ಒಂದೆಲಗದ ಬಗ್ಗೆ ಈ 5 ಅದ್ಭುತವಾದ ವಿಷಯ ಗೊತ್ತಾದ್ರೆ ಇನ್ಮೇಲೆ ಚೌಕಾಸಿ ಮಾಡದೆ ಕೊಂಡ್ಕೋತೀರಿ

ಕೂದ್ಲು ಏನಾದರೂ ಉದುರ್ತಾ ಇದ್ದರೆ ಮೊದ್ಲು ತಿನ್ನಿ

ಬೇಸಿಗೇಲಿ ಮಧ್ಯಾಹ್ನ ಹೊತ್ತು ಯಾರಾದ್ರೂ ಹಳ್ಳಿ ಮನೆಗಳಲ್ಲಿ ಊಟ ಆಯ್ತಾ?ಏನ್ ಊಟ?ಅಂತ ಕೇಳಿದ್ರೆ ನಿಮಗೆ ಹೆಚ್ಚಾಗಿ ಸಿಗೋ ಉತ್ತರ -ಒಂದೆಲಗ ಚಟ್ನಿ.

ಇತ್ತೀಚೆಗೆ ಇದರ ಹೆಸರು ಅಪರೂಪ. ಆದ್ರೂ ಕೆಲವೊಂದು ಕಡೆ ಹುಡುಕ್ಕೊಂಡು ಹೋಗಿ ತಂದು ಉಪಯೋಗಿಸೋರು ಈಗ್ಲೂ ಇದಾರೆ. ತೋಟ, ಗದ್ದೆ, ತಂಪಾದ ಗುಡ್ಡಗಳಲ್ಲಿ ಸಿಗೋ ಈ ಬಳ್ಳಿಗಳು ಆಹಾರ, ಔಷಧಿ ಹೀಗೆ ಬಹುಪಯೋಗಿ. ನೋಡಕ್ಕೂ ಹಸ್-ಹಸ್ರಾಗಿ ಸುಂದರವಾಗಿರತ್ತೆ. ಹಳ್ಳಿ ಪ್ರದೇಶದಲ್ಲಿ, ಮನೆಯ ಹಿತ್ತಲಲ್ಲಿ, ತೋಟದಲ್ಲಿ ಈ ಬಳ್ಳಿಗಳನ್ನ ನಾವು ಹೆಚ್ಚಾಗಿ ಕಾಣ್ಬೋದು.

ಬೇಸಿಗೆ ಉರಿ ಬಿಸಿಲಲ್ಲಿ ದೇಹ ತಂಪಾಗಿಸಕ್ಕೆ ಒಂದೆಲಗ ಸೊಪ್ಪಿನ ಚಟ್ನಿ,ಜತೆಗೆ ಊಟಕ್ಕೆ ಅಪ್ಪೆ ಮಿಡಿ ಉಪ್ಪಿನಕಾಯಿ, ಮಜ್ಜಿಗೆ ಇವುಗಳಿದ್ದರೆ ಬೊಂಬಾಟ್ ಭೋಜನ. ಇದರ ಮುಂದೆ ಅತ್ಯಾಧುನಿಕ ಹೊಟೇಲ್ಗಳ ತಿನಿಸುಗಳು ಲೆಕ್ಕಕ್ಕೇ ಇಲ್ಲದಂತಾಗುತ್ತದೆ. (ಅದರ ರುಚಿ ತಿಳಿದಿರೋರ್ಗೆ)

ಇದರ ಉಪ್ಯೋಗ ಕಂಡ್ಕೊಂಡೊರು ಮಾತ್ರ ಇದನ್ನ ಎಂದಿಗೂ ಬಿಡಲ್ಲ :-)

1. ಸಿಕ್ಕಾಪಟ್ಟೆ ಉಷ್ಣ ಇದ್ದಾಗ ದೇಹ ತಂಪಾಗಕ್ಕೆ ಊಟ ಜೊತೆ ಒಂದೆಲಗದ ಚಟ್ನಿ 

ಉದ್ದಿನಬೇಳೆ, ಕೆಂಪುಮೆಣಸು ಹುರಿದು, ಒಂದೆಲಗ ಸೊಪ್ಪು ಹಾಗೂ ತೆಂಗಿನಕಾಯಿ ಒಟ್ಟು ಸೇರಿಸಿ ಮಿಕ್ಸಿ ಮಾಡಿ ಗಟ್ಟಿ ಚಟ್ನಿ ಮಾಡ್ಬೋದು. ಚಿಟಿಕೆ ಹುಳಿನೂ ಸೇರಿಸ್ಬೇಕು.

ಮೂಲ

2. ನಿದ್ದೇನೇ ಬರೋಲ್ಲ ಅನ್ನೋರು ಒಂದೆಲಗದ ಗುಳಿಗೆ ತಿಂದ್ರೆ ಅಥವಾ ಎಣ್ಣೆ ಹಚ್ಕೊಂಡ್ರೆ ಆರಾಮ್ ನಿದ್ದೆ ಮಾಡ್ಬೋದು

ಒಂದೆಲಗದ ಎಲೆಗಳನ್ನ ಒಣಗಿಸಿ ಪುಡಿ ಮಾಡಿ ಅದರ ಜೊತೆ ಹುರಿದ ಗಸೆಗಸೆ ಬೆರೆಸಿಟ್ಟುಕೊಳ್ಳಿ.. ಒಲೆ ಮೇಲೆ ಕಲ್ಲುಸಕ್ಕರೆದು ಎಳೆಪಾಕ ಮಾಡಿ ಚೆನ್ನಾಗಿ ಈ ಪುಡಿ ಹಾಕಿ ಕಲಕಿ. ಆನಂತರ ತುಪ್ಪ ಸೇರಿಸಿ.ಗಟ್ಟಿಯಾಯ್ತು ಅಂದ್ರೆ ಒಲೆಯಿಂದ ಕೆಳಗಿಳಿಸಿ. ಆರಿದ ಬಳಿಕ ಅಂದಾಜು ಗಾತ್ರದ ಗುಳಿಗೆಯನ್ನು ತಯಾರಿಸಬೇಕು. ನಿತ್ಯವೂ ಮಲಗುವ ಮುನ್ನ ಇದನ್ನು ತಿಂದು ಹಾಲು ಕುಡಿದು ಮಲಗಿದ್ರೆ ಅರಾಮ್ ನಿದ್ದೆ ಹತ್ತತ್ತೆ.

ಒಂದೆಲಗದ ರಸ ಒಂದು ಕಪ್‌, ಅಷ್ಟೇ ಪ್ರಮಾಣದಲ್ಲಿ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ತೆಗೆದುಕೊಳ್ಳಿ.. ಎರಡನ್ನೂ ಬೆರೆಸಿ ಸಣ್ಣ ಉರೀಲಿ ಕುದಿಸಿ ನೀರಿನ ಅಂಶ ಇಂಗೋವರ್ಗೂ ಕಾಯಿಸ್ಬೇಕು.

ಮೂಲ

3. ಕೂದಲು ಸೊಂಪಾಗಿ ಬೆಳೆಯಕ್ಕೆ, ಹೊಟ್ಟು ಕಮ್ಮಿ ಮಾಡತ್ತೆ

ಮೇಲೆ ಹೇಳಿದ ಹಾಗೆ ಎಣ್ಣೆ ಮಾಡಿಟ್ಟುಕೊಂಡು ದಿನಾ ಅದ್ರಲ್ಲಿ ತಲೆ ಬುಡಕ್ಕೆ ಮಸಾಜ್ ಮಾಡಿ. 

ಅಪೌಷ್ಟಿಕತೆ ಹಾಗೂ ಪಿತ್ತ ಜಾಸ್ತಿ ಅದಾಗ ಹೆಚುಚು ಕೂದ್ಲು ಉದರತ್ತೆ. ಅಂಥೋರು ಒಂದೆಲಗದ ಕಾಂಡ ಸಹಿತ ಇಡೀ ಬಳ್ಳಿನಾ ತೊಳೆದು ಅರೆದು ಅದರ ರಸಾನ ಸ್ವಲ್ಪ ಜೇನುತುಪ್ಪ ಮತ್ತು ಹಸುವಿನ ತುಪ್ಪ ಬೆರೆಸಿ ನಿತ್ಯ ಖಾಲಿ ಹೊಟ್ಟೇಲಿ ತಿಂದ್ರೆ ಕೂದ್ಲು ಉದುರೋದು, ಕೂದ್ಲು ಬೆಳ್ಳಗಾಗೋದು ಕಮ್ಮಿಯಾಗತ್ತೆ.

ಮೂಲ

4. ನರದೌರ್ಬಲ್ಯ, ಆತಂಕ, ಒತ್ತಡ ನಿವಾರಣೆಗೆ ಹಾಗೂ ತಲೆನೋವು ಕಮ್ಮಿ  ಮಾಡತ್ತೆ

ಒಂದೆಲಗದ ಎಲೆಗಳನ್ನ ಒಂದು ಮುಷ್ಟಿ ತೆಗೊಂಡು ಚೆನ್ನಾಗಿ ಅರೆದು ನೀರು ಸೇರಿಸಿ ಕುದುಸ್ಬೇಕು. ಆರಿದ ಮೇಲೆ ಜೇನುತುಪ್ಪ ಹಾಗೂ ಮೆಣಸಿನಕಾಳಿನ ಪುಡಿ ಬೆರ್ಸಿ ದಿನಕ್ಕೆ 2-3 ಬಾರಿ ಸೇವಿಸಿದರೆ ಹಿತ. 

ಮೂಲ

5. ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯ ಮಾಡತ್ತೆ

ಒಂದು ಕಪ್‌ ಹಸುವಿನ ತುಪ್ಪಕ್ಕೆ ಅಷ್ಟೇ ಪ್ರಮಾಣ ಒಂದೆಲಗ ಎಲೆ ರಸ ಬೆರೆಸಿ ಸಣ್ಣ ಉರೀಲಿ ಕುದುಸ್ಬೇಕು. ನೀರಿನ ಅಂಶ ಕಮ್ಮಿ ಆದಂಗೆ "ಪಟಪಟ' ಸದ್ದು ನಿಂತು ಪಾಕ ರೆಡಿ ಆಗತ್ತೆ. ಈ ತುಪ್ಪದ ನಿತ್ಯ ಸೇವನೆಯಿಂದ ಮನಸ್ಸಿನ ದುಗುಡ, ಆತಂಕ, ಖಿನ್ನತೆ ಎಲ್ಲಾ ಹೋಗತ್ತೆ. 1-2 ಚಮಚ ಈ ತುಪ್ಪಾನಾ (ಮಕ್ಕಳ ಅಥವಾ ವಯಸ್ಕರ ವಯಸ್ಸಿಗೆ ತಕ್ಕಂತೆ) ಬಿಸಿ ಹಾಲಲ್ಲಿ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೇಲಿ ತೊಗೊಂಡ್ರೆ ನೆನಪಿನ ಶಕ್ತಿ ಜಾಸ್ತಿ ಆಗತ್ತೆ. 

ಇನ್ನೊಂದು ತರಾನೂ ಮಾಡ್ಬೋದು...ಒಂದೆಲಗದ ಎಲೆಗಳನ್ನ ತೊಳೆದು ನೆರಳಲ್ಲಿ ಒಣಗಿಸ್ಬೇಕು. ಅಷ್ಟೇ ಪ್ರಮಾಣ ಬಾದಾಮಿ ಹುರಿದು ಇಡಬೇಕು. ಆಮೇಲೆ ಎರಡನ್ನೂ ಒಟ್ಟಿಗೆ ಪುಡಿಮಾಡಿ, ಸ್ವಲ್ಪ ಯಾಲಕ್ಕಿ ಪುಡಿ, ಕೇಸರಿ ದಳ ಬೆರೆಸ್ಬೇಕು. ಈ ಪುಡಿನಾ 2 ಚಮಚದಷ್ಟು 1 ಕಪ್‌ ಹಾಲಿಗೆ ಬೆರೆಸಿ ಸ್ವಲ್ಪ ಕಲ್ಲುಸಕ್ಕರೆ ಅಥವಾ ಬೆಲ್ಲ ಬೆರೆಸಿ ಕುಡಿಬೋದು. ನಿತ್ಯ ಬೆಳಿಗ್ಗೆ ಇದನ್ನ ಬೆಳೆಯೋ ಮಕ್ಕಳಿಗೆ ಕೊಟ್ಟ್ರೆ ಉತ್ತಮ ಆರೋಗ್ಯವರ್ಧಕ ಪೇಯ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

2017ರಲ್ಲಿ ಒತ್ತಡ ಕಡಿಮೆ ಮಾಡ್ಕೊಂಡು ಜೀವನ ಸವೀಬೇಕು ಅಂತಿದ್ರೆ ಇಲ್ಲಿ ಸ್ವಲ್ಪ ಕೇಳಿ

ಸುಂದರ ಬದುಕು ನಿಮ್ಮದಾಗಿಸಿಕೊಳ್ಳೋ ಆಸೆ ಇದ್ರೆ

ಬೆಳಗಾದ್ರೆ ಕೆಲಸಕ್ಕೆ ಓಡೋ ಭರಾಟೆಲಿರ್ತೀವಿ, ಹೆಣ್ಣುಮಕ್ಕಳಾದ್ರೆ ಮನೆ ಕೆಲಸ ಎಲ್ಲ ಮುಗಿಸಿ ಓಡಬೇಕು, ಕೆಲಸದಲ್ಲೆನು ಒತ್ತಡಕ್ಕೆ ಕೊರತೇನ? ಇದೆಲ್ಲ ಮುಗಿದಮೇಲೆ ನನ್ನನ್ನ ಗಮನಿಸಿಕೊಳ್ತಿಲ್ಲಾ ಅನ್ನೋ ಗಂಡ/ ಹೆಂಡತಿ, ಆಡೋಕು ನನ್ನ ಜೊತೆ ಬರೋಲ್ವಾ ಅನ್ನೋ ಮಕ್ಕಳು....... ಯಾಕಪ್ಪ ಜೀವನ ಅನ್ಸುತ್ತೆ ದಿನದ ಕೊನೆಲಿ. 

ಇದೆಲ್ಲಾ ನಿಮಗೂ ಅನ್ನಿಸ್ತಿದ್ರೆ ಖಂಡಿತ ಇವೆಲ್ಲದರ ಬಗ್ಗೆ ಗಮನ ಹರಿಸೋಕು ಇದು ಸರಿಯಾದ ಸಮಯ.

1. ದಾರಿ ತಪ್ಪಿಸೋರ್ನ ದೂರ ಇಡಿ

ಕೆಲವರನ್ನ ಕಷ್ಟದಲ್ಲಿ ಭೇಟಿ ಮಾಡೋಕೆ ಪ್ಲ್ಯಾನ್ ಮಾಡಿರ್ತೀರಿ. ಆದ್ರೆ ಅವರನ್ನ ಭೇಟಿ ಮಾಡಿದ್ರೆ ಬೇಡದ ಮಾತುಗಳು, ಬೇಡದ ವಿಷಯಗಳು ನಿಮ್ಮನ್ನ ಕಾಡುತ್ತೆ ಅನ್ನಿಸಿದ್ರೆ ಅಂಥವರ ಜೊತೆ ಕಳೆಯೋ ಸಮಯಾನ ಕಡಿಮೆ ಮಾಡಿಕೊಳ್ಳಿ. ಸಾಧ್ಯ ಆದ್ರೆ ಅಂಥವರನ್ನ ಭೇಟಿ ಮಾಡದೇ ಇರೋದೆ ಒಳ್ಳೇದು.

ಅವರೇ ಕಾಫಿಗೋ ಊಟಕ್ಕೋ ಕರೆದರೆ ಹೋಗದೇ ಇರೋಕೆ ನೆಪ ಹುಡುಕಿ, ಖುಷಿ ಆಗಿರ್ತೀರಿ.

ಮೂಲ

2. ಯಾವಾಗಲೂ ಲೇಟು ಅನ್ನಿಸಿಕೋಬೇಡಿ, ನಿಮ್ಮ ದಿನಾನ ಸರಿಯಾಗಿ ಪ್ಲಾನ್ ಮಾಡಿ

ದಿನ ತಡವಾಗಿ ಹೋಗಿ ಹೋಗಿ ಒತ್ತಡ ಜಾಸ್ತಿ ಆಗ್ತಿದ್ರೆ ನಿಮ್ಮ ದಿನದ ಪ್ಲ್ಯಾನ್ ನಲ್ಲಿ ಬದಲಾವಣೆ ಮಾಡಿಕೊಳ್ಳಿ. ಗಾಡಿ ಓಡಿಸೋ ಸಮಯ, ಟ್ರಾಫಿಕ್ ಜೊತೇಲಿ ನಿಮ್ಮ ಸಣ್ಣ ಪುಟ್ಟ ಕೆಲಸಗಳಿಗೂ ಸಮಯ ಕೊಟ್ಟು ಪ್ಲ್ಯಾನ್ ಮಾಡಿ,  ಬಸ್ ಬೇಗ ಹತ್ತಿ, ಅರ್ಧ ಗಂಟೆ ಮುಂಚೆ ಮನೆಯಿಂದ ಹೊರಡಿ, ಆಗ ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳು ಆಗುತ್ವೆ.

ಮೂಲ

3. ಮಾಡಬೇಕಾದ ಕೆಲಸ ಬೆಟ್ಟದಂಗೆ ಬೆಳೀಬಾರದು… ಹಂಗೆ ನೋಡ್ಕೊಳಿ

ಬೆಳಗಾದ ತಕ್ಷಣ ನಿಮ್ಮ ಕಣ್ಮುಂದೆ ರಾಶಿ ರಾಶಿ ಕೆಲಸ ಕಂಡ್ರೆ ಯಾರಿಗೆ ತಾನೆ ಖುಷಿ ಆಗುತ್ತೆ ಹೇಳಿ!! ಆದ್ರೆ ಹಾಗಂತ ನಾವು ತಪ್ಪಿಸ್ಕೊಳ್ಳೋಹಾಗೂ ಇಲ್ಲ ಅಲ್ವ? ಆದ್ರಿಂದ ನಿಮ್ಮ ಕೆಲಸಗಳ ಎರಡು ಪಟ್ಟಿ ಮಾಡ್ಕೊಳ್ಳಿ. ಒಂದು ನಿಮಗೆ ಖುಷಿ ಕೊಡೋದು ಮತ್ತೊಂದು ನಿಮಗೆ ಇಷ್ಟ ಆಗದ್ದು. ಈಗ ಇವರಡನ್ನೊ ಸಮಾನವಾಗಿ ಮಾಡುತ್ತಾ ಹೋಗಿ.

ನಿಮಗೆ ನಿಮ್ಮ ಹೆಂಡತಿನ ಶಾಪಿಂಗ್ ಕರ್ಕೊಂಡು ಹೋಗೋದು ಇಷ್ಟ ಇಲ್ಲ ಅಂದ್ರೆ, ನಿಮಗೆ ಬೇಕಾದನ್ನು ನೀವೂ ಕೊಳ್ಳಬಹುದಾದ ಅಂಗಡಿಗೆ ಹೋಗಿ. ನಿಮಗೆ ಬೇಕಾದ್ದು ನೀವು ತಗೊಳ್ಳಿ ಅವರಿಗೆ ಬೇಕದ್ದು ಅವರು ತಗೋತಾರೆ, ಕೆಲಸ ಖುಷಿಲೇ ಮುಗೀತಲ್ವ?

ಮೂಲ

4. ನಿಮ್ಮ ಸಾಮಾನು ಚೆಲ್ಲಾಪಿಲ್ಲಿ ಆಗದೆ ಇರೋಹಂಗೆ ನೋಡ್ಕೊಳ್ಳಿ

ವಾರ ಇಡೀ ಬ್ಯುಸಿ ಆಗಿರೋ ನಿಮಗೆ ಬಳಸಿದ ವಸ್ತುಗಳನ್ನ ಅದದೇ ಜಾಗಗಳಿಗೆ ಸೇರಿಸೋದು ಕಷ್ಟ ಆಗಿ ನಾಳೆ ನಾಳೆ ಅನ್ಕೋತಾ ಒಂದು ರಾಶಿ ಆಗಿದ್ರೆ ಅದನ್ನೆಲ್ಲ ಶನಿವಾರ ಮಾಡಬೇಕನ್ನೋ ಒತ್ತಡ ಕಾಡುತ್ತಿದ್ರೆ. ಬೇಸರ ಇಲ್ಲದೆ ನಿಮಗಿಷ್ಟ ಆಗೋ ಸಂಗೀತ ಕೇಳುತ್ತ ಕೆಲಸ ಮಾಡಿ, ಜೊತೇಲಿ ಕೆಲಸ ಎಲ್ಲ ಮುಗಿದ ಮೇಲೆ ನಿಮಗಿಷ್ಟ ಆಗೋ ಜಾಗಕ್ಕೆ ಹೋಗೋ ಪ್ಲಾನ್ ಮಾಡ್ಕೊಳ್ಳಿ ಆಗ ಒತ್ತಡ ಇರಲ್ಲ.

ಮೂಲ

5. ಭಿನ್ನಾಭಿಪ್ರಾಯಗಳನ್ನ ಪಕ್ಕಕ್ಕಿಡಿ

ಎಷ್ಟೋ ಸಾರಿ ಎದುರಿಗೆ ಇರೋ ವ್ಯಕ್ತಿಗೆ ನಮ್ಮ ಮನಸ್ಸಿನಲ್ಲಿರೋ ಮಾತು ಹೇಳೋಕಾಗ್ದೆ ಒಳಗೊಳಗೇ ಗೊಣಗಾಡ್ತ ಇರ್ತೀವಿ. ಇದು ನಿಮಗೆ ಒತ್ತಡ ಹೇರುತ್ತೆ. ಇದರಿಂದ ಹೊರಬರೋಕೆ ಮಾತುಗಳನ್ನ ಆಡೋ ಅಭ್ಯಾಸ ಮಾಡಿಕೊಂಡ್ರೆ ಒಳ್ಳೇದು ಇಲ್ಲ ಅಂದ್ರೆ 10 ನಿಮಿಷಕ್ಕಿಂತ ಹೆಚ್ಚು ಯಾವುದೇ ವಿಷಯಕ್ಕೂ ತಲೆ ಕೆಡಿಸಿಕೊಳಲ್ಲ ಅಂತ ನಿರ್ಧಾರ ಮಾಡಿ. ಅಕಸ್ಮಾತ್ ನಿಮ್ಮ ಮನಸ್ಸು ನಿಮ್ಮ ಮಾತು ಕೇಳ್ತಿಲ್ಲ ಅಂದ್ರೆ ಒಂದು ಪೇಪರ್ ನಲ್ಲಿ ನಿಮಗನ್ನಿಸಿದ್ದನ್ನೆಲ್ಲ ಬರೆದು ಸುಟ್ಟು ಹಾಕಿ, ಮನಸ್ಸು ನಿರಾಳ ಅನ್ಸುತ್ತೆ.

ಮೂಲ

6. ಇಲ್ಲ/ಆಗಲ್ಲ ಅನ್ನೋದನ್ನ ಅಭ್ಯಾಸ ಮಾಡ್ಕೊಳ್ಳಿ

ಯಾರಾರು ಏನಾರು ಕೆಲಸ ಹೇಳಿದಾಗ ಮನಸ್ಸು ಆಗಲ್ಲ ಅಂತಿದ್ರು ತುಟಿ ಹೂ ಅನ್ನೋಕೆ ಬಿಡಬೇಡಿ. ನಿಮಗಿಷ್ಟ ಇಲ್ಲದ್ದನ್ನ ಕೇಳಿದ್ರೆ ಇಲ್ಲ ಅನ್ನೋ ಅಭ್ಯಾಸ ಮಾಡ್ಕೊಳ್ಳಿ ಅಥವಾ ಆ ಕೆಲಸ ಇಷ್ಟ ಪಡೋ ವ್ಯಕ್ತಿಗೆ ಅದನ್ನ ಹೇಳೋ ಅಭ್ಯಾಸ ಮಾಡ್ಕೊಳ್ಳಿ ನಿಮಗೂ ಖುಷಿ ಅವರಿಗೂ ಖುಷಿ. ಹತ್ತು ಕೆಲಸ ಒಪ್ಪಿಕೊಂಡು ಸರಿಯಾಗಿ ಮಾಡದೇ ಇರೋಕ್ಕಿಂತ ಒಂದನ್ನ ಸರಿಯಾಗಿ ಮಾಡೋದು ಒಳ್ಳೇದಲ್ವಾ?

ಮೂಲ

7. ಮನೆಯೋರ ಜೊತೆ ಹೆಂಗಿರಬೇಕು ಅಂತ ತಿಳ್ಕೊಳಿ

ಯಾವುದಾದ್ರೂ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಂದು ಕಡೆ ಸೇರಿ ಮಾತಾಡೋ ಪರಿಸ್ಥಿತೀಲಿ ನಿಮಗೆ ಅಲ್ಲಿಂದ ಓಡೋಗ್ಬೇಕು ಅಂತ ಅನ್ಸಿದ್ರೆ ನಿಮಗೆ ನಿಮ್ಮ ಕುಟುಂಬದಲ್ಲೂ ಒತ್ತಡ ಇದೆ ಅಂತರ್ಥ. ನೆಂಟರ ಕೊಂಕು, ಅದಕ್ಕೆ ತಲೆ ಆಡಿಸೋ ಅಪ್ಪ - ಅಮ್ಮ ನಿಮಗೆ ಹಿಂಸೆ ಅನ್ನಿಸ್ತಿದ್ರೆ ಅವ್ರನ್ನೆಲ್ಲ ಬದಿಗಿಟ್ಟು ಯೋಚ್ನೆ ಮಾಡಿ ಅಥವಾ ಅವರು ಮಾತು ಆರಂಬಿಸೋಕೆ ಮುಂಚೆ ನೀವೇ ನಿಮಗಿಷ್ಟ ಆಗೋ ಮಾತು ಶುರು ಮಾಡಿ, ಇನ್ನು ಕಷ್ಟ ಅನ್ಸಿದ್ರೆ ಸ್ವಲ್ಪ ಸಮಯ ಮಾತ್ರ ಅವರ ಜೊತೆಲಿರಿ, ನಿಮಗೆ ಹೆಚ್ಚು ತೊಂದ್ರೆ ಕೊಡೊ ಸಂಬಂಧಗಳು ದೂರ ಇದ್ದಷ್ಟು ಒಳ್ಳೇದು.

ಮೂಲ

8. ಹಿಂದೆ ಮಾಡಿದ ಕೆಲಸ ಆಡಿದ ಮಾತು ಮರೆತುಬಿಡಿ

ಹಿಂದೆ ಯಾರ ಜೊತೆಲಾದ್ರೂ ಜಗಳ ಆಡಿದ್ರೆ ಅಥವಾ ಚಿಕ್ಕವಯಸ್ಸಿನಲ್ಲಿ ಯಾವತ್ತಾದ್ರೂ ತಪ್ಪು ಮಾಡಿದ್ರೆ ಅದನ್ನೇ ಮೆಲುಕು ಹಾಕೋದು ಬಿಡಿ, ಅದರಿಂದ ಏನೂ ಬದಲಾಗಲ್ಲ ಅನ್ನೋದು ನಿಮಗೆ ಗೊತ್ತಿದೆ ತಾನೇ. ನೆನ್ನೆ ಬಗ್ಗೆ ಯೋಚ್ನೆ ಮಾಡೋದ್ರಿಂದ ನೀವು ಅದೇ ಘಟನೆಗಳಲ್ಲಿ ಜೀವನ ಮಾಡೋದು ಹೆಚ್ಚು, ಅದು ನಿಜ ಜೀವನದ ಒತ್ತಡಕ್ಕಿಂತ ನಿಮಗೆ ಹೆಚ್ಚು ತೊಂದ್ರೆ ಕೊಡುತ್ತೆ. ಹಳೇದನ್ನ ಮರೆಯೋ ಪ್ರಯತ್ನ ಮಾಡಿ ಅಥವಾ ಬೇರೆ ವಿಷಯಗಳಲ್ಲಿ ನಿಮ್ಮನ್ನ ತೊಡಗಿಸಿಕೊಳ್ಳಿ.

ಮೂಲ

ಕೇಳಿದ್ರೇನೇ ನಿರಾಳ ಅನ್ಸುತ್ತೆ ಇನ್ನು ಮಾಡಿದ್ರೆ.... ಹಾಗಿದ್ರೆ ತಡ ಯಾಕೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: