ತೀರಾ ಸಣ್ಣ ಇದೀರಾ? ಯಾವುದೇ ಅಡ್ಡ ಪರಿಣಾಮ ಇಲ್ಲದೆ ದಪ್ಪ ಆಗಬೇಕಾದ್ರೆ ಹೀಗ್ ಮಾಡಿ

7 ಉಪಾಯಗಳು

 ಏನು ತಿಂದ್ರೂ ದಪ್ಪ ಆಗ್ತಿಲ್ಲಾ..... ಎಲ್ಲರ ಹಾಗೆ ಬಗೆ ಬಗೆ ಬಟ್ಟೆ ತೊಡೋಕಾಗ್ತಿಲ್ಲ ಅಂತ ತಲೆ ಮೇಲೆ ಕೈ ಹೊತ್ತು ಕೂತಿರೋರೆಲ್ಲಾ ಒಮ್ಮೆ ನೋಡಿ ನೀವು ಸರಿಯಾಗಿ ಊಟ ಮಾಡ್ತಿದೀರಾ ಅಂತ.

 ಜೊತೇಲಿ ತಿನ್ನೋ ಒಂದೇ ಕಾರಣ ಅಲ್ಲದೇ ಇನ್ನು ಹಲವಾರು ಕಾರಣಗಳು ನಿಮ್ಮ ದೇಹದ ತೂಕ ಹಾಗೆ ಆಕಾರನ ನಿರ್ಧಾರ ಮಾಡುತ್ತೆ.

1. ನಿಮ್ಮ ಊಟದಲ್ಲಿ ಪ್ರೋಟೀನ್ ಅಂಶ ಹೆಚ್ಚಿರೋಹಾಗೆ ನೋಡ್ಕೊಳ್ಳಿ

ಪ್ರೋಟೀನ್ ನ್ "ಬಿಲ್ಡಿಂಗ್ ಬ್ಲಾಕ್ಸ್" ಅಂತಾರೆ.... ಅಂದ್ರೆ ದೇಹನ ಕಟ್ಟೋ ಅಂಶ ಪ್ರೋಟೀನ್. ಹಾಗಾಗಿ ನಿಮ್ಮ ಊಟದಲ್ಲಿ ಪ್ರೋಟೀನ್ ಅಂಶ ಹೆಚ್ಚಿದ್ರೆ ದೇಹದ ತೂಕ ಹೆಚ್ಚಾಗುತ್ತೆ.

ದಿನಾ ಸೊಪ್ಪು ತರಕಾರಿ ಜೊತೆ ದ್ರಾಕ್ಷಿ ಗೋಡಂಬಿ ಎಲ್ಲಾನೂ ತಿನ್ನೋದು ಮರೀಬೇಡಿ.

ಮೂಲ

2. ಹಾಲು - ಹಾಲಿನ ಪದಾರ್ಥನ ದಿನ ನಿತ್ಯ ಸೇವಿಸಿ

ಹಾಲು ಅಂದ್ರೆ ಹಾಲು ಮಾತ್ರ... ಕಾಫಿ- ಟೀ ಅಲ್ಲ. ಕಾಫಿ- ಟೀ ನಲ್ಲಿ ಬಳಸೋ ಹಾಲು ನಿಮಗೇ ಯಾವುದೇ ರೀತಿ ಸಹಾಯ ಮಾಡಲ್ಲ.,

ರಾತ್ರಿ ಮಲಗೋವಾಗ ಗಟ್ಟಿ ಮೊಸರು ಸಕ್ಕರೆ ಜೊತೆ ತಿನ್ನಿ. ಬೇಡ ಅಂದ್ರೂ ದಪ್ಪ ಆಗ್ತೀರ.

ಮೂಲ

3. ಹೆಚ್ಚು ಸಾರಿ ತಿನ್ನೊ ಅಭ್ಯಾಸ ಮಾಡ್ಕೊಳ್ಳಿ

ಒಂದೇ ಸಾರಿ ತಿನ್ನೋಕಿಂತ ಎರಡು ಗಂಟೆಗೊಮ್ಮೆ ಸ್ವಲ್ಪ ಸ್ವಲ್ಪ ಆಹಾರ ತಿನ್ನೋ ಅಭ್ಯಾಸ ಮಾಡ್ಕೊಳ್ಳಿ ತಿನ್ನೋದು  ಮೈಗೆ ಹತ್ತುತ್ತೆ.

ಮೂಲ

4. ಮೊಟ್ಟೆ ದಿನಾ ತಿಂದ್ರೆ ಒಳ್ಳೇದು

ಮೊಟ್ಟೆ ದಿನಕ್ಕೆ ಒಂದಾದ್ರು ತಿನ್ನಿ, ಆದ್ರೆ ಬೇಯಿಸೇ ತಿನ್ನಬೇಕು.

ಇನ್ನು ಮಾಂಸಾಹಾರಿಗಳಾದ್ರೆ ವಾರಕ್ಕೊಮ್ಮೆ ಸೇವಿಸಿ, ಒಳ್ಳೇದು.

ಮೂಲ

5. ಹೊರಗಿನ ಆಹಾರ ತಿನ್ನೋದು ಕಡಿಮೆ ಮಾಡಿ

ಹೊರಗಿಂದು ಕರಿದಿದ್ದು ಎಲ್ಲ ತಿನ್ನೋದ್ರಿಂದ ನೀವು ತಿನ್ನೋ ಪೌಷ್ಠಿಕ ಆಹಾರ ಕೂಡ ಲಾಭ ಆಗಲ್ಲ. ಅದ್ರಿಂದ ಹೊರಗಿಂದು ತಿನ್ನೋದು ಕಡಿಮೆ ಮಾಡಿ.

ಮೂಲ

6. ನಿದ್ದೆ ಸರಿಯಾಗಿ ಮಾಡ್ಡೇ ಹೋದ್ರೆ ದಪ್ಪ ಆಗಲ್ಲ

ನಿಮ್ಮ ನಿದ್ದೆ - ಯೋಚ್ನೆಗಳ ಮೇಲೆ ಗಮನ ಇರಲಿ, ಇವುಗಳಲ್ಲಿ ವ್ಯತ್ಯಾಸ ಆದ್ರೂ ದಪ್ಪ ಆಗಲ್ಲ.

ಮೂಲ

7. ಕೆಟ್ಟ ಅಭ್ಯಾಸಗಳಿಂದ ದೂರ ಇರಿ

ಧೂಮಪಾನ- ಮಧ್ಯಪಾನ ಹೆಚ್ಚಾಗಿ ಮಾಡ್ತಿದ್ರೆ ಅದು ಕೂಡ ನಿಮ್ಮನ್ನ ದಪ್ಪ ಆಗೋಕೆ ಬಿಡಲ್ಲ.

ಮೂಲ

ಇದೆಲ್ಲ ಮಾಡೋಕೆ ಶುರು ಮಾಡಿ ನೋಡಿ, ಆದಷ್ಟು ಬೇಗ ದಪ್ಪ ಆಗ್ತೀರ, ಅದೂ ಆರೋಗ್ಯಕರವಾಗಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಯಾವಾಗ್ಲೂ ವಟವಟ ಅಂತಿರೋರ್ಗೆ ದೇವರು ಕೊಟ್ಟಿರೋ 12 ವಿಶೇಷವಾದ ಗುಣಗಳು

ವಾಚಾಳಿ ವಟರಗಪ್ಪೆಗಳು

ವಟವಟ ಅಂತ ಮಾತಾಡೋದು ಕೆಲವರಿಗೆ ಒಂದ್ ಹವ್ಯಾಸ. ಪ್ರಪಂಚದಲ್ಲಿ ಇರೋ ಎಲ್ಲಾ ವಿಷಯದ ಬಗ್ಗೇನೂ ಇವರು ಮಾತಾಡ್ತಾನೇ ಇರ್ತಾರೆ. ವಟರಗಪ್ಪೆ ಅನ್ನಿಸ್ಕೊಳೋ ಇಂತವ್ರು ಬೇರೆಯವರಿಗೆ  ಮಾತಾಡಕ್ಕೆ ಅವಕಾಶಾನೇ ಕೊಡಲ್ಲ. ವಟವಟ ಅಂತ ಮಾತಾಡೋವ್ರ ಬಗ್ಗೆ  ಕೆಲವು ವಿಷಯಗಳು ಇಲ್ಲಿವೆ ನೋಡಿ:

1. ಒಂದ್ ನಿಮಿಷದಲ್ಲಿ ಲಕ್ಷಾಂತ್ರ ವಿಷಯ ಮಾತಾಡಿರ್ತಾರೆ

ಅವರು ಮಾತು ಮುಗ್ಯಕ್ಕೆ ಎಷ್ಟ್ ಗಂಟೆ ಟೈಮು ಕೊಟ್ರೂ ಸಾಲಲ್ಲ ಬಿಡಿ

2. ಅವರಿವರ ವಿಷ್ಯ ಮಾತಾಡ್ತಾ ದುಂಬಿ ತರ ಗುಂಯ್ ಅಂತಿರ್ತಾರೆ

ಇಂತವ್ರೊಬ್ರು ಎಲ್ಲಾ ಗುಂಪಲ್ಲೂ ಇರ್ತಾರೆ. ಯಾರೂ ಇವರನ್ನ ವಟರಗಪ್ಪೆ ಅಂದೇ ಇದ್ರೂ, ಸ್ನೇಹಿತ್ರು ಅಂತ ಒಪ್ಕೋತಾರೆ.

3. ಇಂತವರ ಹತ್ರ ಯಾವ್ದೆ ರಹಸ್ಯನೂ ಉಳ್ಯಲ್ಲ

ಇವರು ಎಷ್ಟು ಮುಗ್ಧರಾಗಿರ್ತಾರೆ ಅಂದ್ರೆ, ಯಾವ್ದು ಹೇಳ್ಬೇಕು ಯಾವ್ದು ಹೇಳ್ಬಾರ್ದು ಅಂತ ಗೊತ್ತಾಗೋದೇ ಇಲ್ಲ.

4. ಗ್ರಂಥಾಲಯ ಅನ್ನೋದು ಅವರಿಗೆ ಜೈಲಿದ್ದಂಗೆ; ಅಲ್ಲಿ ಯಾರೂ ಮಾತೇ ಆಡಲ್ವೇ

ಸ್ಕೂಲಲ್ಲಿ ಕಾಲೇಜಲ್ಲಿ ಗ್ರಂಥಾಲಯ ಅಂತ ಇರತ್ತೆ ನೋಡಿ – ಅದೊಂದು ಜಾಗ ಅಂದ್ರೆ ಇವರಿಗೆ ಅಲರ್ಜಿ. ಬಾಯಿಮುಚ್ಕೊಂಡು ಇರಬೇಕಲ್ಲ ಅದಿಕ್ಕೆ.

5. ಇಂತವರಿಗೆ ಎಲ್ಲಾ ಗೆಳೆಯರೂ ಬರೀ ಕೇಳಿಸ್ಕೋತಾ ಇರೋರು ಅಷ್ಟೇ

ಇವರ ಫ್ರೆಂಡ್ಸ್ ತರ ಬಾಯ್ಮುಚ್ಕೊಂಡು ಹೇಳೋದೆಲ್ಲಾ ಕೇಳೋರು ಭೂಮಿ ಮೇಲೆ ಇಲ್ಲ ಅನ್ನಬಹ್ದು. ಯಾಕೆ ಅಂದ್ರೆ ಈ ಪುಣ್ಯಾತ್ಮರು ಚಾನ್ಸೇ ಕೊಡೋದಿಲ್ವೇ

6. ಕ್ಲಾಸಲ್ಲಿ ಪಕ್ಕದವ್ರು ಸಿಕ್ಕಾಕೊಂಡು ಬೈಸ್ಕೋತಾರೆ ಹೊರತು ಈ ವಾಚಾಳಿಗಳು ತಪ್ಪಿಸ್ಕೋತಾರೆ

ಕ್ಲಾಸಲ್ಲೂ ಇವರು ಬಾಯ್ಮುಚ್ಕೊಂಡ್ದು ಕೂರೊಲ್ಲ. ಇವರಿಂದ ಬೇರೆ ಅವರು ಬೈಸ್ಕೊಳ್ಳೋ ಹಾಗಾಗತ್ತೆ.

7. ಎಲ್ಲಾದಿಕ್ಕೂ ಉಪ್ಪೂಖಾರ ಹಚ್ಚಿ ಹೇಳಕ್ಕೆ ಇವರೇ ಸೈ

ಇದ್ದಿದ್ದು ಇಲ್ಲದ್ದು ಎಲ್ಲಾ ಸೇರಿಸಿ ಹೇಳಕ್ಕೆ ಇವರೇ ಸರಿ.

8. ನಿದ್ದೇಲೂ ಮಾತಾಡೋದ್ ನಿಲ್ಸಕ್ ಆಗ್ದೇ ಇರೋರು ಇವರು

ಮಾತು ಅನ್ನೋದ್ ನಿಲ್ಸಕ್ಕೆ ಆಗ್ದೇ ಇರೋದೇ ಇವರ ಸಮಸ್ಯೆ. ನಿದ್ದೆ ಬಂದ್ರೆ ಏನು? ಮಾತಾಡೋದ್ ಬಿಡಕ್ಕಾಗತ್ತಾ?

9. ಬಾಯಿಗೆ ಬೀಗ ಅನ್ನೋದೊಂದು ಇಲ್ಲಾ ಇವರಿಗೆ

ಬಾಯಿಗೆ ಬಂದಿದ್ದೇ ವದರತಾ ಇರೋ ಇಂತವರ ಬಾಯಿಗೆ ಬೀಗ ಹಾಕೋದು ಒಂದೇ, ಬೆಕ್ಕಿಗೆ ಗಂಟೆ ಕಟ್ಟೋದೂ ಒಂದೆ. ಗೊತ್ತಿರೋರು, ಗೊತ್ತಿಲ್ದೇ ಇರೋರು ಎಲ್ಲಾರ್ನೂ ಮಾತಾಡಿಸ್ಕೊಂಡು ಹೋಗ್ತಾರೆ.

10. ಚಿಕ್ಕೋರಿರುವಾಗ ಅಪ್ಪ-ಅಮ್ಮಂದ್ರು ಬಾಯ್ಮುಚ್ಚು ಅಂತ ಹೇಳಿ ಹೇಳಿ ಸುಸ್ತಾಗೋಗ್ತಾರೆ

ಇಂತ ವಾಚಾಳಿಗಳ್ನ ಕಂಟ್ರೋಲ್ ಮಾಡಕ್ಕಾಗ್ದೆ ತಲೆ ಕುಟ್ಕೊಳ್ಳೋ  ಹಾಗಾಗಿರತ್ತೆ ಅಪ್ಪ-ಅಮ್ಮಂದಿರಿಗೆ. ಮನೆಗೆ ಬರೋರ್ ಜೊತೆ ಮಾತಾಡ್ಬೇಡ ಅಂತ ಕೈಮುಗೀತಾರೆ

11. ಇಂತವ್ರು ಬಾಯಿ ಮುಚ್ಕೊಂಡು ಇದ್ರೆ ಏನೋ ತಪ್ಪಾಗಿದೆ ಅನ್ಸತ್ತೆ

ಇಂತವ್ರು ಬಾಯಿ ಮುಚ್ಕೊಂಡು ಸುಮ್ನೆ ಕೂತಿದ್ರು ಅಂದ್ರೆ ಎಲ್ಲಾರೂ ವಿಚಾರಿಸ್ಕೋತಾರೆ. ಯಾಕಪ್ಪಾ? ಏನಮ್ಮಾ? ಅಂತೆಲ್ಲಾ ಪ್ರಶ್ನೆಗಳು ಸುರಿದು ಹೋಗತ್ತೆ. ಬಾಯ್ಮುಚ್ಚು ಅಂತ ಬೈತಿದ್ದವರೆಲ್ಲಾ ಏನಾಯ್ತೋ ಅಂತ ಒದ್ದಾಡ್ತಾರೆ

12. ಇಂತವ್ರು ತಮಾಷಿ ಮಾಡಿದ್ರೂ ಯಾರೂ ಕ್ಯಾರೇ ಅನ್ನಲ್ಲ

ಇಂತವ್ರು ಜೋಕ್ ಮಾಡಿದ್ರೂ ಗೊತ್ತಾಗೊಲ್ಲ. ಗಂಭೀರವಾಗಿ ಮಾತಾಡಿದ್ರಂತೂ ಇದ್ದಿದ್ದೂ ಗೊತ್ತಾಗೊಲ್ಲ. ಒಟ್ನಲ್ಲಿ ಇವರನ್ನ ಯಾರೂ ಸೀರಿಯಸ್ ಆಗಿ ತೊಗೊಳಲ್ಲ.

ಹಾಗಂತ ಮಾತಾಡೊದೇನೂ ತಪ್ಪಲ್ಲ, ಎಶ್ಟೋ ಸಲ ವಟ ವಟ ಅಂತ ಮಾತಾಡೋರು ಒಂಚೂರು ಮಾತಾಡ್ದೆ ಇರೋರ ಮನಸ್ಸಿನಲ್ಲಿ ಏನಿದೆ ಅನ್ನೋದನ್ನ ಇನ್ನೊಬ್ಬರಿಗೆ ತಿಳಿಸಿ ಕೊಟ್ಟಿರ್ತಾರೆ. ಅವರ ಸ್ನೇಹಿತರಾಗಕ್ಕೆ ಪುಣ್ಯ ಮಾಡಿರ್ಬೇಕು ಅಂತ ಆ ಸಂದರ್ಭದಲ್ಲಿ ಅನ್ಸತ್ತೆ. ಇನ್ನೂ ಯಾವುದಾದ್ರೂ ಸಂದರ್ಭ ಬಿಟ್ಟಿದ್ರೆ ಸೇರ್ಸಿ ನೋಡೋಣ :-)

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: