ಮದುವೆಗೆ ಹೆಣ್ಣು ಅಥವಾ ಗಂಡು ಹುಡುಕ್ಕೊಳ್ವಾಗ ಈ 9 ತಪ್ಪು ಆಗಬಾರದು ನೋಡಿ

ಯಾಕಂದ್ರೆ ಇದು ಜೀವನದಲ್ಲಿ ಬಹಳ ಮುಖ್ಯವಾದ ತಿರುವು

ಆ ಮೀಟಿಂಗ್ ನಡೀವಾಗ ಹುಡುಗ-ಹುಡುಗಿ ತಲೇಲಿ ಏನೇನೋ ಆಸೆಗಳು ತುಂಬಿರುತ್ತವೆ. ಅದೆಲ್ಲದರ ಮಧ್ಯದಲ್ಲಿ ಮಿದುಳು ಸ್ವಲ್ಪ ಜಾಸ್ತಿ ಕೆಲಸ ಮಾಡಬೇಕು. ಇಲ್ಲಾಂದ್ರೆ ಎಡವಟ್ಟಾಗೋ ಸಾಧ್ಯತೆ ಇದೆ. ಇಲ್ಲಿ ನೋಡಿ, ಮದುವೆಗೆ ಹೆಣ್ಣು ಅಥವಾ ಗಂಡು ನೋಡುವಾಗ ಸಾಮಾನ್ಯವಾಗಿ ಜನ ಮಾಡೋ 9 ತಪ್ಪುಗಳು ಇಲ್ಲಿವೆ. ಇವುಗಳು ಆಗದೆ ಇರೋಹಂಗೆ ನೋಡ್ಕೊಂಡ್ರೆ ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರುತ್ತೆ…

1) ಪ್ರೀತಿ-ಪ್ರೇಮದ ಗುಂಗಲ್ಲಿ ಬೇರೆ ಎಲ್ಲ ಮರೆತು ಮದುವೆ ಆಗೋದು

ನಿಜಕ್ಕೂ ಇನ್ನೊಬ್ಬರನ್ನ ಪ್ರೀತಿಸೋದು ಅನ್ನೋದು ಒಂಥರಾ ವಿಸ್ಮಯಾನೇ. ಆದರೆ ಮದುವೆಗೆ ಅದೊಂದೇ ಸಾಕಾಗಲ್ಲ. ಎಷ್ಟೋ ಸರ ಗಂಡು-ಹೆಣ್ಣು ತುಂಬಾ ಪ್ರೀತಿಸ್ತಾ ಇರ್ತಾರೆ, ಆದರೆ ಅದು ಇದು ಜಗಳ ಆಗಿ ಬೇರೆ ಆಗೋಗ್ತಾರೆ. ಆಗ ಗೊತ್ತಾಗುತ್ತೆ, ಈ‌ ಪ್ರೀತಿ-ಪ್ರೇಮ ಅನ್ನೋದೇನು ತಂದೆತಾಯಿಗೂ ಮಕ್ಕಳಿಗೂ ಇರೋ ಸಂಬಂಧದ ತರಹ ಅಲ್ಲ ಅಂತ. ಅದೆನೇ ಇರಲಿ, ಮಕ್ಕಳು, ಧರ್ಮ, ಕೆಲಸ ಗಿಲಸ ಅಂತ ನಿಜವಾದ ಜೀವನ ಮಾಡಬೇಕದಾಗ ಬರೀ ಈ ಪ್ರೀತಿ ಸಾಕಾಗಲ್ಲ. ಆದ್ದರಿಂದ ಬರೀ ಪ್ರೀತಿ ಪ್ರೀತಿ ಅನ್ಕೊಂಡು ಮದುವೆ ಮಾಡ್ಕೊಳೋದು ಪೆದ್ದತನಾನೇ ಆಗುತ್ತೆ. ಅದೂ ಇರಬೇಕು, ಆದರೆ ಅದೊಂದೇ ಸಾಲದು.

ಮೂಲ

2) ಸಂಪಾದನೆ ನೋಡದೆ ಮದುವೆ ಆಗೋದು

ದುಡ್ಡಿಗೋಸ್ಕರ ಮದುವೆ ಆಗಬೇಕಾಗಿಲ್ಲ, ಆದರೆ ಮದುವೆ ಅಂದಮೇಲೆ ದುಡ್ಡು ಬೇಕೇ ಬೇಕು. ಗಂಡು ಅಥವಾ ಹೆಣ್ಣಿನ ಸಂಪಾದನೆ ಎಷ್ಟು ಅನ್ನೋದು ಮುಖ್ಯವಾದ ಪ್ರಶ್ನೇನೇ. ನಿಮಗೆ ಒಳ್ಳೇ ಸಂಬಳ ಇದ್ದರೂ ಕೇಳಿಕೊಳ್ಳೋದ್ರಲ್ಲಿ ತಪ್ಪಿಲ್ಲ. ಆಮೇಲೆ ದುಡ್ಡಿನ ವಿಷಯಕ್ಕೆ ಜಗಳ ಆಗೋದು ತಪ್ಪಿಸಬಹುದು. ಹಾಗೆ ಎಷ್ಟೋ ಮದುವೆಗಳು ಮುರಿದು ಹೋಗಿವೆ. ಹೆಂಡತಿಗೆ ಗಂಡನಿಗಿಂತ ಜಾಸ್ತಿ ಸಂಬಳ ಇದೆ ಅಂದಾಗ, ಅಥವಾ ಗಂಡನಿಗೆ ಸಾಕಷ್ಟು ಸಂಬಳ ಬರ್ತಿಲ್ಲ ಅಂತ ಹೆಂಡತಿಗೆ ಅನ್ನಿಸಿದಾಗ ಇಂಥ ತೊಂದರೆಗಳು ಆಗಿರೋದನ್ನ ನೀವು ಕೇಳೇ ಇರ್ತೀರಿ. ಇವೆಲ್ಲ ಯಾಕೆ?

ಮೂಲ

3) ವ್ಯಕ್ತಿ ಬದಲು ಅವಳ/ನ ಡಿಗ್ರಿ, ಕೆಲಸ ಅಥವಾ ವಾಸವಾಗಿರೋ ದೇಶವನ್ನ ಮದುವೆ ಆಗೋದು

ಉದಾಹರಣೆಗೆ ನಮ್ಮಲ್ಲಿ ಇಂಜಿನಿಯರ್ನ ಅಥವಾ ಡಾಕ್ಟರ್ನ ಮದುವೆ ಆಗಬೇಕು ಅನ್ನೋದಿದೆ. ಹಾಗೇ ಸರ್ಕಾರಿ ಕೆಲಸದಲ್ಲಿ ಇರೋರ್ನ ಮದುವೆ ಆದರೆ ಒಳ್ಳೇದು ಅಂತಾನೂ ಇದೆ. ಇನ್ನು ಫಾರಿನ್ ಹುಡುಗ/ಹುಡುಗಿ ಸಿಕ್ಕರೆ ಸಾಕು ಅನ್ನೋರು ತುಂಬ ಜನ ಇದಾರೆ. ಈ ತರಹ ಮದುವೆ ಮಾಡ್ಕೊಳೋದು ಒಳ್ಳೇದಲ್ಲ. ನಿಜಕ್ಕೂ ಈ‌ ಡಿಗ್ರಿ ಅಥವಾ ಕೆಲಸದಿಂದ ದುಡ್ಡೊಂದು ಸಿಗಬಹುದೇ ಹೊರತು ಒಳ್ಳೇ ಹೆಂಡತಿ/ಗಂಡ ಸಿಗೋದು ಗ್ಯಾರಂಟಿ ಏನಲ್ಲ. ಡಿಗ್ರಿ ಅಥವಾ ಕೆಲಸದ ಬಗ್ಗೆ ತುಂಬ ಗಮನ ಕೊಡೋರ್ನ ಮದುವೆ ಆಗಕ್ಕೂ ಹೋಗಬೇಡಿ. ಅವರಿಗೆ ನೀವು ಬೇಕಾಗಿಲ್ಲ.

ಮೂಲ

4) ನನಗೆ ಹೊಂದ್ತಾಳಾ/ನಾ ಅನ್ನೋದಕ್ಕಿಂತ ಅವಳ/ನ ಸಾಧನೆಗಳ ಕಡೆ ಜಾಸ್ತಿ ಗಮನ ಕೊಡೋದು

ಜೀವನದಲ್ಲಿ ಎತ್ತರಕ್ಕೆ ಏರಿರೋರೆಲ್ಲ ನಿಮಗೆ ಹೊಂದ್ತಾರೆ ಅಂತಿಲ್ಲ. ನಿಮಗೂ ಅವರಿಗೂ ಒಳ್ಳೇ ಸಂಬಂಧ ಬೆಳೆಯುತ್ತೆ ಅಂತೇನಿಲ್ಲ. ಯಾರಿಗಾದರೂ ಪ್ರತಿ ವರ್ಷ ಪ್ರಮೋಶನ್ ಸಿಗ್ತಿದೆ ಅನ್ಕೊಳಿ. ಅದು ಕೇಳಕ್ಕೆ ಚೆನ್ನಾಗಿದೆ ನಿಜ, ಆದರೆ ಆ ಪಾಲ್ಟಿ ರಾತ್ರಿ ಮನೇಗೇ ಬರದೆ ಇರಬಹುದು - ಕೆಲಸ ಕೆಲಸ ಅಂತ! ತುಂಬ ಫಾರಿನ್ ಟ್ರಿಪ್ ಹೊಡೀತಿದ್ರೂ ಅಷ್ಟೇನೇ - ಮನೆಯಲ್ಲೇ ಇಲ್ಲದಿರೋ ಹೆಂಡತಿ ಅಥವಾ ಗಂಡನ್ನ ಕಟ್ಕೊಂಡ್ ಏನ್ ಪ್ರಯೋಜನ?

ಮೂಲ

5) ನಿಮ್ ತರಹದೋರ್ನೇ ಹುಡುಕೋದು

ಒಂದೊಂದ್ಸಲ ಇದು ಎಲ್ಲರಿಗೂ ಅನ್ನಿಸುತ್ತೆ.… ನಂಗೆ ನನ್ ತರಹದೋಳೇ/ನೇ ಬೇಕು ಅಂತ. ಆದರೆ ಇದೂ ಸರಿಯಾದ ಚಿಂತನೆ ಅಲ್ಲ. ಗಂಡ ಹೆಂಡ್ತಿ ಇಬ್ಬರೂ ಎಲ್ಲಾದರಲ್ಲೂ ಒಂದೇ ತರಹ ಯೋಚನೆ ಮಾಡ್ತಿದ್ರೆ ಜೀವನ ಬೇಜಾರಾಗೋಗುತ್ತೆ. ಅದರ ಬದಲಾಗಿ ಒಬ್ಬರ ಕೊರತೆಗಳ್ನ ಇನ್ನೊಬ್ಬರು ಪೂರೈಸೋಹಂಗಿದ್ದರೆ ಒಳ್ಳೇದು. ಅಲ್ವಾ?

ಮೂಲ

6) ವ್ಯತ್ಯಾಸಗಳ ಕಡೆ ಗಮನ ಕೊಡದೆ ಇರೋದು

ನಿಮ್ ತರಹದೋರ್ನೇ ಹುಡುಕೋದು ಎಷ್ಟು ತಪ್ಪೋ ಇದೂ ಅಷ್ಟೇ‌ ತಪ್ಪು. ವ್ಯತ್ಯಾಸಗಳೂ ತೀರಾ ಜಾಸ್ತಿ ಇರಬಾರದು. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆದಂಗೆ ಪ್ರತಿ ದಿನದ ಜೀವನ ಆಗೋದ್ರೆ ಹೆಂಗೆ? ಯೋಚನೆ ಮಾಡಿ.

ಮೂಲ

7) ಎದ್ದು ಕಾಣ್ತಿರೋ ತೊಂದರೆಗಳ್ನ ನೋಡದಂಗೆ ಇದ್ದುಬಿಡೋದು

ಕೆಲವೊಮ್ಮೆ ಆ ವ್ಯಕ್ತಿಯ ಆರೋಗ್ಯ ಚೆನ್ನಾಗಿಲ್ಲದೆ ಇರಬಹುದು. ಈಗಲಂತೂ ಲೈಂಗಿಕ ಆರೋಗ್ಯದ ವಿಷಯದಲ್ಲಿ ಇಂಥ ಸಾಕಷ್ಟು ಕೇಸುಗಳು ಆಗೋಗಿವೆ. ಅಥವಾ ಏನಾದರೂ ಮಾನಸಿಕ ಆರೋಗ್ಯದ ತೊಂದರೆ ಇರಬಹುದು. ಅಥವಾ ಅವಳ/ನ ಲವರ್ ಯಾರಾದರೂ‌ ಇರಬಹುದು, ಅಥವಾ ಬಲವಂತದಿಂದ ಮದುವೆ ಆಗ್ತಿರಬಹುದು…. ಇಂಥ ತೊಂದರೆಗಳು ಎದ್ದು ಕಾಣ್ತಿದ್ದಾಗಲೂ ಕೆಲವರು ಕಾಣ್ತಾನೇ ಇಲ್ಲ ಅನ್ನೋಹಂಗೆ ಇದ್ದುಬಿಡ್ತಾರೆ. ನೋಡಕ್ಕೆ ಚೆನ್ನಾಗಿದಾಳೆ/ನೆ ಅಂತಾನೋ ಅಥವಾ ಮತ್ತೊಂದು ಕಾರಣದಿಂದಾನೋ ಹೋಗಿ ಮದುವೆ ಆಗಿಬಿಡ್ತಾರೆ. ಆಮೇಲೆ ಒಂದೊಂದಾಗಿ ತೊಂದರೆ ಶುರು. ಯಾಕಪ್ಪ ಬೇಕು?

ಮೂಲ

8) ನೋಡಕ್ಕೆ ಚೆನ್ನಾಗಿರೋದನ್ನೇ ತೀರಾ ದೊಡ್ಡದು ಮಾಡ್ಕೊಳೋದು

ಇದರ ಬಗ್ಗೆ ಅಂತೂ ಹೆಚ್ಚು ಹೇಳಲೇ ಬೇಕಾಗಿಲ್ಲ. ಜನ ಮೊದ್ಲು ಎಡವಿ ಬೀಳೋದು ಇದರಲ್ಲೇ. ನಿಜಕ್ಕೂ ನೋಡಿದರೆ ನೋಡಕ್ಕೆ ಚೆನ್ನಾಗಿದ್ದ ಮಾತ್ರಕ್ಕ ವೈವಾಹಿಕ ಜೀವನ ಚೆನ್ನಾಗಿರುತ್ತೆ ಅನ್ನಕ್ಕಾಗಲ್ಲ. ಹೆಂಡ್ತಿ/ಗಂಡ ಹಿಂಗಿರಬೇಕು ಅಂತ ನಿಮ್ಮ ಅನಿಸಿಕೆ ಏನೇ ಇರಲಿ, ನಿಮಗೆ ಕೆಲಸ ಹೋದಾಗಲೋ ಅಥವಾ ಮನೇಲಿ ಏನಾದರೂ ಅನಾಹುತ ಆದಾಗಲೋ ಆ ಮುದ್ದಾದ ಮುಖದಿಂದ ಉಪಯೋಗ ಎಷ್ಟಿದೆ? ಯೋಚನೆ ಮಾಡಿ. ನೋಡಕ್ಕೆ ಚೆನ್ನಾಗಿದ್ದು ಒಳಗೇನೇ ಏನಾದರೂ ಆರೋಗ್ಯದ ತೊಂದರೆ ಇದ್ದರೆ? ಅಥವಾ ಬಹಳ ಜಗಳದ ಸ್ವಭಾವ ಇದ್ದರೆ? ಯೋಚನೆ ಮಾಡಿ.

ಮೂಲ

9) ಮೇಲ್ಮೇಲಿನ ನಡವಳಿಕೆ ನೋಡಿ ಮದುವೆ ಆಗೋದು

ಕೆಲವರು ಮೇಲೆ ಕಾಣೋಹಂಗೆ ಎಲ್ಲಾ ತುಂಬ ಅಚ್ಚುಕಟ್ಟಾಗಿ ಮಾಡ್ತಾರೆ. ತುಂಬಾ ನಯವಾಗಿ ಮಾತಾಡೋದು, ಹಂಚಿಕೊಂಡು ತಿನ್ನೋದು, ಬೈ-ಗೀದೇ ಇರೋದು, ಹೀಗೆ. ಆದರೆ ಮೇಲೆ ಮಾಡಿದ್ದನ್ನೇ‌ ಒಳಗೂ ಮಾಡ್ತಾರೆ ಅನ್ನೋ ಗ್ಯಾರಂಟಿ ಯಾರು ಕೊಡೋರು? ಎಷ್ಟೋ ಮಂದಿ ಇದರಲ್ಲಿ ಎಡವಿದಾರೆ. ಅಷ್ಟೇ ಅಲ್ಲ, ಸಮಯ ಅಂದಾಗ ಈ ಒಳ್ಳೇ ನಡವಳಿಕೆ ಒಂದರಿಂದಾನೇ ಏನೂ ಆಗೋಗಲ್ಲ. ಆದ್ದರಿಂದ ಯೋಚನೆ ಮಾಡಿ.

ಮೂಲ

ಆಯ್ಕೆ ಮಾಡ್ಕೊಳ್ವಾಗ ಹುಷಾರಾಗಿರ್ರಪ್ಪಾ. ಇದು ದೊಡ್ಡ ತೀರ್ಮಾನ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಧಾರವಾಡ ಪೇಡಾ ಬಗ್ಗೆ ಧಾರವಾಡದ ಮಂದಿಗೆ ಮಾತ್ರ ಗೊತ್ತಿರೋ 10 ವಿಷಯಗಳು

ಅವರಲ್ಲೂ ಎಲ್ಲರಿಗೂ ಗೊತ್ತಿಲ್ಲ

ಧಾರವಾಡ ಪೇಡಾ

ಧಾರವಾಡ ಪೇಡ ಎಂದ ಕೂಡಲೆ ಯಾರಿಗೇ ಆಗಲಿ ಬಾಯಲ್ಲಿ ಹಂಗೇ ನೀರು ಛಳ್ ಅಂತ ಕಿತ್ತುಕೊಳ್ಳುತ್ತೆ. ಅದನ್ನು ಮಾಡೋದು ಸಖತ್ ಸುಲಭ ಅಂದ್ಕೊಂಡ್ರೆ ಕಷ್ಟ. ಹಾಗಂತ ಮಾಡಕ್ ಆಗ್ದೇ ಇರೋಷ್ಟು ಕಷ್ಟ ಏನಲ್ಲ. ಆದರೆ ಪೇಡ ಮಾಡೋದು ಬೀಡ ತಿಂದಷ್ಟು ಸುಲಭ ಅಲ್ಲ. ಆಹಾ ಏನ್  ಕೈಗುಣ ರೀ ನಿಮ್ದು ಅಂತಾರಲ್ಲಾ ಅಂತೋರು ಮಾತ್ರ ಇದನ್ನು ಮಾಡಕ್ಕೆ ಸಾಧ್ಯ. ಈ ಧಾರವಾಡ ಪೇಡಾ ಬಗ್ಗೆ ಧಾರವಾಡದೋರ್ಗೆ ಮಾತ್ರ (ಸರಿಯಪ್ಪಾ, ಸುತ್ತಮುತ್ತಲ ಕೆಲವು ಊರಿನವರನ್ನೂ ಸೇರಿಸಿಕೊಳ್ಳಿ, ಆಯ್ತಾ? ಜಗಳ ಯಾಕೆ?!) ಗೊತ್ತಿರೋ 10 ವಿಶಯಗಳು ಇಲ್ಲಿವೆ...

1. ಇದನ್ನ ಮಾಡಕ್ಕೆ ಬೇಕಾಗಿರೋದು ಮೂರೇ ಮೂರು ಪದಾರ್ಥ

ಮೂಲ

ಇದಕ್ಕೆ ಬೇಕಾಗಿರೋದು ಹಾಲು, ಕೋವಾ ಹಾಗೂ ಹುಡಿಹುಡಿಯಾದ ಸಕ್ಕರೆ ಅಷ್ಟೇ. ಇವು ಮೂರನ್ನೂ ಬೆರೆಸೋದ್ರಲ್ಲೇ ಇರೋದು ಟ್ರಿಕ್.  ಒಂಚೂರು ಹೆಚ್ಚಾದ್ರು ಕಷ್ಟ ಕಮ್ಮಿ ಆದ್ರೂ ಕಷ್ಟ. ಧಾರವಾಡ ಪೇಡ ಹೋಗಿ ಮೈಸೂರು ಪೇಟ ಆಗ್ಬಿಡುತ್ತೆ ಅಷ್ಟೆ.    

2. ಇದನ್ನ ಮೊಟ್ಟಮೊದಲು ಮಾಡಿದೋರು ಕರ್ನಾಟಕ ಮೂಲದೋರಲ್ಲ

ಮೂಲ

ಅಯ್ಯೋ ಏನಪ್ಪಾ ಹೀಂಗೇಳ್ತಾ ಇದ್ದಾರೆ. ಧಾರವಾಡ ಪೇಡ ನಮ್ ರಾಜ್ಯದಲ್ವಾ? ಯುದ್ಧಾನೇ ಆಗ್ಬಿಡತ್ತೆ ಅಷ್ಟೇ ಅನ್ನೋರು ಇದ್ದಾರೆ. ಇತಿಹಾಸದ ಪುಟಗಳನ್ನು ತಿರುಗಿಸಿದ್ರೆ ಸತ್ಯ ನಿಮಗೇ ಗೊತ್ತಾಗುತ್ತೆ. 19ನೇ ಶತಮಾನದಲ್ಲಿ ಉತ್ತರ ಪ್ರದೇಶದಿಂದ ನಮ್ಮ ರಾಜ್ಯಕ್ಕೆ ವಲಸೆ ಬಂದ ರಾಮ್ ರತನ್ ಸಿಂಗ್ ಠಾಕೂಲ್ ಇದರ ಮೂಲ ಸೃಷ್ಟಿಕರ್ತರು. 

3. ಇದನ್ನ ಎಲ್ರಿಗೂ ಸಿಗೋ ಹಂಗೆ ಮಾಡಿದ್ದು ಬಾಬು ಸಿಂಗ್ ಠಾಕೂರ್

ಮೂಲ

ಇವರೆಲ್ಲಾ ಮನೆಯಲ್ಲೇ ಮಾಡ್ಕೊಂಡ್ ತಿಂತಾ ಇದ್ರು. ಠಾಕೂರ್ ಅವರ ಮೊಮ್ಮಗ ಬಾಬು ಸಿಂಗ್ ಠಾಕೂರ್ ಇದನ್ನು ತಯಾರಿಸಿ ಮಾರಕ್ಕೆ ಶುರು ಮಾಡಿದರು. ಜನ ಚಪ್ಪರಿಸಿಕೊಂಡ್ ತಿನ್ನೋಕೆ ಶುರುವಚ್ಚಿಕೊಂಡ ಮೇಲೆ ''ಠಾಕೂರ್ ಪೇಡ'' ಎಂದು ಬ್ರಾಂಡ್ ಆಗೋಯ್ತು.

4. ಧಾರವಾಡದಲ್ಲಿ ಎಲ್ಲೆಲ್ಲೋ ಹೋಗಿ ಪೇಡ ಕೊಂಡ್ಕೋಬಾರ್ದು, ಲೈನ್ ಬಜಾರ್ಗೆ ಹೋಗಬೇಕು

ಮೂಲ

ಈ ಹೊತ್ತು ಸಾಕಷ್ಟು ಧಾರವಾಡ ಪೇಡ ಅಂಗಡಿಗಳಿದ್ರೂ, ಓರಿಜಿನಲ್ ಟೇಸ್ಟ್ ಇರೋ ಪೇಡ ಸಿಗೋದು ಲೈನ್ ಬಜಾರ್ ನಲ್ಲಿರೋ ಲೈನ್ ಬಜಾರ್ ಪೇಡ ಅಂಗಡಿಯಲ್ಲಿ ಮಾತ್ರ. ಅದಕ್ಕೆ ಮತ್ತೊಂದು ಹೆಸ್ರು ಬಾಬುಸಿಂಗ್ ಠಾಕೂರ್ ಪೇಡ.

5. ಏನ್ ಹಾಕಬೇಕು ಅಂತ ಎಲ್ಲರಿಗೂ ಗೊತ್ತಿದ್ದರೂ ಸರಿಯಾದ ರುಚಿ ತರ್ಸೋದು ಹೇಗೆ ಅಂತ ಯಾರಿಗೂ ಗೊತ್ತಿಲ್ಲ

ಮೂಲ

ಅದನ್ನು ಮಾಡೋ ಕಲೆ ಈ ಕುಟುಂಬಕ್ಕೆ ಮಾತ್ರ ಗೊತ್ತು. ಇದನ್ನು ಮಾಡೋ ಕಲೆ ಅಪ್ಪನಿಂದ ಮಗನಿಗೆ ಮೊಮ್ಮಗನಿಗೆ ಹೀಗೆ ತಲೆತಲಾಂತರದಿಂದ ಹರ್ಕೊಂಡ್ ಬರ್ತಿದೆ. ಆ ರುಚಿಯ ಸೀಕ್ರೆಟ್ ಅವರಿಗೆ ಮಾತ್ರ ಗೊತ್ತು. ಇನ್ಯಾರಿಗೋ ಗೊತ್ತಿಲ್ಲ.

6. ಮಿಶ್ರಾ ಪೇಡ ಅಂತ ಇನ್ನೊಂದಿದೆ. ಠಾಕೂರ್ ಮತ್ತೆ ಮಿಶ್ರಾ ಎರಡೂ ತಿಂದ್ರೆ ಯಾವುದು ಜಾಸ್ತಿ ಚೆನ್ನಾಗಿದೆ ಅನ್ನೋ ಪ್ರಶ್ನೆ ನಿಮ್ನ ತುಂಬ ಕಾಡುತ್ತೆ

ಮೂಲ

ಧಾರಾವಾಡ ಪೇಡಗೆ ಕಾಂಪಿಟೇಷನ್ನೇ ಇಲ್ವಾ ಅಂದ್ರೆ...ಅವದ್ ಬಿಹಾರಿ ಮಿಶ್ರಾ ಅನ್ನೋರು 1993ರಲ್ಲಿ ಧಾರವಾಡಕ್ಕೆ ಬಂದು ಲೈನ್ ಬಜಾರ್ ನಲ್ಲಿ ಸೆಟ್ಲ್ ಆದ್ರು. ಠಾಕೂರ್ ಮಿಶ್ರಾಗೆ ಪ್ರಬಲ ಸ್ಪರ್ಧಿ ಎಂದರೆ ಮಿಶ್ರಾಗಳು. ಅವರೂ ಪೇಡಾಗಳನ್ನು ಮಾಡೋದನ್ನು ಶುರು ಮಾಡಿದರು. ಮಿಶ್ರಾ ಪೇಡ ಚೆನ್ನಾಗಿರುತ್ತಾ ಠಾಕೂರ್ ಪೇಡ ಚೆನ್ನಾಗಿರುತ್ತಾ ಅನ್ನೋದು ಹೇಳೋದು ಕಷ್ಟ. ಎರಡರ ನಡುವೆ ಇರೋ ಡಿಫರೆನ್ಸ್ ಒಂದು ಸಣ್ಣ ಗೆರೆ ಅಷ್ಟೆ. ಅದು ಅವರವರ ರುಚಿಗೆ ಬಿಟ್ಟಿದ್ದು. 

7. ಧಾರವಾಡ ಪೇಡ ಒಂದು ವಾರ ಕೆಡಲ್ಲ

ಮೂಲ

ಸಾಮಾನ್ಯವಾಗಿ ಹಾಲಿನಲ್ಲಿ ಮಾಡಿದ ಸಿಹಿ ಪದಾರ್ಥಗಳು ಬಲು ಬೇಗ ಕೆಟ್ಟೋಗ್ತವೆ. ಪೇಡ ಮಾತ್ರ ಒಂದು ವಾರದವರೆಗೂ ಕೆಡಲ್ಲ. ಇದನ್ನು ಫ್ರಿಡ್ಜ್ ನಲ್ಲಿಟ್ಟರೆ ರುಚಿ ಕೆಡುತ್ತೆ. ರೂಮ್ ಟೆಂಪರೇಚರ್ ನಲ್ಲಿಟ್ರೆ ಸಾಕು. 

8. ದಿನಕ್ಕೆ 100-150 ಕೆ.ಜಿ. ಧಾವಾಡ ಪೇಡಾ ಮಾರಾಟ ಆಗುತ್ತೆ

ಮೂಲ

ದಿನವೊಂದಕ್ಕೆ 100-150 ಕೆ.ಜಿ ಠಾಕೂರ್ ಪೇಡ ತಯಾರಾಗಿ ಆಹೊತ್ತೇ ಖರ್ಚಾಗೋಗುತ್ತೆ. ಸ್ಕೂಲು ಕಾಲೇಜು ರಿಸಲ್ಟ್ ಬಂದಾಗಂತೂ ಇನ್ನೂ ಜಾಸ್ತಿ ಪೇಡಾಗಳು ಸೇಲ್ ಆಗುತ್ತೆ. ಮಿಶ್ರಾ ಪೇಡ ಹಾಗೂ ಠಾಕೂರ್ ಪೇಡ ಎರಡೂ ಅಷ್ಟೆ.

9. ಇದನ್ನ ಇಷ್ಟ ಪಡದೆ ಇರೋರು ಇಲ್ಲೀವರೆಗು ಹುಟ್ಟಿಲ್ಲ ಅನ್ನಿಸುತ್ತೆ

ಮೂಲ

ಶಬಾನಾ ಅಜ್ಮಿ, ಗಿರೀಶ್ ಕಾರ್ನಾಡ್ ಹಾಗೂ ಸ್ಮಿತಾ ಪಾಟೀಲ್ ಅವರಂತಹ ಸೆಲೆಬ್ರಿಟಿಗಳು ಹುಡ್ಕೊಂಡ್ ಬಂದು ಧಾರವಾಡಪೇಡ ಮೆಲ್ತಾರೆ. ಇದಕ್ಕೆ ಜಿಯೋಗ್ರಾಫಿಕಲ್ ಇಂಡಿಕೇಷನ್ (GI) ಟ್ಯಾಗ್ ಕೊಡಲಾಗಿದೆ.  ಧಾರವಾಡ ಪೇಡದ GI ಟ್ಯಾಗ್ 85.

10. ಇದಕ್ಕೆ ಪ್ರಶಸ್ತಿಗಳ ಸುರಿಮಳೇನೇ ಬಂದಿದೆ

ಮೂಲ

ಠಾಕೂರ್ ಪೇಡದ ಸೃಷ್ಟಿಕರ್ತ ಬಾಬು ಸಿಂಗ್ ಠಾಕೂರ್ ಅವರಿಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಅಂದಿನ  ಕೊಟ್ಟ ಬಾಂಬೆ ಸರ್ಕಾರದಲ್ಲಿ ಲಾರ್ಡ್ ವೆಲ್ಲಿಂಗ್ ಟನ್ ಕೊಟ್ಟ ಸಿಲ್ವರ್ ಮೆಡಲ್. ರಾಜೀವ್ ಗಾಂಧಿ ಎಕ್ಸಲೆನ್ಸ್ ಅವಾರ್ಡ್, ಪ್ರಿಯದರ್ಶಿನಿ ಇಂದಿರಾಗಾಂಧಿ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಸಿಕ್ಕಿವೆ. 

ಬರ್ತೀರಾ ಲೈನ್ ಬಜಾರ್ಗೆ? ಹೋಗಿ ಹೇಳೇ ಬಿಡೋಣ "ಈ ಪೇಡ ನಂಗ್ ಕೊಟ್ಬುಡು ಠಾಕೂರ್ / ಮಿಶ್ರಾ!" ಅಂತ!

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: