ವಿಜಯ್ ಮಲ್ಯನ್ ತಾತನಷ್ಟು ಸಾಲ ಮಾಡಿ ತೀರಿಸದೆ ರಾಜಾರೋಷವಾಗಿ ಓಡಾಡ್ತಿರೋ 10 ದೊಡ್ಡ ಕುಳಗಳು

ಮಲ್ಯ = ಬಚ್ಚಾ!

ಕಿಂಗ್ ಫಿಶರ್ ಏರ್ಲೈನ್ಸ್ ನಡೆಸ್ತಾ ಇದ್ದ ವಿಜಯ್ ಮಲ್ಯ ಸಾವಿರಾರು ಕೋಟಿ ರುಪಾಯಿ ಸಾಲ ಮಾಡಿ ತೀರಿಸ್ದೇ ಇರೋದರ ಬಗ್ಗೆ ಸಿಕ್ಕಾಪಟ್ಟೆ ಓದಿದ್ದೀರಿ ಅಲ್ವಾ?

Mallya.jpgಮೂಲ

ಮಲ್ಯ ವಾಪಸ್ ಮಾಡ್ಬೇಕಿರೋ ಸಾಲ 7000 ಕೋಟಿ!

ಅಬ್ಬ! ಅಷ್ಟೊಂದು ದುಡ್ಡನ್ನ ಸಾಲ ಅಂತ ಇಸ್ಕೊಂಡು ವಾಪಸ್ ಕೊಡ್ದೇ ಇರೋದು ಎಲ್ಲಾದ್ರೂ ಉಂಟೇ... ಅಂತೀರಾ? ಉಂಟು ಸ್ವಾಮಿ... ಭಾರತದಲ್ಲೇ ಇಂಥವರು ಹಲವರು ಉಂಟು.

ಮಲ್ಯನ್ ತಾತ್‍ನಷ್ಟು ಸಾಲ ಮಾಡಿ ತೀರಿಸ್ದೇ ರಾಜಾರೋಶವಾಗಿ ಓಡಾಡ್ತಿರೋ ಈ ಟಾಪ್ 10 ಕುಳಗಳ ಬಗ್ಗೆನೂ ತಿಳ್ಕೊಳ್ಳಿ...

10. ಜಿ.ವಿ.ಕೆ ರೆಡ್ಡಿ (ಜಿ.ವಿ.ಕೆ. ಗ್ರೂಪ್) - 33,933 ಕೋಟಿ ಸಾಲ!

ಇವರು ಮಾಡಿರೋ ಸಾಲದಲ್ಲಿ ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಒಂದು ವರ್ಷ MNREGA ಯೋಜನೆಯನ್ನೇ ನಡೆಸಬಹುದು.

GVK.jpgಮೂಲ

9. ವೇಣುಗೋಪಾಲ್ ಧೂತ್ (ವೀಡಿಯೋಕಾನ್ ಗ್ರೂಪ್) - 45,405 ಕೋಟಿ ಸಾಲ!

ಇಷ್ಟ್ ದುಡ್ಡನ್ನ ನಮ್ ವಿಗ್ನಾನಿಗಳಿಗ್ ಕೊಟ್ರೆ ಕಳದ್ ಸಲ ಮಂಗಳ ಗ್ರಹಕ್ಕೆ ರಾಕೆಟ್ ಬಿಟ್ರಲ್ಲ ಆಥರ 93 ರಾಕೆಟ್ ಬಿಡ್ಬೋದಂತೆ!

VenugopalDhot.jpgಮೂಲ

8. ಎಲ್. ಮಧುಸೂಧನ್ ರಾವ್ (ಲ್ಯಾನ್ಕೋ ಗ್ರೂಪ್) - 47,102 ಕೋಟಿ ಸಾಲ!

Madhusudanrao.jpgಮೂಲ

7. GM ರಾವ್ (GMR ಗ್ರೂಪ್) - 47,976 ಕೋಟಿ ಸಾಲ!

ಇಷ್ಟು ಮೊತ್ತದ ದುಡ್ಡಲ್ಲಿ ಕಲ್ಲಿದ್ದಿಲಿನ ಒಂದು ಪವರ್ ಸ್ಟೇಶನ್ ಮಾಡಿದ್ರೆ ಇಡೀ ಕರ್ನಾಟಕಕ್ಕೆ ವರ್ಷವೆಲ್ಲಾ 10 ಘಂಟೆ ಕಾಲ ಕರೆಂಟ್ ಕೊಡ್ಬೋದು...!

GMRao.jpgಮೂಲ

6. ಸಜ್ಜನ್ ಜಿಂದಾಲ್ (JSW ಗ್ರೂಪ್) - 58,171 ಕೋಟಿ ಸಾಲ!

ಇಷ್ಟು ದುಡ್ಡಿದ್ರೆ ಭಾರತದ ಭದ್ರತಾ ಪಡೆಯೋರು 26 ಯುದ್ಧ ವಿಮಾನ ಕೊಂಡ್ಕೋಬೋದು..!

SajjanJindal.jpgಮೂಲ

5. ಮನೋಜ್ ಗೌರ್ (Jaypee ಗ್ರೂಪ್) - 75,163 ಕೋಟಿ ಸಾಲ!

ಇಡೀ ದೇಶದಲ್ಲಿ 12 ಕೋಟಿ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲು ಒಂದು ವರ್ಷಕ್ಕೆ ಎಷ್ಟು ಖರ್ಚಾಗುತ್ತೋ ಅದರ ಎಂಟು ಪಟ್ಟು ಇದು!

ManojGaur.jpgಮೂಲ

4. ಗೌತಮ್ ಅದಾನಿ (ಅದಾನಿ ಗ್ರೂಪ್) - 96,031 ಕೋಟಿ ಸಾಲ!

ಇವರು ತೀರಿಸಬೇಕಿರೋ ಸಾಲದ ದುಡ್ಡಲ್ಲಿ ಮುಂಬೈ ಅಹಮದಾಬಾದ್ ಮಧ್ಯೆ ಬುಲೆಟ್ ಟ್ರೈನ್ ಮಾಡಿಸ್‍ಬಿಡ್ಬೋದು! ಇಷ್ಟು ಸಾಲದು ಅಂತ ಇವ್ರಿಗೆ ಇನ್ನೂ 6,600 ಕೋಟಿ ಸಾಲ ಕೊಡ್ಬೇಕು ಅಂತಿದ್ರಂತೆ ಸ್ಟೇಟ್ ಬ್ಯಾಂಕೋರು! ಆಮೇಲ್ ಮೀಡಿಯಾದೋರು ಅದನ್ನ ಸಿಕ್ಕಾಪಟ್ಟೆ ಗಲಾಟೆ ಮಾಡಿದ್ರು ಅಂತ ವಾಪಸ್ ತಗೊಂಡ್ರಂತೆ! ಉಸ್ಸಪ್ಪ!

Adani.jpgಮೂಲ

3. ಶಶಿ ರೂಇಯಾ ಮತ್ತು ರವಿ ರೂಇಯಾ (ಎಸ್ಸಾರ್ ಗ್ರೂಪ್) - 1,01,000 ಕೋಟಿ!

ಕೇಂದ್ರ ಸರ್ಕಾರ 2020ರವರೆಗೆ ದೇಶದೆಲ್ಲೆಡೆ ಸ್ಮಾರ್ಟ್ ಸಿಟಿಗಳನ್ನ ಕಟ್ಟಕ್ಕೆ ಎಷ್ಟು ದುಡ್ಡಿಟ್ಟಿದ್ದಾರೋ ಇವರ ಸಾಲದ ಬಾಬ್ತು ಹೆಚ್ಚು ಕಮ್ಮಿ ಅಷ್ಟೇ ಆಗುತ್ತೆ!

RuiaBrothers.jpgಮೂಲ

2. ಅನಿಲ್ ಅಗರ್ವಾಲ್ (ದ ವೇದಾಂತ ಗ್ರೂಪ್) - 1,03,000 ಕೋಟಿ!

ಇವರು ಸಾಲ ತಗೊಂಡಿರೋ ಅಷ್ಟು ದುಡ್ಡು ಎಷ್ಟಪ್ಪಾ ಅಂದ್ರೆ, ಕೇಂದ್ರ ಸರ್ಕಾರದೋರು ಕಳೆದ ವರ್ಷ ದೂರಸಂಪರ್ಕ ಸ್ಪೆಕ್ಟ್ರಮ್ ಹರಾಜಿನಲ್ಲಿ ಗಳಿಸಿದಷ್ಟು!

AnilAgarwal.jpgಮೂಲ

1. ಅನಿಲ್ ಅಂಬಾನಿ (ರಿಲಯನ್ಸ್ ಗ್ರೂಪ್) - 1,25,000 ಕೋಟಿ ಸಾಲ!

1,25,000 ಕೋಟಿ! 2015ರಲ್ಲಿ  ಬಿಹಾರದ ವಿಧಾನಸಭಾ ಚುನಾವಣೆಗೆ ಮೊದಲು ಪ್ರಧಾನಿ ಮೋದಿಯವರು ಬಿಹಾರ ರಾಜ್ಯಕ್ಕೆ ಕೊಟ್ಟ ಸ್ಪೆಶಲ್ ಪ್ಯಾಕೇಜಿನಷ್ಟು!

AnilAmbani.jpgಮೂಲ

ಇದೆಲ್ಲಾದರ ಮಧ್ಯೆ ತಮಾಶೆ ಏನಪ್ಪಾ ಅಂದ್ರೆ, ಇವರಿಗೆಲ್ಲಾ ಸಾಲ ಕೊಟ್ಟಿರೋ ಬ್ಯಾಂಕುಗಳು ಇವರಿಗೆ ಒತ್ತಡ ಹೇರಿ ವಸೂಲಿ ಮಾಡ್ತಿಲ್ಲ. ಬದಲಾಗಿ ಕೊಟ್ಟಿರೋ ಸಾಲಾನ ತೀರಿಸೋ ಬಗೆಗಳಲ್ಲಿ ಹೊಸ ಹೊಸ ಡೀಲುಗಳನ್ನ ಕೊಡ್ತಿದೆ. ಇದರಿಂದ ಎಷ್ಟೇ ಸಾಲ ಮಾಡಿದ್ರೂ ಇವರೆಲ್ಲಾ ಹಾಯಾಗಿರಬೋದು! ನೀವು ಹೀಗೇ ಹಾಯಾಗಿರಬೇಕಾದ್ರೆ ನೀವೂ ಸಾಲ ಮಾಡ್ಬೇಕು... ಆದ್ರೆ ಹತ್ತಿಪ್ಪತ್ತು ಲಕ್ಷ ಅಲ್ಲ.... ಸಾವಿರಾರು ಕೋಟಿಯಷ್ಟು. ಆಗ ನಿಮಗೂ ಒಳ್ಳೊಳ್ಳೆ ಡೀಲುಗಳು ಸಿಗುತ್ತವೆ. ಸಾಲ ವಸೂಲಾತಿ ವಾಹನ ನಿಮ್ಮ ಮನೆ ಕಡೆನೂ ಸುಳಿಯಲ್ಲ...

ನೆನೆಪದ: 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: