ನೀರಿನ ಬಗ್ಗೆ ಕೆಲವರಿಗೆ ಮಾತ್ರ ಗೊತ್ತಿರೋ ಈ ಗುಟ್ಟು ಕೇಳಿದ ತಕ್ಷಣ ಜೀವನಕ್ಕೆ ಹೊಸ ಅರ್ಥ ಬರತ್ತೆ

ಮನುಷ್ಯ ಹೆಚ್ಚು-ಕಡಿಮೆ ಬರೀ ನೀರೇ

ಇತ್ತೀಚಿನ ಸಂಶೋಧನೆಗಳಿಂದ ನೀರಿಗೆ ಒಂದು ಅದ್ಭುತವಾದ ಗುಣ ಇರೋ ಸತ್ಯ ಹೊರಬಂದಿದೆ.

ಅದೇನು ಅಂತ ನಿಮಗೆ ಗೊತ್ತಾದ್ರೆ ನೀವು ನಿಮ್ನ, ನಿಮ್ಮ ಸುತ್ತಮುತ್ತಲ ಜನರನ್ನ, ಇಡೀ ಪ್ರಪಂಚವನ್ನ ನೋಡೋ ರೀತಿ ಬದಲಾಗಿ ಹೋಗುತ್ತೆ.

beautiful-water-drop-eskipaper_com.jpgeskipaper

ಕಿವಿ ಕೊಟ್ಟು ಕೇಳಿ: ನೀರು ಸುತ್ತಮುತ್ತಲ ಪ್ರಪಂಚವನ್ನ ‘ಅನುಭವಿ’ಸುತ್ತೆ. ಆ ಅನುಭವವನ್ನ ಅದು ನೆನಪಿನಲ್ಲೂ ಇಟ್ಟುಕೊಳುತ್ತೆ. ನಾವು ಮನುಷ್ಯರು ನೀರಿಗೆ ಒಳ್ಳೇ ಅನುಭವ ಕೊಟ್ಟರೆ ಅದು ನಲಿಯುತ್ತೆ, ಕೆಟ್ಟ ಅನುಭವ ಕೊಟ್ಟರೆ ನೊಂದುಕೊಳ್ಳುತ್ತೆ...

dr-emoto-truthcontrol_com.jpgtruthcontrol

ನಂಬಿಕೆ ಬರ್ತಿಲ್ವಾ? ಜಪಾನಲ್ಲಿ ಡಾ. ಮಸಾರು ಎಮೊಟೊ ಅನ್ನೋರು ಇದನ್ನೆಲ್ಲ ಪ್ರಪಂಚಕ್ಕೆ ಮೊಟ್ಟ ಮೊದಲ ಬಾರಿಗೆ ತಿಳಿಸಿದಾಗಲೂ ಹಲವರಿಗೆ ನಂಬಿಕೆ ಬರಲಿಲ್ಲ.

ಅವರು ಮಾಡಿದ್ದಾದರೂ ಏನು? ಬೇರೆ ಬೇರೆ ನೀರಿನ ಸ್ಯಾಂಪಲ್ ತಂದು ಫ್ರೀಜ಼ರಲ್ಲಿಟ್ಟು ಅದರಲ್ಲಿ ಎಂಥಾ ಹರಳುಗಳು ಕಾಣಿಸುತ್ತವೆ ಅಂತ ಮೈಕ್ರೋಸ್ಕೋಪಲ್ಲಿ ನೋಡ್ತಾ ಬಂದ್ರು.

scientific-researcher-wisegeek.jpgwisegeek

ಆ ಸಂಶೋಧನೆಯಿಂದ ಹೊರಬಂದ ಮಾಹಿತಿ ಜಗತ್ತನ್ನೇ ಅಲ್ಲಾಡಿಸ್ತಾ ಇದೆ. ಬೇರೆ ಬೇರೆ ಅನುಭವಗಳಿಗೆ ಒಳಗಾದ ನೀರಿನ ಐಸು ಮೈಕ್ರೋಸ್ಕೋಪಲ್ಿ ಹೇಗೆ ಕಾಣುತ್ತೆ ಅಂತ ನೀವೇ ನೋಡಿ:

ಮಲಿನವಾದ ನೀರು:

ಮಾಲಿನ್ಯದ ತೊಂದರೆ ಇರೋ ಯೋಡೋ ನದಿ ನೀರು ಮೈಕ್ರೋಸ್ಕೋಪಲ್ಲಿ ಹೀಗೆ (ಕೆಟ್ಟದಾಗಿ) ಕಾಣಿಸಿತು...

emoto-yodoriver-contaminated.jpg

ಪ್ರಕೃತಿಯಲ್ಲಿ ತನ್ನಷ್ಟಕ್ಕೆ ತಾನು ಹರೀತಿರೋ ಸ್ವಚ್ಛವಾದ ನೀರು:

ಹೊರೊಬೆತ್ಸು ನದಿನೀರಲ್ಲಿ ಕಾಣಿಸಿದ್ದು ಈ ಸುಂದರವಾದ ಷಡ್ಭುಜಾಕೃತಿಯ ಹರಳು...!

emoto-horobetsu-nocontamination.jpg

ನಗರೀಕರಣಕ್ಕೆ ತುತ್ತಾದಮೇಲೆ ಸಿಗೋ ನಲ್ಲಿ ನೀರು:

ಟೋಕ್ಯೋನಲ್ಲಿ ನಲ್ಲಿ ನೀರ್ನ ಐಸ್ ಮಾಡಿ ಮೈಕ್ರೋಸ್ಕೋಪಲ್ಲಿ ಕಂಡಾಗ ಅದು ಇಷ್ಟು ಕೆಟ್ಟದಾಗಿ ಕಾಣ್ತು:

emoto-tokyo-tapwater.jpg

ನಗರಗಳಿಗೆ ಬರೋ ಮುಂಚೆ ನದಿ ನೀರು:

ಈ ಸ್ಯಾಂಪಲ್ನ ಸಾನ್ಬು-ಇಚಿ ಯೂಸುಯಿ ಅನ್ನೋ ನದಿಯಿಂದ ತೊಗೊಂಡಿದ್ದು... ನಗರೀಕರಣ ಆಗುವ ಮುಂಚೆ! ಎಷ್ಟು ಚೆನ್ನಾಗಿ ಕಾಣುತ್ತೆ ನೋಡಿ:

emoto-Sanbu-ichi-yusui-spring.jpg

ನೀರಿಗೆ ಕಿವಿ ಇಲ್ಲ, ಆದರೆ ಆದರೆ ಧ್ವನಿಯ ಅಲೆಗಳು ಅದರ ಮೇಲೆ ಪ್ರಭಾವ ಬೀರುತ್ತವೆ...

ಸಂಗೀತದಿಂದ ನೀರಿನ ಮೇಲೆ ಏನು ಪ್ರಭಾವ ಆಗತ್ತೆ ಅಂತ ಕಂಡುಹಿಡಿಯಕ್ಕೆ ಎರಡು ಸ್ಪೀಕರ್ ನಡುವೆ ನೀರಿನ ಬಾಟಲ್ ಇಟ್ಟು ಆಮೇಲೆ ಅದನ್ನ ಫ್ರೀಜ಼್ ಮಾಡಿ ಮೈಕ್ರೋಸ್ಕೋಪಲ್ಲಿ ನೋಡ್ತಾ ಬಂದ್ರು...

waterbottle-speakers-emoto-peace-project_com.jpg

ಕೂಗಾಟ, ಕಿರುಚಾಟ ಕೇಳಿದ ನೀರು:

ನೀರಿಗೆ ಬರೀ ಕೂಗಾಟ ಕಿರುಚಾಟ ಇರೋ ಹೆವಿ ಮೆಟಲ್ ‘ಸಂಗೀತ’ ಕೇಳಿಸಿದಾಗ ಅದರ ಐಸು ಮೈಕ್ರೋಸ್ಕೋಪಲ್ಲಿ ಕಂಡಿದ್ದು ಹೀಗೆ... ಒಂಥರಾ ಚೆಲ್ಲಾಪಿಲ್ಲಿ...

emoto-heavymetal.jpg

ಒಳ್ಳೇ ಸಂಗೀತ ಕೇಳಿದ ನೀರು:

ಯೊಹಾನ್ ಸೆಬಾಸ್ಟಿನ್ ಬಾಕ್ ಅವರ ‘ಗೋಲ್ಡ್ ಬರ್ಗ್ ವೇರಿಯೇಶನ್ಸ್’ ಅನ್ನೋ ಸಂಗೀತ ಕೇಳಿದ ನೀರು ಐಸಾದಮೇಲೆ ಮೈಕ್ರೋಸ್ಕೋಪಲ್ಲಿ ಕಂಡಿದ್ದು ಹೀಗಿತ್ತು....!

emoto-bach-goldberg-variations.jpg

ಅಷ್ಟೇ ಅಲ್ಲ, ನೀರಿಗೆ ನಾವು ಏನು ಹೇಳ್ತೀವಿ ಅನ್ನೋದು ಕೂಡ ಅದರ ಮೇಲೆ ಪ್ರಭಾವ ಬೀರುತ್ತೆ. ಇದಕ್ಕೆ ನೀರಿನ ಬಾಟಲ್ಗಳಿಗೆ ಬೇರೆ ಬೇರೆ ಸಂದೇಶಗಳ್ನ ಬರೆದು ಅಂಟಿಸ್ತಾ ಬಂದ್ರು...

emoto-showing-letters.jpg

‘ಥೂ ಪೆದ್ದು!’ ಅನ್ನೋ ಸಂದೇಶ ಪಡೆದ ನೀರು:

ನೀರಿಗೆ ಇದು ಕೇಳಿಸಿತು ಅಂತಲ್ಲ, ಮಾತೇ ಆಡದೆ ನೀರ್ನ ‘ಥೂ ಪೆದ್ದು!’ ಅಂತ ಕರೆದರೆ ಏನಾಗುತ್ತೆ ಅನ್ನೋ ಪ್ರಯೋಗ ಇದು (ಎಮೊಟೋ ಅವರು ಜಪಾನೀಸಲ್ಲಿ ಬರೆದಿದ್ದು). ಈ ನೀರಿನ ಐಸ್ ಕಂಡಿದ್ದು ಹೀಗೆ... ಮತ್ತೆ ಚೆಲ್ಲಾಪಿಲ್ಲಿ...

emoto-youfool.jpg

‘ಧನ್ಯವಾದ!’ ಅನ್ನೋ ಸಂದೇಶ ಪಡೆದ ನೀರು:

ಮತ್ತೆ, ನೀರಿಗೆ ಇದು ಕೇಳಿಸಿತು ಅಂತಲ್ಲ, ಮಾತೇ ಆಡದೆ ನೀರ್ಗೆ ‘ಧನ್ಯವಾದ’ ಅಂತ ಕರೆದರೆ ಏನಾಗುತ್ತೆ ಅನ್ನೋ ಪ್ರಯೋಗ ಇದು. ಈ ನೀರಿನ ಐಸ್ ಕಂಡಿದ್ದು ಹೀಗೆ... ಎಷ್ಟು ಚೆನ್ನಾಗಿದೆ ನೋಡಿ:

emoto-thankyou.jpg

‘ಪ್ರೀತಿ ಮತ್ತು ಪ್ರಶಂಸೆ’ ಅನ್ನೋ ಸಂದೇಶ ಪಡೆದ ನೀರು:

ಈ ನೀರಿನ ಐಸ್ ಕಂಡಿದ್ದು ಹೀಗೆ... ಎಷ್ಟು ಚೆನ್ನಾಗಿದೆ ನೋಡಿ:

emoto-love-appreciation.jpg

ನೀರಿಗೆ ಕೇಳಿಸಿಕೊಳಕ್ಕೆ, ಓದಕ್ಕೆ ಬರತ್ತೆ ಅಂತಾಯಿತು... ಹಾಗಾದರೆ ಪೂಜೆ ಮಾಡುವ ಮುಂಚೆ, ಮಾಡಿದ ಮೇಲೆ ಬೇರೆಯಾಗಿ ಕಾಣುತ್ತಾ? ಹೌದು!

ಯಾವುದೇ ಪೂಜೆ ಮಾಡುವ ಮುಂಚೆ:

ಈ ನೀರ್ನ ಫೂಜಿವಾರ ಡ್ಯಾಂನಲ್ಲಿ ತೊಗೊಂಡಿದ್ದು... ಎಷ್ಟು ಕೆಟ್ಟದಾಗಿ ಕಾಣುತ್ತೆ!

emoto-before-prayer.jpg

ಅದೇ ನೀರಿಗೆ ಬೌದ್ಧ ಪೂಜೆ ಮಾಡಿದ ಮೇಲೆ:

ಪೂಜೆ ಮಾಡಿದವರು ಒಮಿಯಾ ನಗರದ ಜ್ಯೂಹಿನ್ ದೇವಸ್ಥಾನದ ರೆವೆರೆಂಡ್ ಕಾಟೋ ಹಾಕಿ ಅನ್ನೋರು... ಪೂಜೆ ಮಾಡಿದ ಕೆಲವೇ ಕ್ಷಣಗಳಲ್ಲಿ ಡ್ಯಾಂ ನೀರಲ್ಲಿ ಈ ಸುಂದರವಾದ ಹರಳುಗಳು ಕಾಣಿಸಲಿಕ್ಕೆ ಶುರುವಾದವು:

emoto-after-prayer.jpg

ಒಟ್ಟಿನಲ್ಲಿ ಹೇಳೋದಾದ್ರೆ...ಜಗತ್ತಿನಲ್ಲಿ ಪ್ರತಿಯೊಂದೂ ತನ್ನದೇ ರೀತಿಯ ವೈಬ್ರೇಶನ್ ಅಥವಾ ಮಿಡಿತದಲ್ಲಿರುತ್ತದೆ.

ಮನುಷ್ಯರೂ ಅಷ್ಟೆ, ಅವರ ಭಾವನೆಗಳೂ ಅಷ್ಟೇ. ಆ ಮಿಡಿತದ ಪ್ರಭಾವ ನೀರಿನ ಮೇಲೆ ಆಗುತ್ತೆ ಅನ್ನೋದನ್ನ ಡಾ. ಎಮೋಟೋ ತೋರಿಸಿ ಕೊಟ್ಟಿದ್ದಾರೆ...

Raise+vibration-humansarefree_com.jpg

ಆ ನೀರು ನಮ್ಮ ದೇಹದಲ್ಲಿ ಶೇಕಡ 70ರಿಂದ 95ರಷ್ಟು ಇರುತ್ತದೆ. ಅದನ್ನೇ ನಾವು ಕುಡಿಯೋದು, ಕುಡಿಸೋದು. ಅದನ್ನೇ ನಾವು ನಮ್ಮ ಹತ್ತಿರದವರಿಗೂ ಕೊಡೋದು...

ಅಂದ ಮೇಲೆ ನಮ್ಮ ಭಾವನೆಗಳು, ನಮ್ಮ ಮನಸ್ಥಿತಿ, ಎಲ್ಲದರ ಪ್ರಭಾವವೂ ಆ ನೀರಿನ ಮೇಲೆ ಆಗಿ, ಆ ಪ್ರಭಾವ ನಮ್ಮ ಮೇಲೆ, ನಮ್ಮ ಸುತ್ತಮುತ್ತಲ ಜಗತ್ತಿನ ಮೇಲೆಲ್ಲ ಆಗೋದ್ರಲ್ಲಿ ಸಂದೇಹವಿಲ್ಲ...

ಪ್ರಾಯಶಃ ಈ ಗುಟ್ಟು ಈ ರೀತಿಯಲ್ಲಿ ಅಲ್ಲದೆ ಹೋದರೂ ಬೇರೆ ರೀತಿಯಲ್ಲಿ ನಮ್ಮ ಹಿಂದಿನವರಿಗೆ, ಅದರಲ್ಲೂ ಋಷಿಮುನಿಗಳಿಗೆ ಗೊತ್ತಿತ್ತೇನೋ...

sandiegouniontrib

ಈಗಿನವರಿಗೂ ಇದು ಗೊತ್ತಾದ ಮೇಲೆ... ನಿಜಕ್ಕೂ ಅರ್ಥ ಮಾಡಿಕೊಂಡ ಮೇಲೆ... ನೀರಿಗೆ ಮತ್ತು ನಮಗೂ ನೀರಿಗೂ ಇರುವ ಸಂಬಂಧಕ್ಕೆ ಹೊಸದೊಂದು ಅರ್ಥ ಬಂದುಬಿಡುತ್ತೆ. ನೀರೇ ಜೀವವಾಗಿರೋದರಿಂದ ಜೀವನಕ್ಕೂ ಹೊಸ ಅರ್ಥ ಬಂದುಬಿಡುತ್ತೆ... ಏನಂತೀರಿ?

ಚಿತ್ರಗಳು ಹಾಗೂ ಮಾಹಿತಿ ಮೂಲಗಳು: [1], [2]

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ನಾನು ಜೀವನದಲ್ಲಿ ಹಿಂದೆ ಬೀಳ್ತಾ ಇದೀನಿ ಅನ್ನೋ ಮುಳ್ಳು ಚುಚ್ತಾ ಇದ್ರೆ ಈ 30 ಮಾತು ನೆನಪಿಸಿಕೊಳ್ಳಿ

ವೇದಾಂತ ಗೀದಾಂತ ಅಲ್ಲ, ಸಿಂಪಲ್ ವಿಷಯಗಳು

ನಮ್ಮ ಪ್ರಕಾರ ನಾವು ಜೀವನದಲ್ಲಿ ಎಷ್ಟೇ ಗೆಲುವು ಸಾಧಿಸಿದ್ದರೂ… ನಮ್ಮ ಪ್ರಕಾರ ನಮಗೆ ಬೇಕಾದ್ದೆಲ್ಲ ಇದ್ದರೂ… ಬೇಕಾದೋರೆಲ್ಲ ಇದ್ದರೂ… ಜೀವನ ಒಂದೊಂದ್ಸಲ ನಮಗೆ "ನೀನು ಹಿಂದೆ ಬಿದ್ದಿದೀಯ" ಅನ್ನೋ ಸಂದೇಶ ಕೊಡುತ್ತೆ. ಈ ಸ್ಪರ್ಧಾತ್ಮಕ ಜಗತ್ತಿನ ವಿಚಿತ್ರ ಇದು. ಇಂಥ ಪ್ರಪಂಚದಲ್ಲಿ ಅನವಶ್ಯಕವಾಗಿ ಕೀಳರಿಮೆ ಮೂಡಬಾರದು ಅನ್ನೋದಾದರೆ ಈ 30 ಮಾತು ನೆನಪಿಸಿಕೊಳ್ಳಿ. ಇವೆಲ್ಲ ಏನು ದೊಡ್ಡ ವೇದಾಂತ ಅಲ್ಲ, ಆದರೂ ನಿಮಗೆ ತುಂಬ ಉಪಯೋಗಕ್ಕೆ ಬರುತ್ತವೆ:

  1. ನೀವು ನಿಮ್ಮ ಕೈಯಲ್ಲಿ ಆಗೋದೆಲ್ಲ ಮಾಡ್ತಿದೀರಿ.
  2. ನಿಮ್ಮ ಕೈಯಲ್ಲಿ ಆಗೋದೆಲ್ಲ ಮಾಡ್ತಿಲ್ಲ ಅನ್ನಿಸಿದರೆ ಇನ್ನೇನ್ ಮಾಡ್ಬೋದು ಅಂತ ಯೋಚನೆ ಮಾಡಿ, ಕೆಲಸದಲ್ಲಿ ತೊಡಗಿಕೊಳ್ಳಿ.
  3. ತುಂಬಾ ಅನುಭವ ಇರೋರು ಅಥವಾ ನಿಮಗಿಂತ ತುಂಬಾ ಹಿಂದೆ ಶುರು ಮಾಡ್ಕೊಂಡೋರ್ನ ನೋಡಿ ನಾನು ಹಿಂದೆ ಇದೀನಿ ಅನ್ಕೋಬೇಡಿ. ಅವರ ಜೊತೆ ಪೈಪೋಟಿಗೆ ಇಳಿಯೋದು ಪೆದ್ದತನ.
  4. ಎಲ್ಲರಿಗೂ ಅವರದೇ ಆದ ವೇಗ ಅಂತ ಇರುತ್ತೆ.
  5. ನಿಮಗೆ ತುಂಬ ಇಷ್ಟವಿದ್ದ ಕೆಲಸ ಸಿಗದೆ ಹೋದರೆ ನೀವು ವೇಸ್ಟು ಅಂತೆನಲ್ಲ. ಜಾತಕ ಹೊಂದಲಿಲ್ಲ ಅಂತ ಅರ್ಥ!
  6. ಈಗಲೂ ನೀವು ತುಂಬಾ ಜನರಿಗಿಂತ ಮುಂದಿದೀರಿ. ನೀವು ಹಿಂದೆ ಆಗಿದ್ದ ವ್ಯಕ್ತೀನೂ ಆ ಪಟ್ಟಿಯಲ್ಲಿ ಇದಾನೆ/ಳೆ.
  7. ನಿಮಗೆ ಯಾವ ತರಹದ ಭವಿಷ್ಯ ಬೇಕಾದರೂ ರೂಪಿಸಿಕೊಳಕ್ಕೆ ಅನುಮತಿ ಇದೆ.
  8. ಜೀವನ ಅಂದ್ರೆ ಹೀಗೇ ಇರಬೇಕು ಅಂತೆನಿಲ್ಲ, ನೀವು ನಡೆಸಿದ್ದೇ ಜೀವನ.
  9. ಮೂವತ್ತನೇ ವಯಸ್ಸಿಗಿಂತ ಮುಂಚೆ ಮದುವೆ ಆಗದೆ ಹೋದರೆ ಮುಗೀತು ಕಥೆ ಅನ್ಕೋಬೇಡಿ.
  10. ಏನಾದರೂ ಆಗಿಬಿಡೋಷ್ಟು ಶ್ರಮ ಪಟ್ಟು ಕೆಲಸ ಮಾಡಿ ಉಪಯೋಗ ಇಲ್ಲ. ಅದರಿಂದ ಸಿಗೋದು ಗೆಲುವಲ್ಲ, ನಿಃಶಕ್ತಿ.
  11. ಮನಸ್ಥಿತಿ ಸರಿಯಾಗಿಲ್ಲದೆ ಇದ್ದರೆ ನಿಮಗೆ ನೀವೇ ಎಷ್ಟು ಹೇಳಿಕೊಂಡರೂ ಸ್ಫೂರ್ತಿ ಬರಲ್ಲ.
  12. ನಿಮ್ಮ ವಯಸ್ಸು ಇಪ್ಪತ್ತು-ಚಿಲ್ಲರೆ ಆದರೆ ನಿಮ್ಮ ಮುಂದೆ ಇನ್ನೂ ಇಡೀ ಜೀವನವೇ ಇದೆ, ಅದರಲ್ಲಿ ಎಂಥ ಅದ್ಭುತಗಳಾಗುತ್ತವೆ ಅಂತ ಈಗಲೇ ಹೇಳಕ್ಕಾಗಲ್ಲ.
  13. ನಿಮಗೆ ಬೇಕಾದ ಸ್ಫೂರ್ತಿ ಸಿಕ್ಕಿಲ್ಲದೆ ಇರಕ್ಕೆ ಕಾರಣ ಸರಿಯಾದ ವ್ಯಕ್ತಿ ಇನ್ನೂ‌ ಸಿಕ್ಕಿಲ್ಲದೆ ಇರೋದು ಅನ್ನಿಸುತ್ತೆ.
  14. ಯಾವಾಗಲೂ ಹೀಗೇ ತುಸುಕ್ ಅಂತ ಕೂತಿರಲ್ಲ  ನೀವು.
  15. ನಿಮ್ಮ ಭಾವನೆಗಳು ಇನ್ನಷ್ಟು ಕೆಲಸ ಮಾಡೋದಕ್ಕೆ ಪ್ರೇರಣೆ ಆಗಬೇಕು, ಕಡಿಮೆ ಕೆಲಸ ಮಾಡಕ್ಕಲ್ಲ.
  16. ಸರಿಯಾದ ಜೀವನ, ತಪ್ಪು ಜೀವನ ಅಂತ ಏನೂ ಇರಲ್ಲ.
  17. ಸಮಯ ನಿಮ್ಮ ಹತೋಟಿಗೆ ಮೀರಿದ್ದು.
  18. ಮುಂದಿನ 24 ಗಂಟೆ ಬಗ್ಗೆ ಯೋಚನೆ ಮಾಡಿ. ಅದರಲ್ಲಿ ಸಾಧಿಸಕ್ಕೆ ಆಗೋದನ್ನೆಲ್ಲ ಸಾಧಿಸಿ.
  19. ಸಾಮಾಜಿಕ ತಾಣಗಳಲ್ಲಿ ಜನ ಬರೀ ಒಳ್ಳೇ ಸುದ್ದಿಗಳು, ಒಳ್ಳೇ ಫೋಟೋಗಳ್ನೇ ಹಂಚಿಕೊಳ್ಳೋದು. ಒಳಗೆ ಏನಿರುತ್ತೋ ಯಾರಿಗ್ ಗೊತ್ತು?
  20. ಇಲ್ಲೀವರೆಗೆ ನೀವು ಏನೇನು ಸಾಧಿಸಿದ್ದೀರಿ ಅಂತ ಮೆಲಕು ಹಾಕಿ.
  21. ಸದ್ಯಕ್ಕೆ ಒಂದು ದಿನಕ್ಕಿಂತ ಹೆಚ್ಚು ಪ್ಲಾನ್ ಮಾಡಬೇಡಿ.
  22. ಇನ್ನೂ ಮಾಡಕ್ಕೆ ತುಂಬಾ ಇದೆ ಅಂತ ಯೋಚನೆ ಮಾಡ್ಕೊಂಡ್ ಕೂತ್ಕೋಬೇಡಿ. ಅದರಿಂದ ಕೆಲಸ ಬೇಗೇನು ಆಗಲ್ಲ.
  23. ಬೇಕಾದಾಗ ಸಲಹೆ, ಸಹಾಯ ಕೇಳೋದ್ರಿಂದ ನೀವು ಇನ್ನಷ್ಟು ಬುದ್ಧಿವಂತರಾಗ್ತೀರಿ, ಇನ್ನಷ್ಟು ಗಟ್ಟಿ ಆಗ್ತೀರಿ.
  24. ನಿಮಗೆ ಸಹಾಯ ಮಾಡ್ದೋರ್ನ ನೆನಪಿಸಿಕೊಳ್ಳಿ. ಆಗ ಗೊತ್ತಾಗುತ್ತೆ, ನೀವು ಒಂಟಿ ಅಲ್ಲ ಅಂತ.
  25. ಕೆಲಸ ಮುಂದಕ್ಕೆ ಹೋಗ್ತಿಲ್ಲ ಅಂದಾಗ ನಿಮ್ಮ ಪ್ರಕಾರ ಅದ್ಭುತವಾಗಿ ಕೆಲಸ ಮಾಡೋರು ಯಾರನ್ನಾದರೂ ನೆನಪಿಸಿಕೊಳ್ಳಿ. ಆಗ ಮುಂದಕ್ಕೆ ಹೋಗುತ್ತೆ.
  26. ಕಾಲೇಜ್ ಮುಗಿಸಿದ ತಕ್ಷಣ ಕೆಲಸ ಸಿಕ್ಕಿಲ್ಲದೆ ಹೋದರೆ ನೀವು ವೇಸ್ಟು ಅಂತಲ್ಲ. ನಿಮಗೆ ಸರಿ ಹೋಗೋ‌ ಕೆಲಸಗಳು ಇನ್ನೂ‌ ನಿಮ್ಮ ಕಣ್ಣಿಗೆ ಬಿದ್ದಿಲ್ಲ ಅಂತ ಅರ್ಥ.
  27. ಚೆನ್ನಾಗಿ ಜೀವನ ಮಾಡೋದು ಅಂದ್ರೆ ಯಾವುದೇ ಚಿಂತೆ ಇಲ್ಲದೆ ಜೀವನ ಮಾಡೋದು.
  28. ನಿಮ್ಮ ತಂದೆ-ತಾಯಿ ಹೇಳಿದ್ದನ್ನೇ ನೀವು ಮಾಡಬೇಕು ಅಂತಿಲ್ಲ. ನಿಮ್ಮ ದಾರಿ ನೀವು ಕಂಡ್ಕೊಳಿ.
  29. ಎಷ್ಟು ಸಲ ಬೇಕಾದರೂ, ಯಾವಾಗ ಬೇಕಾದರೂ ನಿಮ್ಮ ಮನಸ್ಸು ಬದಲಾಯಿಸಿ. ಬೇಡ ಅನ್ನೋನ್ ಯಾವನು?
  30. ಎಲ್ಲಾ ಬೇಗ್-ಬೇಗ ಮಾಡೋದೇ ಪ್ರಗತಿ ಅನ್ನೋದು ಮೂರ್ಖತನ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: