ದ.ಭಾರತದ ಈ 10 ರಸ್ತೆಗಳಲ್ಲಿ ಕಾರ್ ಓಡುಸ್ಕೊಂಡ್ ಟ್ರಿಪ್ಪಿಗೆ ಹೋದ್ರೆ ಅದರ ಮಜಾನೇ ಬೇರೆ

ಒಳ್ಳೇ ಮೋಡದ ಮೇಲೆ ಹೋದಂಗಿರುತ್ತೆ

ಮನೆಲಿ ವೀಕೆಂಡ್ ಕಳೆಯೋ ಮನಸ್ಸಿಲ್ಲ.. ದೂರ ಎಲ್ಲೂ ಹೋಗೋಕಾಗಲ್ಲ ಅಂದ್ರೆ. ನಿಮ್ಮ ಕಾರಿಗೆ ಪೆಟ್ರೋಲ್ ತುಂಬಿಸಿ, ಕ್ಯಾಮೆರಾ ಚಾರ್ಜ್ ಮಾಡ್ಕೋಂಡು,ನಿಮ್ಮಿಷ್ಟದ ಹಾಡುಗಳನ್ನ ರೇಡಿ ಮಾಡ್ಕೊಂಡು,  ನಿಮ್ಮನೆಯವರ ಜೊತೆ ಸಿದ್ಧ ಆಗಿ, ಬೇಗ ವಾಪಸ್ ಬರಬಹುದು ಅದೂ ಒಳ್ಳೆ ಅನುಭವದ ಜೊತೆಗೆ.

1. ಚೆನ್ನೈ ಇಂದ ಪಾಂಡಿಚೆರಿ

140-150 ಕಿ.ಮಿ ಉದ್ದನೆ ರಸ್ತೆ, ಬೈಕ್ ನಲ್ಲಿ ಅರಾಮಾಗಿ ಪ್ರಕೃತೀನ ಸವೀತಾ ಹೋಗಬಹುದು. ಪಾಂಡಿಚೆರಿಯ ಫ್ರೆಂಚ್ ಕಾಲನಿ ನಿಮಗೆ ಫ್ರೆಂಚ್ ಫೀಲ್ ಕೊಡುತ್ತೆ. ಬೀಚ್ ಹತ್ತಿರದಲ್ಲಿ ನಿಮಗೊಂದು ರೂಮ್ ಸಿಕ್ರೆ ರಾತ್ರಿ ಬೀಚ್ ಹತ್ರ ವಾಕ್ ಮಾಡೋದನ್ನ ಮಾತ್ರ ಮರೀಬೇಡಿ ಅದಕ್ಕಿಂತ ಸ್ವರ್ಗ ಬೇರೊಂದಿಲ್ಲ.

ಮೂಲ

2. ಬೆಂಗಳೂರಿಂದ ಬಂಡಿಪುರ

ಇದೊಂದು ರಸ್ತೆ ಬಗ್ಗೆ ಮಾತಾಡದೇ ಹೋದ್ರೆ ನೀವೇನೋ ಕಳೆದುಕೊಂಡ ಹಾಗೆ. 235 ಕಿ.ಮಿ ಉದ್ದನೆಯ ರಸ್ತೆ 5 ಗಂಟೆಲಿ ಸೇರ್ತೀರಿ ಬಂಡಿಪುರ ಅರಣ್ಯ, ದಾರೀಲಿ ನಿಮಗೆ ಜಿಂಕೆ ಕಂಡಾಗ ನಿಮ್ಮ ಕ್ಯಾಮೆರಾಗೆ ಕೆಲಸ ಕೊಡಿ. ದಾರೀಲಿ ಹಸಿವಾದ್ರೆ ಒಳ್ಳೋಳ್ಳೆ ಹೊಟೆಲುಗಳೂ ಸಿಗುತ್ವೆ. ಇನ್ನೇನ್ ಬೇಕು ಹೇಳಿ.

ಮೂಲ

3. ಪಂಬನ್ ಸೇತುವೆ

ರಾಮೇಶ್ವರದಿಂದ ತಮಿಳುನಾಡಿಗೆ ಹೋಗೋ ದಾರಿ 13.೫ ಕಿ.ಮೀ 20 ನಿಮಿಷದ ರಸ್ತೆ. ಅದ್ರಲ್ಲೂ ಬೈಕ್ ನಲ್ಲಿ ಹೋಗೋದಾದ್ರೆ ನಿಮಗೆ ಮತ್ಯಾವ ರಸ್ತೆಲೂ ಹೋಗೋ ಮನಸ್ಸಾಗಲ್ಲ. ಸುತ್ತಲೂ ನೀರು, ತೀಡೋ ತಂಗಾಳಿ ಹೆಚ್ಚು ಕಾಲ ನಿಮ್ಮ ಮನಸಲ್ಲಿ  ಉಳಿಯುತ್ತೆ. 

ಮೂಲ

4. ಚೆನ್ನೈ ಇಂದ ಮುನ್ನಾರ್ 

ಚೆನ್ನೈ ಬಿಸಿಲು ನಿಮಗೆ ಕಷ್ಟ ಆಗ್ತಿದ್ರೆ 10 ಗಂಟೆ ಅಂದ್ರೆ 600 ಕಿ.ಮೀ ನಲ್ಲಿ ನಿಮಗೆ ಮುನ್ನಾರ್ ಸಿಗುತ್ತೆ. ದಾರೀಲಿ ಚೋಳರ ಕಾಲದ ತಿರುಚಿನಾಪಳ್ಳಿ  ಕೂಡ ನೋಡಬಹುದು.

ಮೂಲ

5. ಬೆಂಗಳೂರಿಂದ ಊಟಿ

ಕಾಲೇಜು ಸ್ಟೂಡೆಂಟ್ಸ್ ಗಳ ತುಂಬಾ ಇಷ್ಟದ ರಸ್ತೆ ಇದು. 266 ಕಿ.ಮೀ ಉದ್ದ. ಅದರಲ್ಲೂ ಮೈಸೂರಿಗೆ ಹೋಗಿ ಅರಮನೆ ಎಲ್ಲ ನೋಡಿಕೊಂಡು ಒಳ್ಳೆ ಊಟ ಮಾಡಿ ಹೊರಟರಂತೂ ಫುಲ್ ಮಸ್ತಿ ನೋಡಿ.

ಮೂಲ

6. ಬೆಂಗಳೂರಿಂದ ಗೋವಾ

ಬೆಂಗಳೂರಿನವರಿಗೆ ಗೋವಾ ಅಂದ್ರೆ ತುಂಬಾ ಇಷ್ಟದ ಜಾಗ ನೋಡಿ. 566 ಕಿ.ಮೀ ಒಳ್ಳೆ ರಸ್ತೆ, ರಸ್ತೆ ಉದ್ದಕ್ಕೂ ಢಾಬಾ ಕಣ್ಣಿಗೂ ಹಬ್ಬ ಹೊಟ್ಟೆಗೂ ಹಬ್ಬ.

ಮೂಲ

7. ಬೆಂಗಳೂರಿಂದ ನಂದಿ ಬೆಟ್ಟ

ಬೆಂಗಳೂರಿಂದ 47 ಕಿ.ಮೀ ಇದ್ದರೂ ಪಕ್ಕದಲ್ಲೇ ಇದ್ದಷ್ಟು ಹತ್ರ ನಂದಿ ಬೆಟ್ಟ, ಹೋಗದವರೇ ಇಲ್ವೇನೋ ಅನ್ಸುತ್ತೆ. ಬೆಳಗ್ಗೆನೇ ಮಂಜಲ್ಲಿ ಹೋಗಿ ಸೂರ್ಯೋದಯ ನೋಡೋದು ಅಂದ್ರೆ ಯಾರಿಗೆ ಖುಷಿ ಕೊಡಲ್ಲ ಹೇಳಿ. ಹೋಗೋದು ತಡ ಆದ್ರೂ ಟ್ರೆಕಿಂಗ್ ಹೋಗಬಹುದು. ದಾರೀಲಿ ದೇವನಹಳ್ಳಿ ಕೋಟೆ ಮರೀಬೇಡಿ.

ಮೂಲ

8. ವಿಶಾಖಪಟ್ಟಣದಿಂದ ಅರಕು 

ಬಂಗಾಳ ಕೊಲ್ಲಿ ಪಕ್ಕದ ಸುಂದರ ಜಾಗ ವಿಶಾಖಪಟ್ಟಣ… ಅಲ್ಲಿಂದ ಅರಕು ಕಡೆ ಹೋಗ್ತಾ ನಿಮ್ಮ ಕಣ್ಣಿಗೆ ತಂಪಾಗೋದು ಅಲ್ಲದೆ  ಬದಲಾಗೋ ಹವಾಮಾನ ನಿಮಗೆ ಇಷ್ಟ ಆಗುತ್ತೆ. ಅರಕು ತಲುಪುತ್ತಿದ್ದಹಾಗೆ ನಿಮಗೆ ಸಿಗೋ ಕಾಫಿ ಇನ್ನಷ್ಟು ಖುಷಿ ಕೊಡುತ್ತೆ. 116 ಕಿ.ಮೀ ದಾರೀಲಿ ನಿಮಗೆ ಬೋರಾ ಗುಹೆಗಳು, ತಾತ್ಪುಡಿ ಜಲಾಶಯ ಕೂಡ ಸಿಗುತ್ತೆ.

ಮೂಲ

9. ಹೈದೆರಾಬಾದ್ ನಿಂದ ವಿಜಯವಾಡ 

ಹೈದೆರಾಬಾದ್ ನಲ್ಲಿ ಹೈವೇ ಶುರು ಆದ್ರೆ 272 ಕಿ.ಮೀ ರಸ್ತೆ, ಭಾರತ ದಲ್ಲೇ ಮಸ್ತ್ ರಸ್ತೆ ಇದು. ನಿಮಗೆ ವೇಗವಾಗಿ ಗಾಡಿ ಓಡ್ಸೋದು ಇಷ್ಟ ಇದ್ರೆ ಈ ರಸ್ತೆ ಮರೀಬೇಡಿ.

ಮೂಲ

10. ಚೆನ್ನೈ ಇಂದ ಎಳಗಿರಿ

ನಿಮಗೆ ಹಸಿರಿನ ಮಧ್ಯೆ ಚುಮು ಚುಮು ಚಳಿಲಿ ಸಮಯ ಕಳೀಬೇಕು ಅಂತಿದ್ರೆ… ಬೆಟ್ಟ ಗುಡ್ಡ ಅಂತ ಅಡ್ಡಾಡಬೇಕು ಅಂತಿದ್ರೆ… ಖಂಡಿತ ನೀವು ಚೆನ್ನೈ ಇಂದ ಎಳಗಿರಿಗೆ ಹೋಗ್ಬೇಕು. ಹೈವೇ ನಲ್ಲಿ 5 ಗಂಟೆ 235 ಕಿ.ಮೀ ರಸ್ತೆ ಜೀವನ ಇಡೀ ನೆನಪಿಡೋ ಅನುಭವ.

ಮೂಲ

ಯಾವಾಗ ಟ್ರಿಪ್ಪು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ನಿಮಗೆ ಈ 15 ರಹಸ್ಯಗಳು ಗೊತ್ತಿದ್ದರೆ ನಿಮ್ಮ ದೇಹ ನೀವು ಹೇಳಿದಂಗೆ ಕೇಳುತ್ತೆ

ಕಿವಿ ಕೆರ್ಕೊಂಡ್ರೆ ಗಂಟಲು ಕೆರೆಯೋದು ಮಾಯ ಆಗುತ್ತೆ

ಮನುಷ್ಯನ ದೇಹಕ್ಕಿಂತ ಬೇರೊಂದು ವಿಸ್ಮಯ ಇಲ್ಲ. ಈ ವಿಸ್ಮಯದ ಬಗ್ಗೆ ಕೆಲವೊಂದು ವಿಷಯಗಳನ್ನ ತಿಳ್ಕೊಂಡ್ರೆ ನಿಮ್ಮ ದೇಹ ನೀವು ಅನ್ಕೊಂಡಿರೋದಕ್ಕಿಂತ ಹೆಚ್ಚು ಸಾಧಿಸತ್ತೆ, ನೀವು ಹೇಳಿದಂಗೆ ಕೇಳುತ್ತೆ.

ಇಲ್ಲಿ ಅಂತೆಕಂತೆ ನಿಮಗೋಸ್ಕರ ಒಂದಿಷ್ಟು ದಿನ ನಿತ್ಯ ಬರೋ ತೊಂದ್ರೆಗಳಿಗೆ ಸಿಂಪಲ್ ಉಪಾಯಗಳನ್ನ ಕೊಟ್ಟಿದೆ. 

1. ಗಂಟಲಲ್ಲಿ ಕೆರೆತ ಇದ್ದಾಗ ಕಿವಿ ಕೆರ್ಕೊಳ್ಳಿ

ಸರಿ ಹೋಗುತ್ತೆ. ಯಾಕಂದ್ರೆ ಆ ಕೆರೆತ ಉಂಟು ಮಾಡಿರೋ ನರಗಳು ಸಡಿಲವಾಗತ್ತೆ.

ಮೂಲ

2. ಮಾತು ಸರ್ಯಾಗಿ ಕೇಳಿಸ್ತಿಲ್ಲಾ ಅಂದ್ರೆ ಬಲಗಡೆ ಕಿವಿ ಕೊಟ್ಟು ಕೇಳಿ, ಸಂಗೀತಕ್ಕೆ ಎಡಗಡೆ ಕಿವಿ

 ಬಲಗಡೆ ಕಿವಿಗೆ ಶಬ್ದ ಮತ್ತೆ ವಾಕ್ಯಗಳನ್ನ ಗ್ರಹಿಸೋ ಶಕ್ತಿ ಜಾಸ್ತಿ ಇದ್ಯಂತೆ. ಹಾಗೆ ಎಡಗಡೆ ಕಿವಿಗೆ ರಾಗ, ಲಯಗಳನ್ನ ಗ್ರಹಿಸೋ ಶಕ್ತಿ ಇದೆ.

ಮೂಲ

3. ಇಂಜೆಕ್ಷನ್ ಭಯಾ ಆದ್ರೆ ಸೂಜಿ ಚುಚ್ಚೋ ಹೊತ್ತಿಗೆ ಕೆಮ್ಮಿ

ಇಂಜೆಕ್ಷನ್ ನೋವಿನ ಭಯ ಕಾಡಿದ್ರೆ ಸೂಜಿ ಚುಚ್ಚೋ ಹೊತ್ತಿಗೆ ಕೆಮ್ಮೊ ಅಭ್ಯಾಸ ಮಾಡ್ಕೊಳ್ಳಿ. ಹೀಗೆ ಮಾಡೋದ್ರಿಂದ ನಿಮ್ಮ ರಕ್ತದೊತ್ತಡ ಹೆಚ್ಚಾಗಿ ಬೆನ್ನು ಹುರಿಯಲ್ಲಿರೋ ನರಗಳಿಗೆ ನೋವು ಗೊತ್ತಾಗದೇರೋ ಹಾಗೆ ಮಾಡುತ್ತೆ.

ಮೂಲ

4. ಮೂಗು ಕಟ್ಟಿದ್ರೆ ನಾಲಿಗೇನಾ ಬಾಯಿಯೊಳಗಡೆ ಮೇಲ್ಭಾಗಕ್ಕೆ ಮುಟ್ಟಿಸಿ ಅಮೇಲೆ ಹುಬ್ಬು ಮಧ್ಯ ಒತ್ತಿ

ಹೀಗೆ ಒಂದಾದ ಮೇಲೆ ಒಂದನ್ನ ಮಾಡಿದ್ರೆ ಇಪ್ಪತ್ತು ಸೆಕೆಂಡಲ್ಲೇ ನಿಮ್ಮ ಮೂಗು ಸರಿ ಹೋಗುತ್ತೆ.

ಮೂಲ

5.  ಇನ್ನೇನು ಮಲಗೋ ಹೊತ್ತಲ್ಲಿ ಹೆಚ್ಚು ತಿಂದು ಒದ್ದಾಡ್ತಿದ್ರೆ ಎಡಕ್ಕ ತಿರುಗಿ ಮಲಗಿ

ಇದರಿಂದ ನಿಮ್ಮ ಹೊಟ್ಟೇಲಿ ಆಸಿಡ್ ಉತ್ಪತ್ತಿ ಚೆನ್ನಾಗಿ ಆಗಿ ಜೀರ್ಣ ಚೆನ್ನಾಗಾಗುತ್ತೆ.

ಮೂಲ

6. ಹಲ್ಲು ನೋವು ಕಮ್ಮಿ ಮಾಡ್ಕೊಳಕ್ಕೆ ಹೆಬ್ಬೆಟ್ಟು ಮತ್ತೆ ತೊರ್ಬೆರಳಿನ ಮಧ್ಯೆ  ಐಸ್ ಇಟ್ಟು ಉಜ್ಜಿ

ನಿಮ್ಮ ಹಲ್ಲಿನ ಡಾಕ್ಟರ್ ಸಿಗ್ಲಿಲ್ಲ ಅಂದ್ರೆ ಹಿಂಗೆ ಮಾಡಿ, ನಿಮ್ಮ ನೋವು ಅರ್ಧಕ್ಕೆ ಬರುತ್ತೆ.

ಮೂಲ

7. ಮೂಗಲ್ಲಿ ರಕ್ತ ಬರ್ತಿದ್ರೆ ಮೂಗು ಮತ್ತೆ ತುಟಿ ಸೇರೋ ಜಾಗದಲ್ಲಿ ಒತ್ತಿ ಹಿಡಿರಿ

ಮೂಗಿಗೆ ಹೋಗೊ ರಕ್ತನಾಳನ ತಡೆಗಟ್ಟಿದಹಾಗೆ ಆಗೋದ್ರಿಂದ ರಕ್ತ ಬರೋದು ನಿಲ್ಲುತ್ತೆ.

ಮೂಲ

8. ಸುಟ್ಟ ಗಾಯಕ್ಕೆ ತಣ್ಣೀರೇ ಮದ್ದು

ಅದೇ ಹಳೆ ಉಪಾಯ ಸಹಾಯ ಮಾಡುತ್ತೆ.

ಮೂಲ

9. ನಿಮಗೆ ತುಂಬಾ ಭಯ ಆದಾಗ ಹೆಬ್ಬೆಟ್ಟು ಊದ್ಕೊಳಿ

ಹೀಗೆ ಮಾಡೋದ್ರಿಂದ ರಕ್ತದೊತ್ತಡ ಕಡಿಮೆ ಆಗಿ ಭಯ ಆಗೋದಿಲ್ಲ.

ಮೂಲ

10. ಐಸ್ ಕೋಲ್ಡ್ ತಿಂದು ತಲೆಯೆಲ್ಲಾ ಕೋಲ್ಡ್ ಆಗ್ತಿದ್ರೆ ನಾಲಿಗೆಯಿಂದ ಬಾಯಿ ಮೇಲ್ಭಾಗಾನ ಒತ್ತಿಟ್ಟುಕೊಳ್ಳಿ

ಬೇಸಿಗೇಲಿ ಅಥವಾ ತುಂಬ ಬಿಸಿಲಿದ್ದಾಗ ನೀವು ತಣ್ಣಗಿರೋ ಐಸ್ ಕ್ರೀಂ ಅಥವಾ ಜ್ಯುಸ್ ಕುಡಿದ್ರೆ ಹೀಗಾಗುತ್ತೆ. ಇದು ಮುಂದುವರೆದ್ರೆ ನಿಮ್ಮ ಮೈ ಬಿಸಿಯಾಗಿ ತಲೆನೋವು ಬರಬಹುದು. ಇದರಿಂದ ಪಾರಾಗೋಕೆ ನಿಮ್ಮ ನಾಲಿಗೆಯಿಂದ ಬಾಯಿಯ ಮೇಲಿನ ಭಾಗಾನ ಒತ್ತಿಟ್ಟುಕೊಳ್ಳಿ.

ಮೂಲ

11. ನಿಮ್ಮ ಕೈ ಸೋತಿದ್ರೆ ಕತ್ತಾಡಿಸಿ

ನಿಮ್ಮ ಕೈಗಳು ಎತ್ತೋಕಾಗದೆ ಸೋತಿದ್ರೆ ಆಗ ನಿಮ್ಮ ಕೈಗಳ ನರದಲ್ಲಿ ತಡೆಯಾಗಿದೆ ಅಂತರ್ಥ. ಆಗ ನಿಮ್ಮ ಕುತ್ತಿಗೆ ಹೀಗೆ ಆಡಿಸಿದ್ರೆ ಅವು ಸಡಿಲ ಆಗುತ್ವೆ.

ಮೂಲ

12. ಬೇಗ ನಿದ್ದೆ ಮಾಡೋಕೆ ಏನು ಮಾಡಬೇಕು ಗೊತ್ತಾ?

ಬೆಳಗ್ಗೆ ಎದ್ದ ತಕ್ಷಣ ಹಾಸಿಗೆ ಇಂದ ಹೊರ ಬಂದ್ರೆ ಮತ್ತೆ ಮಲಗೋ ವರೆಗೂ ಹಾಸಿಗೆಗೆ ಹೋಗಬೇಡಿ. ಹೀಗೆ ಮಾಡೋದ್ರಿಂದ ನಿಮ್ಮ ದೇಹಕ್ಕೆ ಹಾಸಿಗೆಗೆ ತಲೆ ಕೊಟ್ಟ ತಕ್ಷಣ ಮಲಗೋ ಅಭ್ಯಾಸ ಆಗುತ್ತೆ.

ಮೂಲ

13. ಬೇಗ ಏನನ್ನಾದ್ರೂ ನೆನಪಿಟ್ಟುಕೊಳ್ಳೋಕೆ ಹೀಗೆ ಮಾಡಿ

ಬೇಗ ನೆನಪಿಟ್ಟಿ ಕೊಳ್ಳಬೇಕು ಅದೂ ತುಂಬಾ ದಿನಗಳವರೆಗೆ ಅಂತಿದ್ರೆ ರಾತ್ರಿ ಮಲಗೋ ಹೊತ್ತಲ್ಲಿ ಆ ವಿಷಯದ ಬಗ್ಗೆ ಆಲೋಚಿಸಿ, ಆಗ ನಿಮ್ಮ ಮೆದುಳು ಅದನ್ನ ಸುಲಭವಾಗಿ ಮರೆಯಲ್ಲ.

ಮೂಲ

14. ಓಡೋವಾಗ ನಿಮ್ಮ ಎಡಗಾಲು ಮುಂದಿಟ್ಟಾಗಲೆಲ್ಲಾ ಉಸಿರನ್ನ ಹೊರಗೆ ಬಿಡಿ 

ಇದ್ರಿಂದ ನಿಮ್ಮ ದೇಹದ ಎಡಭಾಗಕ್ಕೆ ನೋವಾಗಲ್ಲ. ನಿಮ್ಮ ಲಿವೆರ್ ಒತ್ತಡ ಹೇರೋದ್ರಿಂದ ಓಡೋವಾಗ ದೇಹದ ಎಡಭಾಗಕ್ಕೆ ನೋವಾಗೋದು. ಇದನ್ನ ತಡೆಯೋಕೆ ಎಡಗಾಲು ಮುಂದಿಟ್ಟಾಗಲೆಲ್ಲಾ ಉಸಿರನ್ನ ಹೊರಗೆ ಬಿಡ್ಬೇಕು

ಮೂಲ

15. ಈಜೋಕೆ ನೀರಿಗೆ ಜಿಗಿದಾಗ ತುಂಬ ಆಳಕ್ಕೆ ಇಳಿಬೇಕು ಅಂದ್ರೆ ಮುಂಚೇನೆ ಕೆಲವು ಬಾರಿ ಬೇಗ ಉಸಿರಾಡಿ

ನೀರಿಗೆ ಜಿಗಿಯೋಕೆ ಮುಂಚೆ ಕೆಲವು ಬಾರಿ ಬೇಗ ಉಸಿರಾಡಿ ಹೇಗೆ ಮಾಡೋದ್ರಿಂದ ನಿಮಗೆ ಹೆಚ್ಚು ಹೊತ್ತು ಉಸಿರು ಹಿಡಿದಿಟ್ಟುಕೊಳ್ಳೋಕೆ ಸಾಧ್ಯ ಆಗುತ್ತೆ. ಆಗ ನೀವು ಆಳಕ್ಕೆ ಜಿಗಿಬಹುದು.

ಮೂಲ

ಏನು ಆಶ್ಚರ್ಯ ಆಗ್ತಿದ್ಯಾ? ವಿಚಿತ್ರ ಅನ್ಸಿದ್ರೂ ಇವೆಲ್ಲ ನಿಜಾ... ಬೇಕಾದ್ರೆ ಟ್ರೈ ಮಾಡಿ ನೋಡಿ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: