ಮಧ್ಯಪ್ರದೇಶದಲ್ಲಿ ಸಿಗ್ತಿರೋ ಹೊಸ 2000 ರೂ ನೋಟುಗಳಲ್ಲಿ ಒಂದು ವಿಚಿತ್ರವಾದ ತೊಂದರೆ ಕಾಣಿಸಿಕೊಂಡಿದೆ

ಅಲ್ಲ, ಇದು ಖೋಟಾನೋಟಲ್ಲ

ಮಧ್ಯಪ್ರದೇಶದ ಶಿವಪುರ ಜಿಲ್ಲೆ ಬಿಚ್ಚುಗಾವ್ಡಿ ಹಳ್ಳಿಯಲ್ಲಿ ಜನರಿಗೆ ಬ್ಯಾಂಕಿಂದ ಕೆಲವು ವಿಚಿತ್ರವಾದ 2000 ರೂ ನೋಟುಗಳು ಬಿತ್ತರವಾಗ್ತಿವೆ. ನೋಡಿ ಜನ ಕಕ್ಕಾಬಿಕ್ಕಿ ಆಗ್ತಿದಾರಂತೆ. ಆ ನೋಟುಗಳಲ್ಲಿ ತೊಂದರೆ ಏನಪ್ಪಾ ಅಂದ್ರೆ ಯಾವುದರ ಮೇಲೂ ಗಾಂಧಿ ಫೋಟೋನೇ‌ ಇಲ್ಲ! ಭಾರತೀಯ ರೂಪಾಯಿಯ ನೋಟಿನ ಮೇಲೆ ಈ ಗಾಂಧಿ ಫೋಟೋ ಇರಬೇಕಾದ್ದು ಎಲ್ಲರಿಗೂ ಗೊತ್ತೇ ಇದೆ.

ಈ ಘಟನೆ ಮೊನ್ನೆ, ಅಂದ್ರೆ 3 ಜನವರಿ 2017ಕ್ಕೆ ನಡೆದಿದೆ.

ಕೃಷ್ಣ ಮೀನಾ ಅನ್ನೋ ರೈತನಿಗೆ ಈ ನೋಟುಗಳು SBI ಬ್ರಾಂಚಿಂದಾನೇ ಸಿಕ್ಕಿದೆ. ಅವನಿಗೆ ಗೊತ್ತಾಗದೆ ಮಾರುಕಟ್ಟೆಯಲ್ಲಿ ಉಪಯೋಗಿಸಕ್ಕೆ ಶುರು ಮಾಡಿdnಅಂತೆ. ಇನ್ನೊಬ್ಬ ರೈತನಿಗೂ ಇದೇ ತರಹದ ನೋಟ್ ಸಿಕ್ಕಾಗ ಇವನಿಗೆ ಹೇಳಿದನಂತೆ. ಇಬ್ಬರಿಗೂ ತಮಗೆ ಬ್ಯಾಂಕ್ ಖೋಟಾನೋಟ್ ಕೊಟ್ಟುಬಿಟ್ಟಿದೆ ಅನ್ನಿಸಿ ಬ್ಯಾಂಕಿಗೆ ಹೋದ್ರಂತೆ ಅಂತ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬ್ಯಾಂಕ್ನೋರು ಇದು ಖೋಟಾನೋಟಲ್ಲ, ನಿಜವಾದ್ದೇ, ಆದರೆ ಪ್ರಿಂಟಿಂಗ್ ತೊಂದರೆಯಿಂದ ಹೀಗಾಗಿದೆ ಅಂತ ವಿವರಣೆ ಕೊಟ್ಟು ನೋಟುಗಳ್ನ ವಾಪಸ್ ಇಸ್ಕೊಂಡ್ರಂತೆ ಅಂತ ನ್ಯೂಸ್ ಎಕ್ಸ್ ವರದಿ ಮಾಡಿದೆ.

ಈ ನೋಟುಗಳ್ನ ಮಧ್ಯಪ್ರದೇಶದ ದೇವಾಸ್ ನೋಟ್ ಪ್ರೆಸ್ಸಲ್ಲಿ ಪ್ರಿಂಟ್ ಮಾಡಿರೋದು ಅಂತ ಮಾಹಿತಿ ಹೊರಬಂದಿದೆ.

ಈ ಹಿಂದೆ 500 ರೂ ನೋಟ್ಗಳಲ್ಲೂ ಕೆಲವು ಪ್ರಿಂಟಿಂಗ್ ತೊಂದರೆಗಳು ಕಾಣಿಸಿಕೊಂಡಿದ್ದವು. ಆ ತೊಂದರೆಗಳು ಇಷ್ಟು ದೊಡ್ಡದಾಗಿರಲಿಲ್ಲ. RBI ಅವುಗಳನ್ನ ನಿಜವಾದ ನೋಟುಗಳು ಅಂತಾನೇ ಪರಿಗಣಿಸ್ತಾ ಇದೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ನೀವು ಹೆಂಗೆ ಮುಷ್ಟಿ ಕಟ್ತೀರಿ ಅಂತ ಹೇಳಿ, ನೀವು ಎಂಥ ವ್ಯಕ್ತಿ ಅಂತ ಹೇಳಿಬಿಡ್ತೀವಿ

ಒಂದೇ ಒಂದು ಪ್ರಶ್ನೆ

ಮಾತಾಡ್ತಾ ಮಾತಾಡ್ತಾ ಮಾತಿನ ಜೊತೆ ಮನಸ್ಸಿನಲ್ಲಿರೋ ಭಾವನೆಗಳನ್ನ ಹೊರ್ಗಡೆ ಹಾಕಕ್ಕೆ ಕೈ ಅಲ್ಲಾಡ್ಸ್ತೀವಿ, ಮುಖ ಮಾಡ್ತೀವಿ... ಹಾಗೆ ಮುಷ್ಟಿ ಕೂಡ ಒಮ್ಮೊಮ್ಮೆ ಹಿಡೀತೀವಿ ಅಲ್ವಾ? ಹಾಗಾದ್ರೆ ಒಂದೇ ಒಂದ್ ಸಲ ಈಗ ಮುಷ್ಟಿ ಕಟ್ಟಿ ನೋಡೋಣ! ಯಾವ ತರ ಕಟ್ಟಿದ್ರಿ? ಕೆಳಗಡೆ ನಿಮ್ಮ ಉತ್ತರ ಕೊಡಿ, ನಿಮ್ಮ ಬಗ್ಗೆ ಹೇಳ್ತೀವಿ.

 

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: