್ ಅಕ್ಷರಗಳು ತಿಂಗಳನ್ನ ಸೂಚಿಸುತ್ತವೆ. ಸಂಖ್ಯೆ ವರ್ಷ ಸೂಚಿಸುತ್ತೆ.

ಯಾವ ಅಕ್ಷರಕ್ಕೆ ಯಾವ ತಿಂಗಳು ಅಂತ ತಿಳಿದಿರಲಿ:

A - ಮಾರ್ಚ್

B - ಜೂನ್

C - ಸೆಪ್ಟೆಂಬರ್

D - ಡಿಸೆಂಬರ್

ಈಗ, ಉದಾಹರಣೆಗೆ ನಿಮ್ಮ ಸಿಲಿಂಡರ್ ಮೇಲೆ B-13 ಅಂತ ಬರೆದಿದ್ದರೆ ಅದರ expiry date ಜೂನ್ 2013. ಮೂರು ತಿಂಗಳ ಅಂದಾಜು ಸಾಕು ಅಂತ ಎಲ್ಲಾ ತಿಂಗಳಿಗೂ ಒಂದೊಂದು ಅಕ್ಷರ ಕೊಟ್ಟಿರಲ್ಲ.

ಕೆಲವರು ಈ expiry date ಕೋಡನ್ನ ಅಳಿಸಿ ತಮಗೆ ಬೇಕಾದ್ದು ಬರೆದುಕೊಳ್ತಾರೆ ಅಂತಾನೂ ವರದಿಗಳು ಬಂದಿವೆ. ಆದ್ದರಿಂದ ಮುಂದಿನ ಸಲ ಸಿಲಿಂಡರ್ ಬಂದಾಗ ಅದರ ಕೋಡ್ ಏನು ಅಂತ ನೋಡಿ.

ಮೂಲ

ಕೋಡ್ ಇರಬೇಕಾದ ಜಾಗದಲ್ಲಿ ಏನಾದರೂ ಗೀಚಿರೋದು, ಪೇಂಟ್ ಹಚ್ಚಿರೋದು, ತಿದ್ದಿರೋದು ಎಲ್ಲಾ ಆಗಿದ್ದರೆ ಮುಲಾಜಿಲ್ಲದೆ ವಾಪಸ್ ಕೊಟ್ಟುಬಿಡಿ. ಕಷ್ಟಕ್ಕೆ ಸಿಕಾಕೋಬೇಡಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: