ಈ ಅದ್ಭುತವಾದ ಅರೇಬಿಕ್ ಗಾದೆಗಳಿಂದ ನಿಮಗೆ ಪ್ರಪಂಚ ಇನ್ನಷ್ಟು ಚೆನ್ನಾಗಿ ಅರ್ಥ ಆಗುತ್ತೆ

ಯಾಕಂದ್ರೆ ಒಳ್ಳೇ ಕಲಿಕೆ ಎಲ್ಲಿಂದ ಬಂದರೂ ಒಳ್ಳೇದೇ

ಗಾದೆಗಳು ಎಲ್ಲಾ ಸಂಸ್ಕೃತಿಯಲ್ಲೂ ಇರುತ್ತವೆ. ಅವುಗಳ ಕರ್ತೃಗಳು ಯಾರು ಅಂತ ಯಾರಿಗೂ ಗೊತ್ತಿರಲ್ಲ. ಅರಬ್ಬಿ ಭಾಷೆಯಲ್ಲಿ ಎಂತೆಂತಹ ಗಾದೆಗಳಿವೆ ಅಂತ ಪ್ರಾಯಶಃ ನೀವು ಕೇಳಿರಲಾರಿರಿ. ಅಲ್ಲಿಯ ಮರಳುಗಾಡುಗಳು, ಅಲ್ಲಿಯ ಜನ, ಬಿಸಿಲು, ಮರಗಳು… ಇವೆಲ್ಲವೂ ಗಾದೆಗಳಲ್ಲಿ ಬಹಳ ಚೆನ್ನಾಗಿ ಕಾಣಿಸಿಕೊಳ್ಳುತ್ತವೆ. 20 ಅಂಥ ಗಾದೆಗಳ್ನ ಅಂತೆಕಂತೆ ಮೂಲಕ ನಿಮಗೋಸ್ಕರ ಇಲ್ಲಿ ತಂದಿದ್ದೀವಿ, ಓದಿ -- ಇವುಗಳಿಂದ ನಿಮಗೆ ಪ್ರಪಂಚ ಇನ್ನಷ್ಟು ಅರ್ಥವಾಗುತ್ತೆ. ಒಳ್ಳೆಯ ಕಲಿಕೆ ಎಲ್ಲಿಂದ ಬಂದರೂ ಅದು ಒಳ್ಳೆಯದೇ (ಹಾಗಂತ ಮಹಾಭಾರತದಲ್ಲೂ ಇದೆ)…

  1. ಮೌನಕ್ಕಿಂತ ಸುಂದರವಾದದ್ದು ಏನಾದರೂ ಹೇಳುವುದಾದರೆ ಮಾತ್ರ ಬಾಯಿ ಬಿಡು.
  2. ಸಿಂಹ ಸೇನಾಧಿಪತಿಯಾಗಿರುವ ಕುರಿಗಳ ಸೈನ್ಯ ಕುರಿ ಸೇನಾಧಿಪತಿಯಾಗಿರುವ ಸಿಂಹಗಳ ಸೈನ್ಯವನ್ನು ಸೋಲಿಸಿಬಿಡುತ್ತದೆ.
  3. ಒಂದು ತಪ್ಪು ಎರಡು ದುರ್ಭಾಗ್ಯಗಳನ್ನು ತರುತ್ತದೆ.
  4. ಬುದ್ಧಿವಂತರಿಗೆ ಸನ್ನೆ, ಪೆದ್ದರಿಗೆ ದೊಣ್ಣೆ
  5. ನೋಡಿದ್ದು ನಂಬು, ಕೇಳಿದ್ದು ಬಿಡು
  6. ಅನುಭವಸ್ಥರನ್ನು ಕೇಳು, ಓದಿ ತಿಳಿದಿರುವವರನ್ನಲ್ಲ.
  7. ನಾಲಿಗೆ ಚೆನ್ನಗಿದ್ದು ಮನಸ್ಸಿನಲ್ಲಿ ಕರುಣೆಯಿದ್ದರೆ ಒಂದು ಆನೆಯನ್ನು ಒಂದೆಳೆ ಕೂದಲಿಂದ ಎಳೆಯಬಹುದು.
  8. ದೋಣಿ ಅಲ್ಲಿಗೆ ಹೋಗಬೇಕು, ಗಾಳಿಗೆ ಇಲ್ಲಿಗೆ
  9. ಕೊರತೆಗಳಿಲ್ಲದ ಗೆಳೆಯರನ್ನು ಹುಡುಕುತ್ತಿರುವವನಿಗೆ ಗೆಳೆಯರೇ ಸಿಗುವುದಿಲ್ಲ
  10. ಯಾವಾಗಲೂ ಬಿಸಿಲಿದ್ದರೆ ಮರುಭೂಮಿಯಾಗುತ್ತದೆ.
  11. ದುಷ್ಟ ಶಕ್ತಿಗಳಿಂದ ದೂರವಿರು; ದೂರ ನಿಂತು ನೋಡು.
  12. ಚಲನೆಗೂ ಸಮಯಕ್ಕೂ ನಂಟಿರುವುದು ನಿಜ; ಚಲನೆಯನ್ನು ಕಂಡು ಮನಸ್ಸು ಸಮಯವನ್ನು ಊಹಿಸಿಕೊಳ್ಳುತ್ತದೆ.
  13. ಮನಸ್ಸಿನಲ್ಲಿ ಚಿಗುರುತ್ತಿರುವ ಮರವಿದ್ದರೆ ಹಾಡುವ ಹಕ್ಕಿ ಬಂದೆ ಬರುತ್ತದೆ.
  14. ಹೆಮ್ಮೆಯನ್ನು ಗೆದ್ದರೆ ಒಳ್ಳೆಯವನಾಗುವೆ. ಕೋಪವನ್ನು ಗೆದ್ದರೆ ಸಂತೋಷ ಪಡೆಯುವೆ. ಆಸೆಯನ್ನು ಗೆದ್ದರೆ ಯಶಸ್ಸನ್ನು ಪಡೆಯುವೆ. ದುರಾಸೆಯನ್ನು ಗೆದ್ದರೆ ಆನಂದವನ್ನು ಪಡೆಯುವೆ.
  15. ನಿನ್ನ ಆಜ್ಞೆಯನ್ನು ನೀನೇ ಪಾಲಿಸದೆ ಹೋದರೆ ಬೇರೆಯವರು ಹೇಗೆ ಪಾಲಿಸಿಯಾರು?
  16. ಹೆದರಿದ್ದಾಗ ಮಾಡಬೇಡ; ಮಾಡುತ್ತಿದ್ದರೆ ಹೆದರಬೇಡ.
  17. ಗೆಲುವು ನಿನ್ನ ಸಾಮರ್ಥ್ಯವನ್ನು ತೋರಿಸುತ್ತದೆ; ಸೋಲು ನಿನ್ನ ಯೋಗ್ಯತೆಯನ್ನು ತೋರಿಸುತ್ತದೆ.
  18. ಮುಚ್ಚಲಾಗದಿರುವಂಥ ಬಾಗಿಲನ್ನು ತೆಗೆಯಬೇಡ.
  19. ಹೆಂಗಸರ ಚಿಕ್ಕ ಚಿಕ್ಕ ತಪ್ಪುಗಳನ್ನು ಕ್ಷಮಿಸಲಾಗದ ಗಂಡಸರಿಗೆ ಅವರ ದೊಡ್ಡ ದೊಡ್ಡ ಗುಣಗಳು ಕಾಣಿಸುವುದಿಲ್ಲ.
  20. ಗಾಳಿಗೆ ಗುಟ್ಟನ್ನು ಹೇಳಿ ಅದು ಮರಗಳಿಗೆ ಗೊತ್ತಾದಾಗ ಗಾಳಿಯನ್ನು ಬೈಯಬೇಡ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಜಲ್ಲಿಕಟ್ಟು ನಿಲ್ಲಿಸಿದ್ದಕ್ಕೆ ತಮಿಳ್ರು ಬೀದೀಗ್ ಇಳ್ದಿದಾರೆ, ಆದರೆ ನಾವು ಸ್ವಲ್ಪ ಬೇರೆ ತರಹ

ನಮಗ್ಯಾಕೆ ಅವೆಲ್ಲ ಅಂತ

ತಮಿಳ್ರು ಜಾಣರು. ತಮ್ಮ ಸಂಸ್ಕೃತಿ ಮೇಲೆ ಯಾರೇ ದಾಳಿ ಮಾಡಲಿ, ಸುಮ್ನೆ ಇರಲ್ಲ.

ಈಗ ನೋಡಿ, ತಮಿಳ್ನಾಡಲ್ಲಿ ಬೀದೀಗಿಳಿದು ಜಲ್ಲಿಕಟ್ಟನ್ನ ಉಳಿಸಿಕೊಳೋ ಪ್ರಯತ್ನ ಮಾಡ್ತಾ ಇದಾರೆ.

ಆದರೆ ಈ ಜಲ್ಲಿಕಟ್ತಿನ ತರಹದ್ದೇ ನಮ್ಮದೂ ಒಂದು ಆಟ ಇದೆ - ಕಂಬಳ ಅಂತ. ಗೊತ್ತು ತಾನೇ? ನೀರು ತುಂಬಿರೋ ಕೆಸರು ಗದ್ದೆ ಅಥವಾ ನದಿ ದಡದ ಮರಳು ದಂಡೆ ಬದಿಯಲ್ಲಿ ಕೃತಕವಾಗಿ ಕಟ್ಟಿರೋ ಕೊಳದಲ್ಲಿ ಕೋಣಗಳ ರೇಸ್ ಅದು. ಕರ್ನಾಟಕದ ಕರಾವಳಿಯಲ್ಲಿ ಅನಾದಿಕಾಲದಿಂದ ನಡ್ಕೊಂಡ್ ಬಂದಿದೆ.

ನೆನಪಿಡಿ, ಸುಪ್ರೀಂ ಕೋರ್ಟು ಜಲ್ಲೀಕಟ್ಟಿನ ಮೇಲೆ ನಿಷೇಧ ಹೇರುವಾಗ ನಮ್ಮ ಕಂಬಳದ ಮೇಲೂ ಹೇರಿದೆ.

ಸುಪ್ರೀಂ ಕೋರ್ಟ್ ಆದೇಶ ಹೀಗಿದೆ:

"We, therefore, hold that Animal Welfare Board of India (AWBI)is right in its stand that jallikattu, bullock-cart race and such events per-se violate Sections 3, 11(1)(a) and 11(1)(m)(ii) of PCA Act and hence we uphold the notification dated 11.7.2011 issued by the Central Government, consequently, Bulls cannot be used as performing animals, either for the Jallikattu events or Bullock-cart Races in the State of Tamil Nadu, Maharashtra or elsewhere in the country."

ಇದರಲ್ಲಿ ಕಂಬಳ ಅಂತ ಹೆಸರಿಟ್ಟು ಹೇಳಿಲ್ಲ, ಆದರೆ "bullock-cart race and such events per-se" ಅಂದರೆ ಅದರಲ್ಲಿ ಕಂಬಳಾನೂ ಬರುತ್ತೆ.

ತಮಿಳ್ರು ಬೀದೀಗ್ ಇಳಿದು ತಮ್ಮ ಸಂಸ್ಕೃತಿ ತಾವು ಕಾಪಾಡ್ಕೋತಿದಾರೆ…

ಆದರೆ ಸದ್ಯಕ್ಕಂತೂ ನಾವು…

ಸ್ವಲ್ಪ…

… ಬೇರೆ ತರಹ. ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: