ಮಿದುಳಿಗೆ ಮತ್ತೆ ಮತ್ತೆ ಮೋಸ ಮಾಡೋ 24 ಚಿತ್ರಗಳು

ತಿರುಗ್ತಾ‌ ಇರೋದು ಅದಲ್ಲ, ನಮ್ಮ ತಲೆ :-)

ಭ್ರಾಂತಿ

ಮನುಷ್ಯನ ತಲೆ ಅಸಾಮಾನ್ಯ. ಮೆದುಳು ಯಾವ ತರ ಕೆಲಸ ಮಾಡತ್ತೆ ಅಂತ ಈ ಕೆಳಗಿನ ಫೋಟೋ ನೋಡಿ ತಿಳಿಯಿರಿ:

1. ಒಂದು ಕೆಂಪು ಗುಂಡು ಕಾಣ್ಸಿದ್ಯಾ? ಇದರಿಂದ ಇನ್ನೊಂದು ಕೆಂಪು ಗುಂಡು ಇರುವ ಕಡೆಗೆ ದಾರಿ ಹುಡುಕಿ.

ಅಲೆಅಲೆಯಾಗಿ ಹೋಗ್ತಿರೋ ಹಾಗೆ ಭಾಸ ಆಗತ್ತೆ ಅಲ್ವಾ!

moving-maze-illusion.jpg

2. ಇಲ್ಲಿ ಎಷ್ಟು ತ್ರಿಕೋನಗಳಿವೆ ಹೇಳಿ!

penrose-triangle-big.jpg

3. ಕೆಳಗಿನ ಎರಡು ಕೆಂಪು ಗೆರೆಗಳನ್ನು ನೋಡಿ. ಬಗ್ಗಿ ಹೋಗ್ತಾಯಿದೆ ಅನ್ಸತ್ತಾ?

ತಪ್ಪು! ಎರಡೂ ಸೀದಾ ಇದೆ.

186117.jpg

4. ಈ ಚೌಕ ಬರೀ ತಿರುಗ್ತಾ ಇದ್ಯ ಅಥವಾ ನಡುಗ್ತಾನೂ ಇದ್ಯಾ?

rotsq.gif

5. ಇದನ್ನು ಕಣ್ತುಂಬ ನೋಡಿ ನಂತರ ಬೇರೊಬ್ಬರನ್ನು ನೋಡಿ.

ಏನ್ ಕಾಣ್ಸತ್ತೆ?

mre.jpg

6. ಈ ಫೋಟೊ ಚಲಿಸುತ್ತಿರೋ ಹಾಗೆ ಕಾಣತ್ತಾ?

ಇಲ್ವೇ ಇಲ್ಲ. "ಸ್ಟಿಲ್" ಫೋಟೊ ಇದು. ಆದ್ರೆ ಚಕ್ರಗಳು ತಿರ್ಗೋ ಹಾಗೆ ಅನ್ಸತ್ತೆ. ಏಂತಾ ಅಧ್ಭುತ!

rotsnake.w.jpg

7. ಇದು ಸೂಪರ್! ಇವಳು ತಿರುಗ್ತಾ ಇರೋದು ಗಡಿಯಾರದ ತಿರುವಿನಲ್ಲೋ (clockwiseಓ) ಅದರ ವಿರುದ್ಧವಾದ ತಿರುವಿನಲ್ಲೋ (anticlockwiseಓ)?

ನಿಮ್ ಮೆದುಳಿನ ಎಡ ಭಾಗ ಹೆಚ್ಚು ಕೆಲ್ಸ ಮಾಡ್ತಿದ್ರೆ ಗಡಿಯಾರದ ತಿರುವು ಅನ್ನಿಸುತ್ತೆ. ಬಲ ಭಾಗ ಹೆಚ್ಚು ಕೆಲ್ಸ ಮಾಡಿದ್ರೆ ಉಲ್ಟಾ ಕಾಣ್ಸತ್ತೆ.

spinningdancer_54.gif

8. ಇದರಲ್ಲಿ ಏನ್ ಕಾಣ್ಸತ್ತೆ?

ಒಂದು ಹೆಂಗಸು ನಡೆದುಕೊಂಡು ಹೋಗ್ತಿದ್ದಾಳೋ? ಅಥವಾ ಒಂದು ಮನುಷ್ಯನ ಮುಖವೋ?

face-black-and-whi_1121104i.jpg

9. ಕಪ್ಪು ಚೌಕಗಳ ಮಧ್ಯ ನಿಮ್ಮ ಕಣ್ಣಿಗೆ ಕಪ್ಪು ಚುಕ್ಕೆಗಳು ಮಸ್ಕ್ ಮಸ್ಕಾಗಿ ಕಾಣ್ಸತ್ತ?

hermann-grid_1120844i.jpg

 

10. ಇಲ್ಲಿ 4 ವೃತ್ತಗಳು ಕಾಣ್ಸತ್ತೆ ತಾನೆ?

ಸುಳಿಗಳು ಯಾವುದು ಇಲ್ಲ.

18dn0mhlej1b1jpg.jpg

11. ಇಲ್ಲಿರುವ ಆನೆಗೆ ಎಷ್ಟು ಕಾಲುಗಳು ಇವೆ? ಏಣಿಸಿ?

phant.jpg

12. ನಿಮ್ಮ ಭ್ರಮೆಗೆ ಕಾಣಿಸುವುದು ಮೊಲವೋ ಅಥವಾ ಬಾತುಕೋಳಿಯ ಮುಖವೋ?

duckrab2.jpg

13. ನಿಮಗೆ ಒಂದು ಚಿಕ್ಕ ಸಿಗರೇಟ್ ಮತ್ತು ಒಂದು ದೊಡ್ದ ಸಿಗರೇಟ್ ಕಾಣ್ಸತ್ತಾ?

ಅದ್ರೆ ಎರಡು ಒಂದೇ ತರ ಇರೋದು. ಪೇಪರ್ ಮೇಲೆ ರೋಲ್ ಮಾಡ್ದಾಗ ಹಿಂಗೆ ಕಾಣ್ಸತ್ತೆ. ಅದ್ಭುತ ಅಲ್ವಾ?

18dn0ogmeixf2gif.gif

14. ಈತ ಕುಳಿತುಕೊಳ್ಳುವ ಕುರ್ಚಿನಾ ನೀವು ಹಿಂದಿಂದ ನೋಡ್ತಿದ್ದೀರಾ ಅಥವಾ ಮುಂದಿಂದ ನೋಡೊ ಹಾಗೆ ಕಾಣ್ಸತ್ತಾ?

18dn0idlxdiujgif.gif

15. ಈ ಎರಡು ಆಕೃತಿಗಳು ಎಲ್ಲಾ ರೀತಿಯಲ್ಲಿ ಸಮವಾಗಿದೆ ಅಂತ ಅನ್ಸತ್ತಾ? ಬೇಕಾದರೆ ಅಳತೆ ಪಟ್ಟಿ ತೊಗೊಂಡು ಅಳೆಯಿರಿ.

333px-jastrow-illu_1121093i.jpg

16. ಈ ವಿಚಿತ್ರದ್ ನೋಡಿ. ಮಧ್ಯದಲ್ಲಿರುವ "+" ಚಿನ್ಹೆ ಮೇಲೆ ಕಣ್ಣಲ್ಲಿ ಕಣ್ಣಿಟ್ಟು ನೋಡಿ.

ಸುಂದರ ಮುಖಗಳು ಒಮ್ಮೆಲೆ ಭಯಾನಕವಾಗಿ ಕಾಣಿಸುತ್ತದೆ.

18dn0m3rx11jugif.gif

17. ಚೌಕಗಳ ಮಧ್ಯ ಕಪ್ಪು ಚಂಡು ಕಾಣ್ಸ್ತಾ ಇದ್ಯಾ?

ನಿಜವಾಗಲೂ ಇದ್ಯಾ? ಅಥವಾ ನಿಮ್ಮ ಮನಸ್ಸು ಹಾಗೆ ಭಾವಿಸ್ತಾ ಇದ್ಯಾ?

blackballs_1120775i.jpg

18. ಈ ಕೆಳಗಿನ ಫೋಟೋಲಿ ನಿಮ್ಗೆ ಏನ್ ಕಾಣ್ಸತ್ತೆ? ಮುದಿ ಹೆಂಗಸ? ಕನ್ಯೆನಾ? ಸ್ವಲ್ಪ ಗಮನ ಇಟ್ಟು ನೋಡಿ!

ನೋಡಿ, ಮೈ ಮೇಲಿನ್ ಕೂದಲು ಎದ್ದು ನಿಂತುಕೊಳತ್ತೆ ಅಲ್ವಾ!

186124_v1.jpg

19. ಇಲ್ಲಿ ಹರಡಿಕೊಂಡಿರುವ ಕಾಯಿಗಳು ತೇಲ್ಕೊಂಡು ಬಲಗಡೆಗೆ ಸರಿತಾ ಇದೆ ಅಲ್ವಾ?

18dn0jh2lbbcnjpg.jpg

20. ನಮಗಂತೂ ಇಲ್ಲಿ ಸಮುದ್ರದಲ್ಲಿ 4-5 ಡಾಲ್ಫಿನ್ಸ್ ಆಟ ಆಡೋ ಹಾಗೆ ಕಾಣ್ಸತ್ತೆ. ನಿಮಗೆ?

555AFEED-5E63-4942-A5EF5FD71EEAEF07.jpg

21. ನಿಮ್ಗೆ ಏನ್ ಕಾಣ್ಸತ್ತೆ? ಎರಡು ಮುದುಕರಾ? ಅಥವಾ ಇಬ್ಬರು ಗಂಡಸರು ಕುಳಿತಿರುವುದಾ?

658-old-couple-ill_1121183i.jpg

22. ಈ ಸುಂದರ ನಕ್ಷತ್ರ ಸುಮ್ನೆ ಇದ್ಯಾ? ಚಲಿಸ್ತಾ ಇದ್ಯಾ? ಏನಂತೀರಾ?

floatingstar.jpg

23. ಮಧ್ಯದಲ್ಲಿ ಮೂರನೇ ಕೋಲು ಇದ್ಯಾ? ನಿಮ್ ಕಣ್ಣಿಗೆ ಮೊಸ ಮಾಡ್ತಾ?

pic-blivet_1121096i.jpg

24. ಇದರಲ್ಲಿ "ಒರಿಜಿನಲ್" ಮುಖ ಯಾವುದು?

pic-blivet_1121096i.jpg

ಈ ತರಹದ ಫೋಟೋಗಳು ನೋಡಿದಾಗ ಕಣ್ಣಿಗೆ ಕಾಣ್ಸಿದ್ದು ಬೇರೆ ನಮ್ ತಲೆಗ್ ಹೊಳೆಯೋದು ಬೇರೆ.

ಒಟ್ಟಿನಲ್ಲಿ ಭ್ರಮೆ ಅಂದ್ರೆ ಏನು ಅಂತ ತಿಳಿಯತ್ತೆ ಈ ಮೇಲಿನ 24 ಫೋಟೊ ನೋಡಿದಾಗ!

ಮಾಹಿತಿ, ಚಿತ್ರಗಳು: luxemodo

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಇನ್ನೊಂದ್ಸಲ ಸ್ವಿಮ್ಮಿಂಗ್ಗ್ ಹೋಗಬೇಕಾದರೆ ಈ 15 ಫೋಟೋಗಳು ನಿಮ್ನ ಕಾಡುತ್ವೆ

ಕಾಪಾಡಿ! ಕಾಪಾಡಿ!

ಈಜು ಬರತ್ತೆ ಅಂತೇಳಿ ಎಲ್ಲೆಲ್ಲೋ ಈಜಕ್ಕೆ ಹೋದ್ರೆ ಅಪಾಯ ತಪ್ಪಿದ್ದಲ್ಲ. ನೀರಿನ ಒಳಗೆ ಏನಿದೆ ಅಂತ ನಮಗೆ ಗೊತ್ತಿರಲ್ಲ. ಗೊತ್ತಾಗೋ ಹೊತ್ತಿಗೆ ಬಜಾವಾಗೋದು ಕಷ್ಟ. ನೀರಿಗೆ ಇಳಿಯೋ ಮುಂಚೆ ತುಂಬಾ ಹುಷಾರಾಗಿರ್ಬೇಕು. ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ. ಇಲ್ಲಿರೋ 15 ಫೋಟೋ ನೋಡಿ. ಇನ್ಮೇಲೆ ಸ್ವಿಮ್ಮಿಂಗ್‌ಗೆ ಹೋಗ್ಬೇಕಾದ್ರೆ ಖಂಡಿತ ನಿಮ್ಮನ್ನ ಕಾಡುತ್ವೆ. 

1. ಅತ್ತ ಧರಿ ಇತ್ತ ಪುಲಿ ಅಂದ್ರೆ ಇದೇ ಏನೋಪ್ಪಾ
2. ನೀರಿನಲ್ಲಿ ಗುಹೇನೂ ಇರ್ಬೋದು
3. ಇಂತದ್ದೇನದ್ರೂ ಕಾಣಿಸಿದ್ರೆ ಅರಚಕ್ಕೂ ಆಗಲ್ಲಪ್ಪೋ
4. ಅನಕೊಂಡ ಹಾವು ಇದ್ರೂ ಇರ್ಬೋದು
5. ಮೈ ಝುಮ್ ಅನ್ಸತ್ತೆ ಅಲ್ವಾ?
6. ಗ್ರಾಫಿಕ್ಸ್ ಅಂದ್ಕೊಂಡ್ರಾ.. ಸಿಕ್ಕಿದ್ರೆ ಅಷ್ಟೆ ಸೀರುಂಡೇನೆ!
7. ನೀರಿನಲ್ಲಿ ಅಲೆಯ ಉಂಗುರ ಅಲ್ಲ..ಹಾವಿನುಂಗುರ!
8. ಈ ತರಹ ಮಾಡಕ್ಕೂ ಗುಂಡಿಗೆ ಇರ್ಬೇಕು ಕಣ್ರಿ
9. ಡೈವ್ ಹೊಡೆದ್ರೆ ಹಂಗೇ ಗುಂಳುಂ ಅನ್ನಿಸ್ಬಿಡತ್ತೆ
10. ನನ್ ತಂಟೇಗ್ ಬಂದ್ರೆ ಸುಮ್ಕಿರಲ್ಲ ಅಂತಿದ್ಯಾ ಆಕ್ಟೋಪಸ್!
11. ದಾರಿ ಕಾಣದಾಗಿದೆ ರಾಘವೇಂದ್ರನೇ...
12. ಸಾವು ಕಣ್ಮುಂದೆ ಇದೆ ಅಂತಾರಲ್ಲ...ಇದೇನಾ?
13. ಇದೇನೋ ಪ್ರಾಣಿ ಅಂದ್ಕೊಂಡ್ರಾ...ಛೀ! ಪಾಚಿ ಅಷ್ಟೇ
14. ಎಲ್ಲಿಗೆ ಪಯಣ ಯಾವುದೋ ದಾರಿ...
15. ಬ್ಲೂ ವೇಲ್ ಒಂದ್ಸಲ ಮೇಲೆ ಬಂದಿದೆ ಅಂದ್ರೆ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: