ಬಿಹಾರಲ್ಲಿ ಪರೀಕ್ಷೆಗೆ ಬರೋ ಹುಡುಗೀರ್ಗೆ ಏನೇನ್ ಮಾಡ್ತಾರೆ ಅಂತ ನೋಡಿ ತುಂಬ ಬೇಸರ ಪಟ್ಕೋತೀರಿ

ಕಾಪಿ ಮಾಡೋದು ತಡ್ಯಕ್ಕೆ ಬೇರೆ ದಾರೀನೇ ಇಲ್ವಾ?

ಬಿಹಾರ್, ಪರೀಕ್ಷೆ

ಬಿಹಾರಲ್ಲಿ SSLC, PUC ಮಟ್ಟದ ಪರೀಕ್ಷೆಗಳಲ್ಲಿ ಯಾವ ಮಟ್ಟಕ್ಕೆ ಕಾಪಿ ನಡೆಯುತ್ತೆ ಅನ್ನೋದು ಫೇಸ್ಬುಕ್-ಗೀಸ್ಬುಕ್ಕಲ್ಲೆಲ್ಲ ಸಾಕಷ್ಟು ಓಡಾಡಿದೆ. ಇಂಥ ಫೋಟೋಗಳ್ನ ನೀವು ನೋಡಿರಬಹುದು:

intoday

ಗೊತ್ತಾಯ್ತು ತಾನೆ? ಇವರೆಲ್ಲ ಒಳಗೆ ಪರೀಕ್ಷೆಗೆ ಕೂತಿರೋರ್ಗೆ ಉತ್ತರ ಹೇಳ್ಕೊಡ್ತಿರೋ ಫ್ರೆಂಡ್ಸು!

ಈ ಕಾಪಿ ಪಿಡುಗ್ನ ಹೇಗೆ ಕಡಿಮೆ ಮಾಡೋದು ಅನ್ನೋದು ದೊಡ್ಡ ಪ್ರಶ್ನೇನೇ ಸರಿ. ಆದರೆ ಇದೆಲ್ಲದರಿಂದ ವಿಶೇಷವಾಗಿ ಹುಡುಗೀರ್ಗೆ ಆಗ್ತಿರೋ ತೊಂದರೆ ಹೇಳಕ್ಕಾಗದಷ್ಟಿದೆ.

ಹುಡ್ಗೀರು ಬಟ್ಟೆಯೊಳಗೆ ಎಲ್ಲಾದರೂ ಚೀಟಿ ಗೀಟಿ ಔಸಿಟ್ಕೊಂಡ್ ಬಂದಿದಾರಾ ಅಂತ ಇನ್ವಿಜಿಲೇಟರ್ಗಳು ಮೈಯೆಲ್ಲಾ ಮುಟ್ಟಿ, ಬಟ್ಟೆ ಒಳಗೆಲ್ಲ ಕೈ ಹಾಕಿ ನೋಡೋದು ಅಲ್ಲಿ ಸರ್ವೇ ಸಾಮಾನ್ಯ ಆಗೋಗಿದೆ...

MN News ಅನ್ನೋ ಚಾನೆಲ್ನೋರ ಈ ಚಿಕ್ಕ ವರದಿ ನೋಡಿದರೆ ನಿಮಗೆ ಈ ಸಮಸ್ಯೆ ಎಲ್ಲೀವರೆಗೂ ಬಂದು ಕೂತಿದೆ ಅಂತ ಅರ್ಥವಾಗತ್ತೆ. ಇದು ನಡೆದಿರೋದು ಬಿಹಾರಲ್ಲಿರೋ ಹಾಜಿಪುರ್ ಅನ್ನೋ ಊರಲ್ಲಿ. ಪರೀಕ್ಷೆ: ಇಂಟರ್ಮೀಡಿಯೆಟ್ (ಅಂದ್ರೆ ನಮ್ಮ PUC):

ವೀಡಿಯೋನಲ್ಲಿ ತಮ್ಮ ನಡವಳಿಕೆಯನ್ನ ಪರೀಕ್ಷಾ ಅಧಿಕಾರಿಳು ಸಮರ್ಥಿಸಿಕೊಳ್ತಾ ಇದಾರೆ ಬೇರೆ!

ಸಧ್ಯ ನಮ್ಮ ಕರ್ನಾಟಕದಲ್ಲಿ ಪರಿಸ್ಥಿತಿ ಇಲ್ಲೀವರೆಗೆ ಹದಗೆಟ್ಟಿಲ್ಲ. ಅದನ್ನ ಹಾಗೇ ಕಾಪಾಡ್ಕೊಳೋದರಲ್ಲಿ ನಮ್ಮೆಲ್ಲರ ಪಾತ್ರವೂ ಇದೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಇನ್ನೊಂದ್ಸಲ ಸ್ವಿಮ್ಮಿಂಗ್ಗ್ ಹೋಗಬೇಕಾದರೆ ಈ 15 ಫೋಟೋಗಳು ನಿಮ್ನ ಕಾಡುತ್ವೆ

ಕಾಪಾಡಿ! ಕಾಪಾಡಿ!

ಈಜು ಬರತ್ತೆ ಅಂತೇಳಿ ಎಲ್ಲೆಲ್ಲೋ ಈಜಕ್ಕೆ ಹೋದ್ರೆ ಅಪಾಯ ತಪ್ಪಿದ್ದಲ್ಲ. ನೀರಿನ ಒಳಗೆ ಏನಿದೆ ಅಂತ ನಮಗೆ ಗೊತ್ತಿರಲ್ಲ. ಗೊತ್ತಾಗೋ ಹೊತ್ತಿಗೆ ಬಜಾವಾಗೋದು ಕಷ್ಟ. ನೀರಿಗೆ ಇಳಿಯೋ ಮುಂಚೆ ತುಂಬಾ ಹುಷಾರಾಗಿರ್ಬೇಕು. ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ. ಇಲ್ಲಿರೋ 15 ಫೋಟೋ ನೋಡಿ. ಇನ್ಮೇಲೆ ಸ್ವಿಮ್ಮಿಂಗ್‌ಗೆ ಹೋಗ್ಬೇಕಾದ್ರೆ ಖಂಡಿತ ನಿಮ್ಮನ್ನ ಕಾಡುತ್ವೆ. 

1. ಅತ್ತ ಧರಿ ಇತ್ತ ಪುಲಿ ಅಂದ್ರೆ ಇದೇ ಏನೋಪ್ಪಾ
2. ನೀರಿನಲ್ಲಿ ಗುಹೇನೂ ಇರ್ಬೋದು
3. ಇಂತದ್ದೇನದ್ರೂ ಕಾಣಿಸಿದ್ರೆ ಅರಚಕ್ಕೂ ಆಗಲ್ಲಪ್ಪೋ
4. ಅನಕೊಂಡ ಹಾವು ಇದ್ರೂ ಇರ್ಬೋದು
5. ಮೈ ಝುಮ್ ಅನ್ಸತ್ತೆ ಅಲ್ವಾ?
6. ಗ್ರಾಫಿಕ್ಸ್ ಅಂದ್ಕೊಂಡ್ರಾ.. ಸಿಕ್ಕಿದ್ರೆ ಅಷ್ಟೆ ಸೀರುಂಡೇನೆ!
7. ನೀರಿನಲ್ಲಿ ಅಲೆಯ ಉಂಗುರ ಅಲ್ಲ..ಹಾವಿನುಂಗುರ!
8. ಈ ತರಹ ಮಾಡಕ್ಕೂ ಗುಂಡಿಗೆ ಇರ್ಬೇಕು ಕಣ್ರಿ
9. ಡೈವ್ ಹೊಡೆದ್ರೆ ಹಂಗೇ ಗುಂಳುಂ ಅನ್ನಿಸ್ಬಿಡತ್ತೆ
10. ನನ್ ತಂಟೇಗ್ ಬಂದ್ರೆ ಸುಮ್ಕಿರಲ್ಲ ಅಂತಿದ್ಯಾ ಆಕ್ಟೋಪಸ್!
11. ದಾರಿ ಕಾಣದಾಗಿದೆ ರಾಘವೇಂದ್ರನೇ...
12. ಸಾವು ಕಣ್ಮುಂದೆ ಇದೆ ಅಂತಾರಲ್ಲ...ಇದೇನಾ?
13. ಇದೇನೋ ಪ್ರಾಣಿ ಅಂದ್ಕೊಂಡ್ರಾ...ಛೀ! ಪಾಚಿ ಅಷ್ಟೇ
14. ಎಲ್ಲಿಗೆ ಪಯಣ ಯಾವುದೋ ದಾರಿ...
15. ಬ್ಲೂ ವೇಲ್ ಒಂದ್ಸಲ ಮೇಲೆ ಬಂದಿದೆ ಅಂದ್ರೆ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: