ತಂದೆ-ತಾಯಿಗೆ ಈ ಹೊಸ-ವರ್ಷದ ಉಡುಗೊರೆ ಕೊಟ್ಟರೆ ಸಂತೋಷವಾಗಿ ಜಾಸ್ತಿ ದಿನ ಬದುಕಿರ್ತಾರೆ

ಕೊಡೋ ಮನಸ್ಸು ಮಾಡಬೇಕಷ್ಟೆ

ಮೊಬೈಲು ಫೇಸ್ಬುಕ್ಕು ಟ್ವಿಟರ್ರು, ಇಂಸ್ಟಾಗ್ರಾಮು ಎಲ್ಲಾ ನಮಗೆ ಬೇಕಾದೋರ ಜೊತೆ ಟಚ್ಚಲ್ಲಿ ಇರಕ್ಕೆ ಸುಲಭ ಮಾಡ್ತಿವೆ, ನಿಜ. ಆದರೆ ಅದರಲ್ಲೇ ಜಾಸ್ತಿ ಮುಳುಗಿದ್ರೆ ನಮ್ಮ ನಿಜವಾದ ಗೆಳೆಯರು, ನೆಂಟರಿಷ್ಟರು, ಅಕ್ಕ-ಪಕ್ಕದ ಮನೆಯೋರೆಲ್ಲ ದೂರ ಆಗೋಗ್ತಾರೆ ಅನ್ನೋದು ನಿಜ. ಸರಿ ನಾ?

ಇನ್ನೂ ದುಃಖದ ವಿಷಯ ಏನಂದ್ರೆ ಈಗಿನ ಪೀಳಿಗೆಯೋರು ತಮ್ಮ ತಂದೆ-ತಾಯಂದ್ರಿಗೆ ಕೊಡಬೇಕಾದಷ್ಟು ಸಮಯ ಕೊಡ್ತಿಲ್ಲ

ಒಂದಲ್ಲ ಒಂದು ರೀತಿಯಲ್ಲಿ ಯಾವಾಗಲೂ ಬಿಝಿಯಾಗಿ ಇರೋದ್ರಿಂದ ತಂದೆ-ತಾಯಿ ಜೊತೆ ಮಾತಾಡಕ್ಕೂ ಪುರಸೊತ್ತಿರಲ್ಲ. ಆದರೆ ವಯಸ್ಸಾದೋರ ಸಾವಿಗೆ ಒಂಟಿತನ ಒಂದು ಮುಖ್ಯವಾದ ಕಾರಣ ಅಂತ ಈಗೀಗ ಸಂಶೋಧನೆಗಳು ತಿಳಿಸ್ತಾ ಇವೆ.

ಮೂಲ

ಹೌದು, ನೀವು ಸರಿಯಾಗೇ ಓದಿದ್ರಿ. ಕ್ಯಾಲಿಫೋರ್ನಿಯಾ ವಿ.ವಿ.ಯಲ್ಲಿ ಮಾಡಿರೋ ಒಂದು ಸಂಶೋಧನೆ ಪ್ರಕಾರ ಒಬ್ಬ ವ್ಯಕ್ತಿ ಕುಗ್ಗಿ ಹೋಗೋದರ ಹಿಂದೆ ಒಂಟಿತನ ಒಂದು ಮುಖ್ಯವಾದ ಕಾರಣ

ಶಾಕಾಗುತ್ತೆ ಅಲ್ವಾ?

ಕ್ಯಾಲಿಫೋರ್ನಿಯಾ ವಿ.ವಿ. ನೋರು 1,600 ವ್ಯಕ್ತಿಗಳ್ನ ಇಟ್ಕೊಂಡು ಈ ಸಂಶೋಧನೆ ನಡೆಸಿದಾರೆ [ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ]. ಅವರ ವಯಸ್ಸು ಕಡಿಮೆ ಅಂದ್ರೆ 71 ಇತ್ತಂತೆ. ಅವರು ಸಂಶೋಧನೆ ಶುರು ಮಾಡಿ 6 ವರ್ಷದಲ್ಲಿ ಎಷ್ಟು ಜನ ಸಾವಪ್ಪಿದರು ಅಂತ ನೋಡಿದ್ರಂತೆ. ಆಶ್ಚರ್ಯದ ವಿಷಯ ಏನಂದ್ರೆ ಒಂಟಿತನ ಅನುಭವಿಸ್ತಾ ಇದ್ದೋರಲ್ಲಿ 23% ಜನ ಸಾವಪ್ಪಿದ್ರು… ಆದರೆ ನೋಡ್ಕೊಳಕ್ಕೆ ಮಕ್ಕಳಿದ್ದೋರು ಬರೀ 14% ಜನ ಸಾವಪ್ಪಿದರು. ಇದರಿಂದ ಬರೀ ವಯಸ್ಸಲ್ಲ, ಒಂಟಿತನ ಕೂಡ ಸಾವಿಗೆ ಕಾರಣ ಅನ್ನೋದು ಸ್ಪಷ್ಟ.

ಮೂಲ

ವಯಸ್ಸಾಗಿದೆ ಅಂದ ಮಾತ್ರಕ್ಕೆ ನಾನು, ನನ್ನ ಮಕ್ಕಳು, ನಮ್ಮ ಜನ ಅನ್ನೋ ಗುಣ ಹೊರಟುಹೋಗಲ್ಲ

ವಯಸ್ಸಾಗ್ತಾ ಇದ್ದಂಗೇ ನಮಗೆ ಗೊತ್ತಿರೋರ ಸಂಖ್ಯೆ ಕೂಡ ಕಡಿಮೆ ಆಗ್ತಾ ಹೋಗುತ್ತೆ. ಜನ ದೂರ ಆಗ್ತಾರೆ. ಗೆಳೆಯರು ದೂರ ಆಗ್ತಾರೆ, ನೆಂಟರಿಷ್ಟರು ದೂರ ಆಗ್ತಾರೆ. ಆದರೆ ಮಕ್ಕಳೂ ದೂರ ಆಗಬೇಕಾ?

ಮೂಲ

ಯೋಚನೆ ಮಾಡಿ...

2017ರಲ್ಲಿ ಪ್ರಾಯಶಃ ನಿಮ್ಮ ಜೊತೆ ಕಾಲ ಕಳೆಯೋದಕ್ಕಿಂತ ನಿಮ್ಮ ತಂದೆ-ತಾಯಿಗೆ ಬೇರೆ ಏನೂ ಬೇಕಾಗಿಲ್ಲ

ಅದಕ್ಕಿಂತ ಒಳ್ಳೇ ನ್ಯೂ ಇಯರ್ ರೆಸೊಲ್ಯೂಶನ್ ನೀವು ಮಾಡಕ್ಕೆ ಸಾದ್ಯವೇ ಇಲ್ಲವೇನೋ … ಯಾಕಂದ್ರೆ ನೀವು ಜೊತೆಗಿದ್ದರೆ ನಿಮ್ಮ ತಂದೆತಾಯಿಗೆ ಸಿಗೋ ಸಂತೋಷಕ್ಕೆ ಸಾಟಿಯಿಲ್ಲ. ಹೆಚ್ಚು ದಿನ ಬದುಕಿರ್ತಾರೆ, ಸಂತೋಷವಾಗೂ ಇರ್ತಾರೆ. ಇದಕ್ಕಿಂತ 2017ರಲ್ಲಿ ನಿಮಗೇನು ಬೇಕು?

ಮೂಲ

ಹೊಸ ವರ್ಷಕ್ಕೆ ಅಪ್ಪ-ಅಮ್ಮಂಗೆ ಇದಕ್ಕಿಂತ ಒಳ್ಳೇ ಉಡುಗೊರೆ ಕೊಡಕ್ಕಾಗತ್ತಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 10 ಪ್ರಶ್ನೆಗಳಿಗೆ ನೀವು ಕೊಡೋ ಉತ್ತರದಿಂದ ನಿಮ್ಮ ವ್ಯಕ್ತಿತ್ವದ ಕೇಂದ್ರಬಿಂದು ಯಾವುದು ಅಂತ ಗೊತ್ತಾಗುತ್ತೆ

ಒಂದು ಚಿಕ್ಕ ಅಂತೆಕಂತೆ ಕ್ವಿಜ಼್‌

ಚಕ್ ಚಕ್ ಅಂತ ಉತ್ತರ ಆಯ್ಕೆ ಮಾಡ್ಕೋತಾ ಹೋಗಿ… ಜಾಸ್ತಿ ಯೋಚನೆ ಮಾಡಬೇಡಿ…:-)

 

 

ನೆನೆಪದ: 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: