ಜೀವನದಲ್ಲಿ ಯಶಸ್ಸು ಹುಡುಕ್ತಾ ಇರೋರ್ಗೆ ಚಾಣಕ್ಯನ ಈ 12 ಉಪದೇಶಗಳು ಬಹಳ ಬೇಕಾಗ್ತವೆ

ಏನಾದ್ರೂ ಸಾಧಿಸ್ಬೇಕು ಅಂದ್ರೆ ನಾಚ್ಕೆ ಬಿಡ್ಲೇಬೇಕು

ಚಾಣಕ್ಯ ಅಂದ್ರೆ ಸಾಕು ಲೆಕ್ಕಾಚಾರಕ್ಕೆ, ಗೆಲುವಿಗೆ, ಒಂತರ ಜೀವನದ ಪಾಠಗಳಿಗೆ ಪಕ್ಕ ಮೇಷ್ಟ್ರು ಅಂತ ಎಲ್ರಿಗೂ ಗೊತ್ತು. ನಾವು ಪ್ರತಿದಿನ ಕೆಲವೊಂದು ಕೆಲ್ಸಾನ ಎಲ್ರುಮುಂದೆ ಮಾಡಕ್ಕೆ ಸಿಕ್ಕಾಪಟ್ಟೆ ನಾಚ್ಕೋತೀವಿ. ಆದ್ರೆ ಜೀವನದಲ್ಲಿ ಮೇಲೆ ಬರ್ಬೇಕು ಅಂತಿದ್ರೆ ನಾಚ್ಕೆ ಬಿಟ್ಟು ಕೆಲಸ ಮಾಡ್ಲೇಬೇಕು, ಅದು ಹೇಗೆ, ಯಾವ್ ಕೆಲಸ ಎಲ್ಲಿ ಮಾಡ್ಬೇಕು ಅಂತ ನಾವ್ ಹೇಳಿದೀವಿ ಓದ್ಕೊಳಿ.

1. ಬುದ್ದಿವಂತರು ಈಗಿನ ಬಗ್ಗೆ ಮಾತ್ರ ಯೋಚ್ನೆ ಮಾಡ್ತಾರೆ -- ನೆನ್ನೆ ಅಥವಾ ನಾಳೆ ಬಗ್ಗೆ ಅಲ್ಲ

ಹಿಂದಿನ ಜೀವನದ ಬಗ್ಗೆ ತಲೆಕೆಡಿಸ್ಕೊಬೇಡಿ, ಮುಂದಿಂದ್ರು ಬಗ್ಗೆ ಟೆನ್ಶನ್ ಬೇಡ. ಬರಿ ಇವತ್ತಿನ ಯೋಚ್ನೆ ಮಾಡಿ ಇವತ್ತಿನ ಕೆಲ್ಸನ ಅಚ್ಚುಕಟ್ಟಾಗಿ ಮಾಡುದ್ರೆ ನಾಳಿನ ಜೀವನ ಖಂಡಿತ ಚೆನ್ನಾಗಿ ಇದ್ದೆ ಇರತ್ತೆ 

ಮೂಲ

2. ಯಾರಿಂದಾದರೂ ಕೆಲಸ ಆಗ್ಬೇಕು ಅಂದಾಗ ಅವರಿಗೆ ಖುಷಿಯಾಗೋ ತರಹ ಮಾತಾಡ್ಬೇಕು

ಉದಾಹರಣೆ ಹೇಳ್ತಿನಿ : ಬೇಟೆಗಾರನ ಹಾಡ್ ಕೇಳಿ ಮಾಧುರ್ಯಕ್ಕೆ ಜಿಂಕೆ ಬರತ್ತೆ ಅಂತಾದ್ರೆ ಅದನ್ನ ಬೇಟೆ ಆಡ್ಬೇಕು ಅಂದಾಗ ಬೇಟೆಗಾರ ಹಾಡಲೇಬೇಕು 

ಮೂಲ

3. ಯಾರಿಂದಾದರೂ ದುಡ್ಡು ಬರಬೇಕಾದರೆ ಕೇಳಕ್ಕೆ ಹಿಂಜರೀಬೇಡಿ

ನಿಮ್ಮ ಸಂಬಂಧ ತುಂಬಾ ಕಾಲ ಚೆನ್ನಾಗಿರತ್ತೆ ಹಾಗೆ ಆ ವ್ಯಕ್ತಿ ಎಂತಾವರು ಅಂತಾನೂ ಗೊತ್ತಾಗತ್ತೆ 

ಮೂಲ

4. ಏನಾದ್ರೂ ಅರ್ಥ ಆಗ್ಲಿಲ್ಲ ಅಂದ್ರೆ ಪ್ರಶ್ನೆ ಕೇಳಕ್ಕೆ ಹಿಂಜರೀಬೇಡಿ

ವಿಷ್ಯ ತುಂಬಾ ಸುಲಭಾನೇ ಇರ್ಬೋದು ಆದ್ರೆ ಅದು ನಿಮಗೆ ಅರ್ಥ ಆಗಿಲ್ಲ ಅಂದ್ರೆ ಅರ್ಥ ಆಗೋವರ್ಗು ಬಿಡ್ಬೇಡಿ, ಎಷ್ಟ್ ಸತಿ ಕೇಳುದ್ರೂ ಪರ್ವಾಗಿಲ್ಲ ಆದ್ರೆ ತಿಳ್ಕೊಳ್ದೆ ಇರ್ಬೇಡಿ. ಯಾರ್ ಏನಂದ್ರೇನು ನಿಮಗೆ ವಿಷ್ಯ ಅರ್ಥ ಆಗ್ಬೇಕು ಅಷ್ಟೇ ನಿಮ್ಮ ಉದ್ದೇಶ.

ಮೂಲ

5. ಹಸಿದಿದ್ದಾಗ ಹೊಟ್ಟೆ ತುಂಬ ತಿನ್ನಕ್ಕೆ ನಾಚ್ಕೋಬೇಡಿ

ಹಸುವು ನಿಮಗಾಗಿರೋದು ನೀವೇ ತಿನ್ನಬೇಕು. ಸಾಮಾನ್ಯವವಾಗಿ ಮದುವೆ, ಮುಂಜಿ, ಕಾರ್ಯಕ್ಕೆ ಹೋದಾಗ ಯಾರ್ ಏನ್ ಅನ್ಕೋತಾರೋ ಅಂತ ತಿನ್ನಕ್ಕೆ ಹಿಂದೆ ಮುಂದೆ ನೋಡ್ತೀವಿ ಹೀಗೆಲ್ಲ ಮಾಡ್ಬೇಡಿ 

ಮೂಲ

6. ನಿಮ್ಮ ಗುಟ್ಟು ಯಾರಿಗೂ ಹೇಳಬೇಡಿ, ಅದು ನಿಮ್ಮನ್ನ ನಾಶ ಮಾಡಿಬಿಡುತ್ತೆ

ಪ್ರತಿಯೊಬ್ಬ ಮನುಷ್ಯನಲ್ಲೂ ಇನ್ನೊಬ್ಬ ಇರ್ತಾನೆ. ಹಾಗೆ ನಿಮ್ಮಲ್ಲಿರೋ ಇನ್ನೊಬ್ಬನ್ನ, ನಿಮ್ಮ ಸೀಕ್ರೆಟ್ ವಿಷಯಾನ ಯಾರಿಗೂ ಹೇಳ್ಬೇಡಿ. ಇದ್ರಿಂದ ನಿಮಗೆ ಯಾವತ್ತಿದ್ರೂ ಕೆಡುಕೇ ಹೊತ್ತು ಒಳ್ಳೇದಾಗಲ್ಲ 

ಮೂಲ

7. ತುಂಬ ಸಾಚ ಆಗಿರಬೇಡಿ

ಕಾಡಲ್ಲಿ ನೆಟ್ಟೂಗಿರೋ ಮಾರಾನೇ ಮೊದ್ಲು ಕಡಿಯೋದು. ಆಮೇಲೆ ಬೆರೇದನ್ನ ಕಡಿಯೋದು. ನೀವು ಯಾವತ್ತೂ ತುಂಬ ಸಾಚ ಆಗಿ ಕೆಲಸ ಮಾಡ್ಬೇಡಿ. ಕೆಲಸ ಚೆನಾಗ್ ಮಾಡಿ ಆದ್ರೆ ಪ್ರತಿ ಸತಿನು ಬೇರೆ ಬೇರೆ ಶೈಲೀಲಿ ಮಾಡಿ.

ಮೂಲ

8. ನಿಮ್ಮ ಭಾವನೇನೇ ದೇವರು, ನಿಮ್ಮ ಜೀವವೇ ದೇವಸ್ಥಾನ

ಯಾವುದೇ ಮೂರ್ತೀಲಾಗ್ಲಿ ದೇವ್ರು ಕೂತಿಲ್ಲ. ನಿಮ್ಮ ಭಾವನೆಗೆ ಬೆಲೆ ಕೊಡಿ. ಅತ್ಮಕ್ಕಿಂತ ದೊಡ್ಡ ದೇವರಿಲ್ಲ. ಆತ್ಮಸಾಕ್ಷಿಗೆ ಬೆಲೆ ಕೊಡಿ. 

9. ಭಯ ಹತ್ತಿರ ಸುಳೀತಿದ್ದಂಗೇ ದಾಳಿ ಮಾಡಿ ನಾಶ ಮಾಡಿಬಿಡಿ

ಯಾವತ್ತೂ ಯಾವುದಕ್ಕೂ ಹೆದರಬೇಕಾಗಿಲ್ಲ. ಭಯ ಅನ್ನೋದು ಬರಿ ಭ್ರಮೆ ಅಷ್ಟೇ. ಭಯ ಆದ್ರೆ ಮೊದ್ಲು ಮನಸಿಂದ ಭಯ ಅನ್ನೋದನ್ನ ಕಿತ್ತಾಕಿ 

ಮೂಲ

10. ಸ್ವಂತ ಬುದ್ಧಿ ಇಲ್ಲದವನಿಗೆ ವೇದ-ಪುರಾಣಗಳಿಂದ ಉಪಯೋಗ ಇಲ್ಲ -- ಕುರುಡನಿಗೆ ಕನ್ನಡಿ ಹೇಗೋ ಹಾಗೆ.

ಗ್ರಂಥ ಓದಿ, ಪುರಾಣ ಓದಿ ಬಾಯಲ್ಲಿ ಭಜನೆ ಹೊಡುದ್ರೆ ಆಗತ್ತಾ, ಮೊದ್ಲು ನಿಮ್ಮ ಬಗ್ಗೆ ತಿಳ್ಕೊಳಿ, ನಿಮ್ಮನ್ನ ನೀವು ಅರ್ಥ ಮಾಡ್ಕೊಳಿ ಇಲ್ಲ ಅಂದ್ರೆ ಕುರುಡನ ಮುಂದೆ ಕನ್ನಡಿ ಇಟ್ಟಂಗಾಗತ್ತೆ ನಿಮ್ಮ ಜೀವನ 

11. ಇನ್ನೊಬ್ಬರ ತಪ್ಪಿನ ಬಗ್ಗೆ ಮಾತಾಡಕ್ಕೆ ಹೋಗ್ಬೇಡಿ 

ಹೇ ಅವ್ನಿಗೆ ಈ ಕೆಲಸ ಗೊತ್ತಿಲ್ಲ, ಅವ್ನಿಗೆ ಇದು ಬರಲ್ಲ ಹೀಗೆಲ್ಲ ಇನ್ನೊಬ್ಬರ ವಿಚಾರಾನ, ಇನ್ನೊಬ್ಬರ ಸೀಕ್ರೇಟ್ನ ಒರರಿಗೆಲ್ಲ ಹೇಳೆಕ್ಕೋಗ್ಬೇಡಿ. ಪಕ್ಕದ ಮನೆಗೆ ಬೆಂಕಿ ಬಿದ್ದಿದೆ ಅಂದ್ರೆ ನಿಮ್ಮನೇನು ಸದ್ಯದಲ್ಲೇ ಉರಿಯತ್ತೆ ಅನ್ನೋದು ಪಕ್ಕ. 

ಮೂಲ

12. ಸಾವು ಯಾವತ್ತಿದ್ರೂ ಖಚಿತ, ಆದ್ದರಿಂದ ಒಳ್ಳೇ‌ ಕೆಲಸ ಮಾಡಿ

ದೇಹ, ದುಡ್ಡು ಎರಡೂ ಶಾಶ್ವತವಲ್ಲ. ಸುಮ್ನೆ ಬಿದ್ದೆ ಇರೋ ವಿಷ್ಯಕ್ಕೆ ಯಾಕೆ ತಲೆ ಕೆಡುಸ್ಕೊತ್ತೀರಾ, ಆದಷ್ಟು ನಿಮ್ಮ ಯೋಗ್ಯತೆನ ಇನ್ನು ಜಾಸ್ತಿ ಮಾಡ್ಕೊಳಕ್ಕೆ ಪ್ರಯತ್ನ ಮಾಡಿ. ಪ್ರತಿಯೊಬ್ಬಾನೂ ಪ್ರತಿ ವಿಷಯದಲ್ಲೂ ಯೋಗ್ಯ ಆಗಕ್ಕಾಗಲ್ಲ. ಎಷ್ಟಾಗತ್ತೋ ಅಷ್ಟು ಕಲಿಬೇಕು. ಯಾವತ್ತೂ ನಮ್ಮ ಅರ್ಹತೆನಾ ಜಾಸ್ತಿ ಮಾಡ್ಕೋಬೇಕು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಕಷ್ಟ ಬಂದಾಗ ಈ 12 ಸತ್ಯಗಳ್ನ ನೆನಪಿಸಿಕೊಂಡರೆ ಇನ್ನಷ್ಟು ಗಟ್ಟಿಯಾಗಿ ಹೊರಬರ್ತೀರಿ

ಸೋಲು ಗೆಲುವು ಎಲ್ಲಕ್ಕೂ ಮನಸ್ಸೇ ಕಾರಣ

ಕಷ್ಟ ಅನ್ನೋದ್ ಎಲ್ಲಾರ್ಗೂ ಬಂದೇ ಬರತ್ತೆ. ಒಂದೊಂದ್ಸಲ ಯಾವಾಗ್ ಮುಗ್ಯತ್ತಪ್ಪ ಅನ್ನೋ ಅಷ್ಟು ಕಷ್ಟಗಳು ಬರತ್ತೆ. 

ಆದ್ರೆ ನಮಗೆ ನಾವೇ ಈ 12 ಸತ್ಯಗಳ್ನ ಹೇಳ್ಕೊಂಡ್ ಸಮಾಧಾನ ಮಾಡ್ಕೊಂಡ್ರೆ ಕಷ್ಟಾನ ಎದುರಿಸೋ ಧೈರ್ಯ ಬರತ್ತೆ.

1. ಗೆಲ್ಲೋದಕ್ಕೆ ಸೋಲೋದಕ್ಕೆ ಎರಡಕ್ಕೂ ನಮ್ಮ ಮನಸ್ಸೇ ಕಾರಣ

ನಾವ್ ಮನಸ್ಸಿನಲ್ಲಿ ಏನ್ ಯೋಚ್ನೆ ಮಾಡ್ತೀವೋ ಅದೇ ತರ ನಡ್ಕೊಳ್ತೀವಿ. ನಮಗೆ ಅದೇ ತರ ಸಂದರ್ಭಗಳು ಒದಗಿ ಬರತ್ತೆ.

ನಾವು ಒಳ್ಳೇದನ್ನ ಯೋಚ್ನೆ ಮಾಡ್ತಾ, ಒಳ್ಳೇ ಕೆಲ್ಸಾನೇ ಯಾವಾಗ್ಲೂ ಮಾಡ್ತಾ ಇದ್ರೆ, ಮನಸ್ಸೂ ಒಳ್ಳೇದಾಗಿರತ್ತೆ. 

2. ನೋವು ಬರತ್ತೆ ಹಾಗೆ ಹೋಗತ್ತೆ

ಎಲ್ಲಾರ್ ಬದುಕಲ್ಲೂ ಒಂದಲ್ಲ ಒಂದು ತೊಂದ್ರೆ ಇದ್ದೇ ಇರತ್ತೆ, ಮನಸ್ಸಿಗೆ ನೋವು ತರೋ ಸಂದರ್ಭನೂ ಇದ್ದಿದ್ದೇ. ಇವೆಲ್ಲ ನಮ್ಮನ್ನ ಇನ್ನೂ ಗಟ್ಟಿ ಆಗ್ಸತ್ತೆ. ಕುಗ್ಗಕ್ಕೆ ಅವಕಾಶ ಕೊಡ್ಬಾರ್ದು ಅಷ್ಟೆ.

3. ಯೋಚ್ನೆ ಮಾಡೋದ್ರಿಂದ ಯಾವ ಸಮಸ್ಯೆನೂ ಪರಿಹಾರ ಆಗಲ್ಲ

ಯೋಚ್ನೆ ಮಾಡೋದ್ರಿಂದ ಯಾವ್ದೂ ಸರಿ ಹೋಗಲ್ಲ. ಅದ್ರಿಂದ ಮನಸ್ಸಿಗೆ ಮತ್ತೆ ದೇಹಕ್ಕೆ ಒತ್ತಡ ಜಾಸ್ತಿ ಆಗತ್ತೆ ಅಷ್ತೇ

4. ಕಷ್ಟ ಎದುರಿಸಕ್ಕೆ ಭಯಪಟ್ರೆ ಮುಂದೆ ಹೋಗಕ್ಕೆ ಆಗಲ್ಲ

ಕಷ್ಟ ಬಂತು ಅಂತ ಭಯದಿಂದ ಮನಸ್ಸು ಮುದುಡಿಕೊಂಡು ಕೂತ್ಕೋಂಡ್ರೆ ಯಾವ ಕೆಲ್ಸನೂ ಆಗಲ್ಲ.  ಹಿಂದೇನೆ ಉಳೀತೀವಿ.

ನಿಮಗೆ ಬೇಕಾಗಿರೋದೆಲ್ಲಾ ಭಯದ ಇನ್ನೊಂದು ಕಡೆ ಇದೆ. ಧೈರ್ಯವಾಗಿ ಮುನ್ನುಗ್ಗಿ ಗುರಿ ಸಾಧಿಸಿ.

5. ಅನುಭವಾನೇ ಇಲ್ದಿದ್ರೆ ಯಾವ್ದೇ ಪಾಠಾನೂ ಇರಲ್ಲ

ನಾವು ತುಂಬಾ ದ್ವೇಷ ಮಾಡೋಂಥ, ಮತ್ತೆ ನಮಗೆ ಬೇಡದೇ ಇರೋ ಅನುಭವಗಳೇ ನಮ್ಮನ್ನ ಗಟ್ಟಿಯಾಗಿ ನಿಲ್ಲೋಹಂಗೆ ಮಾಡೋದು.

6. ಪ್ರಯತ್ನಪಡದೆ ಯಾವ್ದೂ ಬದಲಾಗಲ್ಲ

ಬದಲಾವಣೆ ಅನ್ನೋದು ಏನಾದ್ರೂ ಮಾಡೋದಿಕ್ಕೆ ಸಂಬಂಧಿಸಿದ್ದು. ಸುಮ್ಮನೆ ಇರೋಕಲ್ಲ. ಯಾವುದೇ ವಿಚಾರಾನ ಬದಲಾಯಿಸಕ್ಕೆ ಪ್ರಯತ್ನ ಪಡ್ದೇ ಇದ್ರೆ ಏನೂ ಬದಲಾಗೋದೇ ಇಲ್ಲ.

7. ಆಗೋಗಿರೊದನ್ನ ಬದಲಾಯ್ಸಕ್ಕೂ ಆಗಲ್ಲ

ಆಗೋಗಿದ್ದು ಹಿಂದೆ ಸರಿದಿದ್ದು ಆಯ್ತು. ಅದನ್ನ ಬದಲಾಯ್ಸಕ್ಕೆ ಬ್ರಹ್ಮನಿಂದ್ಲೂ ಆಗಲ್ಲ

8. ರಾತ್ರೋರಾತ್ರಿ ಯಾವ್ದೇ ಕೆಲ್ಸ ಮುಗ್ಸಕ್ಕಾಗಲ್ಲ

ಯಾವ್ದೇ ಕೆಲ್ಸಾನೂ ಒಂದ್ ನಿಮಿಷದಲ್ಲಿ, ಒಂದ್ ದಿನದಲ್ಲಿ ಆಗೋದಿಲ್ಲ. ಸರಿಯಾಗಿ ಮಾಡ್ಬೇಕೂಂದ್ರೆ ಸಮಯ ಬೇಕು. ತಾಳ್ಮೆ ಇರ್ಬೇಕು. ದೊಡ್ಡ ದೊಡ್ಡ ಕನಸುಗಳನ್ನ ಸಾಧಿ ತೋರ್ಸ್ಬೇಕಾದ್ರೆ ಗುರಿ ಅಷ್ಟೆ ಅಲ್ಲ ಅದರ ಕಡೆ ಹೆಜ್ಜೆ ಹೆಜ್ಜೆನೂ ಮೆಲುಕು ಹಾಕ್ತ ಸರಿಯಾದ ದಾರೀಲಿ ನಡಿತಾ ಇದ್ದೀರಾ ಅಂತ ವಿಮರ್ಶೆ ಮಾಡೊ ಛಲ ಇರಲಿ. ಅತುರದಲ್ಲಿ ಮುಗ್ಸಕ್ಕೆ ಹೋಗಿ ಕೈ ಸುಟ್ಕೋಳೋದು ಸರಿಯಲ್ಲ.

9. ಎಲ್ಲಾ ಕೆಟ್ಟದ್ರಲ್ಲೂ ಒಳ್ಳೇದೇನೋ ಒಂದ್ ಇರತ್ತೆ

ಬರೀ ಕೆಟ್ಟದಾಗ್ತಾ ಇದೆ ಅಂತ ಆ ಟೈಮಲ್ಲಿ ಆಗೊ ಒಳ್ಳೇದನ್ನ ಗಮನ್ಸೋದೇ ಇಲ್ಲ ನಾವು. ಆದ್ರೆ, ಎಷ್ಟೇ ಕೆಟ್ಟದಾಗ್ತಾ ಇದ್ರೂ ಏನೋ ಒಂದ್ ಒಳ್ಳೇದ್ ಇದ್ದೇ ಇರತ್ತೆ.

10. ಸೋಲು ಗೆಲ್ಲೋದಿಕ್ಕೆ ಒಂದ್ ಮೆಟ್ಟಿಲು ಅಷ್ಟೇ

ಸೋತೋದೆ ಅಂತ ಆಕಾಶ ಏನೂ ತಲೆ ಮೇಲೆ ಬೀಳಲ್ಲ. ಸೋಲು ಅನ್ನೋದ್ ಗೆಲ್ಲಕ್ಕೆ ಒಂದೊಂದೇ ಮೆಟ್ಟಿಲು.

11. ಬಂದಿರೋ ಕಷ್ಟನ ಎದುರಿಸಕ್ಕೆ ನನ್ನ ಕೈಲಿ ಆಗತ್ತೆ

ಯಾರೋ ಏನೋ ಮಾಡಿದ್ರೂ ಅಂದ್ರೆ ಅದೆಲ್ಲಾ ನಮಗೂ ಆಗ್ಬೇಕೂಂತ ಏನೂ ಇಲ್ಲ. ಐದು ಬೆರೆಳೂ ಸಮ ಇರಲ್ಲ; ಹಾಗೆ ಇದೂನು. ಅವರಿವರಿಗೆ ಹೋಲಿಸಿಕೊಂಡ್ರೆ ನಿಮಗೆ ನೀವು ಅವಮಾನ ಮಾಡ್ಕೊಂಡ್ ಹಾಗೆ.

12. ಯಾರೂ ಒಂಟಿ ಅಲ್ಲ

ಈ ಪ್ರಪಂಚ್ದಲ್ಲಿ ಯಾರೂ ಒಂಟಿ ಅಲ್ಲ. ಏನೇನೆ ಅಡ್ಡಿ ಆತಂಕ ಬಂದ್ರೂ ಯಾರ್ದಾದ್ರೂ ಸಹಾಯ ಸಿಕ್ಕೇ ಸಿಗತ್ತೆ. ಎಲ್ಲಾರ್ಗೂ ಅವರವರ್ ಕಷ್ಟ ಇರತ್ತೆ. ಅದನ್ನ ಗೆದ್ದು ಬರೋ ದಾರಿ ನೋಡ್ಕೋಬೇಕು ಅಷ್ಟೇ.

ನೀವು ಎದುರಿಸ್ತಾ ಇರೋ ಸಂಕಷ್ಟ ಯಾವ್ದೇ ಇರ್ಲಿ – ಈ 12 ಸತ್ಯಗಳ್ನ ಹೇಳ್ಕೊಳಿ. ಮುನ್ನಗ್ಗಕ್ಕೆ ಧೈರ್ಯ ಬಂದೇ ಬರತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: