ಆ 251₹ ಫೋನ್ನ ಕಾಡ್ತಿರೋ ಈ 15 ಅಪಶಕುನಗಳ ಬಗ್ಗೆ ಓದಿದ್ರೆ ಅದರ ಕಡೆ ಇನ್ನು ತಿರುಗಿ ನೋಡಲ್ಲ

ಫೋನ್ ಮಾಡಕ್ಕೆ ಫ್ಯಾಕ್ಟರೀನೇ ಇಲ್ಲ!

ಫೋನ್

ಈಗಾಗಲೇ ಈ ಫೋನ್ ಬಗ್ಗೆ ಹುಷಾರಾಗಿರಬೇಕು ಅಂತ ಹೇಳಿದ್ವಿ. ಆದರೆ ಇತ್ತೀಚೆಗೆ ಬರ್ತಿರೋ ವರದಿಗಳ್ನ ನೋಡಿದರೆ ನೀವು ಆ ಫೋನ್ ಕಡೆಗೆ ತಿರುಗಿ ನೋಡದೆ ಇರೋದೇ ವಾಸಿ ಅನ್ನಿಸುತ್ತೆ. ಕಾರಣ ಇಲ್ಲಿದೆ, ಓದಿ. ಒಂದಲ್ಲ, ಎರಡಲ್ಲ, 15:

1. ರಿಂಗಿಂಗ್ ಬೆಲ್ಸ್ ಕಂಪನಿ ಹತ್ತಿರ ಫೋನ್ ಮಾಡಕ್ಕೆ ಫ್ಯಾಕ್ಟರಿನೇ ಇಲ್ಲ!

500 ಕೋಟಿ ₹ ಹಾಕಿ 2 ಫ್ಯಾಕ್ಟರಿ ಕಟ್ಟಿ ಆಮೇಲೆ ನಿಮಗೆ ಫೋನ್ ಭಾಗ್ಯ ಸಿಗೋದು!

NOKIA_FACTORY_1757574f-thehindubusinessline.jpgthehindubusinessline

2. ನಿನ್ನೆ ಆರ್ಡರ್ ಮಾಡಿದೋರ್ಗೆ ಫೋನ್ ಸಿಗೋದು (ಅದು ಸಿಕ್ಕರೆ) ಜೂನಲ್ಲಿ!

ಅಲ್ಲೀವರೆಗೂ ಇಡೀ ಭಾರತದಿಂದ ಬಿಟ್ಟಿ ಸಾಲ ಇವರಿಗೆ!

june-2016-calendarpedia_co_uk.pngcalendarpedia

3. ಅಷ್ಟೇ ಅಲ್ಲ, ಫ್ಯಾಕ್ಟರಿ ಕಟ್ಟಕ್ಕೆ 500 ಕೋಟಿ ರೂಪಾಯಿ ಎಲ್ಲಿಂದ ಬರುತ್ತೆ ಅನ್ನೋ ಪ್ರಶ್ನೆಗೆ ಕಂಪನಿ ಹತ್ತಿರ ಉತ್ತರ ಇಲ್ಲ.

ಗೋಯಲ್ ಪರಿವಾರ ಹಾಕತ್ತಾ ಅಂತ ಕೇಳಿದಾಗ ಕಂಪನಿ ಸ್ಥಾಪಕ ಅಶೋಕ್ ಚಡ್ಢಾ ಸ್ಪಷ್ಟವಾಗಿ ‘ಇಲ್ಲ’ ಅಂದಿದಾರೆ. ನಮಗೆ ಗೊತ್ತು ಎಲ್ಲಿಂದ ಬರುತ್ತೆ ಅಂತ - ಜನ ನಾಮುಂದು ತಾಮುಂದು ಅಂತ ಆ ಫೋನ್ನ ಬುಕ್ ಮಾಡಿದ್ರೆ ಬರತ್ತಲ್ಲ?! ಆದ್ರೆ ದುಡ್ಡು ಕೊಟ್ಟೋರ್ಗೆ ಫೋನ್ ಬರತ್ತೆ ಅನ್ನೋ ಗ್ಯಾರಂಟಿ ಏನು? ಇವರ ಮಾತೊಂದೇ ಗ್ಯಾರಂಟಿ!

poverty_000014392453-cbsnews_com.jpgcbsnews

4. ಫೋನ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾರ್ತೀನಿ ಅಂತಿರೋ ಫೋನೇ ಇರಲಿಲ್ಲ! ಬರೀ ಶೋ!

ಬದಲಾಗಿ Adcom Icon 4 ಅನ್ನೋ ಚೈನಾ ಫೋನಿತ್ತು. ಈ ಫೋನಿಗೆ ಫ್ಲಿಪ್ಕಾರ್ಟ್, ಸ್ನಾಪ್ಡೀಲ್ ಮುಂತಾದ ಕಡೆ 4,500 ರೂ. ಇವರು 251 ರೂ.ಗೆ ಮಾರ್ತೀನಿ ಅಂತಿದಾರೆ!

427274-freedom-251-2-pti-dnaindia.jpgdnaindia

5. ಮಾಧ್ಯಮಗಳಿಗೆ ಕಳ್ಸಿರೋ ಫೋನ್ ಸ್ಯಾಂಪಲ್ಗಳಲ್ಲಿ Apple iPhone ಐಕಾನುಗಳ್ನ ಸಾರಾಸಗಟಾಗಿ ಕಾಪಿ ಮಾಡಿದಾರೆ. ಇನ್ನು Apple ನೋರು ಇವರ ಮೇಲೆ ಮೊಕದ್ದಮೆ ಹೂಡೋದು ಗ್ಯಾರಂಟಿ.

copied-icons-hindustantimes_com.jpghindustantimes

6. ಅವರು ಮಾಧ್ಯಮಗಳಿಗೆ ಕೊಟ್ಟಿರೋ ಫೋನ್ ಸ್ಕ್ರೀನ್ ಮೇಲೆ ಕೆರೆದರೆ ಅದು ಒಂದು ಚೈನಾ ಫೋನು ಅಂತ ಗೊತ್ತಾಗುತ್ತೆ!

ಕೆಳಗೆ ನೋಡಿ, Adcom ಅಂತ ಸ್ಪಷ್ಟವಾಗಿ ಕಾಣಿಸುತ್ತೆ... ಒಂಚೂರು ಕೆರೆದರೆ....

Adcom-Freedom-251-600x600-trak_in.jpgtrak

7. ಅವರು ಜಾಹೀರಾತಲ್ಲಿ ತೋರಿಸಿದ ಫೋನ್ಗೂ ಮಾಧ್ಯಮದೋರಿಗೆ ತೋರಿಸಿದ ಫೋನ್ಗೂ ಬಹಳ ವ್ಯತ್ಯಾಸ ಇದೆ!

ಎಡಗಡೇದು ಮಾಧ್ಯಮದೋರ್ಗೆ ಕೊಟ್ಟಿದ್ದು, ಬಲಗಡೇದು ಜಾಹೀರಾತ್ದು:

mismatch-hindustantimes.jpghindustantimes

8. ಆ ಫೋನಲ್ಲಿ ಸ್ವಚ್ಛ ಭಾರತ, ಮಹಿಳೆಯರ ಸುರಕ್ಷೆ, ಯೂಟ್ಯೂಬ್, ವಾಟ್ಸಪ್ ಮುಂತಾದ ಆಪ್ಗಳು ಇರ್ತವೆ ಅಂದಿದ್ದರು, ಆದರೆ ಮೀಡಿಯಾಗೆ ಕೊಟ್ಟ ಫೋನುಗಳಲ್ಲಿ ಅವೆಲ್ಲ ಏನೂ ಇಲ್ಲ!

noapps-hindustantimes_com.jpghindustantimes

9. ಎಲ್ಲರಿಗೂ ಗೊತ್ತಿರೋಹಂಗೆ ಅವರ ವೆಬ್ಸೈಟ್ (freedom251.com) ಕುಸಿದು ಬಿದ್ದು ಹೋಯಿತು.

ಈಗಲೂ ಆ ಸೈಟ್ ಕೆಲಸ ಮಾಡ್ತಿಲ್ಲ. ನೋಡಿ ಬೇಕಾದ್ರೆ: http://freedom251.com

ringingbells-site-indiatimes.jpgindiatimes

10. ಯಾರಿಗೆ ಆರ್ಡರ್ ಮಾಡಕ್ಕೆ ಆಯಿತೋ ಅವರು ಬೇಕಾದರೆ 1/2 ಫೋನ್ ಆರ್ಡರ್ ಮಾಡಬಹುದಿತ್ತು! ಏನು ತಂತ್ರಜ್ಞಾನ!

ಇಲ್ನೋಡಿ ಕರ್ಮಕಾಂಡ:

freedom-251-errors-halfphone-techsamay_com.jpgtechsamay

11. ವೆಬ್ಸೈಲ್ಲಿ ಗ್ರಾಹಕನ ಈ-ಮೇಲ್ ವಿಳಾಸ ಚೆಕ್ ಮಾಡುತ್ತಲೇ ಇರಲಿಲ್ಲ! ದುಡ್ಡು ಬಂದರೆ ಸಾಕು!

a@c.com ಅಂತ ಈಮೇಲ್ ವಿಳಾಸ ಕೊಟ್ಟರೂ ಇಸ್ಕೊಂಡಿದೆ:

scamphone-emailnotchecked-huffpost.jpghuffingtonpost

12. ಕಂಪನಿ ಸ್ಥಾಪಕ ಅಶೋಕ್ ಚಡ್ಢಾ ಹೇಳೋ ಪ್ರಕಾರವೇ ಆ ಫೋನ್ ಮಾಡಕ್ಕೆ 2500₹ ಆಗತ್ತೆ!

ಅಂದ್ರೆ ಫೋನ್ ಆರ್ಡರ್ ಮಾಡಿದ 10 ಜನರಲ್ಲಿ ಒಬ್ಬರಿಗೆ ಫೋನ್ ಕೊಟ್ಟರೂ ಕಂಪನಿಗೆ ನಷ್ಟ!

ashok-chadha-ringing-bells-ibnlive.jpg

13. ನಷ್ಟ ಆಗದೆ ಇರೋಹಂಗೆ ನೋಡ್ಕೋತೀವಿ ಅಂತಾ ಅಂತಾ ಔರು ಕೊಡ್ತಿರೋ ಕಾರಣವೆಲ್ಲ ಬರೀ ಓಳು!

ಮಾಡಕ್ಕೆ 2500 ರೂ ಖರ್ಚಾಗಬೇಕಾದರೆ ಅದನ್ನ 251 ರೂ ಗಿಂತ ಕಡಿಮೆ ಬೆಲೆಗೆ ತರ್ತೀವಿ ಅಂತಿರೋದಕ್ಕೆ ಅವರು ಕೊಡೋ ಕಾರಣಗಳು ನಾಲ್ಕು:

  1. ಅತಿ ಹೆಚ್ಚು ಮಾರಾಟ
  2. ಹೊಸ ರೀತಿಯ ಮಾರ್ಕೆಟಿಂಗ್
  3. ಡ್ಯೂಟಿ ಕಡಿತ
  4. ಹೊಸ ಇ-ಕಾಮರ್ಸ್ ವೆಬ್ಸೈಟು

ಗಮನಿಸಬೇಕಾದ್ದು ಇಷ್ಟೇ: ಇದ್ಯಾವುದೂ ಇವತ್ತ್ ಇಲ್ಲ!

poverty_000014392453-cbsnews_com.jpgcbsnews

14. ಬಿಜೆಪಿ ಸಂಸದ ಕಿರೀಟ್ ಸೋಮಯ್ಯ ಅವರ ಪ್ರಕಾರ ಇದೊಂದು ದೊಡ್ಡ ಹಗರಣ.

ಅವರು ರವಿಶಂಕರ್ ಪ್ರಸಾದ್ಗೆ ಈ ಪತ್ರ ಬರ್ದಿದಾರೆ, ಎಲ್ಲ ಮಾಧ್ಯಮಗಳಿಗೂ ಹೇಳಿಕೆ ಕೊಟ್ಟಿದಾರೆ:

kiritsomaya-letter.jpgkiritsomaiya

15. ರಿಂಗಿಂಗ್ ಬೆಲ್ಸ್ ಕಂಪನಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನವರಿಂದ ಪರವಾನಗಿ ಸಿಕ್ಕಿಲ್ಲ. ಅಂದ್ರೆ ಅವರು ಭಾರತದಲ್ಲಿ ಏನನ್ನೂ ಮಾರೋಹಂಗಿಲ್ಲ!

ಅವರ ಫೋನಿಂದ ಏನಾದರೂ ತೊಂದರೆ ಆದರೆ ಯಾರು ಹೊಣೆ?

BIS_HO-bis_org_in.jpgbis

ಈ ಅಪಶಕುನಗಳ್ನೆಲ್ಲ ನಿಮ್ಮ ಮುಂದೆ ತಂದಿಡೋದು ನಮ್ಮ ಕೆಲಸ. ಇಷ್ಟರ ಮೇಲೆ ನಿಂ ದುಡ್ಡು.

ಮಾಹಿತಿ ಮೂಲಗಳು: 1, 2, 3, 4, 5, 6, 7, 8, ಹೊರಚಿತ್ರ: hindustantimes

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಫೇಸ್ಬುಕ್ ಚರ್ಚೆ:

2017ರಲ್ಲಿ ಒತ್ತಡ ಕಡಿಮೆ ಮಾಡ್ಕೊಂಡು ಜೀವನ ಸವೀಬೇಕು ಅಂತಿದ್ರೆ ಇಲ್ಲಿ ಸ್ವಲ್ಪ ಕೇಳಿ

ಸುಂದರ ಬದುಕು ನಿಮ್ಮದಾಗಿಸಿಕೊಳ್ಳೋ ಆಸೆ ಇದ್ರೆ

ಬೆಳಗಾದ್ರೆ ಕೆಲಸಕ್ಕೆ ಓಡೋ ಭರಾಟೆಲಿರ್ತೀವಿ, ಹೆಣ್ಣುಮಕ್ಕಳಾದ್ರೆ ಮನೆ ಕೆಲಸ ಎಲ್ಲ ಮುಗಿಸಿ ಓಡಬೇಕು, ಕೆಲಸದಲ್ಲೆನು ಒತ್ತಡಕ್ಕೆ ಕೊರತೇನ? ಇದೆಲ್ಲ ಮುಗಿದಮೇಲೆ ನನ್ನನ್ನ ಗಮನಿಸಿಕೊಳ್ತಿಲ್ಲಾ ಅನ್ನೋ ಗಂಡ/ ಹೆಂಡತಿ, ಆಡೋಕು ನನ್ನ ಜೊತೆ ಬರೋಲ್ವಾ ಅನ್ನೋ ಮಕ್ಕಳು....... ಯಾಕಪ್ಪ ಜೀವನ ಅನ್ಸುತ್ತೆ ದಿನದ ಕೊನೆಲಿ. 

ಇದೆಲ್ಲಾ ನಿಮಗೂ ಅನ್ನಿಸ್ತಿದ್ರೆ ಖಂಡಿತ ಇವೆಲ್ಲದರ ಬಗ್ಗೆ ಗಮನ ಹರಿಸೋಕು ಇದು ಸರಿಯಾದ ಸಮಯ.

1. ದಾರಿ ತಪ್ಪಿಸೋರ್ನ ದೂರ ಇಡಿ

ಕೆಲವರನ್ನ ಕಷ್ಟದಲ್ಲಿ ಭೇಟಿ ಮಾಡೋಕೆ ಪ್ಲ್ಯಾನ್ ಮಾಡಿರ್ತೀರಿ. ಆದ್ರೆ ಅವರನ್ನ ಭೇಟಿ ಮಾಡಿದ್ರೆ ಬೇಡದ ಮಾತುಗಳು, ಬೇಡದ ವಿಷಯಗಳು ನಿಮ್ಮನ್ನ ಕಾಡುತ್ತೆ ಅನ್ನಿಸಿದ್ರೆ ಅಂಥವರ ಜೊತೆ ಕಳೆಯೋ ಸಮಯಾನ ಕಡಿಮೆ ಮಾಡಿಕೊಳ್ಳಿ. ಸಾಧ್ಯ ಆದ್ರೆ ಅಂಥವರನ್ನ ಭೇಟಿ ಮಾಡದೇ ಇರೋದೆ ಒಳ್ಳೇದು.

ಅವರೇ ಕಾಫಿಗೋ ಊಟಕ್ಕೋ ಕರೆದರೆ ಹೋಗದೇ ಇರೋಕೆ ನೆಪ ಹುಡುಕಿ, ಖುಷಿ ಆಗಿರ್ತೀರಿ.

ಮೂಲ

2. ಯಾವಾಗಲೂ ಲೇಟು ಅನ್ನಿಸಿಕೋಬೇಡಿ, ನಿಮ್ಮ ದಿನಾನ ಸರಿಯಾಗಿ ಪ್ಲಾನ್ ಮಾಡಿ

ದಿನ ತಡವಾಗಿ ಹೋಗಿ ಹೋಗಿ ಒತ್ತಡ ಜಾಸ್ತಿ ಆಗ್ತಿದ್ರೆ ನಿಮ್ಮ ದಿನದ ಪ್ಲ್ಯಾನ್ ನಲ್ಲಿ ಬದಲಾವಣೆ ಮಾಡಿಕೊಳ್ಳಿ. ಗಾಡಿ ಓಡಿಸೋ ಸಮಯ, ಟ್ರಾಫಿಕ್ ಜೊತೇಲಿ ನಿಮ್ಮ ಸಣ್ಣ ಪುಟ್ಟ ಕೆಲಸಗಳಿಗೂ ಸಮಯ ಕೊಟ್ಟು ಪ್ಲ್ಯಾನ್ ಮಾಡಿ,  ಬಸ್ ಬೇಗ ಹತ್ತಿ, ಅರ್ಧ ಗಂಟೆ ಮುಂಚೆ ಮನೆಯಿಂದ ಹೊರಡಿ, ಆಗ ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳು ಆಗುತ್ವೆ.

ಮೂಲ

3. ಮಾಡಬೇಕಾದ ಕೆಲಸ ಬೆಟ್ಟದಂಗೆ ಬೆಳೀಬಾರದು… ಹಂಗೆ ನೋಡ್ಕೊಳಿ

ಬೆಳಗಾದ ತಕ್ಷಣ ನಿಮ್ಮ ಕಣ್ಮುಂದೆ ರಾಶಿ ರಾಶಿ ಕೆಲಸ ಕಂಡ್ರೆ ಯಾರಿಗೆ ತಾನೆ ಖುಷಿ ಆಗುತ್ತೆ ಹೇಳಿ!! ಆದ್ರೆ ಹಾಗಂತ ನಾವು ತಪ್ಪಿಸ್ಕೊಳ್ಳೋಹಾಗೂ ಇಲ್ಲ ಅಲ್ವ? ಆದ್ರಿಂದ ನಿಮ್ಮ ಕೆಲಸಗಳ ಎರಡು ಪಟ್ಟಿ ಮಾಡ್ಕೊಳ್ಳಿ. ಒಂದು ನಿಮಗೆ ಖುಷಿ ಕೊಡೋದು ಮತ್ತೊಂದು ನಿಮಗೆ ಇಷ್ಟ ಆಗದ್ದು. ಈಗ ಇವರಡನ್ನೊ ಸಮಾನವಾಗಿ ಮಾಡುತ್ತಾ ಹೋಗಿ.

ನಿಮಗೆ ನಿಮ್ಮ ಹೆಂಡತಿನ ಶಾಪಿಂಗ್ ಕರ್ಕೊಂಡು ಹೋಗೋದು ಇಷ್ಟ ಇಲ್ಲ ಅಂದ್ರೆ, ನಿಮಗೆ ಬೇಕಾದನ್ನು ನೀವೂ ಕೊಳ್ಳಬಹುದಾದ ಅಂಗಡಿಗೆ ಹೋಗಿ. ನಿಮಗೆ ಬೇಕಾದ್ದು ನೀವು ತಗೊಳ್ಳಿ ಅವರಿಗೆ ಬೇಕದ್ದು ಅವರು ತಗೋತಾರೆ, ಕೆಲಸ ಖುಷಿಲೇ ಮುಗೀತಲ್ವ?

ಮೂಲ

4. ನಿಮ್ಮ ಸಾಮಾನು ಚೆಲ್ಲಾಪಿಲ್ಲಿ ಆಗದೆ ಇರೋಹಂಗೆ ನೋಡ್ಕೊಳ್ಳಿ

ವಾರ ಇಡೀ ಬ್ಯುಸಿ ಆಗಿರೋ ನಿಮಗೆ ಬಳಸಿದ ವಸ್ತುಗಳನ್ನ ಅದದೇ ಜಾಗಗಳಿಗೆ ಸೇರಿಸೋದು ಕಷ್ಟ ಆಗಿ ನಾಳೆ ನಾಳೆ ಅನ್ಕೋತಾ ಒಂದು ರಾಶಿ ಆಗಿದ್ರೆ ಅದನ್ನೆಲ್ಲ ಶನಿವಾರ ಮಾಡಬೇಕನ್ನೋ ಒತ್ತಡ ಕಾಡುತ್ತಿದ್ರೆ. ಬೇಸರ ಇಲ್ಲದೆ ನಿಮಗಿಷ್ಟ ಆಗೋ ಸಂಗೀತ ಕೇಳುತ್ತ ಕೆಲಸ ಮಾಡಿ, ಜೊತೇಲಿ ಕೆಲಸ ಎಲ್ಲ ಮುಗಿದ ಮೇಲೆ ನಿಮಗಿಷ್ಟ ಆಗೋ ಜಾಗಕ್ಕೆ ಹೋಗೋ ಪ್ಲಾನ್ ಮಾಡ್ಕೊಳ್ಳಿ ಆಗ ಒತ್ತಡ ಇರಲ್ಲ.

ಮೂಲ

5. ಭಿನ್ನಾಭಿಪ್ರಾಯಗಳನ್ನ ಪಕ್ಕಕ್ಕಿಡಿ

ಎಷ್ಟೋ ಸಾರಿ ಎದುರಿಗೆ ಇರೋ ವ್ಯಕ್ತಿಗೆ ನಮ್ಮ ಮನಸ್ಸಿನಲ್ಲಿರೋ ಮಾತು ಹೇಳೋಕಾಗ್ದೆ ಒಳಗೊಳಗೇ ಗೊಣಗಾಡ್ತ ಇರ್ತೀವಿ. ಇದು ನಿಮಗೆ ಒತ್ತಡ ಹೇರುತ್ತೆ. ಇದರಿಂದ ಹೊರಬರೋಕೆ ಮಾತುಗಳನ್ನ ಆಡೋ ಅಭ್ಯಾಸ ಮಾಡಿಕೊಂಡ್ರೆ ಒಳ್ಳೇದು ಇಲ್ಲ ಅಂದ್ರೆ 10 ನಿಮಿಷಕ್ಕಿಂತ ಹೆಚ್ಚು ಯಾವುದೇ ವಿಷಯಕ್ಕೂ ತಲೆ ಕೆಡಿಸಿಕೊಳಲ್ಲ ಅಂತ ನಿರ್ಧಾರ ಮಾಡಿ. ಅಕಸ್ಮಾತ್ ನಿಮ್ಮ ಮನಸ್ಸು ನಿಮ್ಮ ಮಾತು ಕೇಳ್ತಿಲ್ಲ ಅಂದ್ರೆ ಒಂದು ಪೇಪರ್ ನಲ್ಲಿ ನಿಮಗನ್ನಿಸಿದ್ದನ್ನೆಲ್ಲ ಬರೆದು ಸುಟ್ಟು ಹಾಕಿ, ಮನಸ್ಸು ನಿರಾಳ ಅನ್ಸುತ್ತೆ.

ಮೂಲ

6. ಇಲ್ಲ/ಆಗಲ್ಲ ಅನ್ನೋದನ್ನ ಅಭ್ಯಾಸ ಮಾಡ್ಕೊಳ್ಳಿ

ಯಾರಾರು ಏನಾರು ಕೆಲಸ ಹೇಳಿದಾಗ ಮನಸ್ಸು ಆಗಲ್ಲ ಅಂತಿದ್ರು ತುಟಿ ಹೂ ಅನ್ನೋಕೆ ಬಿಡಬೇಡಿ. ನಿಮಗಿಷ್ಟ ಇಲ್ಲದ್ದನ್ನ ಕೇಳಿದ್ರೆ ಇಲ್ಲ ಅನ್ನೋ ಅಭ್ಯಾಸ ಮಾಡ್ಕೊಳ್ಳಿ ಅಥವಾ ಆ ಕೆಲಸ ಇಷ್ಟ ಪಡೋ ವ್ಯಕ್ತಿಗೆ ಅದನ್ನ ಹೇಳೋ ಅಭ್ಯಾಸ ಮಾಡ್ಕೊಳ್ಳಿ ನಿಮಗೂ ಖುಷಿ ಅವರಿಗೂ ಖುಷಿ. ಹತ್ತು ಕೆಲಸ ಒಪ್ಪಿಕೊಂಡು ಸರಿಯಾಗಿ ಮಾಡದೇ ಇರೋಕ್ಕಿಂತ ಒಂದನ್ನ ಸರಿಯಾಗಿ ಮಾಡೋದು ಒಳ್ಳೇದಲ್ವಾ?

ಮೂಲ

7. ಮನೆಯೋರ ಜೊತೆ ಹೆಂಗಿರಬೇಕು ಅಂತ ತಿಳ್ಕೊಳಿ

ಯಾವುದಾದ್ರೂ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಂದು ಕಡೆ ಸೇರಿ ಮಾತಾಡೋ ಪರಿಸ್ಥಿತೀಲಿ ನಿಮಗೆ ಅಲ್ಲಿಂದ ಓಡೋಗ್ಬೇಕು ಅಂತ ಅನ್ಸಿದ್ರೆ ನಿಮಗೆ ನಿಮ್ಮ ಕುಟುಂಬದಲ್ಲೂ ಒತ್ತಡ ಇದೆ ಅಂತರ್ಥ. ನೆಂಟರ ಕೊಂಕು, ಅದಕ್ಕೆ ತಲೆ ಆಡಿಸೋ ಅಪ್ಪ - ಅಮ್ಮ ನಿಮಗೆ ಹಿಂಸೆ ಅನ್ನಿಸ್ತಿದ್ರೆ ಅವ್ರನ್ನೆಲ್ಲ ಬದಿಗಿಟ್ಟು ಯೋಚ್ನೆ ಮಾಡಿ ಅಥವಾ ಅವರು ಮಾತು ಆರಂಬಿಸೋಕೆ ಮುಂಚೆ ನೀವೇ ನಿಮಗಿಷ್ಟ ಆಗೋ ಮಾತು ಶುರು ಮಾಡಿ, ಇನ್ನು ಕಷ್ಟ ಅನ್ಸಿದ್ರೆ ಸ್ವಲ್ಪ ಸಮಯ ಮಾತ್ರ ಅವರ ಜೊತೆಲಿರಿ, ನಿಮಗೆ ಹೆಚ್ಚು ತೊಂದ್ರೆ ಕೊಡೊ ಸಂಬಂಧಗಳು ದೂರ ಇದ್ದಷ್ಟು ಒಳ್ಳೇದು.

ಮೂಲ

8. ಹಿಂದೆ ಮಾಡಿದ ಕೆಲಸ ಆಡಿದ ಮಾತು ಮರೆತುಬಿಡಿ

ಹಿಂದೆ ಯಾರ ಜೊತೆಲಾದ್ರೂ ಜಗಳ ಆಡಿದ್ರೆ ಅಥವಾ ಚಿಕ್ಕವಯಸ್ಸಿನಲ್ಲಿ ಯಾವತ್ತಾದ್ರೂ ತಪ್ಪು ಮಾಡಿದ್ರೆ ಅದನ್ನೇ ಮೆಲುಕು ಹಾಕೋದು ಬಿಡಿ, ಅದರಿಂದ ಏನೂ ಬದಲಾಗಲ್ಲ ಅನ್ನೋದು ನಿಮಗೆ ಗೊತ್ತಿದೆ ತಾನೇ. ನೆನ್ನೆ ಬಗ್ಗೆ ಯೋಚ್ನೆ ಮಾಡೋದ್ರಿಂದ ನೀವು ಅದೇ ಘಟನೆಗಳಲ್ಲಿ ಜೀವನ ಮಾಡೋದು ಹೆಚ್ಚು, ಅದು ನಿಜ ಜೀವನದ ಒತ್ತಡಕ್ಕಿಂತ ನಿಮಗೆ ಹೆಚ್ಚು ತೊಂದ್ರೆ ಕೊಡುತ್ತೆ. ಹಳೇದನ್ನ ಮರೆಯೋ ಪ್ರಯತ್ನ ಮಾಡಿ ಅಥವಾ ಬೇರೆ ವಿಷಯಗಳಲ್ಲಿ ನಿಮ್ಮನ್ನ ತೊಡಗಿಸಿಕೊಳ್ಳಿ.

ಮೂಲ

ಕೇಳಿದ್ರೇನೇ ನಿರಾಳ ಅನ್ಸುತ್ತೆ ಇನ್ನು ಮಾಡಿದ್ರೆ.... ಹಾಗಿದ್ರೆ ತಡ ಯಾಕೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: