ನಿಮಗೆ ಈ ತರಹ ಕಿವಿ ಗುಗ್ಗೆ ತೆಕ್ಕೊಳೋ ಅಭ್ಯಾಸ ಇದ್ರೆ ದಯವಿಟ್ಟು ಬಿಟ್ಟುಬಿಡಿ, ಕಾರಣ ಹೇಳ್ತೀವಿ

ಎಲ್ಲರೂ ಮಾಡ್ತಾರೆ ಅಂತ ಮಾಡ್ಬೇಡಿ

ಮಾರುಕಟ್ಟೇಲಿ ಇಯರ್ ಬಡ್ಸ್ ಅಂತ ಸಿಗುತ್ತೆ. ತುದಿಗೆ ಹತ್ತಿ ಸುತ್ತಿರೋ ಪ್ಲಾಸ್ಟಿಕ್ ಕಡ್ಡಿ ಅಷ್ಟೇ ಅದು. ಅದನ್ನ ಬಳಸಿ ಕಿವಿ ಗುಗ್ಗೆ ತೆಕ್ಕೊಳೋದು ಒಂಥರಾ ಸ್ಟೈಲ್ ಅನ್ನೋಹಾಗೆ ನಮ್ಮಲ್ಲಿ ಅನಿಸಿಕೆ ಮೂಡಿಬಿಟ್ಟಿದೆ. ಆದ್ರೆ ಅದು ಅಂಥ ಒಳ್ಳೇದಲ್ಲ.

ಕಿವಿ ಒಳಗೆ ಹಾಕ್ತಿದ್ದಂಗೇ ಆ ಬಡ್ಸ್ ಇಂದ ಗುಗ್ಗೆ ಇನ್ನಷ್ಟು ಒಳಕ್ಕೆ ಹೋಗುತ್ತೆ

ಪ್ರಯತ್ನ ಮಾಡಿರ್ತೀರಿ. ಇದು ನಿಮ್ಮ ಅನುಭವಕ್ಕೂ ಬಂದಿರುತ್ತೆ.

ಮೂಲ

ಜೊತೆಗೆ ಅದರಿಂದ ಕಿವಿ ಒಳಗೆ ಗಾಯ ಆಗೋ ಸಾಧ್ಯತೆ ಕೂಡ ಇರುತ್ತೆ

ಹೀಗೆ ಬಡ್ಸ್ ಹಾಕ್ಕೊಂಡು ಕಿವಿ ಕಿವುಡಾಗಿರೋರು ಕೂಡ ಇದಾರೆ.

ಮೂಲ

ಆಶ್ಚರ್ಯ ಏನೂಂದ್ರೆ ಕಿವಿಯಲ್ಲಿ ಗುಗ್ಗೆ ಇರೋದು ನಮ್ಮ ಒಳ್ಳೇದಕ್ಕೇನೇ:

  1. ಗುಗ್ಗೆ ಕಿವಿಯೊಳಗೆ ಹುಳ ಹುಪ್ಪಟೆ ಹೋಗದೆ ಇರೋಹಾಗೆ ತಡೆಯುತ್ತೆ
  2. ಗುಗ್ಗೆ ಇರೋದ್ರಿಂದ ಕಿವಿಯಿಳಗೆ ಮರಳು ಗಿರಳು ಹೋದರೆ ತೊಂದರೆ ಆಗಲ್ಲ
  3. ಗುಗ್ಗೆ ಇರೋದ್ರಿಂದ ಕಿವಿಗೆ ಫಂಗಲ್ ಇನ್ಫೆಕ್ಷನ್ ಆಗಲ್ಲ
  4. ಗುಗ್ಗೆ ಇರೋದ್ರಿಂದ ಕಿವಿಯೊಳಗೆ ಒದ್ದೊದ್ದೆಯಾಗಿರುತ್ತೆ; ಒಣಗಿ ಕಿವಿಗಿ ತೊಂದರೆ ಆಗಲ್ಲ

ಹಾಗಾದ್ರೆ ಗುಗ್ಗೆ ಬಗ್ಗೆ ಏನ್ ಮಾಡಬೇಕು?

ನಿಮ್ಮ ಕಿವಿ ಚೆನ್ನಾಗಿರಬೇಕು ಅಂದ್ರೆ ಗುಗ್ಗೆ ಬಗ್ಗೆ ತಲೇನೇ ಕೆಡುಸ್ಕೋಬೇಡಿ. ಅದರ ಪಾಡಿಗೆ ಅದನ್ನ ಬಿಟ್ಟುಬಿಡಿ

ಗುಗ್ಗೆ ಜಾಸ್ತಿ ಆದರೆ ತಾನೇ ಉಂಡುಂಡೆಯಾಗಿ ಬಿದ್ದೋಗುತ್ತೆ.

ಮೂಲ

ಅದೇ ಬೀಳೋ ವರೆಗೆ ಗುಗ್ಗೆ ಬಗ್ಗೆ ನೀವು ಏನೂ ಮಾಡದೆ ಸುಮ್ಮನಿರೋದೇ ವಾಸಿ. ಅದೇ ನಿಮ್ಮ ಕಿವಿ ಆರೋಗ್ಯಕ್ಕೆ ನೀವು ಮಾಡಬಹುದಾದ ನಂ1. ಕೆಲಸ!

ಕೇಳಿದಾಗ ಸುಮ್ಮನೆ ಬಿಟ್ಟುಬಿಡೋದು ಕಷ್ಟ ಅನ್ನಿಸುತ್ತೆ ಅಲ್ವಾ? ಆದರೆ ನಮ್ಮ ಹಿಂದಿನವರು ಹೀಗೇ ಇರ್ತಿದ್ದಿದ್ದು.

ಅಬ್ಬಬ್ಬಾ ಅಂದ್ರೆ ಕಿವಿಗೆ ಬೆಚ್ಚಗಿರೋ ಎಣ್ಣೆ ಹಾಕಿ ತಲೆ ಬಗ್ಗಿಸ್ತಾ ಇದ್ರು

ಆಗ ಎಲ್ಲ ಕರಗಿ ಹೊರಕ್ಕೆ ಬರ್ತಾ ಇತ್ತು.

ಮೂಲ

ಈಗಲೇ ಈ ಬಡ್ಸ್ ಗಿಡ್ಸ್ ಎಲ್ಲಾ ಶುರು ಆಗಿರೋದು. ಇದರಿಂದ ಅನಾಹುತಗಳೇ ಜಾಸ್ತಿ. ದಯವಿಟ್ಟು ಈ‌ ಅಭ್ಯಾಸ ಬಿಟ್ಟುಬಿಡಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಉಗುರಿಗೆ ಟೂತ್‍ಪೇಸ್ಟ್ ಹಚ್ಚಿಕೊಳೋದ್ರಿಂದ ಏನ್ ಲಾಭ ಸಿಗುತ್ತೆ ಅಂತ ಕೇಳಿ ಆಶ್ಚರ್ಯ ಪಡ್ತೀರಿ

ಯಾವನಿಗ್ ಗೊತ್ತಿತ್ತು?

ಬೆರಳು

ನಿಮ್ಮ ಕೈ ಉಗುರು ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿದ್ಯಾ?

ಮೂಲ

ಡಾರ್ಕ್ ಬಣ್ಣದ ನೇಲ್ ಪಾಲಿಶ್ ಹೆಚ್ಚಿಕೊಂಡು ತೆಗೆದರೆ ಹೀಗಾಗಬಹುದು. ಇಲ್ಲಾ ಸಿಗರೇಟ್ ಹಿಡ್ಕೊಳೋದ್ರಿಂದಾನೂ ಹೀಗಾಗಬಹುದು...

ಕಾರಣ ಏನೇ ಇರಲಿ, ಇದಕ್ಕೆ ಒಂದು ಸುಲಭವಾದ ಉಪಾಯ ಇದೆ...

ಮಾಮೂಲಿ ಟೂತ್‍ಪೇಸ್ಟ್ ತೊಗೊಂಡು...

ಮೂಲ

ಉಗುರಿಗೆ ಹಚ್ಚಿ 10 ನಿಮಿಷ ಹಾಗೇ ಬಿಟ್ಟುಬಿಡಿ. ಆಮೇಲೆ ತೊಳ್ಕೊಳಿ.

ಮೂಲ

ಹೀಗೆ ದಿನ ಬಿಟ್ಟು ದಿನ ಮಾಡಿ. 1 ವಾರದಲ್ಲಿ ಹಳದಿ ಬಣ್ಣ ಮಾಯ!

ಕೆಲವರಿಗೆ ಇನ್ನೂ ಹೆಚ್ಚು ದಿನ ತೊಗೋಬೋದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: