ಅನಾಹುತ ತಪ್ಪಿಸಕ್ಕೆ ಬರ್ತಿರೋ ಗ್ಯಾಸ್ ಸಿಲಿಂಡರ್ ಬಗ್ಗೆ 11 ನಂಬಲಾರದ ವಿಷಯಗಳು

ಬೆಂಕಿಗೆ ಎಸೆದರೂ ಏನೂ ಆಗಲ್ಲ!

ಗ್ಯಾಸ್ ಸಿಲಿಂಡರ್ ನ್ಯೂಸಲ್ಲಿ ಇದೆ ಅಂದ್ರೆ ಡಂ ಅಂದಿದೆ, ಯಾರೋ ಸತ್ತಿದಾರೆ ಅಂತಾನೇ ಅರ್ಥ! ಅಲ್ಲದೆ, ಆ ಭಾರವಾದ ಕಬ್ಬಿಣದ ಗ್ಯಾಸ್ ಸಿಲಿಂಡರ್ ಎಳೆದು-ಎತ್ತಿಟ್ಟು ಯಾರಿಗೆ ಸಾಕಾಗಿಲ್ಲ? ಈ ತೊಂದರೆಗಳಿಗೆಲ್ಲ ಪರಿಹಾರ ಸದ್ಯದಲ್ಲೇ ಬರ್ತಾ ಇದೆ: ಪ್ಲಾಸ್ಟಿಕ್ ಸಿಲಿಂಡರ್! ಇದರ ವಿಶೇಷಗಳೇನು? ಮುಂದೆ ಓದಿ:

1. ಈ ಸಿಲಿಂಡರ್ ಬೆಂಕೀಲ್ ಬಿದ್ರೂ ಏನಾಗಲ್ಲ!

ವೀಡಿಯೋ ನೋಡಿ ಗೊತ್ತಾಗುತ್ತೆ:

2. ತುಂಬಾ ಹಗುರವಾಗಿದೆ. ಈಗಿರೋ ಕಬ್ಬಿಣದ ಸಿಲಿಂಡರಿನ ಅರ್ಧದಷ್ಟು!

ಈ ಸಣಕಲಿ ಹೇಗೆ ಒಂದೇ ಕೈಯ್ಯಲ್ ಎತ್ತಿದಾಳೆ ನೋಡೀ ಸಿಲಿಂಡರ್ನ!

1430527193_1489359715.jpgqatarliving

3. ಪ್ಲಾಸ್ಟಿಕ್ ಅಂದಮೇಲೆ ಕೇಳ್ಬೇಕೆ? ಸವೆಯೋದಿಲ್ಲ, ತುಕ್ಕೂ ಹಿಡಿಯಲ್ಲ.

lite-safe-8710-000283-1-zoom.jpgjumia

4. ನಮ್ ಹೆಣ್ಮಕ್ಳಿಗೆ ಎಲ್ಲಾದ್ರಲ್ಲೂ ಕಲರ್ ವೆರೈಟಿ ಬೇಕಲ್ಲ? ಅದಕ್ಕೇ ಬೇರೆ ಬೇರೆ ಬಣ್ಣದಲ್ಲೂ ಸಿಗತ್ವೆ!

ನೋಡಕ್ಕೆ ಸಕ್ಕತಾಗಿದೆ. ಒಳ್ಳೆ ಶೇಪೂ ಇದೆ.

93cxhfi2.jpglitesafecylinders

5. ಬಳಸಕ್ಕೆ ತುಂಬಾ ಸುಲಭ. ಸಿಲಿಂಡರಿಗೆ ಇರುವ ಹಿಡಿಗೆ ಗಟ್ಟಿಯಾದ ಗ್ರಿಪ್ಪು ಕೊಟ್ಟು ಬಳಸಕ್ಕೆ ಸುಲಭ ಮಾಡಿದ್ದಾರೆ...

Cylinder feature.jpglitesafecylinders

6. ಇದರ ಒಳ ಮೈಯ್ಯನ್ನ ಫೈಬರ್ ಗಾಜಿಂದ ಮಾಡಿದ್ದಾರೆ. ಹಾಗಾಗಿ, ಸಿಲಿಂಡರಲ್ಲಿ ಎಷ್ಟು ಗ್ಯಾಸ್ ಇದೆ ಅಂತ ನಾವೇ ನೋಡಬೋದು! ಯಾರೂ ಮೋಸ ಮಾಡಕ್ಕಾಗಲ್ಲ.

composite-img.jpgtimetechnoplast

7. ಇದನ್ನ ಮಾಡ್ತಿರೋರು ಇಂಡಿಯಾ ಕಂಪನಿಗಳೇ - ಟೈಂ ಟೆಕ್ನೋಪ್ಲಾಸ್ಟ್ ಮತ್ತು ಸುಪ್ರೀಂ ಇಂಡಸ್ಟ್ರೀಸ್

companies.jpg

8. ಎರಡೂ ಕಂಪನಿಗಳು ಬೇರೆ ಬೇರೆ ಬ್ರ್ಯಾಂಡ್ ಹೆಸರು ಇಟ್ಟಿದ್ದಾರೆ - ಕವಚ್ (ಸುಪ್ರೀಂ ಇಂಡಸ್ಟ್ರೀಸ್) ಮತ್ತು ಲೈಟ್ ಸೇಫ್ (ಟೈಂ ಟೆಕ್ನೋಪ್ಲಾಸ್ಟ್)

2lpgbrands.jpgowenscorning

9. ಇದನ್ನು ತಯಾರಿಸೋದು ಗುಜರಾತಿನ ಹಲೋಲ್ ಎಂಬ ಊರಲ್ಲಿ

doc_37_1.jpghexagonragasco

10. ಸಿಟೀಲಿರೋರಿಗೆ ಈ ಹೊಸಾ ಸಿಲಿಂಡರ್ ಸಿಗಕ್ಕೆ ಶುರುವಾಗ್ತಿದ್ದಂಗೆ ಹಳೇ ಕಬ್ಣದ್ ಸಿಲಿಂಡರ್ನೆಲ್ಲಾ ಹಳ್ಳಿ ಕಡೆಗೆ ಕಳಿಸ್ತಾರಂತೆ! ಹಳ್ಳಿ ಕಡೆ ಇವತ್ತಿಗೂ ಗ್ಯಾಸ್ ಬಳಸೋರು ಕಮ್ಮೀನೇ... ಇನ್ಮುಂದೆ ಜಾಸ್ತಿ ಆಗ್ಬೋದು.

Non_subsidised_3712.jpgindiatvnews

11. ಇದು ನಮ್ಮಲ್ಲಿ ಹೊಸದು ಅಷ್ಟೇ. ಇಂಗ್ಲೆಂಡ್, ಕೊರಿಯಾ ಮುಂತಾದ ಕಡೆಯೆಲ್ಲ ಈಗಾಗಲೇ ಇಂಥ ಸಿಲಿಂಡರ್ಗಳು ಬಳಕೆಯಲ್ಲಿವೆ.

recall_1.jpgcalor

ಎಕನಾಮಿಕ್ ಟೈಮ್ಸ್ ಪ್ರಕಾರ ಈಗಾಗಲೇ ಹಿಂದೂಸ್ತಾನ್ ಪೆಟ್ರೋಲಿಯಂ 5000 ಸಿಲಿಂಡರ್ ಆರ್ಡರ್ ಮಾಡಿದೆ. ನಮ್ಮ ತನಕ ಇದು ಯಾವಾಗ ಬರುತ್ತೆ ಅನ್ನೋದರ ಬಗ್ಗೆ ಖಚಿತವಾದ ಮಾಹಿತಿ ಇಲ್ಲ, ಆದರೆ ಒಟ್ನಲ್ಲಿ ಇದು ಒಳ್ಳೇ ಬೆಳವಣಿಗೆ. ಇನ್ಮೇಲಾದ್ರೂ ಗ್ಯಾಸ್ ಸಿಡಿದು ಜನರಿಗೆ ಗಾಯ ಆಗೋದು, ಸಾಯೋದು ಗೀಯೋದೆಲ್ಲ ಕಮ್ಮಿ ಆದ್ರೆ ಸಾಕು!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 10 ಪ್ರಶ್ನೆಗಳಿಗೆ ನೀವು ಕೊಡೋ ಉತ್ತರದಿಂದ ನಿಮ್ಮ ವ್ಯಕ್ತಿತ್ವದ ಕೇಂದ್ರಬಿಂದು ಯಾವುದು ಅಂತ ಗೊತ್ತಾಗುತ್ತೆ

ಒಂದು ಚಿಕ್ಕ ಅಂತೆಕಂತೆ ಕ್ವಿಜ಼್‌

ಚಕ್ ಚಕ್ ಅಂತ ಉತ್ತರ ಆಯ್ಕೆ ಮಾಡ್ಕೋತಾ ಹೋಗಿ… ಜಾಸ್ತಿ ಯೋಚನೆ ಮಾಡಬೇಡಿ…:-)

 

 

ನೆನೆಪದ: 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: