ಮನುಷ್ಯನ ದೇಹದಲ್ಲಿ ಇಲ್ಲೀವರೆಗೆ ಯಾರಿಗೂ ಗೊತ್ತಿಲ್ಲದಿರೋ ಒಂದು ಹೊಸ ಅಂಗ ಪತ್ತೆ ಆಗಿದೆ

ಜೀರ್ಣಕ್ರಿಯೆಗೆ ಸಂಭಂದಿಸಿದ್ದು

2017ಕ್ಕೆ ಇದಕ್ಕಿಂತ ನ್ಯೂಸ್ ಬೇಕಾ? ಮನುಷ್ಯನ ದೇಹದಲ್ಲಿ ಇಲ್ಲೀವರೆಗೆ ಯಾರಿಗೂ ಗೊತ್ತಿಲ್ಲದಿದ್ದ ಒಂದು ಅಂಗ ಪತ್ತೆ ಆಗಿದೆ! ಯಾವುದಪ್ಪಾ ಅದು ಅಂತ ಆಶ್ಚರ್ಯ ಆಗ್ತಿರ್ಬೇಕಲ್ವಾ ನಿಮಗೆ? ಹೇಳ್ತೀವಿ ಕೇಳಿ.

ಲಿಮರಿಕ್ ಯೂನಿವರ್ಸಿಟಿಯಲ್ಲಿ ಕೆಲಸ ಮಾಡೋ ಕೆಲ್ವಿನ್ ಕಾಫಿ ಅನ್ನೊ ಐರಿಷ್ ಸರ್ಜನ್ ಒಬ್ಬರು ಇದಾರೆ. ಅವರು ಹಲವಾರು ವರ್ಷ ಸಂಶೋಧನೆ ಮಾಡಿ ಈ ಹೊಸ ಭಾಗ ಕಂಡು ಹಿಡ್ದು ಅದಕ್ಕೆ "ಮೀಸೆಂಟ್ರಿ" ಅಂತ ಹೆಸರಿಟ್ಟಿದ್ದಾರೆ. ಸ್ವಲ್ಪ ಬೇರೆ ತರ ರಚನೆ ಇರೋ ಇದು ನಮ್ಮ ಜೀರ್ಣಾಂಗಕ್ಕೆ ಸಂಭಂದಿಸಿದ ಒಂದು ಅಂಗ ಅಂತೆ. ಈ ಮೀಸೆಂಟ್ರಿ ಎರಡು ಮಡಿಕೆ ಹೊಂದಿದ್ದು ನಮ್ಮ ಹೊಟ್ಟೆ ಮತ್ತು ಕರುಳಿನ ಪದರಕ್ಕೆ ಅಂಟಿಕೊಂಡಿದೆ. ಇದು ಹೊಟ್ಟೆಯ ಭಾಗಗಳೆಲ್ಲಾ ಇರಬೇಕಾಗಿರೋ ಜಾಗಗಳಲ್ಲಿ ಇರೋ ತರ ಲಾಕ್ ಮಾಡ್ಕೊಂಡಿರುತ್ತಂತೆ.  

ಮೂಲ

ಶತಮಾನಗಳ ಹಿಂದೆನೇ ತುಂಬಾ ದೊಡ್ಡ ವಿಜ್ಞಾನಿ ಲಿಯೊನಾರ್ಡೋ ದಾ ವಿಂಚಿ ಇದರ ಬಗ್ಗೆ ಹೇಳಿದ್ರು. ಆದ್ರೆ ಯಾರೂ ಅಷ್ಟು ತಲೆ ಕೆಡ್ಸಿಕೊಂಡಿರ್ಲಿಲ್ಲ. ಈಗ ಈ ಭಾಗದ ಬಗ್ಗೆ ರಿಸರ್ಚ್ ಮಾಡಿ ಜನಗಳಿಗೆ ಕೆಲ್ವಿನ್ ಕಾಫಿ ತಿಳ್ಸಿಕೊಟ್ಟಿದ್ದಾರೆ. ಇನ್ನೂ ಇದರ ಬಗ್ಗೆ ಸಾಕಷ್ಟು ಸಂಶೋಧನೆ ಮಾಡ್ಬೇಕಾಗಿದೆ. ಇದು ಹೇಗೆ ಕೆಲ್ಸ ಮಾಡುತ್ತೆ, ಹೊಟ್ಟೆಗೆ ಸಂಬಂಧಪಟ್ಟ ಖಾಯಿಲೆಗಳಲ್ಲಿ ಇದರ ಪಾತ್ರ ಏನು ಅಂತ ಹೆಚ್ಚು ತಿಳ್ಕೋಬೇಕಾಗಿದೆ ಅಂತಾರೆ ಕಾಫಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

5 ನಿಮಿಷದಲ್ಲಿ ನಿಮ್ಮ ಮೇಲೆ ನಿಮಗೆ ನಂಬಿಕೆ ಬರಬೇಕಾದರೆ ಹೀಗ್ ಮಾಡಿ

ಮೊದ್ಲು ನೆಟ್ಟಗೆ ನಿಂತ್ಕೊಳಿ

ಎಷ್ಟೋ ಸಲ ಜೀವನದಲ್ಲಿ ತಾಳ್ಮೆ ಕಳ್ಕೊಳ್ಳೋ ಹಾಗಾಗತ್ತೆ. ಏನಾದ್ರೂ ಮಾಡ್ಬೇಕೂಂದ್ರೆ ಭಯಭಯ ಅನ್ಸತ್ತೆ. ಆದ್ರೆ ಇಂತಾ ಭಯಾನ ಬೇಗ ಮೆಟ್ಟಿ ನಿಲ್ಲಕ್ಕೆ  ದಾರಿಗಳೂ ಇವೆ. ಅದ್ಯಾವ್ದೂ ಅಂತ ನೋಡಿ

1. ಮೊದ್ಲು ನೆಟ್ಟಗೆ ನಿಂತ್ಕೊಳಿ; ನೀವೇ ರಾಜ ಅನ್ನೋ ಹಂಗೆ ಎರಡ್ನಿಮಿಷ ಇರಿ

ಬೆನ್ನು ನೇರವಾಗಿ ಇಟ್ಕೊಂಡು, ಗಲ್ಲ ಎತ್ತಿ, ಕಾಲುಗಳ್ನ ಜೋಡಿಸಿ ನೆಟ್ಟಗೆ ನಿಂತ್ಕೊಳಿ. ದೊಡ್ಡದಾಗಿ ಉಸಿರು ತೊಗೊಂಡು, ನಿಮ್ಮಲ್ಲಿ ಶಕ್ತಿ ಹರೀತಾ ಗಮನಿಸಿ. ಹೀಗೆಲ್ಲಾ ಮಾಡೋದ್ರಿಂದ ನಮ್ಮ ಮನಸ್ಸು ಮತ್ತೆ ದೇಹದ ಮೇಲೆ ಪರಿಣಾಮ ಆಗಿ, ಆತಂಕ ಕಮ್ಮಿ ಆಗತ್ತೆ. ಬೇರೆಯವರು ನಮ್ಮನ್ನ ನೋಡೋ ರೀತಿ ಮಾತ್ರ ಅಲ್ಲ, ನಮ್ಮನ್ನ ನಾವು ನೋಡ್ಕೊಳ್ಳೋ ರೀತಿನೂ ಬದಲಾಗತ್ತೆ.

2. ನಾಳೆ, ಅಂದ್ರೆ ಭವಿಷ್ಯದಲ್ಲಿ ಹೇಗಿರ್ತೀರಾ ಅಂತ ಕಲ್ಪನೆ ಮಾಡ್ಕೊಳಿ

ನಮ್ಮ ಭವಿಷ್ಯದ ಬಗ್ಗೆ ನಾವು ಕಲ್ಪನೆ ಮಾಡ್ಕೊಂಡಷ್ಟೂ ನಮ್ಮ ಕಲ್ಪನೆಗಳು ನಿಜ ಆಗ್ಬೇಕು ಅಂತ ಅಂದ್ಕೊತೀವಿ.  ನಿಜ ಮಾಡಕ್ಕೆ ಒಂದ್ ಗುರಿ ಅಂತ ಇಟ್ಕೊಂಡು ಅದನ್ನ ಸಾಧಿಸಕ್ಕೆ ಪ್ರಯತ್ನ ಪಡ್ತೀವಿ.

3. ಮನಸ್ಸನ್ನ ನಿಮ್ಮ ಹಿಡಿತಕ್ಕೆ ತೊಗೊಳಿ. ನಿಮ್ಮ ಹತ್ರ ಈಗ ಇರೋದ್ರ ಬಗ್ಗೆ ಹೆಮ್ಮೆ ಪಡಿ

ಎಷ್ಟೋ ಸಲ ಅದು ಬೇಕು, ಇದು ಬೇಕು ಅನ್ನೋ ಹುಚ್ಚಲ್ಲಿ ಇರೋದನ್ನೆಲ್ಲಾ ಮರೆತುಬಿಡ್ತೀವಿ. ನಾವು ಮೊದಲು ಮಾಡ್ಬೇಕಾಗಿರೋದು, ನಮ್ಹತ್ರ ಇರೋದನ್ನ ಗುರುತಿಸೋದು. ನಮಗೆ ಇವಾಗಿರೋ ಹಾಗೆ ಬದುಕು ಕೊಟ್ಟಿರೋದಕ್ಕೆ ಒಂದ್ಸಲ ಥ್ಯಾಂಕ್ ಯೂ ಅಂತ ಹೇಳಿ ನೋಡಿ. ಮನಸಿಗೆ ಹಾಯ್ ಅನ್ಸತ್ತೆ.

ನಮ್ಮ ಮನಸು ನಾವು ಹೇಳಿದಂಗೆ ಕೇಳತ್ತೆ. ಹೀಗಿದ್ರೆ, ಪಾಸಿಟೀವ್ ಆಗಿ ಯೋಚ್ನೆ ಮಾಡೋ ಶಕ್ತಿ ಬರತ್ತೆ. ಒಳ್ಳೇ ಯೋಚ್ನೆ ಬಂದ್ರೆ, ಮನಸು ಹಾಯಾಗಿದ್ರೆ, ಎಲ್ಲಾ ಕೆಲಸ ಅದಾಗದೇ ಸರಿಯಾಗಿ ಆಗತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: