ಉತ್ತರಪ್ರದೇಶದಲ್ಲಿ ಒಬ್ಬಳು ಸಾಯಕ್ಕೆ ಹೊರಟಾಗ ಔಳ್ನ Google ಕಾಪಾಡಿದ್ದು ಕೇಳಿ ಖುಷಿ ಪಡ್ತೀರಿ

ತಂತ್ರಜ್ಞಾನ ಹಿಂಗೆ ಉಪಯೋಗಕ್ಕೆ ಬರಬೇಕಪ್ಪ

ಜನವರಿ 3, 2017, ಬರೇಲಿ (ಯು.ಪಿ.) - ಇಲ್ಲಿ ಒಬ್ಬ 24 ವರ್ಷದ ಹುಡುಗಿ ಆತ್ಮಹತ್ಯೆ ಮಾಡ್ಕೊಳಕ್ಕೆ ಹೋಗಿದಾಳೆ. ಕಾರಣ: ಹುಡುಗ ಕೈ ಕೊಟ್ಟ ಅಂತ. ಅವನು ಮನೆಯೋರಿಂದ ಒತ್ತಡ ತಡೀಲಾರದೆ ಬಿಟ್ಟು ಹೋದನಂತೆ. ಇವಳು ಸಹಾರನ್ಪುರದಿಂದ 4 ಕಿ.ಮೀ. ದೂರದಲ್ಲಿ ಯಮುನಾ ನಾಲೆಗೆ ಬಿದ್ದು ಸಾಯಕ್ಕೆ ಹೊರಟಿದಾಳೆ.

ಇನ್ನೇನು ಬೀಳಬೇಕು ಅನ್ನುವಷ್ಟರಲ್ಲಿ ಅವಳ ತಲೆಗೆ ಏನ್ ಬಂತೋ ಏನೋ, Google ನಲ್ಲಿ "how to commit suicide" ಅಂತ ಹುಡುಕಿದಾಳೆ. ಆಗ ಅವಳಿಗೆ Google ಬರೀ Suicide helpline numbers ಅಂದರೆ ಆತ್ಮಹತ್ಯೆಯಂಥ ಸಂದರ್ಭದಲ್ಲಿ ಕರೆ ಮಾಡಬೇಕಾದ ಫೋನ್ ನಂಬರ್ಗಳ್ನ ತೋರಿಸಿದೆ. ಅವಳಿಗೆ ಸಾಯೋ ಬಗ್ಗೆ ದ್ವಂದ್ವ ಉಂಟಾಗಿ ಒಂದು ಹೆಲ್ಪ್ ಲೈನ್ ನಂಬರ್ಗೆ ಕರೆ ಮಾಡುದ್ಲಂತೆ. DIG ಜಿತೇಂದ್ರ ಕುಮಾರ್ ಸಾಹ್ನಿ ಅನ್ನೋರು ಎತ್ಕೊಂಡ್ರಂತೆ. ಎತ್ಕೊಂಡು ಅವಳಿಗೆ ಹಾಗೆಲ್ಲ ಮಾಡಬೇಡ, ನಮ್ಮ ಹತ್ತಿರ ಬಂದು ಮಾತಾಡು ಅಂದ್ರಂತೆ. ಅವರ ಪ್ರಕಾರ:

"ಜನವರಿ 3ಕ್ಕೆ ನನಗೆ ನಮ್ಮ ಪಬ್ಲಿಕ್ ನಂಬರ್ಗೆ ಒಂದು ಕರೆ ಬಂತು. ಹುಡುಗಿ ತುಂಬಾ ಹೆದರಿದ್ದಳು. ಇನ್ನೇನು ಸಾಯಕ್ಕೆ ಹೊರಟಿದ್ದಳು. Googleನಲ್ಲಿ ಹೇಗೆ ಸಾಯೋದು ಅಂತ ಹುಡುಕಿದೆ ಅಂತಾನೂ ಹೇಳುದ್ಲು. ಆಗ ನಿಮ್ಮ ನಂಬರ್ ಸಿಕ್ತು ಅಂತ ಹೇಳುದ್ಲು. ನಾನು ಅವಳು ಹೇಳೋದನ್ನೆಲ್ಲ ಕೇಳಿಸಿಕೊಂಡು ನಮ್ಮ ಆಫೀಸಿಗೆ ಬಾ, ಇದರ ಬಗ್ಗೆ ವಿವರವಾಗಿ ಮಾತಾಡೋಣ ಅಂತ ಹೇಳಿದೆ."

ಸ್ವಲ್ಪ ಹೊತ್ತಾದಮೇಲೆ ಬಂದ್ಲಂತೆ. ಬಂದು ಎಲ್ಲಾ ಹೇಳಿದಾಳೆ. ಸುಮಾರು ವರ್ಷದಿಂದ ಒಬ್ಬ ಹುದುಗನ್ನ ಲೌ ಮಾಡ್ತಿದ್ದೆ, ಆದರೆ ಗೌರ್ಮೆಂಟ್ ಕೆಲಸ ಸಿಗ್ತಿದ್ದಂಗೇ ಮನೆಯೋರ ಒತ್ತಡ ತಡೀಲಾರ್ದೆ ನನ್ನ ಬಿಟ್ಟು ಹೊಟೋದ ಅಂದಳಂತೆ.

DIG ಸಾಹ್ನಿ ಪ್ರಕಾರ ಆ ಹುಡುಗಿ ತುಂಬಾ ಶಾಕ್ ಆಗಿ ನಡಗಿ ಹೋಗಿದ್ದಳಂತೆ. ಆದರೆ ಅವಳು ಅವಳ ಲವರ್ ಬಗ್ಗೆ ಏನೂ ದೂರ್ತಾ ಇರಲಿಲ್ಲವಂತೆ. ಸ್ಟೇಶನ್ನಲ್ಲಿದ ಹೆಂಗಸು ಅಧಿಕಾರಿ ಒಬ್ಬರು ಕೂಡ ಅವಳಿಗೆ ಬುದ್ಧಿವಾದ ಹೇಳಿದಾರೆ. ಆ ಹುಡುಗನಿಗೂ ಕರೆ ಮಾಡಿ ಮಾತಾಡಿದರಂತೆ. ಹುಡುಗ ಹುಡುಗಿ ಇಬ್ಬರಿಗೂ ಒಳ್ಳೇ ಜೀವನ ಮಾಡೋದು ಹೇಗೆ ಅಂತ ತಿಳಿಸಿ ಹೇಳುದ್ರಂತೆ.

ತಂತ್ರಜ್ಞಾನ ಇವಳ ಜೀವ ಉಳಿಸಿತು. ಥ್ಯಾಂಕ್ಸ್ ಗೂಗಲ್!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

2017ರಲ್ಲಿ ಒತ್ತಡ ಕಡಿಮೆ ಮಾಡ್ಕೊಂಡು ಜೀವನ ಸವೀಬೇಕು ಅಂತಿದ್ರೆ ಇಲ್ಲಿ ಸ್ವಲ್ಪ ಕೇಳಿ

ಸುಂದರ ಬದುಕು ನಿಮ್ಮದಾಗಿಸಿಕೊಳ್ಳೋ ಆಸೆ ಇದ್ರೆ

ಬೆಳಗಾದ್ರೆ ಕೆಲಸಕ್ಕೆ ಓಡೋ ಭರಾಟೆಲಿರ್ತೀವಿ, ಹೆಣ್ಣುಮಕ್ಕಳಾದ್ರೆ ಮನೆ ಕೆಲಸ ಎಲ್ಲ ಮುಗಿಸಿ ಓಡಬೇಕು, ಕೆಲಸದಲ್ಲೆನು ಒತ್ತಡಕ್ಕೆ ಕೊರತೇನ? ಇದೆಲ್ಲ ಮುಗಿದಮೇಲೆ ನನ್ನನ್ನ ಗಮನಿಸಿಕೊಳ್ತಿಲ್ಲಾ ಅನ್ನೋ ಗಂಡ/ ಹೆಂಡತಿ, ಆಡೋಕು ನನ್ನ ಜೊತೆ ಬರೋಲ್ವಾ ಅನ್ನೋ ಮಕ್ಕಳು....... ಯಾಕಪ್ಪ ಜೀವನ ಅನ್ಸುತ್ತೆ ದಿನದ ಕೊನೆಲಿ. 

ಇದೆಲ್ಲಾ ನಿಮಗೂ ಅನ್ನಿಸ್ತಿದ್ರೆ ಖಂಡಿತ ಇವೆಲ್ಲದರ ಬಗ್ಗೆ ಗಮನ ಹರಿಸೋಕು ಇದು ಸರಿಯಾದ ಸಮಯ.

1. ದಾರಿ ತಪ್ಪಿಸೋರ್ನ ದೂರ ಇಡಿ

ಕೆಲವರನ್ನ ಕಷ್ಟದಲ್ಲಿ ಭೇಟಿ ಮಾಡೋಕೆ ಪ್ಲ್ಯಾನ್ ಮಾಡಿರ್ತೀರಿ. ಆದ್ರೆ ಅವರನ್ನ ಭೇಟಿ ಮಾಡಿದ್ರೆ ಬೇಡದ ಮಾತುಗಳು, ಬೇಡದ ವಿಷಯಗಳು ನಿಮ್ಮನ್ನ ಕಾಡುತ್ತೆ ಅನ್ನಿಸಿದ್ರೆ ಅಂಥವರ ಜೊತೆ ಕಳೆಯೋ ಸಮಯಾನ ಕಡಿಮೆ ಮಾಡಿಕೊಳ್ಳಿ. ಸಾಧ್ಯ ಆದ್ರೆ ಅಂಥವರನ್ನ ಭೇಟಿ ಮಾಡದೇ ಇರೋದೆ ಒಳ್ಳೇದು.

ಅವರೇ ಕಾಫಿಗೋ ಊಟಕ್ಕೋ ಕರೆದರೆ ಹೋಗದೇ ಇರೋಕೆ ನೆಪ ಹುಡುಕಿ, ಖುಷಿ ಆಗಿರ್ತೀರಿ.

ಮೂಲ

2. ಯಾವಾಗಲೂ ಲೇಟು ಅನ್ನಿಸಿಕೋಬೇಡಿ, ನಿಮ್ಮ ದಿನಾನ ಸರಿಯಾಗಿ ಪ್ಲಾನ್ ಮಾಡಿ

ದಿನ ತಡವಾಗಿ ಹೋಗಿ ಹೋಗಿ ಒತ್ತಡ ಜಾಸ್ತಿ ಆಗ್ತಿದ್ರೆ ನಿಮ್ಮ ದಿನದ ಪ್ಲ್ಯಾನ್ ನಲ್ಲಿ ಬದಲಾವಣೆ ಮಾಡಿಕೊಳ್ಳಿ. ಗಾಡಿ ಓಡಿಸೋ ಸಮಯ, ಟ್ರಾಫಿಕ್ ಜೊತೇಲಿ ನಿಮ್ಮ ಸಣ್ಣ ಪುಟ್ಟ ಕೆಲಸಗಳಿಗೂ ಸಮಯ ಕೊಟ್ಟು ಪ್ಲ್ಯಾನ್ ಮಾಡಿ,  ಬಸ್ ಬೇಗ ಹತ್ತಿ, ಅರ್ಧ ಗಂಟೆ ಮುಂಚೆ ಮನೆಯಿಂದ ಹೊರಡಿ, ಆಗ ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳು ಆಗುತ್ವೆ.

ಮೂಲ

3. ಮಾಡಬೇಕಾದ ಕೆಲಸ ಬೆಟ್ಟದಂಗೆ ಬೆಳೀಬಾರದು… ಹಂಗೆ ನೋಡ್ಕೊಳಿ

ಬೆಳಗಾದ ತಕ್ಷಣ ನಿಮ್ಮ ಕಣ್ಮುಂದೆ ರಾಶಿ ರಾಶಿ ಕೆಲಸ ಕಂಡ್ರೆ ಯಾರಿಗೆ ತಾನೆ ಖುಷಿ ಆಗುತ್ತೆ ಹೇಳಿ!! ಆದ್ರೆ ಹಾಗಂತ ನಾವು ತಪ್ಪಿಸ್ಕೊಳ್ಳೋಹಾಗೂ ಇಲ್ಲ ಅಲ್ವ? ಆದ್ರಿಂದ ನಿಮ್ಮ ಕೆಲಸಗಳ ಎರಡು ಪಟ್ಟಿ ಮಾಡ್ಕೊಳ್ಳಿ. ಒಂದು ನಿಮಗೆ ಖುಷಿ ಕೊಡೋದು ಮತ್ತೊಂದು ನಿಮಗೆ ಇಷ್ಟ ಆಗದ್ದು. ಈಗ ಇವರಡನ್ನೊ ಸಮಾನವಾಗಿ ಮಾಡುತ್ತಾ ಹೋಗಿ.

ನಿಮಗೆ ನಿಮ್ಮ ಹೆಂಡತಿನ ಶಾಪಿಂಗ್ ಕರ್ಕೊಂಡು ಹೋಗೋದು ಇಷ್ಟ ಇಲ್ಲ ಅಂದ್ರೆ, ನಿಮಗೆ ಬೇಕಾದನ್ನು ನೀವೂ ಕೊಳ್ಳಬಹುದಾದ ಅಂಗಡಿಗೆ ಹೋಗಿ. ನಿಮಗೆ ಬೇಕಾದ್ದು ನೀವು ತಗೊಳ್ಳಿ ಅವರಿಗೆ ಬೇಕದ್ದು ಅವರು ತಗೋತಾರೆ, ಕೆಲಸ ಖುಷಿಲೇ ಮುಗೀತಲ್ವ?

ಮೂಲ

4. ನಿಮ್ಮ ಸಾಮಾನು ಚೆಲ್ಲಾಪಿಲ್ಲಿ ಆಗದೆ ಇರೋಹಂಗೆ ನೋಡ್ಕೊಳ್ಳಿ

ವಾರ ಇಡೀ ಬ್ಯುಸಿ ಆಗಿರೋ ನಿಮಗೆ ಬಳಸಿದ ವಸ್ತುಗಳನ್ನ ಅದದೇ ಜಾಗಗಳಿಗೆ ಸೇರಿಸೋದು ಕಷ್ಟ ಆಗಿ ನಾಳೆ ನಾಳೆ ಅನ್ಕೋತಾ ಒಂದು ರಾಶಿ ಆಗಿದ್ರೆ ಅದನ್ನೆಲ್ಲ ಶನಿವಾರ ಮಾಡಬೇಕನ್ನೋ ಒತ್ತಡ ಕಾಡುತ್ತಿದ್ರೆ. ಬೇಸರ ಇಲ್ಲದೆ ನಿಮಗಿಷ್ಟ ಆಗೋ ಸಂಗೀತ ಕೇಳುತ್ತ ಕೆಲಸ ಮಾಡಿ, ಜೊತೇಲಿ ಕೆಲಸ ಎಲ್ಲ ಮುಗಿದ ಮೇಲೆ ನಿಮಗಿಷ್ಟ ಆಗೋ ಜಾಗಕ್ಕೆ ಹೋಗೋ ಪ್ಲಾನ್ ಮಾಡ್ಕೊಳ್ಳಿ ಆಗ ಒತ್ತಡ ಇರಲ್ಲ.

ಮೂಲ

5. ಭಿನ್ನಾಭಿಪ್ರಾಯಗಳನ್ನ ಪಕ್ಕಕ್ಕಿಡಿ

ಎಷ್ಟೋ ಸಾರಿ ಎದುರಿಗೆ ಇರೋ ವ್ಯಕ್ತಿಗೆ ನಮ್ಮ ಮನಸ್ಸಿನಲ್ಲಿರೋ ಮಾತು ಹೇಳೋಕಾಗ್ದೆ ಒಳಗೊಳಗೇ ಗೊಣಗಾಡ್ತ ಇರ್ತೀವಿ. ಇದು ನಿಮಗೆ ಒತ್ತಡ ಹೇರುತ್ತೆ. ಇದರಿಂದ ಹೊರಬರೋಕೆ ಮಾತುಗಳನ್ನ ಆಡೋ ಅಭ್ಯಾಸ ಮಾಡಿಕೊಂಡ್ರೆ ಒಳ್ಳೇದು ಇಲ್ಲ ಅಂದ್ರೆ 10 ನಿಮಿಷಕ್ಕಿಂತ ಹೆಚ್ಚು ಯಾವುದೇ ವಿಷಯಕ್ಕೂ ತಲೆ ಕೆಡಿಸಿಕೊಳಲ್ಲ ಅಂತ ನಿರ್ಧಾರ ಮಾಡಿ. ಅಕಸ್ಮಾತ್ ನಿಮ್ಮ ಮನಸ್ಸು ನಿಮ್ಮ ಮಾತು ಕೇಳ್ತಿಲ್ಲ ಅಂದ್ರೆ ಒಂದು ಪೇಪರ್ ನಲ್ಲಿ ನಿಮಗನ್ನಿಸಿದ್ದನ್ನೆಲ್ಲ ಬರೆದು ಸುಟ್ಟು ಹಾಕಿ, ಮನಸ್ಸು ನಿರಾಳ ಅನ್ಸುತ್ತೆ.

ಮೂಲ

6. ಇಲ್ಲ/ಆಗಲ್ಲ ಅನ್ನೋದನ್ನ ಅಭ್ಯಾಸ ಮಾಡ್ಕೊಳ್ಳಿ

ಯಾರಾರು ಏನಾರು ಕೆಲಸ ಹೇಳಿದಾಗ ಮನಸ್ಸು ಆಗಲ್ಲ ಅಂತಿದ್ರು ತುಟಿ ಹೂ ಅನ್ನೋಕೆ ಬಿಡಬೇಡಿ. ನಿಮಗಿಷ್ಟ ಇಲ್ಲದ್ದನ್ನ ಕೇಳಿದ್ರೆ ಇಲ್ಲ ಅನ್ನೋ ಅಭ್ಯಾಸ ಮಾಡ್ಕೊಳ್ಳಿ ಅಥವಾ ಆ ಕೆಲಸ ಇಷ್ಟ ಪಡೋ ವ್ಯಕ್ತಿಗೆ ಅದನ್ನ ಹೇಳೋ ಅಭ್ಯಾಸ ಮಾಡ್ಕೊಳ್ಳಿ ನಿಮಗೂ ಖುಷಿ ಅವರಿಗೂ ಖುಷಿ. ಹತ್ತು ಕೆಲಸ ಒಪ್ಪಿಕೊಂಡು ಸರಿಯಾಗಿ ಮಾಡದೇ ಇರೋಕ್ಕಿಂತ ಒಂದನ್ನ ಸರಿಯಾಗಿ ಮಾಡೋದು ಒಳ್ಳೇದಲ್ವಾ?

ಮೂಲ

7. ಮನೆಯೋರ ಜೊತೆ ಹೆಂಗಿರಬೇಕು ಅಂತ ತಿಳ್ಕೊಳಿ

ಯಾವುದಾದ್ರೂ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಂದು ಕಡೆ ಸೇರಿ ಮಾತಾಡೋ ಪರಿಸ್ಥಿತೀಲಿ ನಿಮಗೆ ಅಲ್ಲಿಂದ ಓಡೋಗ್ಬೇಕು ಅಂತ ಅನ್ಸಿದ್ರೆ ನಿಮಗೆ ನಿಮ್ಮ ಕುಟುಂಬದಲ್ಲೂ ಒತ್ತಡ ಇದೆ ಅಂತರ್ಥ. ನೆಂಟರ ಕೊಂಕು, ಅದಕ್ಕೆ ತಲೆ ಆಡಿಸೋ ಅಪ್ಪ - ಅಮ್ಮ ನಿಮಗೆ ಹಿಂಸೆ ಅನ್ನಿಸ್ತಿದ್ರೆ ಅವ್ರನ್ನೆಲ್ಲ ಬದಿಗಿಟ್ಟು ಯೋಚ್ನೆ ಮಾಡಿ ಅಥವಾ ಅವರು ಮಾತು ಆರಂಬಿಸೋಕೆ ಮುಂಚೆ ನೀವೇ ನಿಮಗಿಷ್ಟ ಆಗೋ ಮಾತು ಶುರು ಮಾಡಿ, ಇನ್ನು ಕಷ್ಟ ಅನ್ಸಿದ್ರೆ ಸ್ವಲ್ಪ ಸಮಯ ಮಾತ್ರ ಅವರ ಜೊತೆಲಿರಿ, ನಿಮಗೆ ಹೆಚ್ಚು ತೊಂದ್ರೆ ಕೊಡೊ ಸಂಬಂಧಗಳು ದೂರ ಇದ್ದಷ್ಟು ಒಳ್ಳೇದು.

ಮೂಲ

8. ಹಿಂದೆ ಮಾಡಿದ ಕೆಲಸ ಆಡಿದ ಮಾತು ಮರೆತುಬಿಡಿ

ಹಿಂದೆ ಯಾರ ಜೊತೆಲಾದ್ರೂ ಜಗಳ ಆಡಿದ್ರೆ ಅಥವಾ ಚಿಕ್ಕವಯಸ್ಸಿನಲ್ಲಿ ಯಾವತ್ತಾದ್ರೂ ತಪ್ಪು ಮಾಡಿದ್ರೆ ಅದನ್ನೇ ಮೆಲುಕು ಹಾಕೋದು ಬಿಡಿ, ಅದರಿಂದ ಏನೂ ಬದಲಾಗಲ್ಲ ಅನ್ನೋದು ನಿಮಗೆ ಗೊತ್ತಿದೆ ತಾನೇ. ನೆನ್ನೆ ಬಗ್ಗೆ ಯೋಚ್ನೆ ಮಾಡೋದ್ರಿಂದ ನೀವು ಅದೇ ಘಟನೆಗಳಲ್ಲಿ ಜೀವನ ಮಾಡೋದು ಹೆಚ್ಚು, ಅದು ನಿಜ ಜೀವನದ ಒತ್ತಡಕ್ಕಿಂತ ನಿಮಗೆ ಹೆಚ್ಚು ತೊಂದ್ರೆ ಕೊಡುತ್ತೆ. ಹಳೇದನ್ನ ಮರೆಯೋ ಪ್ರಯತ್ನ ಮಾಡಿ ಅಥವಾ ಬೇರೆ ವಿಷಯಗಳಲ್ಲಿ ನಿಮ್ಮನ್ನ ತೊಡಗಿಸಿಕೊಳ್ಳಿ.

ಮೂಲ

ಕೇಳಿದ್ರೇನೇ ನಿರಾಳ ಅನ್ಸುತ್ತೆ ಇನ್ನು ಮಾಡಿದ್ರೆ.... ಹಾಗಿದ್ರೆ ತಡ ಯಾಕೆ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: