ಕುಡಿದ ನೀರು ಮೈಗ್ ಹತ್ತಬೇಕಾದರೆ ಈ 12 ಮರ್ಥೋಗಿರೋ ನಿಯಮ ಪಾಲಿಸಿ

ಆಯುರ್ವೇದದ ಪ್ರಕಾರ ಹೇಳೋದಾದ್ರೆ

ಹೆಂಗಸು, ನೀರು

ನೀರಿಲ್ಲದೆ ಬದುಕಕ್ಕಾಗಲ್ಲ, ಆದರೆ ಅದನ್ನು ಕುಡಿಯೋದಕ್ಕೂ ಒಂದು ರೀತಿ-ನೀತಿ ಇದೆ. ಹೇಗ್-ಹೇಗೋ ಕುಡಿದರೆ ಬದುಕು ಚೆನ್ನಾಗಿರಲ್ಲ. ಆಯುರ್ವೇದದ ಪ್ರಕಾರ ಸರಿಯಾಗಿ ನೀರು ಕುಡಿಯೋದು ಅಂದ್ರೆ ಏನು ಅಂತ ಇಲ್ಲಿ ಕೆಳಗೆ ಪಟ್ಟಿ ಮಾಡಿದೀವಿ, ಓದಿ. ಇದರಲ್ಲಿ ಹಲವಾರು ನಿಯಮಗಳ್ನ ಸಾಮಾನ್ಯವಾಗಿ ಜನ ಪಾಲಿಸೋದೇ ಇಲ್ಲ... ಅದಕ್ಕೇ ಇತ್ಟೀಚೆಗೆ ಆರೋಗ್ಯದ ತೊಂದರೆಗಳು...

1. ಕೂತ್ಕೊಂಡ್ ಕುಡೀರಿ.

ನಿಂತುಕೊಂಡು, ಓಡಿಕೊಂಡು, ಮಲಗಿಕೊಂಡು, ಎಲ್ಲಾ ಕುಡೀಬೇಡಿ.

watersittingpopsugar-com.jpgpopsugar

2. ಗುಟುಕು-ಗುಟುಕಾಗಿ ಕುಡೀರಿ. ಇಡೀ ಲೋಟ ಒಟ್ಟಗೆ ಕುಡೀಬೇಡಿ.

ಹೀಗೆ ನಿಧಾನವಾಗಿ ಕುಡಿದರೆ ನೀರು ತಾನು ಮಾಡಬೇಕಾದ ಕೆಲಸ ಮಾಡತ್ತೆ.

sipwatermilitarycom.jpgmilitary

3. ಒಂದೇ ಸಲ ಜಾಸ್ತಿ ನೀರು ಕುಡಿಯೋ ಬದಲು ದಿನದಲ್ಲಿ ಹಲವಾರು ಬಾರಿ ಕುಡೀರಿ.

ಹೀಗೆ ಮಾಡೋದ್ರಿಂದ ದೇಹ ಹೆಚ್ಚು ನೀರು ಉಳಿಸಿಕೊಳ್ಳುತ್ತೆ.

celluliteandhydrationletstalkcellulite-com.jpgletstalkcellulite

4. ನೀರ್ನ ಫ್ರಿಜ್-ಗಿಜ್ಜಲ್ಲಿ ಇಟ್ಟು ತಣ್ಣಗೆ ಮಾಡಿಕೊಂಡು ಕುಡೀಬೇಡಿ.

ನೀರು ನಿಮ್ಮ ಮೈ ತಾಪಮನದ್ದಾಗಿದ್ದರೆ ಉತ್ತಮ. ಬಿಸಿ/ಬೆಚ್ಚಗೆ ಮಾಡ್ಕೊಂಡು ಕುಡಿದರೂ ಪರವಾಗಿಲ್ಲ. ಆದರೆ ತಣ್ಣಗಾದಷ್ಟೂ ತಿಂದಿದ್ದು ಜೀರ್ಣ ಆಗೋದು ಕಷ್ಟ.

hotwaterblog.homeshop18com.jpghomeshop18

5. ಆಯುರ್ವೇದ ಗೊತ್ತಿಲ್ಲದಿರೋರು ಏನೇ ಹೇಳಲಿ, ಊಟ/ತಿಂಡಿ ತಿಂತಾ ತಿಂತಾನೇ ಚೂರುಚೂರು ನೀರು ಕುಡೀರಿ.

ಈ ನಿಯಮವನ್ನಂತೂ ಜನ ಪಾಲಿಸೋದೇ ಇಲ್ಲ. ಹೀಗೆ ಮಾಡೋದು ತಪ್ಪು ಅಂತಾನೇ ಜನ ತಿಳಿದಿದ್ದಾರೆ. ಆದರೆ ಇದರಿಂದ ತಿಂದಿದ್ದರಲ್ಲಿ ನೀರು ಸೇರಿಕೊಂಡು ಇನ್ನಷ್ಟು ಚೆನ್ನಾಗಿ ಅರಗುತ್ತೆ.

drinkwaterthedailybeastcom.jpgthedailybeast

6. ಊಟಕ್ಕೆ ಕೂರಕ್ಕಿಂತ ಮುಂಚೆ ಅಥವಾ ಊಟ ಆದ ಕೂಡಲೆ ನೀರು ಕುಡೀಬೇಡಿ.

ಒಂದು ಗಂಟೆಯಾದರೂ ಗ್ಯಾಪ್ ಇರ್ಲಿ. ಇದರಿಂದ ಜೀರ್ಣಕ್ರಿಯೆ ಸುಲಭವಾಗಿ ಆಗುತ್ತದೆ. ಜೀರ್ಣಕ್ಕೆ ಜಠರಾಗ್ನಿ ಬೇಕು. ನೀರಿನಿಂದ ಅದನ್ನ ಆರಿಸಿಕೊಂಡಂತಾಗಬಾರದು.

eatingwithwateryogaforhealthyaging.blogspot-com.jpgyogaforhealthyaging

7. ಬಾಯಾರಿಕೆ ಆದಾಗ ನೀರು ಕುಡಿಯದೆ ಇರಬೇಡಿ. ಹಾಗೇ, ನೀರಲ್ಲದೆ ಬೇರೆ ಏನೂ ಕುಡೀಬೇಡಿ.

ಬಾಯಾರಿಕೆ ಆದಾಗ ದೇಹ ನೀರು ಕೇಳ್ತಾ ಇರತ್ತೆ. ಕಾಫಿ/ಟೀ, ಜೂಸು-ಗೀಸು, ಕೋಲ್ಡ್ ಡ್ರಿಂಕು, ಇವೆಲ್ಲ ದೇಹಕ್ಕೆ ಬೇಕಾಗಿರಲ್ಲ.

excessivewaterdrinkingmirrordailycom.jpgmirrordaily

8. ನಿಮಗೆ ಎಷ್ಟು ಬೇಕು ಅನ್ನಿಸುತ್ತೋ ಅಷ್ಟು ಕುಡೀರಿ. ಬೇರೆಯವರ ಮಾತು ಕೇಳಬೇಡಿ.

ಕೆಲವರು ದಿನಕ್ಕೆ ಇಷ್ಟು ಲೀಟರ್ ಕುಡೀಬೇಕು, ಅಷ್ಟು ಲೋಟ ಕುಡೀಬೇಕು ಅಂತಾರೆ. ಅದೆಲ್ಲ ಬಿಟ್ಟಾಕಿ.

steelglassyahoonewsphotos-tumblrcom.jpgyahoonewsphotos

9. ಉಚ್ಚೆ ಹಳದಿ ಬಣ್ಣದ್ದಾಗಿದ್ದರೆ ನೀವು ಸರಿಯಾಗಿ ನೀರು ಕುಡೀತಿಲ್ಲ ಅಂತ ಅರ್ಥ. ಕುಡೀರಿ.

ಇದರಿಂದ ಕಿಡ್ನಿ ಗಿಡ್ನಿ ಎಲ್ಲಾ ಚೆನ್ನಾಗಿರುತ್ತೆ.

urine_virginpure-com.jpgvirginpure

10. ತುಟಿ ಒಣಗಿದ್ದರೆ ನೀವು ಸರಿಯಾಗಿ ನೀರು ಕುಡೀತಿಲ್ಲ ಅಂತ ಅರ್ಥ. ಕುಡೀರಿ.

ತುಟಿಗೆ ನೀರು ಬೀಳದೆ ಹೋದ್ರೆ ಒಣಗದೆ ಇನ್ನೇನಾಗುತ್ತೆ? :-)

lipslivestrongcom.jpglive

11. ಬೆಳಗ್ಗೆ ಎದ್ದ ಕೂಡಲೆ ಬೇರೆ ಏನಾದರೂ ಕುಡಿಯುವ/ತಿನ್ನುವ ಮುಂಚೆ ಚೆನ್ನಾಗಿ ನೀರು ಕುಡೀರಿ

ಈ ಒಂದು ಅಭ್ಯಾಸ ಮಾಡ್ಕೊಂಡ್ರೆ ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೇದು. ಎದ್ದ ಕೂಡಲೆ ಕಾಫಿ/ಟೀ ಕುಡಿಯೋರು ಗಮನಿಸಿ.

mornshorthealthytips.blogspot-com.jpgshorthealthytips

12. ತಾಮ್ರದ ಪಾತ್ರೆಯಲ್ಲಿ ರಾತ್ರಿಯೆಲ್ಲ ಇಟ್ಟ ನೀರು ಕುಡಿಯಕ್ಕೆ ಅತ್ಯುತ್ತಮ

ಇದರಿಂದ ರೋಗಾಣುಗಳು ದೇಹಕ್ಕೆ ಸೇರಲ್ಲ.

copperishafoundationorg.jpgishafoundation

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ಚಂದ್ರ ಇಲ್ಲದೆ ಹೋದರೆ ಭೂಮಿಗೆ ಏನಾಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯೋಚನೇನೂ ಮಾಡಕ್ಕಾಗಲ್ಲ

ನಮ್ಮ ಭೂಮಿಗೆ ತುಂಬಾ ಹತ್ತಿರದವನು ಚಂದ್ರ. ಭೂಮಿ ಮೇಲಿರೋ ಎಲ್ಲಾ ಜೀವಿಗಳ ವಿಕಾಸಕ್ಕೆ ಸಹಾಯ ಮಾಡಿರೋದು ಮಾತ್ರ ಅಲ್ಲ, ನಮ್ಮ ಭೂಮಿ ಸರಿಯಾಗಿ ವಿಕಾಸ ಆಗಕ್ಕೂ ಸಹಾಯ ಮಾಡಿದಾನೆ ಅಂತಾರೆ. ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಷ್ಟು ದೊಡ್ಡದಾಗಿರೋ ಒಂದು ಗ್ರಹದ್ ಚೂರು ನಮ್ಮ ಭೂಮಿಗೆ ಬಡೀತಂತೆ. ಆಗ ಹುಟ್ಟಿದೋನೇ ಚಂದ್ರ. ಭೂಮಿಯಿಂದ ಬೇರೆ ಆದ್ರೂ ಅದಿಕ್ಕೆ ಅಂಟ್ಕೊಂಡೇ ಅವತ್ತಿಂದ ಸುತ್ತಾ ಇದಾನೆ.

ಅದೇನೋ ಸರಿ; ಇವನೇನಾದ್ರೂ ಇಲ್ದೇ ಹೋದ್ರೆ ಏನಾಗತ್ತೆ? ಈ ಕೆಳಗಿನ ಐದು ಅಂಶ ಅಂತೂ ಗ್ಯಾರಂಟಿ ಅನ್ನತ್ತೆ ವಿಜ್ಞಾನ. ನೀವೇ ನೋಡಿ...

1. ರಾತ್ರಿ ಕತ್ಲೋ ಕತ್ತಲು!

ಚಂದ್ರ ಇಲ್ದೇ ಇದ್ರೆ ರಾತ್ರಿ ಕತ್ಲು ಸಿಕ್ಕಾಪಟ್ಟೆ ಜಾಸ್ತಿ ಆಗತ್ತೆ. ಚಂದ್ರ ಬಿಟ್ರೆ ದೊಡ್ಡದಾಗಿ ಕಾಣೋದು ಶುಕ್ರ. ಆದ್ರೆ ಶುಕ್ರನ್ ಬೆಳಕು ಕತ್ಲೆ ಹೋಗ್ಸಲ್ಲ. ಶುಕ್ರ ತುಂಬಾ ದೊಡ್ಡದಾಗಿ ಕಾಣ್ವಾಗ ಇರೋದಕ್ಕಿಂತ ಪೂರ್ಣಚಂದ್ರ 2000 ಪಟ್ಟು ದೊಡ್ಡದಾಗಿ ಕಾಣ್ತಾನೆ.

2. ವರ್ಷದಲ್ಲಿ 1,100-1,400 ದಿನ, ದಿನಕ್ಕೆ 6 - 8 ಗಂಟೆ ಆಗೋಗತ್ತೆ

ಯಾಕಂದ್ರೆ ಭೂಮಿ ತಿರುಗೋದಿಕ್ಕೆ ಚಂದ್ರ ಒಂಥರಾ ಬ್ರೇಕ್ ಹಾಕಿದಾನೆ. ಅವನ ಗುರುತ್ವಾಕರ್ಷಣೆಯಿಂದ ಭೂಮಿ ಸ್ಪೀಡು ಕಮ್ಮಿ ಆಗಿದೆ. ಈ ಬ್ರೇಕ್ ಇಲ್ದೇ ಇದ್ರೆ ಭೂಮಿ ಇನ್ನೂ ತುಂಬಾ ವೇಗವಾಗಿ ತಿರುಗ್ತಾ ಇತ್ತು. ಕಣ್ಮುಚ್ಚಿ ಕಣ್ ತೆಗೆಯೋದ್ರಲ್ಲಿ ಒಂದು ದಿನ ಮುಗಿಯತ್ತೇನೋ, ಚಂದ್ರ ಇಲ್ದಿದ್ರೆ

3. ಸಮುದ್ರದಲ್ಲಿ ಅಲೆಗಳು ಏಳಲ್ಲ

ಸೂರ್ಯ ಭೂಮಿಗಿಂತ 400 ಪಟ್ಟು ದೊಡ್ಡದು, ಸುಮಾರು 400 ಪಟ್ಟು ದೂರಾನೂ ಇದೆ. ಅದಕ್ಕೆ ಇವೆರಡೂ ಭೂಮಿಯಿಂದ ಒಂದೇ ಗಾತ್ರ ಇರೋ ಹಾಗೆ ಕಾಣೋದು. ಸೂರ್ಯ ಚಂದ್ರಂಗಿಂತ 27 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಹಾಗಂತ ಚಂದ್ರ ಇಲ್ದೆ ಹೋದ್ರೆ ಸಮುದ್ರದಲ್ಲಿ ಏಳೋ ಅಲೆ ಇನ್ನೂ ದೊಡ್ದ ಗಾತ್ರದ್ದಿರತ್ತೆ ಅಂತ ಅನ್ಕೊಂಡ್ರೆ ತಪ್ಪು. ಸೂರ್ಯನಿಂದ ಉಂಟಾಗೋ ಅಲೆಗೆ ಚಂದ್ರನ ಅಲೆಯ 40% ಶಕ್ತಿ ಮಾತ್ರಾನೇ ಇರೋದು. ಈಗ ಉಕ್ಕೋ ಎತ್ರಕ್ಕಿಂದ ಕಾಲು ಭಾಗ ಉಕ್ಕತ್ತೇನೋ ಅಷ್ಟೇ.

4. ಗ್ರಹಣಗಳೇ ಆಗಲ್ಲ

ಚಂದ್ರಗ್ರಹಣಾನೂ ಇಲ್ಲ; ಸೂರ್ಯಗ್ರಹಣಾನೂ ಇಲ್ಲ – ಸೂರ್ಯ ಮತ್ತೆ ಭೂಮಿ ಮಧ್ಯ ಯಾರೂ ಬರಲ್ವಲ್ಲ ಆಗ. ಚಂದ್ರ ಬಿಟ್ರೆ ಭೂಮಿ ಮತ್ತೆ ಸೂರ್ಯನ ಮಧ್ಯೆ ಹಾಯೋದು ಶುಕ್ರಗ್ರಹ ಮಾತ್ರ. ಅಂದ್ರೆ ಶುಕ್ರಗ್ರಹಣ! ಅದ್ಯಾವಾಗಾಗತ್ತೋ ಯಾರ್ ಬಲ್ರು?

5. ಪರಿಸರದಲ್ಲಿ ಏನೇನೋ ಏರುಪೇರುಗಳಾಗುತ್ತವೆ

ಚಂದ್ರ ಭೂಮಿನ ಹಿಡ್ಕೊಂಡಿದಾನೋ, ಅಥವಾ ಭೂಮಿ ಚಂದ್ರನ್ನ ಹಿಡ್ಕೊಂಡಿದ್ಯೋ! ಅಂತೂ ಇವೆರಡೂ ಒಂದನ್ನೊಂದು ಕಂಟ್ರೋಲ್  ಮಾಡ್ತಿವೆ. ಆದ್ರೆ ಚಂದ್ರ ಇಲ್ದೇ ಇದ್ರೆ ಭೂಮಿ ಅಕ್ಷರೇಖೆ ಆಗ್ಗಾಗ್ಗ ವಿಪರೀತವಾಗಿ ಅಚಾನಕ ಬದಲಾಗಿ ಬಿಡತ್ತೆ. ಈಗ ಚಂದ್ರನ ಪ್ರಭಾವದಿಂದ ಸರಿಯಾಗಿ 23.5 ಡಿಗ್ರೀನಲ್ಲೇ ತಿರುಗ್ತಾ ಇದೆ. ಚಂದ್ರ ಏನಾರ ಇಲ್ಲಾ ಅಂದ್ರೆ ಭೂಮಿ ತುಂಬಾ ತಿರಗ್ ಬಹುದು ಅಥವಾ ತಿರಗ್ದೇ ನೆಟ್ಟಗೆ ಇರಬಹುದು. ಆಗ ಋತುಗಳೇ ಇಲ್ದೇ ಹೋಗಬಹುದು; ಅಥವಾ ವಿಚಿತ್ರ ಅನ್ನೋ ತರ ಋತುಗಳು ಬರಬಹುದು. ನಾವು ಬುಧಗ್ರಹದ್ ತರ ಸಮತಟ್ಟಾಗಿ ಸುತ್ತಾ ಇರ್ತೀವಿ ಅಥವಾ ಯುರೇನಸ್ ತರ ಚಿತ್ರವಿಚಿತ್ರ ವಾತಾವರಣದಲ್ಲಿ ಬಿದ್ದು ಹೊರಳಾಡ್ತಿರ್ತೀವಿ!!

ಅದಕ್ಕೇ ಹೇಳೋದು, ಭೂಮಿಗೂ ಸೂರ್ಯಂಗೂ ಮಧ್ಯ ಏನೇನೇ ಬಂದ್ರೂ, ಭೂಮಿಗೂ ಚಂದ್ರಂಗೂ ಮಧ್ಯ ಏನೂ ಬರೋದಿಲ್ಲ ಅಂತ. ಅಂತ ಅಪೂರ್ವವಾದ ಸಂಬಂಧ ಭೂಮಿ-ಚಂದ್ರಂದು. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: