ತಮಿಳುನಾಡಲ್ಲಿ ಹುಟ್ಟಿದ ಈ ಇಂಜಿನಿಯರ್ ಬಗ್ಗೆ ಕನ್ನಡಿಗರೆಲ್ಲರೂ ಹೆಮ್ಮೆ ಪಡಕ್ಕೆ 11 ಬಲವಾದ ಕಾರಣಗಳು

ಕಾಲೇಜಲ್ಲಿ ನಡೆದ ಒಂದು ಘಟನೆ ರಮೇಶ್ ಜೀವನಾನೇ ಬದಲಾಯಿಸಿ ಬಿಡ್ತು

ಕನ್ನಡಿಗರ ಮನೆಮಾತಾಗಿರೋ ಹೀರೋ ರಮೇಶ್ ಅರ್ವಿಂದ್ ಅಂತಿಂಥ ವ್ಯಕ್ತಿಯಲ್ಲ... ಇಂಜಿನಿಯರ್ ಆಗಿದ್ದ ರಮೇಶ್ ಒಬ್ಬ ಚಿಂದಿ ನಟ ಆಗಿ ಬದಲಾಗಿದ್ದೇ ಒಂದು ದೊಡ್ಡ ಆಶ್ಚರ್ಯ! ಮುಂದೆ ರಮೇಶ್ ಚಿತ್ರರಂಗದಲ್ಲಿ ಸಾಧಿಸಿದ್ದು, ಸಾಧಿಸುತ್ತ ಇರೋದು ಎಲ್ಲರೂ ಹೆಮ್ಮೆ ಪಡುವಂಥದ್ದು...

1. ರಮೇಶ್ ಹುಟ್ಟಿದ್ದು ಕರ್ನಾಟಕದಲ್ಲಲ್ಲ, ತಮಿಳುನಾಡಲ್ಲಿ (ಊರು ಕುಂಬಕೋಣಂ), ಆದರೂ ಕನ್ನಡತನ ಮೆರೆದರು

ಓದಿ ಬೆಳೆದಿದ್ದೆಲ್ಲ ಬೆಂಗ್ಳೂರಲ್ಲಿ.

ramesh-college-dayus.jpgblogspot

2. ನಟ ಆಗಕ್ಕೆ ಸ್ಫೂರ್ತಿಯಾದ ಕಮಲ್ ಹಾಸನ್ನ ರಮೇಶ್ ಭೇಟಿ ಮಾಡಿದ್ದು ಒಂದಾನೊಂದು ದಿನ ಕಾಲೇಜಲ್ಲಿ

ಕಾಲೇಜು ದಿನಗಳಲ್ಲಿ ರಮೇಶ್ ಕಾಲೇಜ್ ಫಂಕ್ಷನ್ ನಡೆಸಿ ಕೊಡ್ತಾ ಇದ್ರಂತೆ. ಹೀಗೆ... ಸಾಗರಸಂಗಮಂ ಅನ್ನೋ ಕಮಲ್ ಹಾಸನ್ ಚಿತ್ರ ಹಿಟ್ ಆದಾಗ ಒಂದು ಫ಼ಂಕ್ಷನ್ ಮಾಡಿ ಅಲ್ಲಿಗೆ ಕಮಲ್ ಹಾಸನನ್ನ ಕರ್ಸಿದ್ರಂತೆ. ಅಲ್ಲೇ ರಮೇಶ್ ಕಮಲ್ನ ಮೀಟ್ ಮಾಡಿದ್ದಂತೆ... ಅದು ರಮೇಶ್ ಜೀವನವನ್ನೇ ಬದಲಾಯಿಸಿತು...

Ramesh-Aravind-Kamal-Haasan(1).jpgkollytalk

3. ರಮೇಶ್ ಬರೀ ಕನ್ನಡದಲ್ಲಿ ಮಾತ್ರ ಅಲ್ಲ, ಒಟ್ಟು 6 ಭಾಷೆ ಸಿನಮಾಗಳಲ್ಲಿ ಮಾಡಿದ್ದಾರೆ

ಕನ್ನಡ ಬಿಟ್ಟು: ತುಳು, ತಮಿಳು, ತೆಲುಗು, ಮಲಯಾಳಂ, ಹಿಂದಿ.

6_1384249937.jpgamazonaws

4. 90ರ ದಶಕದಲ್ಲಿ ತಮಿಳಿನ ಕಡೆ ಗಮನ ಹರಿಸೋದು ಕಡಿಮೆ ಮಾಡಿ ಕನ್ನಡದ ಕಡೆ ತಿರುಗಿದ ಮೇಲೆ ರಮೇಶ್ ಸಿಕ್ಕಾಪಟ್ಟೆ ಹಿಟ್ ಆದ್ರು...

ಅಮೇರಿಕಾ ಅಮೇರಿಕಾ, ನಮ್ಮೂರ ಮಂದಾರ ಹೂವೇ, ಅಮೃತವರ್ಷಿಣಿ ಇದ್ರಲ್ಲೆಲ್ಲಾ ಸಕ್ಕತ್ ಅಲ್ವಾ ರಮೇಶು? ಅವ್ನ್ ಥರ ಈ ರೋಲನ್ನ ಇನ್ಯಾರೂ ಮಾಡಕ್ಕಾಗಲ್ಲ ಅನ್ಸುತ್ತೆ ಅಲ್ವಾ?

Amruthavarshini-Poster.jpgextraimago

5. ರಿಲೀಸ್ ಲೆಕ್ಕದಲ್ಲಿ ರಮೇಶ್ನ್ ಸಿನೆಮಾಕ್ಕೆ ತಂದಿದ್ದು ದಿಗ್ಗಜರಾದ ಕೆ. ಬಾಲ್‍ಚಂದರ್. ಚಿತ್ರ: ‘ಸುಂದರ ಸ್ವಪ್ನಗಳು’.

ಇದರಲ್ಲಿ ರಮೇಶ್ ಕಮಲ್ ಹಾಸನ್ ಪಾತ್ರವನ್ನೇ ಮಾಡಿದ್ದು... ಅದೊಂದು ತಮಿಳ್ ರೀಮೇಕು...

Ramesh-Arvind-starts-Kannada-remake-of-Nanis-Bhale-Bhale-Magadivoy.jpgdesispy

6. ಅಮೃತಧಾರೆ ಸಿನಮಾ ನೆನಪಿದ್ಯಾ? ಕತೆ ಬರ್ದಿದ್ದು ಯಾರ್ ಗೊತ್ತಾಯ್ತಾ?

ಹೂಂ... ರಮೇಶೇ ಬರ್ದಿದ್ದು... ಅದಕ್ಕೆ ಅತ್ಯುತ್ತಮ ಕತೆ ಅಂತ 2005ರಲ್ಲಿ ಅವಾರ್ಡೂ ಬಂತು...

Amruthadhare Poster.jpgblogspot

7. ರಮೇಶ್ ಅರವಿಂದ್ ನಿರ್ದೇಶನದ ಮೊದಲ ಮೂರೂ ಚಿತ್ರ ಸೂಪರ್ ಹಿಟ್ ಆದ್ವು

1) ರಾಮ ಶಾಮಾ ಭಾಮಾ 2) ಸತ್ಯವಾನ್ ಸಾವಿತ್ರಿ 3) ಯಾಕ್ಸಿಡೆಂಟ್

23sd4.jpgrediff

8. It's No F_n Without U ಅನ್ನೋ ಹೆಸರಿನ ಇಂಗ್ಲಿಷ್ ಪುಸ್ತಕ ಬೇರೆ ಬರ್ದಿದ್ದಾರೆ... ಅದೂ ಯಾವುದರಲ್ಲಿ? ಮೊಬೈಲಲ್ಲಿ!

ಪೇಪರ್-ಪೆನ್ ಇಟ್ಕೊಂಡು ಬರೀಲಿಲ್ಲ, ಹಲವರು ಮಾಡೋ ಹಾಗೆ ಕಂಪ್ಯೂಟರಲ್ಲೂ ಬರೀಲಿಲ್ಲ.... ಪೂರ್ತಿ ಪುಸ್ತಕ ಒಂದು ಸ್ಯಾಮ್ಸಂಗ್ ಮೊಬೈಲಲ್ಲಿ ಬರೆದಿದ್ದಾರೆ!

23sd2.jpgrediff

9. ರಮೇಶ್ ಅವರು 80ರ ದಶಕದಲ್ಲೇ ‘ಪರಿಚಯ’ ಅನ್ನೋ ಟೀವಿ ಪ್ರೋಗ್ರಾಮ್ ನಡಸ್ಕೊಡ್ತಾ ಇದ್ರು... ಅದನ್ನ ನೀವು ಮಿಸ್ ಮಾಡ್ಕೊಂಡಿದೀರಾ?

ಮಿಸ್ ಮಾಡ್ಕೊಂಡಿದ್ರೆ ಈಗಲೂ ಕಿರುತೆರೆಯಲ್ಲಿ ಮಿಂಚ್ತಾ ಇದಾರೆ ನೋಡಿ...

Weekend_with_Ramesh_title_card.jpgwikimedia

10. ರಮೇಶ್ಗೆ ಈವರೆಗೆ 12 ಪ್ರಶಸ್ತಿ ಬಂದಿದೆ - ಎಲ್ಲಾ ಕನ್ನಡ ಸಿನೆಮಾಗಳಿಂದಾನೇ!

Ramesh-Aravind-Stylish-images-4.jpgdesistarz

11. ಹೊಚ್ಚ ಹೊಸ ‘...ರೆ’ ಸಿನಿಮಾ ರಮೇಶ್ ಅವರ 100ನೇ ಕನ್ನಡ ಸಿನೆಮಾ (ವಿಕಿಪೀಡಿಯಾ ಪ್ರಕಾರ)

ಒಟ್ಟು 140 ಸಿನ್ಮಾ ಮಾಡಿರೋ ರಮೇಶ್, ಕನ್ನಡದಲ್ಲೇ ಅತಿಹೆಚ್ಚು ಮಾಡಿರೋದು.

re poster.jpgre-skd

ರಮೇಶ್ ಮನಸ್ಸು ಮಾಡಿದರೆ ಕನ್ನಡದಲ್ಲಿ ಬರೀ ಚಾಕ್ಲೇಟ್ ಹೀರೋ ಪಾತ್ರಗಳನ್ನೇ ಮಾಡ್ತಾ ಇರ್ಬೋದಿತ್ತು. ಆದ್ರೆ ಯಾವ್ದೇ ಒಂದು ರೀತಿಯ ಪಾತ್ರಕ್ಕೆ ಸಿಕ್ಕಾಕ್ಕೊಳ್ದೇ ಸಕತ್ ವೆರೈಟಿ ಮನರಂಜನೆ ಕೊಟ್ಟಿದ್ದು ರಮೇಶ್ ಸ್ಪೆಶಾಲಿಟಿ... ರಮೇಶ್‍ ಇನ್ನೂ ಲೈಫಲ್ಲಿ ಏನೇನ್ ಮಾಡ್ಬೇಕು ಅಂತಿದ್ದಾರೋ ಎಲ್ಲಾದ್ರಲ್ಲೂ ಗೆಲುವು ಸಿಗ್ಲಿ ಅಂತ ಹಾರೈಸೋಣ...

ಹೊರಚಿತ್ರ: newindianexpress

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಫೇಸ್ಬುಕ್ ಚರ್ಚೆ:

2017ರಲ್ಲಿ ಒತ್ತಡ ಕಡಿಮೆ ಮಾಡ್ಕೊಂಡು ಜೀವನ ಸವೀಬೇಕು ಅಂತಿದ್ರೆ ಇಲ್ಲಿ ಸ್ವಲ್ಪ ಕೇಳಿ

ಸುಂದರ ಬದುಕು ನಿಮ್ಮದಾಗಿಸಿಕೊಳ್ಳೋ ಆಸೆ ಇದ್ರೆ

ಬೆಳಗಾದ್ರೆ ಕೆಲಸಕ್ಕೆ ಓಡೋ ಭರಾಟೆಲಿರ್ತೀವಿ, ಹೆಣ್ಣುಮಕ್ಕಳಾದ್ರೆ ಮನೆ ಕೆಲಸ ಎಲ್ಲ ಮುಗಿಸಿ ಓಡಬೇಕು, ಕೆಲಸದಲ್ಲೆನು ಒತ್ತಡಕ್ಕೆ ಕೊರತೇನ? ಇದೆಲ್ಲ ಮುಗಿದಮೇಲೆ ನನ್ನನ್ನ ಗಮನಿಸಿಕೊಳ್ತಿಲ್ಲಾ ಅನ್ನೋ ಗಂಡ/ ಹೆಂಡತಿ, ಆಡೋಕು ನನ್ನ ಜೊತೆ ಬರೋಲ್ವಾ ಅನ್ನೋ ಮಕ್ಕಳು....... ಯಾಕಪ್ಪ ಜೀವನ ಅನ್ಸುತ್ತೆ ದಿನದ ಕೊನೆಲಿ. 

ಇದೆಲ್ಲಾ ನಿಮಗೂ ಅನ್ನಿಸ್ತಿದ್ರೆ ಖಂಡಿತ ಇವೆಲ್ಲದರ ಬಗ್ಗೆ ಗಮನ ಹರಿಸೋಕು ಇದು ಸರಿಯಾದ ಸಮಯ.

1. ದಾರಿ ತಪ್ಪಿಸೋರ್ನ ದೂರ ಇಡಿ

ಕೆಲವರನ್ನ ಕಷ್ಟದಲ್ಲಿ ಭೇಟಿ ಮಾಡೋಕೆ ಪ್ಲ್ಯಾನ್ ಮಾಡಿರ್ತೀರಿ. ಆದ್ರೆ ಅವರನ್ನ ಭೇಟಿ ಮಾಡಿದ್ರೆ ಬೇಡದ ಮಾತುಗಳು, ಬೇಡದ ವಿಷಯಗಳು ನಿಮ್ಮನ್ನ ಕಾಡುತ್ತೆ ಅನ್ನಿಸಿದ್ರೆ ಅಂಥವರ ಜೊತೆ ಕಳೆಯೋ ಸಮಯಾನ ಕಡಿಮೆ ಮಾಡಿಕೊಳ್ಳಿ. ಸಾಧ್ಯ ಆದ್ರೆ ಅಂಥವರನ್ನ ಭೇಟಿ ಮಾಡದೇ ಇರೋದೆ ಒಳ್ಳೇದು.

ಅವರೇ ಕಾಫಿಗೋ ಊಟಕ್ಕೋ ಕರೆದರೆ ಹೋಗದೇ ಇರೋಕೆ ನೆಪ ಹುಡುಕಿ, ಖುಷಿ ಆಗಿರ್ತೀರಿ.

ಮೂಲ

2. ಯಾವಾಗಲೂ ಲೇಟು ಅನ್ನಿಸಿಕೋಬೇಡಿ, ನಿಮ್ಮ ದಿನಾನ ಸರಿಯಾಗಿ ಪ್ಲಾನ್ ಮಾಡಿ

ದಿನ ತಡವಾಗಿ ಹೋಗಿ ಹೋಗಿ ಒತ್ತಡ ಜಾಸ್ತಿ ಆಗ್ತಿದ್ರೆ ನಿಮ್ಮ ದಿನದ ಪ್ಲ್ಯಾನ್ ನಲ್ಲಿ ಬದಲಾವಣೆ ಮಾಡಿಕೊಳ್ಳಿ. ಗಾಡಿ ಓಡಿಸೋ ಸಮಯ, ಟ್ರಾಫಿಕ್ ಜೊತೇಲಿ ನಿಮ್ಮ ಸಣ್ಣ ಪುಟ್ಟ ಕೆಲಸಗಳಿಗೂ ಸಮಯ ಕೊಟ್ಟು ಪ್ಲ್ಯಾನ್ ಮಾಡಿ,  ಬಸ್ ಬೇಗ ಹತ್ತಿ, ಅರ್ಧ ಗಂಟೆ ಮುಂಚೆ ಮನೆಯಿಂದ ಹೊರಡಿ, ಆಗ ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳು ಆಗುತ್ವೆ.

ಮೂಲ

3. ಮಾಡಬೇಕಾದ ಕೆಲಸ ಬೆಟ್ಟದಂಗೆ ಬೆಳೀಬಾರದು… ಹಂಗೆ ನೋಡ್ಕೊಳಿ

ಬೆಳಗಾದ ತಕ್ಷಣ ನಿಮ್ಮ ಕಣ್ಮುಂದೆ ರಾಶಿ ರಾಶಿ ಕೆಲಸ ಕಂಡ್ರೆ ಯಾರಿಗೆ ತಾನೆ ಖುಷಿ ಆಗುತ್ತೆ ಹೇಳಿ!! ಆದ್ರೆ ಹಾಗಂತ ನಾವು ತಪ್ಪಿಸ್ಕೊಳ್ಳೋಹಾಗೂ ಇಲ್ಲ ಅಲ್ವ? ಆದ್ರಿಂದ ನಿಮ್ಮ ಕೆಲಸಗಳ ಎರಡು ಪಟ್ಟಿ ಮಾಡ್ಕೊಳ್ಳಿ. ಒಂದು ನಿಮಗೆ ಖುಷಿ ಕೊಡೋದು ಮತ್ತೊಂದು ನಿಮಗೆ ಇಷ್ಟ ಆಗದ್ದು. ಈಗ ಇವರಡನ್ನೊ ಸಮಾನವಾಗಿ ಮಾಡುತ್ತಾ ಹೋಗಿ.

ನಿಮಗೆ ನಿಮ್ಮ ಹೆಂಡತಿನ ಶಾಪಿಂಗ್ ಕರ್ಕೊಂಡು ಹೋಗೋದು ಇಷ್ಟ ಇಲ್ಲ ಅಂದ್ರೆ, ನಿಮಗೆ ಬೇಕಾದನ್ನು ನೀವೂ ಕೊಳ್ಳಬಹುದಾದ ಅಂಗಡಿಗೆ ಹೋಗಿ. ನಿಮಗೆ ಬೇಕಾದ್ದು ನೀವು ತಗೊಳ್ಳಿ ಅವರಿಗೆ ಬೇಕದ್ದು ಅವರು ತಗೋತಾರೆ, ಕೆಲಸ ಖುಷಿಲೇ ಮುಗೀತಲ್ವ?

ಮೂಲ

4. ನಿಮ್ಮ ಸಾಮಾನು ಚೆಲ್ಲಾಪಿಲ್ಲಿ ಆಗದೆ ಇರೋಹಂಗೆ ನೋಡ್ಕೊಳ್ಳಿ

ವಾರ ಇಡೀ ಬ್ಯುಸಿ ಆಗಿರೋ ನಿಮಗೆ ಬಳಸಿದ ವಸ್ತುಗಳನ್ನ ಅದದೇ ಜಾಗಗಳಿಗೆ ಸೇರಿಸೋದು ಕಷ್ಟ ಆಗಿ ನಾಳೆ ನಾಳೆ ಅನ್ಕೋತಾ ಒಂದು ರಾಶಿ ಆಗಿದ್ರೆ ಅದನ್ನೆಲ್ಲ ಶನಿವಾರ ಮಾಡಬೇಕನ್ನೋ ಒತ್ತಡ ಕಾಡುತ್ತಿದ್ರೆ. ಬೇಸರ ಇಲ್ಲದೆ ನಿಮಗಿಷ್ಟ ಆಗೋ ಸಂಗೀತ ಕೇಳುತ್ತ ಕೆಲಸ ಮಾಡಿ, ಜೊತೇಲಿ ಕೆಲಸ ಎಲ್ಲ ಮುಗಿದ ಮೇಲೆ ನಿಮಗಿಷ್ಟ ಆಗೋ ಜಾಗಕ್ಕೆ ಹೋಗೋ ಪ್ಲಾನ್ ಮಾಡ್ಕೊಳ್ಳಿ ಆಗ ಒತ್ತಡ ಇರಲ್ಲ.

ಮೂಲ

5. ಭಿನ್ನಾಭಿಪ್ರಾಯಗಳನ್ನ ಪಕ್ಕಕ್ಕಿಡಿ

ಎಷ್ಟೋ ಸಾರಿ ಎದುರಿಗೆ ಇರೋ ವ್ಯಕ್ತಿಗೆ ನಮ್ಮ ಮನಸ್ಸಿನಲ್ಲಿರೋ ಮಾತು ಹೇಳೋಕಾಗ್ದೆ ಒಳಗೊಳಗೇ ಗೊಣಗಾಡ್ತ ಇರ್ತೀವಿ. ಇದು ನಿಮಗೆ ಒತ್ತಡ ಹೇರುತ್ತೆ. ಇದರಿಂದ ಹೊರಬರೋಕೆ ಮಾತುಗಳನ್ನ ಆಡೋ ಅಭ್ಯಾಸ ಮಾಡಿಕೊಂಡ್ರೆ ಒಳ್ಳೇದು ಇಲ್ಲ ಅಂದ್ರೆ 10 ನಿಮಿಷಕ್ಕಿಂತ ಹೆಚ್ಚು ಯಾವುದೇ ವಿಷಯಕ್ಕೂ ತಲೆ ಕೆಡಿಸಿಕೊಳಲ್ಲ ಅಂತ ನಿರ್ಧಾರ ಮಾಡಿ. ಅಕಸ್ಮಾತ್ ನಿಮ್ಮ ಮನಸ್ಸು ನಿಮ್ಮ ಮಾತು ಕೇಳ್ತಿಲ್ಲ ಅಂದ್ರೆ ಒಂದು ಪೇಪರ್ ನಲ್ಲಿ ನಿಮಗನ್ನಿಸಿದ್ದನ್ನೆಲ್ಲ ಬರೆದು ಸುಟ್ಟು ಹಾಕಿ, ಮನಸ್ಸು ನಿರಾಳ ಅನ್ಸುತ್ತೆ.

ಮೂಲ

6. ಇಲ್ಲ/ಆಗಲ್ಲ ಅನ್ನೋದನ್ನ ಅಭ್ಯಾಸ ಮಾಡ್ಕೊಳ್ಳಿ

ಯಾರಾರು ಏನಾರು ಕೆಲಸ ಹೇಳಿದಾಗ ಮನಸ್ಸು ಆಗಲ್ಲ ಅಂತಿದ್ರು ತುಟಿ ಹೂ ಅನ್ನೋಕೆ ಬಿಡಬೇಡಿ. ನಿಮಗಿಷ್ಟ ಇಲ್ಲದ್ದನ್ನ ಕೇಳಿದ್ರೆ ಇಲ್ಲ ಅನ್ನೋ ಅಭ್ಯಾಸ ಮಾಡ್ಕೊಳ್ಳಿ ಅಥವಾ ಆ ಕೆಲಸ ಇಷ್ಟ ಪಡೋ ವ್ಯಕ್ತಿಗೆ ಅದನ್ನ ಹೇಳೋ ಅಭ್ಯಾಸ ಮಾಡ್ಕೊಳ್ಳಿ ನಿಮಗೂ ಖುಷಿ ಅವರಿಗೂ ಖುಷಿ. ಹತ್ತು ಕೆಲಸ ಒಪ್ಪಿಕೊಂಡು ಸರಿಯಾಗಿ ಮಾಡದೇ ಇರೋಕ್ಕಿಂತ ಒಂದನ್ನ ಸರಿಯಾಗಿ ಮಾಡೋದು ಒಳ್ಳೇದಲ್ವಾ?

ಮೂಲ

7. ಮನೆಯೋರ ಜೊತೆ ಹೆಂಗಿರಬೇಕು ಅಂತ ತಿಳ್ಕೊಳಿ

ಯಾವುದಾದ್ರೂ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಂದು ಕಡೆ ಸೇರಿ ಮಾತಾಡೋ ಪರಿಸ್ಥಿತೀಲಿ ನಿಮಗೆ ಅಲ್ಲಿಂದ ಓಡೋಗ್ಬೇಕು ಅಂತ ಅನ್ಸಿದ್ರೆ ನಿಮಗೆ ನಿಮ್ಮ ಕುಟುಂಬದಲ್ಲೂ ಒತ್ತಡ ಇದೆ ಅಂತರ್ಥ. ನೆಂಟರ ಕೊಂಕು, ಅದಕ್ಕೆ ತಲೆ ಆಡಿಸೋ ಅಪ್ಪ - ಅಮ್ಮ ನಿಮಗೆ ಹಿಂಸೆ ಅನ್ನಿಸ್ತಿದ್ರೆ ಅವ್ರನ್ನೆಲ್ಲ ಬದಿಗಿಟ್ಟು ಯೋಚ್ನೆ ಮಾಡಿ ಅಥವಾ ಅವರು ಮಾತು ಆರಂಬಿಸೋಕೆ ಮುಂಚೆ ನೀವೇ ನಿಮಗಿಷ್ಟ ಆಗೋ ಮಾತು ಶುರು ಮಾಡಿ, ಇನ್ನು ಕಷ್ಟ ಅನ್ಸಿದ್ರೆ ಸ್ವಲ್ಪ ಸಮಯ ಮಾತ್ರ ಅವರ ಜೊತೆಲಿರಿ, ನಿಮಗೆ ಹೆಚ್ಚು ತೊಂದ್ರೆ ಕೊಡೊ ಸಂಬಂಧಗಳು ದೂರ ಇದ್ದಷ್ಟು ಒಳ್ಳೇದು.

ಮೂಲ

8. ಹಿಂದೆ ಮಾಡಿದ ಕೆಲಸ ಆಡಿದ ಮಾತು ಮರೆತುಬಿಡಿ

ಹಿಂದೆ ಯಾರ ಜೊತೆಲಾದ್ರೂ ಜಗಳ ಆಡಿದ್ರೆ ಅಥವಾ ಚಿಕ್ಕವಯಸ್ಸಿನಲ್ಲಿ ಯಾವತ್ತಾದ್ರೂ ತಪ್ಪು ಮಾಡಿದ್ರೆ ಅದನ್ನೇ ಮೆಲುಕು ಹಾಕೋದು ಬಿಡಿ, ಅದರಿಂದ ಏನೂ ಬದಲಾಗಲ್ಲ ಅನ್ನೋದು ನಿಮಗೆ ಗೊತ್ತಿದೆ ತಾನೇ. ನೆನ್ನೆ ಬಗ್ಗೆ ಯೋಚ್ನೆ ಮಾಡೋದ್ರಿಂದ ನೀವು ಅದೇ ಘಟನೆಗಳಲ್ಲಿ ಜೀವನ ಮಾಡೋದು ಹೆಚ್ಚು, ಅದು ನಿಜ ಜೀವನದ ಒತ್ತಡಕ್ಕಿಂತ ನಿಮಗೆ ಹೆಚ್ಚು ತೊಂದ್ರೆ ಕೊಡುತ್ತೆ. ಹಳೇದನ್ನ ಮರೆಯೋ ಪ್ರಯತ್ನ ಮಾಡಿ ಅಥವಾ ಬೇರೆ ವಿಷಯಗಳಲ್ಲಿ ನಿಮ್ಮನ್ನ ತೊಡಗಿಸಿಕೊಳ್ಳಿ.

ಮೂಲ

ಕೇಳಿದ್ರೇನೇ ನಿರಾಳ ಅನ್ಸುತ್ತೆ ಇನ್ನು ಮಾಡಿದ್ರೆ.... ಹಾಗಿದ್ರೆ ತಡ ಯಾಕೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: