ಸುಖ ದಾಂಪತ್ಯದ ಈ 12 ಗುಟ್ಟುಗಳ್ನ ಕೃಷ್ಣನ ಹೆಂಡತಿ ಸತ್ಯಭಾಮಂಗೆ ದ್ರೌಪದಿ ಹೇಳ್ಕೊಟ್ಟಿದ್ಲಂತೆ

"ಅವರಿವರ ವಿಷ್ಯ ಮಾತಾಡೋ ಹೆಂಗಸರಿಂದ ದೂರ ಇರು"

ಮಹಾಭಾರತದಲ್ಲಿ ತುಂಬಾ ನಿಗೂಢ ಮತ್ತೆ ವಿಶೇಷ ಅನ್ನಿಸೋ ಹೆಂಗಸರಲ್ಲಿ ದ್ರೌಪದಿ ಹೆಸ್ರೇ ಮೊದ್ಲು ಬರೋದು. ದ್ರೌಪದಿಯಿಂದ್ಲೇ ಕುರುಕ್ಷೇತ್ರ ನಡೆದಿದ್ದು ಅನ್ನೋ ಕತೆ ಜೊತೆ ಆಕೆ ಅದೆಂಥಾ ಧೈರ್ಯವಂತೆ ಆಗಿದ್ಲೂ ಅನ್ನೋದೂ ಕೂಡ ಅದೇ ಕತೇಲಿ ನಾವ್ ನೋಡ್ಬೋದು. ಒಬ್ಬರಲ್ಲ ಇಬ್ರಲ್ಲಾ ಐದು ಜನ ಗಂಡಂದಿರ (ಪಾಂಡವರ) ಹೆಂಡತಿಯಾಗಿ ಆಕೆ ಜೀವನ ಮಾಡಿದ ರೀತಿ ನೋಡಿದ್ರೆ ಕಲೀಬೇಕಾದ್ದು ತುಂಬಾನೇ ಇದೆ.

ಮಹಾಭಾರತದ ಒಂದು ಅಧ್ಯಾಯ... ಸತ್ಯಭಾಮಾ ಕೃಷ್ಣನ ಜೊತೆಗೆ ಮದ್ವೆ ಆಗೋ ಮೊದ್ಲು... ದ್ರೌಪದಿ ಮತ್ತೆ ಸತ್ಯಭಾಮ ಮಾತಾಡ್ತಾ ಕೂತಿದ್ದಾಗ ಈ 12 ಸಂಸಾರದ ಗುಟ್ಟನ್ನ ಸತ್ಯಭಾಮಂಗೆ ಹೇಳ್ಕೊಟ್ಟಳಂತೆ. ಈಗ ನೀವೂ ಓದಿ...

1. "ಹೆಂಡತಿ ಬುದ್ದಿವಂತೆಯಾದ್ರೆ ಅವಳ ಮತ್ತು ಗಂಡನ ಮನೆಯವರ ಬಗ್ಗೆ, ನೆಂಟರ ಬಗ್ಗೆ ಸರ್ಯಾಗಿ ತಿಳ್ಕೊಂಡಿರ್ತಾಳೆ. ನೀನು ತಿಳ್ಕೊಳ್ಳೊ ಪ್ರಯತ್ನ ಮಾಡು"

ಮೂಲ

2. "ನಾನು ನಿಜವಾದ ತಮಾಷೆಗೆ ಮಾತ್ರ ನಗೋದು. ಸುಮ್ನೆ ಸುಮ್ನೆ ನಗೋಲ್ಲ. ಹಾಗಿರೋದ್ರಿಂದಾನೆ ಗಂಡಂದ್ರು ನನ್ನ ನಗಿಸೋಕ್ಕೆ ನಿಜವಾದ ಪ್ರಯತ್ನ ಮಾಡ್ತಾರೆ"

ಮೂಲ

3. "ಗಂಡನಲ್ಲಿರೋ ನ್ಯೂನತೆಗಳ್ನ ಎತ್ತಿ ಮಾತಾಡಬಾರ್ದು. ಬೆಂಕಿಯ ಜೊತೆಗೆ ಹೊಗೆ ಇರೋ ಹಾಗೆ ಪ್ರಪಂಚದ ತುಂಬೆಲ್ಲಾ ಒಂದಲ್ಲಾ ಒಂದು ನ್ಯೂನತೆ ಇದ್ದೆ ಇರುತ್ತೆ. ಅದನ್ನೆಲ್ಲಾ ಮರ್ತು ಮುಂದೆ ಹೋಗೋ ಬುದ್ಧಿವಂತಿಕೆ ಇರ್ಬೇಕು"

ಮೂಲ

4. "ಗಂಡನ ಜೊತೆಗೆ ದ್ವೇಷ ಸಾಧಿಸೋದು ಒಳ್ಳೇದಲ್ಲ ಹಾಗೇ ಎಲ್ಲ ವಿಷಯದಲ್ಲೂ ಕ್ಷಮಿಸೋದೂ ಸರಿಯಲ್ಲ. ಎರಡನ್ನೂ ತೂಗಿಸ್ಕೊಂಡು ಹೋಗೋದನ್ನ ಕಲೀಬೇಕು"

ಮೂಲ

5. "ಬುದ್ಧಿವಂತ ಹೆಂಡ್ತಿಗೆ ಕೋಪದ ಕೈಗೆ ಬುದ್ಧಿ ಕೊಡಬಾರ್ದು ಅಂತ ಗೊತ್ತಿರ್ಬೇಕು. ಇಲ್ದಿದ್ರೆ ತೊಂದ್ರೇಲಿ ಸಿಕ್ಕಾಕ್ಕೊಂಡು ಒದ್ದಾಡ್ಬೇಕಾಗುತ್ತೆ"

ಮೂಲ

6. "ಸದಾಕಾಲ ಗಂಡನ್ನ ಅಂಕೇಲಿ ಇಟ್ಕೊಳ್ಳೋದು ಬಿಡ್ಬೇಕು. ಹಾಗ್ ಮಾಡೋಕ್ಕೋಗಿ ಮಾಟ-ಮಂತ್ರ ಯಂತ್ರ-ತಂತ್ರ ಅಂತೇನಾದ್ರೂ ಮಾಡಿದ್ರೆ ಅದ್ರಿಂದ ತಾಪತ್ರಯ ಆಗ್ಬೋದು"

ಮೂಲ

7. "ಅವರಿವರ ವಿಷ್ಯ ಜಾಸ್ತಿ ಗುಸು ಗುಸು ಮಾಡೋ ಹೆಂಗಸರಿಂದ ದೂರ ಇರೊದೊಳ್ಳೆದು. ಯಾಕಂದ್ರೆ ಅವ್ರ ಪ್ರಭಾವದಿಂದ ಜೀವನಾನೇ ಹಾಳಾಗ್ಬೋದು"

ಮೂಲ

8. "ಕುಟುಂಬದಲ್ಲಿರೋರು ದೊಡ್ಡೋರೆ ಆಗಿರ್ಲಿ ಚಿಕ್ಕೋರೇ ಆಗಿರ್ಲಿ ಎಲ್ಲಾರ್ಗೂ ಪ್ರೀತಿ ಜೊತೆ ಮರ್ಯಾದೇನೂ ಕೊಡ್ಬೇಕು. ಅದು ಬಾಂಧವ್ಯ ಗಟ್ಟಿಯಾಗೋದಕ್ಕೆ ಸಹಾಯ ಮಾಡುತ್ತೆ"

ಮೂಲ

9. "ಮನೆ ಕೆಲ್ಸ ಕಾರ್ಯ ಮಾಡೋದಕ್ಕೆ ಗಂಡನ್ನ ಗಮನಿಸ್ಕೊಳ್ಳೋದಕ್ಕೆ ಸೋಮಾರಿತನ ಪಡಲೇಬಾರದು. ಮನೆ ಅಚ್ಚುಕಟ್ಟಾಗಿಡೋ ಹೆಂಡ್ತೀನ ಗಂಡ ತುಂಬಾನೇ ಪ್ರೀತಿ ಮಾಡ್ತಾನೆ"

ಮೂಲ

10. "ಸುಮ್ಸುಮ್ನೆ ಕೆಲಸ ಕಾರ್ಯ ಇಲ್ದೆ ಕಿಟಕಿ ಹತ್ರ ಬಾಲ್ಕನೀಲಿ ಮನೆ ಹೊರ ಅಂಗಳದಲ್ಲಿ ಓಡಾಡಬಾರ್ದು. ಅದ್ರಿಂದ ಸಮಾಜ ಅವಳ ಬಗ್ಗೆ ತಪ್ಪು ತಿಳ್ಕೊಳ್ಳೊ ಸಾಧ್ಯತೆ ಹೆಚ್ಚು"

ಮೂಲ

11. "ಸೋಮಾರಿಯಾಗಿ ಕೂತ್ಕೊಳ್ಳೋದು, ಗುರ್ತು ಪರಿಚಯ ಇಲ್ಲದೋರ ಹತ್ರ ಬೇಕಿಲ್ಲದ್ದೆಲ್ಲಾ ಮಾತಾಡೋದೂ ಮಾಡಬಾರ್ದು. ಅದ್ರಿಂದ ಹೆಣ್ಣಿನ ಘನತೆ ಹಾಳಾಗುತ್ತೆ"

ಮೂಲ

12. "ಅನೈತಿಕತೆ ಅನ್ನೋದು ಬದುಕಲ್ಲಿ ಬಂದ್ರೆ ಕುಟುಂಬದಲ್ಲಿರೋ ಹೆಣ್ಣೂ ದಾರಿ ತಪ್ತಾಳೆ. ಹೆಣ್ಣು ದಾರಿ ತಪ್ಪಿದ್ರೆ ಸಮಾಜದಲ್ಲಿ ಸಾವಿರ ಸಮಸ್ಯೆ ಶುರುವಾಗುತ್ತೆ"

ಮೂಲ

ಉಪಯೋಗ ಪಡ್ಕೊಳ್ಳೋದು ನಿಮಗೆ ಬಿಟ್ಟಿದ್ದು...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 10 ಪ್ರಶ್ನೆಗಳಿಗೆ ನೀವು ಕೊಡೋ ಉತ್ತರದಿಂದ ನಿಮ್ಮ ವ್ಯಕ್ತಿತ್ವದ ಕೇಂದ್ರಬಿಂದು ಯಾವುದು ಅಂತ ಗೊತ್ತಾಗುತ್ತೆ

ಒಂದು ಚಿಕ್ಕ ಅಂತೆಕಂತೆ ಕ್ವಿಜ಼್‌

ಚಕ್ ಚಕ್ ಅಂತ ಉತ್ತರ ಆಯ್ಕೆ ಮಾಡ್ಕೋತಾ ಹೋಗಿ… ಜಾಸ್ತಿ ಯೋಚನೆ ಮಾಡಬೇಡಿ…:-)

 

 

ನೆನೆಪದ: 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: