ನಮಗೂ ಸ್ಯಾಂಡಲ್ವುಡ್ ಹೀರೋ-ಹೀರೋಯಿನ್ಗಳಿಗೂ ಜಾಸ್ತಿ ವ್ಯತ್ಯಾಸ ಇಲ್ಲಾಂತ ತೋರ್ಸೋ 20 ಸೆಲ್ಫಿಗಳು

ಔರು ಟೇಕು ರೀಟೇಕು ತೊಗೊಂಡು ಪಳಗಿದ್ದರೂ

ಗಣೇಶ್, ಹೋಮ

ಸಿನಿ ಸ್ಕ್ರೀನ್ ಹಿಂದೆ ನಮ್ ತರಾನೇ ಸೆಲ್ಫಿ ತೊಗೊಳ್ಳೊ ಕ್ರೇಜ್ ನಮ್ ಸ್ಯಾಂಡಲ್ವುಡ್ ಮಂದಿಗೂ ಇದೆ. ಅಷ್ಟೇ ಅಲ್ಲ, ಸೆಲ್ಫಿ ತೆಗೀವಾಗ ಔರೂ ನಮ್ ತರಾನೇ. ಪ್ರೂಫ್ ಬೇಕಾ? ಈ 20 ಸೆಲ್ಫಿಗಳಲ್ಲಿ ನಮ್ಮ ಸ್ಯಾಂಡಲ್ವುಡ್ ನಟ-ನಟೀರು ಏನು ಸಂದೇಶ ಕೊಡ್ತಿದಾರೆ ಅಂತ ಒಂದ್ ಸ್ವಲ್ಪ ನೋಡಿ:

1. ತೆಗೆದ ಸೆಲ್ಫೀಲೆಲ್ಲ ನಮಗೂ ನಗಕ್ಕೆ ಬರಲ್ಲ

ನಮ್ ಸೃಜನ್ ಮಾಮ ಮತ್ತು ದರ್ಶನ್ "ಜಗ್ಗುದಾದ" ಫಿಲಂ ಶೂಟಿಂಗ್ ಮಧ್ಯ ತೆಗೆದ ಸೆಲ್ಫಿ.

darshan-1.jpg

2. ಆಕಳಿಕೆ ಬಂದಾಗ ನಮಗೂ ಫೋನ್ನ ನೆಟ್ಟಗೆ ಇಟ್ಕೊಳಕ್ಕೆ ಬರಲ್ಲ

ನಮ್ ಅಪ್ಪು ಒಂದು ದಿನ ಗುಡ್ ನೈಟ್ ಹೇಳಿದ್ದು ಹೀಗೆ...

puneeth-6.jpg

3. ಒಳ್ಳೇ ಸ್ಪಾಟ್ ಸಿಕ್ಕರೆ ಎಷ್ಟೇ ಡೇಂಜರ್ ಇದ್ರೂ ಸೆಲ್ಫಿ ಹುಚ್ಚು ನಮ್ನ ಬಿಡಲ್ಲ

ಯಶ್ ಕಾಲ್ ಕೆಳಗೆ ನೆಲ ಇದ್ಯಾ?

yash-1.jpg

4. ಬೆಂಗಳೂರಿನ ಹೊಗೆ ನಮಗೂ ಆಗಲ್ಲ

ಬಾಯಿ ಮೂಗು ಕಟ್ಕೊಂಡು ಸೈಕಲ್ ಹೊಡ್ಯಕ್ ಹೊರ್ಟಿರೋ ಹರಿಪ್ರಿಯ:

haripriya-3.jpg

5. ಮದುವೆ ನಡೀತಿದ್ದಾಗ ಮಧ್ಯದಲ್ಲಿ ಅಡುಗೆಮನೆಗೆ ಹೋಗಿ ಹಪ್ಪಳ, ಬೋಂಡ ಇಸ್ಕೊಂಡ್ ತಿನ್ನಬೇಕು ಅಂತ ನಮಗೂ ಅನ್ನಿಸುತ್ತೆ.

ಹರಿಪ್ರಿಯಂಗೆ ಸೆಲ್ಫಿ ಯೋಚ್ನೆ.

haripriya-2.jpg

6. ಮ್ಯಾಚಿಂಗ್ ಕನ್ನಡಕ ಹಾಕೊಂಡಿದ್ರೆ ತೋರುಸ್ಕೋಬೇಕು ಅಂತ ನಮಗೂ ಅನ್ನಿಸುತ್ತೆ

ಹರಿಪ್ರಿಯ ಒಂದ್ ದಿನ ಫೇಸ್ಬುಕ್ನಲ್ಲಿ ಹೇಳಿದ್ದು ಹೀಗೆ...

haripriya-1.jpg

7. ಯಾರಾದರೂ ಸ್ಟಾರ್ ಸಿಕ್ರೆ ಔರ್ ಜೊತೆ ಸಲ್ಫಿ ತೊಗೋಬೇಕು ಅಂತ ನಮಗೂ ಅನ್ನಿಸುತ್ತೆ

ರಾಗಿಣಿ ದ್ವಿವೇದಿ ಜೊತೆ ನಮ್ ಸ್ಕೂಲ್ ಗರ್ಲ್ ಮೋಡಿಯ ಅಮೂಲ್ಯ ಸ್ಮೈಲ್ ಕೊಟ್ಟಿದ್ದು ಹೀಗೆ...

ragini-amulya-1.jpg

8. ಯಾರಾದರೂ ಸ್ಟಾರ್ ಸಿಕ್ರೆ ಔರ್ ತೊಗೆ ಸಲ್ಫಿ ತೊಗೋಬೇಕು ಅಂತ ನಮಗೂ ಅನ್ನಿಸುತ್ತೆ #2

ನಮ್ ಅಪ್ಪು ತನ್ನ ಫ್ಯಾನ್ ಒಬ್ಬನ ಜೊತೆ ಹೀಗೆ ಮಿಂಚಿದ್ದು... ಆ ಫ್ಯಾನೇ ಇಲ್ಲಿ ಸ್ಟಾರು.

puneeth-5.jpg

9. ರಾತ್ರಿ ಮಲ್ಕೊಳೋ ಮುಂಚೆ ಎಲ್ಲರೂ ‘ಗುಡ್ ನೈಟ್’ ಅನ್ನಲಿ ಅಂತ ನಮಗೂ ಅನ್ನಿಸುತ್ತೆ

ಒಂದ್ ದಿನ ಪವರ್ ಜೋಡಿ ಗುಡ್ ನೈಟ್ ಹೇಳಿದ್ದು ಹೀಗೆ... ಆಮೇಲೆ ಅಭಿಮಾನಿ ದೇವರುಗಳ ಗುಡ್ ನೈಟ್ ಸುರಿಮಳೆ!

puneeth-4.jpg

10. ಸೆಲ್ಫೀಲಿ ಇಬ್ಬರಿದ್ದರೆ ಇಬ್ಬರಿಗೂ ಒಂದೇ ಕಡೆ ನೋಡಕ್ಕೆ ನಮಗೂ ಬರಲ್ಲ

ಅಪ್ಪು ಪ್ರಜ್ವಲ್ ಜೊತೆ...

puneeth-3.jpg

11. ಕಂಪ್ಯೂಟರ್ ಮುಂದೆ ಕೂತು ಗೂಗಲಲ್ಲಿ ಹುಡುಕಕ್ಕೆ ನಮಗೂ ಬೇಜಾರು

ಗೂಗಲ್ ಗ್ಲಾಸ್ ಹಾಕೊಂಡು ಹುಡುಕ್ತಿರೋ ನಮ್ ಪವರ್ ಸ್ಟಾರ್...

puneeth-2.jpg

12. ಎರಡು ಸೆಲ್ಫಿ ನಾವು ತೊಗೊಂಡ್ರೂ ಮೊದಲ್ನೇದೇ ಚೆನ್ನಾಗಿರತ್ತೆ

ಧಾರಾವಾಹಿ ನಟಿ ಅರ್ಚನಾ ಜೊತೆ ಒಂದು ಪವರ್ ಕ್ಲಿಕ್.

puneeth-1.jpg

13. ತುಂಬಾ ಎಗ್ಸೈಟ್ ಆಗ್ಬುಟ್ರೆ ನಮಗೂ ಕ್ಯಾಮೆರಾ ನೆಟ್ಟಗೆ ಇಟ್ಕೊಳಕ್ಕೆ ಬರಲ್ಲ.

ಕೆಪಿಎಲ್ ಮಜಾ ತೊಗೊತಾ ಸುದೀಪ್ ತೊಗೊಂಡಿರೋ ಸೆಲ್ಫಿ.

kichcha-4.jpg

14. ನಾವೇ ಫೋಟೋ ತೆಗೆದ್ರೆ ಹಿಂದೆ ದೊಡ್ಡ ಲೈಟಿರೋದು ನಮಗೂ ಮರ್ತ್ ಹೋಗತ್ತೆ

ಅಪರೂಪದ ಸೆಲ್ಫಿ: ಜಗ್ಗೇಶ್ ಜೊತೆ ಕಿಚ್ಚ .

kichcha-3.jpg

15. ಕ್ರಿಕೆಟ್ ಮ್ಯಾಚಲ್ಲಿ ಪ್ರತಿಯೊಂದು ಬಾಲ್ನೂ ನೋಡಕ್ಕೆ ನಮಗೂ ಬೇಜಾರು

ಕಿಚ್ಚ ಸುದೀಪ್ ಕೆಪಿಎಲ್ ಆಟದಲ್ಲಿ ಮಿಂಚಿದ್ದು ಹೀಗೆ... ಖೇಣಿ ಜೊತೆ.

kichcha-2.jpg

16. ಹೋಮಕ್ಕಿಂತ ಹೋಮದ ಫೋಟೋ ಮುಖ್ಯ ಅಂತ ನಮಗೂ ಅನ್ನಿಸುತ್ತೆ

ಗೋಲ್ಡನ್ ಸ್ಟಾರ್ ಗಣೇಶ್ ನಿಜವಾಗ್ಲೂ ಹೋಮ ಮಾಡ್ತಾ ಕೂತಾಗ...

ganesh-3.jpg

17. ಜೋಗಕ್ಕೆ ಹೋದ್ರೆ ಫೋಟೋ ತೆಗಿಯೋರು ನಮಗೂ ಸಿಗಲ್ಲ

ನಮ್ ಗಣೇಶ್ನ ಗೋಲ್ಡನ್ ಮಾಡಿದ ಜೋಗ್ ಜಲಪಾತದೊಂದಿಗೆ...

ganesh-4.jpg

18. ಲೇಡೀಸ್ ಫಸ್ಟ್ ಅನ್ನೋದು ನಮಗೂ ಮರ್ತ್ ಹೋಗತ್ತೆ

"ಜೂಮ್" ಫಿಲಂ ಶೂಟಿಂಗ್ ಬಿಡುವಿನ ಸಮಯದಲ್ಲಿ ಸೆಟ್ನೋರೆಲ್ಲಾ ಸೆಲ್ಫಿಗೆ ಪೋಸ್ ಕೊಟ್ಟಿದ್ದ್ದು ಹೀಗೆ... ಹಿಂದೆ ನಿಂತಿರೋ ರಾಧಿಕಾ ಪಂಡಿತ್ ಸ್ವಲ್ಪ ಮುಂದಿರಬಾರ್ದಿತ್ತಾ?

ganesh-5.jpg

19. ದೇವರ ಹೆಸರು ನಮಗೆ ಇಟ್ಟಿದ್ದರೆ ನಮಗೂ ಒಂಥರಾ ಸ್ಕೋಪು

ನಮ್ ಗಣೇಶನ ಜೊತೆ ಇಷ್ಟೋಂದು ಡೂಪ್ಲಿಕೇಟ್ ಗಣೇಶಗಳಾ?

ganesh-6.jpg

20. ಬೇರೆ ಊರಿಗೆ ಹೋದ್ರೆ ಅಲ್ಲಿಂದ ಫೋಟೋ ತೆಕ್ಕೊಂಡ್ ಬರ್ಬೇಕು ಅಂತ ನಮಗೂ ಅನ್ನಿಸುತ್ತೆ

ಕರ್ನಾಟಕದ ಊರಲ್ಲ ಇದು. ಹೌದಾ?

ganesh-2.jpg

ಲೈಟ್ಸ್... ಕ್ಯಾಮರಾ... ಆಕ್ಶನ್... ಅಂತ ಟೇಕು ರೀಟೇಕು ತೊಗೊಂಡು ಪಳಗಿದ್ದರೂ ನಿಜ-ಜೀವನದಲ್ಲಿ ನಮ್ಮ ಸ್ಯಾಂಡಲ್ವುಡ್ ಮಂದಿ ನಂ ತರಾನೇ... ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಬೆಳ್-ಬೆಳಗ್ಗೆ 20 ನಿಮಿಷ ಹೀಗ್ ಕಳೆದರೆ ಇಡೀ ದಿನ ಲವಲವಿಕೆ ಮತ್ತು ಸಂತೋಷಗಳು ನಿಮ್ನ ಬಿಟ್ಟು ಹೋಗಲ್ಲ

ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಕಲಿತೋರು ಬಿಚ್ಚಿಟ್ಟ ಗುಟ್ಟು

ಇಂಥದ್ದು ನಡೆದೇ ಇರುತ್ತೆ - ಬೆಳ್ ಬೆಳಿಗ್ಗೆನೇ ಯಾವ್ದೂ ನೀವಂದ್ಕೊಂಡ ಹಾಗೆ ನಡೀತಿರೊಲ್ಲ. ನೀವಿಟ್ಟ ಸಮಯಕ್ಕೆ ಅಲಾರ್ಮು ಹೊಡ್ದಿರೊಲ್ಲ, ಅಥವಾ ನೀವೇ ತಪ್ಪಾಗಿ ಅಲಾರ್ಮ್ ಸೆಟ್ ಮಾಡಿರ್ತೀರ. ಅಯ್ಯಯ್ಯೋ ಲೇಟ್ ಆಯ್ತು ಅಂದ್ಕೊಂಡು ಬೇಗ ಸ್ನಾನ ಮಾಡಿ ತಿಂಡಿ ರೆಡಿ ಮಾಡೋಕೆ ಹೋದ್ರೆ ಅದು ಸೀದು ಹೋಗುತ್ತೆ. ಇಸ್ತ್ರಿ ಹಾಕೋಕೆ ಹೋದಾಗ ಕರೆಂಟು ಕೈ ಕೊಡುತ್ತೆ. ಸರಿ, ಆ ದಿನ ಪೂರ್ತಿ ಎಲ್ಲವೂ ಹಾಳು. ನೀವು ಮುರ್ಫಿ ಅನ್ನೋನು ಹೇಳಿರೋದು ಕೇಳಿರ್ಬಹುದು - ಏನಾದ್ರು ಹಾಳಾಗೋ ಚಾನ್ಸ್ ಇದ್ರೆ, ಅದು ಹಾಳಾಗಿಯೇ ಆಗುತ್ತೆ. ಒಟ್ನಲ್ಲಿ ಬೆಳ್ ಬೆಳಿಗ್ಗೆ ಕೆಟ್ಟದಾಗಿ ಶುರುವಾದ್ರೆ ಅವತ್ತು ಪೂರ್ತಿ ಮುರ್ಫಿ ಹೇಳಿದ್ದು ನಿಜ ಆಗ್ತಾ ಹೋಗುತ್ತೆ. ಇದಕ್ಕೆ ಪರಿಹಾರ ಇದೆ - ದಿನವೂ ಬೆಳಿಗ್ಗೆ ಬರೀ ಇಪ್ಪತ್ತು ನಿಮಿಷ ಈ ರೀತಿ ಕಳ್ದ್ರೆ ಇಡೀ ದಿನ ಸಕತ್ತಾಗಿರುತ್ತೆ. ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಕಲಿತು ಸಂತೋಷ, ನೆಮ್ಮದಿಗಳ ಬಗ್ಗೆ ರಿಸರ್ಚ್ ಮಾಡ್ತಿರೋ ಶಾನ್ ಏಚರ್ ಅನ್ನೋನು ಹೇಳಿರೋ ಪ್ರಕಾರ ಬೆಳಿಗ್ಗೆ ನೀವು ಪಾಸಿಟಿವ್ ಆಗಿದ್ರೆ ಆ ದಿವ್ಸ ಖಷಿಯಾಗಿರ್ತೀರಿ. ಪಾಸಿಟಿವಿಟಿ ಹೆಚ್ಚಾದ್ರೆ ನಿಮ್ ಮಿದುಳು ಖುಷ್ ಖುಷಿಯಾಗಿರುತ್ತೆ. ಖುಷಿಯಾಗಿದ್ದಾಗ ಮಿದುಳು ಚೆನ್ನಾಗಿ ಕೆಲಸ ಮಾಡುತ್ತೆ, ಎಷ್ಟು ಕಷ್ಟ ಇದ್ರೂ ಟೆನ್ಷನ್ ತೆಗೊಳೊಲ್ಲ. ಆ 20 ನಿಮಿಷ ಏನು ಮಾಡ್ಬೇಕು ಅಂತ ಹೇಳ್ತಾರೆ ಅನ್ನೋದನ್ನ ಓದ್ಕೊಳ್ಳಿ.

1) 2 ನಿಮಿಷ ಹಿಂದಿನ್ ದಿವ್ಸ ಏನೇನು ಒಳ್ಳೇದಾಯ್ತು ಅನ್ನೋದನ್ನ ನೆನೆಸ್ಕೋಬೇಕು

ನಾವು ಮಿದುಳಿಗೆ ಮೋಸ ಮಾಡ್ಬಹುದು. ಖುಷಿಯಾಗಿದ್ದೀನಿ ಅಂತ ನಿಮ್ಗೆ ನೀವೇ ಹೇಳ್ಕೊಂಡ್ರೆ ಅದು ನಿಜಕ್ಕೂ ಖುಷಿಯಾಗಿ ಬಿಡುತ್ತೆ. ಹಿಂದಿನ್ ದಿನ ಖುಷಿ ಕೊಡೋ ಅಂಥದ್ದು ಏನಾಯ್ತು ಅಂತ ನೆನಪು ಮಾಡ್ಕೊಂಡು ಬರ್ದಿಟ್ಕೊಳ್ಳಿ. ಹಿಂದಿನ್ ದಿನದ ಖುಷೀನ ಎರಡು ನಿಮಿಷ ಮತ್ತೆ ಅನುಭವ್ಸಿ. ಇದರಿಂದ ನಿಮ್ ಮಿದುಳು ಪಾಸಿಟಿವ್ ಆಗುತ್ತೆ. ಮೊದ್ಲೇ ಹೇಳಿದ್ ಹಾಗೆ, ಮಿದುಳು ಪಾಸಿಟಿವ್ ಆಗಿದ್ರೆ ಚೆನ್ನಾಗಿ ಕೆಲಸ ಮಾಡುತ್ತೆ.

ಮೂಲ

2) 2 ನಿಮಿಷ ಬೇರೆಯವ್ರ ಒಳ್ಳೆತನ ನೆನೆಸ್ಕೊಳ್ಳೋಬೇಕು

ನಾವು ಬೇರೆಯವ್ರ ಒಳ್ಳೆತನ ನೆನೆಸ್ಕೊಳ್ಳೋದು ಕಡಿಮೆ. ಬೆಳ್ ಬೆಳಿಗ್ಗೆ ಬೇರೆಯವ್ರ ಒಳ್ಳೆತನ ನೆನೆಸ್ಕೊಳ್ಳಿ. ನೆನೆಸ್ಕೊಳ್ಳೋದಷ್ಟೆ ಅಲ್ಲ, ಅವ್ರು ನಿಮ್ ಮುಂದೆ ಇದ್ರೆ ಅವ್ರಿಗೆ ಹೇಳಿ. ಅಥ್ವಾ ಈಮೇಲೋ ಮೆಸೇಜೋ ಮಾಡಿ. ಇದರಿಂದ ಎರಡು ರೀತಿ ಪ್ರಯೋಜನ ಇದೆ - ಈ ರೀತಿ ಒಳ್ಳೆ ಕೆಲ್ಸ ಮಾಡಿದ್ದೀನಿ ಅಂತ ನೀವು ಖುಷಿಯಾಗ್ತೀರಿ, ಅಲ್ಲದೆ ಬೇರೆಯವ್ರ ಜೊತೆ ನಿಮ್ ಸಂಬಂಧ ಗಟ್ಟಿಯಾಗುತ್ತೆ. ಇದರಿಂದ ಮಿದುಳು ಖುಷಿಯಾಗುತ್ತೆ, ಚೆನ್ನಾಗಿ ಕೆಲಸ ಮಾಡುತ್ತೆ.

ಮೂಲ

3) 2 ನಿಮಿಷ ನಿಮ್ಗಿರೋ ಭಾಗ್ಯ ನೆನೆಸ್ಕೋಬೇಕು

ಡಿ.ವಿ.ಗುಂಡಪ್ಪ 'ಇರುವ ಭಾಗ್ಯವ ನೆನೆದು ಬಾರೆನೆಂಬುದ ಬಿಡು, ಹರುಷಕ್ಕಿದೆ ದಾರಿ' ಅಂತ ಹೇಳಿದ್ದಾರೆ. ಹೀಗೆ ನಿಮ್ ಬದುಕಲ್ಲಿ ನಿಮ್ಗೆ ದಕ್ಕಿರೋ ಭಾಗ್ಯಗಳ್ನ ನೆನೆಸ್ಕೋಬೇಕಂತೆ ಬೆಳಿಗ್ ಬೆಳಿಗ್ಗೆ. ಇದರಿಂದ ಮಿದುಳು ಪಾಸಿಟಿವ್ ಆಗುತ್ತೆ. ಬದುಕಲ್ಲಿ ಏನೇನಿದೆ ಅಂತ ನೋಡೋದ್ರಿಂದ, ಏನೇನಿಲ್ಲ ಅಂತ ಕೊರಗೋದು ತಪ್ಪುತ್ತೆ. ಲೋಟ ಅರ್ಧ ಖಾಲಿಯಾಗಿದೆ ಅಂತ ಕೊರಗೋ ಬದ್ಲು ಅರ್ಧ ಲೋಟ ನೀರಿದ್ಯಲ್ಲ ಅಂತ ಖುಷಿ ಪಡ್ಬೇಕು. ಇಂಥ ಆಶಾವಾದದಿಂದ ಇಡೀ ದಿನ ಚೆನ್ನಾಗಿ ಕಳಿಯುತ್ತೆ. ನೀವು ಅಂದ್ಕೊಂಡ ಕೆಲಸ ಎಲ್ಲ ಮಾಡಿ ಮುಗಿಸ್ಬಹುದು.

ಮೂಲ

4) 12 ನಿಮಿಷ ವ್ಯಾಯಾಮ ಮಾಡ್ಬೇಕು

ಮನುಷ್ಯನ್ ದೇಹದಲ್ಲಿ 'ಎಂಡಾರ್ಫಿನ್' ಅನ್ನೋ ಹಾರ್ಮೋನು ಇದ್ದಷ್ಟು ಅವ್ನು ಖುಷಿಯಾಗಿರ್ತಾನಂತೆ. ನಾವು ಜಾಗಿಂಗ್, ಯೋಗಾಸನ, ವ್ಯಾಯಾಮ್ ಮಾಡೋವಾಗ್ಲೂ ಈ ಎಂಡಾರ್ಫಿನ್ ದೇಹದಲ್ಲಿ ಹೆಚ್ಚಾಗುತ್ತೆ. ಇದರಿಂದ ಟೆನ್ಷನ್ ಕಡಿಮೆ ಆಗಿ, ಮಿದುಳು ಅದರ ಪೂರ್ತಿ ತಾಕತ್ತು ತೋರ್ಸುತ್ತೆ. ಅಲ್ಲದೆ ನೀವು ನಿಮ್ ಬಗ್ಗೆ ಯೋಚ್ನೆ ಮಾಡೋದನ್ನ ಕಲೀತೀರಿ. ದಿವ್ಸ ವ್ಯಾಯಾಮ ಮಾಡೋದ್ರಿಂದ, ಹಿಡಿದ ಕೆಲ್ಸಾನ ಕಷ್ಟ ಬಿದ್ದು ಪೂರ್ತಿ ಮಾಡ್ಬೇಕು ಅನ್ನೋದೂ ಮಿದುಳಿಗೆ ಅರ್ಥ ಆಗುತ್ತೆ. ಇದೆಲ್ಲ ಪಾಸಿಟಿವಿಟಿ ಹೆಚ್ಸುತ್ತೆ.

ಮೂಲ

5) 2 ನಿಮಿಷ ಧ್ಯಾನ ಮಾಡ್ಬೇಕು

ಎರಡೇ ಎರಡು ನಿಮಿಷ ಧ್ಯಾನ ಮಾಡೋದ್ರಿಂದ ತುಂಬ ಪ್ರಯೋಜನ ಇದೆ. ಒಂದು ಕಡೆ ಶಾಂತವಾಗಿ ಕೂತು, ನಿಮ್ ಉಸಿರಾಟದ್ ಮೇಲೆ ನಿಮ್ ಗಮನ ಇಡಿ. ಬೇರೆ ಯಾವುದ್ರ ಬಗ್ಗೆನೂ ಯೋಚ್ನೆ ಮಾಡ್ಬೇಡಿ. ಇದ್ರಿಂದ ಕೈಯಲ್ಲಿರೋ ವಿಷಯದ್ ಬಗ್ಗೆ ಮಾತ್ರ ಯೋಚ್ನೆ ಮಾಡೋ ಶಕ್ತಿ ಹೆಚ್ಚಾಗುತ್ತೆ. ದಿವ್ಸ ಇದನ್ನ ಅಭ್ಯಾಸ ಮಾಡ್ಕೊಂಡ್ರೆ ನಿಧಾನಕ್ಕೆ ಪಾಸಿಟಿವಿಟಿ ಹೆಚ್ಚಾಗುತ್ತೆ.

ಮೂಲ

ಬೆಳಿಗ್ಗೆ ಸ್ವಲ್ಪ ಜಾಸ್ತಿ ಟೈಮ್ ಇದ್ದ ದಿವ್ಸ ಬೇಕಿದ್ರೆ ಇದನ್ನೆಲ್ಲ ಜಾಸ್ತಿ ಹೊತ್ತು ಮಾಡ್ಬಹುದು. ಈ ಅಭ್ಯಾಸಗಳನ್ನ ರೂಢಿ ಮಾಡ್ಕ್ಕೊಂಡ್ರೆ ನೀವು ಹೆಚ್ಚು ಪಾಸಿಟಿವ್ ಆಲೋಚನೆಗಳನ್ನ ಮಾಡ್ತೀರಿ. ನಿಮ್ಮ ದಿನವೂ ಚೆನ್ನಾಗಿರುತ್ತೆ. ಅಂದ್ಕೊಂಡ ಕೆಲ್ಸ ಎಲ್ಲ ಅಚ್ಚುಕಟ್ಟಾಗಿ ಮಾಡಿ ಮುಗಿಸ್ತೀರಿ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: