ಈ 12 ನಟ-ನಟಿಯರ ತಲೆಕೆಳಗಾಗಿರೋ ಫೋಟೋ ನೋಡುವಾಗ ಎರ್ರಾಬಿರ್ರಿ ಮೋಸ ಹೋಗ್ತೀರಿ

ಕಡೆ ವರೆಗೂ ಮೋಸ ಏನು ಅಂತ ಗೊತ್ತಾಗಲ್ಲ

ದರ್ಶನ್

ನಮ್ಮ ಕನ್ನಡದ ಕೆಲವು ನಟ-ನಟೀರ ಫೋಟೋಗಳ್ನ ಸುಮ್ನೆ ಕೂಳೆಗೆ ಅಂತ ಉಲ್ಟ್-ಉಲ್ಟಾ ತೋರುಸ್ತಾ ಹೋಗ್ತೀವಿ, ಯಾರು ಅಂತ ಗೊತ್ತಾಗತ್ತಾ ನೋಡಿ...

1. ಇದು ಯಾರು ಗೊತ್ತಾಯ್ತಾ? ಹೊಉದು, ನಮ್ ಕಿಚ್ಚ "ಶಾಂತ"ವಾಗಿ ಶಾಂತಿ ನಿವಾಸದಲ್ಲಿದ್ದಾರೆ. ಫೋಟೋ‌ನಲ್ಲಿ ಏನೂ ವಿಚಿತ್ರ ಅನ್ನಿಸಲಿಲ್ಲ ತಾನೇ? ಸರಿ, ಮುಂದುವರೀರಿ.

Sudeepa-ulta.jpg

2. ಇದು? ಇನ್ನ್ಯಾರು? ಕನ್ನಡದ ಯುವಕರ ಮುದ್ದಿನರಗಿಣಿ - ರಾಗಿಣಿ. ಚೆನ್ನಾಗ್ ಕಾಣ್ತಿದಾಳಲ್ವಾ? ಸರಿ, ಮುಂದ...

Ragini-ulta.jpg

3. ಇದು ಶಿವಣ್ಣ ಅಂತ ಕ್ಲೀನಾಗಿ ಗೊತ್ತಾಗತ್ತೆ. ಆ ಕಣ್ಣು, ಆ ಬಾಯಿ...

Shivanna-ulta.jpg

4. ಇದು ಚಿನಕುರುಳಿ ರಾಧಿಕಾ ಪಂಡಿತ್... ಎಷ್ಟು ಸುಂದರವಾಗಿದೆ ಈ ಫೋಟೋ! ಅಲ್ವಾ?

Radhika-ulta.jpg

5. ಈ‌ ಫೋಟೋಲಿ ಪುನೀತ್ ಜೆಂಟಲ್ ಮನ್ ಪೋಸಲ್ಲಿದ್ದಾರೆ - ಫೈಟ್ ಮೂಡಲ್ಲಿಲ್ಲ ಅನ್ಸುತ್ತೆ...

Puneet-ulta.jpg

6. ರಚಿತಾ ರಾಮ್ ನಗು... ನೆನಪಿದೆ ತಾನೆ? ಏನ್ ಫೋಟೋ!

Rachita-ulta.jpg

7. ಕಲೆಗೇ ಶರಣಾಗಿರುವ ಶರಣ್. ಮುಖದಲ್ಲಿ ತುಂಟತನ ತುಂಬಿ ತುಳುಕ್ತಾ ಇಲ್ವಾ?

Sharan-ulta.jpg

8. ಹರಿಪ್ರಿಯಾ ಏನ್ ಚೆನ್ನಾಗ್ ಕಾಣ್ತಾಳ್ರೀ... ಫೋಟೋ‌ ಉಲ್ಟಾ‌ ಇದ್ರೇನಂತೆ? ಅವಳ ಮುಖ ಒಂದ್ಸಲಿ ಮನಸ್ಸಿಗೆ ಬಂದುಬಿಟ್ಟರೆ ಉಲ್ಟಾ ಆದರೂ‌ ಗೊತ್ತಾಗಲ್ಲ!

Haripriya-ulta.jpg

9. ಈ ದೂದ್ ಪೇಡ ಯಾವ್ ಹುಡ್ಗೀಗ್ ತಾನ್ ಬೇಡ? ಹೌದು, ದಿಗಂತ್ ಇದು...

Diganth-ulta.jpg

10. ಕನ್ನಡಕ್ಕೆ ದೊರಕಿರುವ ’ಅಮೂಲ್ಯ’ವಾದ ಪ್ರತಿಭೆ... ತಲೆಕೆಳಗಾದರೇನಂತೆ?

Amulya-ulta.jpg

11. ಕನ್ನಡಕ್ಕೆ ಇರೋದೊಬ್ಬರೇ ಚಾಲೆಂಜಿಂಗ್ ಸ್ಟಾರ್...! ಫೋಟೋ ಉಲ್ಟಾ ಆಗ್ಬುಟ್ರೆ ಗೊತ್ತಾಗಕ್ಕಿಲ್ವಾ?

Darshan-ulta.jpg

12. ಬಿನ್ನಾಣದ ಬೆಡಗಿ, ಐಂದ್ರಿತಾ ರೇ... ತಲೆಕೆಳಗಾದರೂ ಬೆಡಗೇನು ಕಡಿಮೆಯಿಲ್ಲ!

aindrita-ulta.jpg

ಈಗ...

 

ನೀವು...

 

ನೋಡಿದ...

 

ಫೋಟೋಗಳ್ನ...

 

ಒಂದು...

 

ಸ್ವಲ್ಪ...

 

ಸೀದಾ...

 

ಮಾಡಿ...

 

ನೋಡೋಣ್ವಾ?

 

ರೆಡಿ ಇದೀರಾ? ಕಡೆಗೆ ನೋಡಿದ ಐಂದ್ರಿತಾ ಫೋಟೋ ಇಂದ ಶುರು ಮಾಡೋಣ್ವಾ?

 

ಏನು ಹೆದರಿಕೆ ಇಲ್ಲ ತಾನೆ?

aindrita-sjpg.jpg

darshan-s.jpg
amulya-s.jpg

diganth-s.jpg
haripriya-s.jpg

sharan-s.jpg

rachita-s.jpg

puneet-s.jpg
radhika-s.jpg

Shivanna-s.jpg

ragini-s.jpg

Sudeepa-s.jpg

ನಂಬಕ್ಕೆ ಆಗ್ತಾ ಇಲ್ಲ ಅಲ್ಲವಾ? ಈ‌ ಫೋಟೋಗಳ್ನೇ ಮೊದಲು ನೀವು ನೋಡಿದ್ದು ಅಂತ? ಇದು ಮನುಷ್ಯನ ಕಣ್ಣು ಹೇಗೆ ಮೋಸ ಮಾಡತ್ತೆ ಅನ್ನೋದಕ್ಕೆ ಒಂದು ಚಿಕ್ಕ ಉದಾಹರಣೆ, ಅಷ್ಟೆ. ಕಣ್ಣು ಮತ್ತು ಬಾಯಿ ಮಾತ್ರ ಹಾಗೇ ಇಟ್ಟುಕೊಂಡು ಮಿಕ್ಕ ಮುಖ ಉಲ್ಟಾ‌ ಮಾಡಿದರೆ ಹೀಗಾಗುತ್ತೆ... ಮೋಸ ಹೋದ್ರಿ ತಾನೆ? :-)

ನೆನೆಪದ: 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಇನ್ನೊಂದ್ಸಲ ಸ್ವಿಮ್ಮಿಂಗ್ಗ್ ಹೋಗಬೇಕಾದರೆ ಈ 15 ಫೋಟೋಗಳು ನಿಮ್ನ ಕಾಡುತ್ವೆ

ಕಾಪಾಡಿ! ಕಾಪಾಡಿ!

ಈಜು ಬರತ್ತೆ ಅಂತೇಳಿ ಎಲ್ಲೆಲ್ಲೋ ಈಜಕ್ಕೆ ಹೋದ್ರೆ ಅಪಾಯ ತಪ್ಪಿದ್ದಲ್ಲ. ನೀರಿನ ಒಳಗೆ ಏನಿದೆ ಅಂತ ನಮಗೆ ಗೊತ್ತಿರಲ್ಲ. ಗೊತ್ತಾಗೋ ಹೊತ್ತಿಗೆ ಬಜಾವಾಗೋದು ಕಷ್ಟ. ನೀರಿಗೆ ಇಳಿಯೋ ಮುಂಚೆ ತುಂಬಾ ಹುಷಾರಾಗಿರ್ಬೇಕು. ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ. ಇಲ್ಲಿರೋ 15 ಫೋಟೋ ನೋಡಿ. ಇನ್ಮೇಲೆ ಸ್ವಿಮ್ಮಿಂಗ್‌ಗೆ ಹೋಗ್ಬೇಕಾದ್ರೆ ಖಂಡಿತ ನಿಮ್ಮನ್ನ ಕಾಡುತ್ವೆ. 

1. ಅತ್ತ ಧರಿ ಇತ್ತ ಪುಲಿ ಅಂದ್ರೆ ಇದೇ ಏನೋಪ್ಪಾ
2. ನೀರಿನಲ್ಲಿ ಗುಹೇನೂ ಇರ್ಬೋದು
3. ಇಂತದ್ದೇನದ್ರೂ ಕಾಣಿಸಿದ್ರೆ ಅರಚಕ್ಕೂ ಆಗಲ್ಲಪ್ಪೋ
4. ಅನಕೊಂಡ ಹಾವು ಇದ್ರೂ ಇರ್ಬೋದು
5. ಮೈ ಝುಮ್ ಅನ್ಸತ್ತೆ ಅಲ್ವಾ?
6. ಗ್ರಾಫಿಕ್ಸ್ ಅಂದ್ಕೊಂಡ್ರಾ.. ಸಿಕ್ಕಿದ್ರೆ ಅಷ್ಟೆ ಸೀರುಂಡೇನೆ!
7. ನೀರಿನಲ್ಲಿ ಅಲೆಯ ಉಂಗುರ ಅಲ್ಲ..ಹಾವಿನುಂಗುರ!
8. ಈ ತರಹ ಮಾಡಕ್ಕೂ ಗುಂಡಿಗೆ ಇರ್ಬೇಕು ಕಣ್ರಿ
9. ಡೈವ್ ಹೊಡೆದ್ರೆ ಹಂಗೇ ಗುಂಳುಂ ಅನ್ನಿಸ್ಬಿಡತ್ತೆ
10. ನನ್ ತಂಟೇಗ್ ಬಂದ್ರೆ ಸುಮ್ಕಿರಲ್ಲ ಅಂತಿದ್ಯಾ ಆಕ್ಟೋಪಸ್!
11. ದಾರಿ ಕಾಣದಾಗಿದೆ ರಾಘವೇಂದ್ರನೇ...
12. ಸಾವು ಕಣ್ಮುಂದೆ ಇದೆ ಅಂತಾರಲ್ಲ...ಇದೇನಾ?
13. ಇದೇನೋ ಪ್ರಾಣಿ ಅಂದ್ಕೊಂಡ್ರಾ...ಛೀ! ಪಾಚಿ ಅಷ್ಟೇ
14. ಎಲ್ಲಿಗೆ ಪಯಣ ಯಾವುದೋ ದಾರಿ...
15. ಬ್ಲೂ ವೇಲ್ ಒಂದ್ಸಲ ಮೇಲೆ ಬಂದಿದೆ ಅಂದ್ರೆ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: