ಕೊಲ್ಲೂರು ಮೂಕಾಂಬಿಕೆ ಬಗ್ಗೆ ಈ 19 ಸತ್ಯಗಳ್ನ ತಿಳ್ಕೊಂಡ್ರೆ ಜೀವನದಲ್ಲಿ ಒಂದ್ಸಲಿ ನೋಡಬೇಕು ಅನ್ನಿಸುತ್ತೆ

ಸಾವಿರಾರು ವರ್ಷದಿಂದ ಸತತವಾಗಿ ಕನ್ನಡಿಗರು ಪೋಷಿಸಿಕೊಂಡು ಬಂದಿರೋ ದೇವಸ್ಥಾನ ಇದು

ನಮ್ಮ ಕರ್ನಾಟಕದ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಪ್ರಸಿದ್ಧ ಪುಣ್ಯ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ. ಪಾರ್ವತಿ, ಸರಸ್ವತಿ ಹಾಗೂ ಲಕ್ಷ್ಮಿಯ ಸ್ವರೂಪವಾದ ಮೂಕಾಂಬಿಕೆಯ ದರ್ಶನ ಪಡೆಯುವುದಕ್ಕೆ ಲಕ್ಷಗಟ್ಟಲೆ ಜನ ಕರ್ನಾಟಕ, ಕೇರಳ ಮತ್ತು ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ಕಡೆಯಿಂದ ಬರ್ತಾರೆ. ಸುಂದರ ಪರಿಸರದ ಮಧ್ಯೆ ಇರೋ ಈ ದೇವಾಲಯಕ್ಕೆ ಇರೋ ಪುರಾತನ ಹಿನ್ನಲೆ ಏನು, ಅಲ್ಲಿಯ ವಿಶೇಷತೆ ಏನು ಅಂತ ಗೊತ್ತೇ...

1. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಇರೋದು ಕೊಡಚಾದ್ರಿಯ ಹಸಿರಿನ ಮಧ್ಯೆ, ಸೌಪರ್ಣಿಕಾ ನದಿ ತೀರದಲ್ಲಿ

ಕನ್ನಡಿಗರು, ತುಳುವರು, ತಮಿಳರು ಮತ್ತು ಮಳಯಾಳಿಗಳ ಅರಾಧ್ಯ ದೇವತೆ, ಶಕ್ತಿದೇವತಿ ಇವಳು.

photo-5-fb.jpgಮೂಲ

2. ಮಂಗಳೂರಿಂದ 147 ಕಿ.ಮಿ ದೂರದಲ್ಲಿದೆ

ಕೊಲ್ಲೂರು ಉಡುಪಿ ಜಿಲ್ಲೆಗೆ ಸೇರಿದೆ.  ಕೊಲ್ಲೂರು ಕ್ಷೇತ್ರದ ಮೂಲ ಹೆಸರು ‘ಮಹಾರಣ್ಯಪುರ’ ಅಂತ ಇತ್ತು ಅಂತಾರೆ. ಕೊಡಚಾದ್ರಿ ಬೆಟ್ಟದಿಂದ ಪಶ್ಚಿಮ ದಿಕ್ಕಿನಲ್ಲಿ ಇಳೀಬೇಕು ಇಲ್ಲಿಗೆ ಬರಕ್ಕೆ.

photo-violethill.jpgಮೂಲ

3. ದೇವಸ್ಥಾನದಲ್ಲಿರೋ ಕಬ್ಬಿಣದ ಕಂಬ ಡೆಲ್ಲಿಯಲ್ಲಿರೋ ಕುತುಬ್ ಮಿನಾರ್ ಮುಂದೆ ಇರೋ ಕಂಬಕ್ಕಿಂತ 1300 ವರ್ಷ ಹಳೇದು.

ಕುತುಬ್ ಮಿನಾರ್ ಮುಂದೆ ಇರೋ ಕಬ್ಬಿಣದ ಕಂಬ 1000 ವರ್ಷ ಹಳೇದಾದ್ರೆ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನದ ಮುಂದೆ ಇರೋ ಧ್ವಜಸ್ಥಂಭವನ್ನ ಸ್ಥಳೀಯರು 2300 ವರ್ಷದ ಹಿಂದೇನೇ ಕಟ್ಟಿದ್ದರು. ಈಗಲೂ ಅದು ಒಂದು ಸ್ವಲ್ಪಾನೂ ತುಕ್ಕು ಹಿಡಿಯದೆ, ಹಾಳಾಗದೆ ಗಟ್ಟಿಮುಟ್ಟಾಗಿದೆ. ವಿಜ್ಞಾನಿಗಳು ಇದರ ಬಗ್ಗೆ ಸಂಶೋಧನೆ ನಡೆಸಿದ್ದಾರೆ.

photo-1-fb-new.jpgಮೂಲ

4. ‘ಕೋಲ’ ಅನ್ನೋ ಹೆಸರಿನ ಮಹರ್ಷಿಯೊಬ್ಬ ಪೂಜೆ ಮಾಡ್ತಿದ್ದ ಲಿಂಗದಲ್ಲಿ ಮೂಕಾಂಬಿಕೆ ನೆಲೆಸಿದಳಂತೆ, ಅವನ ಹೆಸರಿಂದಾನೇ ‘ಕೊಲ್ಲೂರು’ ಅನ್ನೋ ಹೆಸರು ಬಂತಂತೆ

ಅವನಿಂದ ಈ ಜಾಗಕ್ಕೆ ಕೋಲಾಪುರ ಅಂತ ಹೆಸರಿತ್ತು. ಕಾಲಾನಂತರ ಇದು ಕೊಲ್ಲೂರು ಆಯ್ತು. ಕೋಲ ಮಹರ್ಷಿ ತನ್ನ ಆಶ್ರಮದ ಹಸುವೊಂದು ಪ್ರತಿನಿತ್ಯ ಒಂದು ಲಿಂಗಕ್ಕೆ ಹಾಲು ಸುರಿಸುವುದನ್ನು ಕಂಡು ಆ ಲಿಂಗಕ್ಕೆ ಏನೋ ಅದ್ಭುತ ಶಕ್ತಿ ಇರ್ಬೇಕು ಅಂತ ನಂಬಿ ಆ ಲಿಂಗವನ್ನ ಪೂಜಿಸೋಕ್ಕೆ ಶುರು ಮಾಡಿದನಂತೆ. ಆಗ ಕಂಹಾಸುರನೆಂಬ ರಾಕ್ಷಸನು ತೊಂದರೆ ಕೊಡಲು ಶುರು ಮಾಡಿದ. ಜೊತೆಗೆ ಶಿವನ ಕುರಿತು ಕಠಿಣ ತಪಸ್ಸು ಮಾಡಿ ಇನ್ನೇನು ವರ ಕೇಳಬೇಕು ಅನ್ನೋಷ್ಟರಲ್ಲಿ ಕೋಲ ಮಹರ್ಷಿಯ ಕೋರಿಕೆಯಂತೆ ಮಹಾದೇವಿ ಅವನ ನಾಲಿಗೆಯ ಮೇಲೆ ಕೂತು ಅವ ಮೂಕನಾಗುವ ಹಾಗೆ ಮಾಡುತ್ತಾಳಂತೆ. ಮಹರ್ಷಿಯ ಈ ಕುತಂತ್ರ ಮೂಕಾಸುರನಿಗೆ ಗೊತ್ತಾಗಿ ಅವನನ್ನು ಸಾಯಿಸಲು ಮುಂದಾಗುತ್ತಾನೆ. ಆಗ ದೇವಿಯು ಶಕ್ತಿಸ್ವರೂಪಿಣಿಯಾಗಿ ಮೂಕಾಸುರನ್ನ ಸಾಯಿಸಿ ಅಲ್ಲಿಯೆ ಕೋಲ ಮಹರ್ಷಿ ಪೂಜಿಸುತ್ತಿದ್ದ ಲಿಂಗದಲ್ಲಿ ನೆಲೆಸುತ್ತಾಳೆ ಎಂದು ಕಥೆ ಇದೆ.

photo-3-fb.jpgಮೂಲ

5. ಇನ್ನೊಂದು ಪುರಾಣದ ಪ್ರಕಾರ ಕೊಲ್ಲೂರ್ನ ಕಟ್ಟಿದ್ದು ಪರಶುರಾಮ ಅಂತೆ

ಪರಶುರಾಮ ತನ್ನ ಏಳು ಮುಕ್ತಿಸ್ಥಳಗಳಲ್ಲಿ ಕೊಲ್ಲೂರಿನಲ್ಲಿ ಮಾತ್ರ ಪಾರ್ವತಿಯ ವಿಗ್ರಹ ಸ್ಥಾಪಿಸಿದ್ದನಂತೆ. ಮಿಕ್ಕ ಆರು ಕ್ಷೇತ್ರಗಳಾದ ಉಡುಪಿ, ಸುಬ್ರಮಣ್ಯ, ಕುಂಬಾಶಿ, ಕೋಟೇಶ್ವರ, ಶಂಕರನಾರಾಯಣ ಮತ್ತು ಗೋಕರ್ಣಗಳಲ್ಲಿ ಗಣೇಶ, ಶಿವ ಮತ್ತು ಸುಬ್ರಮಣ್ಯನ ವಿಗ್ರಹ ಸ್ಥಾಪನೆ ಮಾಡಿದ್ದನು.ಪಾರ್ವತಿ, ಸರಸ್ವತಿ ಮತ್ತು ಲಕ್ಷ್ಮಿಯ ಅಂಶಗಳನ್ನು ಹೊಂದಿರೋ ಈ ತಾಯಿ ನಮ್ಮನ್ನು ಹರಸಲಿ, ನಮ್ಮ ಮಕ್ಕಳಿಗೆ ಎಲ್ಲಾ ಕೆಲ್ಸದಲ್ಲೂ ವೃದ್ಧಿ ತರಲಿ ಅಂತ ಲಕ್ಷಗಟ್ಟಲೆ ಜನರು ಈ ದೇವಸ್ಥಾನಕ್ಕೆ ಹೋಗುತ್ತಾರೆ.

Parashurama-commons.wikimedia.org_.JPGಮೂಲ

6. ಈಗಿರೋ ಪಂಚಲೋಹದ ದೇವಿ ಮೂರ್ತೀನ ಸ್ಥಾಪಿಸಿದ್ದು ಆದಿ ಶಂಕರಾಚಾರ್ಯರು

ಕೊಡಚಾದ್ರಿ ಬೆಟ್ಟದಲ್ಲಿ ಶಂಕರಾಚಾರ್ಯರು ತಪಸ್ಸು ಮಾಡಿದಾಗ ದೇವಿ ಪ್ರತ್ಯಕ್ಷಳಾಗಿ ಅವರ ಬಯಕೆಯೇನೆಂದು ಕೇಳಿದಳು. ಆಗ ಶಂಕರರು ಕೇರಳದಲ್ಲಿ ನಾನು ಹೇಳೋ ಜಾಗಕ್ಕೆ ಬಂದು ನೆಲೆಸಬೇಕು ಅಂತ ಹೇಳಿದರು. ಆಗ ದೇವಿಯು ಒಪ್ಪಿಕೊಂಡು ನಾನು ನಿನ್ನ ಹಿಂದೆ ಬರುವಾಗ ನೀನೇನಾದರೂ ಹಿಂದೆ ತಿರುಗಿ ನೋಡಿದೆಯಾದರೇ ನಾನು ಅಲ್ಲೇ ನೆಲೆಸುವೆ ಎಂದು ಸವಾಲು ಹಾಕಿದಳಂತೆ. ಆದರೆ ಶಂಕರರನ್ನು ಪರೀಕ್ಷಿಸೋ ಉದ್ದೇಶದಿಂದ ದೇವಿ ನಿಂತ್ಕೊತಾಳೆ. ತನ್ನ ಹಿಂದೆ ದೇವಿಯ ಕಾಲ್ಗೆಜ್ಜೆಗಳ ಧ್ವನಿ ಕೇಳದಾದಾಗ ಶಂಕರರು ಹಿಂದಿರುಗಿ ನೋಡಿದರು. ಹಾಗೆ ನೋಡುತ್ತಿದ್ದಂತೆ ಆ ಸ್ಥಳದಲ್ಲಿ ತನ್ನ ವಿಗ್ರಹವನ್ನು ಪ್ರತಿಷ್ಠಾಪಿಸುವಂತೆ ದೇವಿಯು ಶಂಕರರಿಗೆ ತಿಳಿಸಿದಳು. 

shakara-zenbudha.blogspot.com_.jpgಮೂಲ

7. ಆದಿ ಶಂಕರರು ಈ ದೇವಸ್ಥಾನದಲ್ಲಿರೋ ಸರಸ್ವತಿ ಮಂಟಪದಲ್ಲಿ ಕೂತ್ಕೊಂಡೇ "ಸೌಂದರ್ಯ ಲಹರಿ" ಬರೆದಿದ್ದು

ಜಗಜ್ಜನನಿಯ ವಿಶ್ವರೂಪ ವರ್ಣಿಸುವ ಸೌಂದರ್ಯ ಲಹರಿಯನ್ನು ಬರೆದ್ದಿದ್ದರು.

shankara-exoticindiaart.com_.jpgಮೂಲ

8. ಮಂಟಪದೊಳಗಡೆ ರಾಜಾ ರವಿವರ್ಮನ ಅದ್ಭುತವಾದ ಚಿತ್ರಕಲೆ ಇದೆ

20 ದಿನ ಶ್ರೀ ಕ್ಷೇತ್ರದಲ್ಲಿ ತಂಗಿದ್ದು ತನ್ನ ಚಿತ್ರಕಲೆಯ ಅಮೋಘ ಪ್ರದರ್ಶನ ಮಾಡಿ ವಿಶ್ವವಿಖ್ಯಾತನಾಗಿದ್ದ.

ravi-kavithamandana.wordpress.com_.jpgಮೂಲ

9. ದೇವಸ್ಥಾನದಲ್ಲಿ ರಾತ್ರಿ ಕೊಡೋ ತೀರ್ಥ ಆರೋಗ್ಯಕರವಾದ ಒಂದು ಕಷಾಯ

ಇದು ಶುಂಠಿ, ಮೆಣಸುಕಾಳು, ಏಲಕ್ಕಿ, ಲವಂಗ ಮತ್ತು ಬೆಲ್ಲ ಮೊದಲಾದವುಗಳೊಂದಿಗೆ ತಯಾರಿಸಿದ್ದು ಶೀತ, ಜ್ವರಗಳಿಂದ ನರಳುತ್ತಿರುವವರಿಗೆ ತುಂಬಾ ಒಳ್ಳೆಯದೆಂದೂ ಹೇಳುತ್ತಾರೆ. ಶಂಕರಾಚಾರ್ಯರ ಕಾಲದಿಂದ ನಡೆದು ಬಂದಿದೆ ಅಂತಾರೆ.

photo-4-fb-new.jpgಮೂಲ

10. ಮಕ್ಕಳಿಗೆ ಈ ಕ್ಷೇತ್ರದಲ್ಲಿ ‘ವಿದ್ಯಾರಂಬ’ ಮಾಡಿಸಿದರೆ ಚೆನ್ನಾಗಿ ಕಲೀತವಂತೆ

ಸುಮಾರು ಜನ ತಮ್ಮ ಮಕ್ಕಳಿಗೆ ಮೊದಲ ಅಕ್ಷರಾಭ್ಯಾಸ ಇಲ್ಲೇ ಮಾಡ್ತಾರೆ. ಡ್ಯಾನ್ಸ್ ಮತ್ತು ಹಾಡುಗಾರಿಕೆ ಕಲಿತವರು ಕೂಡ ತಮ್ಮ ಮೊದಲ ಪ್ರದರ್ಶನ ಇಲ್ಲಿಯೇ ಮಾಡ್ತಾರೆ.

v-craniumbolts.blogspot.com_.jpgಮೂಲ

11. ದೇವಸ್ಥಾನದ ವಾಸ್ತುಶಿಲ್ಪ ಕೆಳದಿ ರಾಜರ ಕಾಲದ್ದು

ಕೆಳದಿಯ ಅರಸ ವೆಂಕಟಪ್ಪನಾಯಕನು ಕೊಲ್ಲೂರು ಮೂಕಾಂಬಿಕಾ ದೇವಾಲಯವನ್ನು ವಿಸ್ತಾರವಾಗಿ ಕಟ್ಟಿಸಿದ್ದಂತೆ. ಲಕ್ಷದೀಪಾರಾಧನೆ ರಥೋತ್ಸವ ಕಟ್ಟಳೆಗಳು ಸರಾಗವಾಗಿ ನಡೆಯುವಂತೆ ನಿಯಮಿಸಿದ್ದಂತೆ.

ಇಕ್ಕೇರಿ ಸಂಸ್ಥಾನದವರೇ ಈಗ ದೇವಸ್ಥಾನದ ಬಾಗಿಲಲ್ಲಿರುವ ದ್ವಾರಪಾಲಕರಾದ ಜಯವಿಜಯರನ್ನು ಮಾಡಿಸಿ ಕೊಟ್ಟಿದ್ದಂತೆ.

keladi-kannada.nativeplanet.com_.jpgಮೂಲ

12. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ.ಅರ್. ಈ ದೇವಸ್ಥಾನಕ್ಕೆ ಒಂದು ಬಂಗಾರದ ಕತ್ತಿ ಕಾಣಿಕೆಯಾಗಿ ಕೊಟ್ಟಿದಾರೆ

ಅದು 1.ಕೇ. ಜಿ ತೂಕ ಹಾಗೂ 2.5 ಅಡಿ ಉದ್ದ ಇದೆ.

mgr-mayyam.com_.jpgಮೂಲ

13. ನಮ್ಮ ಮಾಜಿ ಮುಖ್ಯಮಂತ್ರಿ ಗುಂಡೂರಾವ್‌ ಔರು ಒಂದು ಬೆಳ್ಳಿ ಕತ್ತಿ ಕೊಟ್ಟಿದಾರೆ

gundu-rao-karnataka.com_.jpgಮೂಲ

14. ಮೂಕಾಂಬಿಕಾ ದೇವತೆಗೆ ಬಂಗಾರದ ಮುಖವಾಡ ಮಾಡಿಸಿದ್ದು ವಿಜಯನಗರದ ಅರಸರು

Hampi-heartyindia-hearty-india.com_.jpgಮೂಲ

15. ಜ್ಯೋತಿರ್ಲಿಂಗಕ್ಕೆ ಬಂಗಾರದ ಮುಖವಾಡ ಮಾಡಿಸಿದ್ದು ಕೆಳದಿ ಚೆನ್ನಮ್ಮ

keladi-Chennamma-junglekey.in_.jpgಮೂಲ

16. ಈ ದೇವಸ್ಥಾನದಲ್ಲಿ ಬಹಳ ವಿಶೇಷವಾದ್ದೇನಪ್ಪಾ ಅಂದ್ರೆ ಇದರಲ್ಲಿ ಒಂದಲ್ಲ, ಎರಡು ಉತ್ಸವಮೂರ್ತಿಗಳು!

ಬಂಗಾರದಲ್ಲಿ ಮಾಡಿರುವಂಥ, ಉತ್ಸವದಲ್ಲಿ ಬಳಸುವ ಎರಡು ಉತ್ಸವಮೂರ್ತಿಗಳನ್ನು ಈ ದೇವಸ್ಥಾನವು ಹೊಂದಿದೆ. ಮೂಲ ವಿಗ್ರಹವು ಕಳೆದುಹೋದಾಗ ಚೆನ್ನಮ್ಮ ರಾಣಿಯು ಮತ್ತೊಂದನ್ನು ಕೊಟ್ಟಿದ್ದಳಂತೆ. ಆದರೆ ಕಳೆದುಹೋದ ಉತ್ಸವಮೂರ್ತಿಯು ನಂತರ ಸಿಕ್ಕಿತ್ತಂತೆ. ಆವಾಗಿನಿಂದ ಇಲ್ಲಿ ಎರಡು ಉತ್ಸವ ಮೂರ್ತಿಗಳನ್ನು ಪೂಜಿಸುತ್ತಾರೆ.

photo-1-fb.jpgಮೂಲ

17. ಖ್ಯಾತ ಗಾಯಕ ಯೇಸುದಾಸ್‌‌‌‌ 30 ವರ್ಷದಿಂದ ಇಲ್ಲಿ ತಮ್ಮ ಹುಟ್ಟುಹಬ್ಬದ ದಿನ ಚಂಡಿಕಾ ಯಾಗ ಮಾಡಿಸ್ತಾರೆ

ಇದರ ಜೊತೆ ಕಳೆದ 14 ವರ್ಷಗಳಿಂದ ಸತತವಾಗಿ ಅಲ್ಲಿ ಸಂಗೀತೋತ್ಸವ ಮಾಡ್ಕೊಂಡು ಬಂದಿದ್ದಾರೆ.

yesudas-at-kollur-75-mathrubhuminews.in_.jpgಮೂಲ

18. ಚಂಡಿಕಾ ಹೋಮಕ್ಕೆ ಅಡ್ವಾನ್ಸ್ ಬುಕಿಂಗ್ 2 ವರ್ಷದ ಮುಂಚೆನೇ ಮಾಡಿಸ್ಬೇಕು

ಈಗಾಗಲೇ ಜನವರಿ 2019ರ ತನಕ ಬುಕ್ಕಿಂಗ್ ಮುಗಿದುಹೋಗಿದೆ!

chandika-youtube.com_.jpgಮೂಲ

19. ದೇವಸ್ಥಾನದ ಹುಂಡೀಲಿ 1,80,000 ರೂಪಾಯಿಗಿಂತಲೂ ಜಾಸ್ತಿ ಕಲಕ್ಷನ್ ಆಗತ್ತೆ.

ತಮ್ಮ ಹರಕೆ ತೀರಿದ್ದಕ್ಕೆ ಭಕ್ತರು ಲಕ್ಷಗಟ್ಟಲೆ ಬೆಲೆಬಾಳುವ ಚಿನ್ನ-ಬೆಳ್ಳಿ ಆಭರಣಗಳನ್ನು ದೇವಿಗೆ ಕಾಣಿಕೆಯಾಗಿ ಕೊಡುತ್ತಾರೆ.

hundi-srisailamonline.com_.JPGಮೂಲ

ಮಾರ್ಚಿ-ಏಪ್ರಿಲ್ ತಿಂಗಳಲ್ಲಿ 10 ದಿನದ ರಥೋತ್ಸವ ನಡೆಯತ್ತೆ. ಕೃಷ್ಣ ಜನ್ಮಾಷ್ಟಮಿ ಇಲ್ಲಿ ವಿಜೃಂಭಣೆಯಿಂದ ಮಾಡ್ತಾರೆ. ಸಾವಿರಾರು ವರ್ಷದಿಂದ ಈ ದೇವಿ ಕನ್ನಡಿಗರನ್ನ ಕಾಪಾಡಿಕೊಂಡು ಬಂದಿದಾಳೆ... ಒಮ್ಮೆ ಹೋಗಿ ಬನ್ನಿ...

ಹೊರಚಿತ್ರ: ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ನಿಮ್ಮ ಕಣ್ಣು ಗುಡ್ಡೆ ಯಾವ ಬಣ್ಣ ಇದೆ ಅನ್ನೋದ್ರಿಂದ ನಿಮ್ಮ ವ್ಯಕ್ತಿತ್ವದ ಬಗ್ಗೆ ಇಷ್ಟು ಹೇಳಬಹುದು

ಕಣ್ ಕಣ್ಣ ಸಲಿಗೆ

ಕಣ್ಗಳನ್ನ ನಮ್ ಆತ್ಮದ ಕಿಟ್ಕಿ ಇದ್ದಾಗೆ ಅಂತ ಕರೀತಾರೆ. ಯಾರದಾದರೂ ಕಣ್ಗಳನ್ನ ಒಂದೇ ಸಮ್ನೇ ನೋಡ್ತಾ ಇದ್ರೆ ಅವ್ರ್ ಮನ್ಸ್ ಎನು ಅವ್ರ್ ಮೂಡ್ ಹೇಗಿದೆ ಅನ್ನೋದನ್ನೆಲ್ಲಾ ತಿಳ್ಕೊಬಹುದಂತೆ. ಬರೇ ಕಣ್ಣಿನಿಂದ ಅವ್ರು ಸಿಟ್ಟಾಗಿದ್ದಾರಾ? ಇಲ್ಲಾ ಸಮಧಾನದಿಂದ ಇದ್ದಾರ ಅನ್ನೋದನೆಲ್ಲಾ ತಿಳಿಬಹುದು . ಕೆಲ್ವರ ಕಣ್ಗಳು ನೋಡೊಕೆ ತುಂಬಾ ಚೆನ್ನಾಗಿದೆಯಂತ ನಿಮ್ಗೆ ದೇವ್ರು ಕೊಟ್ಟಿರೋ ಆ ಎರಡು ಕಣ್ಗಳ ಬಗ್ಗೆ ಖುಷಿಯಿರ್ಲಿ. ಫಳ ಫಳ ಹೊಳೆಯೋ ಆ ಕಣ್ಗಳನ್ನ ನೋಡಿದ್ರೆ ಇನ್ನೊಬ್ರಿಗೆ ಆಕರ್ಷಣೆಯಾಗೋದು ಸಹಜ. ಅದ್ಕೆ ಮಗಾ ನಾನ್ ಅವ್ಳ ಕಣ್ ನೋಡಿಯೇ ಬಿದ್ಬಿಟ್ಟೆ ಅಂತಾರಲ್ವ ನಮ್ ಹುಡ್ಗರು. ಬರೇ ಇದ್ ಮಾತ್ರ ಅಲ್ಲಾ ಕಣ್ಣಿಂದ ನಾವ್ ಯಾವ್ ತರದವ್ರು, ನಮ್ ಗುಣ ಹೇಗೆ ಅನ್ನೋದನ್ನೆಲ್ಲಾ ತಿಳ್ಕೊಬಹುದು. 

1) ಕಪ್ಪು ಕಣ್ಗುಡ್ಡೆ ಇರೋರು ತುಂಬಾನೇ ಜವಬ್ದಾರಿಯ ಮನುಷ್ಯರು

ಒಂದ್ ಆಶ್ಚರ್ಯದ ವಿಷ್ಯ ಎನಂದ್ರೆ ಕಪ್ಪಾಗಿರೋ ಕಣ್ ಗುಡ್ಡೆ ಇರೋದು ತುಂಬಾನೇ ಅಪರೂಪ ಅಂತೆ. ನಾವ್ ಎನ್ ನೋಡ್ತಾ ಇದ್ದೀವೋ ಆ ಕಣ್ ಗುಡ್ಡೆಗಳ ಬಣ್ಣ ಗಾಢವಾದ ಕಂದು ಬಣ್ಣ.

ಕಪ್ಪಾಗಿರೋದು ಅಥ್ವಾ ಗಾಢ ಕಂದು ಬಣ್ಣದ ಕಣ್ಣುಗುಡ್ಡೆಯು ರಹಸ್ಯಕ್ಕೆ ,ಕತ್ತಲಿಗೆ, ಒಳ್ಗಡೆ ಅಡ್ಗಿರೋ ವಿಷ್ಯಗಳನ್ನ ಸೂಚ್ಸತ್ತೆ. ಈ ತರ ಕಣ್ಗುಡ್ಡೆ ಇರೋರು ತುಂಬಾನೇ ನಂಬಿಕೆಯುಳ್ಳವರು ಮತ್ತೆ ಜವಬ್ದಾರಿಯನ್ನ ತಗೊಳ್ಳೊ ಜಾಯಮಾನದವ್ರಂತೆ. ರಹಸ್ಯನ್ನಾ ಮುಚ್ಚಿಡೋದರ್ಲ್ಲಿ ಇವ್ರದ್ದು ಎತ್ತಿದ್ ಕೈ ಯಾವ್ದೇ ಕಾರಣಕ್ಕೂ ಯಾರ್ ಹತ್ರಾನು ಹೇಳಲ್ಲ.

ಇವ್ರುಗಳು  ಜನ್ರನ್ನ ನಂಬೋದಾಗ್ಲಿ ಅಥ್ವಾ ಪ್ರೀತಿ ಪ್ರೇಮದ ಸಂಭಂದ ಬೆಳ್ಸೊವಾಗ ಹಿಂದೆ ಮುಂದೆ ಸಾವಿರ ಸಲ ಯೋಚ್ನೇ ಮಾಡ್ತಾರೆ ಆದ್ರೆ ಒಂದ್ಸಲ ಬೇಳ್ಸದ್ರೋ ಸಾಯೋವರ್ಗೂ ಕೈ ಬಿಡೋರಲ್ಲ. ತುಂಬಾನೇ ಪರಿಶ್ರಮ ಜೀವಿಗಳು ಎನೇ ಆದ್ರೂ ಎಲ್ಲವೂ ಸರಿಯಾಗ್ ಇರ್ಬೇಕು ಅಷ್ಟೇ. ಆಧ್ಯಾತ್ಮದ ಗಾಳಿಯೂ ಕೂಡಾ ಇವ್ರಲ್ಲಿರತ್ತೆ.

ಮೂಲ

2) ಕಂದು ಬಣ್ಣದ ಕಣ್ಗುಡ್ಡೆಯುಳ್ಳವರು ಸರಳ ಜೀವಿಗಳು

ಸಾಮಾನ್ಯವಾಗಿ ನಮ್ ನಿಮ್ಮೆಲ್ಲರ ಕಣ್ಗುಡ್ಡೆ ಕಂದು ಬಣ್ಣದ್ದೇ. ಕಂದು ಬಣ್ಣದ ಕಣ್ಗುಡ್ಡೆಯುಳ್ಳವರು ತುಂಬಾನೇ ಆಕರ್ಷಣೆಯ ಜೊತೆಗೆ ಧ್ರಡತೆಯುಳ್ಳವರು.

ಈ ಕಣ್ಗುಡ್ಡೆಯನ್ನ ಭೂಮಿಗೆ ಹೋಲಿಸ್ತಾರೆ. ಅದ್ಕೊಸ್ಕರನೇ ಇವ್ರುಗಳು ಸರಳವಾದ ಜೀವ್ನ ನಡೆಸ್ತಾರೆ. ತುಂಬಾನೇ ಕ್ರಿಯಾಶೀಲರಾಗಿರ್ತಾರೆ. ಪ್ರಾಮಾಣಿಕತೆ, ಸ್ವತಂತ್ರತೆ, ಕಾಳಜಿಯನ್ನೊದು ಇವ್ರಲ್ಲಿ ಸಾಮಾನ್ಯವಾಗಿರತ್ತೆ.

ಇವ್ರುಗಳು ವಾಸ್ತವದಲ್ಲಿ ಬದ್ಕತಾರೆ. ಆದ್ರೆ ಕಾಳಜಿ ಪ್ರೀತಿಯನ್ನೋದು ಬಂದ್ ಬಿಟ್ರೆ ವಾಸ್ತವ ಲೆಕ್ಕಕ್ಕೆ ಬರಲ್ಲ.  ಧ್ರಡತೆ, ಕಾಳಜಿ, ಪ್ರಾಮಾಣಿಕತೆ ಇವ್ರಲ್ಲಿದ್ರೂ ಕೆಲ್ವೊಮ್ಮೆ ತಮ್ಮನ್ನ ಆ ರೀತಿ ಗುಣದವ್ರು ಅಂತ ತೋರ್ಸ್ಕೊಳ್ಳೊಕ್ಕೆ ತುಂಬಾನೇ ಕಷ್ಟ ಪಡ್ತಾರೆ.

ಇವ್ರುಗಳು ತುಂಬಾನೇ ಶಕ್ತಿಶಾಲಿಯಾಗಿದ್ದರೂ ಪ್ರೇಮ ಜೀವಿ ಕಣ್ರೀ. ಎನೇ ಹೇಳಿದ್ರೂ ಇವ್ರುಗಳು ಮಾಡ್ತಾರೆ ಆದ್ರೆ ಅವ್ರ ಕೆಲ್ಸದಿಂದ ನೀವ್ ಖುಷಿಯಾಗೋದ್ ಬಿಡೋದ್ ನಿಮ್ಗೆ ಬಿಟ್ಟಿದ್ದು.

ಮೂಲ

3) ಕಂದು ಮತ್ತೆ ಹಸಿರು ಬಣ್ಣದ ಕಣ್ಗುಡ್ಡೆಯುಳ್ಳವರು ಸಾಹಸ ಪ್ರವ್ರತ್ತಿಯವರು

ಕಂದು ಮತ್ತೆ ಹಸಿರು ಬಣ್ಣದಿಂದ ಕೂಡಿದ ಈ ಕಣ್ಗುಡ್ಡೆಯನ್ನ ಎಷ್ಟ್ ಸಲ ನೋಡಿದ್ರೂ ಸಾಕಾಗಲ್ಲ. ಅಷ್ಟು ಚೆನ್ನಾಗಿದೆಯಲ್ವ. ಈ ತರ ಕಣ್ಗುಡ್ಡೆಯಳ್ಳವರಿಗೆ  ಒಳ್ಳೆ ಟೇಸ್ಟ್ ಇರತ್ತಂತೆ.

ತುಂಬಾನೇ ಸ್ವಾಭಾವಿಕ ಗುಣ ಇರೋ ಇವ್ರು ಸಾಹಸ ಅಂದ್ರೆ ಯಾವ್ ಸಮಯದಲ್ಲಿ ಬೇಕಾದ್ರೂ ರೆಡಿಯಾಗಿರ್ತಾರೆ. ಎನಾದ್ರೂ ಒಂದ್ ಕೆಲ್ಸ್ ಮಾಡ್ತಾ ಇದ್ರೆ  ಅದೇನು ಅದೇಕೆ ಹಾಗೆ ಅಂತ ಸಾವಿರ ಪ್ರಶ್ನೆ ಕೇಳಲ್ಲ. ಅದ್ರ ಜೊತೆಗೆ ತಾವು ಮಾಡ್ಕಂಡು ಹೋಗ್ಬಿಡ್ತಾರೆ. ಸಿಕ್ಕಾಪಟ್ಟೆ ಧೈರ್ಯ ಇರೋ ಇವ್ರನ್ನ ಒಂಟಿತನ ಆಗಾಗ ಕಾಡ್ತಾ ಇರತ್ತೆ.

ಯಾವಾಗ್ಲೂ ಹೊಸತನ್ನ ಹುಡಕ್ತಾ ಇರ್ತಾರೆ . ಇವ್ರನ್ನ ಪ್ರೀತಿಸ್ಬೇಕಾದ್ರೆ ಇವ್ರ ತರ ಇರೋರೆ ಆಗಿರ್ಬೇಕು ಇಲ್ಲಾಂದ್ರೆ ಆ ಸಂಬಂಧ ತುಂಬಾ ದಿನ ನಿಲ್ಲಲ್ಲ. ಚೇಷ್ಟೆ ಸ್ವಭಾವ ಹೊಂದಿರೋ ಇವ್ರು ಸಿಟ್ಟಾದ್ರೆ ತಡ್ಕೊಳ್ಳಕ್ಕಾಗಲ್ಲ. ಒಂದ್ ವೇಳೆ ಅವ್ರ ಸಿಟ್ಟನ್ನ ಕಂಟ್ರೋಲ್ ಮಾಡಿದ್ರೆ ನಿಮ್ನ ಬಿಟ್ ಕೊಡಲ್ಲ.

ಮೂಲ

4) ಬೂದು ಬಣ್ಣದವರು ಎಲ್ಲಾ ವಿಷಯಗಳ್ನ ಸೀರಿಯಸ್ಸಾಗಿ ತೊಗೋತಾರೆ

ಜೀವ್ನ ಅಂದ್ರೆ ಬರೇ  ಬ್ಲಾಕ್ ಆಂಡ್ ವೈಟ್ ಅಲ್ಲ. ಬೇರೆ ತರದ ಬಣ್ಣಗಳಿಗೂ ಅಲ್ ಜಾಗ ಇದೆ. ಅದೇ ತರ ಬೂದು ಬಣ್ಣದ ಕಣ್ಗುಡ್ಡೆಯಳ್ಳವರು ನಾಯಕತ್ವಕ್ಕೆ ಹೇಳ್ ಮಾಡ್ಸದವ್ರು.

ನಡತೆ ವಿಷ್ಯಕ್ಕೆ ಬಂದಾಗ ಇವ್ರುಗಳು ತುಂಬಾನೇ ಸ್ಟ್ರಾಂಗ್.  ಬುದ್ದಿವಂತಿಕೆ ಚಾಣಾಕ್ಷತನ ಇವ್ರ್ ಹುಟ್ಟು ಗುಣ. ಹಾಗಂತ ಇವ್ರು ಮಹಾ ಕೋಪಿಷ್ಟರಲ್ಲ  ಸಾಧು ಸ್ವಭಾವದವ್ರು. ಎನೇ ವಿಷ್ಯ ಇದ್ರೂ ಅದ್ನ ಸೀರಿಯಸ್ಸಾಗಿ ತಗಂಡು ಮಾಡ್ತಾರೆ. ಇವ್ರಿಗೆ ಪ್ರೀತಿ ಪ್ರೇಮ ಇನ್ನೊಬ್ರ ಜೊತೆ ಟೈಮ್ ಪಾಸ್ ಮಾಡೋ ವಸ್ತು ಅಲ್ವೇ ಅಲ್ಲ ಅದೆಲ್ಲ ಸಿರಿಯಸ್ಸಾಗೀಯೆ ತಗೊಳ್ತಾರೆ .

ಕ್ರಿಯಾಶೀಲ, ಕಲ್ಪನಾತ್ಮಕ ಜೀವಿ, ಹೊಂದಿಕೊಳ್ಳುವ ಗುಣಗಳು ಇರೋದ್ರಿಂದಾನೆ ಇವ್ರನ್ನ ನಾಯಕತ್ವಕ್ಕೆ ಲಾಯಕ್ಕಾದಾವ್ರು ಅಂತಾರೇ. ವಿಚಾರವಾದ, ವಿಶ್ಲೇಷಣೆ, ಒಳ್ಗಿರೋ ಶಕ್ತಿ ಇವೆಲ್ಲದ್ರ ಸಹಾಯದಿಂದ ಯಾವ್ದೇ ಪರಿಸ್ಥಿತಿಯಲ್ಲಿಯೂ ಸಹ ಅದ್ನ ತಮ್ಗ ಹೇಗ್ ಬೇಕೊ ಹಾಗೆ ಮಾಡ್ಸ್ಕೊಳ್ತಾರೆ.

ಮೂಲ

5) ಹಸಿರು ಕಣ್ಗುಡ್ಡೆಯವರನ್ನ ಅರ್ಥ ಮಾಡ್ಕೊಳ್ಳೋದು ಕಷ್ಟ

ಹಸಿರು ಕಣ್ಗುಡ್ಡೆ ಯಾವಾಗ್ಲೂ ಒಳ್ಳೆಯ ಗಾಳಿಗೆ ಸಂಬಂಧಿಸತ್ತೆ. ಪುನರ್ ಯವ್ವನ ಅನ್ನೋದು ಎಲ್ಲ್ ಪರಿಸ್ಥಿತಿಯಲ್ಲಿ ಸಹಾಯ ಮಾಡತ್ತೆ. ನಿಗೂಢತೆಯನ್ನೊದು ಇವ್ರಲ್ಲಿ ಜನ್ಮತ ಇರತ್ತೆ. ಒಗಟೊಗಟಾಗಿ ಇರ್ತಾರೆ. ಯಾರ್ಗೂ ಅಷ್ಟು ಸುಲಭದಲ್ಲಿ ಅರ್ಥ ಆಗೋರಲ್ಲ.

ಇವ್ರನ್ನ ಸ್ವಲ್ಪ ಹೊತ್ತು ನೋಡ್ತಾ ಇದ್ರೆ ಸಾಕು ವಶೀಕರಣ ಆದವ್ರ ತರ ಅವ್ರಗೇ ಬಿದ್ ಬಿಡ್ತೀರಿ. ಎನಾದ್ರೂ ಹೊಸ ವಿಷ್ಯ ಇದ್ರೆ ಅದರ ಬಗ್ಗೆ ಎಲ್ಲಕ್ಕಿಂತ ಜಾಸ್ತಿ ಆಸಕ್ತಿ ತೋರ್ಸತಾರೆ. ಜೀವ್ನನಾ ತುಂಬಾನೇ ಖುಷಿಯಿಂದ ಅನುಭವಿಸ್ತಾರೆ  ಎಲ್ಲಾ ಮಜಲಿನ ರುಚಿಯನ್ನ ಅನುಭವಿಸಿರ್ತಾರೆ.

ಬೇಗನೇ ಹೊಟ್ಟೆಕಿಚ್ಚು ಬರತ್ತೆ. ಆದ್ರೂ ಇವ್ರ ಕಣ್ ನೋಡಿ ಅದೆಲ್ಲ ಅಷ್ಟು ಲೆಕ್ಕಕ್ಕೆ ಬರಲ್ಲ. ಬೇರೆ ಜನ್ರು ಇವ್ರ ಕಡೇ  ಬೀಳೊಕೆ ಕೆಲವು ಸೆಕೆಂಡು ಸಾಕು. 

ಮೂಲ

6) ನೀಲಿ ಕಣ್ಣಿನವ್ರು ಸಿಕ್ರೆ ಯೋಚ್ನೇ ಮಾಡ್ಬೇಡಿ ಮದುವೆ ಮಾಡ್ಕೊಂಡ್ ಬಿಡಿ 

ಎನೋ ಒಂದ್ ಬಿಟ್ಟೆ ಅನ್ಕೊಂಡ್ರಾ? ನೀಲಿ ಕಣ್ಗಳ ಬಗ್ಗೆ ಹೇಳ್ದೇ ಇದ್ರೆ ಈ ಟಾಫಿಕ್ ಮುಗಿಯಲ್ಲ ಬಿಡಿ. ಜಗತ್ತಿನ ಅದೇಷ್ಟೊ ಜನ ನನ್ ಕಣ್ ಹೀಗಿರ್ಬೇಕು ಅಂತೇಳೋ ಬಣ್ಣ ಇದು.

ತುಂಬ ಬೇಗ ಎಲ್ರಿಗೂ ಇಷ್ಟ್ ಆಗ್ತಾರೆ. ಶಾಂತಿ, ಕ್ರೀಯಾಶೀಲತೆ, ಯವ್ವನ  ಇವ್ರಲ್ಲಿ ತುಂಬಿ ತುಳಕ್ತಾ ಇರತ್ತೆ. ಕರುಣೆಯಿಂದ ಇವ್ರು ಜನ್ರಿಗೆ ಬೇಗ ಹತ್ರ್ ಆಗ್ತಾರೆ. ಇವ್ರ ಜೊತೆ ಮಾಡೊ ಸಂಬಂಧ ಅಜರಾಮರ ಇದ್ದಾಗೆ.  ಇನ್ನೊಬ್ರ ಖುಷಿಯನ್ನ ನೋಡೊದು ಇವ್ರ ಮೊದಲ ಕೆಲ್ಸ.  ಈ ತರ ಗುಣ ಇರೋದು ತುಂಬಾನೇ ಕಮ್ಮಿ.

ಹೊರಗಿನ ಪ್ರಪಂಚದಲ್ಲಿ ಅವ್ರುಗಳು ತಮ್ಮನ್ನ ತೊಡಗಿಸಿಕೊಳ್ಳೊಕೆ ತುಂಬಾನೇ ಇಷ್ಟ ಪಡ್ತಾರೆ. ಇವ್ರುಗಳು ಸಂಬಂಧ ಬೆಳ್ಸೋವಾಗ ಧೀರ್ಘವಾಗಿಯೇ ಇರ್ಬೇಕು ಸರಿಯಾಗಿರ್ಬೇಕು ಅಂತ ಯೋಚ್ನೇ ಮಾಡಿ ಬೆಳ್ಸತಾರೆ ಕಾಟಚಾರಕ್ಕೆ ಬೆಳ್ಸೋ ಜಾತಿ ಇವ್ರದಲ್ಲ. ಅದೇನ್ ಬೇಕಾದ್ರೂ ಆಗ್ಲಿ ತಾವ್ ಇಷ್ಟ ಪಡೋರನ್ನ ಬಿಟ್ ಕೊಡಲ್ಲ. ಅವ್ರು ಮುಂದೆ ಬಂದು ಎಲ್ಲವನ್ನ ತಾವೇ ತಗಂಡು ತಮ್ಗಿಷ್ಟವಾದವ್ರನ್ನ ಉಳ್ಸಕೊಳ್ತಾರೆ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: