ಗೊತ್ತಿದ್ದೋ ಗೊತ್ತಿಲ್ಲದೇನೋ ಈ 9 ಸುಳ್ಳು ನಿಮಗೆ ನೀವೇ ಹೇಳ್ಕೋತಿದ್ರೆ ಮೊದ್ಲು ಬಿಟ್ಟುಬಿಡಿ, ಒಳ್ಳೇದು

"ಅವಳು ಸಿಕ್ಕರೆ ಮಾತ್ರ ನಾನು ಖುಷಿಯಾಗಿರಕ್ಕೆ ಸಾಧ್ಯ"

ಜೀವನಾನೆ ಒಂತರಾ ಉಲ್ಟಾ ಪಲ್ಟಾ, ನಂಬೇಕಾದನ್ನೆ ನಂಬಿರಲ್ಲ ಯಾವ್ದೋ ಹಳಸಿಹೋಗಿರೊ ಸುಳ್ನ್ ನಂಬ್ತೀವಿ. ಇಲ್ಲಿ ಕೆಳಗಡೆ ಸುಳ್ಳನ್ನ ಕೊಟ್ಟಿದೀವಿ ಅದನ್ನ ಇಲ್ಲಿತಂಕ ನಂಬುತ ಬಂದಿದೀರ ಆದ್ರೆ ಇನ್ಮುಂದೆ ನಂಬೇಡಿ.

1. "ನನಗೆ ಅವಳು/ಅವನು ಸಿಕ್ಕರೆ ಮಾತ್ರ ಖುಷಿಯಾಗಿರಕ್ಕೆ ಸಾಧ್ಯ"

ಯಾರಾದರೂ ಲವ್ ಮಾಡಿದಾರೆ ಅಂದ ತಕ್ಷಣ ಅವರು ಖುಷ್ಯಾಗಿದಾರೆ ಅಂತ ಅಲ್ಲ. ಮನ್ಸಿಗೆ ನೆಮ್ಮದಿ ಇಲ್ಲದಿರೋ ಸಂಬಂಧಕ್ಕಿಂತ ಆರಾಮಾಗಿ ಒಬ್ನೇ ಇರೋದೇ ವಾಸಿ. ಮೊದ್ಲು ನೀವು ನಿಮ್ಮಲ್ಲಿ ನಿಮ್ಮನ್ನ ಹುಡುಕ್ಕೊಳಿ. ಸಂಬಂಧ ಹಳಸಿಹೋದಾಗ್ಲೂ ನೀವು ಆರಾಮಾಗಿರೋದು ಹೇಗೆ ಅಂತ ಗೊತ್ತಾಗತ್ತೆ.

ಮೂಲ

2. "ನನಗೆ ಇಷ್ಟವಾದ್ದು ಸಿಕ್ಕರೆ ಮಾತ್ರ ನಾನು ಖುಷಿಯಾಗಿರಕ್ಕೆ ಸಾಧ್ಯ"

ಖುಷಿಯಾಗಿರಕ್ಕೆ ನಮ್ಮ ಆಸೆಪಟ್ಟಿದೆಲ್ಲಾ ಸಿಗ್ಬೇಕು ಅಂತೇನಿಲ್ಲ. ಎಷ್ಟೋ ಸತಿ ಏನೋ ದೊಡ್ಡದನ್ನಾ ಪಡ್ಕೊಳಕ್ ಹೋಗಿ ನಮಗೆ ಸಿಗೋ ಚಿಕ್ಕ ಚಿಕ್ಕ ಖುಶಿನಾ ಕಳ್ಕೋತೀವಿ. ಜೀವನಾನೆ ಹಂಗೆ ತಲಪೋ ಜಾಗಕ್ಕಿಂತ ಹೋಗೋ ದಾರೀಲೆ ಖುಷಿ ಪಡ್ಬೇಕು. ಪ್ರತಿಕ್ಷಣಾನು ಖುಷಿ ಪಡಿ. ಇಲ್ಲದೆ ಇರೋದ್ರುಬಗ್ಗೆ ಕೋರ್ಗದಕ್ಕಿಂತ ಇರೋದ್ರಲ್ಲಿ ಖುಷಿಯಾಗಿರಿ. ಇವತ್ತಿನ ದಿನ ಬೇಕು ಅಂದ್ರು ಮತ್ತೆ ಸಿಗಲ್ಲ.

ಮೂಲ

3. "ಕಣ್ಣಿಗೆ ಕಾಣಿಸಿದರೆ ಮಾತ್ರ ನೋವಿದೆ ಅಂತ ಅರ್ಥ"

ಇದ್ರಂತ ದೊಡ್ಡ್ ಸುಳ್ಳು ಮತ್ತೊಂದಿಲ್ಲ. ನೋವ್ವು ಅಂದ್ರೆ ಬರಿ ಗಾಯ ಆಗತ್ತೆ, ಅಳ್ತಾ ಇರ್ಬೇಕು ಅಂತ ಅಲ್ಲ. ಎಷ್ಟೋ ಜನ ಸಿಕ್ಕಾಪಟ್ಟೆ ನೊವ್ವ್ ತಿಂತಿದ್ರು ಎದ್ರುಗಡೆ ನಗ್ತಾ ನಗ್ತಾ ಇರ್ತಾರೆ. ನಿಜ್ವಾದ್ ನೋವ್ವು ಯಾವತ್ತೂ ಕಣ್ಣಿಗೆ ಸುಲಭವಾಗಿ ಕಾಣ್ಸಲ್ಲ. ಯಾರನ್ನು ಅವ್ರ್ ಹಿಂಗೇ ಇವ್ರ್ ಹಿಂಗೇ ಅಂತ ಬರಿ ನೋಡಿ ನಿರ್ಧಾರ ಮಾಡ್ಬೇಡಿ. ಅಷ್ಟೊಂದ್ ಪುರ್ಸೊತ್ತಿದ್ರೆ ಬೇರೆ ಯಾವ್ದಾದ್ರು ಒಳ್ಳೆ ಕೆಲ್ಸಕ್ಕೆ ಸಮಯ ಉಪಯೋಗುಸ್ಕೊಳಿ 

ಮೂಲ

4. "ಜೀವನದಲ್ಲಿ ಇಂತಿಂಥದ್ದು ಆಗಬೇಕು, ಇಲ್ಲದಿದ್ದರೆ ಅದು ಜೀವನವೇ ಅಲ್ಲ"

ಇದಂತೂ ತುಂಬಾ ಕೆಟ್ಟ ಚಾಳಿ. ಜೇವ್ನ ಹಿಂಗೇ ಇರ್ಬೇಕು ಅಂತ ಅದೆಂಗ್ ಅನ್ಕೋತೀರಾ. ಏನೋ ಆಗತ್ತೆ, ಹಿಂಗೇ ಇರತ್ತೆ ಅಂತ ಅಂದ್ಕೊಳದು ಹಂಗಾಗದೆ ಇದ್ದಾಗ ಬೇಜಾರ್ ಮಾಡ್ಕೊಳದು. ಜೀವನ ಯಾವತ್ತೂ ಅನ್ಕೊಂಡಂಗಿರಲ್ಲ. ಅದು ಬಂದಂಗೆ ನಾವ್ ನಡೀಬೇಕು ಅಂತ ತಿಳ್ಕೊಳಿ. ನಾವ್ ಹೆಂಗ್ ಯೋಚ್ನೆ ಮಾಡ್ತೀವಿ ಹಂಗಿರತ್ತೆ. ಸ್ವಲ್ಪ ಜನ ಬಾಗ್ಲು ಅರ್ಧ ಮುಚ್ಚಿದೆ ಅಂತಾರೆ ಸ್ವಲ್ಪ ಜನ ಬಾಗ್ಲು ಅರ್ಧ ತೆಗ್ದಿದೆ ಅಂತಾರೆ. ನಿಮ್ಮ್ ಜೀವನ ನಿಮ್ಮ ಅನಿಸಿಕೆ. ಹಿಂಗೇ ಇರತ್ತೆ ಹಂಗೆ ಇರತ್ತೆ ಅನ್ನೋದೆಲ್ಲ ಸುಳ್ಳು.

ಮೂಲ

5. "ನಾನು ಅವರ ತರಹ ಇರ್ಬೇಕು"

ಯಾಕೆ ಅಂತ ಪ್ರಶ್ನೆ ಮಾಡ್ಕೊಳಿ, ನೀವು ಇನ್ನೊಬ್ರು ತಾರಾ ಯಾಕಿರಬೇಕು, ನೀವು ಆ ಥರ ಇರ್ಬೇಕು ಅಂತ ಅನ್ಕೊಂಡು ಇರಕ್ಕೆ ಆಗ್ದೇ ಇದ್ರೆ ತುಂಬಾ ನೋವ್ವಗತ್ತೆ. ನೆಮ್ಮದಿ ಹಾಳಾಗತ್ತೆ. ನೀವು ನೀವಾಗಿರಿ ಇನ್ಯಾರತರಾನೋ ಇರ್ಬೇಡಿ.

ಮೂಲ

6. "ಕೆಲವರು ಪುಣ್ಯ ಮಾಡಿರೋರು ಮಾತ್ರ ಚೆನ್ನಾಗಿ ಜೀವನ ಮಾಡ್ತಾರೆ"

ಯಾರಬೇಕಾದ್ರು ಚೆನಾಗ್ ಜೀವನ ಮಾಡಬೋದು ಅನ್ನೋದನ್ನ ತಿಳ್ಕೊಳಿ. ಒಂದ್ಕೆಲ್ಸ ಮಾಡಿ ಪ್ರತಿ ದಿನ ಎದ್ದ್ ತಕ್ಷಣ ಇವತ್ತಿನ ದಿನ ಸಖತ್ತಾಗಿರತ್ತೆ ಅಂತ ಹೇಳೋದನ್ನ ರೂಡಿ ಮಾಡ್ಕೊಳಿ, ಒಂದು ತಿಂಗಳಾದ್ಮೇಲೆ ಹಿಂದೆ ತಿರುಗ್ನೋಡಿ ಎಷ್ಟು ಸುಂದರವಾಗಿ ಜೀವನ ಮಾಡಿದೀರಾ ಅಂತ ನಿಮಗೆ ಆಶ್ಚರ್ಯ ಆಗತ್ತೆ.

7. "ಕಷ್ಟಗಳು ಇಲ್ಲದಿದ್ದರೇನೇ ಒಳ್ಳೇದು"

ಇದು ಶುದ್ಧ ಸುಳ್ಳು. ಎಷ್ಟೋ ಸತಿ ಸರಿಯಾದದ್ದು ಏನು ಅಂತ ತಿಳ್ಕೊಳಕ್ಕೆ ತಪ್ಪು ಮಾಡ್ಬೇಕಾಗತ್ತೆ. ಕಷ್ಟ ಇದ್ರೆ ಮಾತ್ರ ಸುಳ್ಳಿನ ಬೆಲೆ ಗೊತ್ತಾಗದು. ನೀರಿಗೆ ಬೀಳ್ದೆ ಈಜ್ ಕಲ್ಯಕ್ಕಾಗಲ್ಲ. ಕೆಲವೊಮ್ಮೆ ಖುಷಿ ಅನ್ನೋದನ್ನ ಅರ್ಥ ಮಾಡ್ಕೊಳಕ್ಕೆ ನೋವ್ವನ್ನ ಪಡಲೇಬೇಕಾಗತ್ತೆ. ಗೆಲ್ಲೋದ್ರು ಮಜಾ ಸೋತವನಿಗೆ ಮಾತ್ರ ಗೊತ್ತಾಗದು. ಕಷ್ಟ ಅನ್ನೋದು ಜೀವನ ಕಲಸೋ ಒಳ್ಳೆ ಪಾಠ. ಯಾವತ್ತಿಗೂ ಈ ಪಾಠ ಬಿಟ್ಟೋಗ್ಬಾರ್ದು. ನೋವನ್ನ ನುಂಗಿ, ಕಷ್ಟಾನಾ ಎದುರಿಸಿ ಗಟ್ಟಿಯಾಗಿ ನಿಲ್ಲೋನೆ ನಿಜ್ವಾಗ್ಲೂ ಗೆಲ್ಲೋದು.

ಮೂಲ

8. "ಪಾರದರ್ಶಕವಾಗಿ ಇರೋದಕ್ಕಿಂತ ಒಳಗೊಂದು ಹೊರಗೊಂದು ಇದ್ದರೇ ಒಳ್ಳೇದು"

ನಿಜ್ವಾಗ್ಲೂ ಇದು ಕಷ್ಟಾನೇ. ನೀವು ಐ ಲವ್ ಯು ಅಂತ ಹೇಳಿ ಪ್ರೀತಿ ಮಾಡ್ದೆ ಇದ್ರೆ ಗೊತ್ತಾಗೋಗತ್ತೆ. ಆದ್ರೆ ನಿಜ್ವಾಗ್ಲೂ ಮನಸಲ್ಲಿ ಏನ್ ಅನ್ಕೊಂಡಿರ್ತೀರಿ ಅದನ್ನ ಹೇಳೋದೇ ಬೇಕಿಲ್ಲ ತಾನಾಗ್ತಾನೆ ಎದ್ರುಗಿರೋ ವ್ಯಕ್ತಿಗೆ ಗೊತ್ತಾಗಿರತ್ತೆ. ಮಾತಿಗಿಂತ ಮುಂಚೆ ಮನಸ್ಸಿಗೆ ಗೊತ್ತಾಗಿರತ್ತೆ. ಮೋಸ ಮಾಡ್ದೆ ಅಂತ ನೀವ್ ಅನ್ಕೊಂಡ್ರು ನೀವ್ ಏನು ಅಂತ ಗೊತ್ತಾಗಾಗಿರತ್ತೆ .

9. "ಕನಸು ಕಾಣೋದರಿಂದ ಉಪಯೋಗ ಇಲ್ಲ"

ಕನಸು ಯಾವತ್ತೂ ಟೈಮ್ ಹಾಳುಮಾಡಲ್ಲ. ಕನಸಿಂದ ಏನೋ ಒಂದು ಖುಷಿ, ಕಣ್ಣಿಗೆ ಕಾಣಿಸದೆ ಇದ್ರೂ ಏನೋ ಮಜಾ, ಇದನ್ನ ಮಾಡ್ಬೇಕು ಅನ್ನೋ ಛಲ ಇವೆಲ್ಲ ನಮಗೆ ಸಿಗತ್ತೆ. ಜಾಸ್ತಿ ಹೊತ್ತೇನೂ ಕನಸ್ಸು ಬೀಳಲ್ಲ ಆದ್ರೆ ಆ ಕೆಲವು ಕ್ಷಣ ಯಾವತ್ತೂ ಅದ್ಭುತಾನೆ. ಆದ್ರೆ ನಾವ್ ಏನಾದ್ರೂ ದೊಡ್ಡದಾಗಿ ಯೋಚ್ನೆ ಮಾಡುದ್ರೆ ಅದನ್ನ ಕನಸಲ್ಲಿ ಕಂಡು ಸಾಧಿಸೋ ಛಲ ಬಂದೆ ಬರತ್ತೆ. 

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ವಿಜ್ಞಾನದ ಪ್ರಕಾರ ನಿಮ್ಮ ಬುದ್ಧಿವಂತಿಕೆಗೂ ನಿಮ್ಮ ಅಮ್ಮನಿಗೂ ಇರೋ ಸಂಬಂಧ ಗೊತ್ತಾದಾಗ ಆಶ್ಚರ್ಯ ಪಡ್ತೀರಿ

ಜೆನೆಟಿಕ್ಸ್ ವಿಜ್ಞಾನಿಗಳು ಕಂಡ್ ಹಿಡ್ದಿರೋ ಅದ್ಭುತವಾದ ಸತ್ಯ

ಇದು ಅಪ್ಪಂದ್ರಿಗೆ ಇಷ್ಟ ಆಗ್ದೆ ಇರ್ಬಹುದು. ಆದ್ರೆ ಬುದ್ಧಿಶಕ್ತಿಯ ವಿಷಯಕ್ಕೆ ಬಂದ್ರೆ ಅಪ್ಪಂದಿರಿಂದ ಮಕ್ಳಿಗೆ ಏನೂ ಪ್ರಯೋಜನ ಇಲ್ವಂತೆ, ಬುದ್ಧಿ ಪೂರ್ತಿ ಅಮ್ಮನಿಂದ್ಲೇ ಬರೋದಂತೆ.

ತೀರಾ ಇತ್ತೀಚಿನವರ್ಗೂ ಮಕ್ಕಳ ಬುದ್ಧಿಶಕ್ತೀಲಿ ಅಪ್ಪ-ಅಮ್ಮ ಇಬ್ಬರ ವಂಶವಾಹಿಗಳದೂ (ಜೀನ್ಸ್) ಪಾಲಿದೆ ಅಂತಾನೇ ಎಲ್ರೂ ಅಂದ್ಕೊಂಡಿದ್ರು, ಆದ್ರೆ ಈಗ ಅದು ಪೂರ್ತಿ ಅಮ್ಮನಿಂದ್ಲೇ ಬರೋದು ಅಂತ ಗೊತ್ತಾಗಿದೆ.

ಮೂಲ

ಜೆನೆಟಿಕ್ ವಿಜ್ಞಾನಿಗಳು ನಡೆಸಿರೋ ಸಂಶೋಧನೆಯಿಂದ ಬಂದಿರೋ ವಿವರ ಇದು. ಈ ಸಂಶೋಧನೆ ಇನ್ನೂ ನಡೀತಾನೆ ಇರುತ್ತೆ, ನಿಲ್ಲೊಲ್ಲ. ಹಾಗಾಗಿ ಸದ್ಯಕ್ಕೆ ಇದು ಅವರ ತೀರ್ಮಾನ ಆಗಿದ್ರೂ ಇದನ್ನ ಇನ್ನೂ ಪ್ರಶ್ನಿಸ್ಕೊಂಡು ಸಂಶೋಧನೆ ಮಾಡ್ತಾರೆ. ಅಪ್ಪಂದ್ರಿಗೂ ಏನೋ ಕ್ರೆಡಿಟ್ ಸಿಗ್ಬಹುದು ಮುಂದೆ ಅಂದ್ಕೊಳ್ಳೋಣ. ಈಗ ಇವ್ರು ಈ ತೀರ್ಮಾನಕ್ಕೆ ಹೇಗೆ ಬಂದ್ರು ಅಂತ ಕೇಳ್ತೀರಾ? ಇಲಿಗಳ ಮೇಲೆ ಟೆಸ್ಟ್ ಮಾಡಿದ್ರು. ಭ್ರೂಣವಾಗಿದ್ದಾಗ್ಲೇ ಕೆಲವು ಇಲಿಗಳಿಗೆ ತಾಯಿಯ ಜೆನೆಟಿಕ್ ಮೆಟೀರಿಯಲ್ ಕೊಟ್ಟು, ಇನ್ನು ಕೆಲವು ಇಲಿಗಳಿಗೆ ತಂದೆಯ ಜೆನೆಟಿಕ್ ಮೆಟೀರಿಯಲ್ ಕೊಟ್ರು.

ತಾಯಿಯ ಜೆನೆಟಿಕ್ ಮೆಟೀರಿಯಲ್ ಕೊಟ್ಟ ಮರಿ ಇಲಿಗಳಿಗೆ ತಲೆ ಬುರುಡೆ, ಮಿದುಳು ತುಂಬಾ ದೊಡ್ಡದಾಯ್ತು, ತಂದೆಯ ಜೆನೆಟಿಕ್ ಮೆಟೀರಿಯಲ್ ಕೊಟ್ಟ ಮರಿ ಇಲಿಗಳಿಗೆ ದೇಹ ದೊಡ್ಡದಾಯ್ತು, ಮಿದುಳು ಚಿಕ್ಕದಾಯ್ತು.

ಅಲ್ಲಿಗೆ ಗೊತ್ತಾಯ್ತಲ್ಲ? ಸರಿ, ಇದಲ್ದೆ ಅಮ್ಮನಿಂದ ಏನೇನು ಬರುತ್ತೆ ಮಗೂಗೆ?

ಭಾಷೆ ಕಲಿಯೋಕೆ, ಲಾಜಿಕಲ್ ಆಗಿ ಯೋಚ್ನೆ ಮಾಡೋಕೆ ನಾವು ಉಪ್ಯೋಗಿಸೋ ಮಿದುಳಿನ ಭಾಗ (ಸೆರೆಬ್ರಲ್ ಕಾರ್ಟೆಕ್ಸ್) ಪೂರ್ತಿಯಾಗಿ ತಾಯಿಯ ಜೀನ್ಸಿನಿಂದ ತಯಾರಾಗುತ್ತೆ

ತಾಯಿ ಹೊಟ್ಟೇಲಿದ್ದಾಗ್ಲೇ ಮಗು ಆರೋಗ್ಯದ ಭವಿಷ್ಯ ನಿರ್ಧಾರ ಆಗಿರುತ್ತೆ.

ಮೂಲ

ಮಗು ಬುದ್ಧಿವಂತಿಕೆ ಅದಕ್ಕೆ ಸಿಗೋ ಆಹಾರ, ಪೋಷಣೆ ಮೇಲೆ ಡಿಪೆಂಡ್ ಆಗಿರುತ್ತೆ, ಸಾಮಾನ್ಯವಾಗಿ ಇದೆಲ್ಲ ಅಮ್ಮಂದಿರೇ ನೋಡ್ಕೊಳ್ಳೋದ್ರಿಂದ ಜೆನೆಟಿಕ್ ವಿಜ್ಞಾನದ ಸಹಾಯ ಇಲ್ದೆನೇ ಮಗು ಬುದ್ಧಿವಂತಿಕೆ ಅಮ್ಮನಿಂದ್ಲೇ ಬರೋದು ಅಂತ ಹೇಳ್ಬಹುದು

ಮೂಲ

ಮಗುಗೆ ಅಮ್ಮನಿಂದ್ಲೇ ಪ್ರಪಂಚದ ಪರಿಚಯ ಆಗೋದು, ಅಮ್ಮನಿಂದ ಕಲಿತ ವಿಷಯಗಳಿಂದ್ಲೇ ಅದು ಪ್ರಪಂಚಾನ ಅರ್ಥ ಮಾಡ್ಕೊಳ್ಳೋದು

ಹೀಗೆ ಅಮ್ಮನಿಂದ ನೀವು ಪಡೆದಿರೋದು ತುಂಬ ಇದೆ. ಅಪ್ಪನ ಪಾತ್ರ ಇಲ್ಲ ಅಂತಲ್ಲ… ಜೆನೆಟಿಕ್ಸ್ ಪ್ರಕಾರ ಇಲ್ಲ ಅಂತ ಸಾಬೀತಾಗಿದೆ ಅಷ್ಟೇ. ಆದರೆ ಕೂತು ಕಲಿಸೋ ಅಪ್ಪನ ಪಾತ್ರ ಇಲ್ಲ ಅಂತ ಯಾರ್ ಹೇಳ್ತಾರೆ ಹೇಳಿ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: