ಏನಾರೂ ಸಿಕ್ಕರೆ ಯೋಚನೆ ಮಾಡಿ ಮಾಡಿ ತಲೆ ಕೆಡುಸ್ಕೊಳೋ ಬದ್ಲು ಹೀಗ್ ಮಾಡಿ, ಎಲ್ಲಾ ಸರಿ ಹೋಗುತ್ತೆ

ಈಗಲೆ ಎಲ್ಲಾ ಲೆಕ್ಕ ಹಾಕಕ್ಕೆ ಹೋಗ್ಬೇಡಿ

ಅವಳು ನನ್ನನ್ನ ಯಾಕೆ ಮಾತಾಡಿಸ್ತಾ ಇಲ್ಲ? ನಾನೇನಾದರೂ ತಪ್ಪು ಹೇಳಿಬಿಟ್ನಾ? ನಾನು ಸರಿಯಾಗಿ ಬಟ್ಟೆ ಹಾಕೊಂಡಿದೀನಾ?… ಈ ತರಹದ ಪ್ರಶ್ನೆಗಳು ಕೆಲವರಿಗೆ ಸ್ವಲ್ಪ ತಲೆ ತಿಂದರೆ ಇನ್ನೂ ಕೆಲವರಿಗೆ ತುಂಬಾ ತಿಂತವೆ. ಅಂಥವರು ಸಾಮಾನ್ಯವಾಗಿ ತಲೆ ಓಡ್ಸೋದು ಜಾಸ್ತಿ - ಎಲ್ಲಿ ಓಡಿಸಬೇಕಾಗಿಲ್ಲವೋ ಅಲ್ಲಿ. ಹಿಂಗಾದರೆ ಹೆಂಗೆ? ಹಂಗಾದರೆ ಹೆಂಗೆ?… ಅಂತ ಪ್ರಶ್ನೆಗಳು ಅವರ ತಲೇನಲ್ಲಿ ಓಡ್ತಾನೇ ಇರ್ತವೆ. ಆದರೆ ಹೀಗೆ ತುಂಬಾ ತಲೆ ಕೆಡುಸ್ಕೊಳೋದು ಒಳ್ಳೇದಲ್ಲ. ನಿಮಗೆ ಆ ತೊಂದರೆ ಎನಾದರೂ ಇದ್ದರೆ ಕೆಳಗೆ ನಿಮಗೋಸ್ಕರ 5 ಸಲಹೆಗಳ್ನ ಕೊಟ್ಟಿದೀವಿ. ಇವುಗಳ್ನ ಗಂಭೀರವಾಗಿ ತೊಗೊಂಡ್ರೆ ಬರ್ತಾ ಬರ್ತಾ ನೀವು ವಿನಾ ಕಾರಣ ತಲೆ ಕೆಡುಸ್ಕೊಳೋದು ಕಡಿಮೆ ಮಾಡ್ಕೋತೀರಿ. ಓಕೆ, ರೆಡಿ ನಾ?

1. ನಾನು ಜಾಸ್ತಿ ಯೋಚನೆ ಮಾಡ್ತಿದೀನಿ ಅಂತ ಗುರುತಿಸಿಕೊಳ್ಳೋದು ಕಲಿತುಕೊಳ್ಳಿ ಮೊದ್ಲು

ಬದಲಾವಣೆ ಆಗಬೇಕು ಅನ್ನೋದಾದ್ರೆ ತೊಂದರೆ ಎನು ಅಂತ ಮೊದಲು ಅರ್ಥ ಆಗಬೇಕು. ಕೆಲವರಿಗೆ ತೊಂದರೆ ಇರೋದೇ ಗೊತ್ತಾಗಲ್ಲ…. ಇನ್ನು ಅದನ್ನ ಬಗೆಹರಿಸಿಕೊಳ್ಳೋದು ಹೇಗೆ? ಆದ್ದರಿಂದ ನಿಮಗೆ ಮೊದಲು ಗೊತ್ತಾಗಬೇಕು… ಓಹೋ ಈಗ ನಾನು ತುಂಬಾ ಯೋಚ್ನೆ ಮಾಡ್ತಿದೀನಿ ಅಂತ. ಆಗಲೇ ನಿಮ್ಮ ಮೇಲೆ ನೀವು ಹಿಡಿತ ಸಾಧಿಸಿಕೊಳಕ್ಕೆ ಆಗೋದು.

ಮೂಲ

2. ಒಂದ್ಸಲ ತೀರ್ಮಾನ ತೊಗೊಂಡ ಮೇಲೆ ಅದನ್ನ ಬದಲಾಯಿಸಕ್ಕಾಗಲ್ಲ ಅನ್ನೋ ಮನೋಭಾವ ಬಿಟ್ಟುಬಿಡಿ

ನಾನು ನೂರಕ್ಕೆ ನೂರು ಪರ್ಫೆಕ್ಟಾಗಿರೋ ತೀರ್ಮಾನಾನೇ‌ ತೊಗೋಬೇಕು ಅನ್ಕೊಂಡ್ರೆ ಯೋಚನೆ ಮಾಡೋದು ಒಂದೊಂದ್ಸಲ ನಿಲ್ಲೋದೇ ಇಲ್ಲ. ಆದರೆ ಅರ್ಥ ಮಾಡ್ಕೊಳಿ: ನಿಮ್ಮ ತೀರ್ಮಾನವನ್ನ ನೀವು ಬದಲಾಯಿಸಬಹುದು. ಮುಂದೆ ಏನಾಗತ್ತೆ ಅಂತ ಯಾರೂ ಖಡಾಖಂಡಿತವಾಗಿ ಹೇಳಕ್ಕಾಗಲ್ಲ. ಅಷ್ಟೆಲ್ಲ ಭವಿಷ್ಯ ನುಡಿಯಕ್ಕೆ ಯಾರಿಗೂ ಆಗಲ್ಲ. ನೀವು ಎಷ್ಟೇ ತಯಾರಿ ಮಾಡ್ಕೊಂಡ್ರೂ ಜೀವನ ನಿಮಗೆ ಹೊಸ ಹೊಸ ಸವಾಲುಗಳ್ನ ಕೊಡ್ತಾನೇ ಇರುತ್ತೆ. ಪ್ಲಾನ್ ಮಾಡೋದು ತಪ್ಪಲ್ಲ, ಆದರೆ ತೀರಾ ಜಾಸ್ತಿ ಯೋಚನೆ ಮಾಡ್ತಾ ಕೂತ್ಕೊಂಡ್ರೆ ನಿಮಗೆ ಸಿಗಬೇಕಾದ ಯಶಸ್ಸು ಸಿಗಲ್ಲ.

ಮೂಲ

3. ಮುಂದೆ ಬರಬಹುದಾದ ತೊಂದರೆಗಳ್ನೆಲ್ಲ ಈಗಲೇ ಒಂದೂ ಬಿಡದೆ ಲೆಕ್ಕ ಹಾಕ್ತೀನಿ ಅಂತ ಹೊರಡಬೇಡಿ

ಹೆದರಿಕೆಯಿಂದ ಹೀಗ್ ಮಾಡ್ತಾರೆ. ಬರೀ ಕೆಟ್ಟದರ ಬಗ್ಗೆ ಯೋಚಎನ್ ಮಾಡ್ತಾ ಇದ್ದರೆ ಯೋಚನೆ ಮಾಡೋದು ನಿಲ್ಲಲ್ಲ. ನಾವು ಏನನ್ನ ಯೋಚನೆ ಮಾಡ್ತೀವೋ ಅದು ಆಗೋಹಾಗೆ ಪ್ರಪಂಚ ನೋಡ್ಕೊಳುತ್ತೆ ಅಂತ ನಂಬೋರಿದಾರೆ. ಉದಾಹರಣೆಗೆ, ನೀವು ಬರೀ ಸಿಟ್ಟು ಮಾಡ್ಕೊಂಡು ಕೆಟ್ಟ ಕೆಟ್ಟ ಯೋಚನೆ ಮಾಡ್ತಾ ಇದ್ದರೆ ಅದನ್ನ ಹೆಚ್ಚಿಸುವಂತ ವಾತಾವರಣ ನಿಮಗಾಗಿ ನಿರ್ಮಾಣ ಆಗುತ್ತೆ. ಅದೇ ನೀವು ಒಳ್ಳೇದನ್ನೇ ಯೋಚನೆ ಮಾಡ್ತಿದ್ರೆ ಅಂಥ ವಾತಾವರಣಾನೇ ನಿರ್ಮಾಣ ಆಗುತ್ತೆ.

ಮೂಲ

4. ವರ್ತಮಾನದಲ್ಲಿ ಜೀವನ ಮಾಡೋದು ಕಲಿತುಕೊಳ್ಳಿ

ಭೂತಕಾಲದಲ್ಲಿ ಜೀವನ ಮಾಡಿದ್ರೆ ಹಳೇ ನೋವುಗಳು ತೊಂದರೆಗಳೆಲ್ಲ ನೆನಪಾಗಿ ಕಷ್ಟಕ್ಕೆ ಸಿಕಾಕೋತೀರಿ. ಇಂಥ ಯೋಚನೆಗಳು ಬರಕ್ಕೆ ಶುರು ಆದಾಗ ಗುರುತಿಸಿಕೊಂಡು ನಿಮ್ನ ನೀವು ವರ್ತಮಾನ ಕಾಲಕ್ಕೆ ಕರ್ಕೊಂಡ್ ಬನ್ನಿ. ಭೂತಕಾಲದಲ್ಲಿ ಜೀವನ ಮಾಡೋದ್ರಿಂದ ಏನ್ ತೊಂದ್ರೆ ಆಗುತ್ತೆ ಅಂತ ನಿಮಗೆ ನೀವೇ ನೆನಪಿಸಿಕೊಳ್ಳಿ. ಸಂತೋಷವಾಗಿರಬೇಕಾದ್ರೆ ಹಿಂದೆ ನಡೆದಿದ್ದನ್ನ ಮರೆತು ಇವತ್ತಿನ ಜೀವನ ಮಾಡಲೇಬೇಕು.

ಮೂಲ

5. ನಿಮ್ಮ ಜೊತೆ ನೀವು ಪಾಸಿಟಿವ್ ಆಗಿ ಮಾತಾಡೋದನ್ನ ಅಭ್ಯಾಸ ಮಾಡ್ಕೊಳಿ

ಎಲ್ಲಿ ಕೆಡಬಹುದು, ಏನು ಹಾಳಾಗಬಹುದು ಅಂತ ಯೋಚನೆ ಮಾಡೋ ಬದಲು ಎಲ್ಲಿ ಒಳ್ಳೇದಾಗಬಹುದು, ಹೇಗೆ ಚೆನ್ನಾಗಾಗಬಹುದು ಅಂತ ಯೋಚನೆ ಮಾಡಕ್ಕೆ ಶುರು ಮಾಡಿ. ನಿಮ್ಮ ಸಾಧನೆಗಳ ಪಟ್ಟಿ ಮಾಡ್ಕೊಳಿ. ತೀರಾ ಹಿಂದಿನ ಸಾಧನೆಗಳನ್ನಲ್ಲ, ಕೆಲವು ತಿಂಗಳ ಹಿಂದಿನ ಸಾಧನೆಗಳ ಬಗ್ಗೆ ನಾವು ಹೇಳ್ತಿರೋದು ಇಲ್ಲಿ. ತೀರಾ ದೊಡ್ಡ ಸಾಧನೆಗಳೂ ಆಗಬೇಕಿಲ್ಲ… ನಿಮ್ಮ ಫ್ರೆಂಡ್ ನಿಮ್ಮ ಹೇರ್ ಕಟ್ ನೋಡಿ ಚೆನ್ನಾಗಿದೆ ಅಂದ್ರೆ ಅದನ್ನೂ ಪಟ್ಟಿ ಮ್ ಆಡಿ. ಹೀಗೆ ದಿನಾ ಮಾಡ್ಕೋತಾ ಬಂದ್ರೆ ನೀವು ನೆಗೆಟಿವ್ ಆಗಿ ಯೋಚನೆ ಮಾಡ್ಕೊಂಡು ಜೀವನ ಕಳೆಯೋ ಸುಳಿಗೆ ಬೀಳಲ್ಲ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ನೀವು ನಿಮ್ಮ ಅಪ್ಪ-ಅಮ್ಮಂಗೆ ಎಷ್ಟನೇ ಮಗು ಅನ್ನೋದರ ಮೇಲೆ ಏನೇನ್ ನಿಂತಿದೆ ನೋಡಿ

ಆದರೆ ಮನುಷ್ಯ ಇದನ್ನೆಲ್ಲ ಮೀರಿ ಬೆಳೀಬೋದು -- ನೆನಪಿರಲಿ

ಮನೇಲಿ ಆಗಾಗ ಎಲ್ಲರೂ ಹೇಳೋ ಮಾತು ಅಂದ್ರೆ ದೊಡ್ಡ ಮಗು (ಮೊದಲೆನೆಯದು) ಸ್ವಲ್ಪ ಜವಾಬ್ದಾರಿ ಜಾಸ್ತಿ, ಕೊನೆಯವರು ಸ್ವಲ್ಪ ಓತ್ಲಾ, ಮಧ್ಯದಲ್ಲಿ ಒಂದಿದ್ರೆ ಅದು ಆಕಡೆನು ಇಲ್ಲ ಈ ಕಡೆನೂ ಇಲ್ಲ, ಒಂತರ ಡಿಫರೆಂಟು ಅಂತಾನೂ ಕರೀಬೋದು. ಹೀಗೆಲ್ಲ ಹೇಳೋದು ಇದ್ದೆ ಇದೆ. ಆದ್ರೆ ಇಷ್ಟೇ ಅಲ್ಲ...

ಮೂಲ

ಅಪ್ಪ-ಅಮ್ಮನಿಗೆ ನೀವು ಎಷ್ಟನೇ ಮಗು ಅನ್ನೋದರ ಮೇಲೆ ಸುಮಾರ್ ವಿಷಯ ನಿಂತಿದೆ:

  • ಮೊದಲನೇ ಮಗು : ಸಂಶೋಧನೆ ಪ್ರಕಾರ ಮೊದಲನೆಯವರಲ್ಲಿ ನಾಯಕತ್ವ ಗುಣ ಜಾಸ್ತಿ ಇರತ್ತಂತೆ, ಇವರು ಸ್ವಲ್ಪ ಶಿಸ್ತಿನ ಮನುಷ್ಯರು, ಏನಾದ್ರೂ ವಿಷಯ ಇದ್ರೆ ಪಕ್ಕ ನಿರ್ಧಾರ ಇವರೇ ಮಾಡ್ತಾರೆ. ಜವಾಬ್ದಾರಿನ ಚೆನ್ನಾಗಿ ನಿಭಾಯಿಸೋ ತಾಕತ್ತು ಇವರಿಗೆ ಸ್ವಲ್ಪ ಜಾಸ್ತಿ ಇರತ್ತಂತೆ. ಇವರು ಎಲ್ಲರನ್ನು ಸ್ವಲ್ಪ ಜಾಸ್ತಿ ಪ್ರೀತಿಯಿಂದ, ಅಕ್ಕರೆಯಿಂದ ನೋಡ್ಕೋತಾರಂತೆ.

  • ಎರಡನೆಯವರು (ಮಧ್ಯದವರು) : ಇವರು ಸ್ವಲ್ಪ ಡಿಫರೆಂಟಾದ ವ್ಯಕ್ತಿ. ಇವರಿಗೆ ದೊಡ್ಡವರು ಹೋದ ರೀತಿ, ಅವರು ಬೆಳೆದ ವಾತಾವರಣ ಗೊತ್ತಿರತ್ತೆ. ಇವರು ಸ್ವಲ್ಪ ಆಕಾಶಕ್ಕೆ ಏಣಿ ಹಾಕೋ ಜನ. ಕನಸು, ಆಸೆ, ಗುರಿ ಇವೆಲ್ಲ ಸ್ವಲ್ಪ ದೊಡ್ಡಮಟ್ಟದಲ್ಲಿ ಇರತ್ತೆ ಇವರಿಗೆ. ಇವರು ತುಂಬಾ ಸೋಲ್ತಾರೆ, ಆದ್ರೆ ಹಠ ಬಿಡಲ್ಲ. ಸೋಲಿನಿಂದ ತುಂಬಾ ಕಲೀತಾರೆ. ಇವರು ಸ್ವಾರ್ಥಿಗಳಲ್ಲ.

  • ಕೊನೆಯವರು : ಎಲ್ಲರಿಗೂ ಗೊತ್ತಿರೋಥರ ಕೊನೆ ಮಕ್ಕಳಿಗೆ ಸ್ವಲ್ಪ ಅಪ್ಪ ಅಮ್ಮನ ಪ್ರೀತಿ, ಅಕ್ಕರೆ ಎಲ್ಲ ಜಾಸ್ತಿ. ಅಷ್ಟೇ ಅಲ್ಲ ಅಣ್ಣ, ಅಕ್ಕಂದಿರ ಪ್ರೀತೀನು ಜಾಸ್ತಿ ಸಿಗತ್ತೆ. ಹೀಗಾಗಿ ಇವರು ಸ್ವಲ್ಪ ಓತ್ಲ ಜಾಸ್ತಿ. ಆದ್ರೆ ಇವರು ಸಿಕ್ಕಾಪಟ್ಟೆ ಬೇಗ ಎಲ್ಲರ ಜೊತೆ ಬೆರೀತಾರೆ. ಇವರು ಒಳ್ಳೆ ಆಟಗಾರ ಅಥವಾ ಒಳ್ಳೆ ಕಲಾವಿದರಾಗಿ ಬೆಳೀತಾರೆ. ಇವರಿಗೆ ಸ್ವಂತ ನಿರ್ಧಾರ ತೊಗೊಳೋದು ಕಷ್ಟದ ಕೆಲಸ. ಇವರಿಗೆ ಸ್ವಲ್ಪ ಜವಾಬ್ದಾರಿ ಕಡಿಮೆ.

  • ಒಂದೇ ಮಗು ಇದ್ರೆ: ಇವರು ಅಪ್ಪ ಅಮ್ಮನ ಅತೀ ಮುದ್ದು ಮಗು. ಬೆಳೀತಾ ಬೆಳೀತಾ ಅಪ್ಪನಿಗಿಂತ ಚೆನ್ನಾಗಿ ಬೆಳೀಬೇಕು ಅನ್ನೋದು ಇವರ ಯೋಚನೆ. ಎಲ್ಲರೂ ನನ್ನ ಇಷ್ಟ ಪಡ್ಬೇಕು, ಮುದ್ದು ಮಾಡ್ಬೇಕು ಅಂತ ಭಾವಿಸ್ತಾರೆ. ಇವರು ಅಷ್ಟಾಗಿ ಎಲ್ಲರ ಜೊತೆ ಬೇಗ ಬೇರೆಯಲ್ಲ. ಇವರಿಗೆ ಸ್ವಂತವಾಗಿ ಏನನ್ನು ಮಾಡಕ್ಕೆ ಅಷ್ಟಾಗಿ ಗೊತ್ತಿರಲ್ಲ. ಸ್ವಲ್ಪ ಜಾಸ್ತಿನೇ ಡಿಪೆಂಡಾಗ್ತಾರೆ. ಆದ್ರೆ ಮಾಡೋ ಕೆಲಸಾನ ಅಚ್ಚುಕಟ್ಟಾಗಿ ಮಾಡ್ತಾರೆ. ಜೀವನದಲ್ಲಿ ಸ್ವಲ್ಪ ಜಾಸ್ತಿ ಸಾಧನೆ ಮಾಡ್ತಾರೆ.

IQ ಮೇಲೆ ಆಗೋ ಪರಿಣಾಮ

ಸಂಶೋಧನೆ ಮಾಡಿ ಏನೇನೋ ಕಂಡು ಹಿಡ್ದಿದಾರೆ. ಸ್ವಲ್ಪ ಜನ ಇದನ್ನ ಒಪ್ಕೋತಾರೆ, ಸ್ವಲ್ಪ ಜನ ಒಪ್ಕೋಳಲ್ಲ. ಆದ್ರೆ ವಿಷಯ ಹೀಗಿದೆ, ಮೊದಲನೆ ಮಗುವಿನ ಐ.ಕ್ಯೂ. ಮಿಕ್ಕೋರ್ಗಿಂತ ಜಾಸ್ತಿ ಇರತ್ತೆ. ಮೊದಲನೇ ಮಗು, ಕೊನೆ ಮಗು ಅನ್ನೋದರ ಮೇಲೆ ಮಗುವಿನ ಮನಸಿನ ಶಕ್ತಿ, ಕಲ್ಪನಾ ಶಕ್ತಿ ಏನು ಬದಲಾಗಲ್ಲ ಅಂತ ವಿಜ್ಞಾನಿಗಳು ಹೇಳಿದ್ದಾರೆ.

ಮೂಲ

ವ್ಯಕ್ತಿತ್ವದ ಮೇಲೆ ಆಗೋ ಪರಿಣಾಮ

ಸಂಶೋಧನೆ ಪ್ರಕಾರ ತಿಳಿದು ಬಂದಿರೋದು ಅಂದ್ರೆ, ಮೊದಲನೆಯವರು ಪ್ರಾಮಾಣಿಕ, ಶಕ್ತಿಯುತ ವ್ಯಕ್ತಿ ಅಂತ, ಸ್ವಲ್ಪ ಬೇಗ ತಲೆಬಿಸಿ ಮಾಡ್ಕೋತಾರೆ ಇವ್ರು. ಮಧ್ಯದವರು ಸ್ವಲ್ಪ ಪರಿಶ್ರಮದ ಜೀವಿಗಳು. ಕೊನೆಯವರು ಸ್ವಲ್ಪ ಎಲ್ಲರ ಜೊತೆ ಬೇರೆಯೋದು ಜಾಸ್ತಿ, ಸ್ವಲ್ಪ ಕ್ರಿಯೇಟಿವ್ ವ್ಯಕ್ತಿ. ಅಣ್ಣ ಅಕ್ಕ ಯಾರು ಇಲ್ಲದ ಒಂದೇ ಮಗು ಆದ್ರೆ ಅಷ್ಟಾಗಿ ಜನರ ಜೊತೆ ಬೇರೆಯಲ್ಲ. ಹಿಂಜರಿಕೆ ಸ್ವಭಾವ ಜಾಸ್ತಿ.

ಮೂಲ

ನಿಜವಾಗ್ಲೂ ಇದು ಇಷ್ಟೊಂದು ಮುಖ್ಯಾನಾ ಅಂತ ಯೋಚ್ನೆ ಮಾಡ್ತಿದ್ದೀರಾ?

ಸಂಶೋಧನೆ ಪ್ರಕಾರ ಕೊನೆಗೆ ಹೇಳಬೋದಂತದ್ದು ಏನು ಅಂದ್ರೆ ಸ್ವಲ್ಪ ಮಟ್ಟಿಗೆ ಬುದ್ದಿ ಶಕ್ತಿ, ಸ್ವಭಾವ, ವ್ಯಕ್ತಿತ್ವ ಡಿಪೆಂಡಾಗತ್ತೆ. ಆದ್ರೆ ಮನುಷ್ಯ ತಾನು ಹುಟ್ಟೋ ಜಾಗ, ಪರಿಸರ, ಸುತ್ತ ಮುತ್ತ ಇರೋ ಜನ ಇವರ ಪ್ರಭಾವದಿಂದ ಹೇಗೆ ಬೇಕೋ ಹಾಗೆ ತನ್ನನ್ನ ತಾನು ಬದಲಾಯಿಸಿಕೊಳ್ಳಬಹುದು. ಆದ್ದರಿಂದ ಯಾವತ್ತೂ ನೀವು ಏನಾಗಬೇಕು, ನಿಮ್ಮ ಗುರಿ ಏನು, ನೀವು ಹೇಗಿರಬೇಕು ಅಂತ ಅನ್ಕೊಂಡಿದೀರೋ ಅದನ್ನ ಮರೀಬೇಡಿ. 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: