ಯಾವತ್ತಾದರೂ‌ ಸಾಲ ತೊಗೊಳೋ ಯೋಚನೆ ಬಂದಿದ್ದರೆ ಈ‌ ವಿಷ್ಣು ಕತೆಯಲ್ಲಿ ನಿಮಗೊಂದು ಸಂದೇಶ ಇದೆ

ನಮ್ಮ ದೇವರುಗಳು ಸಕ್ಕತ್ ಕೂಲ್ ಕಣ್ರೀ

ವಿಷ್ಣು, ಕುಬೇರ

ಒಂದ್ಸಲಿ ಲಕ್ಷ್ಮಿ ವಿಷ್ಣು ಜೊತೆ ಜಗಳ ಮಾಡ್ಕೊಂಡು ವೈಕುಂಠ ಬಿಟ್ಟು ಭೂಮಿಗೆ ಬಂದ್ಲಂತೆ.

ಗೊತ್ತೇ ಇದ್ಯಲ್ಲ, ಗಂಡ-ಹೆಂಡ್ತೀರ ಜಗಳ?

page8-lakshmi_devi_leaves_vaikunta.jpg

ಸರಿ, ಹೆಂಡ್ತೀನ್ ಹುಡುಕ್ಕೊಂಡು ವಿಷ್ಣೂನೂ ಭೂಮಿಗೆ ಬಂದ್ನಂತೆ. ಅಲ್ಲೆಲ್ಲಿ? ವರಾಹ ಪರ್ವತಕ್ಕೆ - ಅದೇ ವರಾಹಮೂರ್ತಿ ಇದ್ದನಲ್ಲ, ಅಲ್ಲಿಗೆ...

ಬಂದು ತನ್ನ ಕಷ್ಟ ಹೇಳ್ಕೊಂಡು ಇಳ್ಕೊಳಕ್ಕೆ ಜಾಗ ಕೊಡು ಅಂದ್ನಂತೆ. ವರಾಹಮೂರ್ತಿ ಸರಿ ಅಂದ್ನಂತೆ.

page11-mahavishnu_asks_place_to_varaha_moorthy.jpg

ಹಾಗೇ ಒಂದ್ ದಿನ ವಿಷ್ಣು ಬೇಟೆ ಆಡಕ್ಕೆ ಹೋಗಿದ್ದಾಗ ಒಂದು ಆನೆ ಒಬ್ಬ ಹುಡುಗೀನ ಅಟ್ಟಿಸಿಕೊಂಡು ಹೋಗ್ತಿತ್ತಂತೆ. ಸರಿ, ಆನೆಗೆ ಬಾಣ ಹೊಡೆದು ಹುಡ್ಗೀನ ಕಾಪಾಡಿದನಂತೆ...

page18-srinivass_rescues_padmavathy.jpg

ಆ ಹುಡುಗಿ ಹೆಸರು ಪದ್ಮಾವತಿ ಅಂತೆ. ಹಂಗೇ ಇಬ್ಬರಿಗೂ ಲವ್ವು ಶುರುವಾಯಿತಂತೆ...

page19-padmavathi_loves_srinivasa.jpg

ಹಾಗೂ ಹೀಗೂ ಈ ಲವ್ ಸುದ್ದಿ ದೇವತೆಗಳಿಗೆಲ್ಲ ತಲುಪಿದಾಗ ಸಕ್ಕತ್ ಖುಷಿ ಆಗಿ ಓಲಗ ಊದಿಸೇ ಬಿಡೋಣ ಅಂತ ವಿಷ್ಣೂನ ನೋಡಕ್ಕೆ ಬಂದ್ರಂತೆ...

page23-meeting_with_gods.jpg

ಪದ್ಮಾವತಿ ಅಪ್ಪ ಆಕಾಶರಾಜ ಮದುವೆಗೆ ಒಪ್ಕೊಂಡು ಅಳೀಮಯ್ಯನಿಗೆ ಬಂದು ನನ್ನ ಮಗಳ್ನ ಮದುವೆ ಮಾಡ್ಕೋ ಅಂತ ಪತ್ರ ಬರೆದನಂತೆ...

page24-king_of_sky_invites_srinivasa.jpg

ಮಾವ ದೊಡ್ಡ ರಾಜ ಅಲ್ಲವೇ, ಮದುವೆ ಚೆನ್ನಾಗಿ ಮಾಡ್ಬೇಕು! ಅದಕ್ಕೆ ಕಾಡಲ್ಲಿ ಸಿಕಾಕೊಂಡಿರೋ ವಿಷ್ಣು ದುಡ್ಡೆಲ್ಲಿಂದ ತರಬೇಕು? ಅದಕ್ಕೆ ಕುಬೇರನ ಹತ್ತಿರ 1,14,00,000 ಚಿನ್ನದ ನಾಣ್ಯ ಸಾಲ ತೊಗೊಂಡನಂತೆ...

page25-srinivasa_borrows_from_kubera.jpg

ಸಾಲ ಕೊಡಬೇಕಾದರೆ ಕುಬೇರ ಒಂದು ಷರತ್ತು ಹಾಕಿದನಂತೆ - ಸಾಲ ತೀರಿಸದೆ ವೈಕುಂಠಕ್ಕೆ ಎಸ್ಕೇಪ್ ಆಗೋಹಂಗಿಲ್ಲ ಅಂತ. ವಿಷ್ಣು ಒಪ್ಕೊಂಡ್ನಂತೆ... ಪಾಪ ಆತುರ, ಏನ್ ಮಾಡ್ತಾನೆ ಹೇಳಿ? ಸರಿ, ದೇವತೆಗಳು, ಆಕಾಶರಾಜನ ಮನೆಯೋರು ಎಲ್ಲಾ ಸೇರಿ ಕೊನೆಗೆ ಓಲಗ ಊದಿಸೇ ಬಿಟ್ರಂತೆ...

page28-srinivas_marris_padmavathy.jpg

ಮದುವೆ ಮಾಡ್ಕೊಳೋದೇನೋ ಮಾಡ್ಕೊಂಡ, ಆದ್ರೆ ಏನ್ ಮಾಡುದ್ರೂ ಸಾಲ ತೀರಿಸಕ್ಕೆ ಆಗ್ತಿಲ್ಲ... ಅದಕ್ಕೆ ಇನ್ನೂ ವೈಕುಂಠಕ್ಕೆ ಹೋಗಕ್ಕೆ ಪರ್ಮಿಶನ್ ಸಿಗದೆ ಇಲ್ಲೇ ಇದಾನೆ...

tirupati_balaji_hd_wallpaper-vasantkamal.jpgvasantkamal

ಗೊತ್ತಾಯಿತು ತಾನೆ? ಹೂಂ, ತಿರುಪತೀಲಿ. ಇನ್ನೆಲ್ಲಿ?

ಒಟ್ನಲ್ಲಿ ಮದುವೆ ಮಾಡ್ಕೊಳಕ್ಕೆ ಕುಬೇರನಿಂದ ತೊಗೊಂಡ ಸಾಲ ತೀರಿಸಕ್ಕೆ ಆಗದೆ ಇನ್ನೂ ವಿಷ್ಣು ಭೂಮೀಲೇ ಇದಾನೆ ಅನ್ನೋದು ತಿರುಪತಿಯ ಸ್ಥಳಪುರಾಣ. ನಾವು ತಿರುಪತಿ ಹುಂಡಿಗೆ ಹೋಗಿ ಹಾಕೋ ಪ್ರತಿಯೊಂದು ಕಾಸೂ ಏಣುಸ್ಕೋತಾ ಇದಾನಂತೆ ವಿಷ್ಣು. ಕುಬೇರ ಕೊಟ್ಟಷ್ಟು ದುಡ್ಡು ಸೇರಿದಾಗ ವೈಕುಂಠಕ್ಕೆ ಎಸ್ಕೇಪಾಗೋ ಪ್ಲಾನಿದೆ.

ಈ ಕತೇಲಿ ಸಾಲ ತೊಗೊಳೋರ್ಗೆ ಇರೋ ಸಂದೇಶ ಏನು ಗೊತ್ತಾ? ತೊಗೊಳಿ, ಆದರೆ ತೀರಿಸಕ್ಕೆ ಆಗುವಂಥ ಸಾಲ ಮಾತ್ರ ತೊಗೊಳಿ! ಇಲ್ಲದೆ ಹೋದ್ರೆ ಸಿಕಾಕೋತೀರಿ! ಇದು ನಿಮಗೆ ಗೊತ್ತಿಲ್ಲ ಅಂತ ಹೇಳ್ತಿಲ್ಲ... ವಿಷ್ಣುಗೇನು ಗೊತ್ತಿರಲಿಲ್ಲವಾ? ಗೊತ್ತಿದ್ದರೂ‌ ಒಮ್ಮೊಮ್ಮೆ ಹೇಳಬೇಕಾಗತ್ತೆ... ಹೌದು ತಾನೆ?

ಅಂದಹಾಗೆ 2014ರಲ್ಲಿ ವಿಷ್ಣು ಸಾಲ ಇನ್ನೂ ಎಷ್ಟು ವರ್ಷ ಬಾಕಿ ಇದೆ ಅಂತ ಬೆಂಗಳೂರಿನ ನರಸಿಂಹಮೂರ್ತಿ ಅನ್ನೋ ಒಬ್ಬರು RTI ಅರ್ಜಿ ಬೇರೆ ಸಲ್ಲಿಸಿದ್ದರು ಅಂದ್ರೆ ನಂಬ್ತೀರಾ? ತಮಾಷೆ ಮಾಡ್ತಿಲ್ಲ, ಇಲ್ಲಿ ಓದಿ.

ಎಲ್ಲಾ ಕಾರ್ಟೂನ್ ಚಿತ್ರಗಳ ಮೂಲ: tirupathitourguide

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: