ದ.ಭಾರತದ ಈ 10 ರಸ್ತೆಗಳಲ್ಲಿ ಕಾರ್ ಓಡುಸ್ಕೊಂಡ್ ಟ್ರಿಪ್ಪಿಗೆ ಹೋದ್ರೆ ಅದರ ಮಜಾನೇ ಬೇರೆ

ಒಳ್ಳೇ ಮೋಡದ ಮೇಲೆ ಹೋದಂಗಿರುತ್ತೆ

ಮನೆಲಿ ವೀಕೆಂಡ್ ಕಳೆಯೋ ಮನಸ್ಸಿಲ್ಲ.. ದೂರ ಎಲ್ಲೂ ಹೋಗೋಕಾಗಲ್ಲ ಅಂದ್ರೆ. ನಿಮ್ಮ ಕಾರಿಗೆ ಪೆಟ್ರೋಲ್ ತುಂಬಿಸಿ, ಕ್ಯಾಮೆರಾ ಚಾರ್ಜ್ ಮಾಡ್ಕೋಂಡು,ನಿಮ್ಮಿಷ್ಟದ ಹಾಡುಗಳನ್ನ ರೇಡಿ ಮಾಡ್ಕೊಂಡು,  ನಿಮ್ಮನೆಯವರ ಜೊತೆ ಸಿದ್ಧ ಆಗಿ, ಬೇಗ ವಾಪಸ್ ಬರಬಹುದು ಅದೂ ಒಳ್ಳೆ ಅನುಭವದ ಜೊತೆಗೆ.

1. ಚೆನ್ನೈ ಇಂದ ಪಾಂಡಿಚೆರಿ

140-150 ಕಿ.ಮಿ ಉದ್ದನೆ ರಸ್ತೆ, ಬೈಕ್ ನಲ್ಲಿ ಅರಾಮಾಗಿ ಪ್ರಕೃತೀನ ಸವೀತಾ ಹೋಗಬಹುದು. ಪಾಂಡಿಚೆರಿಯ ಫ್ರೆಂಚ್ ಕಾಲನಿ ನಿಮಗೆ ಫ್ರೆಂಚ್ ಫೀಲ್ ಕೊಡುತ್ತೆ. ಬೀಚ್ ಹತ್ತಿರದಲ್ಲಿ ನಿಮಗೊಂದು ರೂಮ್ ಸಿಕ್ರೆ ರಾತ್ರಿ ಬೀಚ್ ಹತ್ರ ವಾಕ್ ಮಾಡೋದನ್ನ ಮಾತ್ರ ಮರೀಬೇಡಿ ಅದಕ್ಕಿಂತ ಸ್ವರ್ಗ ಬೇರೊಂದಿಲ್ಲ.

ಮೂಲ

2. ಬೆಂಗಳೂರಿಂದ ಬಂಡಿಪುರ

ಇದೊಂದು ರಸ್ತೆ ಬಗ್ಗೆ ಮಾತಾಡದೇ ಹೋದ್ರೆ ನೀವೇನೋ ಕಳೆದುಕೊಂಡ ಹಾಗೆ. 235 ಕಿ.ಮಿ ಉದ್ದನೆಯ ರಸ್ತೆ 5 ಗಂಟೆಲಿ ಸೇರ್ತೀರಿ ಬಂಡಿಪುರ ಅರಣ್ಯ, ದಾರೀಲಿ ನಿಮಗೆ ಜಿಂಕೆ ಕಂಡಾಗ ನಿಮ್ಮ ಕ್ಯಾಮೆರಾಗೆ ಕೆಲಸ ಕೊಡಿ. ದಾರೀಲಿ ಹಸಿವಾದ್ರೆ ಒಳ್ಳೋಳ್ಳೆ ಹೊಟೆಲುಗಳೂ ಸಿಗುತ್ವೆ. ಇನ್ನೇನ್ ಬೇಕು ಹೇಳಿ.

ಮೂಲ

3. ಪಂಬನ್ ಸೇತುವೆ

ರಾಮೇಶ್ವರದಿಂದ ತಮಿಳುನಾಡಿಗೆ ಹೋಗೋ ದಾರಿ 13.೫ ಕಿ.ಮೀ 20 ನಿಮಿಷದ ರಸ್ತೆ. ಅದ್ರಲ್ಲೂ ಬೈಕ್ ನಲ್ಲಿ ಹೋಗೋದಾದ್ರೆ ನಿಮಗೆ ಮತ್ಯಾವ ರಸ್ತೆಲೂ ಹೋಗೋ ಮನಸ್ಸಾಗಲ್ಲ. ಸುತ್ತಲೂ ನೀರು, ತೀಡೋ ತಂಗಾಳಿ ಹೆಚ್ಚು ಕಾಲ ನಿಮ್ಮ ಮನಸಲ್ಲಿ  ಉಳಿಯುತ್ತೆ. 

ಮೂಲ

4. ಚೆನ್ನೈ ಇಂದ ಮುನ್ನಾರ್ 

ಚೆನ್ನೈ ಬಿಸಿಲು ನಿಮಗೆ ಕಷ್ಟ ಆಗ್ತಿದ್ರೆ 10 ಗಂಟೆ ಅಂದ್ರೆ 600 ಕಿ.ಮೀ ನಲ್ಲಿ ನಿಮಗೆ ಮುನ್ನಾರ್ ಸಿಗುತ್ತೆ. ದಾರೀಲಿ ಚೋಳರ ಕಾಲದ ತಿರುಚಿನಾಪಳ್ಳಿ  ಕೂಡ ನೋಡಬಹುದು.

ಮೂಲ

5. ಬೆಂಗಳೂರಿಂದ ಊಟಿ

ಕಾಲೇಜು ಸ್ಟೂಡೆಂಟ್ಸ್ ಗಳ ತುಂಬಾ ಇಷ್ಟದ ರಸ್ತೆ ಇದು. 266 ಕಿ.ಮೀ ಉದ್ದ. ಅದರಲ್ಲೂ ಮೈಸೂರಿಗೆ ಹೋಗಿ ಅರಮನೆ ಎಲ್ಲ ನೋಡಿಕೊಂಡು ಒಳ್ಳೆ ಊಟ ಮಾಡಿ ಹೊರಟರಂತೂ ಫುಲ್ ಮಸ್ತಿ ನೋಡಿ.

ಮೂಲ

6. ಬೆಂಗಳೂರಿಂದ ಗೋವಾ

ಬೆಂಗಳೂರಿನವರಿಗೆ ಗೋವಾ ಅಂದ್ರೆ ತುಂಬಾ ಇಷ್ಟದ ಜಾಗ ನೋಡಿ. 566 ಕಿ.ಮೀ ಒಳ್ಳೆ ರಸ್ತೆ, ರಸ್ತೆ ಉದ್ದಕ್ಕೂ ಢಾಬಾ ಕಣ್ಣಿಗೂ ಹಬ್ಬ ಹೊಟ್ಟೆಗೂ ಹಬ್ಬ.

ಮೂಲ

7. ಬೆಂಗಳೂರಿಂದ ನಂದಿ ಬೆಟ್ಟ

ಬೆಂಗಳೂರಿಂದ 47 ಕಿ.ಮೀ ಇದ್ದರೂ ಪಕ್ಕದಲ್ಲೇ ಇದ್ದಷ್ಟು ಹತ್ರ ನಂದಿ ಬೆಟ್ಟ, ಹೋಗದವರೇ ಇಲ್ವೇನೋ ಅನ್ಸುತ್ತೆ. ಬೆಳಗ್ಗೆನೇ ಮಂಜಲ್ಲಿ ಹೋಗಿ ಸೂರ್ಯೋದಯ ನೋಡೋದು ಅಂದ್ರೆ ಯಾರಿಗೆ ಖುಷಿ ಕೊಡಲ್ಲ ಹೇಳಿ. ಹೋಗೋದು ತಡ ಆದ್ರೂ ಟ್ರೆಕಿಂಗ್ ಹೋಗಬಹುದು. ದಾರೀಲಿ ದೇವನಹಳ್ಳಿ ಕೋಟೆ ಮರೀಬೇಡಿ.

ಮೂಲ

8. ವಿಶಾಖಪಟ್ಟಣದಿಂದ ಅರಕು 

ಬಂಗಾಳ ಕೊಲ್ಲಿ ಪಕ್ಕದ ಸುಂದರ ಜಾಗ ವಿಶಾಖಪಟ್ಟಣ… ಅಲ್ಲಿಂದ ಅರಕು ಕಡೆ ಹೋಗ್ತಾ ನಿಮ್ಮ ಕಣ್ಣಿಗೆ ತಂಪಾಗೋದು ಅಲ್ಲದೆ  ಬದಲಾಗೋ ಹವಾಮಾನ ನಿಮಗೆ ಇಷ್ಟ ಆಗುತ್ತೆ. ಅರಕು ತಲುಪುತ್ತಿದ್ದಹಾಗೆ ನಿಮಗೆ ಸಿಗೋ ಕಾಫಿ ಇನ್ನಷ್ಟು ಖುಷಿ ಕೊಡುತ್ತೆ. 116 ಕಿ.ಮೀ ದಾರೀಲಿ ನಿಮಗೆ ಬೋರಾ ಗುಹೆಗಳು, ತಾತ್ಪುಡಿ ಜಲಾಶಯ ಕೂಡ ಸಿಗುತ್ತೆ.

ಮೂಲ

9. ಹೈದೆರಾಬಾದ್ ನಿಂದ ವಿಜಯವಾಡ 

ಹೈದೆರಾಬಾದ್ ನಲ್ಲಿ ಹೈವೇ ಶುರು ಆದ್ರೆ 272 ಕಿ.ಮೀ ರಸ್ತೆ, ಭಾರತ ದಲ್ಲೇ ಮಸ್ತ್ ರಸ್ತೆ ಇದು. ನಿಮಗೆ ವೇಗವಾಗಿ ಗಾಡಿ ಓಡ್ಸೋದು ಇಷ್ಟ ಇದ್ರೆ ಈ ರಸ್ತೆ ಮರೀಬೇಡಿ.

ಮೂಲ

10. ಚೆನ್ನೈ ಇಂದ ಎಳಗಿರಿ

ನಿಮಗೆ ಹಸಿರಿನ ಮಧ್ಯೆ ಚುಮು ಚುಮು ಚಳಿಲಿ ಸಮಯ ಕಳೀಬೇಕು ಅಂತಿದ್ರೆ… ಬೆಟ್ಟ ಗುಡ್ಡ ಅಂತ ಅಡ್ಡಾಡಬೇಕು ಅಂತಿದ್ರೆ… ಖಂಡಿತ ನೀವು ಚೆನ್ನೈ ಇಂದ ಎಳಗಿರಿಗೆ ಹೋಗ್ಬೇಕು. ಹೈವೇ ನಲ್ಲಿ 5 ಗಂಟೆ 235 ಕಿ.ಮೀ ರಸ್ತೆ ಜೀವನ ಇಡೀ ನೆನಪಿಡೋ ಅನುಭವ.

ಮೂಲ

ಯಾವಾಗ ಟ್ರಿಪ್ಪು?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಇನ್ನೊಂದ್ಸಲ ಸ್ವಿಮ್ಮಿಂಗ್ಗ್ ಹೋಗಬೇಕಾದರೆ ಈ 15 ಫೋಟೋಗಳು ನಿಮ್ನ ಕಾಡುತ್ವೆ

ಕಾಪಾಡಿ! ಕಾಪಾಡಿ!

ಈಜು ಬರತ್ತೆ ಅಂತೇಳಿ ಎಲ್ಲೆಲ್ಲೋ ಈಜಕ್ಕೆ ಹೋದ್ರೆ ಅಪಾಯ ತಪ್ಪಿದ್ದಲ್ಲ. ನೀರಿನ ಒಳಗೆ ಏನಿದೆ ಅಂತ ನಮಗೆ ಗೊತ್ತಿರಲ್ಲ. ಗೊತ್ತಾಗೋ ಹೊತ್ತಿಗೆ ಬಜಾವಾಗೋದು ಕಷ್ಟ. ನೀರಿಗೆ ಇಳಿಯೋ ಮುಂಚೆ ತುಂಬಾ ಹುಷಾರಾಗಿರ್ಬೇಕು. ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ. ಇಲ್ಲಿರೋ 15 ಫೋಟೋ ನೋಡಿ. ಇನ್ಮೇಲೆ ಸ್ವಿಮ್ಮಿಂಗ್‌ಗೆ ಹೋಗ್ಬೇಕಾದ್ರೆ ಖಂಡಿತ ನಿಮ್ಮನ್ನ ಕಾಡುತ್ವೆ. 

1. ಅತ್ತ ಧರಿ ಇತ್ತ ಪುಲಿ ಅಂದ್ರೆ ಇದೇ ಏನೋಪ್ಪಾ
2. ನೀರಿನಲ್ಲಿ ಗುಹೇನೂ ಇರ್ಬೋದು
3. ಇಂತದ್ದೇನದ್ರೂ ಕಾಣಿಸಿದ್ರೆ ಅರಚಕ್ಕೂ ಆಗಲ್ಲಪ್ಪೋ
4. ಅನಕೊಂಡ ಹಾವು ಇದ್ರೂ ಇರ್ಬೋದು
5. ಮೈ ಝುಮ್ ಅನ್ಸತ್ತೆ ಅಲ್ವಾ?
6. ಗ್ರಾಫಿಕ್ಸ್ ಅಂದ್ಕೊಂಡ್ರಾ.. ಸಿಕ್ಕಿದ್ರೆ ಅಷ್ಟೆ ಸೀರುಂಡೇನೆ!
7. ನೀರಿನಲ್ಲಿ ಅಲೆಯ ಉಂಗುರ ಅಲ್ಲ..ಹಾವಿನುಂಗುರ!
8. ಈ ತರಹ ಮಾಡಕ್ಕೂ ಗುಂಡಿಗೆ ಇರ್ಬೇಕು ಕಣ್ರಿ
9. ಡೈವ್ ಹೊಡೆದ್ರೆ ಹಂಗೇ ಗುಂಳುಂ ಅನ್ನಿಸ್ಬಿಡತ್ತೆ
10. ನನ್ ತಂಟೇಗ್ ಬಂದ್ರೆ ಸುಮ್ಕಿರಲ್ಲ ಅಂತಿದ್ಯಾ ಆಕ್ಟೋಪಸ್!
11. ದಾರಿ ಕಾಣದಾಗಿದೆ ರಾಘವೇಂದ್ರನೇ...
12. ಸಾವು ಕಣ್ಮುಂದೆ ಇದೆ ಅಂತಾರಲ್ಲ...ಇದೇನಾ?
13. ಇದೇನೋ ಪ್ರಾಣಿ ಅಂದ್ಕೊಂಡ್ರಾ...ಛೀ! ಪಾಚಿ ಅಷ್ಟೇ
14. ಎಲ್ಲಿಗೆ ಪಯಣ ಯಾವುದೋ ದಾರಿ...
15. ಬ್ಲೂ ವೇಲ್ ಒಂದ್ಸಲ ಮೇಲೆ ಬಂದಿದೆ ಅಂದ್ರೆ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: