ನಮ್ಮ ಪುರಾಣಗಳಿಗೆ ಗ್ರೀಕ್ ಪುರಾಣಗಳು ಎಷ್ಟು ಹತ್ತಿರ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ರಾಮಾಯಣ, ಟ್ರೋಜನ್ ಯುದ್ಧ ಒಂದೇ ತರ

ಎಲ್ಲಿ ಭಾರತ ಎಲ್ಲಿ ಗ್ರೀಸ್? ಏನ್ ಪುರಾಣ?

ಮನುಷ್ಯಂಗೆ ಗೊತ್ತಿರೋ ಹಳೇ ಪುರಾಣಗಳು ಯಾವುದು ಅಂದ್ರೆ...ಒಂದು ನಮ್ಮ ಭಾರತದ್ದು . ಇನ್ನೊಂದು ಗ್ರೀಕ್ ದೇಶದ್ದು. ಈ ಎರಡು ಹಳೇ ಪುರಾಣಗಳಲ್ಲಿ ನಿಜಕ್ಕೂ ಎಷ್ಟು ಸಾಮ್ಯತೆ ಇದೆ ಅಂತ ನೀವು ತಿಳ್ಕೊಂಡ್ರೆ ಆಶ್ಚರ್ಯ ಆಗೋದಂತೂ ಖಂಡಿತ.

1. ನಮ್ಮ ಇಂದ್ರ ಇದ್ದ ಹಾಗೆ ಅಲ್ಲಿ ಜ಼್ಯುಸ್ ದೇವರು

ಅತಿ ಹೆಚ್ಚು ಆಶ್ಚರ್ಯ ಹುಟ್ಟಿಸೋದು ಇದೇನೆ.

ನಮ್ಮ ಇಂದ್ರ ಹೇಗೆ ದೇವತೆಗಳಿಗೆ ರಾಜನೋ ಹಾಗೆ ಜ಼್ಯುಸ್ ಕೂಡ, ಅದಲ್ಲದೇ ಅವರ ಆಯುಧಗಳು ಕೂಡ ಒಂದೇ ತರ.

ಇವರಿಬ್ಬರಿಗೆ ಎಷ್ಟು ಹೋಲಿಕೆಗಳಿವೆ ಅಂದ್ರೆ ಅವರ ವಾಸಸ್ಥಳ ಕೂಡ ಒಂದೇ ತರ ಇವೆ. ಇಂದ್ರ ಇರೋದು ಮೇರು ಪರ್ವತ ಆದ್ರೆ, ಜ಼್ಯುಸ್ ಇರೋದು ಒಲಂಪಸ್ ಪರ್ವತ.

2. ಕರ್ಣನ್ನ ಹೋಲೋ ಅಚಿಲ್ಲಿಸ್ ಅಲ್ಲಿದ್ದಾನೆ

ನಮ್ಮ ಕರ್ಣನ ಹಾಗೆ ಅಜೇಯನಾಗಿ ಉಳಿದ ಅಚಿಲ್ಲಿಸ್ ಕೂಡ ಅವನ ತರದ್ದೇ ರಕ್ಷಾಕವಚ ಧರಿಸುತಿದ್ದನಂತೆ. ಜೊತೇಲಿ ಇಬ್ಬರೂ ಅವರವರ ಕಥೆಗಳಲ್ಲಿ ಅತ್ಯಂತ ದೊಡ್ಡ ಯುಧ್ಧಪಟುಗಳು.

ಈ ಇಬ್ಬರು ದೇವಮಾನವರನ್ನೂ ಅವರವರ ತಾಯಂದಿರು ಯುಧ್ಧಕ್ಕೆ ಮೊದಲು ಯುಧ್ಧ ಮಾಡದ ಹಾಗೆ ಕೆಳ್ಕೊಂಡಿದ್ರಂತೆ.

ಇಬ್ಬರ ಗ್ರಂಥಗಳನ್ನ ಓದಿದ್ರೆ ಗೊತ್ತಾಗುತ್ತೆ, ಎರಡೂ ಕಡೆ ಯುಧ್ಧ ಮುಗಿಯೋದು ಇವರಿಬ್ಬರ ಸಾವಿನಿಂದ.

ಕೆಲವರು ಅಚಿಲ್ಲಿಸ್ ನ ಭೀಷ್ಮನಿಗೆ ಹೋಲಿಸ್ತಾರೆ , ಇಬ್ಬರೂ ಗಂಗಾಪುತ್ರರು ಅನ್ನೋ ಕಾರಣಕ್ಕೆ.

3. ನಮ್ಮ ರಾಮಾಯಣದ ಹಾಗೆ ಅಲ್ಲಿ ಟ್ರೋಜನ್ ಯುದ್ಧ 

ಎರಡೂ ಯುದ್ಧಗಳು ನಡೆದಿದ್ದು ಹೆಣ್ಣಿಗಾಗಿ.

ಸೀತೇನ ರಾವಣ ಹೊತ್ತುಕೊಂಡು ಹೋದಾಗ ರಾಮಾಯಣ ಆದ್ರೆ, ಪ್ಯಾರಿಸ್ ಜೊತೆ ಹೆಲೆನ್ ಓಡಿ ಹೋದಾಗ ಟ್ರೋಜನ್ ಯುದ್ಧ ಆಗುತ್ತೆ.

4. ಎರಡೂ ಕಡೆ ತ್ರಿಮೂರ್ತಿಗಳು ಇದ್ದಾರೆ

ನಮ್ಮಲ್ಲಿ ಬ್ರಹ್ಮ-ವಿಷ್ಣು- ಮಹೇಶ್ವರ ಹೇಗೋ ಹಾಗೆ ಜ಼್ಯುಸ್- ಹೇಡೀಸ್ -ಪೊಸೈಡಾನ್ ಇದ್ದಾರೆ, ಇವರು ಸ್ವರ್ಗ -ಪಾತಾಳ- ಸಾಗರಗಳ ಪಾಲಕರು.

5. ನಮ್ಮ ಹಾಗೆ ಅಲ್ಲಿಯೂ ಪ್ರತಿಯೊಂದಕ್ಕೂ ಬೇರೆ ಬೇರೆ ದೇವರಿದ್ದಾರೆ

ನಮ್ಮಲ್ಲಿರೋ ಹಾಗೆ ವಾಯು-ಅಗ್ನಿ ಹೀಗೆ ಎಲ್ಲಕ್ಕೋ ಅಲ್ಲಿ ಬೇರೆ ಬೇರೆ ದೇವರುಗಳಿದ್ದರೆ. ನಮ್ಮ ಹಾಗೆ ಸಂಪತ್ತಿಗೆ, ವಿದ್ಯೆಗೆ ಅಲ್ಲಿ ಕೂಡ ದೇವರಿದ್ದಾರೆ.

ಅದಿರ್ಲಿ. ನಮ್ಮ ಹಾಗೆ ದೇವಶಿಲ್ಪಿ ವಿಶ್ವಕರ್ಮನ ತರ ಅವರಲ್ಲೂ ಒಬ್ಬ ದೇವನಿದ್ದಾನೆ, ಎಂಥಾ ಸಾಮ್ಯತೆ ನೋಡಿ!

6. ನಮ್ಮ ಯಮಧರ್ಮನ ಹಾಗೆ ಅಲ್ಲಿ ಹೇಡೀಸ್ 

ಇಬ್ಬರೂ ಪಾತಾಳದ ಅಧಿಪತಿಗಳು. ಇಬ್ಬರಿಗೂ ಮನುಷ್ಯನ ಪಾಪ ಪುಣ್ಯ ಲೆಕ್ಕ ಹಾಕಿ ಸ್ವರ್ಗನೋ ನರಕಾನೋ ತೋರ್ಸೋ ಜವಾಬ್ದಾರಿ ಅಷ್ಟೆ.

7. ಸಪ್ತ ಋಷಿಗಳ ಹಾಗೆ ಸಪ್ತ ಸೋದರಿಯರು

ನಮ್ಮಲ್ಲಿ ಹೇಗೆ ಸಪ್ತ ಋಷಿಗಳು ತಾರೆಗಳಾಗಿ ಕಾಣ್ತಾರೆ ಅಂತಿದ್ಯೋ ಹಾಗೆ ಅವರ ಸಪ್ತ ಸೋದರಿಯರೂ ಕೂಡ ತಾರೆಗಳು. ಅವರನ್ನ ಪ್ಲಿಯಡೀಸ್ ಅಂತಾರೆ.

8. ಸಂಪಾತಿ ಹಾಗೆ ಅವರಲ್ಲಿ ಇಕಾರಸ್

ಇಕಾರಸ್ ಹಾಗೆ ಡೇಡರಸ್ ಕಥೆ ಕೇಳಿದ್ರೆ ನೀವು ಅದು ನಮ್ಮ ಜಟಾಯು ಸಂಪಾತಿ  ಕತೆ ಇದ್ದ ಹಾಗೆ ಇದೆ ಅಂತೀರಿ.

ಹಾರಾಡ್ತಾ ಸೂರ್ಯನ ಕಡೆ ಹೋಗೋ ಜಟಾಯುನ ಕಾಪಾಡೋಕೆ ಹೋಗ್ತಾನೆ ಸಂಪಾತಿ. ಜಟಾಯು ಉಳಿತಾನಾದರೂ ಅವನ ರೆಕ್ಕೆಗಳು ಬೆಂಕಿಗೆ ಸಿಕ್ಕಿ ಸುಟ್ಟು ಹೋಗುತ್ತೆ.... ಅಲ್ಲಿ ಇಕಾರಸ್ ಹಾಗೆ ಡೇಡರಸ್ ಕಥೆ ಕೂಡ ಇದೇ ತರ ಇದೆ. 

9. ನಾರದನ್ನ ಹೋಲೊ ಹರ್ಮೆಸ್  

ಇಬ್ಬರೂ ವಿಷಯಗಳನ್ನ ಹೇಳುತ್ತಾ ಸಾಗೋ ವ್ಯಕಿಗಳು. ಜೊತೇಲಿ ಪ್ರಭಾವಿ ದೇವರುಗಳ ಮಕ್ಕಳು. ಹೀಗೆ ಸಾಕಷ್ಟು ಸಾಮ್ಯತೆ ಇವೆ.

ಕೆಲವೊಮ್ಮೆ ಈ ಇಬ್ಬರು ಬಲಶಾಲಿಗಳು, ಕುತಂತ್ರಿಗಳಾಗಿದ್ದೂ ಇದೆ. ಇಬ್ಬರಿಗೂ ಮತ್ತೊಬ್ಬರನ್ನ ದಾರಿತಪ್ಪಿಸೋಕೆ ಚೆನ್ನಾಗೆ ಗೊತ್ತಿತ್ತು.

ಮೂಲ

ಇದನ್ನ ಓದಿದ್ರೆ ಮನುಷ್ಯರು ಎಲ್ಲ ಕಡೆ ಒಂದೇ ತರ ಅನ್ಸುತ್ತೆ. ಏನಂತೀರಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

5 ನಿಮಿಷದಲ್ಲಿ ನಿಮ್ಮ ಮೇಲೆ ನಿಮಗೆ ನಂಬಿಕೆ ಬರಬೇಕಾದರೆ ಹೀಗ್ ಮಾಡಿ

ಮೊದ್ಲು ನೆಟ್ಟಗೆ ನಿಂತ್ಕೊಳಿ

ಎಷ್ಟೋ ಸಲ ಜೀವನದಲ್ಲಿ ತಾಳ್ಮೆ ಕಳ್ಕೊಳ್ಳೋ ಹಾಗಾಗತ್ತೆ. ಏನಾದ್ರೂ ಮಾಡ್ಬೇಕೂಂದ್ರೆ ಭಯಭಯ ಅನ್ಸತ್ತೆ. ಆದ್ರೆ ಇಂತಾ ಭಯಾನ ಬೇಗ ಮೆಟ್ಟಿ ನಿಲ್ಲಕ್ಕೆ  ದಾರಿಗಳೂ ಇವೆ. ಅದ್ಯಾವ್ದೂ ಅಂತ ನೋಡಿ

1. ಮೊದ್ಲು ನೆಟ್ಟಗೆ ನಿಂತ್ಕೊಳಿ; ನೀವೇ ರಾಜ ಅನ್ನೋ ಹಂಗೆ ಎರಡ್ನಿಮಿಷ ಇರಿ

ಬೆನ್ನು ನೇರವಾಗಿ ಇಟ್ಕೊಂಡು, ಗಲ್ಲ ಎತ್ತಿ, ಕಾಲುಗಳ್ನ ಜೋಡಿಸಿ ನೆಟ್ಟಗೆ ನಿಂತ್ಕೊಳಿ. ದೊಡ್ಡದಾಗಿ ಉಸಿರು ತೊಗೊಂಡು, ನಿಮ್ಮಲ್ಲಿ ಶಕ್ತಿ ಹರೀತಾ ಗಮನಿಸಿ. ಹೀಗೆಲ್ಲಾ ಮಾಡೋದ್ರಿಂದ ನಮ್ಮ ಮನಸ್ಸು ಮತ್ತೆ ದೇಹದ ಮೇಲೆ ಪರಿಣಾಮ ಆಗಿ, ಆತಂಕ ಕಮ್ಮಿ ಆಗತ್ತೆ. ಬೇರೆಯವರು ನಮ್ಮನ್ನ ನೋಡೋ ರೀತಿ ಮಾತ್ರ ಅಲ್ಲ, ನಮ್ಮನ್ನ ನಾವು ನೋಡ್ಕೊಳ್ಳೋ ರೀತಿನೂ ಬದಲಾಗತ್ತೆ.

2. ನಾಳೆ, ಅಂದ್ರೆ ಭವಿಷ್ಯದಲ್ಲಿ ಹೇಗಿರ್ತೀರಾ ಅಂತ ಕಲ್ಪನೆ ಮಾಡ್ಕೊಳಿ

ನಮ್ಮ ಭವಿಷ್ಯದ ಬಗ್ಗೆ ನಾವು ಕಲ್ಪನೆ ಮಾಡ್ಕೊಂಡಷ್ಟೂ ನಮ್ಮ ಕಲ್ಪನೆಗಳು ನಿಜ ಆಗ್ಬೇಕು ಅಂತ ಅಂದ್ಕೊತೀವಿ.  ನಿಜ ಮಾಡಕ್ಕೆ ಒಂದ್ ಗುರಿ ಅಂತ ಇಟ್ಕೊಂಡು ಅದನ್ನ ಸಾಧಿಸಕ್ಕೆ ಪ್ರಯತ್ನ ಪಡ್ತೀವಿ.

3. ಮನಸ್ಸನ್ನ ನಿಮ್ಮ ಹಿಡಿತಕ್ಕೆ ತೊಗೊಳಿ. ನಿಮ್ಮ ಹತ್ರ ಈಗ ಇರೋದ್ರ ಬಗ್ಗೆ ಹೆಮ್ಮೆ ಪಡಿ

ಎಷ್ಟೋ ಸಲ ಅದು ಬೇಕು, ಇದು ಬೇಕು ಅನ್ನೋ ಹುಚ್ಚಲ್ಲಿ ಇರೋದನ್ನೆಲ್ಲಾ ಮರೆತುಬಿಡ್ತೀವಿ. ನಾವು ಮೊದಲು ಮಾಡ್ಬೇಕಾಗಿರೋದು, ನಮ್ಹತ್ರ ಇರೋದನ್ನ ಗುರುತಿಸೋದು. ನಮಗೆ ಇವಾಗಿರೋ ಹಾಗೆ ಬದುಕು ಕೊಟ್ಟಿರೋದಕ್ಕೆ ಒಂದ್ಸಲ ಥ್ಯಾಂಕ್ ಯೂ ಅಂತ ಹೇಳಿ ನೋಡಿ. ಮನಸಿಗೆ ಹಾಯ್ ಅನ್ಸತ್ತೆ.

ನಮ್ಮ ಮನಸು ನಾವು ಹೇಳಿದಂಗೆ ಕೇಳತ್ತೆ. ಹೀಗಿದ್ರೆ, ಪಾಸಿಟೀವ್ ಆಗಿ ಯೋಚ್ನೆ ಮಾಡೋ ಶಕ್ತಿ ಬರತ್ತೆ. ಒಳ್ಳೇ ಯೋಚ್ನೆ ಬಂದ್ರೆ, ಮನಸು ಹಾಯಾಗಿದ್ರೆ, ಎಲ್ಲಾ ಕೆಲಸ ಅದಾಗದೇ ಸರಿಯಾಗಿ ಆಗತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: