ಒಳ್ಳೊಳ್ಳೆ ಆಫೀಸಲ್ಲಿ ಜನ ರೊಚ್ಚಿಗೆದ್ದು ಸಾಂತ್ವನ ಕಳ್ಕೊಳೋ ಈ ವೀಡಿಯೋ ನೋಡಿ ಬಿದ್ದು ಬಿದ್ದು ನಗ್ತೀರಿ

ಟೇಬಲ್ ಮೇಲೆ ಈಜ್ಕೊಂಡ್ ಹೋಗ್ತಾನಲ್ರೀ!

ಕೆಲಸ ಮಾಡೋರೆಲ್ಲರಿಗೂ ಒಂದಲ್ಲ ಒಂದ್ ದಿನ ಸಾಕಪ್ಪಾ ಈ ಕೆಲಸ ಅನ್ನಿಸೋದು ಸಹಜ. ಜಾಸ್ತಿ ಹೊತ್ತು ಕೆಲಸ ಮಾಡು ಅಂದ್ರೆ ಸಿಟ್ಟು ಬರುತ್ತೆ. ಆಫೀಸ್ ರಾಜಕೀಯದಿಂದ ಸಿಟ್ಟು ಬರುತ್ತೆ. ಸಹೋದ್ಯೋಗಿಗಳು ಕಿರೀಕ್ ಮಾಡುದ್ರೆ, ಬಾಸ್ ತಿಕ್ಲ್-ತಿಕ್ಲಾಗಿ ಆಡುದ್ರೆ ಸಿಟ್ಟು ಬರುತ್ತೆ. ನಿಜಕ್ಕೂ‌ ಕೆಲವೊಮ್ಮೆ ಹುಚ್ಚು ಹಿಡೀದೇ ಇರೋದು ಆಶ್ಚರ್ಯ ಅನ್ನಿಸುತ್ತೆ! ನಿಮಗೆ ಯಾವಾಗಾದರೂ ಆಫೀಸಲ್ಲಿ ನಿಮ್ಮ ಸಿಟ್ಟು ತೀರಿಸ್ಕೋಬೇಕು ಅನ್ನಿಸಿದ್ಯಾ? ಹಾಗಾದ್ರೆ ಈ ವೀಡಿಯೋ ನೋಡಿ, ಚಿಂದಿಯಾಗಿದೆ!

ನೆನೆಪದ: 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಇನ್ನೊಂದ್ಸಲ ಸ್ವಿಮ್ಮಿಂಗ್ಗ್ ಹೋಗಬೇಕಾದರೆ ಈ 15 ಫೋಟೋಗಳು ನಿಮ್ನ ಕಾಡುತ್ವೆ

ಕಾಪಾಡಿ! ಕಾಪಾಡಿ!

ಈಜು ಬರತ್ತೆ ಅಂತೇಳಿ ಎಲ್ಲೆಲ್ಲೋ ಈಜಕ್ಕೆ ಹೋದ್ರೆ ಅಪಾಯ ತಪ್ಪಿದ್ದಲ್ಲ. ನೀರಿನ ಒಳಗೆ ಏನಿದೆ ಅಂತ ನಮಗೆ ಗೊತ್ತಿರಲ್ಲ. ಗೊತ್ತಾಗೋ ಹೊತ್ತಿಗೆ ಬಜಾವಾಗೋದು ಕಷ್ಟ. ನೀರಿಗೆ ಇಳಿಯೋ ಮುಂಚೆ ತುಂಬಾ ಹುಷಾರಾಗಿರ್ಬೇಕು. ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ. ಇಲ್ಲಿರೋ 15 ಫೋಟೋ ನೋಡಿ. ಇನ್ಮೇಲೆ ಸ್ವಿಮ್ಮಿಂಗ್‌ಗೆ ಹೋಗ್ಬೇಕಾದ್ರೆ ಖಂಡಿತ ನಿಮ್ಮನ್ನ ಕಾಡುತ್ವೆ. 

1. ಅತ್ತ ಧರಿ ಇತ್ತ ಪುಲಿ ಅಂದ್ರೆ ಇದೇ ಏನೋಪ್ಪಾ
2. ನೀರಿನಲ್ಲಿ ಗುಹೇನೂ ಇರ್ಬೋದು
3. ಇಂತದ್ದೇನದ್ರೂ ಕಾಣಿಸಿದ್ರೆ ಅರಚಕ್ಕೂ ಆಗಲ್ಲಪ್ಪೋ
4. ಅನಕೊಂಡ ಹಾವು ಇದ್ರೂ ಇರ್ಬೋದು
5. ಮೈ ಝುಮ್ ಅನ್ಸತ್ತೆ ಅಲ್ವಾ?
6. ಗ್ರಾಫಿಕ್ಸ್ ಅಂದ್ಕೊಂಡ್ರಾ.. ಸಿಕ್ಕಿದ್ರೆ ಅಷ್ಟೆ ಸೀರುಂಡೇನೆ!
7. ನೀರಿನಲ್ಲಿ ಅಲೆಯ ಉಂಗುರ ಅಲ್ಲ..ಹಾವಿನುಂಗುರ!
8. ಈ ತರಹ ಮಾಡಕ್ಕೂ ಗುಂಡಿಗೆ ಇರ್ಬೇಕು ಕಣ್ರಿ
9. ಡೈವ್ ಹೊಡೆದ್ರೆ ಹಂಗೇ ಗುಂಳುಂ ಅನ್ನಿಸ್ಬಿಡತ್ತೆ
10. ನನ್ ತಂಟೇಗ್ ಬಂದ್ರೆ ಸುಮ್ಕಿರಲ್ಲ ಅಂತಿದ್ಯಾ ಆಕ್ಟೋಪಸ್!
11. ದಾರಿ ಕಾಣದಾಗಿದೆ ರಾಘವೇಂದ್ರನೇ...
12. ಸಾವು ಕಣ್ಮುಂದೆ ಇದೆ ಅಂತಾರಲ್ಲ...ಇದೇನಾ?
13. ಇದೇನೋ ಪ್ರಾಣಿ ಅಂದ್ಕೊಂಡ್ರಾ...ಛೀ! ಪಾಚಿ ಅಷ್ಟೇ
14. ಎಲ್ಲಿಗೆ ಪಯಣ ಯಾವುದೋ ದಾರಿ...
15. ಬ್ಲೂ ವೇಲ್ ಒಂದ್ಸಲ ಮೇಲೆ ಬಂದಿದೆ ಅಂದ್ರೆ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: