ಭದ್ರಾವತಿಯಿಂದ ಬೆಂಗಳೂರಿಗೆ ಇಂಜಿನಿಯರಿಂಗ್ ಓದಕ್ಕೆ ಬಂದ ಈ ಹುಡುಗಿ ಏನೇನ್ ಮಾಡುದ್ಲು ನೋಡಿ

ಎಷ್ಟೇ ಆದರೂ RV ಕಾಲೇಜು

ಆಶಾ ಭಟ್

ಕನ್ನಡತಿ ಆಶಾ ಭಟ್ ಸಾಧನೆಗಳು ಎಲ್ಲರಿಗೂ ಮಾರ್ಗದರ್ಶಕವಾಗಿವೆ...

ಯಾವ ಆಶಾ ಭಟ್ಟು ಅಂದ್ರಾ? ಓದಿ ಗೊತ್ತಾಗುತ್ತೆ...

ಮೂಲ

ಇವಳು ಹುಟ್ಟಿದ್ದು ಉಕ್ಕಿನ ಊರು ಭದ್ರಾವತೀಲಿ

ತಂದೆ-ತಾಯಿ-ಅಕ್ಕ ಎಲ್ಲಾರೂ ಡಾಕ್ಟ್ಟೇ

ಮೂಲ

ಚಿಕ್ಕೋಳಿಂದಾನೂ ನಾಟಕ ಡ್ಯಾನ್ಸೂ ಎಲ್ಲಾ ಮಾಡ್ತಿದ್ಲಂತೆ

ಮೂಲ

ಮೂಡ್ಬಿದ್ರಿನಲ್ಲಿ PUC ಮಾಡುವಾಗ NCC ಸೇರಿ 2009ರಲ್ಲಿ ಶ್ರೀಲಂಕಾ ಸೇನಾ ಅಕಾಡೆಮಿಗೆ ಭೇಟಿ ಕೊಟ್ಟು ಅಲ್ಲಿ ಆಲ್ ರೌಂಡರ್ ಪ್ರಶಸ್ತಿ ಗೆದ್ಲು

ಪ್ರಶಸ್ತಿ ಕೊಟ್ಟೋರು ಅಲ್ಲಿನ ರಾಷ್ಟ್ರಪತಿ ಮಹಿಂದ ರಾಜಪಕ್ಸೆ

ಮೂಲ

ಆಮೇಲೆ ಇಂಜಿನಿಯರಿಂಗ್ ಓದಕ್ಕೆ ಬೆಂಗಳೂರಿನ RV ಕಾಲೇಜಿಗೆ ಬಂದ್ಲು ನೋಡಿ... ಇಂಜಿನಿಯರಿಂಗ್ ಹಾಗಿರಲಿ, ಅದೃಶ್ಟ ಖುಲಾಯಿಸಿ ಮಿಸ್ ಸುಪ್ರಾನ್ಯಾಶನಲ್ (Miss Supranational) ಕಾಂಟೆಸ್ಟಿಗೆ ಹೋಗೋ ಅವಕಾಶ ಸಿಕ್ತು...

ಮೂಲ

ಇಷ್ಟು ದೊಡ್ಡ ಸ್ಪರ್ಧೆಗೆ ತಯಾರಿ ನಡೆಸೋಕ್ಕೆ ಆಶಂಗೆ ಸಿಕ್ಕಿದ್ದು ಬರೀ 2 ತಿಂಗಳು!

ಮೂಲ

ಕೊನೆಗೂ ಇವಳ ಶ್ರಮ ಮತ್ತು ಶ್ರದ್ಧೆಗೆ ತಕ್ಕ ಪ್ರತಿಫಲ ಸಿಕ್ತು!

2014ರಲ್ಲಿ ಮಿಸ್ ಸುಪ್ರಾನ್ಯಾಶನಲ್ ಪ್ರಶಸ್ತಿ ಮುಡಿಗೇರಿಸಿಕೊಂಡಳು... ಇಂಡಿಯಾದೋರಿಗೆ ಯಾರ್ಗೂ ಇದಕ್ಕೆ ಮೊದಲು ಈ ಪ್ರಶಸ್ತಿ ಬಂದಿರ್ಲಿಲ್ಲ!

ಮೂಲ

ಅಲ್ಲಿಂದ ಗೆಲುವಿನ ಸರಣಿ ಶುರುವಾಯ್ತು ನೋಡಿ...

"ದ ಗ್ರೇಟ್ ಪೆಗೆಂಟ್ ಕಮ್ಯೂನಿಟಿ" ಎಂಬ ವೆಬ್ಸೈಟು ಆಶನ್ನ 2014ರಲ್ಲಿ "ಬ್ಯೂಟಿ ಕ್ವೀನ್ ಆಫ್ ದ ಇಯರ್" ಅನ್ನೋ ಕಾಂಟೆಸ್ಟಲ್ಲಿ ಎರಡನೇ ಸ್ಥಾನ ಕೊಡ್ತು...

ಮೂಲ

ಟೈಮ್ಸ್ ಗ್ರೂಪ್ ನಡೆಸುವ ಸ್ಪರ್ದೇಲಿ 2014ರ ಬೆಂಗಳೂರಿನ "ಮೋಸ್ಟ್ ಡಿಸೈರಬಲ್ ವುಮನ್" ಅನಿಸಿಕೊಂಡಳು... (ಹೌದು, ನಮಗೆ ಈ ಬಿರುದು ಖಂಡಿತ ಸರಿ ಅನ್ನಿಸುತ್ತೆ!)

ಮೂಲ

ಅದೇ ವೆಬ್ಸೈಟು ಆಶನ್ನ 2015ರಲ್ಲಿ "ಏಶಿಯನ್ ಬ್ಯೂಟಿ ಆಫ್ ದ ಇಯರ್" ಅಂತ ಘೋಶಿಸಿತು... ಅಂದ್ರೆ ಏಶಿಯಾದ ನಂ.1 ಬೆಡಗಿ ನಿಮ್ಮ ಆಶಾ!

ಮೂಲ

Miss Diva Universe ನಲ್ಲಿ ಇವಳಿಗೆ ಬಂದ ಪ್ರಶಸ್ತಿಗಳ ಗರಿಗಳು ಒಂದಾ-ಎರಡಾ? ತೊಗೊಳಿ ಏಣುಸ್ಕೊಳಿ:

Miss Fascinating 2014...

ಮೂಲ

Miss Congeniality 2014...

ಮೂಲ

Miss Beautiful Smile 2014...

ಮೂಲ

ಅಷ್ಟೇ ಅಲ್ಲ, ಜಗತ್ತಲ್ಲಿ ಬೇರ್ಬೇರೆ ಕಡೆ ನಡೆಯೋ ಸ್ಪರ್ದೆಗಳಲ್ಲಿ ಗೆದ್ದ ಸುಂದರೀರ್ಗೆ ಕಿರೀಟ ಹಾಕ್ತಾ ಹಾಕ್ತಾ ಜಗತ್ತೆಲ್ಲಾ ಸುತ್ತಿ ಬಂದ್ಲು...

ಮೂಲ

ಅಮೇರಿಕ...

ಮೂಲ

ಚೈನಾ...

ಮೂಲ

ಮಾರಿಶಿಯಸ್...

ಮೂಲ

ಥೈಲ್ಯಾಂಡ್...

ಮೂಲ

ಹಂಗೇರಿ...

ಮೂಲ

ಈಗ ಆಶಾ ವೃತ್ತಿಯಲ್ಲಿ ಮಾಡೆಲ್ ಆಗಿ ಯಮಾಹಾ, ಕ್ಲೋಸಪ್, ಫೆಮಿನಾ, ಆರ್ಟ್ಸ್ ಮ್ಯಾಗಜಿನುಗಳ ಜತೆ ಕೆಲಸ ಮಾಡ್ತಾಳೆ...

 ಮೂಲ

ಇವಳ ಸಾಮಾಜಿಕ ಕಾಳಜಿ ಮೆಚ್ಚಿ 2016ರಲ್ಲಿ ಅಂತರ್‍ರಾಷ್ಟೀಯ ಲಯನ್ಸ್ ಕ್ಲಬ್ಬಿಂದ "ಬ್ಯೂಟಿ ವಿತ್ ಎ ಪರ್ಪಸ್" ಪ್ರಶಸ್ತಿ ಬೇರೆ ಸಿಕ್ಕಿದೆ

ಈಕೆ "ಅಸ್ತ" ಅನ್ನೋ ತನ್ನದೇ ಆದ NGO ನಡೆಸ್ತಾ ಇದಾಳೆ. Go Green Stay Clean, Terry Fox Foundation ಮತ್ತು BRAIN Center ಅನ್ನೋ NGOಗಳ ಜೊತೇನೂ ಕೆಲಸ ಮಾಡ್ತಿದಾಳೆ.

ಮೂಲ

ಹೋಗು ಆಶಾ, ಗೆಲ್ಲು! ಪ್ರಪಂಚವನ್ನೇ ಗೆಲ್ಲು!

ಮಾಹಿತಿ : ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಬರೀ 20,000 ರೂಪಾಯಿಗೆ ಸಿಗೋ ಈ ಹೊಸ ಸೋಲಾರ್ ಹಾಕಿಸಿದರೆ ನಿಮ್ಮ ಕರೆಂಟ್ ಬಿಲ್ ಅರ್ಧ

IIT ಮದ್ರಾಸ್ ಕರಾಮತ್ತು

ದಿನ ಬೆಳಗಾದ್ರೆ, ಈ ನ್ಯೂಸ್ ಪೇಪರ್ಗಳಲ್ಲಿ  ಕೊಲೆ, ಸುಲಿಗೆ, ದರೋಡೆ ಜೊತೆಗೆ ತಪ್ಪದೇ ಬರೋ ಇನ್ನೊಂದು ಸುದ್ದಿ ಅಂದ್ರೆ, ಲೋಡ್ ಶೆಡ್ಡಿಂಗ್ದು. ಇದನ್ನ ಓದಿ ನಾವು ಬೇಜಾರ್ ಮಾಡ್ಕೊಳೋದೂ ಸರ್ವೇಸಾಮಾನ್ಯ ಆಗೋಗ್ಬಿಟ್ಟಿದೆ. ಇದಕ್ಕೆಲ್ಲ ಇತಿಶ್ರೀ ಹಾಡೋ ಅಂತ ಸಮಯ ಬಂದಿದೆ. ಇದು IIT ಮದ್ರಾಸ್ ಸಿಬ್ಬಂದಿ ಕೃಪೆ! ನಾವೇನ್ ಹೇಳ್ತಾ ಇದ್ದೀವಿ ಅಂತ ತಲೆಕೆಡ್ತಾ ಇದ್ಯಾ? ಮುಂದೋದಿ...ನಿಮಗೇ ಗೊತ್ತಾಗತ್ತೆ.

ಎಕನಾಮಿಕ್ ಟೈಮ್ಸ್ ವರದಿ ಮಾಡಿರೋ ಪ್ರಕಾರ IIT ಮದ್ರಾಸಲ್ಲಿ ಒಂದಿಷ್ಟು ಜನ ಪುಣ್ಯಾತ್ಮರು ಸೇರ್ಕೊಂಡು ನಮ್ಮನೆ ಟೀಪಾಯ್ ಅಷ್ಟಗಲದ್ದು ಸೋಲಾರ್ ಪ್ಲಾಂಟ್ ತಯಾರು ಮಾಡಿದ್ದಾರೆ. ಈ ಸೋಲಾರ್ ಪ್ಲಾಂಟನ್ನ ನಮ್ಮನೆ ತಾರ್ಸಿ ಮೇಲೆ ಅಳವಡಿಸೋದ್ರಿಂದ ಕರೆಂಟ್ ಹೋಗೋ ಸಮಸ್ಯೆ ಇಂದ ಮುಕ್ತಿ ಸಿಗತ್ತೆ. ಇದರ ಜೊತೆಗೆ, ಕರೆಂಟ್ ಬಿಲ್ಲೂ ಅರ್ಧಕ್ಕರ್ಧ ಕಡಿಮೆ ಆಗುತ್ತಂತೆ. ಇದನ್ನ ಹಾಕ್ಸಕ್ಕೆ 20,000ದಷ್ಟು ದುಡ್ಡಿದ್ರೆ ಸಾಕು. ಇದರಲ್ಲಿ 125W ಪ್ಯಾನೆಲ್ ಜೊತೆಗೆ 0.5kWh ಬ್ಯಾಟರಿ ಇರುತ್ತೆ.

ಮೂಲ

ಏನು... ಇದನ್ನ ಕೇಳಿ ನಿಮಗೂ ಖುಷಿ ಆಯ್ತೋ ಇಲ್ವೋ? ಯಾಕಂದ್ರೆ, ಈಗಿರೋ ಮಾರ್ಕೆಟ್ ರೇಟ್ ಪ್ರಕಾರ, ಇದೇ ರೀತಿ ಪ್ಯಾನಲ್ ಹಾಕ್ಸಕ್ಕೆ ಬರೋಬ್ಬರಿ 1,20,000 ರುಪಾಯಿ ಬೇಕು ಅಂತ ಸೋಲಾರ್ ಎನರ್ಜಿ ಕಾರ್ಪೊರೇಶನ್ ಆಫ್ ಇಂಡಿಯಾದೋರು ಹೇಳ್ತಾರೆ. ಆದ್ರೆ, ಈ ಪ್ಲಾಂಟ್ ಅದಕ್ಕಿಂತ ಎಷ್ಟು ಪಟ್ಟು ಕಡಿಮೆ ನೋಡಿದ್ರಾ?

ಈ ಸೋಲಾರ್ ಪ್ಯಾನಲ್ ಇಂದ ಒಂದೆರ್ಡು ಟ್ಯೂಬ್ಲೈಟು, ಫ್ಯಾನು, ಚಾರ್ಜಿಂಗ್ ಪಾಯಿಂಟು, ಟೀವಿ ಎಲ್ಲಾನೂ ಓಡಿಸ್ಬೋದಂತೆ. ಇದಕ್ಕಿಂತ ಸ್ವಲ್ಪ ದೊಡ್ದ ಮಾಡೆಲ್ ತಗೊಂಡ್ರೆ, AC ಮತ್ತು ವಾಶಿಂಗ್ ಮಷಿನ್ ಬಿಟ್ಟು ಇನ್ನೆಲ್ಲಾ ಸಲಕರಣೆಗಳನ್ನೂ ಓಡಿಸ್ಬೋದಂತೆ ಕಣ್ರೀ!

ಪ್ರೊಫೆಸರ್ ಅಶೋಕ್ ಝುಂಝುಂನ್ವಾಲಾ ಹೇಳೋ ಪ್ರಕಾರ, ಈ ಸೋಲಾರ್ ಪ್ಲಾಂಟು ಪೂರ್ತಿ DC ವೈರಿಂಗ್ ಜೊತೆ ಬರೋದ್ರಿಂದ, ಬೇರೆ ಸೋಲಾರ್ ಪ್ಯಾನಲ್ಗಳ ಥರ DCನ ACಗೆ ಪರಿವರ್ತಿಸಲ್ಲ. ಇದ್ರಿಂದ ತುಂಬ ಎನರ್ಜಿ ಉಳಿತಾಯ ಆಗಿ ಕರೆಂಟ್ ಬಿಲ್ಲು ಕಮ್ಮಿ ಆಗುತ್ತೆ. ಗಮನಿಸಿ: ಸಾಮಾನ್ಯವಾಗಿ ನಮ್ಮ ಮನೆಗಳಲ್ಲೆಲ್ಲ AC ವೈರಿಂಗ್ ಮತ್ತು ಎಲೆಕ್ಟ್ರಿಕ್ ಸಾಮನುಗಳು ಇರೋದ್ರಿಂದ ಅದನ್ನೆಲ್ಲ ನೇರವಾಗಿ ಇದಕ್ಕೆ ಅಳವಡಿಸಕ್ಕೆ ಆಗಲ್ಲ.

ತಮಿಳುನಾಡು ಸರ್ಕಾರ, ದೊಡ್ಡ ದೊಡ್ದ MNCಗಳ ಜೊತೆ ಸೇರಿ  ಆಗ್ಲೇ 15,000 ಹಳ್ಳಿ ಮನೆಗಳಿಗೆ ಇದನ್ನ ಅಳವಡಿಸಿದ್ದಾರಂತೆ. ಮದ್ರಾಸಲ್ಲಿ 2015ರಲ್ಲಿ ಪ್ರವಾಹ ಬಂದಾಗ, ಇದರ ಸಹಾಯದಿಂದ 3 ದಿನ ಕರೆಂಟ್ ತೊಂದರೆ ಆಗ್ಲಿಲ್ವಂತೆ. ಇದರ ಜೊತೆ ರಾಜಸ್ಥಾನ್, ಅಸ್ಸಾಮಲ್ಲೂ ಹಾಕಿದ್ದಾರೆ. ಇನ್ಮುಂದೆ, ಕರ್ನಾಟಕ, ಆಂಧ್ರ ತೆಲಂಗಾಣ ಮತ್ತು ಒರಿಸ್ಸಾಲೂ ಇವುಗಳನ್ನ ಅಳವಡಿಸ್ತಾರಂತೆ.

IIT ಅವರ ಈ ಕೆಲಸ ಇಷ್ಟ ಆಗಿ, ನ್ಯೂಯಾರ್ಕಲ್ಲಿರೋ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಎಂಜಿನಿಯರ್ಸ್ (IEEE) ಇವರು ಈ ಯೋಜನೆಗೆ '2017ರ ಅತ್ಯುತ್ತಮ ಜನಸೇವಾ ತಂತ್ರಜ್ಞಾನ' ಅನ್ನೋ ಪ್ರಶಸ್ತಿ ಕೊಟ್ಟಿದ್ದಾರೆ.

ನಂಗಂತೂ ಇದನ್ನ ಕೇಳಿ ತುಂಬಾನೇ ಖುಷಿಯಾಯ್ತಪ್ಪ. ನಿಮಗೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: