ಐಂದ್ರಿತಾ ರೇ ಜೀವನದಲ್ಲಿ ಹಲ್ಲಿನ ಪಾತ್ರ ಎಷ್ಟು ದೊಡ್ಡದು ಅಂತ ಕೇಳಿ ದಿನಕ್ಕೆ 4 ಸಲ ಉಜ್ಜಕ್ ಹೊರಟೀರಿ

ಉಪಯೋಗ ಇಲ್ಲ

ಐಂದ್ರಿತಾ

ಒಂದು ಪದ ಕಟ್ಟಿದೀನಿ ಕೇಳುವಂಥವರಾಗಿ:

ರಾಜಾಸ್ಥಾದಲ್ಲಿ ಹುಟ್ಟಿದ ಈ ಬೆಂಗಾಲಿ ಸ್ವೀಟು

ಅವಳ ನಗುವಲ್ಲಿ ಕಾಣೋ ಮುತ್ತಿನಂತಹ ಟೀತು

ಕನ್ನಡಿಗರ ಕಣ್ಣಿಗೆ ಕೊಟ್ಟಿತು ಟ್ರೀಟು

ಬನ್ನಿ ಅವಳ ಹೆಸ್ರಲ್ಲೇ ಹೊಡ್ಯಣ ಒಂದು ಬೀಟು

ಮೂಲ

ಇಂಡಿಯನ್ ಏರ್ ಫೋರ್ಸಲ್ಲಿ ಹಲ್ಲಿನ ಡಾಕ್ಟರ್ ಆಗಿದ್ದ ಐಂದ್ರಿತನ್ ತಂದೆ ಎ.ಕೆ. ರೇ ಮುಂಬೈಯಿಂದ ಬೆಂಗಳೂರಿಗೆ ಎತ್ತಂಗಡಿ ಆಗಿ ಬಂದ್ರು. ಇಲ್ಲಿಂದ ಕಥೆ ಶುರು.

ಮನೆಯೋರ್ನೆಲ್ಲ ಕರ್ಕೊಂಡ್ ಬಂದ್ರು.

ಮೂಲ

ತಂದೆ ಹಲ್ಲಿನ್ ಡಾಕ್ಟರ್ ಅಂದ್ಮೇಲೆ ಮಗಳು ಬಿಡ್ತಾಳಾ? ಬಾಲ್ಡ್ವಿನ್ ಸ್ಕೂಲು ಗೀಲು ಎಲ್ಲ ಮುಗಿದ ಮೇಲೆ ತಾನೂ ಬೆಂಗಳೂರಿನ ಅಂಬೇಡ್ಕರ್ ಕಾಲೇಜಲ್ಲಿ ಡೆಂಟಿಸ್ಟ್ ಕೋರ್ಸ್ ಮುಗಿಸಿದಳು ಐಂದ್ರಿತಾ.

ತಂದೆಗೆ ತಕ್ಕ ಮಗಳು ಅನ್ನಿಸ್ಕೊಂಡ್ಳು.

ಮೂಲ

ಡೆಂಟಿಸ್ಟು ಬೇರೆಯೋರ ಹಲ್ಲು ರಿಪೇರಿ ಮಾಡಬೇಕು ತಾನೇ? ಅದರ ಬದಲಾಗಿ ಮಾಡೆಲಿಂಗ್ ಸೇರ್ಕೊಂಡು ತನ್ನ ಹಲ್ನೇ ಎಲ್ಲರಿಗೂ ತೋರ್ಸಕ್ಕೆ ಶುರು ಮಾಡಿದಳು...

ಮಾಡೆಲ್ಗಳಿಗೆ ನಗೂನೇ ಮುಖ್ಯ. ನಗೂಗೆ ಹಲ್ಲೇ ಮುಖ್ಯ.

ಮೂಲ

ಐಂದ್ರಿತನ್ ಹಲ್ನ ಸ್ವಲ್ಪ ಹತ್ತಿರದಿಂದ ನೋಡಿ... ಆಹಾ! ಒಂದೊಂದೂ ಮುತ್ತಿದ್ದಂಗಿದೆ ತಾನೇ? ಅದಿಲ್ಲದೆ ಐಂದ್ರಿತನ್ ನಗು ಐಂದ್ರಿತನ್ ನಗು ಆಗ್ತಿತ್ತಾ?

ಮೂಲ

ಇನ್ನೂ ಒಂದ್ಸಲಿ ನೋಡಿ:

ಮೂಲ

ಆಮೇಲೆ... ಮಾಡಲಿಂಗ್ ಮಾಡ್ಕೊಂಡು ಸಿನ್ಮಾಗೆ ಬಂದು ಸೇರಿದಾಗಲೂ ಐಂದ್ರಿತನ ನಗೂನೇ ಜನರ ಮೇಲೆ ಹೆಚ್ಚು ಮೋಡಿ ಮಾಡಿರೋದು... ಏನೇನೋ ಉತ್ತರಗಳು, ಏನೇನೋ ಪ್ರಶ್ನೆಗಳು ಆ ನಗೂನಲ್ಲಿವೆ...

ಮೂಲ

ಆ ನಗು ಐಂದ್ರಿತಂಗೆ ತಂದುಕೊಟ್ಟ ಹೆಸರು, ಅವಾರ್ಡುಗಳು ಒಂದಲ್ಲ ಎರಡಲ್ಲ.

2008ರಲ್ಲಿ ಬಂದ "ಮೆರವಣಿಗೆ" ಇವಳ ಮೊದಲ ಸಿನ್ಮಾ... ಆದ್ರೆ ಇವಳನ್ನ ಜಾಸ್ತಿ ನೆನಪಿಸೋ ಫಿಲಂ ಅಂದ್ರೆ "ಮನಸಾರೆ". ಅರೆ ಹುಚ್ಚಿ ಪಾತ್ರದಲ್ಲಿ ಇವಳ ಸಕ್ಕತ್ ಅಭಿನಯಕ್ಕೆ ಇವಳಿಗೆ ಸುವರ್ಣ, ಸೌತ್ ಸ್ಕೋಪ್ ಮತ್ತು ಅಕ್ಕಾ ಅವಾರ್ಡುಗಳು ಸಿಕ್ತು. 2011ರಲ್ಲಿ SIIMA ಪ್ರಶಸ್ತಿ ಕೊಡೋರ ಒಳಗಿನ "ಪರಮಾತ್ಮ" ಮೆಚ್ಚಿಕೊಂಡು ಅವಾರ್ಡು ಕೊಡೋ ಹಾಗೆ ಮಾಡಿದ.  ಆಮೇಲೆ ಪ್ರೇಮ್ ಅಡ್ಡ, ಕಾಂಚನ, ಕಡ್ಡಿಪುಡಿ ಅದ್ರಲ್ಲೆಲ್ಲಾ ಚಿಕ್ ಚಿಕ್ ಸ್ಪೆಶಲ್ ರೋಲುಗಳು. ಫೋಟೋ ನೋಡುವಾಗ ಹಲ್ಲು ಮೇಲೆ ಗಮನ ಇರಲಿ. ಕಡ್ಡಿಪುಡೀಲಿ "ಸೌಂದರ್ಯ ಸಮರ"ಕ್ಕೆ ಸೋತಿದ್ದು ನೆನಪಿದ್ಯಾ? ಆಮೇಲ್ ಬಂತು ನೋಡಿ "ಭಜರಂಗಿ"... ಸೂಪರ್ ಹಿಟ್ಟೂ ಆಯ್ತು... ಐಂದ್ರಿತಂಗೆ SIIMA ಅವಾರ್ಡು ಸಿಕ್ತು.

ಮೂಲ

ಇದನ್ನೆಲ್ಲ ಓದೋ ಹುಡುಗ್ರು ದಿನಕ್ಕೆ ಒಂದಲ್ಲ ಎರಡಲ್ಲ ನಾಲ್ಕು ಸಾರಿ ಹಲ್ಲು ಉಜ್ಜಿದರೂ ಪ್ರಯೋಜನ ಇಲ್ಲ...

ಮೂಲ

ಯಾಕಂದ್ರೆ... ನಾನೇನು ಮಾಡ್ಲಿ ಸ್ವಾಮಿ...

ಮೂಲ

...ಈ ಹುಡುಗಿ ನಾಯಿ ಪ್ರೇಮಿ!!!! ಹತ್ತಿರ ಹೋದ್ರೆ ನಾಯಿ ಬೌ ಅನ್ನೋದಷ್ಟೇ ಅಲ್ಲ, ಹಲ್ಲಿಂದ ಕಚ್ಚಲೂ ಬಹುದು. ಅಷ್ಟೇ ಅಲ್ಲ, ಡೆಂಟಿಸ್ಟು ಹಲ್ಲು ಉದುರಿಸಿ ಬಿಟ್ಟಾಳು ಜೋಕೆ!

ಹೊರಚಿತ್ರ: smileguru

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಇನ್ನೊಂದ್ಸಲ ಸ್ವಿಮ್ಮಿಂಗ್ಗ್ ಹೋಗಬೇಕಾದರೆ ಈ 15 ಫೋಟೋಗಳು ನಿಮ್ನ ಕಾಡುತ್ವೆ

ಕಾಪಾಡಿ! ಕಾಪಾಡಿ!

ಈಜು ಬರತ್ತೆ ಅಂತೇಳಿ ಎಲ್ಲೆಲ್ಲೋ ಈಜಕ್ಕೆ ಹೋದ್ರೆ ಅಪಾಯ ತಪ್ಪಿದ್ದಲ್ಲ. ನೀರಿನ ಒಳಗೆ ಏನಿದೆ ಅಂತ ನಮಗೆ ಗೊತ್ತಿರಲ್ಲ. ಗೊತ್ತಾಗೋ ಹೊತ್ತಿಗೆ ಬಜಾವಾಗೋದು ಕಷ್ಟ. ನೀರಿಗೆ ಇಳಿಯೋ ಮುಂಚೆ ತುಂಬಾ ಹುಷಾರಾಗಿರ್ಬೇಕು. ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ. ಇಲ್ಲಿರೋ 15 ಫೋಟೋ ನೋಡಿ. ಇನ್ಮೇಲೆ ಸ್ವಿಮ್ಮಿಂಗ್‌ಗೆ ಹೋಗ್ಬೇಕಾದ್ರೆ ಖಂಡಿತ ನಿಮ್ಮನ್ನ ಕಾಡುತ್ವೆ. 

1. ಅತ್ತ ಧರಿ ಇತ್ತ ಪುಲಿ ಅಂದ್ರೆ ಇದೇ ಏನೋಪ್ಪಾ
2. ನೀರಿನಲ್ಲಿ ಗುಹೇನೂ ಇರ್ಬೋದು
3. ಇಂತದ್ದೇನದ್ರೂ ಕಾಣಿಸಿದ್ರೆ ಅರಚಕ್ಕೂ ಆಗಲ್ಲಪ್ಪೋ
4. ಅನಕೊಂಡ ಹಾವು ಇದ್ರೂ ಇರ್ಬೋದು
5. ಮೈ ಝುಮ್ ಅನ್ಸತ್ತೆ ಅಲ್ವಾ?
6. ಗ್ರಾಫಿಕ್ಸ್ ಅಂದ್ಕೊಂಡ್ರಾ.. ಸಿಕ್ಕಿದ್ರೆ ಅಷ್ಟೆ ಸೀರುಂಡೇನೆ!
7. ನೀರಿನಲ್ಲಿ ಅಲೆಯ ಉಂಗುರ ಅಲ್ಲ..ಹಾವಿನುಂಗುರ!
8. ಈ ತರಹ ಮಾಡಕ್ಕೂ ಗುಂಡಿಗೆ ಇರ್ಬೇಕು ಕಣ್ರಿ
9. ಡೈವ್ ಹೊಡೆದ್ರೆ ಹಂಗೇ ಗುಂಳುಂ ಅನ್ನಿಸ್ಬಿಡತ್ತೆ
10. ನನ್ ತಂಟೇಗ್ ಬಂದ್ರೆ ಸುಮ್ಕಿರಲ್ಲ ಅಂತಿದ್ಯಾ ಆಕ್ಟೋಪಸ್!
11. ದಾರಿ ಕಾಣದಾಗಿದೆ ರಾಘವೇಂದ್ರನೇ...
12. ಸಾವು ಕಣ್ಮುಂದೆ ಇದೆ ಅಂತಾರಲ್ಲ...ಇದೇನಾ?
13. ಇದೇನೋ ಪ್ರಾಣಿ ಅಂದ್ಕೊಂಡ್ರಾ...ಛೀ! ಪಾಚಿ ಅಷ್ಟೇ
14. ಎಲ್ಲಿಗೆ ಪಯಣ ಯಾವುದೋ ದಾರಿ...
15. ಬ್ಲೂ ವೇಲ್ ಒಂದ್ಸಲ ಮೇಲೆ ಬಂದಿದೆ ಅಂದ್ರೆ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: