ಕನ್ನಡಿಗರಿಗೆ ಕನ್ನಡದ ರೇಲ್ವೇ ಟಿಕೆಟ್ ಭಾಗ್ಯ ಸಿಗೋ ತನಕ ಸಿ.ಟಿ.ರವಿ ಬಿಡೋಹಂಗ್ ಕಾಣ್ತಿಲ್ಲ

ಯಾಕ್ ಬಿಡ್ಬೇಕು?

ರವಿ

ಕರ್ನಾಟಕದಲ್ಲಿ ಓಡಾಡೋ ರೈಲುಗಳಿಗೆ ಕನ್ನದದಲ್ಲಿ ಟಿಕೆಟ್ ಪ್ರಿಂಟ್ ಮಾಡ್ರಪ್ಪಾ ಅಂದ್ರೆ ಅವೆಲ್ಲ ಲೋ-ಕ್ಲಾಸ್ನೋರ್ಗೆ ಮಾತ್ರ ಅನ್ನೋ ಉತ್ತರ ರೇಲ್ವೇ ಇಲಾಖೆನೋರು ಕೊಟ್ಟಿದ್ದು ಈಗಾಗಲೇ ಕೇಳಿರ್ತೀರಿ. ಇಲ್ಲದೆ ಹೋದ್ರೆ ಇಲ್ಲಿ ನೋಡಿ.

ಆ ಪ್ರತಿಕ್ರಿಯೆಗೆ ಸಾಕಷ್ಟು ಜನ ತಮ್ಮ ವಿರೋಧ ವ್ಯಕ್ತ ಪಡಿಸುತ್ತಾ ಇದಾರೆ.

ಆದರೆ ಮೊಟ್ಟಮೊದಲಿಗೆ ಈ ವಿಷಯ ಎತ್ತಿದ ಎಮ್ಮೆಲ್ಲೆ ಸಿ.ಟಿ.ರವಿ ಇದರ ಹಿಂದೆ ಬಿದ್ದಿರೋದು ನೋಡಿದರೆ ಖುಷಿಯಾಗತ್ತೆ...

posavanike

ಇಲ್ಲಿ ನೋಡಿ, ಸುರೇಶ್ ಪ್ರಭುಗೆ ಒಂದು ಪತ್ರ ಬರೆದು ಎಲ್ಲಾ ಟಿಕೆಟ್ಗಳು ರಾಜ್ಯದ ಅಧಿಕೃತ ಭಾಷೆಯಲ್ಲಿ ಇರುವಂತೆ ಪಾಲಿಸಿ ಬದಲಾಯಿಸಿ ಅಂತ ಕೇಳ್ತಾರಂತೆ:

ಹಾಗೇನೇ, ಪ್ರಭುಗೆ ಇನ್ನೊಂದು ಟ್ವೀಟ್ ಮಾಡಿ ‘ಕನ್ನಡದಲ್ಲಿ ಟಿಕೆಟ್ ಪ್ರಿಂಟ್ ಮಾಡಕ್ಕೆ ಸಮಯ ಬಂದಿಲ್ವಾ? ಅಸಾಧ್ಯವಾದುದು ಏನೂ ಇಲ್ಲ...’ ಅಂದಿದಾರೆ:

ಇದನ್ನೆಲ್ಲ ನೋಡಿ ನಾವು...

twitter

ಹಾಗೆ ಹೇಳ್ತಾ ಇದಕ್ಕೆಲ್ಲ ಕಾಂಗ್ರೆಸ್ ಕಾರಣ, ಪಾಲಿಸಿ ಬದಲಾಯಿಸಕ್ಕೆ ಸುರೇಶ್ ಪ್ರಭುಗೆ ಟೈಂ ಕೊಡೋಣ ಅಂತ ತಮ್ಮ ಪಾರ್ಟಿ ಬೇಳೇನೂ ಬೇಯಿಸಿಕೊಂಡಿದಾರೆ:

ಏನೋ ಒಂದು! ಒಟ್ನಲ್ಲಿ ನಮಗೆ ಕನ್ನಡದ ಟಿಕೆಟ್ ಭಾಗ್ಯ ಸಿಕ್ಕರೆ ಸಾಕು! ನೀವು ಹೋರಾಟ ಮಾಡಿ ರವಿ ಔರೇ, ನಾವು ನಿಮ್ಮ ಜೊತೆ ಇದೀವಿ!

krv-activists-filmibeat.jpgfilmibeat

ಎಲ್ಲೀವರೆಗೆ ಹೋರಾಟ? ನ್ಯಾಯ ಸಿಗೋ ವರೆಗೆ ಹೋರಾಟ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಗ್ಯಾಸ್ ಸಿಲಿಂಡರ್ ಬಗ್ಗೆ ಈ ಒಂದು ಮುಖ್ಯವಾದ ವಿಷಯ ಎಲ್ಲರಿಗೂ ತುರ್ತಾಗಿ ಗೊತ್ತಾಗಬೇಕು

ಇಷ್ಟು ದಿನ ಯಾರೂ ಹೇಳೇ ಇಲ್ಲವಲ್ಲ, ಹೆಂಗೆ?

LPG ಸಿಲಿಂಡರ್ ಇಲ್ಲದೆ ಮನೇಲಿ ಅಡುಗೇನೇ ಇಲ್ಲ ಅನ್ನೋ ಪರಿಸ್ಥಿತಿ ಇದೆ.

ಆದರೆ ಈ‌ ಸಿಲಿಂಡರ್ಗಳು ಸ್ವಲ್ಪ ಡೇಂಜರ್ರೇ. ಏನಾದರೂ ತೊಂದರೆ ಆದರೆ ಸಿಲಿಂಡರ್ಗೆ ಬೆಂಕಿ ಹತ್ತಿ, ಅದು ಸಿಡಿದು ಅನಾಹುತ ಆಗೋ ಸಾಧ್ಯತೆ ಇರುತ್ತೆ.

ಆದರೆ ಈ ಸಿಲಿಂಡರ್ಗಳಿಗೂ ಒಂದು expiry date ಇರುತ್ತೆ ಅಂತ ನಿಮಗೆ ಗೊತ್ತಾ?

ಸಿಲಿಂಡರ್ ಒಳಗಿರೋ ಗ್ಯಾಸ್ ಬಗ್ಗೆ ಮಾತಾಡ್ತಿಲ್ಲ, ಬರೀ ಖಾಲಿ ಸಿಲಿಂಡರ್ ಬಗ್ಗೆ ಮಾತಾಡ್ತಿರೋದು. ಅದಕ್ಕೆ expiry date ಇರುತ್ತೆ ಅಂತ ನಿಮಗೆ ಗೊತ್ತಾ? Expiry date ಆಗೋಗಿರೋ ಸಿಲಿಂದರ್ ಉಪಯೋಗಿಸಿದರೆ ಏನಾದರೂ‌ ಅನಾಹುತ ಆಗೋ ಸಾಧ್ಯತೆ ಜಾಸ್ತಿ.

ಈ ಸಿಲಿಂಡರ್ಗಳು ಮಾರುಕಟ್ಟೇಲಿ ಸುಲಭವಾಗಿ ಸಿಗುತ್ತವೆ. ಖಾಲಿ ಆದರೆ ಅದನ್ನ ತುಂಬಿಸೋದು ವಾಡಿಕೆ. ಆದರೆ expiry date ಆಗಿದ್ದರೆ ಅದನ್ನ ತುಂಬಿಸಬಾರದು. ಆಗ ಅದರಿಂದ ಗ್ಯಾಸ್ ಸೋರಿಕೆ ಆಗಿ ಸಿಡಿಯೋ ಸಾಧ್ಯತೆ ಇರುತ್ತೆ. ಆದ್ದರಿಂದ ಡೇಟ್ ಆಗೋಗಿರೋ ಸಿಲಿಂಡರ್ಗಳ್ನ ಉಪಯೋಗಿಸಬಾರದು.

ಗ್ಯಾಸ್ ಅಂಗಡಿಯೋರು ಒಂದರ ಮೇಲೊಂದು ಸಿಲಿಂಡರ್ ಪೇರಿಸೋದು, ಅದನ್ನ ಎಸೆದಾಡೋದು, ಎಲ್ಲಾ ಮಾಡ್ತಾರೆ ನೋಡಿದೀರಿ ತಾನೇ?

ಮೂಲ

ಇದರಿಂದ ಸಿಲಿಂಡರ್ಗೆ ಏಟು ಬೀಳೋ ಸಾಧ್ಯತೆ ಇರುತ್ತೆ. ತುಂಬಾ ಉಜ್ಜಾಡಿ ಉಜ್ಜಾಡಿ ಮಾಡಿದಾಗ ಅದರಿಂದ ಗ್ಯಾಸ್ ಸೋರಿಕೆ ಆಗೋ‌ಸಾಧ್ಯತೆ ಇರುತ್ತೆ.

ಆದರೆ ಡೇಟ್ ಆಗಿದ್ಯೋ ಇಲ್ವೋ ಅಂತ ಕಂಡ್ ಹಿಡಿಯೋದು ಹೇಗೆ ಅಂತ ಸಾಮಾನ್ಯವಾಗಿ ಜನರಿಗೆ ಗೊತ್ತಿರಲ್ಲ. ಹೇಳ್ತೀವಿ ಕೇಳಿ.

ಸಿಲಿಂಡರ್ ಹಿಡಿ ಕೆಳಗೆ ಮೂರು ಸೈಡ್ ಪಟ್ಟಿ ಇರುತ್ತೆ. ಅದರಲ್ಲಿ ಒಳಕ್ಕೆ expiry dateನ ಒಂದು ಕೋಡ್ ಮಾಡಿ ಬರೆದಿರ್ತಾರೆ. ಆ ಕೋಡು A, B, C, ಅಥವಾ D ಇಂದ ಶುರು ಆಗಿ ಅದಾದಮೇಲೆ ಎರಡಂಕಿ ಸಂಖ್ಯೆ ಇರುತ್ತೆ. ಉದಾಹರಣೆಗೆ B13.

ಮೂಲ

ಇದರಿಂದ ಡೇಟ್ ಕಂಡ್ ಹಿಡಿಯೋದು ಸುಲಭ.

A, B, C, ಮತ್ತೆ D ಅನ್ನೋ ಇಂಗ್ಲಿಷ್ ಅಕ್ಷರಗಳು ತಿಂಗಳನ್ನ ಸೂಚಿಸುತ್ತವೆ. ಸಂಖ್ಯೆ ವರ್ಷ ಸೂಚಿಸುತ್ತೆ.

ಯಾವ ಅಕ್ಷರಕ್ಕೆ ಯಾವ ತಿಂಗಳು ಅಂತ ತಿಳಿದಿರಲಿ:

A - ಮಾರ್ಚ್

B - ಜೂನ್

C - ಸೆಪ್ಟೆಂಬರ್

D - ಡಿಸೆಂಬರ್

ಈಗ, ಉದಾಹರಣೆಗೆ ನಿಮ್ಮ ಸಿಲಿಂಡರ್ ಮೇಲೆ B-13 ಅಂತ ಬರೆದಿದ್ದರೆ ಅದರ expiry date ಜೂನ್ 2013. ಮೂರು ತಿಂಗಳ ಅಂದಾಜು ಸಾಕು ಅಂತ ಎಲ್ಲಾ ತಿಂಗಳಿಗೂ ಒಂದೊಂದು ಅಕ್ಷರ ಕೊಟ್ಟಿರಲ್ಲ.

ಕೆಲವರು ಈ expiry date ಕೋಡನ್ನ ಅಳಿಸಿ ತಮಗೆ ಬೇಕಾದ್ದು ಬರೆದುಕೊಳ್ತಾರೆ ಅಂತಾನೂ ವರದಿಗಳು ಬಂದಿವೆ. ಆದ್ದರಿಂದ ಮುಂದಿನ ಸಲ ಸಿಲಿಂಡರ್ ಬಂದಾಗ ಅದರ ಕೋಡ್ ಏನು ಅಂತ ನೋಡಿ.

ಮೂಲ

ಕೋಡ್ ಇರಬೇಕಾದ ಜಾಗದಲ್ಲಿ ಏನಾದರೂ ಗೀಚಿರೋದು, ಪೇಂಟ್ ಹಚ್ಚಿರೋದು, ತಿದ್ದಿರೋದು ಎಲ್ಲಾ ಆಗಿದ್ದರೆ ಮುಲಾಜಿಲ್ಲದೆ ವಾಪಸ್ ಕೊಟ್ಟುಬಿಡಿ. ಕಷ್ಟಕ್ಕೆ ಸಿಕಾಕೋಬೇಡಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: